Java-Business-Application/C2/Creating-and-viewing-inventories/Kannada

From Script | Spoken-Tutorial
Revision as of 18:05, 7 June 2016 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 Creating and viewing inventories ಎನ್ನುವ ‘ಸ್ಪೋಕನ್ ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:07 ಈ ‘ಟ್ಯುಟೋರಿಯಲ್’ನಲ್ಲಿ ನಾವು-
00:09 * ‘ಅಡ್ಮಿನ್ ಪೇಜ್’ಗೆ ರಿಡೈರೆಕ್ಟ್ ಮಾಡುವುದು, ಲಾಗ್-ಇನ್ ಪೇಜನ್ನು ಮಾರ್ಪಡಿಸುವುದು,
00:14 * ಪುಸ್ತಕದ (book) ಎಲ್ಲ ವಿವರಗಳನ್ನು ಪಡೆದುಕೊಳ್ಳುವುದು,
00:17 * ಎರವಲು ಪಡೆದ (borrowed book) ಪುಸ್ತಕದ ವಿವರಗಳನ್ನು ಪಡೆದುಕೊಳ್ಳುವುದು ಹಾಗೂ
00:20 * ಲಾಗ್-ಇನ್ ಮಾಡಿದ ‘ಯೂಸರ್’ನು ಎರವಲು ಪಡೆದ ಪುಸ್ತಕಗಳನ್ನು ತೋರಿಸುವುದು ಇತ್ಯಾದಿಗಳನ್ನು ಕಲಿಯುವೆವು.
00:25 ಇಲ್ಲಿ ನಾವು-
00:27 * Ubuntu version 12.04 (ಉಬಂಟು ಆವೃತ್ತಿ ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು),
00:29 * Netbeans IDE 7.3 (ನೆಟ್ ಬೀನ್ಸ್ ಐ-ಡಿ-ಇ ಏಳು ಪಾಯಿಂಟ್ ಮೂರು),
00:32 * JDK 1.7 (ಜೆ-ಡಿ-ಕೆ ಒಂದು ಪಾಯಿಂಟ್ ಏಳು) ಹಾಗೂ
00:34 * Firefox web-browser 21.0 (ಫೈರ್ ಫಾಕ್ಸ್ ವೆಬ್ ಬ್ರೌಸರ್ ಇಪ್ಪತ್ತೊಂದು ಪಾಯಿಂಟ್ ಸೊನ್ನೆ) ಇವುಗಳನ್ನು ಬಳಸುತ್ತಿದ್ದೇವೆ.
00:38 ನೀವು, ನಿಮಗೆ ಇಷ್ಟವಾದ ಯಾವುದೇ ವೆಬ್-ಬ್ರೌಸರ್ ಅನ್ನು ಉಪಯೋಗಿಸಬಹುದು.
00:42 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ-
00:45 * ‘Java Servlet’ ಗಳು ಹಾಗೂ JSP ಗಳು
00:50 * ಡೇಟಾಬೇಸ್ ಹಾಗೂ ಫೀಲ್ಡ್ ಗಳ ವ್ಯಾಲಿಡೇಶನ್ ಬಗ್ಗೆ ಪರಿಚಯವಿರಬೇಕು.
00:53 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
00:57 ಈಗ, ನಾವು NetBeans IDE ಗೆ ಬದಲಾಯಿಸೋಣ.
01:01 ನಾನು Books ಎಂಬ ಟೇಬಲ್ ಅನ್ನು ರಚಿಸಿದ್ದೇನೆ.
01:04 ಟೇಬಲ್ ನಲ್ಲಿಯ ವಿವಿಧ ಫೀಲ್ಡ್ ಗಳನ್ನು ನೀವು ನೋಡಬಹುದು.
01:08 ಈ ಟೇಬಲ್ ನಲ್ಲಿ ನಾನು ‘10 books’ ಎಂದು ಸೇರಿಸಿದ್ದೇನೆ.
01:12 ಎರವಲು ಪಡೆದ ಪುಸ್ತಕಗಳನ್ನು ಸ್ಟೋರ್ ಮಾಡಲು, ನಾನು Checkout ಎಂಬ ಟೇಬಲ್ ಅನ್ನು ರಚಿಸಿದ್ದೇನೆ.
01:18 Checkout ಎಂಬ ಟೇಬಲ್ ನಲ್ಲಿ, ನಾನು 5 ನಮೂದುಗಳನ್ನು (entries) ಸೇರಿಸಿದ್ದೇನೆ.
01:24 Book ಹಾಗೂ Checkout ಗಳಿಗಾಗಿ ನಾನು ಮಾಡೆಲ್ ಗಳನ್ನು ಸಹ ರಚಿಸಿದ್ದೇನೆ.
01:29 Book.java ಎಂಬುದು ಬುಕ್ ನ ಮಾಡೆಲ್ ಆಗಿದೆ.
01:32 ಮತ್ತು Checkout.java ಎಂಬುದು ಚೆಕ್-ಔಟ್ ನ ಮಾಡೆಲ್ ಆಗಿದೆ.
01:37 ಈಗ ಬ್ರೌಸರ್ ಗೆ ಬನ್ನಿ.
01:40 ನಾವು admin (ಅಡ್ಮಿನ್) ಎಂದು ಲಾಗ್-ಇನ್ ಮಾಡೋಣ.
01:43 ಹೀಗೆ ಮಾಡಲು, ನಾನು UserName ಹಾಗೂ Password ಗಳನ್ನು ‘admin’ ಎಂದು ಟೈಪ್ ಮಾಡಿ ಆಮೇಲೆ Sign In ಎನ್ನುವುದರ ಮೇಲೆ ಕ್ಲಿಕ್ ಮಾಡುವೆನು.
01:51 ನಾವು Admin Section Page ಗೆ ಬರುತ್ತೇವೆ ಎನ್ನುವುದನ್ನು ನೋಡಬಹುದು.
01:55 ನಾವು ಈ ಪೇಜ್ ಗೆ ಹಿಂದಿರುಗುವೆವು. ಈಗ ನಾವು Netbeans IDE ಗೆ ಬದಲಾಯಿಸೋಣ.
02:02 Admin Page ಗೆ ರಿಡೈರೆಕ್ಟ್ ಮಾಡಲು, GreetingServlet ಅನ್ನು ನಾವು ಹೇಗೆ ಮಾರ್ಪಡಿಸಿದೆವು ಎಂಬುದನ್ನು ನಾವು ನೋಡುವೆವು.
02:08 GreetingServlet.java ಅನ್ನು ನಾವು ನೋಡೋಣ.
02:13 username ಮತ್ತು password ಗಳು ‘admin’ ಎಂದು ಆಗಿವೆಯೇ ಎನ್ನುವುದನ್ನು ಇಲ್ಲಿ ನಾವು ಪರಿಶೀಲಿಸುತ್ತೇವೆ.
02:19 ‘ಹೌದು’ ಎಂದಾದರೆ, ಆಗ ನಾವು adminsection.jsp ಗೆ ರಿಡೈರೆಕ್ಟ್ ಮಾಡುತ್ತೇವೆ.
02:25 RequestDispatcher ಅನ್ನು ಬಳಸಿ, ಬೇರೊಂದು ಪೇಜ್ ಗೆ ಹೇಗೆ ‘ಫಾರ್ವರ್ಡ್’ ಮಾಡುವುದೆಂದು ನಾವು ಈಗಾಗಲೇ ನೋಡಿದ್ದೇವೆ.
02:32 ಈಗ, ಬ್ರೌಸರ್ ಗೆ ಹಿಂದಿರುಗಿ.
02:35 ಇಲ್ಲಿ ನಮಗೆ ಎರಡು ಆಯ್ಕೆಗಳಿವೆ.
02:37 ನಾವು List Books ಗಾಗಿ ಇರುವ ‘ರೇಡಿಯೊ ಬಟನ್’ ನ ಮೇಲೆ ಕ್ಲಿಕ್ ಮಾಡುವೆವು.
02:41 ನಂತರ Submit ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇವೆ.
02:44 ಇಲ್ಲಿ, ಎಲ್ಲ Books ಗಳ ಲಿಸ್ಟ್ ಇರುವುದನ್ನು ನಾವು ನೋಡಬಹುದು.
02:49 ಇದು Book Id, BookName, Author Name, ISBN, Publisher, Total Copies ಹಾಗೂ Available copies ಗಳಂತಹ ಎಲ್ಲ ವಿವರಗಳನ್ನು ಹೊಂದಿದೆ.
02:59 ಇದನ್ನು ಹೇಗೆ ಮಾಡಲಾಗುತ್ತದೆ ಎನ್ನುವುದನ್ನು ಈಗ ನಾನು ತೋರಿಸುವೆನು.
03:03 IDE ಗೆ ಬದಲಾಯಿಸಿ.
03:05 ಈಗ, ನಾವು ‘adminsection ಡಾಟ್ jsp’ ಗೆ ಬರೋಣ.
03:10 ಇಲ್ಲಿ ಎರಡು ‘ರೇಡಿಯೊ ಬಟನ್’ಗಳಿವೆ.
03:14 ಮೊದಲನೆಯದು ಎಲ್ಲ books ಗಳನ್ನು ಲಿಸ್ಟ್ ಮಾಡಲು ಇರುತ್ತದೆ.
03:19 ‘adminsection ಡಾಟ್ jsp’ಯಲ್ಲಿ, ‘form action’ ಇಕ್ವಲ್ ಟು ‘AdminSection’ ಎಂದು ಇರುವುದನ್ನು ನಾವು ನೋಡಬಹುದು.
03:28 ಈಗ, ‘AdminSection ಡಾಟ್ java’ ಅನ್ನು ಓಪನ್ ಮಾಡಿ.
03:32 ಇಲ್ಲಿ, ನಾವು ಕ್ಲಿಕ್ ಮಾಡಿದ ಆಯ್ಕೆಯನ್ನು ಇದು ಪರಿಶೀಲಿಸುತ್ತದೆ.
03:36 ನಾವು List Books ನ ಮೇಲೆ ಕ್ಲಿಕ್ ಮಾಡಿದ್ದೇವೆ.
03:39 ಹೀಗಾಗಿ, ‘ಕ್ವೆರೀ’ಯ ಈ ಭಾಗವು ಎಕ್ಸಿಕ್ಯೂಟ್ ಮಾಡಲ್ಪಡುವುದು.
03:44 Books table ನಿಂದ ‘ಬುಕ್’ಗಳನ್ನು ಪಡೆದುಕೊಳ್ಳಲು, ನಾವು ‘ಕ್ವೆರೀ’ಯನ್ನು ಎಕ್ಸಿಕ್ಯೂಟ್ ಮಾಡುತ್ತೇವೆ.
03:49 ನಂತರ, ಪುಸ್ತಕಗಳ ವಿವರಗಳನ್ನು ಸ್ಟೋರ್ ಮಾಡಲು, ನಾವು ArrayList ಅನ್ನು ಕ್ರಿಯೇಟ್ ಮಾಡುತ್ತೇವೆ.
03:55 ಆಮೇಲೆ, ನಾವು result set ನ ಮೂಲಕ ‘ಇಟರೇಟ್’ ಮಾಡುತ್ತೇವೆ.
03:59 ನಾವು Book ಎನ್ನುವ ಆಬ್ಜೆಕ್ಟ್ ಅನ್ನು ಕ್ರಿಯೇಟ್ ಮಾಡುತ್ತೇವೆ.
04:03 Book ಆಬ್ಜೆಕ್ಟ್ ನಲ್ಲಿ, ನಾವು Book ID ಯನ್ನು ಸೆಟ್ ಮಾಡುತ್ತೇವೆ.
04:08 ಹೀಗೆಯೇ, Book ಆಬ್ಜೆಕ್ಟ್ ನಲ್ಲಿ, ‘ಬುಕ್’ನ ಉಳಿದ ಅಟ್ರಿಬ್ಯೂಟ್ ಗಳನ್ನು ನಾವು ಸೆಟ್ ಮಾಡುತ್ತೇವೆ.
04:16 ಆಮೇಲೆ ನಾವು, book ಆಬ್ಜೆಕ್ಟ್ ಅನ್ನು, books ಎನ್ನುವ ಲಿಸ್ಟ್ ನಲ್ಲಿ ಸೇರಿಸುತ್ತೇವೆ.
04:21 ಆಮೇಲೆ ನಾವು, request ನಲ್ಲಿ, ArrayList books ಅನ್ನು ಸೆಟ್ ಮಾಡುತ್ತೇವೆ.
04:26 ನಂತರ RequestDispatcher ಅನ್ನು ಬಳಸಿ, request ಅನ್ನು listBooks.jsp ಗೆ ಫಾರ್ವರ್ಡ್ ಮಾಡುತ್ತೇವೆ.
04:33 ಈಗ ನಾವು listBooks.jsp ಗೆ ಬರುತ್ತೇವೆ.
04:38 ಈ ಪೇಜ್ನಲ್ಲಿ ‘ಅಡ್ಮಿನ್’, ಪುಸ್ತಕಗಳ ಲಿಸ್ಟ್ ಅನ್ನು ನೋಡಲು ಸಾಧ್ಯವಿದೆ.
04:43 ಇಲ್ಲಿ, ಮೊದಲು, ನಾವು request ನಿಂದ books ಅನ್ನು ಪಡೆದುಕೊಳ್ಳುತ್ತೇವೆ.
04:48 ಈ HTML ಟೇಬಲ್, ಪುಸ್ತಕಗಳ (books) ವಿವರಗಳನ್ನು ತೋರಿಸುವುದು.
04:54 ಹೀಗೆ, ನಾವು book list ಮೂಲಕ ‘ಇಟರೇಟ್’ ಮಾಡುವೆವು.
04:58 ಇಲ್ಲಿ ನಾವು ಪುಸ್ತಕದ Book ID ಯನ್ನು ತೋರಿಸುತ್ತೇವೆ.
05:02 ಹೀಗೆಯೇ, ನಾವು book ನ ಇನ್ನಿತರ ಅಟ್ರಿಬ್ಯೂಟ್ ಗಳನ್ನು ತೋರಿಸುತ್ತೇವೆ.
05:07 ಬುಕ್ ಗಳ ಲಿಸ್ಟನ್ನು ನಾವು ಈ ರೀತಿಯಾಗಿ ತೋರಿಸುತ್ತೇವೆ.
05:11 ಈಗ, ಬ್ರೌಸರ್ ಗೆ ಹಿಂದಿರುಗಿ.
05:14 List Borrowed Books ಎನ್ನುವುದರ ಮೇಲೆ ಕ್ಲಿಕ್ ಮಾಡಿ.
05:17 ಮತ್ತು Submit ಬಟನ್ ನ ಮೇಲೆ ಕ್ಲಿಕ್ ಮಾಡಿ.
05:20 ‘ಇಶ್ಯೂ’ ಮಾಡಲಾದ ಎಲ್ಲ Books ಗಳ ಒಂದು ಲಿಸ್ಟ್ ಅನ್ನು ನಾವು ನೋಡುತ್ತೇವೆ.
05:24 ಇದು, Transaction ID, Book ID ಮತ್ತು Username ಗಳಂತಹ ವಿವರಗಳನ್ನು ಹೊಂದಿದೆ.
05:29 ಈಗ, ನಾನು IDE ಗೆ ಹಿಂದಿರುಗುವೆನು,
05:32 ಮತ್ತು ಇದರ ಕೋಡ್ ಅನ್ನು ನಿಮಗೆ ತೋರಿಸುವೆನು.
05:35 AdminSection.java ಗೆ ಹೋಗಿ.
05:38 ನಾವು List Borrowed Books ನ ಮೇಲೆ ಕ್ಲಿಕ್ ಮಾಡಿದ್ದೆವು.
05:42 ಹೀಗಾಗಿ, menuSelection ಇಕ್ವಲ್ ಟು List Borrowed books.
05:47 ಈ ಹಂತಗಳು, List Books ಗಾಗಿ ನಾವು ನೋಡಿದಂತೆಯೇ ಆಗಿವೆ.
05:53 Checkout table ನಿಂದ ‘ಬಾರೋ’ ಮಾಡಿದ ಪುಸ್ತಕಗಳ (borrowed books) ವಿವರಗಳನ್ನು ತರಲು, ನಾವು ಕ್ವೆರೀಯನ್ನು ಎಕ್ಸಿಕ್ಯೂಟ್ ಮಾಡುತ್ತೇವೆ.
05:59 ನಂತರ, ‘borrowed books’ನ ಮೂಲಕ ನಾವು ‘ಇಟರೇಟ್’ ಮಾಡುತ್ತೇವೆ.
06:02 ಮತ್ತು ಇದನ್ನು request ನಲ್ಲಿ, Checkout ಅಟ್ರಿಬ್ಯೂಟ್ ಎಂದು ಸೆಟ್ ಮಾಡುತ್ತೇವೆ.
06:07 ಈಗ ನಾವು 'listBorrowedBooks.jsp’ ಗೆ ಬರುತ್ತೇವೆ.
06:12 ಇಲ್ಲಿ ನಾವು, request ನಿಂದ checkout ಅನ್ನು ಪಡೆದುಕೊಳ್ಳುತ್ತೇವೆ.
06:17 Checkout ಲಿಸ್ಟ್ ನ ಮೂಲಕ ನಾವು ‘ಇಟರೇಟ್’ ಮಾಡುತ್ತೇವೆ.
06:20 ಮತ್ತು, ಇಲ್ಲಿ ನಾವು Checkout ನ ಅಟ್ರಿಬ್ಯೂಟ್ ಗಳನ್ನು ತೋರಿಸುತ್ತೇವೆ.
06:25 Borrowed Books ಅನ್ನು ನಾವು ಹೀಗೆ ಪ್ರದರ್ಶಿಸುತ್ತೇವೆ.
06:28 ಈಗ, ಮತ್ತೆ ಬ್ರೌಸರ್ ಗೆ ಬದಲಾಯಿಸಿ.
06:30 ‘borrowed books’ ಪೇಜ್ನಲ್ಲಿ, ಇನ್ನೊಂದು ಲಿಸ್ಟ್ ಇದೆ.
06:36 ಇದು, ‘ಇಸ್ಸ್ಯೂ’ ಮಾಡಲಾದ ಮತ್ತು ‘ಕರೆಂಟ್ ಡೇಟ್’, ‘ರಿಟರ್ನ್ ಡೇಟ್’ಅನ್ನು ಮೀರಿದ books ಗಳ ಲಿಸ್ಟ್ ಆಗಿದೆ.
06:43 ‘ಕೋಡ್’ ಅನ್ನು ನೋಡಲು IDE ಗೆ ಬದಲಾಯಿಸಿ.
06:46 ನಾವು Borrowed Books ಗಾಗಿ ಮಾಡಿದ ರೀತಿಯಲ್ಲಿಯೇ ಇದನ್ನು ಮಾಡಲಾಗಿದೆ.
06:50 SQL ‘ಕ್ವೆರೀ’ಯಲ್ಲಿ ಮಾತ್ರ ವ್ಯತ್ಯಾಸವು ಇರುತ್ತದೆ.
06:56 ‘ಕ್ವೆರೀ’ಯಲ್ಲಿ ನಾವು, ‘return_date less than now() order by transaction_Id’ ಎನ್ನುವ ಕಂಡಿಶನ್ ಅನ್ನು ಕೊಡುತ್ತೇವೆ.
07:05 ಈಗ ನಾನು, ಸಾಮಾನ್ಯ ಬಳಕೆದಾರನಿಗಾಗಿ (user) ಇಂಟರ್ಫೇಸ್ ಅನ್ನು ನಿಮಗೆ ತೋರಿಸುವೆನು.
07:10 ಆದ್ದರಿಂದ, ಬ್ರೌಸರ್ ಗೆ ಬದಲಾಯಿಸಿ.
07:12 - ‘ಲಾಗ್-ಇನ್ ಪೇಜ್’ ಗೆ ಹಿಂದಿರುಗಿ.
07:15 ನಾನು ‘mdhusein’ ಎಂದು ಲಾಗ್-ಇನ್ ಮಾಡುವೆನು.
07:20 ಪಾಸ್ವರ್ಡ್ ಅನ್ನು ‘welcome’ ಎಂದು ಟೈಪ್ ಮಾಡಿ.
07:22 ಮತ್ತು ‘Sign In’ ಮೇಲೆ ಕ್ಲಿಕ್ ಮಾಡಿ.
07:25 ನಾವು Success Greeting Page ಅನ್ನು ಪಡೆಯುತ್ತೇವೆ.
07:28 ಇದು, ‘ಯೂಸರ್’ನಿಂದ ಈಗ ಸಧ್ಯಕ್ಕೆ ಎರವಲು ಪಡೆದ ‘ಬುಕ್’ಗಳನ್ನು ಹೊಂದಿದೆ.
07:32 ಇದು Transaction ID, User Name, Book ID ಹಾಗೂ Return Date ನಂತಹ ವಿವರಗಳನ್ನು ಹೊಂದಿದೆ.
07:39 ಈಗ, ನಾವು IDE ಗೆ ಹಿಂದಿರುಗೋಣ.
07:43 ಈಗ, ನಾವು GreetingServlet.java ಗೆ ಹೋಗುತ್ತೇವೆ.
07:47 ‘ಅಡ್ಮಿನ್’ಗಾಗಿ ಮಾಡಿದಂತೆಯೇ, ನಾವು ‘ಇಶ್ಯೂ’ ಮಾಡಲಾದ (issued) ಪುಸ್ತಕಗಳನ್ನು ತೋರಿಸುತ್ತೇವೆ.
07:53 ಇಲ್ಲಿರುವ ವ್ಯತ್ಯಾಸವೆಂದರೆ, ನಾವು ಲಾಗ್-ಇನ್ ಮಾಡಿದ ಯೂಸರ್ ನಿಗಾಗಿ ಪುಸ್ತಕಗಳನ್ನು ತೋರಿಸಬೇಕಾಗಿದೆ.
08:02 ಈ ಲೈನ್ ನಿಂದ ನನಗೆ username ಸಿಗುತ್ತದೆ.
08:05 ನಂತರ,
08:10 username ಹಾಗೂ ಲಾಗ್-ಇನ್ ಮಾಡಿದ ಯೂಸರ್ ಎರಡೂ ಒಂದೇ ಆಗಿದ್ದರೆ, ನಾವು ‘ಬಾರೋ’ ಮಾಡಿದ ಪುಸ್ತಕಗಳ ವಿವರಗಳನ್ನು ಪಡೆದುಕೊಳ್ಳುತ್ತೇವೆ.
08:14 ಹೀಗಾಗಿ, ನಾವು ಆ ‘ಯೂಸರ್’ಗಾಗಿ ‘ಇಸ್ಸ್ಯೂ’ ಮಾಡಲಾದ ಪುಸ್ತಕಗಳ ಲಿಸ್ಟ್ ಅನ್ನು ಪಡೆಯುತ್ತೇವೆ.
08:20 ಆಮೇಲೆ, ‘successGreeting ಡಾಟ್ jsp’ ಯಲ್ಲಿ, ನಾವು ಲಿಸ್ಟ್ ಅನ್ನು ಪ್ರದರ್ಶಿಸುತ್ತೇವೆ.
08:27 ನಿಮ್ಮ ‘successGreeting ಡಾಟ್ jsp’ ಹೀಗೆ ಕಾಣುವುದು.
08:32 ಈ ಟ್ಯುಟೋರಿಯಲ್’ನಲ್ಲಿ ನಾವು,
08:35 * ‘ಅಡ್ಮಿನ್ ಪೇಜ್’ಗೆ ರಿಡೈರೆಕ್ಟ್ ಮಾಡಲು ಲಾಗ್-ಇನ್ ಪೇಜನ್ನು ಮಾರ್ಪಡಿಸುವುದು
08:39 * ಪುಸ್ತಕದ ವಿವರಗಳನ್ನು ಪಡೆದುಕೊಳ್ಳುವುದು
08:42 *ಎರವಲು ಪಡೆದ ಪುಸ್ತಕದ ವಿವರಗಳನ್ನು ಪಡೆದುಕೊಳ್ಳುವುದು
08:45 ಮತ್ತು * ಲಾಗ್-ಇನ್ ಮಾಡಿದ ‘ಯೂಸರ್’ನು ಎರವಲು ಪಡೆದ (borrow) ಪುಸ್ತಕಗಳನ್ನು ತೋರಿಸುವುದು ಇತ್ಯಾದಿಗಳನ್ನು ಕಲಿತಿದ್ದೇವೆ.
08:50 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ.
08:56 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
08:59 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:04 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು:
09:06 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
09:09 ಆನ್-ಲೈನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:13 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
09:20 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು, ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
09:24 ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ.
09:30 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro
09:40 Library Management System ಎಂಬುದು ಪ್ರಮುಖ ಸಾಫ್ಟ್ವೇರ್ ಆದ MNC ಯ, Corporate Social Responsibility programme ನ ಮೂಲಕದ ಕೊಡುಗೆಯಾಗಿದೆ.
09:49 ಈ ಸ್ಪೋಕನ್ ಟ್ಯುಟೋರಿಯಲ್ ಗಾಗಿ ಅವರು ವಿಷಯವನ್ನು ಸಹ ಮೌಲ್ಯಾಂಕಿತಗೊಳಿಸಿದ್ದಾರೆ (validated).
09:53 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ.
09:57 ವಂದನೆಗಳು.

Contributors and Content Editors

Sandhya.np14, Vasudeva ahitanal