C-and-Cpp/C4/Function-Call/Kannada
From Script | Spoken-Tutorial
Revision as of 15:09, 29 October 2015 by Vasudeva ahitanal (Talk | contribs)
Time | Narration |
c ಮತ್ತು c++ ನಲ್ಲಿ ಫಂಕ್ಷನ್ ಕಾಲ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ. | |
ನಾವು ಈ ಟ್ಯುಟೋರಿಯಲ್ ನಲ್ಲಿ ವಿವಿಧ ರೀತಿಯ ಫಂಕ್ಷನ್ ಕಾಲ್ ಗಳ ಬಗೆಗೆ ತಿಳಿಯೋಣ. ಅವು: | |
ಕಾಲ್ ಬೈ ವ್ಯಾಲ್ಯೂ | |
ಹಾಗೂ ಕಾಲ್ ಬೈ ರೆಫೆರೆನ್ಸ್ | |
ಇದನ್ನು ನಾವು ಉದಾಹರಣೆಯ ಸಹಾಯದೊಂದಿಗೆ ಮಾಡೋಣ. | |
ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ. | |
ಫಂಕ್ಷನ್ಸ್ ಕಾಲ್ ಬೈ ವ್ಯಾಲ್ಯೂ ಅನ್ನು ಪೀಠಿಕೆಯೊಂದಿಗೆ ಪ್ರಾರಂಭಿಸೋಣ. | |
ಇದು ಫಂಕ್ಷನ್ ಗಳಿಗೆ ಮೌಲ್ಯವನ್ನು ಕಳುಹಿಸುವ ವಿಧವಾಗಿದೆ. | |
ನಾವು ಒಂದು ವೇರಿಯೇಬಲ್ ನ ಮೌಲ್ಯವನ್ನು ಕಳುಹಿಸಿದಾಗ, ಇದು ಕಳುಹಿಸುವ ಮೊದಲು, ವೇರಿಯೇಬಲ್ ನ ಪ್ರತಿಯನ್ನು ಮಾಡುತ್ತದೆ. | |
ಫಂಕ್ಷನ್ ನ ಒಳಗೆ ಮೌಲ್ಯಕ್ಕೆ ಆದ ಬದಲಾವಣೆಗಳು ಫಂಕ್ಷನ್ ನಲ್ಲಿಯೇ ಉಳಿಯುತ್ತದೆ. | |
ಇದು ಫಂಕ್ಷನ್ ನ ಹೊರಗೆ ಪರಿಣಾಮ ಬೀರುವುದಿಲ್ಲ. | |
ಈಗ ಕಾಲ್ ಬೈ ವ್ಯಾಲ್ಯೂ ಫಂಕ್ಷನ್ ಗೆ ಒಂದು ಪ್ರೊಗ್ರಾಮ್ ಅನ್ನು ನೋಡೋಣ. | |
ನಾನೀಗಾಗಲೇ ಪ್ರೊಗ್ರಾಮ್ ಅನ್ನು ಎಡಿಟರ್ ನಲ್ಲಿ ಟೈಪ್ ಮಾಡಿದ್ದೇನೆ. ಅದನ್ನು ಒಪನ್ ಮಾಡುತ್ತೇನೆ. | |
ನಮ್ಮ ಫೈಲ್ ನ ಹೆಸರು ಕಾಲ್ ಬೈ ವ್ಯಾಲ್ ಡಾಟ್ ಸಿ (callbyval.c) ಎಂದು ಗಮನದಲ್ಲಿಡಿ. | |
ಈ ಪ್ರೊಗ್ರಾಮ್ ನಲ್ಲಿ ಒಂದು ಸಂಖ್ಯೆಯ ಘನವನ್ನು ಕಂಡುಹಿಡಿಯುತ್ತೇವೆ. ಈಗ ಕೋಡ್ ಅನ್ನು ವಿವರಿಸುತ್ತೇನೆ. | |
ಇದು ನಮ್ಮ ಹೆಡರ್ ಫೈಲ್. | |
ಇಲ್ಲಿ ಕ್ಯೂಬ್(cube) ಎಂಬ ಫಂಕ್ಷನ್ ಇದೆ, ಮತ್ತು ಅದಕ್ಕೆ ಇಂಟ್ ಎಕ್ಸ್(int x) ಎಂಬ ಆರ್ಗ್ಯುಮೆಂಟ್ ಇದೆ. | |
ಈ ಫಂಕ್ಷನ್ ನಲ್ಲಿ ನಾವು x ನ ಘನವನ್ನು ಲೆಕ್ಕ ಮಾಡುತ್ತೇವೆ, ಮತ್ತು x ನ ಮೌಲ್ಯವನ್ನು ಮರಳಿ ಕಳುಹಿಸುತ್ತೇವೆ. | |
ಇದು ನಮ್ಮ ಮೈನ್ ಫಂಕ್ಷನ್. | |
ಇಲ್ಲಿ ನಾವು n(ಎನ್) ಗೆ ಎಂಟು ಎಂದು ಮೌಲ್ಯವನ್ನು ಕೊಡುತ್ತೇವೆ. n ಎಂಬುದು ಇಂಟಿಜರ್ ವೇರಿಯೇಬಲ್. | |
ನಂತರ ನಾವು ಕ್ಯೂಬ್ ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ, | |
ಮತ್ತು n ನ ಮೌಲ್ಯ ಮತ್ತು n ಘನವನ್ನು ಪ್ರಿಂಟ್ ಮಾಡುತ್ತೇವೆ, | |
ಮತ್ತು ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. | |
ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. | |
ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. | |
ಕೋಡ್ ಅನ್ನು ಕಂಪೈಲ್ ಮಾಡಲು, gcc ಸ್ಪೇಸ್ ಕಾಲ್ ಬೈ ವ್ಯಾಲ್ ಡಾಟ್ ಸಿ(callbyval.c) ಸ್ಪೇಸ್ ಹೈಫನ್ ಒ(-o) ಸ್ಪೇಸ್ ವ್ಯಾಲ್(val) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. | |
ಡಾಟ್ ಸ್ಲ್ಯಾಶ್ ವ್ಯಾಲ್ ಎಂದು ಟೈಪ್ ಮಾಡಿ, , Enter ಕೀಯನ್ನು ಒತ್ತಿ | |
ಕ್ಯೂಬ್ ಆಫ್ ಎಟ್ ಈಸ್ ಫೈವ್ ಟ್ವೆಲ್ವ್ (Cube of 8 is 512) ಎಂದು ಔಟ್ ಪುಟ್ ತೋರಿಸುತ್ತದೆ. | |
ಈಗ, ನಾವು ಕಾಲ್ ಬೈ ರೆಫೆರೆನ್ಸ್ ಫಂಕ್ಷನ್ ಅನ್ನು ನೋಡೋಣ. | |
ಈಗ ನಮ್ಮ ಸ್ಲೈಡ್ ಗೆ ಹಿಂತಿರುಗೋಣ. | |
ಇದು, ಅರ್ಗ್ಯುಮೆಂಟ್ಸ್ ಅನ್ನು ಫಂಕ್ಷನ್ ಗೆ ಕಳುಹಿಸುವ ಇನ್ನೊಂದು ವಿಧವಾಗಿದೆ. | |
ಈ ವಿಧದಲ್ಲಿ, ಆರ್ಗ್ಯುಮೆಂಟ್ ನ ಮೌಲ್ಯದ ಬದಲು ಅಡ್ರೆಸ್ ಅನ್ನು ಕಾಪಿ ಮಾಡುತ್ತದೆ. | |
ಫಂಕ್ಷನ್ ನ ಒಳಗೆ ಆರ್ಗ್ಯುಮೆಂಟ್ ಗೆ ಆಗುವ ಬದಲಾವಣೆಗಳು ಹೊರಗಡೆಯೂ ಪರಿಣಾಮ ಬೀರುತ್ತದೆ. | |
ಇಲ್ಲಿ ನಾವು ಆರ್ಗ್ಯುಮೆಂಟ್ ಗಳನ್ನು ಪಾಯಿಂಟರ್ ಆಗಿ ಡಿಕ್ಲೇರ್ ಮಾಡಬೇಕಾಗುತ್ತದೆ. | |
ಕಾಲ್ ಬೈ ರೆಫೆರೆನ್ಸ್ ಫಂಕ್ಷನ್ ಗೆ ಉದಾಹರಣೆಯನ್ನು ನೋಡೋಣ. | |
ನಮ್ಮ ಫೈಲ್ ನ ಹೆಸರು ಕಾಲ್ ಬೈ ರೆಫ್ ಡಾಟ್ ಸಿ(callbyref.c) ಎಂದು ಗಮನದಲ್ಲಿಡಿ. | |
ಇದು ನಮ್ಮ ಹೆಡರ್ ಫೈಲ್ – ಎಸ್ ಟಿ ಡಿ ಐ ಒ ಡಾಟ್ ಹೆಚ್ ಎಂದು. | |
ನಂತರ ಸ್ವಾಪ್(swap) ಎಂಬ ಫಂಕ್ಷನ್ ಇದೆ. | |
ಈ ಫಂಕ್ಷನ್, ವೇರಿಯೇಬಲ್ ಗಳ ಮೌಲ್ಯವನ್ನು ಅದಲು-ಬದಲು ಮಾಡುತ್ತದೆ. | |
a ಯ ಮೌಲ್ಯವು b ಯಲ್ಲಿ ಮತ್ತು b ಯ ಮೌಲ್ಯವು a ಯಲ್ಲಿ ಇಡಲ್ಪಡುತ್ತದೆ. | |
ಈ ಫಂಕ್ಷನ್ ನಲ್ಲಿ ಕಳುಹಿಸಲ್ಪಡುತ್ತಿರುವ ಆರ್ಗ್ಯುಮೆಂಟ್ ಗಳು ಪಾಯಿಂಟರ್ ಟೈಪ್ ನದ್ದು ಎಂಬುದನ್ನು ನೀವು ನೋಡಬಹುದು. | |
ಇಲ್ಲಿ ನಾವು ಇಂಟಿಜರ್ ವೇರಿಯೇಬಲ್ t (ಟಿ) ಯನ್ನು ಡಿಕ್ಲೇರ್ ಮಾಡಿದ್ದೇವೆ. | |
ಮೊದಲು a ಯ ಮೌಲ್ಯವು t ಯಲ್ಲಿ ಇಡಲ್ಪಡುತ್ತದೆ, | |
ನಂತರ b ಯ ಮೌಲ್ಯವನ್ನು a ಯಲ್ಲಿ ಇಡಲಾಗುತ್ತದೆ. | |
ಮತ್ತು, t ಯ ಮೌಲ್ಯವನ್ನು b ಯಲ್ಲಿ ಇಡಲಾಗುತ್ತದೆ. | |
ಹೀಗೆ, ಮೌಲ್ಯವು ಅದಲು-ಬದಲಾಗುತ್ತದೆ. | |
ಇದು ನಮ್ಮ ಮೈನ್ ಫಂಕ್ಷನ್. | |
ಇಲ್ಲಿ ಎರಡು ಇಂಟಿಜರ್ ವೇರಿಯೇಬಲ್ i ಮತ್ತು j ಯನ್ನು ಡಿಕ್ಲೇರ್ ಮಾಡಿದ್ದೇವೆ. | |
ನಂತರ i ಮತ್ತು j ಗಳ ಮೌಲ್ಯವನ್ನು ಯೂಸರ್ ಇಂದ ಪಡೆಯುತ್ತೇವೆ. | |
ಆಂಪರ್ಸ್ಯಾಂಡ್ i ಆಂಪರ್ಸ್ಯಾಂಡ್ j ಗಳು, i ಮತ್ತು j ಗಳ ಮೆಮೊರಿ ಅಡ್ರೆಸ್ ಅನ್ನು ಕೊಡುತ್ತವೆ. | |
ಅದಲು ಬದಲು ಮಾಡುವ ಮೊದಲು ಮೌಲ್ಯವನ್ನು ಪ್ರಿಂಟ್ ಮಾಡುತ್ತೇವೆ. | |
ನಂತರ ನಾವು ಸ್ವಾಪ್ ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ, | |
ಮತ್ತು ಅದಲು ಬದಲು ಮಾಡಿದನಂತರ ಮೌಲ್ಯವನ್ನು ಪ್ರಿಂಟ್ ಮಾಡುತ್ತೇವೆ, | |
ಮತ್ತು ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. | |
ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. | |
ನಮ್ಮ ಟರ್ಮಿನಲ್ ಗೆ ಹಿಂತಿರುಗಿ. | |
ಕಂಪೈಲ್ ಮಾಡಲು, gcc ಸ್ಪೇಸ್ callbyref.c (ಕಾಲ್ ಬೈ ರೆಫ್ ಡಾಟ್ ಸಿ) ಸ್ಪೇಸ್ –o (ಹೈಫನ್ ಒ) ಸ್ಪೇಸ್ ref (ರೆಫ್) ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. | |
ಈಗ, ./ref ( ಡಾಟ್ ಸ್ಲ್ಯಾಶ್ ರೆಫ್) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. | |
ನಾವೀಗ, ಎಂಟರ್ ದ ವ್ಯಾಲ್ಯೂಸ್ ಎಂದು ನೋಡಬಹುದು. ನಾನು 6 ಮತ್ತು 4 ಎಂದು ಕೊಡುತ್ತೇನೆ. | |
ಔಟ್ ಪುಟ್ ಹೀಗೆ ತೋರಿಸುತ್ತದೆ. ಬಿಫೋರ್ ಸ್ವಾಪಿಂಗ್ 6 ಎಂಡ್ 4. | |
ಆಫ್ಟರ್ ಸ್ವಾಪಿಂಗ್ 4 ಎಂಡ್ 6 | |
ಈಗ ಇದೇ ಪ್ರೊಗ್ರಾಮ್ ಅನ್ನು c++ ನಲ್ಲಿ ಹೇಗೆ ಎಕ್ಸಿಕ್ಯೂಟ್ ಮಾಡುವುದೆಂದು ನೋಡೋಣ. | |
ನಾನೀಗಾಗಲೇ ಕೋಡ್ ಅನ್ನು ಹೊಂದಿದ್ದೇನೆ, ಅದನ್ನು ನೋಡೋಣ. | |
ಇದು ನಮ್ಮ ಎರಡನೇ ಪ್ರೊಗ್ರಾಮ್ ನ ಫಂಕ್ಷನ್ ಕಾಲ್ ಬೈ ರೆಫರೆನ್ಸ್. | |
ನಮ್ಮ ಫೈಲ್ ನ ಹೆಸರು ಕಾಲ್ ಬೈ ರೆಫ್ ಡಾಟ್ ಸಿಪಿಪಿ (callbyref.cpp) ಎಂಬುದನ್ನು ಗಮನದಲ್ಲಿಡಿ. | |
ಕೋಡ್ ಅನ್ನು ನೋಡೋಣ. | |
ಇದು ನಮ್ಮ ಹೆಡರ್ ಫೈಲ್ ಐಒಸ್ಟ್ರೀಮ್. | |
ಇಲ್ಲಿ ನಾವು ಎಸ್ ಟಿ ಡಿ ನೇಮ್ ಸ್ಪೇಸ್ ಅನ್ನು ಉಪಯೋಗಿಸುತ್ತಿದ್ದೇವೆ. | |
c++ ನಲ್ಲಿ ಫಂಕ್ಷನ್ ನ ಡಿಕ್ಲರೇಶನ್ c ನಂತೆಯೇ ಇರುತ್ತದೆ. | |
ಇದಕ್ಕೆ ನಾವು ಆಂಪರ್ಸಂಡ್ ಎಕ್ಸ್(&x) ಮತ್ತು ಆಂಪರ್ಸಂಡ್ ವೈ(&y) ಎಂದು ಆರ್ಗ್ಯುಮೆಂಟ್ ಅನ್ನು ಕಳಿಸುತ್ತಿದ್ದೇವೆ. | |
ಇದು x ಮತ್ತು y ಗಳ ಮೆಮೊರಿ ಅಡ್ರೆಸ್ ಅನ್ನು ಕೊಡುತ್ತದೆ. | |
ನಂತರ ನಾವು ಮೌಲ್ಯಗಳನ್ನು ಅದಲುಬದಲು ಮಾಡುತ್ತೇವೆ. | |
ಉಳಿದ ಕೋಡ್ ನಮ್ಮ c ಕೋಡ್ ನಂತೆಯೇ ಇರುತ್ತದೆ. | |
ಪ್ರಿಂಟ್ ಎಫ್ ಸ್ಟೇಟ್ಮೆಂಟ್ ಅನ್ನು ಸಿಔಟ್ ಎಂದು, ಮತ್ತು ಸ್ಕ್ಯಾನ್ ಎಫ್ ಸ್ಟೇಟ್ಮೆಂಟ್ ಅನ್ನು ಸಿಇನ್ ಎಂದೂ ಬದಲಾಯಿಸಲಾಗಿದೆ. | |
ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. ನಮ್ಮ ಟರ್ಮಿನಲ್ ಗೆ ಹಿಂತಿರುಗಿ. | |
ಕಂಪೈಲ್ ಮಾಡಲು, g++ ಸ್ಪೇಸ್ callbyref.c ಸ್ಪೇಸ್ ಹೈಫನ್ ಒ(-o) ಸ್ಪೇಸ್ ref1 ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. | |
ಈಗ ಡಾಟ್ ಸ್ಲ್ಯಾಶ್ ರೆಫ್ ಒನ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. | |
ಇಲ್ಲಿ ಹೀಗೆ ತೋರಿಸುತ್ತದೆ, | |
Enter values of a and b(ಎಂಟರ್ ದ ವ್ಯಾಲ್ಯೂಸ್ ಆಫ್ ಎ ಎಂಡ್ ಬಿ) | |
ನಾನು ನಾಲ್ಕು ಮತ್ತು ಮೂರು ಎಂದು ಕೊಡುತ್ತೇನೆ. | |
ಈ ರೀತಿ ಔಟ್ ಪುಟ್ ತೋರಿಸುತ್ತದೆ | |
ಬಿಫೋರ್ ಸ್ವಾಪಿಂಗ್ 4 ಎಂಡ್ 3. | |
ಆಫ್ಟರ್ ಸ್ವಾಪಿಂಗ್ 3 ಎಂಡ್ 4 | |
ಇಲ್ಲಿಗೆ ನಮ್ಮ ಟ್ಯುಟೋರಿಯಲ್ ಮುಗಿಯುತ್ತದೆ. | |
ನಮ್ಮ ಸ್ಲೈಡ್ ಗೆ ಹಿಂತಿರುಗೋಣ. | |
ಈಗ ಸಾರಾಂಶ ತಿಳಿಯೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು : | |
ಫಂಕ್ಷನ್ ಕಾಲ್ ಬೈ ವ್ಯಾಲ್ಯೂ. | |
ಮತ್ತು ಫಂಕ್ಷನ್ ಕಾಲ್ ಬೈ ರೆಫರನ್ಸ್. | |
ಕಾಲ್ ಬೈ ವ್ಯಾಲ್ಯೂ ಅನ್ನು ಉಪಯೋಗಿಸಿ, ಸಂಖ್ಯೆಯ ಘನವನ್ನು ಕಂಡುಹಿಡಿಯಲು ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ . | |
ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. | |
ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. | |
ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. | |
ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. | |
ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. | |
ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. | |
ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. | |
ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. | |
ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. | |
ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. | |
ಧನ್ಯವಾದಗಳು. |