LibreOffice-Suite-Calc/C2/Introduction-to-LibreOffice-Calc/Kannada
From Script | Spoken-Tutorial
Revision as of 15:11, 5 January 2016 by Sandhya.np14 (Talk | contribs)
Time | Narration |
00:00 | ಲಿಬ್ರೆ ಆಫೀಸ್ ಕ್ಯಾಲ್ಕ್ ನ ಪರಿಚಯದ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ನಲ್ಲಿ ನಾವು, |
00:08 | ಲಿಬ್ರೆ ಆಫೀಸ್ ಕ್ಯಾಲ್ಕ್ ನ ಪರಿಚಯ. |
00:12 | ಲಿಬ್ರೆ ಆಫೀಸ್ ಕ್ಯಾಲ್ಕ್ ನಲ್ಲಿರುವ ವಿವಿಧ ಟೂಲ್ ಬಾರ್ ಗಳು. |
00:16 | ಕ್ಯಾಲ್ಕ್ ನಲ್ಲಿ ಹೊಸ document ಅನ್ನು ಹೇಗೆ ಓಪನ್ ಮಾಡುವುದು. |
00:18 | ಮೊದಲೇ ಇರುವ ಡಾಕ್ಯುಮೆಂಟ್ ಅನ್ನು ಹೇಗೆ ಓಪನ್ ಮಾಡುವುದು. |
00:21 | ಕ್ಯಾಲ್ಕ್ ನಲ್ಲಿ ಡಾಕ್ಯುಮೆಂಟ್ ನ್ನು ಹೇಗೆ ಸೇವ್ ಮತ್ತು ಕ್ಲೋಸ್ ಮಾಡುವುದು ಎಂಬೀ ಮುಂತಾದವುಗಳನ್ನು ಕಲಿಯುತ್ತೇವೆ. |
00:26 | ಲಿಬ್ರೆ ಆಫೀಸ್ ಕ್ಯಾಲ್ಕ್, ಲಿಬ್ರೆ ಆಫೀಸ್ ಸೂಟ್ ನ ಒಂದು ಸ್ಪ್ರೆಡ್-ಶೀಟ್ ಅಂಶವಾಗಿದೆ. |
00:32 | ರೈಟರ್ ಹೇಗೆ ಟೆಕ್ಸ್ಟ್ ಮಾಹಿತಿಗಳೊಂದಿಗೆ ಧಾರಾಳವಾಗಿ ವ್ಯವಹರಿಸುತ್ತದೆಯೋ ಹಾಗೇ, ಕ್ಯಾಲ್ಕ್, ಸಂಖ್ಯಾ ಮಾಹಿತಿಗಳೊಂದಿಗೆ ಅಷ್ಟೇ ಧಾರಾಳವಾಗಿ ವ್ಯವಹರಿಸುತ್ತದೆ. |
00:40 | ಇದನ್ನು ಒಂದು ಸಂಖ್ಯೆಗಳ ಭಾಷೆಗಾಗಿ ಇರುವ ಸಾಫ್ಟ್-ವೇರ್ ಎಂದು ಹೇಳಬಹುದು. |
00:44 | ಇದು ಮೈಕ್ರೋಸಾಫ್ಟ್ ಆಫೀಸ್ ಸೂಟ್ ನ ಮೈಕ್ರೋಸಾಫ್ಟ್ ಎಕ್ಸ್-ಸೆಲ್ ಗೆ ಸಮಾನವಾಗಿದೆ. |
00:49 | ಇದು ಉಚಿತ ಹಾಗೂ ಮುಕ್ತವಾಗಿ ದೊರೆಯುವ ಸಾಫ್ಟ್-ವೇರ್ ಆಗಿದ್ದು ಇದನ್ನು ನಕಲು, ಮರುಬಳಕೆ ಹಾಗೂ ಉಚಿತವಾಗಿ ವಿತರಣೆ ಮಾಡಬಹುದು. |
00:57 | ಲಿಬ್ರೆ ಆಫೀಸ್ ಸೂಟ್ ಅನ್ನು ಆರಂಭಿಸಲು, ನೀವು Microsoft Windows 2000 ಮತ್ತು ಅದರ ಹೆಚ್ಚಿನ ಆವೃತ್ತಿಗಳಾದ MS Windows XP ಅಥವಾ MS Windows 7 ಬಳಸಬಹುದು ಅಥವಾ ನೀವು GNU/Linux ಕೂಡಾ ನಿಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಬಳಸಬಹುದು. |
01:14 | ಇಲ್ಲಿ ನಾವು ಆಪರೇಟಿಂಗ್ ಸಿಸ್ಟಮ್ ಆಗಿ Ubuntu Linux 10.04 ಅನ್ನು ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ. |
01:26 | ಒಂದು ವೇಳೆ ನೀವು ಲಿಬ್ರೆ ಆಫೀಸ್ ಸೂಟ್ ಅನ್ನು ಇನ್ಸ್ಟಾಲ್ ಮಾಡದಿದ್ದಲ್ಲಿ, ಕ್ಯಾಲ್ಕ್ ನ್ನು Synaptic Package Manager ಬಳಸಿ ಇನ್ಸ್ಟಾಲ್ ಮಾಡಬಹುದು. |
01:35 | Synaptic Package Manager ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವೆಬ್-ಸೈಟ್ ನಲ್ಲಿ ಸಿಗುವ ಉಬುಂಟು ಲಿನಕ್ಸ್ ಟ್ಯುಟೋರಿಯಲ್ ಗಳನ್ನು ರೆಫರ್ ಮಾಡಿ ಮತ್ತು ಆ ವೆಬ್-ಸೈಟ್ ನಲ್ಲಿ ರುವ ಸೂಚನೆಗಳನ್ನು ಅನುಸರಿಸಿ ಲಿಬ್ರೆ ಆಫೀಸ್ ಸೂಟ್ ನ್ನು ಡೌನ್-ಲೋಡ್ ಮಾಡಿ. |
01:50 | ವಿವರವಾದ ಮಾಹಿತಿಗಳು ಲಿಬ್ರೆ ಆಫೀಸ್ ಸೂಟ್ ನ ಮೊದಲ ಟ್ಯುಟೋರಿಯಲ್ ನಲ್ಲಿ ಲಭ್ಯವಿವೆ. |
01:56 | ನೆನಪಿಡಿ, ಕ್ಯಾಲ್ಕ್ ನ್ನು ಇನ್ಸ್ಟಾಲ್ ಮಾಡುವಾಗ “Complete” installation ಅನ್ನು ಬಳಸಿ. |
02:01 | ನೀವು ಲಿಬ್ರೆ ಆಫೀಸ್ ಸೂಟ್ ಅನ್ನು ಮೊದಲೇ ಇನ್ಸ್ಟಾಲ್ ಮಾಡಿದ್ದರೆ,ನೀವು ನಿಮ್ಮ ಸ್ಕ್ರೀನ್ ನ ಮೇಲ್ಗಡೆ ಎಡ ಬದಿಯಲ್ಲಿ ಇರುವ “Applications” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ಅದರಲ್ಲಿ “Office”, ತದನಂತರ “LibreOffice” ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಲಿಬ್ರೆ ಆಫೀಸ್ ಕ್ಯಾಲ್ಕ್ ನ್ನು ಪಡೆಯಬಹುದು. |
02:17 | ವಿವಿಧ ಲಿಬ್ರೆ ಆಫೀಸ್ ಅಂಶಗಳಿರುವ ಒಂದು ಹೊಸ ಡೈಲಾಗ್ ಬಾಕ್ಸ್ ತೆರೆಯುತ್ತದೆ. |
02:22 | ಲಿಬ್ರೆ ಆಫೀಸ್ ಕ್ಯಾಲ್ಕ್ ಗೆ ಹೋಗಲು ಡೈಲಾಗ್ ಬಾಕ್ಸ್ ನಲ್ಲಿ “Spreadsheet” ಮೇಲೆ ಕ್ಲಿಕ್ ಮಾಡಿ. |
02:30 | ಇದು ಕ್ಯಾಲ್ಕ್ ನ ಮುಖ್ಯ ವಿಂಡೋ ದಲ್ಲಿ ಒಂದು ಖಾಲಿ ಡಾಕ್ಯುಮೆಂಟ್ ಅನ್ನು ತೆರೆಯುತ್ತದೆ. |
02:35 | ಈಗ ನಾವು ಕ್ಯಾಲ್ಕ್ ವಿಂಡೋವಿನ ಮುಖ್ಯ ಅಂಶಗಳ ಬಗ್ಗೆ ಕಲಿಯೋಣ. |
02:40 | ಕ್ಯಾಲ್ಕ್ ನ ಡಾಕ್ಯುಮೆಂಟ್ ಅನ್ನು ವರ್ಕ್ ಬುಕ್ ಎನ್ನುತ್ತಾರೆ. ಒಂದು ವರ್ಕ್ ಬುಕ್ ನಲ್ಲಿ ತುಂಬಾ ಶೀಟ್ ಗಳಿರುತ್ತವೆ. ಅವುಗಳನ್ನು ಸ್ಪ್ರೆಡ್-ಶೀಟ್ ಗಳು ಎನ್ನುತ್ತಾರೆ. |
02:48 | ಪ್ರತೀ ಸ್ಪ್ರೆಡ್-ಶೀಟ್, ರೋ ಹಾಗೂ ಕಾಲಂಗಳಿಂದ ಕೂಡಿರುತ್ತವೆ. ಪ್ರತೀ ರೋ ಸಂಖ್ಯೆಯಿಂದ ಗುರುತಿಸಲ್ಪಡುತ್ತದೆ ಹಾಗೂ ಪ್ರತೀ ಕಾಲಂ ಆಂಗ್ಲಾಕ್ಷರಗಳಿಂದ ಗುರುತಿಸಲ್ಪಡುತ್ತದೆ. |
02:58 | ಒಂದು ರೋ ಮತ್ತು ಒಂದು ಕಾಲಂ ನ ಮಧ್ಯದಲ್ಲಿ ಬರುವ ಒಂದು ನಿರ್ದಿಷ್ಟವಾದ ಸೆಲ್ ಅನ್ನು, ಅದಕ್ಕೆ ಸಂಬಂಧಿಸಿರುವ ರೋ ನ ಸಂಖ್ಯೆ ಮತ್ತು ಕಾಲಂ ನ ಆಂಗ್ಲಾಕ್ಷರದಿಂದ ಗುರುತಿಸಲ್ಪಡುತ್ತದೆ. |
03:09 | ಸೆಲ್ ಗಳು ಪ್ರದರ್ಶಿಸಲು ಯೋಗ್ಯವಾದ ಟೆಕ್ಸ್ಟ್ ಗಳನ್ನು, ಸಂಖ್ಯೆಗಳನ್ನು, ಫಾರ್ಮುಲಾಗಳನ್ನು ಹಾಗೂ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಹಿಡಿದಿಟ್ಟುಕೊಂಡಿರುತ್ತವೆ. |
03:18 | ಪ್ರತೀ ಸ್ಪ್ರೆಡ್-ಶೀಟ್ ತುಂಬಾ ಶೀಟ್ ಗಳನ್ನು ಹೊಂದಿರುತ್ತದೆ ಹಾಗೂ ಪ್ರತೀ ಶೀಟ್ ಒಂದು ಮಿಲಿಯನ್ ಗಿಂತ ಹೆಚ್ಚು ರೋ ಗಳನ್ನು ಮತ್ತು ಒಂದು ಸಾವಿರ ಕಾಲಂಗಳನ್ನು ಹೊಂದಿರುತ್ತದೆ. ಇದು ನಮಗೆ ಒಂದು ಬಿಲಿಯನ್ ಗಿಂತಲೂ ಹೆಚ್ಚು ಅಥವಾ ನೂರು ಕೋಟಿ ಸೆಲ್ ಗಳನ್ನು ಒಂದು ಸಿಂಗಲ್ ಶೀಟ್ ನಲ್ಲಿ ಕೊಡುತ್ತದೆ. |
03:33 | ಕ್ಯಾಲ್ಕ್ ವಿಂಡೋ ವಿವಿಧ ಟೂಲ್ ಬಾರ್ ಗಳನ್ನು ಹೊಂದಿದೆ. ಅವೆಂದರೆ, ಟೈಟಲ್ ಬಾರ್, ಮೆನ್ಯು ಬಾರ್, ಸ್ಟ್ಯಾಂಡರ್ಡ್ ಟೂಲ್ಬಾರ್, ಫಾರ್ಮೆಟಿಂಗ್ ಬಾರ್, ಫಾರ್ಮುಲಾ ಬಾರ್ ಮತ್ತು ಸ್ಟೇಟಸ್ ಬಾರ್ . |
03:45 | ಈ ಟೂಲ್ ಬಾರ್ ಗಳನ್ನು ಹೊರತುಪಡಿಸಿ, ಮೇಲ್ತುದಿಯಲ್ಲಿ ಇನ್ನೆರಡು ಫೀಲ್ಡ್ ಗಳು ಕಂಡುಬರುತ್ತವೆ. ಅವೆಂದರೆ, “Input line” ಮತ್ತು “Name box” . |
03:54 | ಈ ಟೂಲ್ ಬಾರ್ ನಲ್ಲಿ ಹೆಚ್ಚಾಗಿ ಬಳಕೆಯಾಗುವ ಆಯ್ಕೆಗಳು ಇವೆ. ಅವುಗಳನ್ನು ನಾವು ಮುಂದೆ ಟ್ಯುಟೋರಿಯಲ್ ನ್ನು ಕಲಿಯುತ್ತಾ ಹೋದಂತೆ ತಿಳಿಯುತ್ತೇವೆ. |
04:03 | ಈಗ ನೀವು ಸ್ಪ್ರೆಡ್-ಶೀಟ್ ನ ಕೆಳ ಎಡಬದಿಯಲ್ಲಿ “Sheet 1”, “Sheet 2” ಮತ್ತು “Sheet 3” ಎಂಬ ಶೀಟ್ ಟ್ಯಾಬ್ ಗಳನ್ನು ಕಾಣಬಹುದು. |
04:13 | ಈ ಟ್ಯಾಬ್ ಗಳು ಪ್ರತೀ ಒಂದೊಂದು ಶೀಟ್ ನ್ನು ಪ್ರವೇಶ ಮಾಡಲು ಅವಕಾಶ ಮಾಡಿ ಕೊಡುತ್ತದೆ. ಅದರಲ್ಲಿ ಈಗ ಕಾಣಿಸುತ್ತಿರುವ ಶೀಟ್ ನ ಟ್ಯಾಬ್ ಬಿಳಿ ಬಣ್ಣದ್ದಾಗಿರುತ್ತವೆ. |
04:21 | ಇನ್ನೊಂದು ಶೀಟ್ ಟ್ಯಾಬ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿರ್ದಿಷ್ಟ ಶೀಟ್ ಕಾಣಿಸುತ್ತದೆ ಹಾಗೂ ಅದರ ಟ್ಯಾಬ್ ಬಿಳಿ ಬಣ್ಣಕ್ಕೆ ತಿರುಗುತ್ತದೆ. |
04:28 | ಸ್ಪ್ರೆಡ್-ಶೀಟ್ ನಲ್ಲಿ ಮಾಹಿತಿಗಳನ್ನು ತುಂಬಿಸುವ ಮುಖ್ಯ ಭಾಗವು ಗ್ರಿಡ್ ರೂಪದಲ್ಲಿ ವಿವಿಧ ಸೆಲ್ ಗಳನ್ನು ಹೊಂದಿರುತ್ತದೆ. ಪ್ರತೀ ಸೆಲ್ ಒಂದು ರೋ ಮತ್ತು ಒಂದು ಕಾಲಂ ನ ಛೇದಕದಲ್ಲಿದೆ. |
04:41 | ಕಾಲಂಗಳ ಮೇಲ್ಗಡೆ ಹಾಗೂ ರೋ ಗಳ ಎಡಬದಿಯಲ್ಲಿ, ಅಕ್ಷರಗಳನ್ನು ಮತ್ತು ಸಂಖ್ಯೆಗಳನ್ನು ಹೊಂದಿರುವ ಬೂದು ಬಣ್ಣದ ಪೆಟ್ಟಿಗೆಗಳು ಕಂಡುಬರುತ್ತವೆ. ಇವೆ ರೋ ಮತ್ತು ಕಾಲಂ ನ ಹೆಡರ್ ಗಳು |
04:53 | ಕಾಲಂಗಳು, “A” ನಿಂದ ಶುರುವಾಗಿ ಬಲಬದಿಗೆ ಮುಂದುವರಿಯುತ್ತವೆ ಮತ್ತು ರೋ ಗಳು “1” ರಿಂದ ಶುರುವಾಗಿ ಕೆಳಬದಿಗೆ ಮುಂದುವರಿಯುತ್ತವೆ. |
05:01 | ಒಂದು cell ಗೆ ಸಂಬಂಧಪಟ್ಟ ಕಾಲಂ ಹಾಗೂ ರೋ ಹೆಡರ್ ಗಳು “Name Box” ಫೀಲ್ಡ್ ನಲ್ಲಿ ಕಾಣಿಸುತ್ತದೆ. |
05:07 | ಲಿಬ್ರೆ ಆಫೀಸ್ ಕ್ಯಾಲ್ಕ್ ನಲ್ಲಿ ನಾವು ವಿವಿಧ ಅಂಶಗಳನ್ನು ಕಲಿತ ಮೇಲೆ, ಈಗ ನಾವು ಹೊಸ ಡಾಕ್ಯುಮೆಂಟ್ ನ್ನು ಹೇಗೆ ಓಪನ್ ಮಾಡುವುದು ಎಂದು ಕಲಿಯೋಣ. |
05:17 | ನೀವು ಸ್ಟ್ಯಾಂಡರ್ಡ್ ಟೂಲ್ಬಾರ್ ನಲ್ಲಿರುವ ನ್ಯೂ ಐಕಾನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅಥವಾ ಮೆನ್ಯು ಬಾರ್ ನಲ್ಲಿರುವ “File” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “New” ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಕೊನೆಯದಾಗಿ “Spreadsheet” ಆಯ್ಕೆಯನ್ನು ಕ್ಲಿಕ್ ಮಾಡುವುದರ ಮೂಲಕ ಹೊಸ ಡಾಕ್ಯುಮೆಂಟ್ ಅನ್ನು ತೆರೆಯಬಹುದು. |
05:33 | ಎರಡೂ ವಿಧಾನಗಳಲ್ಲಿ ನೀವು ಒಂದು ಹೊಸ ಕ್ಯಾಲ್ಕ್ ವಿಂಡೋ ಓಪನ್ ಆಗಿರುವುದನ್ನು ನೋಡಬಹುದು. |
05:39 | ಈಗ ನಾವು ಸ್ಪ್ರೆಡ್-ಶೀಟ್ ನಲ್ಲಿ “Personal Finance Tracker” ನ್ನು ಹೇಗೆ ತಯಾರಿಸುವುದು ಎಂದು ಕಲಿಯೋಣ. |
05:45 | ಈಗ ಸ್ಪ್ರೆಡ್-ಶೀಟ್ ನ ಕೆಲವು ಸೆಲ್ ಗಳಲ್ಲಿ ಮಾಹಿತಿಯನ್ನು ಹೇಗೆ ತುಂಬಿಸುವುದು ಎಂದು ನೋಡೋಣ. |
05:50 | ಈಗ ಸ್ಪ್ರೆಡ್-ಶೀಟ್ ನ ಮೊದಲ ಶೀಟ್ ನಲ್ಲಿ A1 ಎಂದು ಉಲ್ಲೇಖಿಸಲಾದ ಸೆಲ್ ಮೇಲೆ ಕ್ಲಿಕ್ ಮಾಡಿ. |
05:56 | ಈಗ ನಾವು ಸ್ಪ್ರೆಡ್-ಶೀಟ್ ನಲ್ಲಿ ಹಾಕಬಯಸುವ ಅಂಕಿ-ಅಂಶಗಳ ಕ್ರಮ ಸಂಖ್ಯೆಗಳನ್ನು ಗುರುತಿಸುವ ಹೆಡಿಂಗ್ ಅನ್ನು “SN” ಎಂದು ಟೈಪ್ ಮಾಡೋಣ. |
06:05 | ಈಗ B1 ಎಂದು ಉಲ್ಲೇಖಿಸಲಾದ cell ಅನ್ನು ಕ್ಲಿಕ್ ಮಾಡಿ ಮತ್ತು ಅದರಲ್ಲಿ “Items” ಎಂದು ಇನ್ನೊಂದು ಹೆಡಿಂಗ್ ಟೈಪ್ ಮಾಡಿ. |
06:11 | ಮುಂದೆ ನಾವು ಈ ಸ್ಪ್ರೆಡ್-ಶೀಟ್ ನಲ್ಲಿ ಬಳಸುವ ಎಲ್ಲಾ ಅಂಕಿ-ಅಂಶಗಳು ಈ ಹೆಡಿಂಗ್ ನ ಕೆಳಗೇ ಬರಬೇಕು. |
06:18 | ಹಾಗೆಯೇ, C1, D1, E1, F1 ಮತ್ತು G1 cell ಗಳನ್ನು ಒಂದರ ನಂತರ ಒಂದಂತೆ ಕ್ಲಿಕ್ ಮಾಡಿ ಮತ್ತು ಅವುಗಳ ಮೇಲೆ ಕ್ರಮವಾಗಿ ಹೀಗೆ ಹೆಡಿಂಗ್ ಗಳನ್ನು ಬರೆಯಿರಿ. “Cost”, “Spent”, “Received”, “Date” ಮತ್ತು “Account”. |
06:33 | ನಂತರ ನಾವು ಈ ಪ್ರತೀ ಕಾಲಂನ ಕೆಳಗೆ ಮಾಹಿತಿಯನ್ನು ಇನ್ಸರ್ಟ್ ಮಾಡಲಿದ್ದೇವೆ. |
06:39 | ಒಂದು ಸಲ ನೀವು ನಿಮ್ಮ ಸ್ಪ್ರೆಡ್-ಶೀಟ್ ನಲ್ಲಿ ಬರೆದ ಮೇಲೆ ಮುಂದಿನ ಉಪಯೋಗಕ್ಕಾಗಿ ಅದನ್ನು ಸೇವ್ ಮಾಡಬೇಕು. |
06:44 | ಆ ಫೈಲ್ ನ್ನು ಸೇವ್ ಮಾಡಲು ಮೆನ್ಯು ಬಾರ್ ನ “File” ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ “Save As” ಆಯ್ಕೆಯನ್ನು ಕ್ಲಿಕ್ ಮಾಡಿ. |
06:51 | ಈಗ ಒಂದು ಡೈಲಾಗ್ ಬಾಕ್ಸ್ ಕಾಣಿಸುತ್ತದೆ. ಅದರಲ್ಲಿ “Name” ಫೀಲ್ಡ್ ನಲ್ಲಿ ನಿಮ್ಮ ಫೈಲ್ ನ ಹೆಸರನ್ನು ಹಾಕಬೇಕು. |
06:59 | ಹಾಗಾಗಿ ಫೈಲ್ ನ ಹೆಸರನ್ನು “Personal Finance Tracker” ಎಂದು ಟೈಪ್ ಮಾಡಿ. |
07:04 | “Name” ಫೀಲ್ಡ್ ನ ಕೆಳಗೆ “Save in folder” ಎಂಬ ಫೀಲ್ಡ್ ಇದೆ. ಅದರಲ್ಲಿ ಯಾವ ಫೋಲ್ಡರ್ ನಲ್ಲಿ ನಿಮ್ಮ ಫೈಲ್ ಸೇವ್ ಆಗಬೇಕು ಆ ಫೋಲ್ಡರ್ ನ ಹೆಸರು ಹಾಕಬೇಕು. |
07:14 | ಹಾಗಾಗಿ ಈಗ “Save in folder” ಫೀಲ್ಡ್ ನಲ್ಲಿ down arrow ನ್ನು ಕ್ಲಿಕ್ ಮಾಡಿ. |
07:18 | ಈಗ ಫೋಲ್ಡರ್ ಆಯ್ಕೆಗಳ ಒಂದು ಲಿಸ್ಟ್ ಕಾಣಿಸುತ್ತದೆ ಅದರಲ್ಲಿ ನಾವು ನಮ್ಮ ಫೈಲ್ ಯಾವ ಫೋಲ್ಡರ್ ನಲ್ಲಿ ಸೇವ್ ಮಾಡಲು ಬಯಸುತ್ತೇವೆಯೋ ಅದನ್ನು ಸೆಲೆಕ್ಟ್ ಮಾಡಬೇಕು. |
07:26 | ನಾವು ಈಗ “Desktop” ಆಯ್ಕೆಯ ಮೇಲೆ ಕ್ಲಿಕ್ ಮಾಡುತ್ತೇವೆ. |
07:28 | ಹಾಗಾಗಿ ಫೈಲ್ ಡೆಸ್ಕ್-ಟಾಪ್ ಮೇಲೆ ಸೇವ್ ಆಗುತ್ತದೆ. |
07:34 | ಈಗ ಡಯಲಾಗ್ ಬಾಕ್ಸ್ ನಲ್ಲಿ “File type” ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
07:37 | ಅದು ನಿಮಗೆ ಫೈಲ್ ಟೈಪ್ ಆಯ್ಕೆಯ ಒಂದು ಲಿಸ್ಟ್ ಅಥವಾ ಎಕ್ಸ್ಟೆನ್ಶನ್ ಗಳನ್ನು ತೋರಿಸುತ್ತದೆ. ಅದರ ಅಡಿ ನೀವು ನಿಮ್ಮ ಫೈಲ್ ನ್ನು ಸೇವ್ ಮಾಡಬಹುದು. |
07:46 | ಲಿಬ್ರೆ ಆಫೀಸ್ ಕ್ಯಾಲ್ಕ್ ನಲ್ಲಿ “ODF Spreadsheet” ಎನ್ನುವುದು ಒಂದು ಡೀಫಾಲ್ಟ್ ಫೈಲ್ ಟೈಪ್ ಆಗಿದ್ದು ಅದು “dot ods” ಎಂಬ ಎಕ್ಸ್ಟೆನ್ಶನ್ ಅನ್ನು ಕೊಡುತ್ತದೆ. |
07:56 | ODF ಎಂದರೆ Open Document Format. ಅದು ಒಂದು ಮುಕ್ತ ಮಾನದಂಡದ ಸ್ವರೂಪವಾಗಿದೆ. |
08:01 | ನಿಮ್ಮ ಫೈಲ್ ಅನ್ನು ಲಿಬ್ರೆ ಆಫೀಸ್ ಕ್ಯಾಲ್ಕ್ ನಲ್ಲಿ ಓಪನ್ ಮಾಡಬಹುದಾದ ods ಫಾರ್ಮೆಟ್ ನಲ್ಲಿ ಸೇವ್ ಮಾಡುವುದರ ಜೊತೆ ಅದನ್ನು dot xml, dot xlsx ಮತ್ತು dot xls ಫಾರ್ಮೆಟ್ ನಲ್ಲಿ ಕೂಡ ಸೇವ್ ಮಾಡಬಹುದು, ಅದು MS ಆಫೀಸ್ ಎಕ್ಸ್-ಸೆಲ್ ಪ್ರೊಗ್ರಾಮ್ ನಲ್ಲಿ ಓಪನ್ ಆಗುತ್ತದೆ. |
08:20 | ಇನ್ನೊಂದು ಚಿರಪರಿಚಿತವಾದ, ಹೆಚ್ಚಿನ ಪ್ರೋಗ್ರಾಂಗಳಲ್ಲಿ ಓಪನ್ ಮಾಡಬಲ್ಲ ಫೈಲ್ ಎಕ್ಸ್ಟೆನ್ಶನ್ ಯಾವುದೆಂದರೆ, dot csv. |
08:28 | ಇದನ್ನು ಆಗಾಗ ಸ್ಪ್ರೆಡ್-ಶೀಟ್ ನ ಮಾಹಿತಿಯನ್ನು ಟೆಕ್ಸ್ಟ್ ಫೈಲ್ ಫಾರ್ಮೆಟ್ ನಲ್ಲಿ ಸೇವ್ ಮಾಡಲು ಬಳಸುತ್ತೇವೆ. ಇದು ಫೈಲ್ ಸೈಜ್ ನ್ನು ಬಹಳವಾಗಿ ಕಡಿಮೆ ಮಾಡುತ್ತದೆ ಮತ್ತು ಸುಲಭದಲ್ಲಿ ಕೊಂಡೊಯ್ಯಬಹುದಾಗಿದೆ. |
08:38 | ಈಗ ನಾವು “ODF Spreadsheet” ಆಯ್ಕೆ ಮೇಲೆ ಕ್ಲಿಕ್ ಮಾಡೋಣ. |
08:43 | ಈಗ ನೀವು ನೋಡಬಹುದೇನೆಂದರೆ, “File type” ಆಯ್ಕೆಯ ಮುಂದೆ “ODF Spreadsheet ಮತ್ತು ಆವರಣದಲ್ಲಿ, dot ods” ಕಾಣಿಸುತ್ತದೆ. |
08:53 | “Save” ಬಟನ್ ಮೇಲೆ ಕ್ಲಿಕ್ ಮಾಡಿ. |
08:55 | ಇದು ನಿಮ್ಮನ್ನು ಕ್ಯಾಲ್ಕ್ ವಿಂಡೋ ಗೆ ಹಿಂತಿರುಗಿಸುತ್ತದೆ. ಟೈಟಲ್ ಬಾರ್ ನಲ್ಲಿ ನೀವು ಆಯ್ಕೆ ಮಾಡಿರುವ file name ಮತ್ತು extension ಕಾಣಿಸುತ್ತದೆ. |
09:03 | ಈ ಮೇಲೆ ಚರ್ಚಿಸಿರುವ ಫಾರ್ಮೆಟ್ ನ್ನು ಹೊರತುಪಡಿಸಿ ಸ್ಪ್ರೆಡ್-ಶೀಟ್ ಅನ್ನು “dot html” ಫಾರ್ಮೆಟ್ ನಲ್ಲಿ ಕೂಡ ಸೇವ್ ಮಾಡಬಹುದು, ಅದು ಒಂದು ವೆಬ್ ಫಾರ್ಮೆಟ್ ಆಗಿದೆ. |
09:13 | ಇದನ್ನೂ ಕೂಡ ಮೇಲೆ ಹೇಳಿದ ರೀತಿಯಲ್ಲೇ ಮಾಡಬಹುದು. |
09:18 | ಇದಕ್ಕಾಗಿ ಮೆನ್ಯು ಬಾರ್ ನ “File” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ “Save As” ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
09:24 | ಈಗ ”File Type” ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ “HTML Document ಮತ್ತು ಬ್ರಾಕೆಟ್ ನಲ್ಲಿ OpenOffice dot org Calc” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. |
09:36 | ಈ ಆಯ್ಕೆಯು ಡಾಕ್ಯುಮೆಂಟ್ ಗೆ “dot html” ಎಕ್ಸ್ಟೆನ್ಶನ್ ಕೊಡುತ್ತದೆ. |
09:41 | “Save” ಬಟನ್ ಮೇಲೆ ಕ್ಲಿಕ್ ಮಾಡಿ. |
09:44 | ಈಗ ಡೈಲಾಗ್ ಬಾಕ್ಸ್ ನಲ್ಲಿ “Ask when not saving in ODF format” ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ. |
09:50 | ಕೊನೆಯದಾಗಿ “Keep Current Format” ಆಯ್ಕೆಯನ್ನು ಕ್ಲಿಕ್ ಮಾಡಿ. |
09:54 | ಡಾಕ್ಯುಮೆಂಟ್ html ಎಕ್ಸ್ಟೆನ್ಶನ್ ನಲ್ಲಿ ಸೇವ್ ಆಗಿರುವುದನ್ನು ನೀವು ನೋಡಬಹುದು. |
10:00 | ನಮ್ಮ ಸ್ಪ್ರೆಡ್-ಶೀಟ್ ಅನ್ನು ವೆಬ್-ಪೇಜ್ ನಂತೆ ತೋರಿಸಬೇಕಿದ್ದರೆ ನಾವು ಅದನ್ನು ಈ ಫಾರ್ಮೆಟ್ ನಲ್ಲಿ ಸೇವ್ ಮಾಡಬೇಕು, ಆಗ ಅದು ವೆಬ್ ಬ್ರೌಸರ್ ನ ಮುಖಾಂತರ ಓಪನ್ ಆಗುತ್ತದೆ. |
10:10 | Document ಅನ್ನು ಸ್ಟ್ಯಾಂಡರ್ಡ್ ಟೂಲ್ ಬಾರ್ ನಲ್ಲಿ “Export Directly as PDF” ಆಯ್ಕೆ ಯ ಮೇಲೆ ಕ್ಲಿಕ್ ಮಾಡುವುದರಿಂದ ಅದನ್ನು PDF format ಆಗಿ ಕೂಡ ಎಕ್ಸ್-ಪೋರ್ಟ್ ಮಾಡಬಹುದು. |
10:20 | ನೀವು ಸೇವ್ ಮಾಡಬೇಕಾದ ಜಾಗವನ್ನು ಆಯ್ಕೆ ಮಾಡಿ. |
10:24 | ಅದಕ್ಕೆ ಪರ್ಯಾಯವಾಗಿ “File” ಆಯ್ಕೆ ಮೇಲೆ ಕ್ಲಿಕ್ ಮಾಡಿ ಅದರಲ್ಲಿ “Export as pdf” ಆಯ್ಕೆ ಮೇಲೆ ಕ್ಲಿಕ್ ಮಾಡುವುದರಿಂದ ಕೂಡ ನೀವು ಇದನ್ನು ಮಾಡಬಹುದು. |
10:33 | ಈಗ ಕಾಣಿಸುವ ಡೈಲಾಗ್ ಬಾಕ್ಸ್ ನಲ್ಲಿ “Export” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ “Save” ಆಯ್ಕೆ ಯನ್ನು ಕ್ಲಿಕ್ ಮಾಡಿ. |
10:40 | pdf ಫೈಲ್ ತಯಾರಾಗಿರುತ್ತದೆ. |
10:44 | ಈಗ ನಾವು ಫೈಲ್ ಮೇಲೆ ಕ್ಲಿಕ್ ಮಾಡಿ ನಂತರ ಕ್ಲೋಸ್ ಕ್ಲಿಕ್ ಮಾಡುವುದರ ಮೂಲಕ ಇದನ್ನು ಕ್ಲೋಸ್ ಮಾಡೋಣ. |
10:50 | ನಂತರ ನಾವು ಲಿಬ್ರೆ ಆಫೀಸ್ ಕ್ಯಾಲ್ಕ್ ನಲ್ಲಿ ಹೇಗೆ ಮೊದಲೇ ಉಪಸ್ಥಿತಿಯಲ್ಲಿರುವ ಡಾಕ್ಯುಮೆಂಟ್ ಅನ್ನು ಓಪನ್ ಮಾಡುವುದು ಎಂದು ತಿಳಿಯೋಣ. |
10:56 | ಮೊದಲೇ ಉಪಸ್ಥಿತಿಯಲ್ಲಿರುವ ಡಾಕ್ಯುಮೆಂಟ್ ಅನ್ನು ಓಪನ್ ಮಾಡಲು ಮೆನ್ಯು ಬಾರ್ ನಲ್ಲಿ “File” ಮೆನ್ಯು ಗೆ ಹೋಗಿ ನಂತರ ಓಪನ್ ಆಯ್ಕೆಗೆ ಹೋಗಿ ಕ್ಲಿಕ್ ಮಾಡಿ. |
11:06 | ಈಗ ಸ್ಕ್ರೀನ್ ಮೇಲೆ ಒಂದು ಡೈಲಾಗ್ ಬಾಕ್ಸ್ ಕಾಣಿಸುತ್ತದೆ. |
11:09 | ಇಲ್ಲಿ ನೀವು ಫೈಲ್ ಸೇವ್ ಮಾಡಿದ ಫೋಲ್ಡರ್ ನ್ನು ಹುಡುಕಿ. |
11:14 | ಹಾಗೆ ಡೈಲಾಗ್ ಬಾಕ್ಸ್ ಮೇಲಿರುವ ಸಣ್ಣ ಪೆನ್ಸಿಲ್ ಚಿತ್ರದ ಬಟನ್ ಮೇಲೆ ಕ್ಲಿಕ್ ಮಾಡಿ, ಆ ಬಟನ್ ಗೆ “Type a file name” ಎಂಬ ಹೆಸರಿದೆ. |
11:23 | ಇದು “Location Bar” ಫೀಲ್ಡ್ ಅನ್ನು ಓಪನ್ ಮಾಡುತ್ತದೆ. |
11:25 | ಇಲ್ಲಿ ನೀವು ಹುಡುಕುತ್ತಿರುವ ಫೈಲ್ ನ ಹೆಸರನ್ನು ಟೈಪ್ ಮಾಡಿ. |
11:30 | ಹಾಗಾದರೆ, ನಾವು ಫೈಲ್ ನ ಹೆಸರನ್ನು “Personal Finance Tracker” ಎಂದು ಟೈಪ್ ಮಾಡೋಣ. |
11:35 | ಈಗ ಬರುವ ಹೆಸರುಗಳ ಲಿಸ್ಟ್ ನಲ್ಲಿ “Personal Finance Tracker dot ods” ಅನ್ನು ಆಯ್ಕೆ ಮಾಡಿ. |
11:43 | ಈಗ ”Open” ಬಟನ್ ಮೇಲೆ ಕ್ಲಿಕ್ ಮಾಡಿ. |
11:45 | ಈಗ Personal Finance Tracker.ods ಓಪನ್ ಆಗಿರುವುದನ್ನು ನೀವು ನೋಡಬಹುದು. |
11:51 | ಇದಕ್ಕೆ ಪರ್ಯಾಯವಾಗಿ ಮೊದಲು ಇರುವ ಫೈಲ್ ನ್ನು ಓಪನ್ ಮಾಡಲು ನೀವು ಟೂಲ್ ಬಾರ್ ನಲ್ಲಿ “Open” ಐಕಾನ್ ಮೇಲೆ ಕ್ಲಿಕ್ ಮಾಡಿ ನಂತರ ಅದೇ ರೀತಿಯಲ್ಲಿ ಪ್ರಕ್ರಿಯೆಯನ್ನು ಮುಂದುವರೆಸಿ. |
12:02 | ನೀವು ಮೈಕ್ರೋಸಾಫ್ಟ್ ಎಕ್ಸ್-ಸೆಲ್ ನಲ್ಲಿ ಉಪಯೋಗಿಸುವ “dot xls” ಮತ್ತು “dot xlsx” ಎಕ್ಸ್ಟೆನ್ಶನ್ ನ ಫೈಲ್ ಗಳನ್ನು ಕೂಡಾ ಕ್ಯಾಲ್ಕ್ ನಲ್ಲಿ ಓಪನ್ ಮಾಡಬಹುದು. |
12:13 | ಮುಂದೆ ನೀವು ಕಲಿಯುವಂತದ್ದು, ಫೈಲ್ ನ್ನು ಹೇಗೆ ಬದಲಾಯಿಸುವುದು ಮತ್ತು ಅದನ್ನು ಹೇಗೆ ಅದೇ ಹೆಸರಿನಿಂದ ಸೇವ್ ಮಾಡುವುದು ಎಂದು. |
12:20 | ಹಾಗಾಗಿ ಈಗ ಹೆಡಿಂಗ್ ನ್ನು ಬೋಲ್ಡ್ ಮಾಡಿ ಮತ್ತು ಫಾಂಟ್ ಸೈಜ್ ಅನ್ನು ಹೆಚ್ಚಿಸುವುದರ ಮೂಲಕ ಫೈಲನ್ನು ಬದಲಾಯಿಸೋಣ. |
12:26 | ಅದಕ್ಕಾಗಿ A1 ಎಂದು ಉಲ್ಲೆಖಿಸಲಾದ ಸೆಲ್ ಮೇಲೆ ಕ್ಲಿಕ್ ಮಾಡಿ ನಂತರ ಲೆಫ್ಟ್ ಮೌಸ್ ಬಟನ್ ಕ್ಲಿಕ್ ಮಾಡಿ drag ಮಾಡುವುದರ ಮೂಲಕ “SN”, “Cost”, “Spent”, “Received”, “Date” ಮತ್ತು “Account” ಹೆಡಿಂಗ್ ಗಳನ್ನು ಕ್ಲಿಕ್ ಮಾಡಿ. |
12:42 | ಇದು ಟೆಕ್ಸ್ಟ್ ನ್ನು ಸೆಲೆಕ್ಟ್ ಮಾಡಿ ಹೈಲೈಟ್ ಮಾಡುತ್ತದೆ. ಈಗ ಲೆಫ್ಟ್ ಮೌಸ್ ಬಟನ್ ಅನ್ನು ಬಿಡಿ, ಟೆಕ್ಸ್ಟ್ ಈಗಲೂ ಹೈಲೆಟ್ ಆಗಿಯೇ ಇದೆ. ಈಗ ಸ್ಟಾಂಡರ್ಡ್ ಟೂಲ್ ಬಾರ್ ನಲ್ಲಿ “Bold” ಎಂಬಲ್ಲಿ ಕ್ಲಿಕ್ ಮಾಡಿ. |
12:56 | ಈಗ ಹೆಡಿಂಗ್ ಗಳು ಬೋಲ್ಡ್ ಆಗಿವೆ. |
12:59 | ಈಗ ಹೆಡಿಂಗ್ ಗಳ ಫಾಂಟ್ ಸೈಜ್ ನ್ನು ಹೆಚ್ಚಿಸೋಣ. |
13:03 | ಅದಕ್ಕಾಗಿ ಈಗ ಹೆಡಿಂಗ್ ಅನ್ನು ಸೆಲೆಕ್ಟ್ ಮಾಡಿ ನಂತರ ಟೂಲ್ ಬಾರ್ ನಲ್ಲಿ “Font Size” ಅನ್ನು ಕ್ಲಿಕ್ ಮಾಡಿ. |
13:09 | ಡ್ರಾಪ್ ಡೌನ್ ಮೆನ್ಯುವಿನಲ್ಲಿ “14” ನ್ನು ಆಯ್ಕೆ ಮಾಡಿ. |
13:13 | ಈಗ ಫಾಂಟ್ ಸೈಜ್ ಹೆಚ್ಚಾದದ್ದನ್ನು ನೀವು ಗಮನಿಸಬಹುದು. |
13:17 | ಉಪಯೋಗಿಸುತ್ತಿರುವ ಫಾಂಟ್ ಸ್ಟೈಲ್ ನ್ನು ಬದಲಾಯಿಸೋಣ. |
13:21 | ಅದಕ್ಕಾಗಿ “Font Name” ಫೀಲ್ಡ್ ನಲ್ಲಿ ಡೌನ್ ಬಾಣವನ್ನು ಕ್ಲಿಕ್ ಮಾಡಿ ನಂತರ “Bitstream Charter”
ಅನ್ನು ಫಾಂಟ್ ನೇಮ್ ಎಂದು ಸೆಲೆಕ್ಟ್ ಮಾಡಿ. |
13:31 | ನಮಗೆ ಬೇಕಾದ ಬದಲಾವಣೆಗಳನ್ನು ಮಾಡಿದ ನಂತರ “Save” ಐಕಾನ್ ಕ್ಲಿಕ್ ಮಾಡಿ. |
13:36 | ಒಮ್ಮೆ ನೀವು ಡಾಕ್ಯುಮೆಂಟ್ ಅನ್ನು ಸೇವ್ ಮಾಡಿದ ಮೇಲೆ ನಂತರ ನಿಮಗೆ ಕ್ಲೋಸ್ ಮಾಡಬೇಕೆನಿಸಿದರೆ, ಮೆನ್ಯು ಬಾರ್ ನ “File” ಮೆನ್ಯುವಿಗೆ ಹೋಗಿ “Close” ಬಟನ್ ಮೇಲೆ ಕ್ಲಿಕ್ ಮಾಡಿ. |
13:46 | ಅದು ನಿಮ್ಮ ಫೈಲ್ ಅನ್ನು ಕ್ಲೋಸ್ ಮಾಡುತ್ತದೆ. |
13:50 | ಈಗ ನಾವು ಲಿಬ್ರೆ ಆಫೀಸ್ ಕ್ಯಾಲ್ಕ್ ಟ್ಯುಟೋರಿಯಲ್ ನ ಅಂತ್ಯಕ್ಕೆ ಬಂದಿದ್ದೇವೆ. |
13:54 | ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು, |
13:57 | ಲಿಬ್ರೆ ಆಫೀಸ್ ಕ್ಯಾಲ್ಕ್ ನ ಪರಿಚಯ . |
14:01 | ಲಿಬ್ರೆ ಆಫೀಸ್ ಕ್ಯಾಲ್ಕ್ ನ ವಿವಿಧ ಟೂಲ್ ಬಾರ್ ಗಳು. |
14:04 | ಕ್ಯಾಲ್ಕ್ ನಲ್ಲಿ ಹೊಸ ಡಾಕ್ಯುಮೆಂಟ್ ಗಳನ್ನು ಹೇಗೆ ಓಪನ್ ಮಾಡುವುದು. |
14:07 | ಮೊದಲೇ ಇದ್ದ ಡಾಕ್ಯುಮೆಂಟ್ ಅನ್ನು ಹೇಗೆ ಓಪನ್ ಮಾಡುವುದು. |
14:10 | ಡಾಕ್ಯುಮೆಂಟ್ ನ್ನು ಹೇಗೆ ಸೇವ್ ಮಾಡುವುದು ಹಾಗೂ ಕ್ಲೋಸ್ ಮಾಡುವುದು ಇತ್ಯಾದಿ.
ಮಾಡಬೇಕಾದ ಅಭ್ಯಾಸಗಳು : Calc ನಲ್ಲಿ ಹೊಸ document ನ್ನು ಓಪನ್ ಮಾಡಿ. ಅದನ್ನು “Spreadsheet Practice.ods” ಎಂಬ ಹೆಸರಿನಲ್ಲಿ ಸೇವ್ ಮಾಡಿ. “Serial number”, “Name”, “Department” ಮತ್ತು “Salary” ಎಂಬ ಹೆಡಿಂಗ್ ಗಳನ್ನು ಬರೆಯಿರಿ. ಹೆಡಿಂಗ್ ಗಳನ್ನು ಅಂಡರ್ ಲೈನ್ ಮಾಡಿ. ಹೆಡಿಂಗ್ ನ font size ನ್ನು 16 ಕ್ಕೆ ಹೆಚ್ಚಿಸಿ. ಕ್ಲೋಸ್ ಮಾಡಿ. |
14:14 | ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. |
14:17 | ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
14:20 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
14:24 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
14:34 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
14:40 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
14:45 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
14:53 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಎಂಬಲ್ಲಿ ನೋಡಿ. |
15:03 | ಈ ಪಾಠದ ಅನುವಾದಕ ಉದಯ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ. |
15:08 | ಧನ್ಯವಾದಗಳು. |
Contributors and Content Editors
Gaurav, Pratik kamble, Sandhya.np14, Udaya, Vasudeva ahitanal