Firefox/C2/Firefox-interface-and-toolbars/Kannada
From Script | Spoken-Tutorial
Revision as of 12:34, 11 July 2014 by PoojaMoolya (Talk | contribs)
Time | Narration |
00:00 | Mozilla Firefox ನ ಇಂಟರ್ಫೇಸ್ ಮತ್ತು ಟೂಲ್ಬಾರ್ಗಳ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು Firefox ನ ಇಂಟರ್ಫೇಸ್ ಮತ್ತು ಟೂಲ್ಬಾರ್ಗಳ ಬಗ್ಗೆ ಕಲಿಯೋಣ. |
00:11 | ಈ ಟ್ಯುಟೋರಿಯಲ್ ನಲ್ಲಿ Ubuntu 10.04 ರಲ್ಲಿ Firefox ನ 7.0 ನೇ ಆವೃತ್ತಿಯನ್ನು ಬಳಸೋಣ. |
00:19 | ಈಗ ನಾವು Firefox ಇಂಟರ್ಫೇಸ್ ಅನ್ನು ವೀಕ್ಷಿಸೋಣ. |
00:23 | ಆಧುನಿಕ ಬ್ರೌಸರ್ಗೆ ಅಗತ್ಯವಿರುವ ಎಲ್ಲಾ ಲಕ್ಷಣಗಳನ್ನು Firefox ಹೊಂದಿದೆ. |
00:28 | Mozilla Firefox ಅನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ಅದರ ಪ್ರತಿಯೊಂದು ಗುಣಲಕ್ಷಣಗಳ ಬಗ್ಗೆ ಪರಿಚಯವಿರಬೇಕು. |
00:34 | ಒಂದು Mozilla Firefox ಇಂಟರ್ಫೇಸ್ ಅನ್ನು ೬ ವಿಭಿನ್ನ ಕ್ಷೇತ್ರಗಳನ್ನಾಗಿ ವಿಂಗಡಿಸಬಹುದು, ಅವುಗಳೆಂದರೆ; |
00:41 | Menu bar, Navigation ಟೂಲ್ಬಾರ್, Bookmarks bar, Side bar, Status bar ಮತ್ತು Content area. |
00:53 | ಈಗ ಪ್ರತಿಯೊಂದು ಕ್ಷೇತ್ರವನ್ನು ನೋಡುತ್ತ ಅದರ ಕ್ರಿಯೆಯನ್ನು ಕಲಿಯೋಣ. |
00:57 | ಈಗ ನಾವು File ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ನಂತರ New Window ನ ಮೇಲೆ ಕ್ಲಿಕ್ ಮಾಡೋಣ. |
01:01 | ಹೊಸ ವಿಂಡೊ ತೆರೆದುಕೊಳ್ಳುತ್ತದೆ. |
01:05 | ಕೆಲವರಿಗೆ ತಮ್ಮ ಬ್ರೌಸರ್ಗಳಲ್ಲಿ ಸಣ್ಣ ಅಕ್ಷರಗಳನ್ನು ವೀಕ್ಷಿಸಲು ಸಮಸ್ಯೆಗಳಿರುತ್ತದೆ. |
01:08 | ಹಾಗಾಗಿ View - Zoom ಮತ್ತು Zoom in ಮೇಲೆ ಕ್ಲಿಕ್ ಮಾಡುತ್ತ ಹಾಳೆಯನ್ನು ದೊಡ್ಡದಾಗಿಸೋಣ. |
01:14 | ಪರ್ಯಾಯವಾಗಿ, Ctrl + +ಅನ್ನೂ ಒತ್ತಬಹುದು. |
01:18 | ಇದು ಟೆಕ್ಸ್ಟ್ ಅನ್ನು ದೊಡ್ಡದಾಗಿ ಮಾಡುತ್ತದೆ. |
01:21 | ನೀವು ಬಳಸುತ್ತಿರುವ Mozilla Firefox ಯಾವ ಆವೃತ್ತಿಯದೆಂದು ತಿಳಿಯಲು Help ಮತ್ತು About Firefox ಮೇಲೆ ಕ್ಲಿಕ್ ಮಾಡಿ. |
01:27 | ಪೂರ್ವನಿಯೋಜಿತವಾಗಿ, Firefox ಒಂದು homepage ಅನ್ನು ತೋರಿಸುತ್ತದೆ. |
01:32 | ಆದರೆ ನಿಮ್ಮ ಆಯ್ಕೆಯ ವೆಬ್ಪೇಜ್ ಅನ್ನು Homepage ಆಗಿ ಪರಿವರ್ತಿಸಲು ಕ್ರಮವಾಗಿ Edit ಮತ್ತು Preferences ಮೇಲೆ ಕ್ಲಿಕ್ ಮಾಡಿ. |
01:39 | Windows ಬಳಕೆದಾರರು ದಯವಿಟ್ಟು Tools ಮತ್ತು Options ಮೇಲೆ ಕ್ಲಿಕ್ ಮಾಡಿ. |
01:42 | General tab ನಲ್ಲಿ, Home Page ಫೀಲ್ಡ್ ಮೇಲೆ ಕ್ಲಿಕ್ ಮಾಡಿ, ‘www.yahoo.com’ ಅಥವಾ ನಿಮ್ಮ ಆಯ್ಕೆಯ ವೆಬ್ಪೇಜನ್ನು ಟೈಪ್ ಮಾಡಿ. |
01:52 | ಈಗ ನೀವು ಕೆಳಗಿನ ಎಡಮೂಲೆಯಲ್ಲಿರುವ Close ಬಟನ್ ಕ್ಲಿಕ್ ಮಾಡಿ Firefox Preference ವಿಂಡೊವನ್ನು ಕ್ಲೋಸ್ ಮಾಡಿ. |
02:00 | ನೀವು Edit ಮೆನ್ಯುವನ್ನು ಬಳಸಿ ವೆಬ್ಪೇಜ್ನಲ್ಲಿರುವ ನಿರ್ದಿಷ್ಟ ಪದಗಳನ್ನು ಹುಡುಕಬಹುದು. |
02:05 | address bar ನಲ್ಲಿ ‘www.google.com’ ಎಂದು ಟೈಪ್ ಮಾಡಿ. |
02:12 | Edit ಮತ್ತು Find ನ ಮೇಲೆ ಕ್ಲಿಕ್ ಮಾಡಿ. |
02:14 | ಬ್ರೌಸರ್ ವಿಂಡೊವಿನ ಕೆಳಗೆ ಸಣ್ಣ ಟೂಲ್ಬಾರ್ ಕಾಣಿಸಿಕೊಳ್ಳುತ್ತದೆ. |
02:19 | ಟೆಕ್ಸ್ಟ್ಬಾಕ್ಸ್ ನಲ್ಲಿ, ‘Gujarati’ ಎಂಬ ಪದವನ್ನು ಟೈಪ್ ಮಾಡಿ. |
02:23 | ಪುಟದಲ್ಲಿ ‘Gujarati’ ಎಂಬ ಪದವು ಹೈಲೆಟ್ ಆಗಿ ಇರುವುದನ್ನು ನೀವು ಗಮನಿಸುವಿರಿ. |
02:28 | ಟೆಕ್ಸ್ಟ್ಗಳಿರುವಂತಹ ದೊಡ್ಡ ವೆಬ್ಪೇಜ್ಗಳಲ್ಲಿ ಹುಡುಕುವಾಗ ಈ ವಿಕಲ್ಪವು ಸಹಾಯಕವಾಗಿರುತ್ತದೆ. |
02:33 | ಇದನ್ನು ಕ್ಲೋಸ್ ಮಾಡೋಣ. |
02:35 | ಹೆಸರೇ ಸೂಚಿಸುವಂತೆ, Navigation toolbar ನಿಮಗೆ ಇಂಟರ್ನೆಟ್ ನಲ್ಲಿ ಸಂಚರಿಸಲು ಸಹಾಯಕವಾಗಿರುತ್ತದೆ. |
02:41 | ನಾವಿಗೇಷನ್ ಬಾರ್ ಎನ್ನುವುದು ನೀವು ಹೋಗ ಬಯಸುವ ವೆಬ್ಪೇಜ್ ವಿಳಾಸವನ್ನು ಟೈಪ್ ಮಾಡುವ ದೊಡ್ಡ ಟೆಕ್ಸ್ಟ್ ಬಾಕ್ಸ್ ಆಗಿರುತ್ತದೆ. |
02:48 | ಇದನ್ನು URL bar ಅಥವ Address bar ಎಂದೂ ಕರೆಯುತ್ತಾರೆ. |
02:52 | URL ಮೇಲೆ ಕ್ಲಿಕ್ ಮಾಡಿ, ಅದರಲ್ಲಿ ಈಗಾಗಲೇ ಇರುವಂತಹ ವಿಳಾಸವನ್ನು ಅಳಿಸಿ. |
02:57 | ಈಗ ‘www.google.com’ ಎಂದು ಟೈಪ್ ಮಾಡಿ. |
03:02 | ಎಂಟರ್ ಕೀಯನ್ನು ಒತ್ತಿರಿ. |
03:03 | ನೀವೀಗ google homepage ನಲ್ಲಿ ಇರುತ್ತೀರಿ. |
03:06 | ಹಿಮ್ಮುಖ ಬಾಣದ icon ನನ್ನು ಕ್ಲಿಕ್ ಮಾಡಿದಾಗ ಅದು ನಿಮ್ಮನ್ನು ಮೊದಲು ಇದ್ದಂತಹ ಪುಟಕ್ಕೆ ಒಯ್ಯುತ್ತದೆ . |
03:12 | google homepage ಗೆ ಹಿಂತಿರುಗಲು ಮುಮ್ಮುಖ ಬಾಣದ ಮೇಲೆ ಒತ್ತಿರಿ. |
03:17 | URL bar ನ ಬಲಕ್ಕೆ, ಮನೆ ಚಿತ್ರವಿರುವ ಒಂದು icon ಇರುತ್ತದೆ. |
03:22 | ನೀವು ಯಾವುದೇ ವೆಬ್ಪೇಜ್ನಲ್ಲಿದ್ದರು, ಈ ಬಟನ್ ನಿಮನ್ನು ಪೂರ್ವನಿಯೋಜಿತವಾದ home page ಗೆ ಮತ್ತೆ ಒಯ್ಯುತ್ತದೆ. |
03:28 | ನಿರ್ದಿಷ್ಟವಾದ ವೆಬ್ ಸೈಟ್ ನಲ್ಲಿ ಅಥವಾ search engine ನಲ್ಲಿ ಸುಳಿದಾಡಲು ನಿಮಗೆ ಈ ವಿಕಲ್ಪವು ತುಂಬಾ ಉಪಯೋಗವಾಗುತ್ತದೆ. |
03:34 | homepage ಬಟನ್ ಮೇಲೆ ಕ್ಲಿಕ್ ಮಾಡೋಣ. |
03:36 | ನಾವು ಈ ಹಿಂದೆಯೇ home page ಅನ್ನು ‘www.yahoo.com’ ಗೆ ಬದಲಾಯಿಸಿದ್ದೆವು ಎಂದು ನೆನಪಿರಲಿ. |
03:42 | ಅದರ ಪರಿಣಾಮವಾಗಿ, homepage ಬಟನ್ ಮೇಲೆ ಕ್ಲಿಕ್ ಮಾಡಿದರೆ ಅದು ನಮ್ಮನ್ನು yahoo homepage ಗೆ ಕರೆದೊಯ್ಯುತ್ತದೆ. |
03:49 | ಈಗ Bookmarks bar ಅನ್ನು ನೋಡೋಣ. |
03:51 | ನೀವು ಆಗಾಗ ಭೇಟಿ ಮಾಡುವ ಅಥವಾ ಆಗಾಗ ಆಕರಿಸುವ ಪುಟಗಳಲ್ಲಿ ಸಂಚರಿಸಲು Bookmarks ಸಹಾಯ ಮಾಡುತ್ತದೆ. |
03:57 | URL bar ನಲ್ಲಿ, ‘www.gmail.com’ ಎಂದು ಟೈಪ್ ಮಾಡಿ. |
04:03 | ಪುಟ ತೆರೆದ ನಂತರ, URL bar ನ ಬಲದಲ್ಲಿರುವ ನಕ್ಷತ್ರ ಚಿಹ್ನೆಯನ್ನು ಒತ್ತಿರಿ. |
04:10 | ನಕ್ಷತ್ರ ಹಳದಿಗೆ ಬದಲಾಗುವುದನ್ನು ನೀವು ನೋಡುವಿರಿ. |
04:13 | ನಕ್ಷತ್ರದ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ. |
04:14 | ಡಯಲಾಗ್ ಬಾಕ್ಸ್ ಒಂದು ಕಾಣುತ್ತದೆ. |
04:17 | ‘Folder’ ನ ಡ್ರಾಪ್ಡೌನ್ ಮೆನ್ಯುವಿನಿಂದ , ‘Bookmarks toolbar’ ಅನ್ನು ಆಯ್ಕೆ ಮಾಡಿ. |
04:23 | Bookmarks toolbar ನಲ್ಲಿ Gmail ನ bookmark ಸೇರಿರುವುದನ್ನು ನಾವು ಗಮನಿಸಬಹುದು. |
04:28 | yahoo homepage ಗೆ ಹೋಗಲು Homepage icon ಮೇಲೆ ಕ್ಲಿಕ್ ಮಾಡಿ. |
04:33 | Gmail bookmark ಮೇಲೆ ಕ್ಲಿಕ್ ಮಾಡಿ. ಇದು ನಿಮ್ಮನ್ನು Gmail ನ login page ಗೆ ಕೊಂಡೊಯ್ಯುತ್ತದೆ.. |
04:39 | ನೀವು ಆಗಾಗ ಭೇಟಿ ನೀಡುವ ತಾಣಗಳು ನಿಮ್ಮ homepage ಆಗಬೇಕಿಲ್ಲ. ಆದರೂ ಅಲ್ಲಿಗೆ ಹೋಗಲು bookmarks bar ಅನ್ನು ಬಳಸಬಹುದು. |
04:46 | ಈಗ ನಾವು Sidebar ಅನ್ನು ವೀಕ್ಷಿಸೋಣ. |
04:49 | ಕ್ರಮಶಃ View ಮತ್ತು Sidebar ನ ಮೇಲೆ ಕ್ಲಿಕ್ ಮಾಡಿ, ನಂತರ History ಮೇಲೆ ಕ್ಲಿಕ್ ಮಾಡಿ. |
04:54 | ಈಗ ನೀವು ಎಡಬದಿಯಲ್ಲಿರುವ bar ನಲ್ಲಿ today, yesterday ಮತ್ತು older than 6 months ಎಂಬುವ 3 ಆಯ್ಕೆಗಳನ್ನು ನೋಡಬಹುದು. |
05:02 | ಪ್ರದರ್ಶಿತವಾದ ಆಯ್ಕೆಗಳು ಆ ಕಂಪ್ಯೂಟರ್ನಲ್ಲಿ Firefox ಬಳಕೆಯ ಮಧ್ಯಂತರಗಳಿಗೆ ಒಳಪಟ್ಟಿರುತ್ತದೆ. |
05:09 | ಮೆನ್ಯುವನ್ನು ಹಿಗ್ಗಿಸಲು Today icon ಪಕ್ಕದಲ್ಲಿರುವ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. |
05:15 | google homepage ಗೆ ಹಿಂದಿರುಗಲು google link ಅನ್ನು ಆರಿಸಿಕೊಳ್ಳಿ. |
05:19 | ನೋಡಿ, ನೀವು ಈ ಹಿಂದೆ ಭೇಟಿ ನೀಡಿದ ತಾಣಕ್ಕೆ ಹೋಗುವುದು ಎಷ್ಟು ಸುಲಭ! |
05:25 | Sidebar ಕೂಡ ತನ್ನದೇ ಆದ ಹುಡುಕುವ ವಿಕಲ್ಪವನ್ನು ಹೊಂದಿದೆ. |
05:29 | search box ನಲ್ಲಿ ನಿಮಗೆ ಬೇಕಾದಂತಹ ತಾಣದ ಹೆಸರನ್ನು ಹುಡುಕಲು ಟೈಪ್ ಮಾಡಬಹುದು. |
05:34 | ನಂತರ ಇದು ನಿಮ್ಮ history ಯ ಮೂಲಕ ಹುಡುಕಿ ತೆಗೆಯುತ್ತದೆ. |
05:37 | search box ನಲ್ಲಿ ‘google’ ಎಂದು ಟೈಪ್ ಮಾಡಿ. |
05:39 | ಮೊದಲ ಫಲಿತಾಂಶವಾಗಿ google homepage ಬರುತ್ತದೆ. |
05:43 | ನೀವು ಮೇಲಿನ ಬಲಮೂಲೆಯಲ್ಲಿರುವ ಚಿಕ್ಕ ‘x’ ಚಿಹ್ನೆಯನ್ನು ಕ್ಲಿಕ್ ಮಾಡುವ ಮೂಲಕ side bar ಕಾಣದಂತೆ ಮಾಡಬಹುದು. |
05:51 | Status bar ಏನು ಮಾಡುತ್ತದೆ ಎಂದು ಈಗ ನೋಡೊಣ |
05:55 | Status bar ಎನ್ನುವುದು ನಿಮ್ಮ ಬ್ರೌಸರ್ ವಿಂಡೊನ ಕೆಳಗಿನ ಪ್ರದೇಶವಾಗಿದ್ದು ಇದು ನೀವು ಲೋಡ್ ಮಾಡುತ್ತಿರುವ ತಾಣದ ಸ್ಥಿತಿಯನ್ನು ತೋರಿಸುತ್ತದೆ |
06:02 | URL bar ಗೆ ಹೋಗಿ ‘www.wired.com’ ಎಂದು ಟೈಪ್ ಮಾಡಿ ಎಂಟರ್ ಕೀಯನ್ನು ಒತ್ತಿ |
06:10 | ತಕ್ಷಣ ಸ್ಟೇಟಸ್ ಬಾರ್ ಕಡೆ ನೋಡಿ. ಅದು ನೀವು ಲೋಡ್ ಮಾಡುತ್ತಿರುವ ವೆಬ್ಪೇಜ್ನ ಸ್ಥಿತಿಯನ್ನು ತೋರಿಸುತ್ತದೆ. |
06:16 | ಒಂದು ನಿರ್ದಿಷ್ಟವಾದ ತಾಣ ಏಕೆ ಲೋಡ್ ಆಗುತ್ತಿಲ್ಲ, ಅದು ಲೋಡ್ ಆಗಲು ಎಷ್ಟು ಸಮಯ ತೆಗೆದುಕೊಳ್ಳಬಹುದು ಇತ್ಯಾದಿ ವಿಷಯಗಳನ್ನು ತಿಳಿಯಲು Status bar ಸಹಾಯ ಮಾಡುತ್ತದೆ. |
06:25 | ಕೊನೆಯದಾಗಿ, Content area ನೋಡೊಣ. |
06:28 | ನೀವು ನೋಡುತ್ತಿರುವ ವೆಬ್ಪೇಜ್ನ ವಿಷಯವನ್ನು ಇಲ್ಲಿ ವೀಕ್ಷಿಸಬಹುದು. |
06:33 | ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು. |
06:35 | ಈ ತರಗತಿಯಲ್ಲಿ ನಾವು Firefox interface ಮತ್ತು ಟೂಲ್ಬಾರ್ಗಳ ಬಗ್ಗೆ ಕಲಿತೆವು. |
06:43 | ಈ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸಿ. |
06:46 | ನಿಮ್ಮ ಹೋಮ್ಪೇಜನ್ನು ‘www.spoken-tutorial.org’ ಗೆ ಬದಲಾಯಿಸಿಕೊಳ್ಳಿ ಮತ್ತು ಸಂಚರಿಸಿ. |
06:54 | ನಂತರ ಬ್ರೌಸರ್ಸ್ನ ಹಿಸ್ಟರಿ ಕಾರ್ಯವನ್ನು ಬಳಸಿ ಯಾಹೂ ವೆಬ್ಸೈಟಿಗೆ ಹೋಗಿ. |
07:00 | http://spoken-tutorial.org/What_is_a_Spoken_Tutorial ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. |
07:05 | ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
07:07 | ನಿಮ್ಮ ಬಳಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲವಾದಲ್ಲಿ ನೀವು ಡೌನ್ಲೋಡ್ ಮಾಡಿಕೊಂಡು ನೋಡಬಹುದು |
07:12 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
07:17 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
07:21 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
07:27 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
07:31 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
07:39 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
07:50 | ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ. |
07:56 | ಧನ್ಯವಾದಗಳು. |