GChemPaint/C3/Aromatic-Molecular-Structures/Kannada
From Script | Spoken-Tutorial
Revision as of 20:38, 17 January 2015 by Sandhya.np14 (Talk | contribs)
Time | Narration
|
---|---|
00:01 | ನಮಸ್ಕಾರ. |
00:02 | GChemPaint (ಜಿ-ಕೆಮ್-ಪೇಂಟ್) ನಲ್ಲಿಯ Aromatic Molecular Structures (ಆರೋಮ್ಯಾಟಿಕ್ ಮೊಲೆಕ್ಯುಲರ್ ಸ್ಟ್ರಕ್ಚರ್ಸ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:07 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
00:10 | ‘ಸೈಕ್ಲೋಹೆಕ್ಸೇನ್’ಅನ್ನು ‘ಸೈಕ್ಲೋಹೆಕ್ಸೀನ್’ಗೆ ಪರಿವರ್ತಿಸುವುದು, |
00:13 | ‘ಸೈಕ್ಲೋಹೆಕ್ಸೀನ್’ಅನ್ನು ‘ಬೆಂಜೀನ್’ಗೆ ಪರಿವರ್ತಿಸುವುದು, |
00:16 | ‘ಬೆಂಜೀನ್ ರಿಂಗ್’ನ ‘ಹೈಡ್ರೋಜನ್’ಗೆ ಬದಲಾಗಿ ಬೇರೆ ಪರಮಾಣುಗಳನ್ನು ಸೇರಿಸುವುದು, |
00:20 | ‘ಬೆಂಜೀನ್ ರಿಂಗ್’ನ ‘ಹೈಡ್ರೋಜನ್’ಗೆ ಬದಲಾಗಿ ಬೇರೆ ಪರಮಾಣುಗಳ ಸಮೂಹವನ್ನು ಸೇರಿಸುವುದು ಹಾಗೂ |
00:24 | ಎರಡು ಅಣುಗಳನ್ನು ಒಂದುಗೂಡಿಸುವುದು ಇತ್ಯಾದಿಗಳನ್ನು ಕಲಿಯುವೆವು. |
00:26 | ಇಲ್ಲಿ ನಾನು, |
00:28 | Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ |
00:32 | GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಗಳನ್ನು ಬಳಸುತ್ತಿದ್ದೇನೆ. |
00:37 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು |
00:41 | 'GChemPaint' chemical structure editor (‘ಜೀ-ಕೆಮ್-ಪೇಂಟ್’ ಕೆಮಿಕಲ್ ಸ್ಟ್ರಕ್ಚರ್ ಎಡಿಟರ್) ಅನ್ನು ತಿಳಿದಿರಬೇಕು. |
00:44 | ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್‌ಸೈಟ್ ಗೆ ಹೋಗಿ. |
00:50 | ನಾನು ಒಂದು ಹೊಸ ‘GChemPaint ಅಪ್ಪ್ಲಿಕೇಶನ್’ಅನ್ನು ತೆರೆದಿದ್ದೇನೆ. |
00:54 | ಮೊದಲು, ಒಂದು ‘ಸಿಕ್ಸ್ ಮೆಂಬರ್ಡ್ ಸೈಕಲ್’ಅನ್ನು ನಾವು ‘ಡಿಸ್ಪ್ಲೇ ಏರಿಯಾ’ಗೆ ಸೇರಿಸೋಣ. |
00:59 | Add a six membered cycle ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
01:02 | ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
01:04 | Add a bond or change the multiplicity of the existing one ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
01:10 | ‘ಸೈಕಲ್’ನ ಪ್ರತಿಯೊಂದು ಮೂಲೆಯ ಮೇಲೆ ಎರಡು ‘ಬಾಂಡ್’ಗಳನ್ನು ಸೇರಿಸಿ. |
01:14 | ಯಾವುದೇ ಎರಡು ‘ಬಾಂಡ್’ಗಳು ಒಂದನ್ನೊಂದು ಸ್ಪರ್ಶಿಸದಂತೆ ಅವುಗಳನ್ನು ಇರಿಸಿ. |
01:19 | ಹೀಗೆ ಮಾಡಲು, ‘ಬಾಂಡ್’ಗಳ ಮೇಲೆ ಕ್ಲಿಕ್ ಮಾಡಿ ಅವುಗಳನ್ನು ಸರಿಯಾದ ಸ್ಥಾನಗಳಿಗೆ ಎಳೆಯಿರಿ. |
01:24 | ‘ಸೈಕಲ್’ನ ಎಲ್ಲ ಮೂಲೆಗಳ ಮೇಲೆ ‘ಕಾರ್ಬನ್’ ಪರಮಾಣುಗಳನ್ನು ನಾವು ತೋರಿಸೋಣ. |
01:28 | ಯಾವುದೇ ಒಂದು ಮೂಲೆಯ ಮೇಲೆ ರೈಟ್ ಕ್ಲಿಕ್ ಮಾಡಿ. |
01:31 | ಒಂದು ಸಬ್-ಮೆನ್ಯೂ ಕಾಣಿಸಿಕೊಳ್ಳುತ್ತದೆ. |
01:33 | Atom ಅನ್ನು ಆಯ್ಕೆಮಾಡಿ. ಆಮೇಲೆ Display symbol ನ ಮೇಲೆ ಕ್ಲಿಕ್ ಮಾಡಿ. |
01:36 | ಹೀಗೆಯೇ, ‘ಕಾರ್ಬನ್’ ಪರಮಾಣುಗಳನ್ನು ಸೈಕಲ್ ನ ಎಲ್ಲ ಮೂಲೆಗಳ ಮೇಲೆ ಸೇರಿಸಿ. |
01:42 | ‘ಬಾಂಡ್’ಗಳಿಗೆ ‘ಹೈಡ್ರೋಜನ್’ ಪರಮಾಣುಗಳನ್ನು ಸೇರಿಸಲು, ಕೀಬೋರ್ಡ್ ನ ಮೇಲೆ ‘H' ಅನ್ನು ಒತ್ತಿ. |
01:47 | Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
01:51 | ‘ಬಾಂಡ್’ಗಳ ಎಲ್ಲ ಸ್ಥಾನಗಳ ಮೇಲೆ ಕ್ಲಿಕ್ ಮಾಡಿ. |
01:54 | ಮತ್ತೆ, ಯಾವುದೇ ಎರಡು ‘ಹೈಡ್ರೋಜನ್’ಗಳು ಪರಸ್ಪರ ಒಂದರ ಮೇಲೆ ಇನ್ನೊಂದು ಇರದಂತೆ ನೋಡಿಕೊಳ್ಳಿ. |
01:59 | ಪಡೆದ ರಚನೆಯು ‘(C6H12) Cyclohexane’ (ಸಿ-ಸಿಕ್ಸ್-ಎಚ್-ಟ್ವೆಲ್ವ್-ಸೈಕ್ಲೋಹೆಕ್ಸೇನ್) ಆಗಿದೆ. |
02:04 | ನಾವು ರಚನೆಯನ್ನು ‘ಕಾಪಿ ಮತ್ತು ಪೇಸ್ಟ್’ ಮಾಡೋಣ. |
02:07 | ರಚನೆಯನ್ನು ಆಯ್ಕೆಮಾಡಲು Ctrl+A ಒತ್ತಿ. |
02:10 | ರಚನೆಯನ್ನು ‘ಕಾಪಿ’ ಮಾಡಲು Ctrl+C ಹಾಗೂ ಪೇಸ್ಟ್ ಮಾಡಲು Ctrl+V ಒತ್ತಿ. |
02:15 | ನಾವು ಎರಡನೆಯ ‘ಸೈಕ್ಲೋಹೆಕ್ಸೇನ್’ ರಚನೆಯನ್ನು ‘ಸೈಕ್ಲೋಹೆಕ್ಸೀನ್’ಗೆ ಪರಿವರ್ತಿಸೋಣ. |
02:19 | Eraser ಟೂಲ್ನ ಮೇಲೆ ಕ್ಲಿಕ್ ಮಾಡಿ. |
02:22 | ಅಕ್ಕಪಕ್ಕದ ಒಂದು ಜೊತೆ ‘ಕಾರ್ಬನ್’ ಪರಮಾಣುಗಳಿಂದ ಒಂದೊಂದು ‘ಹೈಡ್ರೋಜನ್ ಬಾಂಡ್’ಅನ್ನು ತೆಗೆದುಹಾಕಿ. |
02:27 | Add a bond or change the multiplicity of the existing one ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
02:33 | ತೆಗೆದುಹಾಕಿದ ‘ಹೈಡ್ರೋಜನ್ ಬಾಂಡ್’ಗಳ ನಡುವಿನ ‘ಬಾಂಡ್’ನ ಮೇಲೆ ಕ್ಲಿಕ್ ಮಾಡಿ. |
02:37 | ಒಂದು ‘ಡಬಲ್ ಬಾಂಡ್’, ರೂಪುಗೊಂಡಿದೆ. |
02:40 | ಪಡೆದ ರಚನೆಯು Cyclohexene(C6H10) (ಸೈಕ್ಲೋಹೆಕ್ಸೀನ್ ಸಿ-ಸಿಕ್ಸ್-ಎಚ್-ಟೆನ್) ಆಗಿದೆ. |
02:44 | ನಾವು ‘ಸೈಕ್ಲೋಹೆಕ್ಸೀನ್’ಅನ್ನು ‘ಸೈಕ್ಲೋಹೆಕ್ಸಾಡಾಈನ್’ಗೆ ಮತ್ತು ಆನಂತರ ‘ಬೆಂಜೀನ್’ಗೆ ಪರಿವರ್ತಿಸೋಣ. |
02:51 | Current element ‘ಕಾರ್ಬನ್’ ಆಗಿದೆ ಎಂದು ಖಚಿತಪಡಿಸಿಕೊಳ್ಳಿ. |
02:56 | Eraser ಟೂಲ್ನ ಮೇಲೆ ಕ್ಲಿಕ್ ಮಾಡಿ. |
02:58 | ಅಕ್ಕಪಕ್ಕದ ಒಂದು ಜೊತೆ ‘ಕಾರ್ಬನ್’ ಪರಮಾಣುಗಳಿಂದ ಒಂದೊಂದು ‘ಹೈಡ್ರೋಜನ್ ಬಾಂಡ್’ಅನ್ನು ತೆಗೆದುಹಾಕಿ. |
03:03 | Add a bond or change the multiplicity of the existing one ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
03:09 | ತೆಗೆದುಹಾಕಿದ ‘ಹೈಡ್ರೋಜನ್ ಬಾಂಡ್’ಗಳ ನಡುವಿನ ‘ಬಾಂಡ್’ನ ಮೇಲೆ ಕ್ಲಿಕ್ ಮಾಡಿ. |
03:13 | ಎರಡನೆಯ ‘ಡಬಲ್ ಬಾಂಡ್’, ರೂಪುಗೊಂಡಿದೆ. |
03:16 | ಪಡೆದ ರಚನೆಯು Cyclohexadiene(C6H8) (ಸೈಕ್ಲೋಹೆಕ್ಸಾಡಾಈನ್ ಸಿ-ಸಿಕ್ಸ್-ಎಚ್-ಏಟ್) ಆಗಿದೆ. |
03:22 | ಹೀಗೆಯೇ, ಮೂರನೆಯ ‘ಡಬಲ್ ಬಾಂಡ್’ಅನ್ನು ರೂಪಿಸಲು ಈ ಪ್ರಕ್ರಿಯೆಯನ್ನು ನಾವು ಮತ್ತೆ ಮಾಡೋಣ. |
03:28 | ಪಡೆದ ರಚನೆಯು Benzene(C6H6) (ಬೆಂಜೀನ್ ಸಿ-ಸಿಕ್ಸ್-ಎಚ್-ಸಿಕ್ಸ್) ಆಗಿದೆ. |
03:33 | ಒಂದು ಅಸೈನ್ಮೆಂಟ್ ಎಂದು, |
03:35 | * ‘ಸೈಕ್ಲೋಬ್ಯುಟೇನ್’ ರಚನೆಯನ್ನು ‘ಡ್ರಾ’ ಮಾಡಿ ಮತ್ತು ‘ಸೈಕ್ಲೋಬ್ಯುಟಾಡಾಈನ್’ಗೆ ಪರಿವರ್ತಿಸಿ. |
03:39 | * ‘ಸೈಕ್ಲೋಪೆಂಟೇನ್’ ರಚನೆಯನ್ನು ‘ಡ್ರಾ’ ಮಾಡಿ ಮತ್ತು ‘ಸೈಕ್ಲೋಪೆಂಟಾಡಾಈನ್’ಗೆ ಪರಿವರ್ತಿಸಿ. |
03:45 | ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಹೀಗೆ ಕಾಣಬೇಕು. |
03:49 | ಇನ್ನುಮುಂದೆ ನಾವು ‘ಬೆಂಜೀನ್’ನ ‘ಡೆರಿವೇಟಿವ್ಸ್’ ಬಗ್ಗೆ ತಿಳಿಯೋಣ. |
03:53 | ವಿವಿಧ ರಾಸಾಯನಿಕ ಸಂಯುಕ್ತಗಳನ್ನು ಪಡೆಯಲು, ‘ಬೆಂಜೀನ್’ನಲ್ಲಿಯ ‘ಹೈಡ್ರೋಜನ್’ಗಳನ್ನು ‘ಫಂಕ್ಷನಲ್ ಗ್ರುಪ್’ಗಳಿಂದ ಬದಲಿಸಬಹುದು. |
03:59 | ‘ಹೈಡ್ರೋಜನ್’ಗೆ ಬದಲಾಗಿ ಸೇರಿಸುವ ‘ಫಂಕ್ಷನಲ್ ಗ್ರುಪ್’ಗಳೆಂದರೆ, |
04:02 | ‘ಫ್ಲೋರೋ’ (F), |
04:03 | ‘ಮಿಥೈಲ್’ (CH3), |
04:04 | ‘ನೈಟ್ರೋ’ (NO2), |
04:05 | ’ಹೈಡ್ರಾಕ್ಸೀ’ (OH) ಮತ್ತು |
04:06 | ಇನ್ನೂ ಕೆಲವು. |
04:08 | ‘ಬೆಂಜೀನ್’ನ ರಚನೆಯನ್ನು ‘ಕಾಪಿ’ ಮಾಡಿ, ‘ಡಿಸ್ಪ್ಲೇ ಏರಿಯಾ’ದ ಮೇಲೆ ಎರಡು ಸಲ ‘ಪೇಸ್ಟ್’ ಮಾಡೋಣ. |
04:13 | ‘ಬೆಂಜೀನ್’ನ ರಚನೆಯನ್ನು ಆಯ್ಕೆಮಾಡಲು Select one or more objects ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
04:18 | ‘ಕಾಪಿ’ ಮಾಡಲು Ctrl+C ಒತ್ತಿ ಮತ್ತು ರಚನೆಗಳನ್ನು ಪೇಸ್ಟ್ ಮಾಡಲು Ctrl+V ಎರಡು ಸಲ ಒತ್ತಿ. |
04:24 | ಮೊದಲನೆಯ ‘ಬೆಂಜೀನ್’ನ ರಚನೆಯಲ್ಲಿ, ‘ಹೈಡ್ರೋಜನ್’ಗೆ ಬದಲಾಗಿ ‘ಫ್ಲೋರಿನ್’ ಪರಮಾಣುವನ್ನು ಸೇರಿಸೋಣ. |
04:30 | ಕೀಬೋರ್ಡ್ ಮೇಲಿನ 'F' ಒತ್ತಿ. |
04:32 | Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
04:35 | Hydrogen ಅನ್ನು Fluorine (ಫ್ಲೋರೀನ್) ನಿಂದ ಬದಲಿಸಲು ಅದರ ಮೇಲೆ ಕ್ಲಿಕ್ ಮಾಡಿ. |
04:40 | ಪಡೆದ ರಚನೆಯು Fluorobenzene (ಫ್ಲೋರೋಬೆಂಜೀನ್) ಆಗಿದೆ. |
04:44 | ಆನಂತರ, ಎರಡನೆಯ ‘ಬೆಂಜೀನ್’ನಲ್ಲಿಯ ‘ಹೈಡ್ರೋಜನ್’ಗೆ ಬದಲಾಗಿ ಪರಮಾಣುಗಳ ಒಂದು ಸಮೂಹವನ್ನು ಸೇರಿಸೋಣ. |
04:50 | Add or modify a group of atoms ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
04:54 | ಯಾವುದೇ ಒಂದು ‘ಹೈಡ್ರೋಜನ್’ನ ಮೇಲೆ ಕ್ಲಿಕ್ ಮಾಡಿ. |
04:57 | ‘ಹೈಡ್ರೋಜನ್’, ಮಿನುಗುವ ಕರ್ಸರ್ ಹೊಂದಿದ ಹಸಿರು ಬಣ್ಣದ ಬಾಕ್ಸ್ ನ ಒಳಗೆ ಇದೆ. |
05:03 | ನಾವು ‘ಹೈಡ್ರೋಜನ್’ಅನ್ನು ಒಂದು ‘ಮಿಥೈಲ್ ಗ್ರುಪ್’ನಿಂದ ಬದಲಿಸೋಣ. |
05:06 | ‘ಹೈಡ್ರೋಜನ್’ಅನ್ನು ತೆಗೆದುಹಾಕಿ ಮತ್ತು ದೊಡ್ಡಕ್ಷರ C, H ಹಾಗೂ 3 ಗಳನ್ನು ಟೈಪ್ ಮಾಡಿ. |
05:12 | ‘ಡಿಸ್ಪ್ಲೇ ಏರಿಯಾ’ದ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ. |
05:15 | ಪಡೆದ ರಚನೆಯು ‘ಮಿಥೈಲ್ ಬೆಂಜೀನ್’ ಆಗಿದೆ. |
05:19 | ಮೂರನೆಯ ‘ಬೆಂಜೀನ್’ನ ‘ಹೈಡ್ರೋಜನ್’ಅನ್ನು ‘ನೈಟ್ರೋ ಗ್ರುಪ್’ನಿಂದ ಬದಲಿಸೋಣ. |
05:24 | ಯಾವುದೇ ಒಂದು ‘ಹೈಡ್ರೋಜನ್’ನ ಮೇಲೆ ಕ್ಲಿಕ್ ಮಾಡಿ. |
05:27 | ‘ಹೈಡ್ರೋಜನ್’ಅನ್ನು ತೆಗೆದುಹಾಕಿ ಮತ್ತು ದೊಡ್ಡಕ್ಷರ N, O ಹಾಗೂ 2 ಗಳನ್ನು ಟೈಪ್ ಮಾಡಿ. |
05:32 | ಪಡೆದ ರಚನೆಯು ‘ನೈಟ್ರೋಬೆಂಜೀನ್’ ಆಗಿದೆ. |
05:36 | ‘ಬೆಂಜೀನ್ ರಿಂಗ್’ನಲ್ಲಿ, ‘ಕಾರ್ಬನ್’ನ ಸ್ಥಾನಗಳನ್ನು ನೋಡೋಣ. |
05:40 | ‘ಬೆಂಜೀನ್’ನಲ್ಲಿ, ಆರು ‘ಕಾರ್ಬನ್’ನ ಪರಮಾಣುಗಳಿಗೆ 1 ರಿಂದ 6 ಸಂಖ್ಯೆಗಳನ್ನು ಕೊಡಲಾಗಿದೆ. |
05:45 | ‘ಹೈಡ್ರೋಜನ್’ಅನ್ನು ಬದಲಿಸುವ ಮೊದಲು ಈ ಆರು ಸ್ಥಾನಗಳು ಸರಿಸಮವಾಗಿವೆ. |
05:51 | ‘ಹೈಡ್ರೋಜನ್’ಅನ್ನು ‘ಫಂಕ್ಷನಲ್ ಗ್ರುಪ್’ನಿಂದ ಬದಲಿಸಿದಾಗ ರಿಂಗ್ ನ ‘ಇಲೆಕ್ಟ್ರಾನ್ ಡೆನ್ಸಿಟೀ’ ಬದಲಾಗುತ್ತದೆ. |
05:57 | ‘ಇಲೆಕ್ಟ್ರಾನ್ ಡೆನ್ಸಿಟೀ’, ‘ಸಬ್ಸ್ಟಿಟ್ಯುಯಂಟ್’ನ ಮೇಲೆ ಅವಲಂಬಿಸಿದೆ. |
06:01 | ‘ಬೆಂಜೀನ್’ನ ‘ಮೋನೊ-ಸಬ್ಸ್ಟಿಟ್ಯೂಟೆಡ್’ ಸಂಯುಕ್ತದ ಈ ಸ್ಥಾನಗಳಲ್ಲಿ: |
06:06 | * 1 ಮತ್ತು 4- ‘ಪ್ಯಾರಾ’ ಎಂದು, |
06:09 | * 2 ಮತ್ತು 6- ‘ಆರ್ಥೋ’ ಎಂದು, |
06:12 | * 3 ಮತ್ತು 5- ‘ಮೆಟಾ’ ಎಂದು ಬದಲಾಯಿಸಬಹುದು. |
06:15 | ಈಗ ‘ಮಿಥೈಲ್ ಬೆಂಜೀನ್’ ರಚನೆಯನ್ನು ಇನ್ನೊಂದು ‘ಮಿಥೈಲ್ ಗ್ರುಪ್’ನಿಂದ ಬದಲಿಸೋಣ. |
06:20 | Add or modify a group of atoms ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
06:24 | ‘ರಿಂಗ್’ನಲ್ಲಿ, ಎರಡನೆಯ ‘ಹೈಡ್ರೋಜನ್’ನ ಸ್ಥಾನದ ಮೇಲೆ ಕ್ಲಿಕ್ ಮಾಡಿ. |
06:28 | ಹಸಿರು ಬಾಕ್ಸ್ ನಲ್ಲಿಯ ‘ಹೈಡ್ರೋಜನ್’ಅನ್ನು ‘ಮಿಥೈಲ್ ಗ್ರುಪ್’ನಿಂದ ಬದಲಿಸಲು, |
06:32 | ದೊಡ್ಡಕ್ಷರ C, H ಹಾಗೂ3 ಗಳನ್ನು ಟೈಪ್ ಮಾಡಿ. |
06:35 | ಪಡೆದ ಈ ಹೊಸ ರಚನೆಯು ‘ಆರ್ಥೋ-ಝೈಲೀನ್’ ಆಗಿದೆ. |
06:39 | ನಾವು ‘ನೈಟ್ರೋ ಬೆಂಜೀನ್’ಅನ್ನು ‘ಕಾರ್ಬಾಕ್ಸಿ ಗ್ರುಪ್’ನಿಂದ ಬದಲಿಸೋಣ. |
06:44 | ‘ರಿಂಗ್’ನಲ್ಲಿ, ನಾಲ್ಕನೆಯ ‘ಹೈಡ್ರೋಜನ್’ನ ಸ್ಥಾನದ ಮೇಲೆ ಕ್ಲಿಕ್ ಮಾಡಿ. |
06:48 | ಹಸಿರು ಬಾಕ್ಸ್ ನಲ್ಲಿಯ ‘ಹೈಡ್ರೋಜನ್’ಅನ್ನು ‘ಕಾರ್ಬಾಕ್ಸಿ ಗ್ರುಪ್’ನಿಂದ ಬದಲಿಸಲು, |
06:52 | ದೊಡ್ಡಕ್ಷರ C, O, O,H ಗಳನ್ನು ಟೈಪ್ ಮಾಡಿ. |
06:57 | ಪಡೆದ ಈ ಹೊಸ ರಚನೆಯು ‘ಪ್ಯಾರಾ-ನೈಟ್ರೋಬೆಂಜೋಯಿಕ್ ಆಸಿಡ್’ ಆಗಿದೆ. |
07:02 | ಈ ಪ್ರಕ್ರಿಯೆಯನ್ನು ‘ಅನ್-ಡು’ ಮಾಡಲು Ctrl+Z ಒತ್ತಿ. |
07:05 | ‘ನೈಟ್ರೋ ಬೆಂಜೀನ್’ನ ಮೂರನೆಯ ‘ಹೈಡ್ರೋಜನ್’ ಸ್ಥಾನವನ್ನು ‘ನೈಟ್ರೋ ಗ್ರುಪ್’ನಿಂದ ಬದಲಿಸಿ. |
07:11 | ಹೈಡ್ರೋಜನ್’ಅನ್ನು ತೆಗೆದುಹಾಕಿ ಮತ್ತು ದೊಡ್ಡಕ್ಷರ N, O ಹಾಗೂ 2 ಗಳನ್ನು ಟೈಪ್ ಮಾಡಿ. |
07:17 | ಪಡೆದ ಈ ಹೊಸ ರಚನೆಯು ‘ಮೆಟಾ-ಡೈನೈಟ್ರೋಬೆಂಜೀನ್’ ಆಗಿದೆ. |
07:22 | ಒಂದು ಅಸೈನ್ಮೆಂಟ್ ಎಂದು, |
07:24 | ‘ಬೆಂಜೀನ್’ನ ಏಳು ರಚನೆಗಳನ್ನು ‘ಡ್ರಾ’ ಮಾಡಿ. |
07:25 | ಕೆಳಗಿನವುಗಳ ಯಾವುದೇ ಒಂದು ‘ಹೈಡ್ರೋಜನ್’ಅನ್ನು ಬದಲಿಸಿ: |
07:28 | ಮೊದಲನೆಯ ‘ಬೆಂಜೀನ್’ನಲ್ಲಿ ‘ಬ್ರೋಮೋ’ದಿಂದ (Br), |
07:30 | ಎರಡನೆಯ ‘ಬೆಂಜೀನ್’ನಲ್ಲಿ ‘ಅಯೊಡೋ’ದಿಂದ (I), |
07:32 | ಮೂರನೆಯ ‘ಬೆಂಜೀನ್’ನಲ್ಲಿ ‘ಹೈಡ್ರಾಕ್ಸೀ’ಯಿಂದ (OH), |
07:34 | ನಾಲ್ಕನೆಯ ‘ಬೆಂಜೀನ್’ನಲ್ಲಿ ‘ಅಮೈನೋ’ದಿಂದ (NH2), |
07:36 | ಐದನೆಯ ‘ಬೆಂಜೀನ್’ನಲ್ಲಿ ‘ಇಥೈಲ್’ನಿಂದ (C2H5), |
07:39 | ಅಲ್ಲದೇ, ಆರನೆಯ ‘ಬೆಂಜೀನ್’ನಲ್ಲಿಯ ಯಾವುದೇ ಎರಡು ‘ಹೈಡ್ರೋಜನ್’ಗಳನ್ನು ‘ಕ್ಲೋರಿನ್’(Cl) ಪರಮಾಣುಗಳಿಂದ, ಹಾಗೂ |
07:44 | ಏಳನೆಯ ‘ಬೆಂಜೀನ್’ನಲ್ಲಿಯ ಮೊದಲನೆಯ ಮತ್ತು ನಾಲ್ಕನೆಯ ‘ಹೈಡ್ರೋಜನ್’ ಸ್ಥಾನಗಳನ್ನು ‘ಕಾರ್ಬಾಕ್ಸಿ ಗ್ರುಪ್’(COOH) ಗಳಿಂದ ಬದಲಿಸಿ. |
07:51 | ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಹೀಗೆ ಕಾಣಬೇಕು. |
07:55 | ಈಗ, ಎರಡು ರಚನೆಗಳನ್ನು ಒಂದುಗೂಡಿಸಲು ಕಲಿಯೋಣ. |
07:57 | ನಾವು ಒಂದು ಹೊಸ ವಿಂಡೋವನ್ನು ತೆರೆಯೋಣ. |
08:00 | Current element ‘ಕಾರ್ಬನ್’ ಆಗಿದೆ ಎಂದು ಖಚಿತಪಡಿಸಿಕೊಳ್ಳಿ. |
08:04 | Add a four membered cycle ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
08:07 | ‘ಡಿಸ್ಪ್ಲೇ ಏರಿಯಾ’ದ ಮೇಲೆ ಎರಡು ಸಲ ಕ್ಲಿಕ್ ಮಾಡಿ. |
08:10 | Select one or more objects ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
08:14 | ಎರಡನೆಯ ರಚನೆಯ ಮೇಲೆ ಕ್ಲಿಕ್ ಮಾಡಿ. |
08:16 | ಅದನ್ನು ಎಳೆದುತನ್ನಿ ಮತ್ತು ಮೊದಲನೆಯ ರಚನೆಯ ಸಮೀಪದಲ್ಲಿ, |
08:20 | ಅವುಗಳು ಒಂದನ್ನೊಂದು ಸ್ಪರ್ಶಿಸುವಂತೆ ಇರಿಸಿ. |
08:23 | ರಚನೆಯನ್ನು ಆಯ್ಕೆಮಾಡಲು Ctrl+A ಒತ್ತಿ. |
08:26 | Merge two molecules ಎನ್ನುವ ಟೂಲ್, ಸಕ್ರಿಯವಾಗುತ್ತದೆ. |
08:30 | ಅಣುಗಳನ್ನು ಒಂದುಗೂಡಿಸಲು Merge two molecules ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
08:34 | ರಚನೆಗಳು ಒಂದುಗೂಡುವುದನ್ನು ನೋಡಲು ಅವುಗಳನ್ನು ಎಳೆಯಿರಿ. |
08:38 | ನಾವು ಕಲಿತಿರುವುದನ್ನು ಸಾರಾಂಶಗೊಳಿಸೋಣ. |
08:41 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
08:43 | ‘ಸೈಕ್ಲೋಹೆಕ್ಸೇನ್’ಅನ್ನು, ‘ಸೈಕ್ಲೋಹೆಕ್ಸೀನ್’ಗೆ ಪರಿವರ್ತಿಸುವುದು, |
08:46 | ‘ಸೈಕ್ಲೋಹೆಕ್ಸೀನ್’ಅನ್ನು, ‘ಬೆಂಜೀನ್’ಗೆ ಪರಿವರ್ತಿಸುವುದು, |
08:49 | ‘ಬೆಂಜೀನ್’ನ ‘ಹೈಡ್ರೋಜನ್’ಗೆ ಬದಲಾಗಿ ಫ್ಲೋರೋ(F), ಮಿಥೈಲ್(CH3), ನೈಟ್ರೋ(NO2) ಮತ್ತು ಕಾರ್ಬಾಕ್ಸಿ (COOH) ಗುಂಪುಗಳನ್ನು ಸೇರಿಸುವುದು, |
08:55 | ಎರಡು ‘ಫೋರ್ ಮೆಂಬರ್ಡ್ ಸೈಕಲ್’ಗಳನ್ನು ಒಂದುಗೂಡಿಸುವುದು ಇತ್ಯಾದಿಗಳನ್ನು ಕಲಿತಿದ್ದೇವೆ. |
08:58 | ಇಲ್ಲಿ ಒಂದು ಅಸೈನ್ಮೆಂಟ್ ಇದೆ. |
09:00 | ಇವುಗಳನ್ನು ಒಂದುಗೂಡಿಸಿ: * ಎರಡು ‘ಬೆಂಜೀನ್’ ಅಣುಗಳು |
09:02 | * ಎರಡು ‘ಪೆಂಟೇನ್’ ರಚನೆಗಳು |
09:04 | * ‘ಸೈಕ್ಲೋಪೆಂಟೇನ್’ ಮತ್ತು ‘ಸೈಕ್ಲೋಹೆಕ್ಸೇನ್’ ಅಣುಗಳು |
09:08 | ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಹೀಗೆ ಕಾಣಿಸಬೇಕು. |
09:12 | ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. http://spoken-tutorial.org/What_is_a_Spoken_Tutorial |
09:15 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
09:19 | ಒಳ್ಳೆಯ ‘ಬ್ಯಾಂಡ್‌ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:23 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:27 | ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:31 | ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
09:37 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
09:41 | ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ. |
09:48 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
09:53 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………….. |
09:57 | ವಂದನೆಗಳು. |