Blender/C2/Hardware-requirement-to-install-Blender/Kannada
From Script | Spoken-Tutorial
Revision as of 14:38, 17 March 2017 by Pratik kamble (Talk | contribs)
Time | Narration |
00:03 | ಬ್ಲೆಂಡರ್ ನ ಟ್ಯುಟೋರಿಯಲ್ ಸರಣಿಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ಬ್ಲೆಂಡರ್ 2.59 ಗಾಗಿ ಹಾರ್ಡವೇರ್ ಸ್ಪೆಸಿಫಿಕೇಶನ್ಸ್ ಹಾಗೂ ಹಾರ್ಡವೇರ್ ಅವಶ್ಯಕತೆಗಳನ್ನು ನೋಡೋಣ. |
00:16 | ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೇಕರ್. |
00:20 | ಮೊಟ್ಟ ಮೊದಲು, ಬ್ಲೆಂಡರ್ ನ ಅಧಿಕೃತ ವೆಬ್ಸೈಟ್, ಹಾರ್ಡವೇರ್ ಅವಶ್ಯಕತೆಗಳ ಬಗ್ಗೆ ಏನು ಹೇಳುವದೋ ನೋಡೋಣ. |
00:28 | ನಿಮ್ಮ ಇಂಟರ್ನೆಟ್ ಬ್ರೌಸರ್ ಓಪನ್ ಮಾಡಿ. |
00:30 | ನಾನು ಫೈರ್-ಫಾಕ್ಸ್ 3.09 ಉಪಯೋಗಿಸುತ್ತಿದ್ದೇನೆ. |
00:34 | ಅಡ್ರೆಸ್ ಬಾರ್ ನಲ್ಲಿ www.blender.org ಟೈಪ್ ಮಾಡಿ ಮತ್ತು Enter ಕೀ ಒತ್ತಿ. |
00:44 | ಇದು ನಿಮ್ಮನ್ನು ಬ್ಲೆಂಡರ್ ನ ಅಧಿಕೃತ ವೆಬ್ಸೈಟ್ ಗೆ ಕರೆದೊಯ್ಯುತ್ತದೆ. |
00:47 | ತೋರಿಸಲು ಸುಲಭವಾಗಲಿ ಎಂದು ನಾನು ಈಗಾಗಲೆ ಸಿಸ್ಟೆಮ್ ರಿಕ್ವೈರ್ಮೆಂಟ್ಸ್ ಪೇಜ್ ನ್ನು ಲೋಡ್ ಮಾಡಿದ್ದೇನೆ. |
00:53 | ಬ್ಲೆಂಡರ್ ಎಂಬುದು ಫ್ರೀ ಹಾಗೂ ಒಪನ್ ಸೋರ್ಸ್ ಆಗಿದೆ. |
00:56 | ಬ್ಲೆಂಡರ್ 2.59 ಎಂಬುದು ಸುಮಾರು ಎಲ್ಲ ಆಪರೇಟಿಂಗ್ ಸಿಸ್ಟೆಮ್ ಗಳಲ್ಲಿ ಕೆಲಸ ಮಾಡುತ್ತದೆ. |
01:02 | ಈ ಟ್ಯುಟೋರಿಯಲ್ ಗಾಗಿ ನಾನು ವಿಂಡೋಸ್ XP ಆಪರೇಟಿಂಗ್ ಸಿಸ್ಟೆಮ್ ಬಳಸುತ್ತಿದ್ದೇನೆ. |
01:07 | ಬ್ಲೆಂಡರ್ ನ ವಿವಿಧ ಭಾಗಗಳು ಕಂಪ್ಯುಟರ್ ನ ಬೇರೆಬೇರೆ ಹಾರ್ಡವೇರ್ ಭಾಗಗಳ ಮೇಲೆ ಅವಲಂಬಿಸಿವೆ. |
01:13 | ವೇಗದ ಸಿ ಪಿ ಯು ಮತ್ತು ಅಧಿಕ RAM ಗಳು ರೆಂಡರಿಂಗ್ ಸ್ಪೀಡ್ ನ್ನು ಹೆಚ್ಚಿಸಲು ಸಹಾಯಮಾಡುತ್ತವೆ. ಹಾಗೆಯೇ ಬ್ಲೆಂಡರ್ ಇಂಟರ್ಫೇಸ್, ವ್ಯೂಪೋರ್ಟ್ಸ್ ಹಾಗೂ ರಿಯಲ್-ಟೈಮ್ ಎಂಜಿನ್ಗಳ ವೇಗವು ಗ್ರಾಫಿಕ್ಸ್ ಕಾರ್ಡ್ನ ವೇಗದಿಂದ ಪ್ರಭಾವಿತವಾಗುತ್ತದೆ. |
01:26 | ವೇಗವಾದ ಹಾಗೂ ದೊಡ್ಡ ಹಾರ್ಡ್ ಡ್ರೈವ್ಸ್ ಗಳು ದೊಡ್ಡ ವಿಡಿಯೋ ಫೈಲ್ಗಳ ಕೆಲಸವನ್ನು ಶೀಘ್ರಗೊಳಿಸುತ್ತವೆ. |
01:32 | ನೀವು ನೊಡುವಂತೆ ಬ್ಲೆಂಡರ್ ಆರ್ಗನೈಜೇಶನ್, ಹಾರ್ಡವೇರ್ ಸ್ಪೆಸಿಫಿಕೇಶನ್ಸ್ ಗಳನ್ನು ಬಳಕೆಯ 3 ವಿಭಾಗಗಳಲ್ಲಿ ತೋರಿಸುತ್ತಿದೆ. |
01:40 | ಮಿನಿಮಮ್, ಗುಡ್ ಮತ್ತು ಪ್ರೊಡಕ್ಶನ್ ಲೆವೆಲ್ಸ್. |
01:44 | ಬ್ಲೆಂಡರ್ ನ್ನು ರನ್ ಮಾಡಲು ಬೇಕಾಗುವ ಮಿನಿಮಮ್ ಹಾರ್ಡವೇರ್ ಸ್ಪೆಸಿಫಿಕೇಶನ್ ಗಳು ಹೀಗಿವೆ - |
01:48 | 1 GHZ (ಗಿಗಾಹರ್ಟ್ಸ್) ಸಿಂಗಲ್ ಕೋರ್ ಸಿ ಪಿ ಯು |
01:53 | 512 MB RAM |
01:56 | 16 ಬಿಟ್ ಕಲರ್ ಹೊಂದಿರುವ 1024 x 768 ಪಿಕ್ಸೆಲ್ಸ್ ಡಿಸ್ಪ್ಲೇ |
02:03 | 3 ಬಟನ್ ಮೌಸ್ ಮತ್ತು |
02:05 | 64 MB RAM ಹೊಂದಿರುವ ಒಪನ್ ಜಿ ಎಲ್ ಗ್ರಾಫಿಕ್ಸ್ ಕಾರ್ಡ್. |
02:12 | ಗುಡ್ ಸ್ಪೆಸಿಫಿಕೇಶನ್ಸ್ ಲೆವೆಲ್ ನಲ್ಲಿ – |
02:15 | 2 GHZ (ಗಿಗಾಹರ್ಟ್ಸ್) ಡ್ಯುಅಲ್ ಕೋರ್ CPU |
02:20 | 2 GB RAM |
02:22 | 24 ಬಿಟ್ ಕಲರ್ ಹೊಂದಿರುವ 1920 x 1200 ಪಿಕ್ಸೆಲ್ಸ್ ಡಿಸ್ಪ್ಲೇ |
02:28 | 3 ಬಟನ್ ಮೌಸ್ ಮತ್ತು |
02:30 | 256 ಅಥವಾ 512 MB RAM ಹೊಂದಿರುವ ಒಪನ್ ಜಿ ಎಲ್ ಗ್ರಾಫಿಕ್ಸ್ ಕಾರ್ಡ್. |
02:40 | ಪ್ರೊಡಕ್ಶನ್ ಲೆವೆಲ್ ಹಾರ್ಡವೇರ್ ಸ್ಪೆಸಿಫಿಕೇಶನ್ಸ್ ನಲ್ಲಿ - |
02:43 | 64 ಬಿಟ್ಸ್, ಮಲ್ಟಿ ಕೋರ್ ಸಿ ಪಿ ಯು |
02:47 | 8-16 GB RAM |
02:50 | 24 ಬಿಟ್ ಕಲರ್ ಹೊಂದಿರುವ 1920 x 1200 ಪಿಕ್ಸೆಲ್ಸ್ನ ಎರಡರಷ್ಟು ಡಿಸ್ಪ್ಲೇ |
02:56 | 3 ಬಟನ್ ಮೌಸ್ + ಟ್ಯಾಬ್ಲೆಟ್ |
02:59 | 1 GB RAM ಹೊಂದಿರುವ ಒಪನ್ ಜಿ ಎಲ್ ಗ್ರಾಫಿಕ್ಸ್ ಕಾರ್ಡ್, ATI ಫೈರ್GL ಅಥವಾ ಎನ್ ವಿಡಿಯಾ ಕ್ವಾಡ್ರೋ. |
03:09 | ಇಲ್ಲಿ ಸೂಚಿಸಿದ ಯಾವುದೇ ಒಂದು ಲೆವೆಲ್ ಗೆ ಸರಿಹೊಂದುವದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಸಿಸ್ಟೆಮ್ ಕಾನ್ಫಿಗರೇಶನ್ ಪರಿಶೀಲಿಸಿ. |
03:16 | ಬ್ರೌಸರ್ ವಿಂಡೋ ಮಿನಿಮೈಜ್ ಮಾಡಿ. |
03:19 | ಕಂಟ್ರೋಲ್ ಪ್ಯಾನೆಲ್ ಗೆ ಹೋಗಿ. ಇಲ್ಲಿ, System ಐಕಾನ್ ಮೇಲೆ ಡಬಲ್ ಕ್ಲಿಕ್ ಮಾಡಿ. |
03:25 | ಇಲ್ಲಿ ನಿಮ್ಮ ಮಷಿನ್ ನ ಈಗಿನ ಸ್ಪೆಸಿಫಿಕೇಶನ್ಸ್ ನೀವು ಕಾಣಬಹುದು. ಇದನ್ನು ಬ್ಲೆಂಡರ್ ಫೌಂಡೇಶನ್ ಸೂಚಿಸುತ್ತಿರುವದರ ಜೊತೆಗೆ ಹೋಲಿಸಿ. |
03:35 | ಬಹುತರವಾಗಿ ವಿಂಡೋಸ್ ಆಪರೇಟಿಂಗ್ ಸಿಸ್ಟೆಮ್ ಗಳು 32-ಬಿಟ್ ಅಥವಾ 64- ಬಿಟ್ ಇರುತ್ತವೆ. ನಾನು 32-ಬಿಟ್ ವಿಂಡೋಸ್ ಬಳಸುತ್ತಿದ್ದೇನೆ. |
03:44 | 32-ಬಿಟ್ ಮತ್ತು 64-ಬಿಟ್ ಇವು ಸಿ ಪಿ ಯು ಮಾಹಿತಿಯನ್ನು ಯಾವ ರೀತಿಯಲ್ಲಿ ನಿರ್ವಹಿಸುತ್ತದೆ ಎಂಬುದನ್ನು ಸೂಚಿಸುತ್ತದೆ. |
03:51 | ವಿಂಡೋಸ್ ನ 64-ಬಿಟ್ ವರ್ಶನ್ ದೊಡ್ಡ ಪ್ರಮಾಣದ RAM ಅನ್ನು 32-bit ಸಿಸ್ಟೆಮ್ ಗಿಂತ ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ. |
03:59 | ಅಲ್ಲದೆ ಬ್ಲೆಂಡರ್ ಗಾಗಿ ನೀವು ಹೊಸ ಕಂಪ್ಯುಟರ್ ಖರೀದಿಸುವದಿದ್ದರೆ |
04:04 | www.blenderguru.com/articles/the-ultimate-guide-to-buying-a-computer-for-blender ನಲ್ಲಿ ಲಭ್ಯವಿರುವ ಲೇಖನವನ್ನು ಪರಿಶೀಲಿಸುವದು ಒಳಿತು. |
04:21 | ಈ ಮಾರ್ಗದರ್ಶಿಯು ನಿಮಗೆ ಆಪರೇಟಿಂಗ್ ಸಿಸ್ಟೆಮ್ ಬಗ್ಗೆ ಸವಿಸ್ತಾರ ಮಾಹಿತಿಯನ್ನು ಕೊಡುತ್ತದೆ |
04:29 | ಸಿ ಪಿ ಯು, |
04:35 | RAM, |
04:41 | ಗ್ರಾಫಿಕ್ಸ್ ಕಾರ್ಡ್, |
04:49 | ಕೇಸ್, |
04:55 | ಮತ್ತು ಹಾರ್ಡ್ ಡ್ರೈವ್ ಬಗ್ಗೆ ಸಹ. |
05:02 | ಇಲ್ಲಿಗೆ Hardware Requirements for running Blender (ಹಾರ್ಡವೇರ್ ರಿಕ್ವೈರ್ಮೆಂಟ್ಸ್ ಫಾರ್ ರನ್ನಿಂಗ್ ಬ್ಲೆಂಡರ್) ಎನ್ನುವ ಟ್ಯುಟೋರಿಯಲ್ ಮುಕ್ತಾಯವಾಯಿತು. |
05:07 | ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯ ಆಧಾರದಿಂದ ಮತ್ತು Project Oscar ಅವರಿಂದ ತಯಾರಿಸಲ್ಪಟ್ಟಿದೆ. |
05:15 | ಇದರ ಬಗ್ಗೆ ಹೆಚ್ಚಿನ ಮಾಹಿತಿ oscar.iitb.ac.in ಮತ್ತು spoken-tutorial.org/NMEICT-Intro ಲಿಂಕ್ ಗಳಲ್ಲಿ ಲಭ್ಯವಿದೆ. |
05:32 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ. |
05:37 | ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ |
05:42 | ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು contact@spoken-tutorial.org ಗೆ ಬರೆಯಿರಿ. |
05:50 | ಧನ್ಯವಾದಗಳು. |
05:53 | ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ. |