Difference between revisions of "Health-and-Nutrition/C2/How-to-bathe-a-newborn/Kannada"

From Script | Spoken-Tutorial
Jump to: navigation, search
(Created page with "{|border=1 | <center>Time</center> |<center>Narration</center> |- | 00:00 | '''How to bathe a newborn''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗ...")
 
 
Line 230: Line 230:
 
| 07:33
 
| 07:33
 
| ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
 
| ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಈ ಸ್ಕ್ರಿಪ್ಟ್ ನ ಅನುವಾದಕಿ '''IIT Bombay''' ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀಮತಿ ನಯನಾ ಭಟ್.
+
|-
 +
| 07:36
 +
| ಈ ಸ್ಕ್ರಿಪ್ಟ್ ನ ಅನುವಾದಕಿ '''IIT Bombay''' ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀಮತಿ ನಯನಾ ಭಟ್.
 
ಧನ್ಯವಾದಗಳು.
 
ಧನ್ಯವಾದಗಳು.
 +
|-
 
|}
 
|}

Latest revision as of 16:24, 27 August 2020

Time
Narration
00:00 How to bathe a newborn ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ: ತಾಯಿ ಅಥವಾ ಪಾಲಕರು ಶಿಶುವಿಗೆ ಸ್ನಾನ ಮಾಡಿಸುವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆಗಳು,
00:15 ಮಗುವಿಗೆ ಮೊದಲ ಸಲ ಸ್ನಾನವನ್ನು ಯಾವಾಗ ಮಾಡಿಸಬೇಕು,

ಸ್ಪಾಂಜ್ ಸ್ನಾನ,

00:20 ನಿಯಮಿತ ಸ್ನಾನ,

ಸಾಂಪ್ರದಾಯಿಕ ಸ್ನಾನ,

00:23 ಗುಡ್ಡಗಾಡು ಪ್ರದೇಶ ಅಥವಾ ಶೀತ ಪ್ರದೇಶಗಳಲ್ಲಿಯ ಶಿಶುಗಳಿಗೆ ಮಾಡಿಸುವ ಸ್ನಾನ ಹಾಗೂ

'ಕ್ರೇಡಲ್ ಕ್ಯಾಪ್' (Cradle cap) ಇವುಗಳ ಬಗ್ಗೆ ಕಲಿಯುತ್ತೇವೆ.

00:32 ನವಜಾತ ಶಿಶುವಿನ ತಂದೆತಾಯಂದಿರು, ಶಿಶುವಿಗೆ ಹೇಗೆ ಸ್ನಾನ ಮಾಡಿಸುವುದು ಎಂಬ ಆತಂಕದಲ್ಲಿ ಇರುತ್ತಾರೆ.
00:37 ಮಗುವಿಗೆ ಸ್ನಾನ ಮಾಡಿಸುವಾಗ ಸಾಕಷ್ಟು ಕಾಳಜಿ ವಹಿಸಬೇಕು.
00:42 ಒಂದು ಸಣ್ಣ ತಪ್ಪು ಸಹ ಶಿಶುವಿಗೆ ತುಂಬಾ ಹಾನಿ ಉಂಟುಮಾಡಬಹುದು.
00:46 ಹೀಗಾಗಿ, ಮಗುವಿಗೆ ಸ್ನಾನ ಮಾಡಿಸುವಾಗ ಅನುಸರಿಸಬೇಕಾದ ಸುರಕ್ಷತಾ ಸಲಹೆಗಳನ್ನು ತಿಳಿಯುವುದು ಬಹಳ ಮುಖ್ಯವಾಗಿದೆ.
00:54 ಮಗುವನ್ನು ಸ್ಪರ್ಶಿಸುವ ಮೊದಲು, ತಾಯಿ ಅಥವಾ ಕುಟುಂಬದ ಸದಸ್ಯರು ಬೆರಳಿನ ಉಗುರುಗಳನ್ನು ಮೊಟಕುಗೊಳಿಸಿರಬೇಕು ಮತ್ತು
01:02 ಯಾವುದೇ ಉಂಗುರ, ಬಳೆ ಅಥವಾ ಕೈಗಡಿಯಾರವನ್ನು ಧರಿಸಬಾರದು.
01:07 ಇದು ಮಗುವಿಗೆ ಗಾಯವಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
01:11 ಮಗುವಿಗೆ ಮೊದಲ ಬಾರಿ ಸ್ನಾನವನ್ನು ಯಾವಾಗ ಮಾಡಿಸಬೇಕು?
01:16 ಹೆರಿಗೆಯಾದ 48 ಗಂಟೆಗಳ ನಂತರ, ತಾಯಿಯು ಮಗುವಿಗೆ ಸ್ಪಾಂಜ್-ಬಾಥ್ ಮಾಡಿಸಲು ಪ್ರಾರಂಭಿಸಬಹುದು.
01:22 ಹೊಕ್ಕುಳಬಳ್ಳಿ ಉದುರುವವರೆಗೆ, ಸ್ಪಾಂಜ್-ಬಾಥ್ ಅನ್ನು ಮಾತ್ರ ಮಾಡಿಸಬೇಕು ಎಂಬುದನ್ನು ನೆನಪಿಡಿ.
01:29 ಬಳ್ಳಿಯು ಉದುರಿದ ನಂತರ, ತಾಯಿ ಅಥವಾ ಕುಟುಂಬದ ಸದಸ್ಯರು ಮಗುವಿಗೆ ನಿಯಮಿತವಾಗಿ ಸ್ನಾನ ಮಾಡಿಸಲು ಪ್ರಾರಂಭಿಸಬಹುದು.
01:38 ಒಂದುವೇಳೆ, ಕಡಿಮೆ ಜನನ ತೂಕದ ಮಗುವಿದ್ದರೆ, ಆ ಮಗುವಿನ ತೂಕ 2 ಕಿಲೋನಷ್ಟು ಹೆಚ್ಚಾಗುವವರೆಗೆ ಸ್ಪಾಂಜ್-ಬಾಥ್ ಮಾಡಿಸಬೇಕು.
01:49 ಸ್ಪಾಂಜ್-ಬಾಥ್ ಅನ್ನು ಹೇಗೆ ಕೊಡಲಾಗುತ್ತದೆ ಎಂದು ನೋಡೋಣ.
01:53 ಆರಂಭಿಸುವ ಮೊದಲು, ಕೊಠಡಿಯು ಸಾಕಷ್ಟು ಬೆಚ್ಚಗಿದೆ ಮತ್ತು ಕಿಟಕಿಗಳನ್ನು ಮುಚ್ಚಿದೆ ಎಂದು ಖಚಿತಪಡಿಸಿಕೊಳ್ಳಿ.
02:00 ಸ್ಪಂಜು ಸ್ನಾನ ಮಾಡಿಸುವ ಮೊದಲು ಮೃದುವಾದ, ಶುಚಿಯಾದ ಒಂದು ಸಣ್ಣ ಬಟ್ಟೆಯನ್ನು ಸಿದ್ಧವಾಗಿಡಿ.
02:07 ಮಗುವನ್ನು ಸುರಕ್ಷಿತ, ಸಮತಟ್ಟಾದ ಜಾಗದಲ್ಲಿರಿಸಿ.
02:12 ಇದಕ್ಕಾಗಿ ನೆಲವು ಸಾಕಷ್ಟು ಸುರಕ್ಷಿತವಾಗಿದೆ.
02:15 ಮಗುವನ್ನು ಎತ್ತರದ ಜಗಲಿ ಅಥವಾ ಕಟ್ಟೆ ಯ ಮೇಲೆ ಇರಿಸಬೇಡಿ.
02:19 ಸ್ನಾನದ ನೀರಿನ ತಾಪಮಾನವು 37 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಇರಬಾರದು.
02:26 ತಾಯಿಯು ತನ್ನ ಮೊಣಕೈ ಅಥವಾ ಮಣಿಕಟ್ಟನ್ನು ಬಳಸಿ ನೀರಿನ ಬಿಸಿಯನ್ನು ಪರೀಕ್ಷಿಸಬೇಕು.
02:32 ಸ್ನಾನ ಮಾಡಿಸುವಾಗ, ಸ್ವಚ್ಛಗೊಳಿಸಲು ಮೊದಲು ಸಾಬೂನು ನೀರನ್ನು ಬಳಸಿ.
02:37 ಸಾಬೂನು ನೀರನ್ನು ತಯಾರಿಸಲು, ಸೌಮ್ಯವಾದ, ಬಣ್ಣ ಮತ್ತು ವಾಸನೆಗಳಿಲ್ಲದ ಸಾಬೂನು ಅಥವಾ ಬೇಬಿ ಸೋಪ್ ಅನ್ನು ಬಳಸಿ.
02:45 ನಂತರ, ಸಾಬೂನನ್ನು ಹೋಗಲಾಡಿಸಲು ಶುದ್ಧ ನೀರನ್ನು ಬಳಸಿ.
02:50 ಮೃದುವಾದ ಒಂದು ಸಣ್ಣ ಬಟ್ಟೆಯನ್ನು ನೀರಿನಲ್ಲಿ ಅದ್ದಿ ಮತ್ತು ಹೆಚ್ಚಿನ ನೀರನ್ನು ಹಿಂಡಿ ತೆಗೆದುಬಿಡಿ.
02:56 ಈಗ ಮಗುವಿನ ಕಣ್ಣನ್ನು ಒಳಗಿನ ಮೂಲೆಯಿಂದ ಹೊರ ಅಂಚಿನವರೆಗೆ ಒರೆಸಿ.
03:02 ದೇಹದ ಇತರ ಭಾಗಗಳನ್ನು ಒರೆಸಲು ಅದೇ ಬಟ್ಟೆಯನ್ನು ಬಳಸಬೇಡಿ.
03:06 ಈ ಕೆಲಸಕ್ಕೆ ಯಾವಾಗಲೂ ಇನ್ನೊಂದು ಮೃದುವಾದ ಬಟ್ಟೆಯನ್ನು ಬಳಸಿ.
03:12 ಅಲ್ಲದೆ ಮಡಿಸಿರುವ ಭಾಗಗಳಾದ - ಕಂಕುಳ, ಕಿವಿಗಳ ಹಿಂದೆ, ಕತ್ತಿನ ಸುತ್ತ,
03:18 ಕೈಬೆರಳುಗಳು ಹಾಗೂ ಕಾಲ್ಬೆರಳುಗಳ ನಡುವೆ ಮತ್ತು ಜನನಾಂಗದ ಪ್ರದೇಶಗಳನ್ನು ಸ್ವಚ್ಛಗೊಳಿಸಲು ಮರೆಯಬೇಡಿ.
03:25 ನಾವು ಸ್ಪಾಂಜ್ ಸ್ನಾನ ಎಂದರೇನು ಎಂದು ಚರ್ಚಿಸಿದ್ದೇವೆ. ಈಗ ಸಾಮಾನ್ಯ ಸ್ನಾನದ ಬಗ್ಗೆ ಕಲಿಯೋಣ.
03:31 ದಯವಿಟ್ಟು ನೆನಪಿಡಿ - ಹೊಕ್ಕುಳಬಳ್ಳಿಯು ಬಿದ್ದುಹೋದ ನಂತರ ಎಲ್ಲಾ ಆರೋಗ್ಯವಂತ ಶಿಶುಗಳಿಗೆ ನಿಯಮಿತವಾಗಿ ಸ್ನಾನ ಮಾಡಿಸಬೇಕು.
03:39 ಸ್ನಾನ ಮಾಡಿಸಲು ನೀವು ಬಾಥ್-ಟಬ್ ಅನ್ನು (ಸ್ನಾನದತೊಟ್ಟಿ) ಬಳಸುತ್ತಿದ್ದರೆ –

ಮೊದಲು, ಅದನ್ನು 2 ಇಂಚುಗಳಷ್ಟು ಸಾಬೂನು ನೀರಿನಿಂದ ತುಂಬಿಸಿ.

03:48 ಮೊದಲೇ ವಿವರಿಸಿದಂತೆ, ಸಾಬೂನು ನೀರನ್ನು ತಯಾರಿಸಲು ಸೌಮ್ಯವಾದ, ಬಣ್ಣ ಮತ್ತು ವಾಸನೆಗಳಿಲ್ಲದ ಸಾಬೂನು ಅಥವಾ ಬೇಬಿ ಸೋಪ್ ಅನ್ನು ಬಳಸಿ.
03:58 ಶುದ್ಧ ನೀರನ್ನು ಹೊಂದಿರುವ ಮತ್ತೊಂದು ಟಬ್ ಅನ್ನು ಸಿದ್ಧವಾಗಿಡಿ.
04:03 ನಂತರ, ನಿಮ್ಮ ಮೊಣಕೈಯಿಂದ ಎರಡೂ ಟಬ್‌ಗಳಲ್ಲಿಯ ನೀರಿನ ಬಿಸಿಯನ್ನು ಪರೀಕ್ಷಿಸಿ.
04:09 ನೀರಿನ ಬಿಸಿಯು ಸರಿಯಾಗಿದೆ ಎನಿಸಿದಾಗ, ಸಾಬೂನು ನೀರಿರುವ ಟಬ್‌ನಲ್ಲಿ ಮಗುವನ್ನು ಬಹಳ ಎಚ್ಚರಿಕೆಯಿಂದ ಇರಿಸಿ. ತಲೆಯನ್ನು ಸರಿಯಾಗಿ ಹಿಡಿದುಕೊಂಡಿದೆ ಎಂದು ಖಚಿತಪಡಿಸಿಕೊಳ್ಳಿ.
04:22 ಮಗು ಟಬ್‌ನಲ್ಲಿದ್ದಾಗ ಹೆಚ್ಚಿನ ನೀರನ್ನು ಸೇರಿಸಬೇಡಿ.
04:27 ಮೊದಲಿಗೆ, ವಾಸನೆ ಮತ್ತು ಬಣ್ಣಗಳಿಲ್ಲದ ಬೇಬಿ ಶಾಂಪೂ ಅಥವಾ ಸಾಬೂನು ಬಳಸಿ, ಮಗುವಿನ ತಲೆಯನ್ನು ತೊಳೆಯಿರಿ.
04:35 ನಂತರ ಶುದ್ಧ ನೀರಿನಿಂದ ಮೆತ್ತಗೆ ಸಾಬೂನನ್ನು ತೊಳೆಯಿರಿ.
04:39 ಆಮೇಲೆ, ಮಡಿಕೆಗಳು ಮತ್ತು ಹೆಚ್ಚು ಕೊಳೆಯಿರುವ ಜನನಾಂಗದ ಪ್ರದೇಶಗಳ ಜೊತೆಗೆ ದೇಹದ ಉಳಿದ ಭಾಗವನ್ನು ಸ್ವಚ್ಛಗೊಳಿಸಿ.
04:47 ಕೊನೆಯಲ್ಲಿ, ದೇಹದ ಉಳಿದ ಭಾಗವನ್ನು ಶುದ್ಧ ನೀರಿನಿಂದ ಮೆತ್ತಗೆ ತೊಳೆಯಿರಿ.
04:53 ಒಂದುವೇಳೆ, ತಾಯಿ ಅಥವಾ ಪೋಷಕರು ಭಾರತೀಯ ಸಾಂಪ್ರದಾಯಿಕ ವಿಧಾನದಲ್ಲಿ ಮಗುವಿಗೆ ಸ್ನಾನ ಮಾಡಲು ಬಯಸಿದರೆ - ನೆಲದ ಮೇಲೆ ನಿಮ್ಮ ಕಾಲುಗಳನ್ನು ಉದ್ದಕ್ಕೆ ಚಾಚಿ ಕುಳಿತುಕೊಳ್ಳಿ.
05:06 ನಂತರ, ಮಗುವನ್ನು ನಿಮ್ಮ ಕಾಲಿನ ಮೇಲೆ ಇರಿಸಿ.
05:09 ಮಗುವಿನ ತಲೆಯು ತಾಯಿಯ ಅಥವಾ ಪೋಷಕಳ ಪಾದಗಳ ಹತ್ತಿರ ಇದ್ದು,
05:14 ಮಗುವಿನ ಪಾದಗಳು ಅವರ ಹೊಟ್ಟೆಯ ಬಳಿ ಇರಬೇಕು.
05:20 ಮಗು ಈಗ ಸ್ನಾನ ಮಾಡಲು ಸರಿಯಾದ ಸ್ಥಾನದಲ್ಲಿದೆ.
05:24 ಸ್ನಾನ ಮಾಡಿಸಿದ ತಕ್ಷಣ ಮೃದುವಾದ ಮತ್ತು ಶುಚಿಯಾದ ಟಾವೆಲ್ ಅನ್ನು ಬಳಸಿ ಮಗುವನ್ನು ಒರೆಸಿ.
05:30 ಈಮೊದಲೇ ವಿವರಿಸಿದ ದೇಹದ ಮಡಿಸಿದ ಭಾಗಗಳನ್ನು ಒರೆಸಲು ನೆನಪಿಡಿ.
05:35 ಟಾಲ್ಕಮ್ ಪೌಡರ್ ಅಥವಾ ಬೇಬಿ ಪೌಡರ್ ಬಳಸುವುದನ್ನು ಸಹ ತಪ್ಪಿಸಿ.
05:40 ಇವುಗಳು ನವಜಾತ ಶಿಶುಗಳಲ್ಲಿ ಉಸಿರಾಟದ ತೊಂದರೆಗಳನ್ನು ಉಂಟುಮಾಡಬಹುದು.
05:45 ಕಣ್ಣಿನಲ್ಲಿ ಸುರ್ಮಾ ಅಥವಾ ಕಾಡಿಗೆಯನ್ನು ಎಂದಿಗೂ ಹಾಕಬೇಡಿ.
05:49 ಸುರ್ಮಾ ಅಥವಾ ಕಾಡಿಗೆಯ ಬಳಕೆಯು, ನವಜಾತ ಶಿಶುಗಳಲ್ಲಿ ಸೀಸದ ವಿಷ (lead poisoning) ಮತ್ತು ಸೋಂಕಿಗೆ ಕಾರಣವಾಗಬಹುದು.
05:56 ಗುಡ್ಡಗಾಡು ಪ್ರದೇಶ ಅಥವಾ ಶೀತ ಪ್ರದೇಶಗಳಲ್ಲಿ ವಾಸಿಸುವ ಶಿಶುಗಳಿಗಾಗಿ ವಿಶೇಷ ಕಾಳಜಿಯನ್ನು ವಹಿಸಬೇಕು.
06:04 ಅಂತಹ ಶಿಶುಗಳಿಗೆ - ಬಳ್ಳಿಯು ಉದುರುವ ಮೊದಲು, ಸಂಕ್ಷಿಪ್ತವಾದ, ದೈನಂದಿನ ಸ್ಪಂಜು ಸ್ನಾನವನ್ನು ಮಾಡಿಸಬಹುದು.
06:11 ಆದಾಗ್ಯೂ, ಮಗುವನ್ನು ಒರೆಸಿದ ತಕ್ಷಣ, ತಾಯಿ ಅಥವಾ ಪೋಷಕಳು ಮಗುವಿಗೆ ಪರಸ್ಪರ ಚರ್ಮದ ಸಂಪರ್ಕವನ್ನು ಒದಗಿಸಬೇಕು.
06:20 ಇದು ಶಿಶುಗಳಲ್ಲಿ ದೇಹದ ಉಷ್ಣತೆಯು ಕಡಿಮೆಯಾಗುವ ಅಪಾಯವನ್ನು ತಪ್ಪಿಸುತ್ತದೆ.
06:25 ದಯವಿಟ್ಟು ಗಮನಿಸಿ, ಶಾಂಪೂ ಅನ್ನು ವಾರದಲ್ಲಿ ಎರಡು ಬಾರಿ ಮಾತ್ರ ಬಳಸಬೇಕು.
06:30 ಪ್ರತಿದಿನ ಶಾಂಪೂ ಬಳಸಬೇಡಿ ಏಕೆಂದರೆ ಅದು ನೆತ್ತಿಯಲ್ಲಿ ಶುಷ್ಕತೆಯನ್ನು ಉಂಟುಮಾಡುತ್ತದೆ.
06:35 ನವಜಾತ ಶಿಶುವಿನ ನೆತ್ತಿಯ ಮೇಲೆ ಗಡುಸಾಗಿರುವ ತೇಪೆಗಳು (ಕ್ರಸ್ಟಿ ಪ್ಯಾಚ್) ಅಥವಾ ಪೊರೆಗಳು (scales) ಕೂಡ ಉಂಟಾಗಬಹುದು.

ಇದನ್ನು 'ಕ್ರೇಡಲ್ ಕ್ಯಾಪ್' ಎನ್ನುತ್ತಾರೆ.

06:45 ಈ ತೇಪೆ ಅಥವಾ ಪೊರೆಗಳ ಸುತ್ತಲೂ ಸ್ವಲ್ಪ ಕೆಂಪಾಗಿರಬಹುದು.
06:50 ಗಮನಿಸಿ, 'ಕ್ರೇಡಲ್ ಕ್ಯಾಪ್' ಬಗ್ಗೆ ಚಿಂತಿಸಬೇಕಾಗಿಲ್ಲ.
06:54 ಅದು ತಂತಾನೇ ಹೋಗುತ್ತದೆ ಮತ್ತು ಅದಕ್ಕೆ ಚಿಕಿತ್ಸೆ ನೀಡುವ ಅಗತ್ಯವಿಲ್ಲ.
06:59 ಬೇಬಿ ಆಯಿಲ್ (baby oil), ಪೊರೆಗಳನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ.
07:04 ಪೊರೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಎಣ್ಣೆಯನ್ನು ಹಚ್ಚಿ.
07:09 ಅತೀ ಹೆಚ್ಚು ಎಣ್ಣೆಯು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.
07:12 ನಂತರ, ಒಂದು ಅಥವಾ ಎರಡು ಗಂಟೆಗಳಲ್ಲಿ, ಸೌಮ್ಯವಾದ ಬೇಬಿ ಶಾಂಪೂಅನ್ನು ಬಳಸಿ ಮಗುವಿನ ಕೂದಲನ್ನು ತೊಳೆಯಿರಿ.
07:20 ಆಮೇಲೆ, ಹೆಚ್ಚು ಪೊರೆಗಳು ಬೆಳೆಯುವುದನ್ನು ತಪ್ಪಿಸಲು, ಒಂದು ಗಂಟೆಯ ನಂತರ ಅವುಗಳನ್ನು ಮೆತ್ತಗೆ ತಳ್ಳಿಬಿಡಿ.
07:27 ಈ ಪೊರೆಗಳನ್ನು ಎಳೆಯಬೇಡಿ. ಇದರಿಂದ ನೆತ್ತಿಯಲ್ಲಿ ಗಾಯ (sore) ಹಾಗೂ ಮತ್ತಷ್ಟು ಸೋಂಕು ಉಂಟಾಗಬಹುದು.
07:33 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
07:36 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀಮತಿ ನಯನಾ ಭಟ್.

ಧನ್ಯವಾದಗಳು.

Contributors and Content Editors

Debosmita, Sandhya.np14