C-and-Cpp/C3/Strings/Kannada
From Script | Spoken-Tutorial
Revision as of 12:58, 10 December 2014 by Vasudeva ahitanal (Talk | contribs)
Time | Narration |
00:01 | c ಮತ್ತು c++ ನಲ್ಲಿ ಸ್ಟ್ರಿಂಗ್ಸ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: |
00:08 | ಸ್ಟ್ರಿಂಗ್ ಎಂದರೇನು? |
00:10 | ಸ್ಟ್ರಿಂಗ್ ಅನ್ನು ಡಿಕ್ಲೇರ್ ಮಾಡುವ ಬಗೆ, |
00:13 | ಸ್ಟ್ರಿಂಗ್ ಅನ್ನು ಇನಿಶಿಯಲೈಸ್ ಮಾಡುವ ಬಗೆ, |
00:15 | ಸ್ಟ್ರಿಂಗ್ ಅನ್ನು ಉಪಯೋಗಿಸಿ ಕೆಲವು ಉದಾಹರಣೆಗಳು. |
00:17 | ಸಾಮಾನ್ಯವಾಗಿ ಆಗುವ ಕೆಲವು ಎರರ್ ಗಳನ್ನೂ ಮತ್ತು ಅವುಗಳನ್ನು ಬಗೆಹರಿಸುವ ರೀತಿಯನ್ನೂ ನೋಡೋಣ. |
00:22 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.04 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ. |
00:35 | ಸ್ಟ್ರಿಂಗ್ ಗೆ ಪೀಠಿಕೆಯೊಂದಿಗೆ ಆರಂಭಿಸೋಣ. |
00:38 | ಸ್ತ್ರಿಂಗ್ ಎಂಬುದು ಒಂದು ಡಾಟಾ ಐಟಮ್. ಇದರಲ್ಲಿ ಹಲವು ಕ್ಯಾರೆಕ್ಟರ್ ಗಳು ಕ್ರಮದಲ್ಲಿ ಜೋಡಿಸಲ್ಪಟ್ಟಿರುತ್ತವೆ. |
00:44 | ಸ್ಟ್ರಿಂಗ್ ನ ಗಾತ್ರವು ಯಾವಾಗಲೂ, ಸ್ಟ್ರಿಂಗ್ ನ ಉದ್ದ ಪ್ಲಸ್ ಒಂದು ಆಗಿರುತ್ತದೆ. |
00:49 | ಈಗ ಸ್ಟ್ರಿಂಗ್ ಅನ್ನು ಡಿಕ್ಲೇರ್ ಮಾಡುವ ಬಗೆಯನ್ನು ಹೇಳುತ್ತೇನೆ. |
00:52 | ಇದರ ಸಿಂಟ್ಯಾಕ್ಸ್ ಹೀಗಿದೆ : |
00:55 | ಕೇರ್, ಸ್ಟ್ರಿಂಗ್ ನ ಹೆಸರು , ಮತ್ತು ಗಾತ್ರ. |
00:59 | ಕೇರ್ ಎಂಬುದು ಡಾಟಾ ಟೈಪ್, ಸ್ಟ್ರಿಂಗ್ ನ ಹೆಸರು ಎಂಬುದು, ಸ್ಟ್ರಿಂಗ್ ಗೆ ನಾವು ಕೊಡುವ ಹೆಸರು, ಮತ್ತು ಇಲ್ಲಿ ನಾವು ಗಾತ್ರವನ್ನು ಕೊಡಬಹುದು. |
01:06 | ಉದಾಹರಣೆಗೆ, ಇಲ್ಲಿ ನಾವು, ಹತ್ತು ಸೈಸ್ ನ ನೇಮ್ಸ್ ಎಂಬ ಕ್ಯಾರೆಕ್ಟರ್ ಸ್ಟ್ರಿಂಗ್ ಅನ್ನು ಡಿಕ್ಲೇರ್ ಮಾಡಿದ್ದೇವೆ. |
01:13 | ಈಗ ನಾವು ಒಂದು ಉದಾಹರಣೆಯನ್ನು ನೋಡೋಣ. |
01:15 | ನಾನೀಗಾಗಲೇ ಪ್ರೊಗ್ರಾಮ್ ಅನ್ನು ಟೈಪ್ ಮಾಡಿದ್ದೇನೆ, ಅದನ್ನು ಒಪನ್ ಮಾಡುತ್ತೇನೆ. |
01:19 | ನಮ್ಮ ಫೈಲ್ ನ ಹೆಸರು ಸ್ಟ್ರಿಂಗ್ ಡಾಟ್ ಸಿ ಎಂಬುದನ್ನು ಗಮನಿಸಿ. |
01:23 | ಈ ಪ್ರೊಗ್ರಾಮ್ ನಲ್ಲಿ, ನಾವು ಯೂಸರ್ ಇಂದ ಒಂದು ಶಬ್ದವನ್ನು ಇನ್ಪುಟ್ ಆಗಿ ಪಡೆದು ಅದನ್ನು ಪ್ರಿಂಟ್ ಮಾಡುತ್ತೇವೆ. |
01:29 | ಈಗ ಕೋಡ್ ಅನ್ನು ವಿವರಿಸುತ್ತೇನೆ. |
01:32 | ಇವು ನಮ್ಮ ಹೆಡರ್ ಫೈಲ್ ಗಳು. |
01:34 | ಇಲ್ಲಿ, ಸ್ಟ್ರಿಂಗ್ ಡಾಟ್ ಹೆಚ್ (string.h) ಎಂಬುದು, ಸ್ಟ್ರಿಂಗ್ ಅನ್ನು ಉಪಯೋಗಿಸಲು ಬೇಕಾದ ಸ್ಟ್ರಿಂಗ್ ನ ಡಿಕ್ಲರೇಶನ್, ಫಂಕ್ಷನ್ ಮತ್ತು ಕಾನ್ಸ್ಟಂಟ್ ಗಳನ್ನು ಹೊಂದಿರುತ್ತದೆ. |
01:43 | ನಾವು ಸ್ಟ್ರಿಂಗ್ ಅನ್ನು ಉಪಯೋಗಿಸುವಾಗಲೆಲ್ಲ, ಈ ಹೆಡರ್ ಫೈಲ್ ಅನ್ನು ಸೇರಿಸಿಕೊಳ್ಳಬೇಕು. |
01:47 | ಇದು ನಮ್ಮ ಮೈನ್ ಫಂಕ್ಷನ್. |
01:49 | ಇಲ್ಲಿ, ನಾವು, ಮೂವತ್ತು ಗಾತ್ರದ ಎಸ್ ಟಿ ಆರ್ ನೇಮ್ (strname) ಎಂಬ ಸ್ಟ್ರಿಂಗ್ ಅನ್ನು ಡಿಕ್ಲೇರ್ ಮಾಡುತ್ತಿದ್ದೇವೆ. |
01:55 | ಇಲ್ಲಿ, ನಾವು ಒಂದು ಶಬ್ದವನ್ನು ಯೂಸರ್ ಇಂದ ಪಡೆಯುತ್ತಿದ್ದೇವೆ. |
01:58 | ಸ್ಟ್ರಿಂಗ್ ಅನ್ನು ರೀಡ್ ಮಾಡಲು, ಪರ್ಸೆಂಟ್ ಎಸ್(%s) ಎಂಬ ಫಾರ್ಮ್ಯಾಟ್ ಸ್ಪೆಸಿಫೈರ್ ನೊಂದಿಗೆ ಸ್ಕ್ಯಾನ್ ಎಫ್(scanf) ಫಂಕ್ಷನ್ ಅನ್ನು ಉಪಯೋಗಿಸಬಹುದು. |
02:05 | ಸ್ಟ್ರಿಂಗ್ ನೊಡನೆ ಸ್ಪೇಸ್ ಗಳನ್ನು ಸೇರಿಸಿಕೊಳ್ಳಲು, ನಾವು ಕ್ಯಾರೆಟ್ ಸೈನ್ ಮತ್ತು ಸ್ಲ್ಯಾಶ್ ಎನ್ ಅನ್ನು ಉಪಯೋಗಿಸುತ್ತಿದ್ದೇವೆ. |
02:11 | ನಂತರ ನಾವು ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುತ್ತೇವೆ, |
02:13 | ಮತ್ತು ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. |
02:16 | ಈಗ save ಅನ್ನು ಒತ್ತಿ. |
02:18 | ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
02:20 | ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. |
02:30 | ಕಂಪೈಲ್ ಮಾಡಲು, gcc ಸ್ಪೇಸ್ string.c ಸ್ಪೇಸ್ –o (ಹೈಫನ್ ಒ) ಸ್ಪೇಸ್ str (ಎಸ್ ಟಿ ಆರ್) ಎಂದು ಟೈಪ್ ಮಾಡಿ, ಮತ್ತು Enter ಅನ್ನು ಒತ್ತಿ. |
02:40 | ಎಕ್ಸಿಕ್ಯೂಟ್ ಮಾಡಲು, ./str (ಡಾಟ್ ಸ್ಲ್ಯಾಶ್ ಎಸ್ ಟಿ ಆರ್) ಎಂದು ಟೈಪ್ ಮಾಡಿ. |
02:43 | ಈಗ Enter ಅನ್ನು ಒತ್ತಿ. |
02:46 | Enter the string(ಎಂಟರ್ ದ ಸ್ಟ್ರಿಂಗ್) ಎಂದು ಇಲ್ಲಿ ತೋರಿಸುತ್ತದೆ. |
02:49 | ನಾನು, Talk To A Teacher (ಟಾಕ್ ಟು ಅ ಟೀಚರ್) ಎಂದು ಟೈಪ್ ಮಾಡುತ್ತೇನೆ. |
02:56 | ಈಗ enter ಅನ್ನು ಒತ್ತಿ. |
02:58 | The string is (ದ ಸ್ಟ್ರಿಂಗ್ ಈಸ್) Talk To A Teacher ಎಂದು ಔಟ್ ಪುಟ್ ತೋರಿಸುತ್ತದೆ. |
03:03 | ಈಗ, ನಮ್ಮ ಸ್ಲೈಡ್ ಗೆ ಹಿಂತಿರುಗೋಣ. |
03:06 | ಇಲ್ಲಿಯವರೆಗೆ, ನಾವು, ಸ್ಟ್ರಿಂಗ್ ನ ಡಿಕ್ಲರೇಶನ್ ಬಗೆಗೆ ಚರ್ಚಿಸಿದೆವು. |
03:10 | ಈಗ, ಸ್ಟ್ರಿಂಗ್ ಅನ್ನು ಹೇಗೆ ಇನಿಶಿಯಲೈಸ್ ಮಾಡುವುದೆಂದು ಚರ್ಚಿಸೋಣ. |
03:13 | ಇದಕ್ಕೆ ಸಿಂಟ್ಯಾಕ್ಸ್ ಹೀಗಿದೆ : |
03:16 | char var_name[size] = string (ಕೇರ್ ವೇರ್ ನೇಮ್ ಸೈಸ್ ಈಸ್ ಈಕ್ವಲ್ ಟು ಸ್ಟ್ರಿಂಗ್) |
03:20 | ಉದಾಹರಣೆಗೆ, ಇಲ್ಲಿ ನಾವು, ಹತ್ತು ಸೈಸ್ ನ ನೇಮ್ ಎಂಬ ಕ್ಯಾರಕ್ಟರ್ ಸ್ಟ್ರಿಂಗ್ ಅನ್ನು ಡಿಕ್ಲೇರ್ ಮಾಡಿದ್ದೇವೆ, ಮತ್ತು priya(ಪ್ರಿಯ) ಎಂಬುದು ನಮ್ಮ ಸ್ಟ್ರಿಂಗ್. |
03:28 | ಮತ್ತೊಂದು ಸಿಂಟ್ಯಾಕ್ಸ್ ಹೀಗಿದೆ : |
03:31 | char var_name[ ] = {'S', 't', 'r', 'i', 'n', 'g'} (ಕೇರ್ ವೇರ್ ನೇಮ್ ಈಸ್ ಈಕ್ವಲ್ ಟು ಸಿಂಗಲ್ ಕೋಟ್ಸ್ ಒಳಗೆ ಸ್ಟ್ರಿಂಗ್) |
03:36 | ಉದಾಹರಣೆಗೆ, char names[10] = (ಕೇರ್ ನೇಮ್ಸ್ ಹತ್ತು ಈಸ್ ಈಕ್ವಲ್ ಟು ) ಸಿಂಗಲ್ ಕೋಟ್ಸ್ ನ ಒಳಗೆ priya(ಪ್ರಿಯ) |
03:42 | ನಾನೀಗ, ಮೊದಲನೇ ಸಿಂಟ್ಯಾಕ್ಸ್ ಅನ್ನು ಹೇಗೆ ಉಪಯೋಗಿಸುವುದೆಂದು ಉದಾಹರಣೆಯೊಂದಿಗೆ ತೋರಿಸುತ್ತೇನೆ. |
03:48 | ಎಡಿಟರ್ ಗೆ ಹಿಂದಿರುಗಿ. ನಾವು ಒಂದು ಮಾದರಿ ಉದಾಹರಣೆಯನ್ನು ನೋಡೋಣ. |
03:52 | ಮೊದಲು, ನಿಮ್ಮ ಕೀಬೋರ್ಡ ನಲ್ಲಿ shift, Ctrl, ಮತ್ತು s ಕೀ ಗಳನ್ನು ಒಮ್ಮೆಗೇ ಒತ್ತಿ. |
03:58 | ಈಗ ಫೈಲ್ ಅನ್ನು stringinitialize (ಸ್ಟ್ರಿಂಗ್ ಇನಿಶಿಯಲೈಸ್) ಎಂಬ ಹೆಸರಿನಿಂದ ಸೇವ್ ಮಾಡಿ. |
04:03 | ಈಗ save ಅನ್ನು ಒತ್ತಿ. |
04:06 | ಈಗ ನಾವು ಸ್ಟ್ರಿಂಗ್ ಅನ್ನು ಇನಿಶಿಯಲೈಸ್ ಮಾಡುತ್ತಿದ್ದೇವೆ. |
04:08 | ಹಾಗಾಗಿ, ಐದನೆ ಲೈನ್ ನಲ್ಲಿ,ಈಸ್ ಈಕ್ವಲ್ ಟು ಮತ್ತು ಡಬಲ್ ಕೋಟ್ಸ್ ನ ಒಳಗೆ Spoken Tutorial (ಸ್ಪೋಕನ್ ಟ್ಯುಟೋರಿಯಲ್ ) ಎಂದು ಟೈಪ್ ಮಾಡಿ. |
04:20 | ಈಗ save ಅನ್ನು ಒತ್ತಿ. |
04:22 | ಈಗ, ನಾವು ಸ್ಟ್ರಿಂಗ್ ಅನ್ನು ಪ್ರಿಂಟ್ ಮಾತ್ರ ಮಾಡುತ್ತಿರುವುದರಿಂದ, ಈ ಎರಡು ಲೈನ್ ಗಳನ್ನು ತೆಗೆಯಿರಿ. |
04:27 | save ಅನ್ನು ಒತ್ತಿ. |
04:30 | ಎಕ್ಸಿಕ್ಯೂಟ್ ಮಾಡೋಣ. |
04:31 | ನಮ್ಮ ಟರ್ಮಿನಲ್ ಗೆ ಹಿಂದಿರುಗಿ. |
04:33 | ಕಂಪೈಲ್ ಮಾಡಲು, gcc ಸ್ಪೇಸ್ stringinitialize.c (ಸ್ಟ್ರಿಂಗ್ ಇನಿಶಿಯಲೈಸ್ ಡಾಟ್ ಸಿ) ಸ್ಪೇಸ್ –o(ಹೈಫನ್ ಒ) ಸ್ಪೇಸ್ str2 (ಎಸ್ ಟಿ ಆರ್ ಟು) ಎಂದು ಟೈಪ್ ಮಾಡಿ. |
04:44 | string.c ಫೈಲ್ ನ ಔಟ್ ಪುಟ್ ಪ್ಯಾರಾಮೀಟರ್ ಅನ್ನು ಓವರ್ ರೈಟ್ ಮಾಡದಿರಲು, ಇಲ್ಲಿ, str2 ಎಂದು ಬರೆದಿದ್ದೇವೆ. |
04:54 | enter ಅನ್ನು ಒತ್ತಿ. |
04:56 | ಎಕ್ಸಿಕ್ಯೂಟ್ ಮಾಡಲು, ./str2(ಡಾಟ್ ಸ್ಲ್ಯಾಶ್ ಎಸ್ ಟಿ ಆರ್ ಟು) ಎಂದು ಟೈಪ್ ಮಾಡಿ, enter ಅನ್ನು ಒತ್ತಿ. |
05:00 | The string is(ದ ಸ್ಟ್ರಿಂಗ್ ಈಸ್) Spoken-Tutorial (ಸ್ಪೋಕನ್ ಟ್ಯುಟೋರಿಯಲ್) ಎಂದು ಔಟ್ ಪುಟ್ ತೋರಿಸುತ್ತದೆ. |
05:06 | ಈಗ ನಾವು ಎದುರಿಸುವ ಕೆಲವು ಸಾಮಾನ್ಯ ಎರರ್ ಗಳನ್ನು ನೋಡೋಣ. |
05:09 | ನಮ್ಮ ಪ್ರೊಗ್ರಾಮ್ ಗೆ ಹಿಂದಿರುಗಿ. |
05:11 | ಇಲ್ಲಿ, ಸ್ಟ್ರಿಂಗ್ ನ ಬದಲು ಸ್ಟಿಂಗ್ ಎಂದು ಟೈಪ್ ಮಾಡಿದೆವು ಎಂದೆಣಿಸಿ. |
05:16 | ಈಗ save ಅನ್ನು ಒತ್ತಿ. |
05:18 | ಎಕ್ಸಿಕ್ಯೂಟ್ ಮಾಡೋಣ. |
05:19 | ನಮ್ಮ ಟರ್ಮಿನಲ್ ಗೆ ಹಿಂದಿರುಗಿ. |
05:21 | ಮೊದಲಿನಂತೆ ಕಂಪೈಲ್ ಮಾಡಿ. |
05:23 | ನಾವು ಒಂದು ಎರರ್ ಅನ್ನು ನೋಡಬಹುದು. |
05:25 | sting.h: no such file or directory (ಸ್ಟಿಂಗ್ ಡಾಟ್ ಹೆಚ್ ನೊ ಸಚ್ ಫೈಲ್ ಆರ್ ಡೈರೆಕ್ಟರಿ) |
05:28 | compilation terminated(ಕಂಪೈಲೇಶನ್ ಟರ್ಮಿನೇಟೆಡ್). |
05:30 | ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. |
05:32 | ಈ ಎರರ್ ಬರಲು ಕಾರಣ, ಸ್ಟಿಂಗ್ ಡಾಟ್ ಹೆಚ್ ಎಂಬ ಹೆಡರ್ ಫೈಲ್ ಅನ್ನು ಕಂಪೈಲರ್ ಗೆ ಹುಡುಕಲು ಸಾಧ್ಯವಾಗಿಲ್ಲ. |
05:39 | ಹಾಗಾಗಿ ಈ ಎರರ್ ತೋರಿಸುತ್ತಿದೆ. |
05:41 | ಈ ಎರರ್ ಅನ್ನು ಸರಿಪಡಿಸೋಣ. |
05:43 | ಇಲ್ಲಿ, ಆರ್ ಅನ್ನು ಟೈಪ್ ಮಾಡಿ. |
05:45 | ಈಗ save ಅನ್ನು ಒತ್ತಿ. |
05:46 | ಪುನಃ ಎಕ್ಸಿಕ್ಯೂಟ್ ಮಾಡೋಣ. |
05:47 | ನಮ್ಮ ಟರ್ಮಿನಲ್ ಗೆ ಹಿಂದಿರುಗಿ. |
05:50 | ಮೊದಲಿನಂತೆ ಕಂಪೈಲ್ ಮಾಡಿ, ಮೊದಲಿನಂತೆ ಎಕ್ಸಿಕ್ಯೂಟ್ ಮಾಡಿ. |
05:54 | ಹೌದು, ಇದು ಕೆಲಸ ಮಾಡುತ್ತಿದೆ. |
05:56 | ಈಗ ಮತ್ತೊಂದು ಸಾಮಾನ್ಯವಾಗಿ ಆಗುವ ಎರರ್ ಅನ್ನು ನೋಡೋಣ. |
05:59 | ನಮ್ಮ ಪ್ರೊಗ್ರಾಮ್ ಗೆ ಹಿಂದಿರುಗಿ. |
06:02 | ಇಲ್ಲಿ, ಕೇರ್ ನ ಬದಲು, ಇಂಟ್ ಎಂದು ಟೈಪ್ ಮಾಡಿದೆ ಎಂದೆಣಿಸಿ. |
06:06 | ಈಗ, save ಅನ್ನು ಒತ್ತಿ. |
06:07 | ಈಗ ಏನಾಗುತ್ತದೆ ಎಂದು ನೋಡೋಣ. |
06:09 | ನಮ್ಮ ಟರ್ಮಿನಲ್ ಗೆ ಹಿಂದಿರುಗಿ. |
06:11 | ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡೋಣ. |
06:15 | ಮೊದಲಿನಂತೆ ಕಂಪೈಲ್ ಮಾಡಿ. |
06:17 | ನಾವು ಒಂದು ಎರರ್ ಅನ್ನು ನೋಡಬಹುದು. |
06:19 | Wide character array initialized from non-wide string (ವೈಡ್ ಕ್ಯಾರಕ್ಟರ್ ಅರೇ ಇನಿಶಿಯಲೈಸ್ಡ್ ಫ್ರಮ್ ನಾನ್ ವೈಡ್ ಸ್ಟ್ರಿಂಗ್). |
06:24 | format %s expects argument of type 'char, ' but argument 2 has type 'int'(ಫಾರ್ಮ್ಯಾಟ್ ಪರ್ಸೆಂಟ್ ಎಸ್ ಎಕ್ಸ್ಪೆಕ್ಟ್ಸ್ ಆರ್ಗ್ಯುಮೆಂಟ್ ಆಫ್ ಟೈಪ್ ಕೇರ್ ಬಟ್ ಆರ್ಗ್ಯುಮೆಂಟ್ ಟು ಹ್ಯಾಸ್ ಟೈಪ್ ಇಂಟ್) . |
06:32 | ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. |
06:36 | ಏಕೆಂದರೆ ನಾವು ಪರ್ಸೆಂಟ್ ಎಸ್ ಅನ್ನು ಸ್ಟ್ರಿಂಗ್ ಗೆ ಫಾರ್ಮ್ಯಾಟ್ ಸ್ಪೆಸಿಫೈರ್ ಆಗಿ ಉಪಯೋಗಿಸಿದ್ದೇವೆ, |
06:42 | ಮತ್ತು ಇದನ್ನು ನಾವು ಇಂಟಿಜರ್ ಡೇಟಾ ಟೈಪ್ ಇಂದ ಇನಿಶಿಯಲೈಸ್ ಮಾಡುತ್ತಿದ್ದೇವೆ. |
06:47 | ಈ ಎರರ್ ಅನ್ನು ಸರಿಪಡಿಸೋಣ. |
06:49 | ಇಲ್ಲಿ ಕೇರ್ ಎಂದು ಟೈಪ್ ಮಾಡಿ. |
06:51 | save ಅನ್ನು ಒತ್ತಿ. |
06:53 | ಎಕ್ಸಿಕ್ಯೂಟ್ ಮಾಡೋಣ. ನಮ್ಮ ಟರ್ಮಿನಲ್ ಗೆ ಹಿಂದಿರುಗಿ. |
06:56 | ಮೊದಲಿನಂತೆ ಕಂಪೈಲ್ ಮಾಡಿ, ಮೊದಲಿನಂತೆ ಎಕ್ಸಿಕ್ಯೂಟ್ ಮಾಡಿ. |
07:00 | ಹೌದು, ಇದು ಕೆಲಸ ಮಾಡುತ್ತಿದೆ. |
07:03 | ಈಗ ಇದೇ ಪ್ರೊಗ್ರಾಮ್ ಅನ್ನು c++ ನಲ್ಲಿ ಹೇಗೆ ಎಕ್ಸಿಕ್ಯೂಟ್ ಮಾಡುವುದೆಂದು ನೋಡೋಣ. |
07:08 | ನಮ್ಮ ಪ್ರೊಗ್ರಾಮ್ ಗೆ ಹಿಂದಿರುಗಿ. |
07:11 | ನಮ್ಮ string.c(ಸ್ಟ್ರಿಂಗ್ ಡಾಟ್ ಸಿ) ಫೈಲ್ ಅನ್ನು ಒಪನ್ ಮಾಡೋಣ. |
07:15 | ನಾವು ಇಲ್ಲಿ ಕೋಡ್ ಅನ್ನು ಬದಲಾಯಿಸೋಣ. |
07:18 | ಮೊದಲು, ನಿಮ್ಮ ಕೀಬೋರ್ಡ ನಲ್ಲಿ shift, Ctrl ಮತ್ತು s ಕೀ ಗಳನ್ನು ಒಮ್ಮೆಗೇ ಒತ್ತಿ. |
07:25 | ಈಗ, ಫೈಲ್ ಅನ್ನು ಡಾಟ್ cpp ಎಂಬ ಎಕ್ಸ್ಟೆಂಶನ್ ನೊಂದಿಗೆ ಸೇವ್ ಮಾಡಿ, |
07:29 | ಮತ್ತು save ಅನ್ನು ಒತ್ತಿ. |
07:33 | ಈಗ ಹೆಡರ್ ಫೈಲ್ ಅನ್ನು ಐಒಸ್ಟ್ರೀಮ್(iostream) ಎಂದು ಬದಲಾಯಿಸೋಣ. |
07:38 | ಯೂಸಿಂಗ್ ಸ್ಟೇಟ್ಮೆಂಟ್ ಅನ್ನು ಸೇರಿಸೋಣ. |
07:43 | ಈಗ save ಅನ್ನು ಒತ್ತಿ. |
07:47 | ಈಗ ಈ ಡಿಕ್ಲರೇಶನ್ ಅನ್ನು ತೆಗೆಯೋಣ, |
07:50 | ಮತ್ತು ಸ್ಟ್ರಿಂಗ್ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡೋಣ. |
07:53 | ಸ್ಟ್ರಿಂಗ್ ಸ್ಪೇಸ್ ಎಸ್ ಟಿ ಆರ್ ನೇಮ್ ಸೆಮಿಕೋಲನ್(string strname;) ಎಂದು ಟೈಪ್ ಮಾಡಿ. |
07:59 | save ಅನ್ನು ಒತ್ತಿ. |
08:02 | ಪ್ರಿಂಟ್ ಎಫ್ ಸ್ಟೇಟ್ಮೆಂಟ್ ನ ಬದಲು ಸಿಔಟ್ ಸ್ಟೇಟ್ಮೆಂಟ್ ಅನ್ನು ಟೈಪ್ ಮಾಡಿ. |
08:07 | ಇಲ್ಲಿ ಕ್ಲೋಸಿಂಗ್ ಬ್ರಾಕೆಟ್ ಅನ್ನು ತೆಗೆಯಿರಿ. |
08:11 | ಸ್ಕ್ಯಾನ್ ಎಫ್ ಸ್ಟೇಟ್ಮೆಂಟ್ ಅನ್ನು ತೆಗೆದು, ಗೆಟ್ ಲೈನ್ ಒಪನಿಂಗ್ ಬ್ರಾಕೆಟ್ ಕ್ಲೋಸಿಂಗ್ ಬ್ರಾಕೆಟ್ ಮತ್ತು ಬ್ರಾಕೆಟ್ ನ ಒಳಗೆ, ಸಿಇನ್ ಎಸ್ ಟಿ ಆರ್ ನೇಮ್ ( getline(cin,strname) ) ಎಂದು ಟೈಪ್ ಮಾಡಿ. |
08:24 | ಕೊನೆಯಲ್ಲಿ ಸೆಮಿಕೊಲನ್ ಅನ್ನು ಟೈಪ್ ಮಾಡಿ. |
08:28 | ಈಗ, ಪುನಃ, ಪ್ರಿಂಟ್ ಎಫ್ ಸ್ಟೇಟ್ಮೆಂಟ್ ನ ಬದಲು ಸಿಔಟ್ ಸ್ಟೇಟ್ಮೆಂಟ್ ಅನ್ನು ಬರೆಯಿರಿ. |
08:36 | ಫಾರ್ಮ್ಯಾಟ್ ಸ್ಪೆಸಿಫೈರ್ ಮತ್ತು ಸ್ಲ್ಯಾಶ್ ಎನ್ ಅನ್ನು ತೆಗೆಯಿರಿ. |
08:40 | ಈಗ comma ಅನ್ನು ತೆಗೆಯಿರಿ. |
08:42 | ಎರಡು ಓಪನಿಂಗ್ ಆಂಗಲ್ ಬ್ರಾಕೆಟ್ ಗಳನ್ನು ಟೈಪ್ ಮಾಡಿ, ಇಲ್ಲಿ ಬ್ರಾಕೆಟ್ ಅನ್ನು ತೆಗೆಯಿರಿ. |
08:49 | ಎರಡು ಆಂಗಲ್ ಬ್ರಾಕೆಟ್ ಅನ್ನು ಟೈಪ್ ಮಾಡಿ, ಮತ್ತು ಡಬಲ್ ಕೋಟ್ಸ್ ನ ಒಳಗೆ ಬ್ಯಾಕ್ ಸ್ಲ್ಯಾಶ್ ಎನ್ ಅನ್ನು ಟೈಪ್ ಮಾಡಿ. |
08:54 | ಮತ್ತು save ಅನ್ನು ಒತ್ತಿ. |
08:58 | ಇಲ್ಲಿ, ನಾವು ಎಸ್ ಟಿ ಆರ್ ನೇಮ್(strname) ಎಂದು ಒಂದು ಸ್ಟ್ರಿಂಗ್ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ. |
09:03 | c++ ನಲ್ಲಿ ನಾವು ಫಾರ್ಮ್ಯಾಟ್ ಸ್ಪೆಸಿಫೈರ್ ಅನ್ನು ಉಪಯೋಗಿಸುವುದಿಲ್ಲವಾದ್ದರಿಂದ, strname ಎಂಬುದು ಸ್ಟ್ರಿಂಗ್ ವೇರಿಯೇಬಲ್ ಎಂಬುದು ಕಂಪೈಲರ್ ಗೆ ತಿಳಿಯಬೇಕು. |
09:13 | ಇಲ್ಲಿ, ಕ್ಯಾರೆಕ್ಟರ್ ಗಳನ್ನು ಅನುಕ್ರಮವಾಗಿ ಪಡೆಯಲು, ಗೆಟ್ ಲೈನ್ (getline) ಅನ್ನು ಉಪಯೋಗಿಸುತ್ತೇವೆ. |
09:18 | ಇದು, ಅವುಗಳನ್ನು ಸ್ಟ್ರಿಂಗ್ ಆಗಿ ಇಡುತ್ತದೆ. |
09:22 | ಈಗ, ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. ನಮ್ಮ ಟರ್ಮಿನಲ್ ಗೆ ಹಿಂದಿರುಗಿ. |
09:27 | ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡೋಣ. |
09:30 | ಕಂಪೈಲ್ ಮಾಡಲು, g++ ಸ್ಪೇಸ್ string.cpp(ಸ್ಟ್ರಿಂಗ್ ಡಾಟ್ ಸಿಪಿಪಿ) ಸ್ಪೇಸ್ –o (ಹೈಫನ್) ಸ್ಪೇಸ್ str3 (ಎಸ್ ಟಿ ಆರ್ ಥ್ರೀ) ಎಂದು ಟೈಪ್ ಮಾಡಿ, enter ಅನ್ನು ಒತ್ತಿ. |
09:41 | ಎಕ್ಸಿಕ್ಯೂಟ್ ಮಾಡಲು, ./str3 (ಡಾಟ್ ಸ್ಲ್ಯಾಶ್ ಎಸ್ ಟಿ ಆರ್ ಥ್ರೀ) ಎಂದು ಟೈಪ್ ಮಾಡಿ, |
09:46 | Enter ಅನ್ನು ಒತ್ತಿ. |
09:47 | Enter the string(ಎಂಟರ್ ದ ಸ್ಟ್ರಿಂಗ್) ಎಂದು ತೋರಿಸುತ್ತದೆ. |
09:50 | ನಾನು Talk To A Teacher(ಟಾಕ್ ಟು ಅ ಟೀಚರ್) ಎಂದು ಕೊಡುತ್ತೇನೆ. |
09:55 | ಈಗ, Enter ಅನ್ನು ಒತ್ತಿ. |
09:57 | The string is Talk To A Teacher(ದ ಸ್ಟ್ರಿಂಗ್ ಈಸ್ ಟಾಕ್ ಟು ಅ ಟೀಚರ್) ಎಂದು ಔಟ್ ಪುಟ್ ತೋರಿಸುತ್ತದೆ. |
10:03 | ಈ ಔಟ್ ಪುಟ್ ನಮ್ಮ c ಕೋಡ್ ನ ಔಟ್ ಪುಟ್ ನಂತೆಯೇ ಇರುವುದನ್ನು ನಾವು ನೋಡಬಹುದು. |
10:07 | ಈಗ ನಮ್ಮ ಸ್ಲೈಡ್ ಗೆ ಹಿಂದಿರುಗಿ. |
10:10 | ಸಾರಾಂಶ ತಿಳಿಯೋಣ. |
10:11 | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತ ಅಂಶಗಳು : |
10:13 | ಸ್ಟ್ರಿಂಗ್ ಗಳು |
10:14 | ಸ್ಟ್ರಿಂಗ್ ನ ಡಿಕ್ಲರೇಶನ್ |
10:16 | ಉದಾಹರಣೆಗೆ: char strname[30] (ಕೇರ್ ಎಸ್ ಟಿ ಆರ್ ನೇಮ್ ಥರ್ಟಿ) |
10:20 | ಸ್ಟ್ರಿಂಗ್ ಅನ್ನು ಇನಿಶಿಯಲೈಸ್ ಮಾಡುವುದು |
10:21 | ಉದಾಹರಣೆಗೆ : char strname[30] = “Talk To A Teacher” (ಕೇರ್ ಎಸ್ ಟಿ ಆರ್ ನೇಮ್ ಥರ್ಟಿ ಈಸ್ ಈಕ್ವಲ್ ಟು ಟಾಕ್ ಟು ಅ ಟೀಚರ್) |
10:26 | ಎರಡನೇ ಸಿಂಟ್ಯಾಕ್ಸ್ ಅನ್ನು ಉಪಯೋಗಿಸಿ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡಲು, ಪ್ರೊಗ್ರಾಮ್ ಅನ್ನು, ಅಸೈನ್ಮೆಂಟ್ ಆಗಿ ಬರೆಯಿರಿ. |
10:34 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. |
10:37 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
10:40 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
10:44 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. |
10:49 | ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
10:54 | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. |
11:01 | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. |
11:04 | ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
11:12 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. |
11:16 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. |
11:20 | ಧನ್ಯವಾದಗಳು. |