LibreOffice-Suite-Draw/C2/Insert-text-in-drawings/Kannada
From Script | Spoken-Tutorial
Revision as of 12:29, 29 January 2016 by Sandhya.np14 (Talk | contribs)
Time | Narration |
00:01 | LibreOffice Drawನಲ್ಲಿ Inserting Text in Drawings ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:10 | * ಚಿತ್ರದಲ್ಲಿ ಪಠ್ಯದೊಂದಿಗೆ ಕಾರ್ಯ ನಿರ್ವಹಿಸುವುದು |
00:12 | * ಚಿತ್ರದಲ್ಲಿನ ಪಠ್ಯವನ್ನು ಫಾರ್ಮ್ಯಾಟ್ ಮಾಡುವುದು ಮತ್ತು |
00:15 | * ಟೆಕ್ಸ್ಟ್-ಬಾಕ್ಸ್ ಗಳೊಂದಿಗೆ ಕಾರ್ಯ ನಿರ್ವಹಿಸುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ. |
00:17 | ನಾವು,
|
00:22 | * 'ಲೈನ್' ಮತ್ತು 'ಆರೋ (Arrow)'ಗಳಿಗೆ ಪಠ್ಯವನ್ನು ಸೇರಿಸುವುದು ಮತ್ತು |
00:26 | * 'ಕಾಲ್ ಔಟ್' ಗಳಲ್ಲಿ ಪಠ್ಯಗಳನ್ನು ಇಡುವುದು ಇತ್ಯಾದಿಗಳನ್ನೂ ಕಲಿಯಲಿದ್ದೇವೆ. |
00:29 | ಪಠ್ಯವನ್ನು ಎರಡು ರೀತಿಯಲ್ಲಿ ಸೇರಿಸಬಹುದು: |
00:31 | * ಚಿತ್ರಿಸಿದ ಆಬ್ಜೆಕ್ಟ್ ನಲ್ಲಿ, |
00:35 | ಲೈನ್ ಗಳು ಮತ್ತು ಆರೋ (arrow) ಗಳ ಮೇಲೂ ಇದನ್ನು ನೇರವಾಗಿ ಸೇರಿಸಬಹುದು. |
00:37 | * ಒಂದು ಸ್ವತಂತ್ರವಾದ 'Draw' ಆಬ್ಜೆಕ್ಟ್ ಎಂದು ಇದನ್ನು ಟೆಕ್ಸ್ಟ್ ಬಾಕ್ಸ್ ನಲ್ಲಿಯೂ ಸೇರಿಸಬಹುದು. |
00:42 | ಇಲ್ಲಿ ನಾವು : |
00:44 | *ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು
|
00:52 | ನಾವು “Water Cycle” ಎಂಬ 'Draw' ಫೈಲನ್ನು ತೆರೆಯೋಣ ಮತ್ತು ಇದಕ್ಕೆ ಕೆಲವು ಪಠ್ಯವನ್ನು ಸೇರಿಸೋಣ. |
00:57 | ಸೂರ್ಯನ ಪಕ್ಕದಲ್ಲಿರುವ ಎರಡು ಬಿಳಿ ಮೋಡಗಳಿಗೆ ನಾವು “Cloud Formation” ಎಂದು ಪಠ್ಯವನ್ನು ಸೇರಿಸೋಣ. |
01:04 | ಬಿಳಿ ಮೋಡಗಳ ಗುಂಪನ್ನು ಆಯ್ಕೆ ಮಾಡಿ. |
01:06 | ಗುಂಪಿನೊಳಗೆ ಹೋಗಲು ಅದರ ಮೇಲೆ ಎರಡು ಬಾರಿ ಕ್ಲಿಕ್ (Double-click) ಮಾಡಿ. |
01:10 | ನಾವು ಮೇಲಿನ ಮೋಡವನ್ನು ಆಯ್ಕೆ ಮಾಡೋಣ. |
01:13 | ಈಗ, 'Drawing' ಎಂಬ ಟೂಲ್-ಬಾರ್ ನಿಂದ 'Text' ಎಂಬ ಟೂಲ್ ಅನ್ನು ಆಯ್ಕೆ ಮಾಡೋಣ. |
01:17 | ಕರ್ಸರ್, ಒಂದು ಸಣ್ಣ, ಉದ್ದನೆಯ, ಮಿನುಗುವ ಗೆರೆ ಆಗಿ ಪರಿವರ್ತಿತವಾಗಿದೆ ಎಂಬುದನ್ನು ನೀವು ಕಾಣಬಲ್ಲಿರಾ? |
01:23 | ಇದು 'ಟೆಕ್ಸ್ಟ್ ಕರ್ಸರ್' ಆಗಿದೆ. |
01:25 | “Cloud Formation” ಎಂದು ಪಠ್ಯವನ್ನು ಟೈಪ್ ಮಾಡೋಣ. |
01:29 | ಈಗ, ಪೇಜ್ ನ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ. |
01:33 | ನಾವು ಇನ್ನೊಂದು ಬಿಳಿಯ ಮೋಡಕ್ಕೂ ಇದೇ ಪಠ್ಯವನ್ನು ಬರೆಯೋಣ. |
01:37 | ಗ್ರೂಪ್ ನಿಂದ ಹೊರಬರಲು ಪೇಜ್ ನ ಮೇಲೆ ಎಲ್ಲಿಯಾದರೂ ಡಬಲ್-ಕ್ಲಿಕ್ ಮಾಡಿ. |
01:42 | ಈಗ ನಾವು ಸೂರ್ಯನನ್ನು ಇದೇ ರೀತಿಯಲ್ಲಿ ಹೆಸರಿಸೋಣ. |
01:45 | ಆಬ್ಜೆಕ್ಟ್ ಗಳಲ್ಲಿ ಪಠ್ಯವನ್ನು ಬರೆಯುವುದು ಇದಕ್ಕಿಂತ ಸುಲಭವಾಗಲಾರದು! |
01:50 | ಅನಂತರ, ನಾವು ಬೂದು ಬಣ್ಣದ ಮೋಡಗಳ ಗುಂಪನ್ನು ಆರಿಸೋಣ. |
01:53 | ಮೊದಲಿನಂತೆಯೇ, ಗ್ರೂಪ್ ನ ಒಳಹೋಗಲು ಅದರ ಮೇಲೆ ಡಬಲ್-ಕ್ಲಿಕ್ ಮಾಡಿ. |
01:57 | “Rain Cloud” ಎಂದು ಪ್ರತಿಯೊಂದು ಮೋಡದಲ್ಲೂ ಟೈಪ್ ಮಾಡಿ. |
02:02 | ಬೂದು ಬಣ್ಣದ ಮೋಡಗಳಲ್ಲಿನ ಪಠ್ಯವು ಕಪ್ಪು ಬಣ್ಣದಲ್ಲಿರುವುದರಿಂದ ಅದು ಕಾಣಿಸುವುದಿಲ್ಲ. |
02:07 | ಹಾಗಾಗಿ, ನಾವು ಪಠ್ಯದ ಬಣ್ಣವನ್ನು ಬಿಳಿಯಾಗಿ ಪರಿವರ್ತಿಸೋಣ. |
02:11 | ಪಠ್ಯವನ್ನು ಆಯ್ಕೆ ಮಾಡಿ ಮತ್ತು 'ಕಾಂಟೆಕ್ಸ್ಟ್ ಮೆನು'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು “Character” ಅನ್ನು ಆಯ್ಕೆ ಮಾಡಿ. |
02:17 | “Character” ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
02:20 | “Font Effects” ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
02:23 | 'Font color' ಫೀಲ್ಡ್ ನಲ್ಲಿ, ಸ್ಕ್ರೋಲ್-ಡೌನ್ ಮಾಡಿ ಮತ್ತು “White” ಅನ್ನು ಆರಿಸಿ. |
02:28 | 'OK'ಯನ್ನು ಕ್ಲಿಕ್ ಮಾಡಿ. |
02:30 | ಫಾಂಟ್ ಕಲರ್ ಬಿಳಿಯಾಗಿ ಬದಲಾಗುತ್ತದೆ. |
02:33 | ಇದೇ ರೀತಿಯಾಗಿ, ನಾವು ಎರಡನೆಯ ಮೋಡದಲ್ಲಿರುವ ಪಠ್ಯದ ಬಣ್ಣವನ್ನೂ ಬದಲಾಯಿಸೋಣ. |
02:38 | ಪಠ್ಯವನ್ನು ಆಯ್ಕೆ ಮಾಡಿ ಮತ್ತು ರೈಟ್-ಕ್ಲಿಕ್ ಮಾಡಿ, ಅನಂತರ 'Character' ಅನ್ನು ಆಯ್ಕೆ ಮಾಡಿ. |
02:43 | 'Font color' ನಲ್ಲಿ, “White” ಅನ್ನು ಆಯ್ಕೆ ಮಾಡಿ. |
02:46 | ಗುಂಪಿನಿಂದ ಹೊರಬರಲು ಪೇಜ್ ನಲ್ಲಿ ಎಲ್ಲಿಯಾದರೂ ಡಬಲ್-ಕ್ಲಿಕ್ ಮಾಡಿ. |
02:50 | ಹೀಗೆಯೇ, ಪರ್ವತವನ್ನು ಬಿಂಬಿಸುವ ತ್ರಿಭುಜದಲ್ಲಿ “Mountain” ಎಂಬ ಪದವನ್ನು ಟೈಪ್ ಮಾಡೋಣ. |
02:58 | ನೀವು ಪಠ್ಯದ 'Character'ಅನ್ನು ಫಾರ್ಮ್ಯಾಟ್ ಮಾಡಬಹುದು. |
02:59 | ಎಂದರೆ, ಫಾಂಟ್-ಸ್ಟೈಲ್ ಅನ್ನು ಬದಲಾಯಿಸುವುದು ಮತ್ತು ಫಾಂಟ್ ಗಳಿಗೆ ವಿಶೇಷ ಪರಿಣಾಮಗಳನ್ನು ಉಂಟುಮಾಡುವುದು. |
03:05 | ನೀವು 'Paragraph' ನಲ್ಲಿಯೂ ಪಠ್ಯವನ್ನು ಫಾರ್ಮ್ಯಾಟ್ ಮಾಡಬಹುದು, ಎಂದರೆ ಪಠ್ಯವನ್ನು ಅಲೈನ್ ಮಾಡುವುದು, 'ಇಂಡೆಂಟ್ಸ್' ಅಥವಾ 'ಸ್ಪೇಸಿಂಗ್' ಅನ್ನು ಸೆಟ್ ಮಾಡುವುದು ಮತ್ತು ಟ್ಯಾಬ್ ನ ಸ್ಥಾನಗಳನ್ನು ಸೆಟ್ ಮಾಡುವುದು ಇತ್ಯಾದಿ. |
03:13 | ನೀವು ಈ ಡೈಲಾಗ್-ಬಾಕ್ಸ್-ಗಳನ್ನು, |
03:16 | 'ಕಾಂಟೆಕ್ಸ್ಟ್ ಮೆನ್ಯೂ'ವಿನಿಂದ ಅಥವಾ |
03:18 | 'Main ಮೆನ್ಯೂ'ವಿನಿಂದ ಪಡೆಯಬಹುದು. |
03:21 | 'Main ಮೆನ್ಯೂ'ವಿನಿಂದ 'Character' ಎಂಬ ಡೈಲಾಗ್-ಬಾಕ್ಸ್ ಅನ್ನು ಪ್ರವೇಶಿಸಲು, 'Format' ಆಯ್ಕೆ ಮಾಡಿ ಮತ್ತು 'Character'ಅನ್ನು ಆರಿಸಿ. |
03:28 | 'Main ಮೆನ್ಯೂ'ವಿನಿಂದ 'Paragraph' ಎಂಬ ಡೈಲಾಗ್-ಬಾಕ್ಸ್ ಅನ್ನು ಪ್ರವೇಶಿಸಲು, 'Format' ಆಯ್ಕೆ ಮಾಡಿ ಮತ್ತು 'Paragraph' ಅನ್ನು ಆರಿಸಿ. |
03:36 | ಆಯತಾಕೃತಿಯಲ್ಲಿ, ಅಂತರ್ಜಲ ಎಲ್ಲಿ ತುಂಬಿಕೊಳ್ಳುತ್ತದೆ ಎಂದು ತೋರಿಸಲು, ನಾವು ದಪ್ಪನೆಯ ಕಪ್ಪು ಗೆರೆಯನ್ನು ಎಳೆಯೋಣ. |
03:43 | 'Drawing' ಟೂಲ್-ಬಾರ್ ನಿಂದ, 'Line'ಅನ್ನು ಆರಿಸಿ. |
03:46 | ಕರ್ಸರ್ ಅನ್ನು 'page' ಗೆ ಸ್ಥಳಾಂತರಿಸಿ, ಎಡ ಮೌಸ್-ಬಟನ್ ಅನ್ನು ಒತ್ತಿ ಮತ್ತು ಎಡದಿಂದ ಬಲಕ್ಕೆ ಎಳೆಯಿರಿ. |
03:54 | ಆಯತಾಕೃತಿಯನ್ನು ಎರಡು ಸಮಭಾಗಗಳಾಗಿ ವಿಭಾಗಿಸುವಂತೆ ಒಂದು ಅಡ್ಡಗೆರೆಯನ್ನು ಎಳೆಯಿರಿ. |
04:01 | ನೆಲ ಎರಡಾಗಿ ವಿಭಾಗವಾಯಿತು! |
04:04 | ಈಗ, ನಾವು ಗೆರೆಯನ್ನು ಇನ್ನೂ ಅಗಲವಾಗಿಸೋಣ. |
04:07 | ಗೆರೆಯನ್ನು ಆಯ್ಕೆ ಮಾಡಿ ಮತ್ತು ಕಾಂಟೆಕ್ಸ್ಟ್-ಮೆನುವಿಗಾಗಿ ರೈಟ್-ಕ್ಲಿಕ್ ಮಾಡಿ. |
04:11 | 'Line' ಮೇಲೆ ಕ್ಲಿಕ್ ಮಾಡಿ. 'Line' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
04:16 | 'Style' ಫೀಲ್ಡ್ ನಲ್ಲಿ, ಡ್ರಾಪ್-ಡೌನ್ ಬಾಕ್ಸ್ ಕ್ಲಿಕ್ ಮಾಡಿ. |
04:20 | 'Ultrafine 2 dots 3 dashes' ಅನ್ನು ಆಯ್ಕೆ ಮಾಡಿ. |
04:24 | 'Width ' ಫೀಲ್ಡ್ ನಲ್ಲಿ, ವ್ಯಾಲ್ಯೂ ಪಾಯಿಂಟ್ ಅನ್ನು '.70' ಎಂದು ಸೆಟ್ ಮಾಡಿ. |
04:29 | 'OK'ಯನ್ನು ಕ್ಲಿಕ್ ಮಾಡಿ. |
04:31 | ನಾವು ಗೆರೆಯನ್ನು ಅಗಲಗೊಳಿಸಿದ್ದೇವೆ! |
04:34 | ಆಯತದ ಒಳಗೆ “Ground water table” ಎಂಬ ಪಠ್ಯವನ್ನು ಸೇರಿಸೋಣ. |
04:39 | ಮೊದಲು, 'Text' ಎಂಬ ಟೂಲನ್ನು ಆಯ್ಕೆ ಮಾಡೋಣ. |
04:42 | ಇದು 'Drawing' ಟೂಲ್ ಬಾರ್ ನ ಮೇಲಿನ ದೊಡ್ಡಕ್ಷರ “T” ಎಂಬ ಆಯ್ಕೆಯಾಗಿದೆ. |
04:46 | 'Draw' ಪೇಜ್ ಗೆ ಹೋಗಿ. |
04:49 | ಈಗ, ಕರ್ಸರ್ ಒಂದು ಅಧಿಕ ಚಿಹ್ನೆಯಾಗಿ ಪರಿವರ್ತಿತವಾಗಿದೆ. ಇದರ ಕೆಳಗೆ ಒಂದು ಸಣ್ಣ ದೊಡ್ಡಕ್ಷರ 'I' ಇದೆ. |
04:55 | ಆಯತದ ಒಳಗೆ ಕ್ಲಿಕ್ ಮಾಡಿ. |
04:57 | ಟೆಕ್ಸ್ಟ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಗಮನಿಸಿ. |
05:01 | ಇಲ್ಲಿ, ನಾವು “Ground water table” ಎಂದು ಟೈಪ್ ಮಾಡೋಣ. |
05:05 | ಪಠ್ಯವನ್ನು ಟೆಕ್ಸ್ಟ್-ಬಾಕ್ಸ್ ನ ಮಧ್ಯಕ್ಕೆ ಅಲೈನ್ ಮಾಡಲು, ಕರ್ಸರ್ ಅನ್ನು ಟೆಕ್ಸ್ಟ್-ಬಾಕ್ಸ್ ನ ಒಳಗೆ ಇಡಿ. |
05:12 | ಮೇಲೆ ಇರುವ ಸ್ಟ್ಯಾಂಡರ್ಡ್ ಟೂಲ್-ಬಾರ್ ನಲ್ಲಿಯ 'Centered' ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
05:19 | ಇದೇ ರೀತಿ, ನಾವು ತ್ರಿಭುಜದಲ್ಲಿ |
05:22 | “Rain water flows from land into rivers and sea” ಎಂಬ ಪಠ್ಯವನ್ನು ಸೇರಿಸೋಣ. |
05:30 | ಅಸೈನ್ಮೆಂಟ್ ಗಾಗಿ ಟ್ಯುಟೋರಿಯಲ್ ಅನ್ನು ಪಾಸ್ (pause) ಮಾಡಿ. |
05:33 | ಒಂದು ಚೌಕವನ್ನು ಬಿಡಿಸಿ. |
05:35 | ಈ ಪಠ್ಯವನ್ನು ಸೇರಿಸಿ: “This is a square. |
05:38 | A square has four equal sides and four equal angles. Each angle in a square is ninety degrees. |
05:46 | The square is a quadrilateral" (ಕ್ವಾಡ್ರಿಲ್ಯಾಟರಲ್). |
05:50 | 'Text' ಎಂಬ ಡೈಲಾಗ್-ಬಾಕ್ಸ್ ನಲ್ಲಿಯ ಆಯ್ಕೆಗಳನ್ನು ಉಪಯೋಗಿಸಿ ಈ ಪಠ್ಯವನ್ನು ಫಾರ್ಮ್ಯಾಟ್ ಮಾಡಿ. |
05:54 | 'font, size, style' ಮತ್ತು 'alignment' ಆಯ್ಕೆಗಳನ್ನು ಪಠ್ಯಕ್ಕೆ ಅನ್ವಯಿಸಿ(ಅಪ್ಲೈ ಮಾಡಿ). |
06:00 | ಈಗ, ನಾವು ಚಿತ್ರದಲ್ಲಿನ 'ಆರೋ' ಗಳನ್ನು ಕ್ರಮಪಡಿಸೋಣ. |
06:03 | ಈ 'ಆರೋ'ಗಳು ಭೂಮಿ, ಸಸ್ಯಗಳು ಮತ್ತು ಜಲಮೂಲಗಳಲ್ಲಿನ ನೀರು ಆವಿಯಾಗಿ ಮೋಡವಾಗುವುದನ್ನು ತೋರಿಸುತ್ತವೆ. |
06:12 | ಎಡ ಕೊನೆಯ 'ಆರೋ'ವನ್ನು ಆಯ್ಕೆ ಮಾಡೋಣ. |
06:14 | ಈಗ, ಕ್ಲಿಕ್ ಮಾಡಿ ಪರ್ವತದ ಕಡೆಗೆ ಎಳೆಯಿರಿ. |
06:18 | ನಾವು ಮಧ್ಯದ 'ಆರೋ'ವನ್ನು ಆಯ್ಕೆ ಮಾಡೋಣ. |
06:21 | ಈಗ, ಕ್ಲಿಕ್ ಮಾಡಿ ಮರಗಳ ಕಡೆಗೆ ಎಳೆಯಿರಿ. |
06:25 | ಮೂರನೆಯ 'ಆರೋ', ನೀರಿನಿಂದ ಮೋಡಗಳೆಡೆಗೆ ನೀರಿನ ಬಾಷ್ಪೀಕರಣವನ್ನು ತೋರಿಸುತ್ತದೆ. |
06:31 | ಪರ್ವತದ ಮೇಲಿನಿಂದ ಕೆಳಗೆ ನೀರಿನ ಓಟವನ್ನು ತೋರಿಸುವ ಒಂದು ರೇಖೆಯನ್ನು ಚಿತ್ರಿಸಲು ನಾವು Curve ಆಯ್ಕೆಯನ್ನು ಉಪಯೋಗಿಸೋಣ. |
06:37 | Drawing ಟೂಲ್ ಬಾರ್ ನಿಂದ, Curve ಮೇಲೆ ಕ್ಲಿಕ್ ಮಾಡಿ ಮತ್ತು Freeform Line ಅನ್ನು ಆಯ್ಕೆ ಮಾಡಿ. |
06:43 | draw ಪೇಜ್ ನ ಮೇಲೆ, ಪರ್ವತದ ಪಕ್ಕದಲ್ಲಿ ಕರ್ಸರ್ ಅನ್ನು ಇರಿಸಿ. |
06:47 | ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಕೆಳಗೆ ಎಳೆಯಿರಿ. |
06:51 | ನೀವು ಒಂದು ವಕ್ರ ರೇಖೆಯನ್ನು ಚಿತ್ರಿಸಿದ್ದೀರಿ! |
06:53 | ಈಗ, ನಾವು ಈ ಪ್ರತಿಯೊಂದು arrowಗೂ ವಿವರಣೆಯನ್ನು ಬರೆಯೋಣ. |
06:58 | ಬಲದಲ್ಲಿರುವ ಮೊದಲನೆಯ arrowವನ್ನು ಆಯ್ಕೆ ಮಾಡಿ ಮತ್ತು ಟೈಪ್ ಮಾಡಿ: “Evaporation (ಇವ್ಯಾಪೊರೇಷನ್) from rivers and seas”. |
07:06 | ಪೇಜ್ ನಲ್ಲಿ ಎಲ್ಲಿಯಾದರೂ ಕ್ಲಿಕ್ ಮಾಡಿ. |
07:08 | ಗೆರೆಯ ಮೇಲೆ ಪಠ್ಯ ಗೋಚರವಾಗುತ್ತದೆ. |
07:12 | ಪಠ್ಯವು ಸರಿಯಾಗಿ ಗೆರೆಯ ಮೇಲೆಯೇ ಇರುವುದರಿಂದ ಅದು ಸ್ಪಷ್ಟವಾಗಿಲ್ಲ ಎಂಬುದನ್ನು ಗಮನಿಸಿ. |
07:18 | ಪಠ್ಯವನ್ನು ಗೆರೆಗಿಂತ ಮೇಲೆ ಕೊಂಡೊಯ್ಯಲು, ಗೆರೆಯ ಮೇಲೆ ಕ್ಲಿಕ್ ಮಾಡಿ. |
07:22 | ಪಠ್ಯವು ಅಡ್ಡವಾಗಿ ಇರಿಸಲ್ಪಟ್ಟಿದೆ. |
07:25 | ಕರ್ಸರ್ ಅನ್ನು ಪಠ್ಯದ ಕೊನೆಗೆ ಇರಿಸಿ ಮತ್ತು Enter ಕೀಯನ್ನು ಒತ್ತಿ. |
07:30 | page ನ ಮೇಲೆ ಕ್ಲಿಕ್ ಮಾಡಿ. |
07:32 | ಪಠ್ಯವು align ಆಯಿತು. |
07:35 | ಗೆರೆಯ ಮತ್ತು arrowಗಳ ಮೇಲೆ ಟೈಪ್ ಮಾಡಿದ ಪಠ್ಯವನ್ನು ಕಂಟೆಕ್ಸ್ಟ್ ಮೆನುವಿನಲ್ಲಿಯ ಆಯ್ಕೆಗಳನ್ನು ಉಪಯೋಗಿಸಿಕೊಂಡು ಕೂಡ ಫಾರ್ಮ್ಯಾಟ್ ಮಾಡಬಹುದು. |
07:41 | context menuವನ್ನು ಉಪಯೋಗಿಸಿ font sizeಅನ್ನು ಫಾರ್ಮ್ಯಾಟ್ ಮಾಡೋಣ. |
07:45 | ಈ ಪಠ್ಯದ ಮೇಲೆ ಕ್ಲಿಕ್ ಮಾಡಿ: |
07:47 | “Evaporation from rivers and seas”. |
07:50 | ಎಂಬ ಪಠ್ಯವು ಈಗ ಸಮತಲವಾಗಿದೆ. |
07:53 | ನಾವು ಪಠ್ಯವನ್ನು ಆಯ್ಕೆ ಮಾಡೋಣ ಮತ್ತು context menu ವನ್ನು ನೋಡಲು ರೈಟ್-ಕ್ಲಿಕ್ ಮಾಡೋಣ. |
07:58 | Size ಅನ್ನು ಆಯ್ಕೆ ಮಾಡಿ ಮತ್ತು 22 ಅನ್ನು ಕ್ಲಿಕ್ ಮಾಡಿ. |
08:02 | ಫಾಂಟ್ ನ ಗಾತ್ರ ಬದಲಾಗಿದೆ. |
08:05 | ಈಗ, ನಾವು ಈ ಕೆಳಗಿನ ಪಠ್ಯವನ್ನು ಉಳಿದ ಎಲ್ಲಾ arrowಗಳಿಗೆ ಟೈಪ್ ಮಾಡೋಣ. |
08:09 | Evaporation from soil |
08:12 | Evaporation from vegetation |
08:17 | Run off water from the mountains. |
08:22 | ನಾವು ಬೂದು ಬಣ್ಣದ ಮೋಡಗಳಿಂದ ಮಳೆಯಾಗುತ್ತಿರುವುದನ್ನು ತೋರಿಸೋಣ. |
08:26 | ಮಳೆಯನ್ನು ತೋರಿಸಲು, ಮೋಡದಿಂದ ಕೆಳಗೆ ಮುಖಮಾಡಿರುವ dotted arrowಗಳನ್ನು ಚಿತ್ರಿಸೋಣ. |
08:32 | Drawing ಟೂಲ್ ಬಾರ್ ನಿಂದ, Line Ends with Arrow ಅನ್ನು ಆಯ್ಕೆ ಮಾಡಿ. |
08:37 | ಅನಂತರ, ಎಡಕ್ಕಿರುವ ಮೊದಲ ಕಪ್ಪುಮೋಡದ ಮೇಲೆ ಕರ್ಸರ್ ಅನ್ನು ಇಡಿ. |
08:42 | ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಇದನ್ನು ಕೆಳಗೆ ಎಳೆಯಿರಿ. |
08:46 | context menuವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Lineಅನ್ನು ಕ್ಲಿಕ್ ಮಾಡಿ. |
08:50 | Line ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
08:53 | “Style” ಡ್ರಾಪ್ ಡೌನ್ ಲಿಸ್ಟ್ ಮೇಲೆ ಕ್ಲಿಕ್ ಮಾಡಿ ಮತ್ತು |
08:56 | 2 dots 1 dash ಅನ್ನು ಆಯ್ಕೆ ಮಾಡಿ. |
08:58 | OK ಕ್ಲಿಕ್ ಮಾಡಿ. |
09:00 | ನಾವು ಒಂದು dotted arrowವನ್ನು ರಚಿಸಿದ್ದೇವೆ. |
09:02 | ನಾವು ಈ ಮೋಡಕ್ಕೆ ಇನ್ನೂ ಎರಡು arrowಗಳನ್ನು copy ಮತ್ತು paste ಮಾಡೋಣ. |
09:06 | ಈಗ ನಾವು ಇನ್ನೊಂದು ಮೋಡಕ್ಕೆ ಎರಡು arrowಗಳನ್ನು copy ಮತ್ತು paste ಮಾಡೋಣ. |
09:12 | ಈಗ, ನಾವು “Rain” ಎನ್ನುವ ಪಠ್ಯವನ್ನು dotted arrowಗಳಿಗೆ ಜೋಡಿಸೋಣ. |
09:21 | ನಾವು “Evaporation to form the clouds” ಎಂಬ ಪಠ್ಯವನ್ನು ಒಂದು ಟೆಕ್ಸ್ಟ್ ಬಾಕ್ಸ್ ನಲ್ಲಿ Water objectನ ಮೇಲೆ ಟೈಪ್ ಮಾಡೋಣ. |
09:28 | Drawing ಟೂಲ್ ಬಾರ್ ನಿಂದ, Text ಟೂಲ್ ಅನ್ನು ಆಯ್ಕೆ ಮಾಡಿ ಮತ್ತು ಮೊದಲು ತೋರಿಸಿದಂತೆ ಟೆಕ್ಸ್ಟ್ ಬಾಕ್ಸ್ ಅನ್ನು ಚಿತ್ರಿಸಿ. |
09:35 | ಇದರೊಳಗೆ, “Evaporation to form the clouds” ಎಂದು ಟೈಪ್ ಮಾಡಿ. |
09:41 | Drawing ಟೂಲ್ ಬಾರ್ ನಿಂದ Text Tool ಅನ್ನು ಆಯ್ಕೆ ಮಾಡಿ |
09:44 | ಮತ್ತು ಬೂದು ಮೋಡಗಳ ಪಕ್ಕ ಒಂದು ಟೆಕ್ಸ್ಟ್ ಬಾಕ್ಸ್ ಅನ್ನು ರಚಿಸಿ. |
09:48 | ಇದರೊಳಗೆ “Condensation (ಕಾಂಡೆನ್ಸೇಷನ್) to form rain”ಅನ್ನು ಟೈಪ್ ಮಾಡಿ. |
09:53 | ಟೆಕ್ಸ್ಟ್-ಬಾಕ್ಸ್ ಅನ್ನು ಸ್ಥಾನಾಂತರಿಸಲು ಮೊದಲು ಅಂಚಿನ ಮೇಲೆ ಕ್ಲಿಕ್ ಮಾಡಿ ಹಾಗೂ |
09:57 | ಈಗ ಇದನ್ನು ಬೇಕಾದ ಸ್ಥಾನದಲ್ಲಿ drag and drop ಮಾಡಿ. |
10:02 | ಹಿಂದಿನ ಹಂತಗಳನ್ನೇ ಅನುಸರಿಸಿ, ನಾವು ಒಂದು ಟೆಕ್ಸ್ಟ್ ಬಾಕ್ಸ್ ಅನ್ನು ಉಪಯೋಗಿಸಿ, “WaterCycle Diagram” ಎಂಬ ಶೀರ್ಷಿಕೆಯನ್ನು ಕೊಡೋಣ. |
10:07 | ಮತ್ತು ಪಠ್ಯವನ್ನು Bold ಆಗಿ ಫಾರ್ಮ್ಯಾಟ್ ಮಾಡೋಣ. |
10:16 | 'Water Cycle' ರೇಖಾಚಿತ್ರದ ರಚನೆಯನ್ನು ನಾವು ಮಾಡಿ ಮುಗಿಸಿದ್ದೇವೆ! |
10:20 | ಈಗ, ನಾವು Callouts (ಕಾಲ್-ಔಟ್ಸ್) ಗಳ ಬಗ್ಗೆ ಕಲಿಯೋಣ. |
10:22 | Callouts ಎಂದರೇನು? |
10:24 | ಅವು ವಿಶಿಷ್ಟ ಟೆಕ್ಸ್ಟ್ ಬಾಕ್ಸ್ ಗಳಾಗಿವೆ. ಅವು Draw ಪೇಜ್ ನಲ್ಲಿಯ |
10:29 | ಒಂದು object ಅಥವಾ ಒಂದು ಸ್ಥಳಕ್ಕೆ ನಿಮ್ಮ ಗಮನವನ್ನು ಸೆಳೆಯುತ್ತವೆ. |
10:33 | ಉದಾಹರಣೆಗೆ, ಹೆಚ್ಚಿನ ಕಾಮಿಕ್ ಪುಸ್ತಕಗಳಲ್ಲಿ |
10:36 | ಪಠ್ಯವನ್ನು Callouts ನಲ್ಲಿ ಇರಿಸಲಾಗಿರುತ್ತದೆ. |
10:39 | Draw ಫೈಲ್ ಗೆ ಹೊಸ pageಅನ್ನು ಸೇರಿಸೋಣ. |
10:42 | Main ಮೆನುವಿನಿಂದ, Insert ಅನ್ನು ಆರಿಸಿ ಮತ್ತು Slide ಮೇಲೆ ಕ್ಲಿಕ್ ಮಾಡಿ. |
10:47 | ಹೊಸದೊಂದು pageಅನ್ನು ಸೇರಿಸಲಾಯಿತು. |
10:50 | Calloutಅನ್ನು ರಚಿಸಲು, Drawing ಟೂಲ್ ಬಾರ್ ಗೆ ಹೋಗಿ. |
10:54 | Callout ಐಕಾನ್ ನ ಪಕ್ಕ ಇರುವ ಸಣ್ಣ ಕಪ್ಪು ತ್ರಿಭುಜದ ಮೇಲೆ ಕ್ಲಿಕ್ ಮಾಡಿ. |
10:59 | ಹಲವಾರು Calloutsಗಳು ಕಾಣಿಸಿಕೊಳ್ಳುತ್ತವೆ. |
11:01 | Rectangular Calloutನ ಮೇಲೆ ಕ್ಲಿಕ್ ಮಾಡೋಣ. |
11:04 | pageಗೆ ಕರ್ಸರ್ ಅನ್ನು ಮೂವ್ ಮಾಡಿ, ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ. |
11:10 | ನೀವು ಒಂದು Calloutಅನ್ನು ಬಿಡಿಸಿದ್ದೀರಿ. |
11:12 | ನೀವು ಬೇರೆ objectಗಳಿಗೆ ಮಾಡಿದಂತೆಯೇ Calloutನ ಒಳಗೆ ಪಠ್ಯವನ್ನು ಬರೆಯಬಹುದು. |
11:18 | ಡಬಲ್ ಕ್ಲಿಕ್ ಮಾಡಿ ಮತ್ತು Callout ನ ಒಳಗೆ “This is an example” ಎಂಬ ಪಠ್ಯವನ್ನು ಟೈಪ್ ಮಾಡಿ. |
11:25 | ಹೀಗೆ, ನಾವು LibreOffice Drawನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
11:30 | ಈ ಟ್ಯುಟೋರಿಯಲ್ ನಲ್ಲಿ, ನೀವು: |
11:33 | * ಚಿತ್ರಗಳಲ್ಲಿ ಪಠ್ಯಗಳನ್ನು ಸಂಪಾದಿಸುವುದನ್ನು, |
11:35 | * ಚಿತ್ರಗಳಲ್ಲಿನ ಪಠ್ಯವನ್ನು ಫಾರ್ಮ್ಯಾಟ್ ಮಾಡುವುದನ್ನು, |
11:38 | * ಟೆಕ್ಸ್ಟ್ ಬಾಕ್ಸ್ ನೊಂದಿಗೆ ಕಾರ್ಯ ನಿರ್ವಹಿಸುವುದನ್ನು, |
11:40 | * Indenting, spacing ಮತ್ತು text aligning ಅನ್ನು, |
11:44 | * ಲೈನ್ ಮತ್ತು Arrowಗಳಿಗೆ ಪಠ್ಯವನ್ನು ಸೇರಿಸುವುದನ್ನು, |
11:46 | *ಮತ್ತು Callout ಗಳಲ್ಲಿ ಪಠ್ಯವನ್ನು ಇರಿಸುವುದನ್ನು ಕಲಿತಿದ್ದೀರಿ. |
11:50 | ಈ ಅಸೈನ್ ಮೆಂಟ್ ಅನ್ನು ನೀವು ಸ್ವಯಂ ಪ್ರಯತ್ನಿಸಿ. |
11:53 | ಒಂದು ನೋಟ್ ಬುಕ್ ಶೀರ್ಷಿಕೆಯನ್ನು ಮತ್ತು ಒಂದು ಆಮಂತ್ರಣವನ್ನು ಈ ಸ್ಲೈಡ್ ನಲ್ಲಿ ತೋರಿಸಿರುವಂತೆ ರಚಿಸಿ. |
12:00 | ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What_is_a_Spoken-Tutorial |
12:03 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. |
12:06 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |
12:11 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : |
12:13 | * ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. |
12:17 | *ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. |
12:20 | ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. |
12:27 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ. |
12:31 | ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. |
12:39 | ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ]. |
12:50 | ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
ಧನ್ಯವಾದಗಳು. |