Thunderbird/C2/Account-settings-and-configuring/Kannada
From Script | Spoken-Tutorial
Revision as of 11:56, 11 August 2014 by PoojaMoolya (Talk | contribs)
Time | Narration |
---|---|
00:00 | ಅಕೌಂಟ್ ಸೆಟ್ಟಿಂಗ್ ಮತ್ತು ಜೀಮೇಲ್ ಅಕೌಂಟ್ ನ ಕಾನ್ಫಿಗರಿಂಗ್ (Configuring) ಅನ್ನು ತಿಳಿಸಿಕೊಡುವ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:09 | ಈ-ಮೇಲ್ ಅಕೌಂಟ್ ಗೆ ಹೊಸ ಫೋಲ್ಡರ್ ಅನ್ನು ಸೇರಿಸುವುದನ್ನು, |
00:13 | ಮೆಸೇಜ್ ಅನ್ನು ಹುಡುಕಲು ಅಡ್ವಾನ್ಸ್ದ್ ಫಿಲ್ಟರ್ ಗಳನ್ನು (advanced filters) ಸೆಟ್ ಮಾಡಲು, |
00:18 | ಮೆಸೇಜ್ ಫಿಲ್ಟರ್ ಗಳನ್ನು ನಿರ್ವಹಿಸಲು ಕಲಿಯಲಿದ್ದೇವೆ. |
00:20 | ಇದರೊಂದಿಗೆ ನಾವು: |
00:22 | ಕೃತಕವಾಗಿ (manually) ಯಾಹೂ (Yahoo) ಅಕೌಂಟ್ ಗಳನ್ನು ಸಂರಚಿಸಲು (Configure), |
00:25 | ಮಲ್ಟಿಪಲ್ ಈಮೇಲ್ ಅಕೌಂಟ್ ಗಳನ್ನು ನಿರ್ವಹಿಸಲು, |
00:28 | ಮೇಲ್ ಅಕೌಂಟ್ ನ ಅಕೌಂಟ್ ಸೆಟ್ಟಿಂಗ್ ಗಳನ್ನು ಬದಲಿಸಲು, |
00:32 | ಈ-ಮೇಲ್ ಅಕೌಂಟ್ ಅನ್ನು ಡಿಲೀಟ್ ಮಾಡಲು ಕಲಿಯಲಿದ್ದೇವೆ. |
00:34 | ಇಲ್ಲಿ ನಾವು ಉಬಂಟು (Ubuntu) 12.04 ವಿನಲ್ಲಿ ಮೋಜಿಲ ಥಂಡರ್ ಬರ್ಡ್ (Mozilla Thunderbird) 13.0.1 ಅನ್ನು ಬಳಸುತ್ತಿದ್ದೇವೆ. |
00:42 | ಲಾಂಚರ್ ನಲ್ಲಿರುವ Thunderbird ಐಕಾನ್ ಮೇಲೆ ಕ್ಲಿಕ್ ಮಾಡಿ. |
00:45 | ಥಂಡರ್ ಬರ್ಡ್ ವಿಂಡೋ ತೆರೆದುಕೊಳ್ಳುತ್ತದೆ. |
00:48 | ಈ ಅಕೌಂಟ್ ಗೆ ಇನ್ನೊಂದು ಫ಼ೋಲ್ಡರ್ ಅನ್ನು ಸೇರಿಸೋಣ. |
00:51 | ಬಲ ಬದಿಯ ಫಲಕದಿಂದ STUSERONE at GMAIL dot COM ಎಂಬ ಅಕೌಂಟ್ ಅನ್ನು ಆಯ್ಕೆ ಮಾಡೋಣ. |
00:58 | STUSERONE at gmail dot com ಅಕೌಂಟ್ ನ ಮೇಲೆ ಮೌಸ್ ನ ಬಲ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು New Folder ಅನ್ನು ಆರಿಸಿ. |
01:06 | New Folder ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
01:09 | Name ಫೀಲ್ದ್ ನಲ್ಲಿ Important Mails ಎಂದು ನಮೂದಿಸಿ (ಎಂಟರ್). |
01:13 | Create Folder ಅನ್ನು ಕ್ಲಿಕ್ ಮಾಡಿ. ಫ಼ೋಲ್ಡರ್ ರಚಿತವಾಗುತ್ತದೆ! |
01:18 | ಈಗ ನೀವು ಪ್ರಮುಖವಾದ ಮೇಲ್ ಗಳನ್ನು ಇನ್ ಬಾಕ್ಸ್ ನಿಂದ ಈ ಹೊಸ ಫ಼ೋಲ್ಡರ್ ಗೆ ವರ್ಗಾಯಿಸಬಹುದು. |
01:23 | ಈ ಮೇಲ್ ಗಳನ್ನು ಇನ್ ಬಾಕ್ಸ್ ನಿಂದ ಆರಿಸಿ, ಎಳೆದು(ಡ್ರ್ಯಾಗ್) ಮಾಡಿ Important Mails ಫ಼ೋಲ್ಡರ್ ಗೆ ತಂದು ಬಿಡಿ. |
01:30 | ಬೇರೆ ಬೇರೆ ಫಿಲ್ಟರ್ ಆಯ್ಕೆಗಳನ್ನು ಬಳಸಿ ಮೆಸೇಜ್ ಅನ್ನು ಹುಡುಕಬಹುದು (ಸರ್ಚ್ ಮಾಡಬಹುದು). |
01:36 | ಈಗ ಎಡ ಫಲಕದಿಂದ STUSERONE@gmail dot com ಅಕೌಂಟ್ ಅನ್ನು ಆಯ್ದುಕೊಳ್ಳಿ. |
01:43 | ಬಲ ಫಲಕದಲ್ಲಿನ Advanced Features ಅಡಿಯಲ್ಲಿರುವ Search Messages ಅನ್ನು ಕ್ಲಿಕ್ ಮಾಡಿ. |
01:48 | Search Messages ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
01:52 | ಮೆಸೇಜ್ ಗಳನ್ನು ಹುಡುಕಲು ಡೀಫ಼ಾಲ್ಟ್ ಸೆಟ್ಟಿಂಗ್ ಅನ್ನು ಬಳಸೋಣ. |
01:57 | Match all of the following ಎಂಬ ಆಪ್ಷನ್ ಡೀಫಾಲ್ಟ್ ಆಗಿಯೇ ಸೆಲೆಕ್ಟ್ ಆಗಿದೆ. |
02:02 | subject (ಸಬ್ಜೆಕ್ಟ್) ಮತ್ತು contains (ಕಂಟೈನ್ಸ್) ಡೀಫ಼ಾಲ್ಟ್ ನಿಂದಲೇ ಸೆಲೆಕ್ಟ್ ಆಗಿವೆ. |
02:08 | ಮುಂದಿನ ಕ್ಷೇತ್ರ (field) ದಲ್ಲಿ Ten interesting ಎಂದು ಟೈಪ್ ಮಾಡಿ. Search ಅನ್ನು ಕ್ಲಿಕ್ ಮಾಡಿ. |
02:13 | ವಿಷಯದ ಹೆಸರಿಗೆ ಹೊಂದುವ ಮೇಲ್ ಗಳು ಕಾಣಿಸಿಕೊಳ್ಳುತ್ತವೆ. |
02:18 | ನೀವು ಹುಡುಕಿರುವ ಈ ಮೇಲ್ ಗಳನ್ನು ಸೇವ್ ಕೂಡ ಮಾಡಬಹುದು. |
02:22 | ಟ್ಯುಟೋರಿಯಲ್ ಅನ್ನು ಸ್ವಲ್ಪ ನಿಲ್ಲಿಸಿ ಈ ಅಭ್ಯಾಸಗಳನ್ನು (ಅಸೈನ್ ಮೆಂಟ್) ಮಾಡಿರಿ. |
02:25 | ಮೇಲ್ ಗಳನ್ನು ದಿನಾಂಕಗಳ ಅಧಾರದಲ್ಲಿ ಹುಡುಕಿ ಒಂದು ಫೋಲ್ಡರ್ ನಲ್ಲಿ ಸೇವ್ ಮಾಡಿರಿ. |
02:31 | ಈ ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡೋಣ. |
02:35 | ಈ ಮೇಲ್ ಅಕೌಂಟ್ ಗೆ ಹೊಸ ಫಿಲ್ಟರ್ ಅನ್ನು ರಚಿಸೋಣ.. |
02:39 | ಫಿಲ್ಟರ್ ಎಂದರೆ ನಿಮ್ಮ ಇನ್ ಬಾಕ್ಸ್ ನಲ್ಲಿ ಮೆಸೇಜ್ ಗಳನ್ನು ವಿಂಗಡಿಸಲು ಉಪಯೋಗಿಸಬಹುದಾದ ನಿಯಮಾವಳಿ. |
02:44 | ಇಲ್ಲಿ ನಾವು ಥಂಡರ್ ಬರ್ಡ್ ಎನ್ನುವ ವಿಷಯವನ್ನು ಹೊಂದಿರುವ ಎಲ್ಲಾ ಮೇಲ್ ಗಳನ್ನು Important Mails ಫೋಲ್ಡರ್ ಗೆ ವರ್ಗಾಯಿಸೋಣ. |
02:52 | ಎಡ ಫಲಕದಿಂದ ಅನ್ನು STUSERONE@gmail dot com ಆರಿಸಿ.. |
02:58 | Advanced Features ಅಡಿಯಲ್ಲಿನ , Manage message filters ಅನ್ನು ಕ್ಲಿಕ್ ಮಾಡಿ. |
03:03 | Message Filters ಡಯಲಾಗ್ ಬಾಕ್ಸ್ ಕಾಣಿಸುತ್ತದೆ.. New ಎನ್ನುವ ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
03:09 | Filter Rules ಡಯಲಾಗ್ ಬಾಕ್ಸ್ ಕಾಣಿಸುತ್ತದೆ, |
03:12 | Filter name ಫೀಲ್ಡ್ ನಲ್ಲಿ Thunderbird ಎನ್ನುವ ಸಬ್ಜೆಕ್ಟ್ ಅನ್ನು ನಮೂದಿಸಿ. |
03:16 | ಮತ್ತೊಮ್ಮೆ ಫಿಲ್ಟರ್ ಅನ್ನು ಸೆಟ್ ಮಾಡಲು ಡೀಫಾಲ್ಟ್ ಸೆಟ್ಟಿಂಗ್ ಅನ್ನು ಬಳಸೋಣ. |
03:21 | Match all of the following ಎಂಬ ಆಪ್ಷನ್ ಡೀಫಾಲ್ಟ್ ಆಗಿಯೇ ಸೆಲೆಕ್ಟ್ ಆಗಿದೆ. |
03:26 | Subject ಮತ್ತು contains ಕೂಡ ಡೀಫಾಲ್ಟ್ ನಿಂದ ಆರಿಸಲ್ಪಟ್ಟಿವೆ. |
03:30 | ಮುಂದಿನ ಕ್ಷೇತ್ರ ದಲ್ಲಿ (field) Thunderbird ಎಂದು ಟೈಪ್ ಮಾಡಿ. |
03:33 | ನಂತರ, Perform these actions ಫೀಲ್ಡ್ ನ ಅಡಿಯಲ್ಲಿ, Move Message to ಎಂದು ಆಪ್ಷನ್ ಅನ್ನು ಬದಲಿಸೋಣ. |
03:41 | ಪಕ್ಕದ ಕೆಳಮುಖದ ಚಿನ್ಹೆಯನ್ನು ಕ್ಲಿಕ್ ಮಾಡಿ, ಬ್ರೌಸ್ ಮಾಡಿ ಮತ್ತು Important Mails ಫೋಲ್ಡರ್ ಅನ್ನು ಸೆಲೆಕ್ಟ್ ಮಾಡಿ. OK ಅನ್ನು ಕ್ಲಿಕ್ ಮಾಡಿ. |
03:49 | Message Filters ಡಯಲಾಗ್ ಬಾಕ್ಸ್ ನಲ್ಲಿ ಫಿಲ್ಟರ್ ಆದ ಮೆಸೇಜ್ ಕಾಣಿಸುತ್ತದೆ. Run Now ಅನ್ನು ಕ್ಲಿಕ್ ಮಾಡಿ. |
03:58 | ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. Important Mails ಫೋಲ್ಡರ್ ಅನ್ನು ಕ್ಲಿಕ್ ಮಾಡಿ. |
04:04 | Thunderbird ಎಂಬ ಸಬ್ಜೆಕ್ಟ್ ನೊಂದಿಗಿರುವ ಎಲ್ಲಾ ಮೇಲ್ ಗಳು ಈ ಫೋಲ್ದರ್ ಗೆ ವರ್ಗಾಯಿತವಾಗಿರುದನ್ನು ಗಮನಿಸಿ. |
04:12 | ಥಂಡರ್ ಬರ್ಡ್ ಅನ್ನು ಉಪಯೋಗಿಸಿ ಮಲ್ಟಿಪಲ್ ಈ-ಮೇಲ್ ಅಕೌಂಟ್ ಗಳನ್ನು ನಿರ್ವಹಿಸಬಹುದು. |
04:15 | ಹೀಗೆಂದರೆ ನೀವು ಥಂಡರ್ ಬರ್ಡ ಅನ್ನು ಬಳಸಿ ಮೆಸೇಜ್ ಗಳನ್ನು ಪಡೆಯಬಹುದು , ಕಳುಹಿಸಬಹುದು ಹಾಗು ಜೀಮೇಲ್ ಅಲ್ಲದೆ ಯಾಹೂ ಮುಂತಾದ ಅಕೌಂಟ್ ಗಳಲ್ಲಿ ಕೂಡ ಮೇಲ್ ಗಳನ್ನು ನಿರ್ವಹಿಸಬಹುದು. |
04:26 | ನಿಮಗೆ ಈಗಾಗಲೇ ತಿಳಿದಿರುವಂತೆ ಜೀಮೇಲ್ ಅಕೌಂಟ್ ಗಳು ಸ್ವಯಂಚಾಲಿತವಾಗಿ ಥಂಡರ್ ಬರ್ಡ್ ನಲ್ಲಿ ಕಾನ್ಫಿಗರ್ ಆಗುತ್ತವೆ. |
04:31 | ಬೇರೆ ಅಕೌಂಟ್ ಗಳನ್ನು ನಾವು ಕೃತವಾಗಿ ಕಾನ್ಫಿಗರ್ ಮಾಡಬೇಕಾಗುತ್ತದೆ. |
04:35 | STUSERTWO@yahoo dot in ಎನ್ನುವ ಯಾಹೂ ಅಕೌಂಟ್ ಅನ್ನು ಥಂಡರ್ ಬರ್ಡ್ ಅನ್ನು ಬಳಸಿ ಕಾನ್ಫಿಗರ್ ಮಾಡೋಣ. . |
04:44 | ಇಲ್ಲಿ ಈಗಾಗಲೇ ಯಾಹೂ ಅಕೌಂಟ್ ನಲ್ಲಿ POP ಅನ್ನು ಸಮರ್ಥಗೊಳಿಸಲಾಗಿದೆ.. |
04:48 | ಇದನ್ನು ಮಾಡುವುದು ಹೇಗೆ? ಮೊದಲು ಯಾಹೂ ಅಕೌಂಟ್ ಗೆ ಲಾಗ್ ಇನ್ ಅಗೋಣ. |
04:54 | ಹೊಸ ಬ್ರೌಸರ್ ಅನ್ನು ಓಪನ್ ಮಾಡಿ ಅಡ್ಡ್ರೆಸ್ ಬಾರ್ ನಲ್ಲಿ www.yahoo.in ಎಂದು ಟೈಪ್ ಮಾಡಿ. |
05:02 | STUSERTWO at yahoo.in ಎಂಬ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಅನ್ನು ನಮೂದಿಸಿ. |
05:11 | ಮೇಲಿನ ಎಡ ಬದಿಯ ಮೂಲೆಯಿಂದ, Options ಮತ್ತು Mail Options ಅನ್ನು ಕ್ಲಿಕ್ ಮಾಡಿ. |
05:16 | ಎಡ ಫಲಕದಿಂದ POP & Forwarding ಅನ್ನು ಕ್ಲಿಕ್ ಮಾಡಿ. |
05:21 | Access Yahoo Mail via POP ಅನ್ನು ಆರಿಸಿ. |
05:24 | Close the tab ಅನ್ನು ಕ್ಲಿಕ್ ಮಾಡಿ. |
05:28 | ಬದಲಾವಣೆಗಳನ್ನು ಸೇವ್ ಮಾಡಲು ಮೆಸೇಜ್ ನೊಂದಿಗಿರುವ ಒಂದು ಡಯಲಾಗ್ ಬಾಕ್ಸ್ ಕಾಣಿಸುತ್ತದೆ. save ಅನ್ನು ಕ್ಲಿಕ್ ಮಾಡಿ. |
05:33 | ಈಗ ಯಾಹೂವಿನಿಂದ ಲಾಗ್ ಔಟ್ ಆಗೋಣ ಮತ್ತು ಬ್ರೌಸರ್ ಅನ್ನು ಕ್ಲೋಸ್ ಮಾಡೋಣ. |
05:39 | ಈಗ ಬಲ ಫಲಕದಿಂದ, Accounts ನ ಅಡಿಯಲ್ಲಿನ, Create New Account ಅನ್ನು ಕ್ಲಿಕ್ ಮಾಡೊಣ. |
05:45 | Mail Account Setup ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
05:49 | ಈಗ USERTWO ಎಂಬ ಹೆಸರನ್ನು ನಮೂದಿಸೋಣ. |
05:53 | ನಂತರ Email address ನಲ್ಲಿ STUSERTWO@YAHOO.IN ಎಂಬ ಯಾಹೂ ಐ.ಡಿ ಅನ್ನು ನಮೂದಿಸಿ. |
06:03 | ನಂತರ್ ಪಾಸ್ ವರ್ಡ್ ಅನ್ನು ಟೈಪ್ ಮಾಡಿ. Continue ಅನ್ನು ಕ್ಲಿಕ್ ಮಾಡಿ. |
06:10 | Mail Account Setup ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
06:13 | ಅಲ್ಲಿರುವ incoming ಸರ್ವರ್ ನೇಮ್ ಫೀಲ್ಡ್ ನಲ್ಲಿ POP3 ಅನ್ನು ಸೆಲೆಕ್ಟ್ ಮಾಡಿ ಮತ್ತು server hostname ಎಂಬಲ್ಲಿ pop dot mail dot yahoo dot com ಎಂದು ನಮೂದಿಸಿ. |
06:26 | ನಮಗೆ ಇಂಟರ್ ನೆಟ್ ಕನೆಕ್ಷೆನ್ ಇಲ್ಲದಾಗಲೂ ಮೇಲ್ ಗಳನ್ನು ಪರಿಶೀಲಿಸಲು POP3 ಅನ್ನು ಸಮರ್ಥಗೊಳೀಸಿದ್ದೇವೆ. ಹಾಗಾಗಿ ಎಲ್ಲಾ ಮೇಲ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ. |
06:35 | incoming ಫೀಲ್ಡ್ ನಲ್ಲಿ, |
06:37 | port ಮಾಡಲು, 110 ಎಂಬ ಯಾಹೂ ಅಕೌಂಟ್ ನ port ಸಂಖ್ಯೆಯನ್ನು ನಮೂದಿಸಿ. |
06:43 | SSL ಡ್ರಾಪ್ ಡೌನ್ ನಲ್ಲಿ STARTTLS ಅನ್ನು ಸೆಲೆಕ್ಟ್ ಮಾಡಿ. |
06:48 | Authentication ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Normal password ಅನ್ನು ಸೆಲೆಕ್ಟ್ ಮಾಡಿ. |
06:53 | Outgoing ಫೀಲ್ಡ್ ನಲ್ಲಿ, |
06:55 | SMTP ಎಂಬ ಸರ್ವರ್ ನೇಮ್ ಅನ್ನು ಸೆಲೆಕ್ಟ್ ಮಾಡಿ ಮತ್ತು smtp.mail.yahoo.com ಎಂಬ sarver host name ಅನ್ನು ನಮೂದಿಸಿ. |
07:05 | port(ಪೊರ್ಟ್) ಮಾಡಲು, 465 ಎಂಬ ಯಾಹೂ ಅಕೌಂಟ್ ನ port ಸಂಖ್ಯೆಯನ್ನು ನಮೂದಿಸಿ. |
07:12 | SSL ಡ್ರಾಪ್ ಡೌನ್ ನಲ್ಲಿ SSL/TLS ಅನ್ನು ಸೆಲೆಕ್ಟ್ ಮಾಡಿ. |
07:17 | Authentication ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Normal password ಅನ್ನು ಸೆಲೆಕ್ಟ್ ಮಾಡಿ. |
07:23 | username ಫೀಲ್ಡ್ ನಲ್ಲಿ STUSERTWO ಅನ್ನು ನಮೂದಿಸಿ. |
07:28 | Create Account ಬಟನ್ ಸಮರ್ಥವಾಗಿದೆ. |
07:32 | Create Account ಅನ್ನು ಕ್ಲಿಕ್ ಮಾಡಿ. |
07:34 | ಯಾಹೂ ಅಕೌಂಟ್ ಕಾನ್ಫಿಗರ್ ಆಗಿದೆ. |
07:37 | ನಿಮ್ಮ ಇಂಟರ್ ನೆಟ್ ಕನೆಕ್ಷನ್ ಆಧಾರಿಸಿ ಈ ಪ್ರಕ್ರಿಯೆ ಕೆಲ ಕಾಲವನ್ನು ತೆಗೆದುಕೊಳ್ಳುತದೆ. |
07:42 | ಥಂಡರ್ ಬರ್ಡ್ ವಿಂಡೋವಿನ ಬಲ ಫಲಕದಲ್ಲಿ ಯಾಹೂ ಅಕೌಂಟ್ ಕಾಣಿಸಿತ್ತಿರುವುದನ್ನು ಗಮನಿಸಿ. |
07:48 | Inbox ನ ಮೇಲೆ ಕ್ಲಿಕ್ ಮಾಡಿ. |
07:50 | ಯಾಹೂ ಅಕೌಂಟ್ ನಲ್ಲಿರುವ ಎಲ್ಲಾ ಮೇಲ್ ಗಳು ಇಲ್ಲಿ ಡೌನ್ ಲೋಡ್ ಆಗಿರುತ್ತವೆ. |
07:55 | ನೀವು ಥಂಡರ್ ಬರ್ಡ್ ಅನ್ನು ಬಳಸಿ ಯಾಹೂ ಮತ್ತು ಜೀಮೇಲ್ ಅಕೌಂಟ್ ನಿಂದ ಪಡೆದಿರುವ ಎಲ್ಲಾ ಮೆಲ್ ಗಳನ್ನು ನೋಡುವುದರೊಂದಿಗೆ, |
08:01 | ಒಂದೇ ಕೆಲಸದ ಮೂಲಕ 2 ಅಕೌಂಟ್ ಗಳನ್ನು ಕೂಡ ನಿರ್ವಹಿಸಬಹುದು! |
08:05 | ಈಗ ಥಂಡರ್ ಬರ್ಡ್ ನಲ್ಲಿನ ಈ-ಮೇಲ್ ಅಕೌಂಟ್ ಗಳಿಗೆ ಲಭ್ಯವಿರುವ preference settings ಅನ್ನು ಗಮನಿಸಿ, |
08:13 | ನೀವು |
08:14 | ಜೀಮೆಲ್ ಅಕೌಂಟ್ ನಲ್ಲಿ ಸಂಗ್ರಹವಾಗಿರುವ, ಥಂಡರ್ ಬರ್ಡ್ ನ ಮೂಲಕ ಕಳುಹಿಸಿರುವ ಮೇಲ್ ಗಳ ನಕಲು ಪ್ರತಿ (copy)ಯನ್ನು ಪಡೆಯಲು , |
08:20 | ರೀಪ್ಲಾಯ್(reply) ಮಾಡುವಾಗ ಮೂಲ (original) ಮೆಸೇಜ್ ಅನ್ನು ಕೋಟ್ (Quote) ಮಾಡಲು, |
08:24 | ಜಂಕ್ ಮೆಸೇಜ್ ಅನ್ನು ಗುರುತಿಸಲು, |
08:26 | ಕಂಪ್ಯೂಟರ್ ಡಿಸ್ಕ್ ನಲ್ಲಿ ಅವಕಾಶವಿಲ್ಲದಿದ್ದಲ್ಲಿ ಕೆಲ ನಿರ್ದಿಷ್ಟ ಮೆಸೇಜ್ ಗಳನ್ನು ಡೌನ್ ಲೋಡ್ ಮಾಡದಿರಲು ಬಯಸಿದಾದಲ್ಲಿ, |
08:34 | ಎಡ ಫಲಕದಿಂದ ಜೀಮೇಲ್ ಅಕೌಂಟ್ ಅನ್ನು ಸೆಲೆಕ್ಟ್ ಮಾಡಿ. |
08:38 | Thunderbird Mail ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
08:42 | ಬಲ ಫಲಕದಿಂದ, Accounts ನ ಅಡಿಯಲ್ಲಿ, View Settings for this account ಅನ್ನು ಕ್ಲಿಕ್ ಮಾಡಿ. |
08:47 | Account Settings ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
08:50 | ಎಡ ಫಲಕದಿಂದ ಪುನಃ ಜೀಮೇಲ್ ಅಕೌಂಟ್ ಅನ್ನು ಕ್ಲಿಕ್ ಮಾಡಿ. Server Settings ನ ಮೇಲೆ ಕ್ಲಿಕ್ ಮಾಡಿ. |
08:58 | Server Settings ಗಳು ಬಲ ಫಲಕದಲ್ಲಿ ಕಾಣಿಸುತ್ತವೆ. |
09:02 | Check for new messages every ನ ಚೆಕ್ ಬಾಕ್ಸ್ ನಲ್ಲಿ 20 ಎಂದು ನಮೂದಿಸಿ. |
09:08 | ಈಗ ಥಂಡರ್ ಬರ್ಡ್ ಪ್ರತಿ 20 ನಿಮಿಷಗಳಿಗೊಮ್ಮೆ ಮೆಸೇಜ್ ಗಳ ಹುಡುಕಾಟವನ್ನು ಮಾಡುತ್ತದೆ. |
09:12 | Empty Trash on Exit ಬಾಕ್ಸ್ ಅನ್ನು ಪರಿಶೀಲಿಸಿ. |
09:15 | Trash ಫೊಲ್ಡರ್ ನಲ್ಲಿರುವ ಎಲ್ಲಾ ಮೆಸೇಜ್ ಗಳು ಥಂಡರ್ ಬರ್ಡ್ ನಿಂದ ಎಕ್ಸಿಟ್ ಆಗಬೇಕಾದರೆ ಡಿಲೀಟ್ ಆಗುತ್ತವೆ. |
09:22 | ಇದೇ ರೀತಿಯಲ್ಲಿ ನೀವು ಸರ್ವರ್ ಸೆಟ್ಟಿಂಗ್ ಗಳನ್ನು ವ್ಯವಸ್ಥಿತ (customize) ಗೊಳಿಸಬಹುದು. |
09:27 | ಇದೇ ರೀತಿಯಲ್ಲಿ ಈ ಕೆಳಗಿನ ಕೆಲಸಗಳಿಗೆ ನಾವು ಆಯ್ಕೆಗಳನ್ನು (options) ಗೊತ್ತುಪಡಿಸಬಹುದು : |
09:30 | ಮೇಲ್ ನ ನಕಲು ಪ್ರತಿ (copies) ಗಳನ್ನು ರಚಿಸಬಹುದು, |
09:33 | ಡ್ರಾಫ್ಟ್ ಮೇಲ್ ಗಳನ್ನು ಸೇವ್ ಮಾಡಬಹುದು, |
09:35 | ಮೇಲ್ ಗಳು ಸೇವ್ ಆಗಿರುವ ಸ್ಥಳವನ್ನು ಬದಲಿಸಬಹುದು. |
09:39 | ಎಡ ಫಲಕದಿಂದ, Copies & Folders ಅನ್ನು ಕ್ಲಿಕ್ ಮಾಡಿ. |
09:44 | ಬಲ ಫಲಕದಲ್ಲಿ Copies & Folders ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
09:49 | ಡೀಫಾಲ್ಟ್ ಆಪ್ಷನ್ ಗಳನ್ನು ಬದಲಿಸಬೇಡಿ. |
09:53 | Place a copy in ಮತ್ತು Sent folder on ಈ ಎರಡು ಆಪ್ಶನ್ ಗಳು ಈಗಾಗಲೇ ಸೆಲೆಕ್ಟ್ ಆಗಿರುವುದನ್ನು ಗಮಿನಿಸಿ. |
10:00 | disk space ಅನ್ನು ಸೇವ್ ಮಾಡಲು ಸಂಬಂಧಿಸಿದ ಆಪ್ಷನ್ ಗಳನ್ನು ಗೊತ್ತುಪಡಿಸಲು, ಎಡ ಫಲಕದಿಂದ Disc Space ಅನ್ನು ಸೆಲೆಕ್ಟ್ ಮಾಡಿ. |
10:08 | ಈಗ ಬಲ ಫಲಕದಲ್ಲಿ, To save disc space, do not download ಎಂಬ ಆಪ್ಷನ್ ಅನ್ನು ನೋಡಬಹುದು. |
10:16 | Messages larger than ಬಾಕ್ಸ್ ಅನ್ನು ಪರಿಶೀಲಿಸಿ. |
10:19 | KB ಕ್ಷೇತ್ರದಲ್ಲಿ 60 ಎಂದು ನಮೂದಿಸಿ. |
10:24 | ಥಂಡರ್ ಬರ್ಡ್ 60KB ಗಿಂತ ಜಾಸ್ತಿಯಿರುವ ಮೆಸೇಜ್ ಗಳನ್ನು ಡೌನ್ ಲೋಡ್ ಮಾಡುವುದಿಲ್ಲ. |
10:30 | ಥಂಡರ್ ಬರ್ಡ್ ನ ಇನ್ನೊಂದು ಉಪಯುಕ್ತವಾದ ವೈಶಿಷ್ಟ್ಯತೆ ಎಂದರೆ ಅನುಪಯುಕ್ತ (ಜಂಕ್) ಮೆಸೇಜ್ ಗಳನ್ನು ಗುರುತಿಸುವುದು. |
10:35 | ನೀವು ಥಂಡರ್ ಬರ್ಡ್ ಗೆ ಅನುಪಯುಕ್ತ (ಜಂಕ್) ಮತ್ತು ಉಪಯುಕ್ತ (ನಾನ್ ಜಂಕ್) ಮೆಸೇಜ್ ಗಳನ್ನು ಗುರುತಿಸುವ ತರಬೇತಿಯನ್ನು ಕೊಡಬಹುದು. |
10:41 | ಅದನ್ನು ಮಾಡಲು ಮೊದಲು Junk ಸೆಟ್ಟಿಂಗ್ ಗಳನ್ನು ಗೊತ್ತುಪಡಿಸಿ ಮತ್ತು ಮೇಲ್ ಗಳನ್ನು “ junk “ ಮತ್ತು “ non junk” ಎಂದು ಗುರುತಿಸಿ. |
10:48 | ಮೊದಲು, ಕೃತಕವಾಗಿ Junk ಮೇಲ್ ಗಳನ್ನು |
10:52 | ಪ್ರತಿ ಮೇಲ್ ಗೆ Junk Mail ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಗುರುತಿಸಿ. |
10:56 | ನಿಮ್ಮ ಆಯ್ಕೆಗಳನ್ನು ಆಧಾರಿಸಿ, |
10:59 | ಥಂಡರ್ ಬರ್ಡ್ ಸ್ವತಃ “junk” ಮೇಲ್ ಗಳನ್ನು ಗುರುತಿಸುತ್ತದೆ, |
11:03 | ಮತ್ತು Junk ಫೋಲ್ಡರ್ ಗೆ ವರ್ಗಾಯಿಸುತ್ತದೆ. |
11:07 | In the Account Settings ಡಯಲಾಗ್ ಬಾಕ್ಸ್ ನ ಎಡ ಫಲಕದಿಂದ ಅನ್ನು Junk Settings ಕ್ಲಿಕ್ ಮಾಡಿ. |
11:13 | ಬಲ ಫಲಕದಲ್ಲಿ Junk Settings ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
11:18 | Enable adaptive junk mail controls for this account ಬಾಕ್ಸ್ ಡೀಫಾಲ್ಟ್ ನಿಂದಲೇ ಪರಿಶೀಲಿಸಲ್ಪಟ್ಟಿರುವುದನ್ನು ಗಮನಿಸಿ. |
11:27 | Do not mark mail as junk if the sender is in list ನ ಅಡಿಯಲ್ಲಿರುವ ಎಲ್ಲಾ ಆಪ್ಷನ್ ಗಳನ್ನು ಪರಿಶೀಲಿಸಿ. |
11:35 | Move new junk message to ಕ್ಷೇತ್ರವನ್ನು( field) ಸೆಲೆಕ್ಟ್ ಮಾಡಿ ಮತ್ತು Junk folder on ಆಪ್ಷನ್ ಅನ್ನು ಸೆಲೆಕ್ಟ್ ಮಾಡಿ. OK ಅನ್ನು ಕ್ಲಿಕ್ ಮಾಡಿ. |
11:44 | Inbox ನ ಮೇಲೆ ಕ್ಲಿಕ್ ಮಾಡಿ ಮತ್ತು ಮೊದಲ ಮೇಲ್ ಅನ್ನು ಸೆಲೆಕ್ಟ್ ಮಾಡಿ. |
11:48 | ಕೆಳಗಿನ ಫಲಕದಲ್ಲಿ ಮೇಲ್ ನ ಎಲ್ಲಾ ವಿಷಯಗಳು ಕಾಣಿಸುತ್ತವೆ. |
11:52 | Junk ಐಕಾನ್ ಅನ್ನು ಕ್ಲಿಕ್ ಮಾಡಿ. |
11:54 | ಹೆಡ್ದರ್ ನಲ್ಲಿ Junk Mail ಎಂದು ಕಾಣಿಸುತ್ತಿರುವುದನ್ನು ಗಮನಿಸಿ. |
11:58 | ಇದೇ ರೀತಿಯಲ್ಲಿ ಇತರ ಆಯ್ಕೆಗಳನ್ನು ಕೂಡ ಗೊತ್ತುಪಡಿಸಬಹುದು! |
12:03 | ಥಂಡರ್ ಬರ್ಡ್ ನಲ್ಲಿ ಕಾನ್ಫಿಗರ್ ಆಗಿರುವ ಮೇಲ್ ಅನ್ನು ಡಿಲೀಟ್ ಮಾಡಬಹುದೇ? ಹೌದು, ಮಾಡಬಹುದು |
12:10 | ಎಡ ಫಲಕದಿಂದ, STUSERONE@gmail dot com ಎಂಬ ಅಕೌಂಟ್ ಅನ್ನು ಆಯ್ಕೆ ಮಾಡಿ. |
12:16 | ಬಲ ಫಲಕದಿಂದ, Accounts ನ ಅಡಿಯಲ್ಲಿನ View Settings for this account ಅನ್ನು ಸೆಲೆಕ್ಟ್ ಮಾಡಿ. |
12:21 | Account Settings ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
12:25 | ಕೆಳಗಿನ ಎಡ ಮೂಲೆಯಲ್ಲಿ Account Actions ಅನ್ನು ಕ್ಲಿಕ್ ಮಾಡಿ, ನಂತರ Remove Account ಅನ್ನು ಕ್ಲಿಕ್ ಮಾಡಿ. |
12:32 | ಒಂದು ಎಚ್ಚರಿಸುವ (ವಾರ್ನಿಂಗ್) ಮೆಸೇಜ್ ಕಾಣಿಸುತ್ತದೆ. |
12:35 | OK ಯ ಮೇಲೆ ಕ್ಲಿಕ್ ಮಾಡಿದರೆ, ಅಕೌಂಟ್ ಡಿಲೀಟ್ ಅಗುತ್ತದೆ. |
12:39 | ಆದರೆ ಈ ಟ್ಯುಟೋರಿಯಲ್ ನ ಸಲುವಾಗಿ ನಾವೀಗ ಈ ಅಕೌಂಟ್ ಅನ್ನು ಡಿಲೀಟ್ ಮಾಡುವುದು ಬೇಡ. |
12:45 | ಹಾಗಾಗಿ Cancel ಅನ್ನು ಕ್ಲಿಕ್ ಮಾಡಿ. |
12:47 | ಈ ಡಯಲಾಗ್ ಬಾಕ್ಸ್ ಅನ್ನು ಕ್ಲೊಸ್ ಮಾಡೋಣ. |
12:51 | ನೆನಪಿಡಿ, ನಾವು ಯಾವ ಈ-ಮೇಲ್ ಅಕೌಂಟ್ ಅನ್ನು ಡಿಲೀಟ್ ಮಾಡುತ್ತೇವೋ, |
12:53 | ಆ ಈ-ಮೇಲ್ ಅಕೌಂಟ್ ಗೆ ಸಂಬಂಧಿಸಿದ |
12:56 | ಎಲ್ಲಾ ಫೋಲ್ಡರ್ ಮತ್ತು ಮೇಲ್ ಗಳು |
12:58 | ಥಂಡರ್ ಬರ್ಡ್ ನಿಂದ ಡಿಲೀಟ್ ಅಗುತ್ತವೆ. |
13:00 | ಅದಾದ ನಂತರವೂ ಕೂಡ ಅದರ ವಿವರಣೆ ಗಳು ಮೋಜಿಲಾ ಥಂಡರ್ ಬರ್ಡ್ (Mozilla Thunderbird)ವಿಂಡೊವಿನ ಎಡ ಫಲಕದಲ್ಲಿ ಕಾಣಿಸಿಕೊಳ್ಳಬಹುದು. |
13:06 | ಆದರೆ ಪುನಃ ಲಾಗ್ ಇನ್ ಆಗುವಾಗ ಅವು ಕಾಣಿಸಿಕೊಳ್ಳುವುದಿಲ್ಲ. |
13:12 | ಇಲ್ಲಿಗೆ Mozilla Thunderbird 10.0.2 ನ ಮೇಲಿನ ಈ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ. |
13:18 | ಈ ಟ್ಯುಟೋರಿಯಲ್ ನಲ್ಲಿ ನಾವು |
13:20 | ಈಮೇಲ್ ಅಕೌಂಟ್ ಗೆ ಹೊಸ ಫೋಲ್ಡರ್ ಅನ್ನು ಸೇರಿಸುವುದನ್ನು, |
13:24 | ಮೆಸೇಜ್ ಅನ್ನು ಹುಡಕಲು ಅಡ್ವಾನ್ಸ್ದ್ ಫಿಲ್ಟರ್ ಗಳನ್ನು(advanced filters) ಸೆಟ್ ಮಾಡಲು, |
13:28 | ಮೆಸೇಜ್ ಫಿಲ್ಟರ್ ಗಳನ್ನು ನಿರ್ವಹಿಸಲು ಕಲಿತಿದ್ದೇವೆ. |
13:30 | ಇದರೊಂದಿಗೆ ನಾವು: |
13:32 | ಕೃತಕವಾಗಿ (manually) ಯಾಹೂ (Yahoo) ಅಕೌಂಟ್ ಗಳನ್ನು ಸಂರಚಿಸಲು(Configure), |
13:35 | ಮಲ್ಟಿಪಲ್ ಈಮೇಲ್ ಅಕೌಂಟ್ ಗಳನ್ನು ನಿರ್ವಹಿಸಲು, |
13:38 | ಮೇಲ್ ಅಕೌಂಟ್ ನ ಅಕೌಂಟ್ ಸೆಟ್ಟಿಂಗ್ ಗಳನ್ನು ಬದಲಿಸಲು, |
13:40 | ಈಮೇಲ್ ಅಕೌಂಟ್ ಅನ್ನು ಅಳಿಸಲು (Delete) ಕಲಿತಿದ್ದೇವೆ. |
13:44 | ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಕೊಡಲಾಗಿದೆ. |
13:46 | ಒಂದು ಈ-ಮೇಲ್ ಅಕೌಂಟ್ ಅನ್ನು ಕೃತಕವಾಗಿ ರಚಿಸಿ. |
13:49 | ಅಕೌಂಟ್ ಸೆಟ್ಟಿಂಗ್ ಅನ್ನು ಬದಲಾಯಿಸಿ. |
13:52 | archive ಮೆಸೇಜ್ ಗೆ ಪ್ರಿಫರೆನ್ಸ್(ಆಯ್ಕೆಗಳನ್ನು) ಅನ್ನು ಸೆಟ್ ಮಾಡಿ (ಗೊತ್ತುಪಡಿಸಿ). |
13:56 | ಜಂಕ್ ಸೆಟ್ಟಿಂಗ್ ಗೆ ಆಯ್ಕೆ (ಪ್ರಿಫರೆನ್ಸ್) ಅನ್ನು ಬದಲಾಯಿಸಿ. |
14:00 | ಒಂದು ಈ-ಮೇಲ್ ಅಕೌಂಟ್ ಅನ್ನು ಡಿಲೀಟ್ ಮಾಡಿ. |
14:02 | ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ , |
14:05 | ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ. |
14:09 | ನಿಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
14:13 | ಈ ಪಾಠವನ್ನಾಧರಿಸಿ ಸ್ಫೋಕನ್ ಟ್ಯುಟೋರಿಯಲ್ ನ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
14:15 | ಯಾರು ಆನ್¬-ಲೈನ್ ಪರೀಕ್ಷೆಯಲ್ಲಿ ಉತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
14:22 | ಹೆಚ್ಚಿನ ಮಾಹಿತಿಗಾಗಿ, contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
14:29 | ಈ ಪಾಠವು Talk to a Teacher project ಎಂಬ ಪರಿಯೋಜನೆಯ ಭಾಗವಾಗಿದೆ. |
14:33 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
14:40 | ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ. |
14:51 | ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ ಮತ್ತು ಪ್ರವಾಚಕ ಐ.ಐ.ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು. |