C-and-Cpp/C4/Understanding-Pointers/Kannada
From Script | Spoken-Tutorial
Revision as of 18:37, 17 March 2017 by PoojaMoolya (Talk | contribs)
Time | Narration |
00:01 | c ಮತ್ತು c++ ನಲ್ಲಿ ಪಾಯಿಂಟರ್ಸ್(pointers) ಎಂಬ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು, |
00:08 | ಪಾಯಿಂಟರ್ಸ್. |
00:10 | ಪಾಯಿಂಟರ್ಸ್ ಗಳನ್ನು ರಚಿಸುವುದು |
00:12 | ಮತ್ತು ಪಾಯಿಂಟರ್ಸ್ ಗಳನ್ನು ಉಪಯೋಗಿಸುವುದು. |
00:14 | ಇದನ್ನು ನಾವು ಒಂದು ಉದಾಹರಣೆಯೊಂದಿಗೆ ಮಾಡೋಣ. |
00:18 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ. |
00:31 | ಪಾಯಿಂಟರ್ಸ್ ಅನ್ನು ಪೀಠಿಕೆಯೊಂದಿಗೆ ಆರಂಭಿಸೋಣ. |
00:34 | ಪಾಯಿಂಟರ್ ಗಳು ಮೆಮೊರಿಯಲ್ಲಿನ ಸ್ಥಾನಗಳನ್ನು ಸೂಚಿಸುತ್ತವೆ. |
00.38 | ಪಾಯಿಂಟರ್ ಗಳು ಮೆಮೊರಿಯ ಅಡ್ರೆಸ್ ಅನ್ನು ಹೊಂದಿರುತ್ತವೆ. |
00:41 | ಆ ಅಡ್ರೆಸ್ ನಲ್ಲಿ ಇರುವ ಮೌಲ್ಯವನ್ನೂ ಕೂಡ ಕೊಡುತ್ತದೆ. |
00:45 | ಈಗ ಪಾಯಿಂಟರ್ಸ್ ಗಳ ಒಂದು ಉದಾಹರಣೆಯನ್ನು ನೋಡೋಣ. |
00:48 | ನಮ್ಮ ಫೈಲ್ ನ ಹೆಸರು ಪಾಯಿಂಟರ್ಸ್ ಡೆಮೊ ಡಾಟ್ ಸಿ (pointers_demo.c) ಎಂಬುದನ್ನು ಗಮನದಲ್ಲಿಡಿ. |
00:54 | ಈಗ ಕೋಡ್ ಅನ್ನು ನೋಡೋಣ. |
00:56 | ಇದು ನಮ್ಮ ಹೆಡರ್ ಫೈಲ್ ಎಸ್ ಟಿ ಡಿ ಐ ಒ ಡಾಟ್ ಹೆಚ್(stdio.h) |
01:00 | ಇದು ನಮ್ಮ ಮೈನ್ ಫಂಕ್ಷನ್. |
01:03 | ಇಲ್ಲಿರುವ ಲಾಂಗ್ ಇಂಟಿಜರ್ ಟೈಪ್ ನ ವೇರಿಯೇಬಲ್ ಗೆ ಹತ್ತು ಎಂಬ ಮೌಲ್ಯವನ್ನು ಕೊಡಲಾಗಿದೆ. |
01:09 | ನಂತರ ನಾವು ಪಾಯಿಂಟರ್ ಟೈಪ್ ನ ptr(ಪಿ ಟಿ ಆರ್) ಎಂಬ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ. |
01:12 | ಪಾಯಿಂಟರ್ ಅನ್ನು ಡಿಕ್ಲೇರ್ ಮಾಡಲು ನಕ್ಷತ್ರ ಚಿಹ್ನೆಯನ್ನು ಬಳಸುತ್ತಾರೆ. |
01:16 | ಈ ಪಾಯಿಂಟರ್ ಲಾಂಗ್ ಇಂಟ್ ಟೈಪ್ ನ ಮೆಮೊರಿ ಯನ್ನು ಸೂಚಿಸಬಲ್ಲದು. |
01:20 | ಪ್ರಿಂಟ್ ಎಫ್ ಸ್ಟೇಟ್ಮೆಂಟ್ ನಲ್ಲಿರುವ ಆಂಪರ್ಸ್ಯಾಂಡ್ ಚಿಹ್ನೆಯನ್ನು ಮೆಮೊರಿ ಅಡ್ರೆಸ್ ಅನ್ನು ಪಡೆಯಲು ಬಳಸಲಾಗಿದೆ. |
01:28 | ಹಾಗಾಗಿ, ಆಂಪರ್ಸ್ಯಾಂಡ್ ನಮ್(num) ಎಂಬುದು num ನ ಮೆಮೊರಿ ಅಡ್ರೆಸ್ ಅನ್ನು ಕೊಡುತ್ತದೆ. |
01:33 | ಈ ಸ್ಟೇಟ್ಮೆಂಟ್, ವೇರಿಯೇಬಲ್ num ನ ಅಡ್ರೆಸ್ ಅನ್ನು ಪ್ರಿಂಟ್ ಮಾಡುತ್ತದೆ. |
01:37 | ಇಲ್ಲಿ, ptr ಎಂಬುದು num ನ ಅಡ್ರೆಸ್ ಅನ್ನು ಹೊಂದಿರುತ್ತದೆ. |
01:41 | ಈ ಸ್ಟೇಟ್ಮೆಂಟ್, ptr ನ ಅಡ್ರೆಸ್ ಅನ್ನು ಪ್ರಿಂಟ್ ಮಾಡುತ್ತದೆ. |
01:45 | Sizeof (ಸೈಸ್ ಆಫ್) ಎಂಬ ಫಂಕ್ಷನ್, ptr ನ ಗಾತ್ರವನ್ನು ಕೊಡುತ್ತದೆ. |
01:49 | ಇದು ptr ನ ಮೌಲ್ಯವನ್ನು ಕೊಡುತ್ತದೆ. |
01:51 | ಇದು num ನ ಮೆಮೊರಿ ಅಡ್ರೆಸ್, |
01:54 | ಮತ್ತು, ಇಲ್ಲಿರುವ ನಕ್ಷತ್ರ ಚಿಹ್ನೆ ಮತ್ತು ptr, ಅಡ್ರೆಸ್ ನ ಮೌಲ್ಯವನ್ನು ಕೊಡುತ್ತದೆ. |
01:59 | ಹಾಗಾಗಿ, ನಕ್ಷತ್ರ ಚಿಹ್ನೆಯನ್ನು ಬಳಸುವುದರಿಂದ ಮೆಮೊರಿ ಅಡ್ರೆಸ್ ಸಿಗುವುದಿಲ್ಲ. |
02:03 | ಅದರ ಬದಲಾಗಿ, ಅದರ ಮೌಲ್ಯವನ್ನು ಕೊಡುತ್ತದೆ. |
02:06 | %ld (ಪರ್ಸೆಂಟ್ ಎಲ್ ಡಿ) ಎಂಬುದು ಲಾಂಗ್ ಇಂಟ್ ನ ಫಾರ್ಮ್ಯಾಟ್ ಸ್ಪೆಸಿಫೈರ್ ಆಗಿದೆ. |
02:10 | ಈಗ, ಪ್ರೋಗ್ರಾಮ್ ಅನ್ನು ಏಕ್ಸಿಕ್ಯೂಟ್ ಮಾಡೋಣ. |
02:13 | ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. |
02:21 | ಕಂಪೈಲ್ ಮಾಡಲು, gcc ಸ್ಪೇಸ್ pointers_demo.c (ಪಾಯಿಂಟರ್ಸ್ ಅಂಡರ್ ಸ್ಕೋರ್ ಡೆಮೊ ಡಾಟ್ ಸಿ) ಸ್ಪೇಸ್ –o (ಹೈಫನ್ ಒ) ಸ್ಪೇಸ್ point (ಪಾಯಿಂಟ್) ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. |
02:34 | ./point ( ಡಾಟ್ ಸ್ಲ್ಯಾಶ್ ಪಾಯಿಂಟ್) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
02:39 | ಔಟ್ ಪುಟ್ ಹೀಗೆ ತೋರಿಸುತ್ತದೆ, |
02:42 | num ನ ಅಡ್ರೆಸ್ ಮತ್ತು ptr ನ ಮೌಲ್ಯ ಒಂದೇ ಇರುವುದನ್ನು ನಾವು ನೋಡಬಹುದು. |
02:48 | ಆದರೆ num ಮತ್ತು ptr ನ ಮೆಮೊರಿ ಅಡ್ರೆಸ್ ಭಿನ್ನವಾಗಿದೆ. |
02:53 | ಪಾಯಿಂಟರ್ ನ ಗಾತ್ರವು ಎಂಟು ಬೈಟ್ ಗಳು, ಹಾಗೂ, ptr ಸೂಚಿಸುತ್ತಿರುವ ಮೌಲ್ಯವು ಹತ್ತು, ಮತ್ತು ಇದನ್ನು ನಮ್ (num) ಗೆ ಅಸೈನ್ ಮಾಡಲಾಗಿತ್ತು. |
03:03 | ಈಗ, ಇದೇ ಪ್ರೊಗ್ರಾಮ್ ಅನ್ನು C++ ನಲ್ಲಿ ನೋಡೋಣ. |
03:07 | ನಮ್ಮ ಫೈಲ್ ನ ಹೆಸರು ಪಾಯಿಂಟರ್ ಅಂಡರ್ಸ್ಕೋರ್ ಡೆಮೋ ಡಾಟ್ ಸಿಪಿಪಿ(pointer_demo.cpp) ಎಂಬುದನ್ನು ಗಮನದಲ್ಲಿಡಿ. |
03:13 | ಇಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು. ಹೆಡರ್ ಫೈಲ್ ಐ ಒ ಸ್ಟ್ರೀಮ್ ಎಂದಿರಬೇಕು. |
03:19 | ನಂತರ, std namespace (ಎಸ್ ಟಿ ಡಿ ನೇಮ್ಸ್ಪೇಸ್) ಅನ್ನು ಉಪಯೋಗಿಸುತ್ತಿದ್ದೇವೆ, |
03:23 | ಮತ್ತು, ಪ್ರಿಂಟ್ ಎಫ್ ಅನ್ನು ಸಿಔಟ್ ಫಂಕ್ಷನ್ ಆಗಿ ಬದಲಾಯಿಸಿದ್ದೇವೆ. |
03:28 | ಉಳಿದ ಕೋಡ್ ಮೊದಲಿನಂತೆಯೇ ಇದೆ. |
03:30 | ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹಿಂತಿರುಗಿ. |
03:34 | ಕಂಪೈಲ್ ಮಾಡಲು, g++ ಸ್ಪೇಸ್ pointers_demo.cpp ಸ್ಪೇಸ್ ಹೈಫನ್ ಒ(-o) ಸ್ಪೇಸ್ point1(ಪಾಯಿಂಟ್ ಒನ್) ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
03:50 | ಡಾಟ್ ಸ್ಲ್ಯಾಶ್ ಪಾಯಿಂಟ್ ಒನ್ (./point1) ಎಂದು ಟೈಪ್ ಮಾಡಿ, enter ಅನ್ನು ಒತ್ತಿ. |
03:55 | ಈ ಔಟ್ ಪುಟ್ ನಮ್ಮ c ಕೋಡ್ ನ ಔಟ್ ಪುಟ್ ನಂತೆ ಇರುವುದನ್ನು ನೋಡಬಹುದು. |
04:00 | ಇಲ್ಲಿಗೆ ನಮ್ಮ ಟ್ಯುಟೋರಿಯಲ್ ಮುಗಿಯುತ್ತದೆ. |
04:03 | ಈಗ ನಮ್ಮ ಸ್ಲೈಡ್ ಗೆ ಹಿಂದಿರುಗಿ. |
04:05 | ಈಗ ಸಾರಾಂಶ ತಿಳಿಯೋಣ. ಈ ಟ್ಯುಟೋರಿಯಲ್ ನಲ್ಲಿ ನಾವು |
04:08 | ಪಾಯಿಂಟರ್, |
04:10 | ಅದನ್ನು ರಚಿಸುವುದು, |
04:12 | ಮತ್ತು, ಅದನ್ನು ಉಪಯೋಗಿಸುವುದರ ಬಗೆ ತಿಳಿದೆವು. |
04:14 | ಒಂದು ವೇರಿಯೇಬಲ್ ಮತ್ತು ಪಾಯಿಂಟರ್ ಅನ್ನು ಡಿಕ್ಲೇರ್ ಮಾಡುವುದು, ವೇರಿಯೇಬಲ್ ನ ಅಡ್ರೆಸ್ ಅನ್ನು ಪಾಯಿಂಟರ್ ನಲ್ಲಿ ಇಡುವುದು, ಮತ್ತು ಪಾಯಿಂಟರ್ ನ ಮೌಲ್ಯವನ್ನು ಪ್ರಿಂಟ್ ಮಾಡುವುದು, ಈ ಕಾರ್ಯಗಳನ್ನು ನಿರ್ವಹಿಸಲು, C ಮತ್ತು C++ ನಲ್ಲಿ ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ. |
04:27 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. |
04:30 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
04:33 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
04:37 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. |
04:43 | ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
04:47 | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. |
04:53 | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. |
04:58 | ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
05:06 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. |
05:10 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. |
05:14 | ಧನ್ಯವಾದಗಳು. |