LibreOffice-Suite-Writer/C2/Viewing-and-printing-a-text-document/Kannada

From Script | Spoken-Tutorial
Revision as of 14:54, 20 March 2017 by PoojaMoolya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ಲಿಬ್ರೆ ಆಫೀಸ್ ರೈಟರ್ ನಲ್ಲಿ ಡಾಕ್ಯುಮೆಂಟ್ ಅನ್ನು ವೀಕ್ಷಿಸುವ (View) ಮತ್ತು ಅದನ್ನು ಮುದ್ರಿಸುವ (Print) ಬಗೆಗಿರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನೀವು,
00:10 ಡಾಕ್ಯುಮೆಂಟ್ ಅನ್ನು ವೀಕ್ಷಿಸುವುದು (View) ಮತ್ತು
00:12 ಡಾಕ್ಯುಮೆಂಟ್ ಅನ್ನು ಮುದ್ರಿಸುವುದು (Print) ಹೇಗೆ ಎಂದು ಕಲಿಯುವಿರಿ. ಇಲ್ಲಿ ನಾವು ಆಪರೇಟಿಂಗ್ ಸಿಸ್ಟಮ್ ರೂಪದಲ್ಲಿ ಉಬಂಟು ಲಿನಕ್ಸ್ 10.04 ನ್ನು ಹಾಗೂ ಲಿಬ್ರೆ ಆಫೀಸ್ ಸೂಟ್ ನ 3.3.4 ನೇ ಆವೃತ್ತಿಯನ್ನು ಉಪಯೊಗಿಸುತ್ತಿದ್ದೇವೆ.
00:24 ಈಗ ಲಿಬ್ರೆ ಆಫೀಸ್ ರೈಟರ್ ನಲ್ಲಿ ವೀಕ್ಷಣೆಯ (View) ವಿವಿಧ ಪ್ರಕಾರಗಳನ್ನು ಕಲಿಯುವುದರ ಮೂಲಕ ಈ ಟ್ಯುಟೋರಿಯಲ್ ಅನ್ನು ಆರಂಭಿಸೋಣ.
00:31 ರೈಟರ್ ನಲ್ಲಿ ಬಹಳವಾಗಿ ಉಪಯೋಗಿಸುವ ಎರಡು ವೀಕ್ಷಣಾ ಪ್ರಕಾರಗಳಿವೆ.
00:36 ಅವು “Print Layout” ಮತ್ತು “Web Layout” ಎಂದು.
00:39 “Print Layout” ಎನ್ನುವುದು ಡಾಕ್ಯುಮೆಂಟ್ ಮುದ್ರಿತಗೊಂಡಾಗ ಹೇಗೆ ಕಾಣಿಸುತ್ತದೆ ಎನ್ನುವುದನ್ನು ತೋರಿಸುತ್ತದೆ.
00:45 “Web Layout” ಎನ್ನುವುದು ಡಾಕ್ಯುಮೆಂಟ್ ವೆಬ್ ನ ಬ್ರೌಸರ್ ನಲ್ಲಿ ಹೇಗೆ ಕಾಣಿಸುತ್ತದೆ ಎನ್ನುವುದನ್ನು ತೋರಿಸುತ್ತದೆ.
00:50 ಈ ವೀಕ್ಷಣೆ ನಿಮಗೆ ನಿಮ್ಮ ಡಾಕ್ಯುಮೆಂಟ್ ಅನ್ನು HTML ಡಾಕ್ಯುಮೆಂಟನ್ನಾಗಿ ಪರಿವರ್ತಿಸುವಾಗ ಹಾಗೆಯೇ ನಿಮ್ಮ ಡಾಕ್ಯುಮೆಂಟನ್ನು ಪರಿಷ್ಕರಿಸುವುದಕ್ಕಾಗಿ (Edit) ಅದನ್ನು ಫುಲ್ ಸ್ಕ್ರೀನ್ ಮಾಡಬಯಿಸಿದಾಗ ಉಪಯೋಗಕಾರಿಯಾಗಿದೆ.
01:00 “Print Layout” ಎಂಬ ವಿಕಲ್ಪಕ್ಕಾಗಿ “View” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Print Layout” ಎಂಬಲ್ಲಿ ಕ್ಲಿಕ್ ಮಾಡಿ.
01:08 “Web Layout” ಎಂಬ ವಿಕಲ್ಪಕ್ಕಾಗಿ ಮೆನ್ಯು ಬಾರ್ ನಲ್ಲಿ “View” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Web Layout” ಎಂಬಲ್ಲಿ ಕ್ಲಿಕ್ ಮಾಡಿ.
01:19 ಈ ವಿಕಲ್ಪಗಳ ಹೊರತಾಗಿ ನೀವು ನಿಮ್ಮ ಡಾಕ್ಯುಮೆಂಟನ್ನು ಫುಲ್ ಸ್ಕ್ರೀನ್ ಮೊಡ್ ನಲ್ಲಿ ಕೂಡಾ ವೀಕ್ಷಿಸಬಹುದಾಗಿದೆ.
01:26 ಮೆನ್ಯು ಬಾರ್ ನಲ್ಲಿ “View” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Full Screen” ಎಂಬಲ್ಲಿ ಕ್ಲಿಕ್ ಮಾಡಿ.
01:32 ಡಾಕ್ಯುಮೆಂಟನ್ನು ಪರಿಷ್ಕರಿಸಲು ಮತ್ತು ಪ್ರೊಜೆಕ್ಟರ್ ನ ಮೂಲಕ ತೋರಿಸಲು ಫುಲ್ ಸ್ಕ್ರೀನ್ ಮೋಡ್ ಸಹಕಾರಿಯಾಗಿದೆ.
01:39 ಫುಲ್ ಸ್ಕ್ರೀನ್ ನಿಂದ ಹೊರಗೆ ಬರಲು ಕೀಬೋರ್ಡ್ ನಲ್ಲಿ “Escape” ಎಂಬ ಕೀ ಒತ್ತಿ.
01:44 ಈಗ ನಾವು ಡಾಕ್ಯುಮೆಂಟ್ ಎನ್ನುವುದು ಫುಲ್ ಸ್ಕ್ರೀನ್ ಮೋಡ್ ನಿಂದ ಹೊರ ಬಂದಿರುವುದನ್ನು ಗಮನಿಸಬಹುದು.
01:49 ಈಗ View ಎಂಬ ಮೆನ್ಯುವಿನಲ್ಲಿ “Print Layout” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ.
01:53 ಮುಂದೆ ಸಾಗುವ ಮೊದಲು ನಮ್ಮ ಡಾಕ್ಯುಮೆಂಟ್ ನಲ್ಲಿ ಒಂದು ಹೊಸ ಪೇಜ್ ಅನ್ನು ಜೋಡಿಸೊಣ. ಅದಕ್ಕಾಗಿ Insert ಅನ್ನು ಕ್ಲಿಕ್ ಮಾಡಿ, ಅಲ್ಲಿ Manual Break ಅನ್ನು ಕ್ಲಿಕ್ ಮಾಡಿ, ನಂತರ Page break ಎಂಬ ವಿಕಲ್ಪವನ್ನು ಆಯ್ಕೆ ಮಾಡಿ.
02:04 ನಂತರ “OK” ಕ್ಲಿಕ್ ಮಾಡಿ.
02:06 ಇದರ ಬಗ್ಗೆ ವಿಸ್ತೃತವಾಗಿ ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯೋಣ.
02:11 “Zoom” ಎನ್ನುವುದು ಡಾಕ್ಯುಮೆಂಟ್ ಅನ್ನು ವೀಕ್ಷಿಸಲಿರುವ ಮತ್ತೊಂದು ವಿಕಲ್ಪವಾಗಿದೆ.
02:17 ಮೆನ್ಯು ಬಾರ್ ನಲ್ಲಿ “View” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ ನಂತರ “Zoom” ಎಂಬಲ್ಲಿ ಕ್ಲಿಕ್ ಮಾಡಿ.
02:22 “Zoom and View Layout” ಎಂಬ ಡಯಲಗ್ ಬಾಕ್ಸ್ ನಮಗೆ ಕಾಣಸಿಗುತ್ತದೆ.
02:27 ಇಲ್ಲಿ “Zoom factor” ಮತ್ತು “View layout” ಎಂಬ ಎರಡು ಹೆಡಿಂಗ್ ಗಳಿವೆ.
02:34 “Zoom factor” ಎನ್ನುವುದು ಈಗಿರುವ ಡಾಕ್ಯುಮೆಂಟ್ ಅನ್ನು ಮತ್ತು ನಂತರ ತೆರೆಯುವ ಅದೇ ತರಹದ ಎಲ್ಲಾ ಡಾಕ್ಯುಮೆಂಟ್ ಅನ್ನು ತೋರಿಸಲು ಬೇಕಾದ Zoom factor ಅನ್ನು ಸಜ್ಜಾಗಿಸುತ್ತದೆ.
02:43 ಇದರಲ್ಲಿ ತುಂಬಾ ಉಪಯೋಗಕರವಾದ ವಿಕಲ್ಪಗಳಿವೆ, ಅವುಗಳ ಬಗ್ಗೆ ಒಂದೊಂದಾಗಿ ಚರ್ಚಿಸೋಣ.
02:48 “Optimal” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡುವುದರಿಂದ ನಿಮಗೆ ಡಾಕ್ಯುಮೆಂಟಿನ ದೃಶ್ಯವು ಅತ್ಯಂತ ಅನುಕೂಲವಾಗಿ ಕಾಣಸಿಗುತ್ತದೆ.
02:55 “Fit width and height” ಎಂಬ ವಿಕಲ್ಪವು ಡಾಕ್ಯುಮೆಂಟ್ ಅನ್ನು ಪೇಜ್ ನ ಸಂಪೂರ್ಣ ಉದ್ದಗಲಕ್ಕೂ ಪಸರಿಸುತ್ತದೆ ಮತ್ತು ಇದು ಒಮ್ಮೆ ಒಂದು ಪೇಜ್ ಅನ್ನು ಪ್ರದರ್ಶಿಸುತ್ತದೆ.
03:05 ಇದು ಡಾಕ್ಯುಮೆಂಟ್ ನ ಬೇರೆ-ಬೇರೆ ಪೇಜ್ ಗಳನ್ನು ಸರಳವಾಗಿ ನೋಡಲು ಮತ್ತು ಪರಿಷ್ಕರಿಸಲು ಸಹಾಯ ಮಾಡುತ್ತದೆ.
03:11 ಮುಂದಿನ ವಿಕಲ್ಪವು “Fit to Width” ಎಂಬುದಾಗಿದೆ. ಇದು ಪೇಜ್ ಅನ್ನು ಅದರ ಅಗಲ ಎಷ್ಟಿದೆಯೋ ಅಷ್ಟಕ್ಕೆ ಫಿಟ್ ಮಾಡುತ್ತದೆ.
03:17 ”100%” ಎಂಬ ವಿಕಲ್ಪವು ಪೇಜ್ ಅನ್ನು ಅದರ ವಾಸ್ತವಿಕ ಆಕಾರದಲ್ಲಿ ಪ್ರದರ್ಶಿಸುತ್ತದೆ.
03:23 ಮುಂದಿನದು “Variable” ಎಂಬ ಒಂದು ಮಹತ್ವಪೂರ್ಣವಾದ ವೀಕ್ಷಣಾ ಪ್ರಕಾರವಾಗಿದೆ (Viewing option).
03:28 ”variable” ಎಂಬಲ್ಲಿ ನೀವು ನಿಮ್ಮ ಡಾಕ್ಯುಮೆಂಟನ್ನು ತೋರಿಸಬಯಸುವ ಆಕೃತಿಯನ್ನಧಾರಿಸಿ zoom factor ಅನ್ನು ಸೆಟ್ ಮಾಡಬಹುದು.
03:35 ಉದಾಹರಣೆಗಾಗಿ, ನಾವು “variable” ಎಂಬಲ್ಲಿ “75%” ಎಂದು ಬರೆಯೋಣ ಹಾಗೂ “OK” ಬಟನ್ ಕ್ಲಿಕ್ ಮಾಡೋಣ.
03:43 ಹೀಗೆಯೇ, ಡಾಕ್ಯುಮೆಂಟ್ ನ zoom factor ಅನ್ನು ನಿಮ್ಮ ಅವಶ್ಯಕತೆಗೆ ಹಾಗೂ ನೋಡಲು ಮತ್ತು ಪರಿಷ್ಕರಿಸಲು ಅನುಕೂಲವಾದ ರೀತಿಯಲ್ಲಿ ಬದಲಾಯಿಸಬಹುದು.
03:51 ಡಯಲಾಗ್ ಬಾಕ್ಸ್ ನ ಇನ್ನೊಂದು ವಿಷೇಶತೆಯೆಂದರೆ, “View layout”.
03:56 “View layout” ವಿಕಲ್ಪವು ಟೆಕ್ಸ್ಟ್ ಡಾಕ್ಯುಮೆಂಟ್ ಗಾಗಿ ಇದೆ.
03:59 ಇದು zoom factor ಅನ್ನು ಕಡಿಮೆ ಮಾಡಿ ಡಾಕ್ಯುಮೆಂಟ್ ನ ವಿವಿಧ ವೀಕ್ಷಣಾ ಪ್ರಕಾರಗಳನ್ನು ನೋಡಲು ಅನುವು ಮಾಡಿಕೊಡುತ್ತದೆ.
04:07 ಇದರಲ್ಲಿ ಪೇಜ್ ಎಂಬುದನ್ನು ಕ್ರಮವಾಗಿ, ಒಂದರ ಕೆಳಗೊಂದರಂತೆ ಮತ್ತು ಅಕ್ಕ-ಪಕ್ಕ ಪ್ರದರ್ಶಿಸಲು “Automatic” ಮತ್ತು “Single page” ಎಂಬ ವಿಕಲ್ಪಗಳಿವೆ.
04:18 ಉದಾಹರಣೆಗಾಗಿ, ನಾವು “Zoom factor” ನಲ್ಲಿ “Fit width and height” ಎಂಬ ವಿಕಲ್ಪವನ್ನು ಆಯ್ಕೆಮಾಡಿ ನಂತರ “View layout” ನಲ್ಲಿ “Single page” ವಿಕಲ್ಪವನ್ನು ಕ್ಲಿಕ್ ಮಾಡಿ ಮತ್ತು ಕೊನೆಯಲ್ಲಿ “OK” ಬಟನ್ ಕ್ಲಿಕ್ ಮಾಡಿ. ಈಗ ನೋಡಿ, ಪೇಜ್ ಗಳು ಒಂದರ ಕೆಳಗೆ ಒಂದರಂತೆ ಪ್ರದರ್ಶಿತವಾಗುತ್ತಿದೆ.
04:36 ಈಗ “Automatic” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “OK” ಬಟನ್ ಕ್ಲಿಕ್ ಮಾಡಿ.
04:42 ಈಗ ನೋಡಿ, ಪೇಜ್ ಗಳು ಅಕ್ಕ-ಪಕ್ಕದಲ್ಲಿ ಪ್ರದರ್ಶಿತವಾಗುತ್ತಿದೆ.
04:48 ರೈಟರ್ ನ ಸ್ಟೇಟಸ್ ಬಾರ್ ನಲ್ಲಿರುವ ಮೂರು ನಿಯಂತ್ರಕಗಳು ಕೂಡಾ ಡಾಕ್ಯುಮೆಂಟ್ ನ zoom ಮತ್ತು view layout ಅನ್ನು ಬದಲಿಸಬಲ್ಲವಾಗಿವೆ.
04:56 ಆ ನಿಯಂತ್ರಕಗಳು ಎಡದಿಂದ ಬಲಕ್ಕೆ ಈ ತರಹನಾಗಿವೆ, ಒಂಟಿ ಕಾಲಮ್ ನ ಸ್ಥಿತಿ (ಸಿಂಗಲ್ ಕಾಲಮ್ ಮೋಡ್), ಅಕ್ಕ-ಪಕ್ಕ ಎರಡು ಕಾಲಮ್ ನ ಸ್ಥಿತಿ ಮತ್ತು ಒಂದು ತೆರೆದ ಪುಸ್ತಕದಂತೆ ಎರಡು ಪೇಜ್ ಗಳಿರುವ ಸ್ಥಿತಿ.
05:11 ನಾವು ಪೇಜನ್ನು ದೊಡ್ಡದಾಗಿ ನೋಡಲು zoom slider ಅನ್ನು ಬಲಭಾಗಕ್ಕೂ ಹಾಗೂ ತುಂಬಾ ಪೇಜ ಗಳನ್ನು ನೋಡಲು zoom slider ಅನ್ನು ಎಡಭಾಗಕ್ಕೂ ಎಳೆಯಬಹುದಾಗಿದೆ.
05:20 ಲಿಬ್ರೆ ಆಫೀಸ್ ರೈಟರ್ ನಲ್ಲಿ “printing” ನ ಬಗ್ಗೆ ತಿಳಿಯುವ ಮೊದಲು “Page preview” ನ ಬಗ್ಗೆ ಸ್ವಲ್ಪ ತಿಳಿಯೋಣ ಬನ್ನಿ,
05:28 “File” ಎಂಬಲ್ಲಿ ಕ್ಲಿಕ್ ಮಾಡಿ ಹಾಗೂ “Page Preview” ಅನ್ನು ಕ್ಲಿಕ್ ಮಾಡಿ.
05:32 ಯಾವಾಗ ನೀವು ಡಾಕ್ಯುಮೆಂಟ್ ಅನ್ನು Page Preview Mode ನಲ್ಲಿ ನೋಡುತ್ತೀರೋ ಆಗ Page Preview Mode Bar ಕಾಣಸಿಗುತ್ತದೆ.
05:38 ಇದು ನಿಮ್ಮ ಡಾಕ್ಯುಮೆಂಟ್ ಮುದ್ರಣಗೊಂಡಾಗ ಹೇಗೆ ಕಾಣುತ್ತದೆ ಎಂದು ತೋರಿಸುತ್ತದೆ.
05:44 ನೀವು ನಿಮ್ಮ resume.odt ಎಂಬ ಫೈಲ್ ನ ಪ್ರೀವ್ಯೂ ನೋಡಬಹುದು.
05:50 ಇಲ್ಲಿ ಪ್ರೀವ್ಯೂ ಪೇಜ್ ನ ಟೂಲ್ ಬಾರ್ ನಲ್ಲಿ ವಿವಿಧ ನಿರ್ವಹಣಾ ವಿಕಲ್ಪಗಳಿವೆ.
05:55 ಇಲ್ಲಿ “Zoom In”, “Zoom Out”, “Next page”, “Previous page” ಮತ್ತು “Print” ಎಂಬ ವಿಕಲ್ಪಗಳಿವೆ.
06:03 ಲಿಬ್ರೆ ಆಫೀಸ್ ರೈಟರ್ ನಲ್ಲಿ ವಿವಿಧ ವೀಕ್ಷಣೆಯನ್ನು ಹೇಗೆ ಮಾಡಬೇಕು ಮತ್ತು ಪೇಜ್ ಪ್ರೀವ್ಯೂ ಹೇಗೆ ಮಾಡಬೇಕೆಂದು ಕಲಿತ ಮೇಲೆ ನಾವೀಗ ಲಿಬ್ರೆ ಆಫೀಸ್ ರೈಟರ್ ನಲ್ಲಿ “Printer” ನ ಕಾರ್ಯಶೈಲಿಯ ಬಗ್ಗೆ ಕಲಿಯೋಣ.
06:15 ಸರಳವಾಗಿ ಹೇಳುವುದಾದರೆ ಪ್ರಿಂಟರ್ ಎನ್ನುವುದು ಡಾಕ್ಯುಮೆಂಟನ್ನು ಮುದ್ರಿಸಲು ಉಪಯೋಗಿಸುವ ಒಂದು ಔಟ್-ಪುಟ್ ಡಿವೈಸ್ ಆಗಿದೆ.
06:21 ಈಗ ನಾವು ಪ್ರಿಂಟರ್ ನ ವಿವಿಧ ವಿಕಲ್ಪಗಳನ್ನು ಹೇಗೆ ಉಪಯೋಗಿಸುವುದು ಎಂಬುದರ ಬಗ್ಗೆ ಕಲಿಯೋಣ.
06:26 “Tools” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Options” ಎಂಬಲ್ಲಿ ಕ್ಲಿಕ್ ಮಾಡಿ.
06:32 “LibreOffice Writer” ನ ಪಕ್ಕದಲ್ಲಿರುವ ಬಾಣದ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೊನೆಯಲ್ಲಿ “Print” ಎಂಬಲ್ಲಿ ಕ್ಲಿಕ್ ಮಾಡಿ.
06:38 ಒಂದು ಡಯಲಾಗ್ ಬಾಕ್ಸ್ ಕಾಣಿಸುತ್ತದೆ. ಇದು ನಿಮಗೆ ಮುದ್ರಣಾಂಶವನ್ನು ಆಯ್ಕೆ ಮಾಡಲು ವಿಕಲ್ಪವನ್ನು ಕೊಡುತ್ತದೆ.
06:43 ಹಾಗಾಗಿ, ಡೀಫಾಲ್ಟ್ ಸೆಟ್ಟಿಂಗ್ ಅನ್ನು ಇಟ್ಟು “OK” ಬಟನ್ ಕ್ಲಿಕ್ ಮಾಡಿ.
06:49 ಈಗ ಸಂಪೂರ್ಣವಾದ ಡಾಕ್ಯುಮೆಂಟನ್ನು ಹಾಗೆಯೇ ಮುದ್ರಿಸಲು ಟೂಲ್ ಬಾರ್ ನಲ್ಲಿ “Print File Directly” ಎಂಬ ಐಕಾನ್ ಅನ್ನು ಕ್ಲಿಕ್ ಮಾಡಿ.
06:56 ಇದನ್ನು ತ್ವರಿತ ಮುದ್ರಣ (quick printing) ಎಂದು ಕರೆಯುತ್ತೇವೆ.
07:00 ನೀವು “Print” ವಿಕಲ್ಪಕ್ಕೆ ಹೋಗಿ ಡೀಫಾಲ್ಟ್ ಸೆಟ್ಟಿಂಗ್ ಅನ್ನು ಬದಲಿಸುವುದರ ಮೂಲಕ ಯಾವುದೇ ಡಾಕ್ಯುಮೆಂಟ್ ನ ಮುದ್ರಣದಲ್ಲಿ ಅಧಿಕ ನಿಯಂತ್ರಣ ಇಡಬಹುದು.
07:07 ಮೆನ್ಯು ಬಾರ್ ನಲ್ಲಿ “File” ಮೆನ್ಯು ಕ್ಲಿಕ್ ಮಾಡಿ ಮತ್ತು ಅಲ್ಲಿ “Print” ಎಂಬಲ್ಲಿ ಕ್ಲಿಕ್ ಮಾಡಿ.
07:13 ಪರದೆಯಲ್ಲಿ “Print” ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
07:17 ಇಲ್ಲಿ ನಾವು ಜನರಲ್ ಟ್ಯಾಬ್ ನಲ್ಲಿ “Generic Printer” ಎಂಬ ವಿಕಲ್ಪವನ್ನು ಆಯ್ಕೆ ಮಾಡೋಣ.
07:22 “All pages” ಎಂಬ ವಿಕಲ್ಪವು ಡಾಕ್ಯುಮೆಂಟ್ ನ ಎಲ್ಲಾ ಪೇಜ್ ಗಳನ್ನು ಮುದ್ರಿಸಲು ಇದೆ.
07:28 ನೀವು ಡಾಕ್ಯುಮೆಂಟ್ ನ ಆಯ್ದ ಪೇಜ್ ಗಳನ್ನು ಮುದ್ರಿಸ ಬಯಸಿದಲ್ಲಿ “Pages” ಎಂಬ ವಿಕಲ್ಪವನ್ನು ಆಯ್ಕೆ ಮಾಡಿ ಅಲ್ಲಿ ಪೇಜ್ ನ ಸಂಖ್ಯೆಯನ್ನು ಬರೆಯಿರಿ. ಉದಾಹರಣೆಗೆ, ನಾವಿಲ್ಲಿ “1-3” ಎಂದು ಟೈಪ್ ಮಾಡೋಣ. ಇದು ಡಾಕ್ಯುಮೆಂಟ್ ನ ಮೊದಲ ಮೂರು ಪೇಜ್ ಗಳನ್ನು ಮುದ್ರಿಸುತ್ತದೆ.
07:44 ನೀವು ಒಂದು ಡಾಕ್ಯುಮೆಂಟ್ ನ ಹಲವು ಪ್ರತಿಗಳನ್ನು ಮುದ್ರಿಸ ಬಯಸುವಿರಾದರೆ “Number of copies” ಎಂಬಲ್ಲಿ ಪ್ರತಿಗಳ ಸಂಖ್ಯೆಯನ್ನು ಬರೆಯಿರಿ, ನಾವಿಲ್ಲಿ “2” ಎಂದು ಟೈಪ್ ಮಾಡೋಣ.
07:54 ಈಗ ಡಲಯಾಗ್ ಬಾಕ್ಸ್ ನಲ್ಲಿ “Options” ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
08:00 ಪರದೆಯ ಮೇಲೆ option ನ ಸೂಚಿ ತೋರುತ್ತದೆ, ಅಲ್ಲಿ ನೀವು ಎನನ್ನಾದರೂ ಆಯ್ದು ಮುದ್ರಿಸ ಬಹುದಾಗಿದೆ.
08:07 ನಾವಿಲ್ಲಿ “Print in reverse page order” ಎಂಬ ಚೆಕ್ ಬಾಕ್ಸ್ ಅನ್ನು ಕಾಣುತ್ತೇವೆ.
08:12 ಈ ವಿಕಲ್ಪವು ಹೆಚ್ಚು ಔಟ್ ಪುಟ್ ಗಳನ್ನು ಏಕತ್ರಗೊಳಿಸುವಲ್ಲಿ ಸಹಾಯ ಮಾಡುತ್ತದೆ.
08:16 ಹಾಗಾಗಿ ಇದರ ವಿರುದ್ಧವಾಗಿ ಚೆಕ್ ಬಾಕ್ಸ್ ನಲ್ಲಿ ಕ್ಲಿಕ್ ಮಾಡಿ.
08:19 ಈಗ “Print” ಬಟನ್ ನ ಮೇಲೆ ಕ್ಲಿಕ್ ಮಾಡಿ.
08:22 ನೀವು pdf ಡಾಕ್ಯುಮೆಂಟ್ ನ ಪ್ರಿಂಟ್ ಕೂಡಾ ಇಲ್ಲಿ ತೆಗೆಯಬಹುದು.
08:26 ನಾವು ಈ ಮೊದಲೇ “dot odt” ಡಾಕ್ಯುಮೆಂಟ್ ಅನ್ನು “dot pdf” ಆಗಿ ಹೇಗೆ ಬದಲಿಸುವುದೆಂದು ನೋಡಿದ್ದೇವೆ.
08:34 ಈಗ ಈ ಮೊದಲೇ ಡೆಸ್ಕ್-ಟಾಪ್ ನಲ್ಲಿ ಸೇವ್ ಆಗಿದ್ದ “pdf” ಫೈಲ್ ನ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.
08:41 ಈಗ “File” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Print” ಎಂಬಲ್ಲಿ ಕ್ಲಿಕ್ ಮಾಡಿ.
08:47 ಈಗ ಡೀಫಾಲ್ಟ್ ಸೆಟ್ಟಿಂಗ್ ಅನ್ನು ಹಾಗೆಯೇ ಇಟ್ಟುಕೊಂಡು “Print Preview” ಬಟನ್ ಮೇಲೆ ಕ್ಲಿಕ್ ಮಾಡಿ.

चलिए डिफॉल्ट सेटिंग पर क्लिक करें और फिर “Print Preview” बटन पर क्लिक करें।

08:52 ನೋಡಿ, ಫೈಲ್ ನ ಪ್ರೀವ್ಯೂ ಸ್ಕ್ರೀನ್ ಮೇಲೆ ಇದೆ.
08:56 ಈಗ ಇದನ್ನು ಮುದ್ರಿಸಲು ಪ್ರೀವ್ಯೂ ಪೇಜ್ ನಲ್ಲಿ “Print this document” ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
09:04 ಈಗ ನಾವು ಲಿಬ್ರೆ ಆಫೀಸ್ ರೈಟರ್ ನ ಈ ಪಾಠದ ಕೊನೆಗೆ ಬಂದಿದ್ದೇವೆ.
09:09 ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು,
09:11 ಡಾಕ್ಯುಮೆಂಟ್ ನ ವಿವಿಧ ವೀಕ್ಷಣೆಗಳು ಮತ್ತು
09:13 ಡಾಕ್ಯುಮೆಂಟ್ ಅನ್ನು ಮುದ್ರಿಸುವುದು
09:16 ಮಾಡಬೇಕಾದ ಅಭ್ಯಾಸಗಳು :
09:18 ರೈಟರ್ ನಲ್ಲಿ “This is Libre Office Writer” ಎಂಬ ಟೆಕ್ಸ್ಟ್ ಅನ್ನು ಬರೆಯಿರಿ
09:23 ಡಾಕ್ಯುಮೆಂಟ್ ಅನ್ನು ಫುಲ್ ಸ್ಕ್ರೀನ್ ನಲ್ಲಿ ನೋಡಲು “Full Screen” ವಿಕಲ್ಪವನ್ನು ಉಪಯೋಗಿಸಿ.
09:29 ಡಾಕ್ಯುಮೆಂಟ್ ನ ಸೂಕ್ತ ಮತ್ತು ಬದಲಾಯಿಸಬಹುದಾದ ವೀಕ್ಷಣೆಗಾಗಿ zoom ವಿಕಲ್ಪವನ್ನು ಉಪಯೋಗಿಸಿ. “variable” ನ ಬೆಲೆಯನ್ನು “50%” ಎಂದು ಇಡಿ ಮತ್ತು ಡಾಕ್ಯುಮೆಂಟ್ ಅನ್ನು ವೀಕ್ಷಿಸಿ.
09:41 ಡಾಕ್ಯುಮೆಂಟ್ ನ “Page preview” ಗೆ ಹೋಗಿ ಮತ್ತು ಪೇಜ್ ನಲ್ಲಿ ಬಾರ್ಡರ್ ನ ಜೊತೆಗೆ ಡಾಕ್ಯುಮೆಂಟ್ ನ ಎರಡು ಪ್ರತಿಯನ್ನು ಮುದ್ರಿಸಿ.
09:49 ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
09:52 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
09:56 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
10:00 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
10:06 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
10:09 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
10:16 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
10:20 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
10:28 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
10:39 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ.
10:43 ಧನ್ಯವಾದಗಳು.

Contributors and Content Editors

Gaurav, PoojaMoolya, Sneha, Udaya, Vasudeva ahitanal