Difference between revisions of "Health-and-Nutrition/C2/Storage-of-expressed-breastmilk/Kannada"

From Script | Spoken-Tutorial
Jump to: navigation, search
 
Line 134: Line 134:
 
| ಇವುಗಳ ಬಗ್ಗೆ ಬೇರೆ ಟ್ಯುಟೋರಿಯಲ್ ಗಳಲ್ಲಿ ನಾವು ವಿವರಿಸಿದ್ದೇವೆ.
 
| ಇವುಗಳ ಬಗ್ಗೆ ಬೇರೆ ಟ್ಯುಟೋರಿಯಲ್ ಗಳಲ್ಲಿ ನಾವು ವಿವರಿಸಿದ್ದೇವೆ.
 
|-  
 
|-  
| 05:37
+
| 05:38
 
| ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
 
| ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀಮತಿ ನಯನಾ ಭಟ್.  
+
|-
 +
| 05:41
 +
|ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀಮತಿ ನಯನಾ ಭಟ್.  
 
ಧನ್ಯವಾದಗಳು.
 
ಧನ್ಯವಾದಗಳು.
 +
|-
 
|}
 
|}

Latest revision as of 15:27, 27 August 2020

Time
Narration
00:01 Storage of expressed breastmilk ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು, ಹೊರತೆಗೆದ ಎದೆಹಾಲನ್ನು ನಂತರದ ಬಳಕೆಗಾಗಿ ಸುರಕ್ಷಿತವಾಗಿ ಸಂಗ್ರಹಿಸಿ ಇಡುವುದರ ಬಗ್ಗೆ ಕಲಿಯುವೆವು.
00:14 ಎದೆಹಾಲು ಹೊರಗೆ ತೆಗೆಯುವುದರಿಂದ ಮಗು ಮತ್ತು ತಾಯಿಗೆ ಅನೇಕ ಪ್ರಯೋಜನಗಳಿವೆ.
00:22 ಕೈಯಿಂದ ಎದೆಹಾಲನ್ನು ಹೊರತೆಗೆಯುವ ಬಗ್ಗೆ ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
00:29 ಹೊರತೆಗೆದ ಎದೆಹಾಲನ್ನು ಸುರಕ್ಷಿತವಾಗಿ ಸಂಗ್ರಹಿಸಿ ಬಳಸಬೇಕು.
00:34 ಇದರಿಂದ, ಹಾಲಿನ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಬಹುದು.
00:39 ಎದೆಹಾಲನ್ನು ನಿರ್ವಹಿಸುವ ಮೊದಲು, ತಾಯಿಯು ತನ್ನ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆದು ಒಣಗಿಸಬೇಕು.
00:47 ಎದೆಹಾಲನ್ನು ಸಂಗ್ರಹಿಸಲು, ಅವಳು ಮುಚ್ಚಳವಿರುವ ಸ್ಟೀಲ್ ಅಥವಾ ಗಾಜಿನ ಅಗಲವಾದ ಬಾಯಿಯ ಪಾತ್ರೆಗಳನ್ನು ಬಳಸಬೇಕು.
00:56 ಸ್ಟೀಲ್ ಪಾತ್ರೆಗಳನ್ನು ಶಿಫಾರಸು ಮಾಡಲಾಗಿದ್ದರೂ, ಕೆಲವು ಚಿತ್ರಗಳಲ್ಲಿ ನಾವು ಗಾಜಿನ ಪಾತ್ರೆಗಳನ್ನು ಬಳಸಿದ್ದೇವೆ.
01:03 ಪಾತ್ರೆಯೊಳಗಿನ ಹಾಲನ್ನು ನೋಡಲು ಇದು ನಮಗೆ ಸಹಾಯ ಮಾಡುತ್ತದೆ.
01:09 ತಾಯಿಯು ಆಯ್ಕೆಮಾಡಿದ ಪಾತ್ರೆಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆಯಬೇಕು.
01:14 ಆನಂತರ, ಈ ಪಾತ್ರೆಗಳನ್ನು ಕನಿಷ್ಟ 10 ನಿಮಿಷಗಳ ಕಾಲ ಕುದಿಯುವ ನೀರಿನಲ್ಲಿ ಇಡಬೇಕು.
01:21 ಆಮೇಲೆ ಪಾತ್ರೆಗಳನ್ನು ಹವೆಯಲ್ಲಿ ಅಥವಾ ಶುಚಿಯಾದ ಬಟ್ಟೆಯಿಂದ ಒರೆಸಿ ಚೆನ್ನಾಗಿ ಒಣಗಿಸಬೇಕು.
01:31 ಕಿಚನ್ ಟಾವೆಲ್ ನಂತಹ ಬಳಸಲಾದ ಬಟ್ಟೆಯಿಂದ, ಈ ಪಾತ್ರೆಗಳನ್ನು ಎಂದಿಗೂ ಒಣಗಿಸಬಾರದು.
01:40 ಶುಚಿಮಾಡಿದ ಪಾತ್ರೆಯನ್ನು ಸರಿಯಾಗಿ ಒಣಗಿಸಿದ ನಂತರ, ಹೊರತೆಗೆದ ಹಾಲನ್ನು ಅವಳು ಪಾತ್ರೆಗಳಲ್ಲಿ ಸುರಿಯಬೇಕು.
01:48 ಪ್ರತಿಯೊಂದು ಪಾತ್ರೆಯಲ್ಲಿ, ಒಂದು ಬಾರಿ ಕುಡಿಸಲು ಅಥವಾ ಸುಮಾರು 60 ರಿಂದ 90 ಮಿಲಿಲೀಟರ್ ನಷ್ಟು ಹಾಲನ್ನು ಮಾತ್ರ ಸಂಗ್ರಹಿಸಬೇಕು.
01:58 ತಾಯಿಯು ತನ್ನ ಎದೆಹಾಲನ್ನು ಫ್ರೀಜ್ ಮಾಡಲು ಬಯಸಿದರೆ, ಪಾತ್ರೆಯ ಮೇಲ್ಭಾಗದಲ್ಲಿ ಒಂದು ಇಂಚು ಜಾಗವನ್ನು ಬಿಡಬೇಕು.

ಏಕೆಂದರೆ, ಹೆಪ್ಪುಗಟ್ಟಿದಾಗ ಎದೆಹಾಲಿನ ಗಾತ್ರ ಹೆಚ್ಚಾಗುತ್ತದೆ.

02:12 ಪ್ರತಿಯೊಂದು ಪಾತ್ರೆಯ ಮೇಲೆ, ಹಾಲನ್ನು ಹೊರತೆಗೆದ ದಿನಾಂಕ ಮತ್ತು ಸಮಯವನ್ನು ನಮೂದಿಸಬೇಕು.
02:18 ನಂತರ, ಎದೆಹಾಲು ತುಂಬಿದ ಈ ಪಾತ್ರೆಗಳನ್ನು ಸಾಧ್ಯವಾದಷ್ಟು ತಂಪಾದ ಸ್ಥಳದಲ್ಲಿ ಇರಿಸಬೇಕು.
02:25 ಫ್ರಿಜ್ ಅನ್ನು ಹೊಂದಿದ್ದರೆ, ಹಾಲನ್ನು ಅದರಲ್ಲಿ ಇಡುವುದು ಒಳ್ಳೆಯದು.
02:30 ಎದೆಹಾಲನ್ನು ಫ್ರಿಜ್ ನ ಅತ್ಯಂತ ಕೆಳಗಿನ ಶೆಲ್ಫ್ ನ ಹಿಂಭಾಗದಲ್ಲಿ ಇರಿಸಬೇಕು. ಇದು ಫ್ರಿಜ್ ನಲ್ಲಿ ಅತ್ಯಂತ ತಂಪಾದ ಭಾಗವಾಗಿದೆ.
02:40 ಎದೆಹಾಲನ್ನು ಎಂದಿಗೂ ಫ್ರಿಜ್ ನ ಬಾಗಿಲಲ್ಲಿ ಇರಿಸಬೇಡಿ.
02:44 ಕಡಿಮೆ ತಾಪಮಾನ ಇದ್ದಷ್ಟು, ಹೆಚ್ಚು ಸಮಯ ಶೇಖರಿಸಿ ಇಡಬಹುದು.
02:49 ಶುಚಿಯಾಗಿರುವ ಫ್ರಿಜ್ ನಲ್ಲಿ, ಎದೆಹಾಲನ್ನು 7 ದಿನಗಳವರೆಗೆ ಸಂಗ್ರಹಿಸಿ ಇಡಬಹುದು.
02:56 ಅದನ್ನು ನಿರಂತರವಾಗಿ ತಂಪಾಗಿ ಇಡಬೇಕು.
02:59 ನೆನಪಿಡಿ, ಫ್ರಿಜ್ ನ ಬಾಗಿಲನ್ನು ಮತ್ತೆ ಮತ್ತೆ ತೆರೆಯುವುದರಿಂದ, ಅದರ ಒಳಗಿನ ತಾಪಮಾನವು ಹೆಚ್ಚಾಗುವ ಸಾಧ್ಯತೆ ಇದೆ.
03:07 ವಿದ್ಯುತ್ ಕಡಿತ ಅಥವಾ ಇತರ ಕಾರಣಗಳಿಂದಾಗಿ, ಶೇಖರಣೆಯ ಸಮಯದಲ್ಲಿ ಫ್ರಿಜ್ ನ ತಾಪಮಾನವು ಹೆಚ್ಚಾದರೆ, ಆಗ ತಾಯಿಯು ಈ ಎದೆಹಾಲನ್ನು 6 ಗಂಟೆಗಳ ಒಳಗೆ ಬಳಸಬೇಕು.
03:19 6 ಗಂಟೆಗಳ ಒಳಗೆ ಈ ಎದೆಹಾಲನ್ನು ಬಳಸದಿದ್ದರೆ, ಅವಳು ಅದನ್ನು ಎಸೆದುಬಿಡಬೇಕು.
03:26 ತಾಯಿಯ ಹತ್ತಿರ ಫ್ರಿಜ್ ಇಲ್ಲದಿದ್ದರೆ, ಮನೆಯಲ್ಲಿ ಸುರಕ್ಷಿತವಾದ, ತಂಪಾದ ಹಾಗೂ ಕತ್ತಲಿರುವ ಸ್ಥಳದಲ್ಲಿ ಎದೆಹಾಲನ್ನು 6 ಗಂಟೆಗಳವರೆಗೆ ಸಂಗ್ರಹಿಸಬಹುದು.
03:39 ಕೊಠಡಿಯು ಬಿಸಿಯಾಗಿದ್ದರೆ, ತಣ್ಣೀರಿನಿಂದ ತುಂಬಿದ ಮಣ್ಣಿನ ಮಡಕೆಯ ಬಳಿಯಲ್ಲಿಟ್ಟು ಅಥವಾ ತಣ್ಣೀರಿನಿಂದ ತುಂಬಿದ ಪಾತ್ರೆಯಲ್ಲಿಟ್ಟು ಎದೆಹಾಲನ್ನು ಸಂಗ್ರಹಿಸಬಹುದು.
03:51 ತಾಜಾ ಎದೆಹಾಲು, ಸೋಂಕು ನಿವಾರಕಗಳನ್ನು ಒಳಗೊಂಡಿದೆ.
03:58 ಆದ್ದರಿಂದ, ಇದು ಹಸುವಿನ ಹಾಲಿಗಿಂತ ಹೆಚ್ಚು ಕಾಲ ಹಾಳಾಗದೆ ಉಳಿಯುತ್ತದೆ.
04:03 ಫ್ರಿಜ್‌ನ ಹೊರಗೆ ಮತ್ತು ಬಿಸಿಯಾದ ವಾತಾವರಣದಲ್ಲಿ ಸಹ, ತಾಜಾ ಎದೆಹಾಲಿನಲ್ಲಿ ಕನಿಷ್ಠ 6 ಗಂಟೆಗಳ ಕಾಲ ಸೂಕ್ಷ್ಮಜೀವಿಗಳು ಬೆಳೆಯಲು ಆರಂಭಿಸುವುದಿಲ್ಲ.
04:15 ಫ್ರಿಜ್‌ನ ಹೊರಗೆ ಎದೆಹಾಲನ್ನು ಸಂಗ್ರಹಿಸುವ ಇನ್ನೊಂದು ವಿಧಾನವೆಂದರೆ, ಪ್ರತಿ 24 ಗಂಟೆಗಳಿಗೊಮ್ಮೆ ಬದಲಾಯಿಸಲ್ಪಡುವ ಐಸ್-ಪ್ಯಾಕ್‌ ಗಳೊಂದಿಗೆ, ತಂಪಾದ ಚೀಲ ಅಥವಾ ಪೆಟ್ಟಿಗೆಯನ್ನು ಬಳಸುವುದು.
04:27 ಹಾಲನ್ನು ಈ ಐಸ್ ಪ್ಯಾಕ್‌ಗಳಿಂದ ರಕ್ಷಿಸಬೇಕು. ಅದು ಹೆಪ್ಪುಗಟ್ಟುವ ಸಾಧ್ಯತೆ ಇದೆ.
04:33 ಹಾಲನ್ನು ಕೊಂಡೊಯ್ಯಲು ತಂಪಾದ ಚೀಲವನ್ನು ಸಹ ಬಳಸಬಹುದು.
04:38 ಎದೆಹಾಲನ್ನು 7 ದಿನಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಬೇಕಾಗಿದ್ದರೆ, ತಾಯಿಯು ಹಾಲನ್ನು ಹೊರತೆಗೆದ ಮೇಲೆ, ಆದಷ್ಟು ಬೇಗ ಅದನ್ನು ಫ್ರೀಜ್ ಮಾಡಬೇಕು.
04:49 ಫ್ರಿಜ್ ನ ಫ್ರೀಜರ್ ನಲ್ಲಿ ಹೆಪ್ಪುಗಟ್ಟಿದ ಹಾಲು, 2 ವಾರಗಳವರೆಗೆ ಚೆನ್ನಾಗಿರುತ್ತದೆ.
04:56 ಪ್ರತ್ಯೇಕ ಫ್ರೀಜರ್‌ನಲ್ಲಿ ಸಂಗ್ರಹಿಸಿಟ್ಟ ಹಾಲು, 3 ರಿಂದ 6 ತಿಂಗಳವರೆಗೆ ಚೆನ್ನಾಗಿರುತ್ತದೆ.
05:04 ಮೊದಲೇ ಫ್ರೀಜ್ ಮಾಡಿದ ಎದೆಹಾಲನ್ನು, ಫ್ರಿಜ್‌ನ ಎಲ್ಲಕ್ಕಿಂತ ಕೆಳಗಿನ ಶೆಲ್ಫ್ ನಲ್ಲಿ ರಾತ್ರಿಯೆಲ್ಲ ಇರಿಸಿ ಡಿಫ್ರಾಸ್ಟ್ ಮಾಡಿದಾಗ, ಅದನ್ನು 24 ಗಂಟೆಗಳ ಒಳಗೆ ಬಳಸಬೇಕು.
05:17 ಮತ್ತು ಅದನ್ನು ಫ್ರಿಜ್ ನ ಹೊರಗೆ ಇರಿಸಿ ಡಿಫ್ರಾಸ್ಟ್ ಮಾಡಿದಾಗ, ಅದನ್ನು 2 ಗಂಟೆಗಳ ಒಳಗೆ ಬಳಸಬೇಕು.
05:25 ಹೀಗೆ ಸಂಗ್ರಹಿಸಿದ ಎದೆಹಾಲನ್ನು ಮಗುವಿಗಾಗಿ ಹೇಗೆ ಅಣಿಗೊಳಿಸುವುದು ಮತ್ತು ಅದನ್ನು ಮಗುವಿಗೆ ಹೇಗೆ ಕುಡಿಸುವುದು,
05:32 ಇವುಗಳ ಬಗ್ಗೆ ಬೇರೆ ಟ್ಯುಟೋರಿಯಲ್ ಗಳಲ್ಲಿ ನಾವು ವಿವರಿಸಿದ್ದೇವೆ.
05:38 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
05:41 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀಮತಿ ನಯನಾ ಭಟ್.

ಧನ್ಯವಾದಗಳು.

Contributors and Content Editors

Debosmita, Sandhya.np14