LibreOffice-Suite-Calc/C2/Formatting-Data/Kannada
From Script | Spoken-Tutorial
Revision as of 13:08, 20 March 2017 by PoojaMoolya (Talk | contribs)
Time | Narration |
00:00 | ಲಿಬ್ರೆ ಆಫೀಸ್ ಕ್ಯಾಲ್ಕ್ ನ ಫಾರ್ಮ್ಯಾಟಿಂಗ್ ಡಾಟಾದ ಬಗೆಗಿರುವ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, ಬಾರ್ಡರ್ ಗಳನ್ನು ಮತ್ತು ಹಿಂಬದಿಯ ಬಣ್ಣವನ್ನು ಫಾರ್ಮೆಟ್ ಮಾಡುವುದು, |
00:12 | ಅಟೋಮ್ಯಾಟಿಕ್ ವ್ರಾಪಿಂಗ್ ಬಳಸಿಕೊಂಡು ಟೆಕ್ಸ್ಟ್ ನ ಹೆಚ್ಚಿನ ಸಾಲನ್ನು ಒಂದೇ ಬಾರಿಗೆ ಫಾರ್ಮೆಟ್ ಮಾಡುವುದು, |
00:18 | ಸೆಲ್ ಗಳನ್ನು ಒಂದುಗೂಡಿಸುವುದು ಹಾಗೂ ಸೆಲ್ ನ ಒಳಗೆ ಫಿಟ್ ಆಗುವಂತೆ ಟೆಕ್ಸ್ಟ್ ನ್ನು ಒತ್ತೊತ್ತಾಗಿ ಇಡುವುದು ಮುಂತಾದವುಗಳನ್ನು ಕಲಿಯುತ್ತೇವೆ. |
00:22 | ಇಲ್ಲಿ ನಾವು ಉಬುಂಟು ಲಿನಕ್ಸ್ 10.04 ನ್ನು ನಮ್ಮ ಒಪೆರಟಿಂಗ್ ಸಿಸ್ಟಮ್ ಆಗಿ ಬಳಸುತ್ತಿದ್ದೇವೆ ಮತ್ತು ಲಿಬ್ರೆ ಆಫೀಸ್ ಸೂಟ್ ನ ಆವೃತ್ತಿ 3.3.4. ಆಗಿರುತ್ತದೆ. |
00:33 | ಈಗ ನಾವು ಮೊದಲು ಲಿಬ್ರೆ ಆಫೀಸ್ ಕ್ಯಾಲ್ಕ್ ನಲ್ಲಿ ಬಾರ್ಡರ್ ಗಳನ್ನು ಫಾರ್ಮೆಟ್ ಮಾಡುವುದರ ಬಗ್ಗೆ ಕಲಿಯೋಣ. |
00:39 | ನಮ್ಮ “personal finance tracker.ods” ಫೈಲ್ ಅನ್ನು ಓಪನ್ ಮಾಡೋಣ. |
00:45 | ಬಾರ್ಡರ್ ಗಳನ್ನು ಒಂದು ಗೊತ್ತಾದ ಸೆಲ್ ನಲ್ಲಿ ಅಥವಾ ಒಂದು ಸೆಲ್ ಗಳ ಗುಂಪಿನಲ್ಲಿ ಫಾರ್ಮೆಟ್ ಮಾಡಬಹುದು. |
00:50 | ಉದಾಹರಣೆಗೆ, “Serial Number”, “Item”, “Cost”, “Spent”, ”Received”, ”Date” ಮತ್ತು ”Account” ಎಂಬ ಹೆಡ್ಡಿಂಗ್ ಗಳಿರುವ ಸೆಲ್ ಗಳನ್ನು ಫಾರ್ಮ್ಯಾಟ್ ಮಾಡೋಣ. |
01:01 | ಅದಕ್ಕಾಗಿ ಮೊದಲು ಸೀರಿಯಲ್ ನಂಬರ್ “SN” ಎಂದು ಹೆಡ್ಡಿಂಗ್ ಇರುವ ಸೆಲ್ ಅನ್ನು ಕ್ಲಿಕ್ ಮಾಡಿ. |
01:08 | ಈಗ ಎಡ ಮೌಸ್ ಬಟನ್ ಹಿಡಿದಿಟ್ಟುಕೊಂಡು, ಅದನ್ನು ಹೆಡ್ಡಿಂಗ್ ಹೊಂದಿರುವ ಸೆಲ್ಸ್ ನ ಮೇಲೆ ಎಳೆಯಿರಿ (ಡ್ರ್ಯಾಗ್). |
01:14 | ಹೆಡ್ಡಿಂಗ್ಸ್ ಅನ್ನು ಹೊಂದಿರುವ ಇಡೀ ಅಡ್ಡ ಸಾಲನ್ನು ಸೆಲೆಕ್ಟ್ ಮಾಡಿದ ನಂತರ, ಫಾರ್ಮ್ಯಾಟಿಂಗ್ ಟೂಲ್ ಬಾರ್ ನಲ್ಲಿ "Borders " ಐಕಾನ್ ಮೇಲೆ ಕ್ಲಿಕ್ ಮಾಡಿ. |
01:23 | ಹಲವಾರು ಬೋರ್ಡರ್ ಶೈಲಿಗಳನ್ನು ಹೊಂದಿರುವ ಡ್ರಾಪ್ ಡೌನ್ ಪಟ್ಟಿ ಓಪನ್ ಆಗುತ್ತದೆ. |
01:28 | ಅದರಲ್ಲಿ ನೀವು ಬಾರ್ಡರ್ ಮೇಲೆ ಬಳಸಲು ಬಯಸುವ ಒಂದು ಸ್ಟೈಲ್ ನ್ನು ಕ್ಲಿಕ್ ಮಾಡಿ. |
01:33 | ನಾನು ಕೊನೆಯ ಆಯ್ಕೆಯನ್ನು ಕ್ಲಿಕ್ ಮಾಡುತ್ತೇನೆ.ನಾವು ಸೆಲೆಕ್ಟ್ ಮಾಡಿದ ಸ್ಟೈಲ್ ನ ಪ್ರಕಾರ ಬಾರ್ಡರ್ ಗಳು ಫಾರ್ಮೆಟ್ ಆಗಿರುವುದನ್ನು ನೋಡಬಹುದು. |
01:39 | ಈಗ ಈ ಬದಲಾವಣೆಯನ್ನು undo ಮಾಡೋಣ. |
01:45 | ಸೆಲೆಕ್ಟ್ ಮಾಡಿದ ಸೆಲ್ ಗಳು ಇನ್ನೂ ಹೈಲೈಟ್ ಆಗಿವೆ. ಸೆಲೆಕ್ಟ್ ಮಾಡಿದ ಸೆಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು “Format Cells” ಆಯ್ಕೆ ಮಾಡಿ. |
01:54 | ಈಗ ಬಾರ್ಡರ್ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
01:56 | ಇಲ್ಲಿ ನೀವು “Line arrangement”, “Line”, “Spacing to contents” ಮತ್ತು “Shadow style”.ಆಯ್ಕೆಗಳನ್ನು ನೋಡಬಹುದು. |
02:05 | ಹೀಗೆ ಪ್ರತಿಯೊಂದರಲ್ಲೂ ಪ್ರದರ್ಶಿತವಾಗಿರುವ ಇವುಗಳು ಕ್ಯಾಲ್ಕ್ ನ ಡೀಫಾಲ್ಟ್ ವ್ಯವಸ್ಥೆಯಾಗಿದೆ. |
02:10 | ಆದರೆ ಅದನ್ನು ನಮ್ಮ ಅವಶ್ಯಕತೆಗೆ ತಕ್ಕಂತೆ ಬದಲಾಯಿಸಬಹುದು. |
02:14 | “User-defined” ನ ಕೆಳಗೆ ನಿಮಗೆ ಒಂದು ಸಣ್ಣ ಪ್ರಿವ್ಯೂ ವಿಂಡೋ ಕಾಣಿಸುತ್ತದೆ, ಅದು ನಾವು ಸೆಲೆಕ್ಟ್ ಮಾಡಿರುವುದನ್ನು ಪ್ರದರ್ಶಿಸುತ್ತದೆ. |
02:22 | ನಾನು "ಡೀಫಾಲ್ಟ್" ನ ಅಡಿಯಲ್ಲಿ ಮೂರನೇಯದನ್ನು ಆಯ್ಕೆ ಮಾಡುತ್ತೇನೆ ಮತ್ತು ನೀವು ಅದು ಪ್ರಿವ್ಯೂ ವಿಂಡೋದಲ್ಲಿ ಪ್ರತಿಬಿಂಬಿತವಾಗುವುದನ್ನು ನೋಡಬಹುದು. |
02:29 | ನಾನು “Style”, “Width” ಮತ್ತು “Color” ಕೂಡ ಬದಲಾಯಿಸುತ್ತೇನೆ. |
02:33 | ಪುನಃ ಪ್ರಿವ್ಯೂ ವಿಂಡೋದಲ್ಲಿ ಬದಲಾವಣೆ ಗಮನಿಸಿ. |
02:38 | ಕಂಟೆಂಟ್ ಗಳ ನಡುವಿನ ಅಂತರಕ್ಕಾಗಿ “Synchronize” ಆಯ್ಕೆಯು ಚೆಕ್ ಆಗಿದೆ. |
02:42 | ಇದರ ಅರ್ಥ ಒಂದೇ ತರಹದ ಸ್ಪೇಸಿಂಗ್ ಅನ್ನು ಎಲ್ಲಾ ಮಾರ್ಜಿನ್ಸ್ ಗೆ ಹಾಕಲಾಗಿದೆ. |
02:47 | ಅದನ್ನು ಅನ್ ಚೆಕ್ ಮಾಡಬಹುದು ಮತ್ತು ಅವಶ್ಯಕತೆ ಇದ್ದರೆ ಮಾರ್ಜಿನ್ ಸ್ಪೇಸಿಂಗ್ ಅನ್ನು ಬದಲಾಯಿಸಬಹುದು . |
02:53 | ನಾನು “Top” ಮತ್ತು “Bottom” ಮಾರ್ಜಿನ್ ಅನ್ನು 1.4pt ಕ್ಕೆ ಬದಲಾಯಿಸುತ್ತೇನೆ. |
03:00 | ನಾನು ನಿಮಗೆ, ನಿಮ್ಮದೇ ಆದಂತಹ ವಿವಿಧ ಶ್ಯಾಡೊ ಶೈಲಿಗಳನ್ನು ಅನ್ವೇಷಣೆ ಮಾಡಲು ಬಿಡುತ್ತೇನೆ. |
03:04 | ಓಕೆ ಕ್ಲಿಕ್ ಮಾಡಿ. |
03:06 | ಈಗ ಆಯ್ಕೆಮಾಡಿದ ಶೈಲಿ ಸೆಲ್ಸ್ ಗೆ ಅನ್ವಯವಾಗುತ್ತದೆ. |
03:11 | ಬಾರ್ಡರ್ ಗಳನ್ನು ಹೇಗೆ ಫಾರ್ಮ್ಯಾಟ್ ಮಾಡುವುದು ಎಂಬುದರ ಬಗ್ಗೆ ಕಲಿತ ನಂತರ, ಈಗ ಸೆಲ್ಸ್ ಗೆ ಹಿನ್ನೆಲೆ ಬಣ್ಣಗಳನ್ನು ಹೇಗೆ ನೀಡುವುದು ಎಂದು ಕಲಿಯೋಣ. |
03:18 | ಸೆಲ್ಸ್ ಗೆ ಹಿನ್ನೆಲೆ ಬಣ್ಣ ನೀಡುವುದರ ಸಲುವಾಗಿ, ಕ್ಯಾಲ್ಕ್ ಫಾರ್ಮ್ಯಾಟಿಂಗ್ ಟೂಲ್ ಬಾರ್ ನಲ್ಲಿ “Background Color”, ಎಂಬ ಆಯ್ಕೆ ಇದೆ. |
03:27 | ಈಗ ಅದನ್ನು ಹೇಗೆ ಅಳವಡಿಸಲಾಗಿದೆ ಎಂದು ನೋಡೋಣ. |
03:30 | ಉದಾಹರಣೆಗೆ, ಹೆಡಿಂಗ್ ನ್ನು ಹೊಂದಿರುವ ಸೆಲ್ ಗಳಿಗೆ ಹಿನ್ನೆಲೆ ಬಣ್ಣವನ್ನು ನೀಡೋಣ. |
03:36 | ಅದಕ್ಕಾಗಿ ಮೊದಲು ಹೆಡ್ಡಿಂಗ್ ನಲ್ಲಿ "SN" ಎಂದು ಸೀರಿಯಲ್ ನಂಬರ್ ಹೊಂದಿರುವ ಸೆಲ್ ಅನ್ನು ಕ್ಲಿಕ್ ಮಾಡಿ. |
03:44 | ಈಗ ಎಡ ಮೌಸ್ ಬಟನ್ ಹಿಡಿದಿಟ್ಟುಕೊಂಡು ಹೆಡ್ಡಿಂಗ್ ಗಳನ್ನು ಹೊಂದಿರುವ ಸೆಲ್ಸ್ ಗಳ ಜೊತೆಗೆ ಅದನ್ನು ಎಳೆಯಿರಿ (ಡ್ರ್ಯಾಗ್). |
03:50 | ಹೆಡ್ಡಿಂಗ್ಸ್ ಗಳನ್ನು ಹೊಂದಿರುವ ಇಡೀ ಅಡ್ಡ ಸಾಲು ಸೆಲೆಕ್ಟ್ ಮಾಡಿದ ನಂತರ ಫಾರ್ಮ್ಯಾಟಿಂಗ್ ಟೂಲ್ ಬಾರ್ ನಲ್ಲಿ “Background Color” ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
04:00 | ಒಂದು ಪಾಪ್ ಅಪ್ ಮೆನ್ಯು ಓಪನ್ ಆಗುತ್ತದೆ, ಇಲ್ಲಿ ನೀವು ಹಾಕಲು ಬಯಸುವ ಒಂದು ಹಿನ್ನೆಲೆ ಬಣ್ಣವನ್ನು ಆಯ್ಕೆ ಮಾಡಬಹುದು. |
04:08 | ಬೂದು ಬಣ್ಣದ ಮೇಲೆ ಕ್ಲಿಕ್ ಮಾಡಿ. |
04:11 | ನೀವು ಗಮನಿಸಿ, ಸೆಲ್ ನ ಹಿನ್ನೆಲೆ ಬೂದು ಬಣ್ಣಕ್ಕೆ ಬದಲಾಗಿದೆ. |
04:17 | ಟೆಕ್ಸ್ಟ್ ನ ಅನೇಕ ಸಾಲುಗಳನ್ನು ಫಾರ್ಮೆಟ್ ಮಾಡಲು ಕ್ಯಾಲ್ಕ್ ವಿವಿಧ ಆಯ್ಕೆಗಳನ್ನು ಒದಗಿಸುತ್ತದೆ. |
04:22 | ಮೊದಲನೆಯದನ್ನು “Automatic Wrapping” ಬಳಸುವುದರಿಂದ ಮಾಡಬಹುದು. |
04:26 | “Automatic Wrapping” ಒಂದು ಯೂಸರ್ ಗೆ ಸಿಂಗಲ್ ಸೆಲ್ ನಲ್ಲಿ ಮಲ್ಟಿಪಲ್ ಟೆಕ್ಸ್ಟ್ ಸಾಲುಗಳನ್ನು ಒಳಬಿಡಲು ಅನುಮತಿಸುತ್ತದೆ. |
04:33 | ಈಗ ಇದನ್ನು ಹೇಗೆ ಕಾರ್ಯಗತಗೊಳಿಸಲಾಗಿದೆ ಎಂದು ನೋಡೋಣ. |
04:37 | ಈಗ ನಮ್ಮ “personal finance tracker.ods” ಶೀಟ್ ನಲ್ಲಿ ಒಂದು ಖಾಲಿ ಸೆಲ್ ಕ್ಲಿಕ್ ಮಾಡೋಣ. |
04:44 | ಉದಾಹರಣೆಗೆ, ಸೆಲ್ ನಂಬರ್ "B12" ರ ಮೇಲೆ ಕ್ಲಿಕ್ ಮಾಡೋಣ. |
04:49 | ಈಗ ಸೆಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ. ನಂತರ ಫಾರ್ಮಾಟ್ ಸೆಲ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
04:54 | ಈಗ ಡೈಲಾಗ್ ಬಾಕ್ಸ್ ನಲ್ಲಿ “Alignment” ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
04:58 | ಡೈಲಾಗ್ ಬಾಕ್ಸ್ ನ ಕೆಳಗೆ “Wrap text automatically” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ “OK” ಬಟನ್ ಅನ್ನು ಕ್ಲಿಕ್ ಮಾಡಿ. |
05:08 | ಈಗ ನಾವು “THIS IS A PERSONAL FINANCE TRACKER. IT IS VERY USEFUL” ಎಂದು ಟೈಪ್ ಮಾಡೋಣ. |
05:11 | ಅನೇಕ ಹೇಳಿಕೆಗಳು ಒಂದೇ ಸೆಲ್ ನಲ್ಲಿ ವ್ರಾಪ್ ಆಗಿರುವುದನ್ನು ನೀವು ನೋಡಬಹುದು. |
05:19 | ಬದಲಾವಣೆಗಳನ್ನು ಅಂಡು ಮಾಡೋಣ. |
05:21 | “Automatic Wrapping” ತಿಳಿದ ನಂತರ, ನಾವು ಈಗ ಕ್ಯಾಲ್ಕ್ ನಲ್ಲಿ ಸೆಲ್ಸ್ ಗಳನ್ನು ಹೇಗೆ ಒಂದುಗೂಡಿಸುವುದು (ಮರ್ಜ್) ಎಂದು ತಿಳಿಯೋಣ. |
05:29 | ನಮ್ಮ “personal finance tracker.ods” ಫೈಲ್ ನಲ್ಲಿ ನೀವು ಸೀರಿಯಲ್ ನಂಬರ್ “SN” ಹೆಡ್ಡಿಂಗ್ ಹೊಂದಿರುವ ಸೆಲ್ಸ್ ಮತ್ತು ಅದಕ್ಕೆ ಸರಿ ಹೊಂದುವ ಐಟಂಗಳನ್ನು ಮರ್ಜ್ ಮಾಡಲು, ಮೊದಲು “SN” ಹೆಡ್ಡಿಂಗ್ ನ ಕೆಳಗೆ ಇರುವ ಡಾಟಾ ಎಂಟ್ರಿ '1' ನ್ನು ಕ್ಲಿಕ್ ಮಾಡಿ. |
05:46 | ಈಗ ಕೀ ಬೋರ್ಡ್ ನಲ್ಲಿ “Shift” ಕೀ ಹಿಡಿದಿಟ್ಟುಕೊಳ್ಳಿ ಮತ್ತು “Salary” ಗೆ ಸಂಬಂಧಿಸಿದ ಸೆಲ್ ನ ಮೇಲೆ ಕ್ಲಿಕ್ ಮಾಡಿ. |
05:55 | ಈಗ ಮರ್ಜ್ ಆಗಬೇಕಿರುವ ಎರಡು ಸೆಲ್ ಗಳು ಹೈಲೈಟ್ ಆಗುತ್ತವೆ. |
05:59 | ನಂತರ ಮೆನ್ಯು ಬಾರ್ ನಲ್ಲಿ "Format" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು "Merge Cells" ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:07 | ಸೈಡ್ ಬಾರ್ ನ ಪಾಪ್ ಅಪ್ ನಲ್ಲಿ, “Merge Cells” ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:12 | ಎರಡು ಸೆಲ್ ಗಳ ಕಂಟೆಂಟ್ ಗಳನ್ನು ಒಂದೇ ಸೆಲ್ ಗೆ ಮೂವ್ ಮಾಡಲು ಕಾಣಿಸಿಕೊಳ್ಳುವ ಡೈಲಾಗ್ ಬಾಕ್ಸ್ ನಲ್ಲಿ “Yes” ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:21 | ಆಯ್ಕೆಮಾಡಿದ ಸೆಲ್ಸ್ ಗಳು ಒಂದೇ ಸೆಲ್ ನಲ್ಲಿ ಮರ್ಜ್ ಆಗಿರುದನ್ನು ಮತ್ತು ಕಂಟೆಂಟ್ಸ್ ಕೂಡ ಅದೇ ಸೆಲ್ ನ ಒಳಗೆ ಮರ್ಜ್ ಆಗಿರುದನ್ನು ಈಗ ನೀವು ನೋಡಬಹುದು. |
06:31 | ಈಗ ಟೂಲ್ಬಾರ್ ನಲ್ಲಿ “undo” ಆಯ್ಕೆಯ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅಥವಾ "CTRL + Z" ಪ್ರೆಸ್ ಮಾಡುವುದರ ಮೂಲಕ ಮರ್ಜ್ ಅನ್ನು undo ಮಾಡಬಹುದು. |
06:37 | ಮುಂದೆ ನಾವು, ಸೆಲ್ ನ ಒಳಗೆ ಸರಿಯಾಗಿ ಹೊಂದಿಕೊಳ್ಳುವಂತೆ ಟೆಕ್ಸ್ಟ್ ನ್ನು ಒತ್ತೊತ್ತಾಗಿ ಇರಿಸುವುದು ಹೇಗೆ ಎಂದು ಕಲಿಯೋಣ. |
06:41 | ಒಂದು ಸೆಲ್ ನಲ್ಲಿನ ಡಾಟಾದ ಫಾಂಟ್ ನ ಗಾತ್ರವನ್ನು ಸ್ವಯಂ ಸೆಲ್ ನ ಗಾತ್ರಕ್ಕೆ ಅನುಗುಣವಾಗಿ ಹೊಂದಿಸಬಹುದು. |
06:49 | ಇದನ್ನು ಹೇಗೆ ಮಾಡುವುದೆಂದು ಕಲಿಯೋಣ. |
06:50 | B14 ಸೆಲ್ ನಲ್ಲಿ “This is for the month of January” ಎಂದು ಟೈಪ್ ಮಾಡಿ. |
07:00 | ಟೆಕ್ಸ್ಟ್ ಸೆಲ್ ನ ಒಳಗೆ ಫಿಟ್ ಆಗದೇ ಇರುವುದನ್ನು ನೀವು ನೋಡಬಹುದು. |
07:03 | ಟೆಕ್ಸ್ಟ್ ಸೆಲ್ ನ ಒಳಗೆ ಫಿಟ್ ಆಗಲು ಅದನ್ನು ಸಂಕುಚಿತಗೊಳಿಸುವ (ಶ್ರಿಂಕ್) ಸಲುವಾಗಿ, ಮೊದಲು B14 ಸೆಲ್ ಮೇಲೆ ಕ್ಲಿಕ್ ಮಾಡಿ. |
07:11 | ಈಗ ಮೆನ್ಯು ಬಾರ್ ನಲ್ಲಿ “Format” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Cells” ಮೇಲೆ ಕ್ಲಿಕ್ ಮಾಡಿ. |
07:18 | ಪರ್ಯಾಯವಾಗಿ, ಸೆಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು “Format Cells” ಮೇಲೆ ಕ್ಲಿಕ್ ಮಾಡಿ. |
07:24 | “Format Cells” ಡೈಲಾಗ್ ಬಾಕ್ಸ್ ತೆರೆಯಲ್ಪಡುವುದನ್ನು ನೀವು ನೋಡಬಹುದು. |
07:28 | ಡೈಲಾಗ್ ಬಾಕ್ಸ್ ನಲ್ಲಿ “Alignment” ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
07:31 | ಡೈಲಾಗ್ ಬಾಕ್ಸ್ ನ ಕೆಳಗೆ “Shrink to fit cell size” ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ನಂತರ "OK " ಬಟನ್ ಅನ್ನು ಕ್ಲಿಕ್ ಮಾಡಿ. |
07:41 | ನೀವು ನೋಡಬಹುದು ಎಲ್ಲಾ ಟೆಕ್ಸ್ಟ್ ಗಳೂ ಫಾಂಟ್ ಸೈಜ್ ಕಡಿಮೆ ಮಾಡಿಕೊಂಡು ತನ್ನಷ್ಟಕ್ಕೆ ಸಂಕುಚಿತಗೊಳ್ಳುತ್ತವೆ. ಹೀಗೆ ಟೆಕ್ಸ್ಟ್ B14 ಸೆಲ್ ನ ಒಳಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. |
07:54 | ಬದಲಾವಣೆಗಳನ್ನು undo ಮಾಡೋಣ |
07:57 | ಈಗ ನಾವು ಲಿಬ್ರೆ ಆಫೀಸ್ ಕ್ಯಾಲ್ಕ್ ಸ್ಪೋಕನ್ ಟ್ಯುಟೋರಿಯಲ್ ನ ಮುಕ್ತಾಯಕ್ಕೆ ಬಂದೆವು. |
08:02 | ಸಾರಾಂಶದಲ್ಲಿ ಹೇಳುವುದಾದರೆ: ಕ್ಯಾಲ್ಕ್ ನಲ್ಲಿ ಬಾರ್ಡರ್ ಗಳನ್ನು ಫಾರ್ಮೆಟ್ ಮಾಡುವುದು, ಬ್ಯಾಗ್ರೌಂಡ್ ವ್ರಾಪಿಂಗ್. |
08:09 | ಅಟೋಮ್ಯಾಟಿಕ್ ವ್ರಾಪಿಂಗ್ ಬಳಸಿಕೊಂಡು ಮಲ್ಟಿಪಲ್ ಲೈನ್ ಟೆಕ್ಸ್ಟ್ ಅನ್ನು ಫಾರ್ಮ್ಯಾಟಿಂಗ್ ಮಾಡುವುದು. |
08:14 | ಸೆಲ್ಸ್ ಅನ್ನು ಮರ್ಜ್ ಮಾಡುವುದು. ಸೆಲ್ ನ ಒಳಗೆ ಟೆಕ್ಸ್ಟ್ ಫಿಟ್ ಆಗಲು ಸಂಕುಚಿತಗೊಳಿಸುವುದು ಮುಂತಾದವುಗಳನ್ನು ಕಲಿತೆವು. |
08:19 | ಮಾಡಲು ಅಭ್ಯಾಸಗಳು |
08:21 | “spreadsheet practice.ods” ಶೀಟ್ ಓಪನ್ ಮಾಡಿ. |
08:25 | ಎಲ್ಲಾ ಹೆಡ್ಡಿಂಗ್ಸ್ ಗಳನ್ನೂ ಸೆಲೆಕ್ಟ್ ಮಾಡಿ. |
08:27 | ಹೆಡ್ಡಿಂಗ್ ನ ಹಿನ್ನೆಲೆಗೆ ನೀಲಿ ಬಣ್ಣವನ್ನು ಕೊಡಿ. |
08:31 | “Automatic Wrapping” ಬಳಸಿಕೊಂಡು “This is a Department Spreadsheet” ಎಂದು ಟೆಕ್ಸ್ಟ್ ಟೈಪ್ ಮಾಡಿ. |
08:37 | ಸೆಲ್ ಗೆ ಸರಿಹೊಂದುವಂತೆ ಟೆಕ್ಸ್ಟ್ ಸಂಕುಚಿತಗೊಳಿಸಿ. |
08:40 | ಈ ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. |
08:43 | ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
08:46 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
08:51 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
09:00 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
09:06 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
09:11 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
09:18 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
09:29 | ಈ ಪಾಠದ ಅನುವಾದಕ ಉದಯ ಮತ್ತು ಪ್ರವಾಚಕ ವಾಸುದೇವ ಐ.ಐ.ಟಿ. ಬಾಂಬೆ. |
09:35 | ಧನ್ಯವಾದಗಳು. |