Geogebra/C2/Angles-and-Triangles-Basics/Kannada

From Script | Spoken-Tutorial
Revision as of 11:03, 20 March 2017 by PoojaMoolya (Talk | contribs)

Jump to: navigation, search
Time Narration
00:00 ನಮಸ್ಕಾರ. Geogebra ದ Angles and Triangles Basics ಎನ್ನುವ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ನೀವು Geogebra (ಜಿಯೊಜಿಬ್ರಾ) ವನ್ನು ಇದೇ ಮೊದಲ ಬಾರಿಗೆ ಉಪಯೋಗಿಸುತ್ತಿದ್ದರೆ ದಯವಿಟ್ಟು spoken tutorial ವೆಬ್ಸೈಟ್ ಮೇಲಿನ Introduction to Geogebra ಎಂಬ ಟ್ಯುಟೋರಿಯಲ್ ಅನ್ನು ನೋಡಿ.
00:14 ಜಿಯೊಜಿಬ್ರಾದೊಂದಿಗೆ ಕೆಲಸಮಾಡಲು ನಾನು Linux (ಲಿನಕ್ಸ್) ಆಪರೇಟಿಂಗ್ ಸಿಸ್ಟಂ Ubuntu (ಉಬಂಟು) ವರ್ಷನ್ 10.04 LTS ಹಾಗೂ Geogebra ವರ್ಷನ್ 3.2.40.0 ಗಳನ್ನು ಬಳಸುತ್ತಿದ್ದೇನೆ.
00:24 ಜಿಯೊಜಿಬ್ರಾವನ್ನು ಬಳಸಿ, ಒಂದು ತ್ರಿಕೋನದಲ್ಲಿ, ಆಂತರಿಕ ಕೋನಗಳ ಮೊತ್ತವು ಯಾವಾಗಲೂ 180 ಅಂಶಗಳಾಗಿರುತ್ತದೆ ಎಂಬುದನ್ನು ಪರೀಕ್ಷಿಸುವುದು ಈ ಟ್ಯುಟೋರಿಯಲ್ ನ ಉದ್ದೇಶವಾಗಿದೆ.
00:33 ಈ ಟ್ಯುಟೋರಿಯಲ್ ನಲ್ಲಿ, ನಾವು Polygon, Angle, Insert Text ಎಂಬ ಟೂಲ್ಗಳನ್ನು ಉಪಯೋಗಿಸಲು ಕಲಿಯುವೆವು.
00:42 ಈಗ, ಮೊದಲು Polygon ಎಂಬ ಟೂಲನ್ನು ಆಯ್ಕೆಮಾಡಿ. ಒಂದು ಬಹುಭುಜಾಕೃತಿಯನ್ನು ರಚಿಸಲು, ಇಲ್ಲಿಯ ತ್ರಿಕೋನವನ್ನು: ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಕ್ಲಿಕ್ ಮಾಡಿ ಮೂರು ಶೃಂಗಗಳನ್ನು (vertices) ಆಯ್ಕೆಮಾಡಿ. ಆಮೇಲೆ ಮೊದಲನೆಯ ಶೃಂಗದ (vertex) ಮೇಲೆ ಕ್ಲಿಕ್ ಮಾಡಿ.
00:57 ತ್ರಿಕೋನದಲ್ಲಿಯ ಆಂತರಿಕ ಕೋನಗಳನ್ನು ಅಳೆಯಲು, Angle ಟೂಲನ್ನು ಆಯ್ಕೆಮಾಡಿ. ನೀವು ಕೋನವನ್ನು ಎರಡು ವಿಧದಲ್ಲಿ ಅಳೆಯಬಹುದು. ಕ್ಲಾಕ್ವೈಸ್ ಆಗಿ A, B ನಂತರ C ಈ ಮೂರು ವರ್ಟೈಸಿಸ್ ಗಳನ್ನು ಕ್ಲಿಕ್ ಮಾಡಿ. ಇದು Alpha (ಅಲ್ಫಾ) ಎಂಬ ABC ಕೋನವನ್ನು ಅಳೆಯುತ್ತದೆ.
01:15 ಎರಡನೆಯ ವಿಧವೆಂದರೆ, ಕೋನವನ್ನು ರೂಪಿಸಿರುವ ಭುಜಗಳನ್ನು ಆಯ್ಕೆಮಾಡುವುದು. ಈ ಸಲ beta (ಬೀಟಾ) ಹೆಸರಿನ BCA ಕೋನವನ್ನು ಪಡೆಯಲು ಆಂಟಿ-ಕ್ಲಾಕ್ವೈಸ್ ಆಗಿ 'a' ಹಾಗೂ ' b ' ಗಳನ್ನು ಆಯ್ಕೆಮಾಡಿ.
01:27 ಹೀಗೆಯೇ, CAB, gamma (ಗಾಮಾ) ಕೋನವನ್ನು ಅಳೆಯುತ್ತದೆ.
01:35 ಎಲ್ಲ ಕೋನಗಳನ್ನು ಪ್ರಮಾಣಿತ ಗಣಿತದ ಸಂಪ್ರದಾಯದಂತೆ ಗ್ರೀಕ್ ಅಕ್ಷರಮಾಲೆಯ ಪ್ರಕಾರ ಹೆಸರಿಸಲಾಗಿದೆ ಎಂಬುದನ್ನು ಗಮನಿಸಿ.
01:41 ಅಲ್ಲದೇ ನೀವು ವರ್ಟೈಸಿಸ್ ಗಳನ್ನು ಈ ರೀತಿ C B A ಎಂದು ಆಂಟಿ-ಕ್ಲಾಕ್ವೈಸ್ ಆಗಿ ಆಯ್ಕೆಮಾಡಿದರೆ ಆಗ ಬಾಹ್ಯಕೋನವು ಅಳೆಯಲ್ಪಡುತ್ತದೆ.
01:53 ನಿಮ್ಮ ‘ಡ್ರಾಯಿಂಗ್ ಪ್ಯಾಡ್’ಗೆ ಟೆಕ್ಸ್ಟ್ ಅನ್ನು ಸೇರಿಸಲು Insert Text ಎನ್ನುವ ಟೂಲನ್ನು ಬಳಸಿ. ಆಮೇಲೆ ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ. ಒಂದು ‘ಟೆಕ್ಸ್ಟ್ ವಿಂಡೋ’ ಕಾಣಿಸಿಕೊಳ್ಳುತ್ತದೆ.
02:07 ಈಗ ABC ಕೋನವನ್ನು ತೋರಿಸಲು, ಡಬಲ್ ಕೋಟ್ಸ್ ನ ಒಳಗೆ “Angle ABC =” ಎಂದು ಟೈಪ್ ಮಾಡಿ ಅದಕ್ಕೆ ‘+’ ಚಿನ್ಹೆಯನ್ನು ಸೇರಿಸಿ ಆಮೇಲೆ alpha ದ ಮೇಲೆ ಕ್ಲಿಕ್ ಮಾಡುವೆನು. OK ಯನ್ನು ಕ್ಲಿಕ್ ಮಾಡುತ್ತೇನೆ. ಹೀಗೆ ನನಗೆ ಕೋನ ABC ಯ ವ್ಯಾಲ್ಯೂ ಸಿಗುತ್ತದೆ.
02:28 ಹೀಗೆಯೇ, ಅಂಕಗಣಿತವನ್ನು ಮಾಡಲು, ಈ ತ್ರಿಕೋನದ ಆಂತರಿಕ ಕೋನಗಳ ಮೊತ್ತವನ್ನು ತೋರಿಸಲು, Insert Text ಟೂಲ್ನ ಮೇಲೆ ಕ್ಲಿಕ್ ಮಾಡಿ. ಇಲ್ಲಿ ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಕ್ಲಿಕ್ ಮಾಡಿ.

ಡಬಲ್ ಕೋಟ್ಸ್ ನ ಒಳಗೆ Sum of the interior angles of triangle ABC = ಎಂದು ಟೈಪ್ ಮಾಡಿ. ಪ್ಲಸ್ (+) ಬ್ರಾಕೆಟ್ ನಲ್ಲಿ alpha + beta + gamma ಎಂದು ಟೈಪ್ ಮಾಡಿ ಬ್ರಾಕೆಟ್ ಮುಚ್ಚಿ, OK ಯ ಮೇಲೆ ಕ್ಲಿಕ್ ಮಾಡಿ. ಈಗ ನೀವು ಮೊತ್ತವನ್ನು ನೋಡುವಿರಿ.

03:14 ನಂತರ, Move ಟೂಲನ್ನು ಆಯ್ಕೆಮಾಡಿ ಹಾಗೂ ಇಲ್ಲಿ‘ಫ್ರೀ ಆಬ್ಜೆಕ್ಟ್’ಗಳಾಗಿರುವ A B ಅಥವಾ C ವರ್ಟೈಸಿಸ್ ಗಳನ್ನು ಸ್ಥಳಾಂತರಿಸಿ. ಆಂತರಿಕ ಕೋನಗಳ ಮೊತ್ತವು ಯಾವಾಗಲೂ 180 ಅಂಶಗಳಾಗಿದೆ ಎಂಬುದನ್ನುನೀವು ನೋಡುವಿರಿ.
03:32 ಮೂರೂ ವರ್ಟೈಸಿಸ್ ಗಳು ಒಂದೇ ಸರಳರೇಖೆಯ ಮೇಲೆ ಇದ್ದಾಗ ಎರಡು ಆಂತರಿಕ ಕೋನಗಳು ಸೊನ್ನೆಯಾಗುತ್ತವೆ ಮತ್ತು ಮೂರನೆಯದು 180 ಅಂಶಗಳು, ಎಂದರೆ ಹೀಗೆ, ಒಂದು ಸರಳಕೋನವಾಗುತ್ತದೆ. ಇದನ್ನು ತೋರಿಸುವುದು ಈ ಪಾಠದಲ್ಲಿ ನನಗೆ ಬಹಳ ಪ್ರಿಯವಾದ ಭಾಗ.
03:52 ಆಮೇಲೆ, ‘ಡ್ರಾಯಿಂಗ್ ಪ್ಯಾಡ್’ನ ಗುಣಧರ್ಮಗಳು ಹಾಗೂ ಜಿಯೊಜಿಬ್ರಾದಲ್ಲಿ ಒಂದು ‘ಆಬ್ಜೆಕ್ಟ್’ಅನ್ನು ಹೇಗೆ ‘ಡಿಲೀಟ್’ (ತೆಗೆದುಹಾಕುವುದು) ಮಾಡುವುದು- ಈ ಎರಡೂ ವಿಷಯಗಳನ್ನು ನಾವು ಕಲಿಯುವೆವು.
04:04 ಮೊದಲು, ‘ಡ್ರಾಯಿಂಗ್ ಪ್ಯಾಡ್’ನ ಗುಣಧರ್ಮಗಳು. ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಎಲ್ಲಿಯಾದರೂ ರೈಟ್-ಕ್ಲಿಕ್ ಮಾಡಿ. ಆಮೇಲೆ Drawing Pad ಎನ್ನುವುದರ ಮೇಲೆ ಕ್ಲಿಕ್ ಮಾಡಿ.
04:14 Drawing Pad ನ ‘ಪ್ರಾಪರ್ಟೀಸ್ ವಿಂಡೋ’ ತೆರೆದುಕೊಳ್ಳುತ್ತದೆ. ನೀವು ಇಲ್ಲಿ ‘ಡ್ರಾಯಿಂಗ್ ಪ್ಯಾಡ್’ನ Background colour ಅನ್ನು ಬದಲಾಯಿಸಬಹುದು.
04:20 ನೀವು ಇಲ್ಲಿ X axis ಹಾಗೂ Y axis ಈ ಎರಡೂ Axes ಗಳ ಮತ್ತು ಇಲ್ಲಿ Grid ನ ಗುಣಧರ್ಮಗಳನ್ನು ಬದಲಾಯಿಸಬಹುದು
04:31 ಗಮನಿಸಬೇಕಾದ ಕೆಲವು ಗುಣಧರ್ಮಗಳೆಂದರೆ axis ಗಾಗಿ ನೀವು ಸೇರಿಸಬಹುದಾದ Unit (ಯೂನಿಟ್), Labels ಮತ್ತು X axis to Y axis ಅನುಪಾತ ಇತ್ಯಾದಿಗಳು.
04:43 ನಾವು ಸರಳ ರೇಖಾಗಣಿತವನ್ನು ಮಾಡುವಾಗ ಸಾಮಾನ್ಯವಾಗಿ ಇದನ್ನು 1:1 ಅನುಪಾತದಲ್ಲಿ (ratio) ಇಡಲು ಇಷ್ಟಪಡುತ್ತೇವೆ.
04:49 ನೀವು ‘ಕ್ಲೋಸ್’ ಮಾಡಿದಾಗ, ನೀವು ಮಾಡಿದ ಎಲ್ಲ ಬದಲಾವಣೆಗಳು ‘ಸೇವ್’ ಆಗುತ್ತವೆ (ಉಳಿದುಕೊಳ್ಳುತ್ತವೆ).
04:54 ಈಗ, ‘ಡ್ರಾಯಿಂಗ್ ಪ್ಯಾಡ್’ ಮೇಲಿನ ಒಂದು ಆಬ್ಜೆಕ್ಟ್ ಅನ್ನು ತೆಗೆದುಹಾಕಲು (delete), ಮೌಸನ್ನು ಆಬ್ಜೆಕ್ಟ್ ನ ಮೇಲೆ ನಡೆದಾಡಿಸಿ. ನಾನು ಮೌಸನ್ನು ಬಾಹ್ಯಕೋನದ ಮೇಲೆ ನಡೆದಾಡಿಸಿ ರೈಟ್-ಕ್ಲಿಕ್ ಮಾಡುವೆನು. ಆಬ್ಜೆಕ್ಟ್ ನ ಹೆಸರು ಇಲ್ಲಿ ಕಾಣಿಸಿಕೊಳ್ಳುವುದನ್ನು ನೀವು ನೋಡುವಿರಿ. ಆಮೇಲೆ Delete ನ ಮೇಲೆ ಕ್ಲಿಕ್ ಮಾಡಿ. ಆಗ ಆಬ್ಜೆಕ್ಟ್, ಮಾಯವಾಗುವುದು.
05:15 ಆಬ್ಜೆಕ್ಟ್ ಅನ್ನು ತೆಗೆದುಹಾಕುವ (delete) ಇನ್ನೊಂದು ವಿಧಾನವೆಂದರೆ - ಆಬ್ಜೆಕ್ಟ್ ಅನ್ನು ‘ಆಲ್ಜಿಬ್ರಾ ವ್ಯೂ’ನಲ್ಲಿ ಆಯ್ಕೆಮಾಡಿ, ಅದರ ಮೇಲೆ ರೈಟ್-ಕ್ಲಿಕ್ ಮಾಡಿ Delete ಅನ್ನು ಒತ್ತಿ.
05:25 ನಾನು ಕೋನ gamma (ಗಾಮಾ) ವನ್ನು ಡಿಲೀಟ್ ಮಾಡಿದಾಗ ಈ ಟೆಕ್ಸ್ಟ್ ಸಹ ಮಾಯವಾಗುವುದನ್ನು ಗಮನಿಸಿ. ಏಕೆಂದರೆ ಇದು ಕೋನ gamma (ಗಾಮಾ) ವನ್ನು ಅವಲಂಬಿಸಿದೆ.
05:35 ನಾನು ಡಿಲೀಟ್ ಮಾಡಿದ್ದನ್ನು ರದ್ದುಮಾಡಬೇಕಾದರೆ Edit ಗೆ ಹೋಗಿ Undo ದ ಮೇಲೆ ಕ್ಲಿಕ್ ಮಾಡುತ್ತೇನೆ ಅಥವಾ Ctrl + Z ಒತ್ತುತ್ತೇನೆ.
05:45 ಜಿಯೊಜಿಬ್ರಾದಲ್ಲಿ, ಅನೇಕ ಆಬ್ಜೆಕ್ಟ್ ಗಳನ್ನು ಒಟ್ಟಿಗೇ ಡಿಲೀಟ್ ಮಾಡಲು ಸುಲಭವಾದ ವಿಧಾನವೆಂದರೆ - ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಎಲ್ಲಿಯಾದರೂ ಲೆಫ್ಟ್-ಕ್ಲಿಕ್ ಮಾಡಿ. ನಿಮಗೆ ಡಿಲೀಟ್ ಮಾಡಬೇಕಾಗಿರುವ ಎಲ್ಲ ಆಬ್ಜೆಕ್ಟ್ ಗಳ ಮೇಲೆ ಮೌಸನ್ನು ಎಳೆಯಿರಿ. ಮೌಸ್ನ ಕ್ಲಿಕ್ ಅನ್ನು ಬಿಟ್ಟುಬಿಡಿ. ಈಗ ಎಲ್ಲ ಐಟಂಗಳು ಆಯ್ಕೆಯಾಗಿರುತ್ತವೆ. ಆಗ ನಿಮ್ಮ ಕೀಬೋರ್ಡ್ ಮೇಲಿನ Delete ಅನ್ನು ಒತ್ತಿ.
06:05 Undo ಕ್ಲಿಕ್ ಮಾಡಿ ಮತ್ತೆ ಇದನ್ನು ರದ್ದು ಮಾಡೋಣ.
06:10 ಈಗ, ನಾನು ಇನ್ನೊಮ್ಮೆ text ನ ಸಿಂಟ್ಯಾಕ್ಸ್ ಅನ್ನು ವಿವರಿಸಲು ಇಷ್ಟಪಡುತ್ತೇನೆ.
06:17 ಉದಾಹರಣೆಯಲ್ಲಿ ತೋರಿಸಿದಂತೆ, ಟೆಕ್ಸ್ಟ್, ಇದ್ದಂತೆಯೇ ಕಾಣಿಸಲು ಅದು ಡಬಲ್ ಕೋಟ್ಸ್ ನಲ್ಲಿ ಇರಬೇಕು.
06:25 ಜಿಯೊಜಿಬ್ರಾ ವೇರಿಯಬಲ್ ಗಳ ವ್ಯಾಲ್ಯೂಗಳಿಗಾಗಿ, ವೇರಿಯಬಲ್ ನ ಹೆಸರನ್ನು ‘ಆಲ್ಜಿಬ್ರಾ ವ್ಯೂ’ನಲ್ಲಿ ತೋರಿಸಿದಂತೆ, ‘ಕೋಟ್ಸ್’ ಗಳಿಲ್ಲದೇ (without quotes) ಬಳಸಿ.
06:34 ವ್ಯಾಲ್ಯೂಗಳೊಂದಿಗೆ ಅಂಕಗಣಿತವನ್ನು ಮಾಡಲು, ವೇರಿಯಬಲ್ ಗಳನ್ನು ಬ್ರಾಕೆಟ್ ಗಳಲ್ಲಿ () ಉಪಯೋಗಿಸಿ.
06:40 ಕೊನೆಯದಾಗಿ, concatenate (ಕಾಂಕ್ಯಾಟಿನೇಟ್) ಮಾಡಲು ಅಥವಾ ಟೆಕ್ಸ್ಟ್ ಅನ್ನು ಜೋಡಿಸಲು ‘+' (ಅಧಿಕ ಚಿನ್ಹೆ) ಯನ್ನು ಬಳಸಿ.
06:46 ಆಮೇಲೆ, ಕೋನಗಳ ‘ಕಲರ್’ ಮತ್ತು ಟೆಕ್ಸ್ಟ್ ಅನ್ನು ಸರಿಹೊಂದಿಸುವ ಕೆಲವು ವಿಧಾನಗಳನ್ನು ನಾವು ನೋಡುವೆವು.
06:59 ಈಗ ನನಗೆ ಟೆಕ್ಸ್ಟ್ ನ ‘ಕಲರ್’ಅನ್ನು ಬದಲಾಯಿಸಬೇಕಾಗಿದ್ದರೆ, ನಾನು ರೈಟ್-ಕ್ಲಿಕ್ ಮಾಡಿ Object Properties > Color ಗಳಿಗೆ ಹೋಗಿ ‘ಕಲರ್’ಅನ್ನು ಬದಲಾಯಿಸಿ Close ನ ಮೇಲೆ ಕ್ಲಿಕ್ ಮಾಡುತ್ತೇನೆ.
07:12 ಈಗ ಇಲ್ಲಿಯ ಕೋನಕ್ಕೆ ಹೋಗಿ, ರೈಟ್-ಕ್ಲಿಕ್ ಮಾಡಿ, Object Properties ಒತ್ತುತ್ತೇನೆ. ಇಲ್ಲಿ ನಾನು ಇತ್ತೀಚಿನ ವಿಂಡೋವನ್ನು ಆರಿಸಿ, ನಿಖರವಾದ ಹೋಲಿಕೆಗಾಗಿ ಈ ಬಣ್ಣದ ಮೇಲೆ ಕ್ಲಿಕ್ ಮಾಡಬಹುದು.
07:26 ಹೀಗೆಯೇ, ನನಗೆ ‘ಝೂಮ್ ಇನ್’ ಹಾಗೂ ‘ಝೂಮ್ ಔಟ್’ ಮಾಡಬೇಕಾಗಿದ್ದರೆ, ಇಲ್ಲಿಯ Zoom In ಅನ್ನು ಹಾಗೂ Zoom Out ಆಯ್ಕೆಗಳನ್ನು ಬಳಸುತ್ತೇನೆ ಮತ್ತು ‘ಝೂಮ್ ಔಟ್’ ಮಾಡಲು ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಕ್ಲಿಕ್ ಮಾಡುತ್ತೇನೆ.
07:47 ಕೋನದ (angle) ಯೂನಿಟ್ ಅನ್ನು ಬದಲಾಯಿಸಲು ನಾನು ಕ್ರಮವಾಗಿ Options , Angle unit ಗಳಿಗೆ ಹೋಗಿ Degrees ಅನ್ನು Radians ಗಳಿಗೆ ಬದಲಾಯಿಸಬಹುದು.
08:02 ಈಗ ರೀಕ್ಯಾಪ್- ಕೋನದ ಅಳತೆಯನ್ನು ರೇಡಿಯನ್ ನಿಂದ ಡಿಗ್ರೀಗಳಿಗೆ ಹೇಗೆ ಬದಲಾಯಿಸುವುದೆಂದು ನನಗೆ ತಿಳಿದಿದೆ. ನಾನು ‘ಝೂಮ್ ಇನ್’ ಹಾಗೂ ‘ಝೂಮ್ ಔಟ್’ ಮಾಡಬಹುದು.
08:15 ಈಗ ಅಸೈನ್ಮೆಂಟ್.
08:19 ಒಂದು ತ್ರಿಕೋನದಲ್ಲಿ, ಬಾಹ್ಯಕೋನವು ಅಂತರ್ವಿರುದ್ಧ ಕೋನಗಳ ಮೊತ್ತಕ್ಕೆ ಸಮನಾಗಿರುತ್ತದೆ ಎಂಬುದನ್ನು ಪರೀಕ್ಷಿಸಲು ‘ಡ್ರಾ’ ಮಾಡಿ.
08:28: ಇಲ್ಲಿ ಹೇಳಿದಂತೆ ಮಾಡಿ: Polygon ಟೂಲನ್ನು ಬಳಸಿ ಒಂದು ತ್ರಿಕೋನವನ್ನು ರಚಿಸಿ.
08:32 Line through Two Points ಎನ್ನುವ ಟೂಲನ್ನು ಬಳಸಿ ಯಾವುದೇ ಒಂದು ಭುಜವನ್ನು ಬೆಳೆಸಿ.
08:36 ಬಾಹ್ಯಕೋನ ಹಾಗೂ ಅಂತರ್ವಿರುದ್ಧ ಕೋನಗಳನ್ನು ಅಳೆಯಲು Angle ಟೂಲನ್ನು ಬಳಸಿ.
08:41 ಫಲಿತಾಂಶಗಳನ್ನು ತೋರಿಸಲು Insert Text ಟೂಲನ್ನು ಬಳಸಿ. Move ಟೂಲನ್ನು ಬಳಸಿ ‘ಫ್ರೀ ಆಬ್ಜೆಕ್ಟ್’ಗಳನ್ನು ಸ್ಥಳಾಂತರಿಸುವುದರ ಮೂಲಕ ಇದನ್ನು ಪರೀಕ್ಷಿಸಿ.
08:49 ನಾನು ಮಾಡಿರುವುದನ್ನು ನಿಮಗೆ ತೋರಿಸುತ್ತೇನೆ. ನೀವು ಕೇವಲ Move ಟೂಲನ್ನು ಬಳಸಿ ‘ಫ್ರೀ ಆಬ್ಜೆಕ್ಟ್’ಗಳನ್ನು ಸ್ಥಳಾಂತರಿಸವುದು ಮಾತ್ರ ಅವಶ್ಯವಾಗಿದೆ.
08:57 ಬಾಹ್ಯಕೋನವು ಯಾವಾಗಲೂ ಅಂತರ್ವಿರುದ್ಧ ಕೋನಗಳ ಮೊತ್ತಕ್ಕೆ ಸಮನಾಗಿರುತ್ತದೆ ಎಂಬುದನ್ನು ನೀವು ನೋಡುವಿರಿ.
09:08 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು “ಟಾಕ್ ಟು ಎ ಟೀಚರ್” ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ.
09:14 ಇದು ICT, MHRD ಮೂಲಕ ಭಾರತ ಸರ್ಕಾರದ ರಾಷ್ಟ್ರೀಯ ಸಾಕ್ಷರತಾ ಮಿಷನ್ ನ ಆಧಾರವನ್ನು ಪಡೆದಿದೆ.
09:20 ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ವೆಬ್ಸೈಟ್ ನಲ್ಲಿ ನೀವು ನೋಡಬಹುದು.
09:24 IIT Bombay ಯಿಂದ, ಈ ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ---------- .

ವಂದನೆಗಳು.

Contributors and Content Editors

PoojaMoolya, Sandhya.np14