Difference between revisions of "Health-and-Nutrition/C2/Kangaroo-Mother-Care/Kannada"
From Script | Spoken-Tutorial
Sandhya.np14 (Talk | contribs) |
|||
Line 432: | Line 432: | ||
|ಇಲ್ಲಿಗೆ, '''Kangaroo mother care''' ಟ್ಯುಟೋರಿಯಲ್ ಮುಗಿಯಿತು. | |ಇಲ್ಲಿಗೆ, '''Kangaroo mother care''' ಟ್ಯುಟೋರಿಯಲ್ ಮುಗಿಯಿತು. | ||
|- | |- | ||
− | |09: | + | |09:57 |
| ಈ ಸ್ಕ್ರಿಪ್ಟ್ ಗೆ ಧ್ವನಿ ನೀಡಿದವರು ಶ್ರೀಮತಿ ನಯನಾ ಭಟ್. | | ಈ ಸ್ಕ್ರಿಪ್ಟ್ ಗೆ ಧ್ವನಿ ನೀಡಿದವರು ಶ್ರೀಮತಿ ನಯನಾ ಭಟ್. | ||
ಧನ್ಯವಾದಗಳು. | ಧನ್ಯವಾದಗಳು. | ||
+ | |- | ||
|} | |} |
Latest revision as of 12:57, 27 August 2020
00:00 | Kangaroo mother care ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು - |
00:08 | 'ಕಾಂಗರೂ ಮದರ್ ಕೇರ್' (Kangaroo mother care) ಎಂದರೇನು? |
00:10 | ಅದರಲ್ಲಿಯ ಅಂಶಗಳು, ಮಹತ್ವ ಮತ್ತು |
00:13 | ಅದನ್ನು ಮಾಡುವ ವಿಧಾನಗಳ ಬಗ್ಗೆ ಕಲಿಯುವೆವು. |
00:17 | ಕಾಂಗರೂ ಮದರ್ ಕೇರ್' ನ ಪರಿಚಯದೊಂದಿಗೆ ಆರಂಭಿಸೋಣ. |
00:22 | ಇದರ ಹೆಸರೇ ಸೂಚಿಸುವಂತೆ, ಇದು |
00:24 | ತಾಯಿಯು ತನ್ನ ಚರ್ಮವನ್ನು ಸ್ಪರ್ಶಿಸುವಂತೆ ಮಗುವನ್ನು ಹಿಡಿದುಕೊಳ್ಳುವುದನ್ನು ಒಳಗೊಂಡಿದೆ. |
00:29 | ಇದು KMC ಎಂದು ಜನಪ್ರಿಯವಾಗಿದೆ. |
00:32 | ನೆನಪಿಡಿ, ಮಗು ಜನಿಸಿದ ತಕ್ಷಣ KMC ಯನ್ನು ಕೊಡಬೇಕು. |
00:39 | ವಿಶೇಷವಾಗಿ ಮಗುವಿನ ಜನನ ತೂಕವು |
00:44 | ಎರಡೂವರೆ ಕಿಲೋಗಿಂತ ಕಡಿಮೆ ಇದ್ದಾಗ ಮತ್ತು ನಿರಂತರ ಮೇಲ್ವಿಚಾರಣೆ ಅಗತ್ಯವಿಲ್ಲದ |
00:48 | ಮಗುವಿಗೆ ಇದನ್ನು ಶಿಫಾರಸು ಮಾಡಲಾಗುತ್ತದೆ. |
00:52 | ಆದಾಗ್ಯೂ ಸಾಮಾನ್ಯ, ಆರೋಗ್ಯವಂತ, ಪೂರ್ಣಾವಧಿಯ ಎಲ್ಲಾ ಶಿಶುಗಳಿಗೆ ಕೂಡ ಇದನ್ನು ಬಳಸಬಹುದು. |
00:59 | KMC ಎರಡು ಮುಖ್ಯ ಅಂಶಗಳನ್ನು ಒಳಗೊಂಡಿದೆ: |
01:03 | ತಾಯಿ ಮತ್ತು ಮಗುವಿನ ನಡುವೆ, ನಿರಂತರ ಪರಸ್ಪರ ಚರ್ಮದ ಸಂಪರ್ಕ ಹಾಗೂ |
01:09 | ವಿಶೇಷವಾಗಿ ಹಾಲುಣಿಸುವಿಕೆ. |
01:13 | ಈ ಅಂಶಗಳನ್ನು ನಾವು ವಿವರವಾಗಿ ಚರ್ಚಿಸೋಣ. |
01:17 | ಮೊದಲನೆಯದು, ಪರಸ್ಪರ ಚರ್ಮದ ಸಂಪರ್ಕ. |
01:21 | ಇದು 'ಲೆಟ್ ಡೌನ್ ರಿಫ್ಲೆಕ್ಸ್' ಅನ್ನು ಸುಧಾರಿಸುತ್ತದೆ |
01:24 | ಮತ್ತು ಅಂತಿಮವಾಗಿ, ಎದೆಹಾಲಿನ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. |
01:28 | ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ, 'ಲೆಟ್ ಡೌನ್ ರಿಫ್ಲೆಕ್ಸ್' ಅನ್ನು ವಿವರಿಸಲಾಗಿದೆ. |
01:34 | ಎರಡನೆಯ ಅಂಶವು ವಿಶೇಷವಾಗಿ ಹಾಲುಣಿಸುವುದು ಆಗಿದೆ. |
01:38 | ಗಮನಿಸಿ- |
01:40 | ಮೊದಲ 6 ತಿಂಗಳಲ್ಲಿ ಹಾಲುಣಿಸುವುದನ್ನು ಮಾತ್ರ ಶಿಫಾರಸು ಮಾಡಲಾಗುತ್ತದೆ. |
01:45 | ನಂತರ, ನಾವು 'ಕಾಂಗರೂ ಕೇರ್' ನ ಮಹತ್ವವನ್ನು ಚರ್ಚಿಸೋಣ. |
01:50 | KMC ಸಮಯದಲ್ಲಿ, ಸುದೀರ್ಘವಾದ ಪರಸ್ಪರ ಚರ್ಮದ ಸಂಪರ್ಕವು, ಮಗುವಿನ ದೇಹದ ಉಷ್ಣಾಂಶವನ್ನು ಕಾಪಾಡಲು ಸಹಾಯ ಮಾಡುತ್ತದೆ |
01:57 | ಮತ್ತು ಮಗು ತಾನು ಸುರಕ್ಷಿತವಾಗಿದೆ ಎಂದು ಭಾವಿಸುತ್ತದೆ. |
02:01 | KMC ಇದು - |
02:03 | ಸೋಂಕಿನ ಆವರ್ತನ ಮತ್ತು |
02:05 | ಶಿಶುಗಳಲ್ಲಿ ಉಸಿರುಕಟ್ಟುವ ಅವಕಾಶಗಳನ್ನು ಕಡಿಮೆ ಮಾಡುತ್ತದೆ. |
02:09 | ಉಸಿರಾಟದಲ್ಲಿ ದೀರ್ಘ ವಿರಾಮಗಳನ್ನು ಆಪ್ನಿಯಾ (Apnea) ಎನ್ನುತ್ತಾರೆ. |
02:13 | ಅಲ್ಲದೆ - |
02:15 | KMC ಸ್ತನ್ಯಪಾನದ ಆವರ್ತನ ಮತ್ತು ಅವಧಿಯನ್ನು ಸುಧಾರಿಸುತ್ತದೆ. |
02:20 | ಅದು ತಾಯಿ ಮತ್ತು ಅವಳ ಮಗುವಿನ ನಡುವೆ ಭಾವನಾತ್ಮಕ ಬಂಧವನ್ನು ಬಲಪಡಿಸುತ್ತದೆ. |
02:26 | KMC, ಯಾವುದೇ ವಿಧಾನಗಳಿಗಿಂತ ತೂಕವನ್ನು ಹೆಚ್ಚಿಸಲು |
02:28 | ಮಗುವಿಗೆ ಸಹಾಯಮಾಡುತ್ತದೆ. ಉದಾಹರಣೆಗೆ, ಮಗುವನ್ನು |
02:33 | ರೇಡಿಯಂಟ್ ವಾರ್ಮರ್ ನಲ್ಲಿ (radiant warmer) ಇಡುವುದು. |
02:36 | ಇದರಿಂದ, ಮಗು ಮತ್ತು ತಾಯಿ ಇಬ್ಬರಿಗೂ ಒತ್ತಡ ಉಂಟಾಗುತ್ತದೆ. |
02:40 | ಇದು ತಾಯಿಗೆ ತೃಪ್ತಿ ಮತ್ತು ಭರವಸೆಯನ್ನು ಕೂಡ ಕೊಡುತ್ತದೆ. |
02:45 | ಏಕೆಂದರೆ, ಅವಳು ಮಗುವಿಗಾಗಿ ಹೆಚ್ಚಿನ ಶ್ರಮವಹಿಸುತ್ತಾಳೆ. |
02:49 | ಇದಲ್ಲದೆ, ತಾಯಂದಿರನ್ನು ಹೊರತುಪಡಿಸಿ, KMC ಅನ್ನು - |
02:54 | ತಂದೆ ಅಥವಾ |
02:56 | ಕುಟುಂಬದ ಯಾವುದೇ ವಯಸ್ಕ ಸದಸ್ಯರು ಒದಗಿಸಬಹುದು. |
02:58 | KMC ಯನ್ನು ಒದಗಿಸುವವರು ಅನುಸರಿಸಬೇಕಾದ ಅಂಶಗಳನ್ನು ಈಗ ಚರ್ಚಿಸುತ್ತೇವೆ: |
03:04 | KMC ಯನ್ನು ಒದಗಿಸುವವರು ಒಳ್ಳೆಯ ಆರೋಗ್ಯವನ್ನು ಹೊಂದಿರಬೇಕು. |
03:09 | ಅವನು ಅಥವಾ ಅವಳು ಸ್ವಚ್ಛತೆಯ ಅಭ್ಯಾಸಗಳಾದ - |
03:14 | ಕೈ ತೊಳೆಯುವುದು, |
03:16 | ದೈನಂದಿನ ಸ್ನಾನ, ಮೊಟಕುಗೊಳಿಸಿದ ಬೆರಳಿನ ಉಗುರುಗಳು, |
03:18 | ಕಟ್ಟಲಾದ ಕೂದಲು |
03:20 | ಮತ್ತು ಸ್ವಚ್ಛವಾದ ಬಟ್ಟೆ ಧರಿಸುವುದನ್ನು ಅನುಸರಿಸಬೇಕು. |
03:22 | ಯಾವುದೇ ಆಭರಣ, ಕೈಗಡಿಯಾರ ಮತ್ತು ದಾರಗಳನ್ನು ಧರಿಸಬಾರದು - |
03:26 | ಏಕೆಂದರೆ, ಇವು ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಅಡೆತಡೆಗಳಾಗಬಹುದು. |
03:31 | ಮತ್ತು, ಇದು ಮಗುವಿಗೆ ಗಾಯವನ್ನು ಉಂಟುಮಾಡಬಹುದು. |
03:35 | ಈಗ, KMC ಒದಗಿಸುವವರು, ಆ ಸಮಯದಲ್ಲಿ ಧರಿಸಬೇಕಾದ ಉಡುಪುಗಳ ವಿಧವನ್ನು ನಾವು ಚರ್ಚಿಸೋಣ - |
03:42 | ಬಟ್ಟೆಗಳು ಮುಂದಿನಿಂದ ತೆರೆಯುವಂತಿರಬೇಕು ಮತ್ತು ಹಗುರವಾಗಿರಬೇಕು. |
03:46 | ಉದಾಹರಣೆಗೆ, ಸೀರೆ-ಕುಪ್ಪಸ ಅಥವಾ ಮುಂದಿನಿಂದ ತೆರೆಯಬಲ್ಲ ಗೌನು. |
03:51 | ಗಮನಿಸಿ, KMC ಯನ್ನು ಒದಗಿಸುವವರು, ಮುಂಭಾಗದಲ್ಲಿ ತೆರೆದ ಗೌನು ಅಥವಾ ಕುಪ್ಪಸವನ್ನು KMC ಹೊದಿಕೆಯ ಸುತ್ತ ಧರಿಸಬೇಕು. |
03:58 | 'ಕಾಂಗರೂ' ಚೀಲಗಳು ಅಥವಾ ಬೈಂಡರನ್ನು ಮಾರುಕಟ್ಟೆಯಿಂದ ಸಹ ಖರೀದಿಸಬಹುದು. |
04:04 | KMCಅನ್ನು ಹೆಚ್ಚಿನ ಅವಧಿಗೆ ಮಾಡುವಾಗ ಇವುಗಳು ಉಪಯುಕ್ತವಾಗಿವೆ. |
04:09 | KMC ಅನ್ನು ಒದಗಿಸುವವರು, ಮೃದುವಾದ ಶುದ್ಧ ಹತ್ತಿಯ ಬಟ್ಟೆಯನ್ನು ಧರಿಸಬಹುದು. |
04:16 | ಆದರೆ, KMC ಸಮಯದಲ್ಲಿ ಮಗು, |
04:19 | ಟೊಪ್ಪಿಗೆ ಮತ್ತು ನ್ಯಾಪಿಯನ್ನು (ಡಯಾಪರ್) ಧರಿಸಬೇಕು. |
04:22 | ಈ ಸಮಯದಲ್ಲಿ ಮಗು ಮಲ ಮೂತ್ರವನ್ನು ವಿಸರ್ಜಿಸಿದರೆ, ಆಗ |
04:27 | ಮಗುವನ್ನು ಚೆನ್ನಾಗಿ ಸ್ವಚ್ಚಗೊಳಿಸಿ ಒರೆಸಬೇಕು. |
04:30 | ಆಮೇಲೆ, ನಾವು 'ಕಾಂಗರೂ ಕೇರ್'ನ ವಿಧಾನವನ್ನು ವಿವರವಾಗಿ ನೋಡುವೆವು. |
04:36 | ಮೊದಲು, ತಾಯಿಯು ನೇರವಾಗಿ ಎದ್ದುನಿಲ್ಲಬೇಕು. |
04:40 | ನಂತರ, ಆರೋಗ್ಯ ಕಾರ್ಯಕರ್ತೆ ಅಥವಾ ಕುಟುಂಬದ ಸದಸ್ಯಳು ಕ್ರಮವಾಗಿ ಹೀಗೆ ಮಾಡಬೇಕು - |
04:48 | ಮಗುವಿನ ಪೃಷ್ಠ ಮತ್ತು ತಲೆಯನ್ನು ಹಿಡಿದುಕೊಂಡು, |
04:51 | ತಾಯಿಯ ತೆರೆದ ಸ್ತನಗಳ ನಡುವೆ ಮಗುವನ್ನು ನೇರವಾಗಿ ಇರಿಸಿ. |
04:56 | ನಂತರ, ಮಗುವಿನ ತಲೆಯನ್ನು ಒಂದುಬದಿಗೆ ತಿರುಗಿಸಿ. |
05:00 | ತಲೆಯು ಸ್ವಲ್ಪ ಹಿಂದೆ ಬಾಗಿರುವುದನ್ನು ಖಚಿತಪಡಿಸಿಕೊಳ್ಳಿ. |
05:04 | ಇದರಿಂದ ಮಗುವಿನ ಉಸಿರಾಟಕ್ಕೆ ತೊಂದರೆಯಾಗುವುದಿಲ್ಲ |
05:08 | ಮತ್ತು, ಮಗು ತಾಯಿಯ ಜೊತೆಗೆ ಕಣ್ಣಿನ ಸಂಪರ್ಕವನ್ನು ಹೊಂದಬಹುದು. |
05:14 | ನಂತರ ಮಗುವಿನ ಸೊಂಟವನ್ನು ಸ್ವಲ್ಪ ಹೊರಕ್ಕೆ ಬಗ್ಗಿಸಿ, |
05:18 | ತೋಳುಗಳನ್ನು ತಾಯಿಯ ಸ್ತನದ ಮೇಲೆ ಮತ್ತು |
05:23 | ಕಾಲುಗಳನ್ನು ಸ್ತನದ ಕೆಳಗೆ ಮತ್ತು |
05:27 | ಹೊಟ್ಟೆಯನ್ನು ತಾಯಿಯ ಎದೆಯ ಮೇಲೆ ಇರಿಸಿ. |
05:29 | ಬಟ್ಟೆಯಿಂದ ಸುತ್ತುವ ಮೊದಲು - |
05:32 | ವಾತಾವರಣವು ತಂಪಾಗಿದ್ದರೆ, ಮಗುವಿಗೆ ಕಂಬಳಿಯನ್ನು ಹೊದಿಸಿ. |
05:36 | ಇದು, ಮಗು ಮತ್ತು ತಾಯಿಯನ್ನು ಬೆಚ್ಚಗೆ ಇಡುತ್ತದೆ. |
05:39 | ಆಮೇಲೆ, ಮಗು ಹಾಗೂ ತಾಯಿಯ ಎದೆ ಮತ್ತು ಹೊಟ್ಟೆಯ ಸುತ್ತಲೂ ಬಟ್ಟೆಯನ್ನು ಸುತ್ತಿ. |
05:45 | ಸುತ್ತುವಾಗ, ಈ ಅಂಶಗಳನ್ನು ಖಚಿತಪಡಿಸಿಕೊಳ್ಳಿ. |
05:47 | ಬಟ್ಟೆಯ ಮಧ್ಯಭಾಗವು ಮಗುವಿನ ಮೇಲಿದೆ. |
05:50 | ಬಟ್ಟೆಯ ಎರಡೂ ತುದಿಗಳು |
05:53 | ತಾಯಿಯ ಕಂಕುಳಗಳನ್ನು ಹಾದುಹೋಗಿ |
05:56 | ಬೆನ್ನಿನ ಹತ್ತಿರ ಒಂದಕ್ಕೊಂದು ಎದಿರಾಗುತ್ತವೆ. |
05:59 | ನಂತರ ಬಟ್ಟೆಯ ತುದಿಗಳನ್ನು ಮುಂಭಾಗಕ್ಕೆ ತನ್ನಿ. |
06:03 | ಮಗುವಿನ ಕೆಳಭಾಗದಲ್ಲಿ, ಬಟ್ಟೆಯ ಈ ತುದಿಗಳನ್ನು ಹಿಡಿದು ಗಂಟುಹಾಕಿ. |
06:09 | ಇದು ಆರಾಮವಾಗಿದ್ದು, ಮಗುವಿಗೆ ಆಧಾರವನ್ನು ಕೊಡುತ್ತದೆ. |
06:14 | ಅಲ್ಲದೆ, ಮಗು ಜಾರಿಬೀಳುವುದನ್ನು ಇದು ತಡೆಯುತ್ತದೆ. |
06:17 | ನೆನಪಿಡಿ- ಇದಕ್ಕೆ ಹೊಂದಿಕೊಂಡ ಮೇಲೆ, ತಾಯಿಯು ಸ್ವತಃ ತಾನೇ ಬಟ್ಟೆಯನ್ನು ಸುತ್ತಲು ಕಲಿಯಬೇಕು. |
06:24 | KMC ಸಮಯದಲ್ಲಿ ಬಟ್ಟೆಯನ್ನು ತಾನೇ ಸುತ್ತುವ ವಿಧಾನವನ್ನು, ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗುವುದು. |
06:32 | ಇದು ತಾಯಿಯ ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಅವಳನ್ನು ಸ್ವತಂತ್ರವಾಗಿಸುತ್ತದೆ. |
06:37 | ಬಟ್ಟೆಯನ್ನು ಬಳಸುವುದು ತಾಯಿಗೆ ಅನಾನುಕೂಲವಾದರೆ, ಆಗ ಅವಳು stretchy band ಅನ್ನು ಬಳಸಬಹುದು. |
06:43 | ಇದು ಬಳಸಲು ಸುಲಭ ಮತ್ತು ಅನುಕೂಲಕರವಾಗಿದೆ. |
06:46 | ಹಿಗ್ಗುವ ಬ್ಯಾಂಡ್ ಅನ್ನು ಬಳಸುವಾಗ, |
06:49 | ಬ್ಯಾಂಡ್ ನ ಅಂಚನ್ನು ಮಗುವಿನ ತಲೆಗೆ ಆಧಾರವಾಗಲು, ಅದರ ಕಿವಿಯ ಮೇಲಿರುವಂತೆ ಹೊಂದಿಸಿ. |
06:54 | ಆಮೇಲೆ, ಸರಾಗವಾಗಿ ಉಸಿರಾಡುವಂತೆ ಮತ್ತು |
06:57 | ಹಿಂದೆ ವಿವರಿಸಿದಂತೆ ತಾಯಿಯ ಜೊತೆಗೆ ಕಣ್ಣಿನ ಸಂಪರ್ಕವನ್ನು ಮಾಡಲು |
06:59 | ಸಾಧ್ಯವಾಗುವಂತೆ ಮಗುವಿನ ತಲೆಯನ್ನು ಸ್ವಲ್ಪ ಓರೆಯಾಗಿಸಿ. |
07:04 | ಸುತ್ತಿದ ಬಟ್ಟೆ ಅಥವಾ ಹಿಗ್ಗುವ ಬ್ಯಾಂಡ್, ತುಂಬಾ ಬಿಗಿ ಅಥವಾ ಸಡಿಲವಾಗಿ ಇರಬಾರದು. |
07:11 | ಮಗು ನಿರಾಳವಾಗಿ ಉಸಿರಾಡುವಂತೆ ಅದು ಸಾಕಷ್ಟು ಆರಾಮವಾಗಿರಬೇಕು. |
07:15 | ನೆನಪಿಡಿ, KMC ಭಂಗಿಯಲ್ಲಿ ಮಗುವನ್ನು ಹಿಡಿದುಕೊಂಡಾಗ, ತಾಯಿಯು - |
07:20 | ನಡೆಯಲು, ನಿಲ್ಲಲು, ಕುಳಿತುಕೊಳ್ಳಲು ಅಥವಾ |
07:23 | ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಬೇಕು. |
07:26 | ತಾಯಿಯು ಆರಾಮವಾಗಿದ್ದರೆ ಆಗ, |
07:29 | Kangaroo care ಸಮಯದಲ್ಲಿ, ಅವಳು ಒರಗಿಕೊಂಡು ಅಥವಾ ಅರೆ-ಒರಗಿದ ಸ್ಥಿತಿಯಲ್ಲಿ ಮಲಗಲು ಸಹ ಸಾಧ್ಯವಿದೆ. |
07:35 | KMC ಸಮಯದಲ್ಲಿ, ಮಗುವಿಗೆ ಹೇಗೆ ಹಾಲುಣಿಸಬೇಕು ಎಂದು ನಾವು ಈಗ ಚರ್ಚಿಸೋಣ. |
07:40 | ತಾಯಿಯು ಸುತ್ತಿದ ಬಟ್ಟೆಯನ್ನು ಸಡಿಲಗೊಳಿಸಿ, |
07:43 | ಸ್ತನ್ಯಪಾನಕ್ಕೆ ಮಗುವನ್ನು ಹಿಡಿದುಕೊಂಡು |
07:46 | ಮಗುವಿಗೆ ಹಾಲುಣಿಸಬಹುದು. |
07:50 | ಅಥವಾ, ಅವಳು ಕೈಯಿಂದ ಎದೆ ಹಾಲನ್ನು ಒತ್ತಿ ತೆಗೆದು |
07:54 | ಲೋಟ ಅಥವಾ ಚಮಚವನ್ನು ಬಳಸಿ ಮಗುವಿಗೆ ಹಾಲು ಕುಡಿಸಬಹುದು. |
07:57 | ನೆನಪಿಡಿ, ಪ್ರತಿದಿನ ಮಗು 25 ರಿಂದ 30 ಗ್ರಾಂ ನಷ್ಟು ತೂಕವನ್ನು ಪಡೆಯಬೇಕು. |
08:03 | ಒಂದು ತಿಂಗಳಿನಲ್ಲಿ, ಮಗುವಿನ ತೂಕದಲ್ಲಿಯ ನಿರೀಕ್ಷಿತ ಹೆಚ್ಚಳವು 900 ರಿಂದ 1,000 ಗ್ರಾಂ ವರೆಗೆ ಇರುತ್ತದೆ. |
08:10 | ಆದ್ದರಿಂದ ತಾಯಿ ಅಥವಾ ಆರೋಗ್ಯ ಕಾರ್ಯಕರ್ತರು, |
08:13 | ವಾಡಿಕೆಯ ತಪಾಸಣೆಗಳ ಸಮಯದಲ್ಲಿ, ಮಗುವಿನ ತೂಕವನ್ನು ಗಮನಿಸುತ್ತಿರಬೇಕು. |
08:17 | ಮಗುವಿನ ತೂಕದಲ್ಲಿ ಸಾಕಷ್ಟು ಹೆಚ್ಚಳ ಇಲ್ಲದಿದ್ದರೆ - |
08:21 | ಆರೋಗ್ಯ ಕಾರ್ಯಕರ್ತಳು, ಸ್ತನ್ಯಪಾನ ವಿಧಾನವನ್ನು ಅಥವಾ |
08:25 | ಮಗು ಎಷ್ಟು ಸಲ ಮೂತ್ರವಿಸರ್ಜನೆ ಮಾಡುತ್ತದೆ ಎಂದು ಗಮನಿಸಬೇಕು. |
08:28 | ಅಲ್ಲದೇ, ಸರಿಯಾದ ಲ್ಯಾಚಿಂಗ್ ಬಗ್ಗೆ ತಾಯಿಗೆ ಮಾರ್ಗದರ್ಶನ ಮಾಡಬೇಕು. |
08:32 | ಇದೇ ಸರಣಿಯ ಇನ್ನೊಂದು ಟ್ಯುಟೋರಿಯಲ್ ನಲ್ಲಿ, ಸರಿಯಾದ ಲ್ಯಾಚಿಂಗ್ ಬಗ್ಗೆ ವಿವರಿಸಲಾಗಿದೆ. |
08:39 | ಆಮೇಲೆ, ಸುತ್ತಿದ ಬಟ್ಟೆಯಿಂದ ಮಗುವನ್ನು ಹೇಗೆ ಹೊರಗೆ ತೆಗೆಯಬೇಕು ಎಂಬುದನ್ನು ನಾವು ಕಲಿಯೋಣ. |
08:44 | ಮೊದಲು, ತಾಯಿಯು ನೇರವಾಗಿ ಕುಳಿತುಕೊಳ್ಳಬೇಕು. |
08:48 | ನಂತರ, ಒಂದು ಕೈಯಿಂದ ಗಂಟು ಬಿಚ್ಚಲು ಆರಂಭಿಸಿ ಮತ್ತು |
08:53 | ಇನ್ನೊಂದು ಕೈಯಿಂದ ಸುತ್ತಿದ ಬಟ್ಟೆಯ ಹೊರಗಡೆ, ಮಗುವಿನ ಪೃಷ್ಠವನ್ನು ಹಿಡಿದುಕೊಳ್ಳಿ. |
08:58 | ಇದಾದ ನಂತರ, ಮೊದಲು ಗಂಟು ಬಿಚ್ಚಲು ಬಳಸಲಾದ ಕೈಯಿಂದಲೇ ಸುತ್ತಿದ ಬಟ್ಟೆಯನ್ನು ಸಡಿಲಗೊಳಿಸಿ. |
09:04 | ಆಮೇಲೆ, ಮಗುವಿನ ಕೆಳಗೆ ಹಿಡಿದುಕೊಂಡಿದ್ದ, ಬಟ್ಟೆಯ ಕೆಳಗಿರುವ ಕೈಯನ್ನು ಬದಲಾಯಿಸಿ. |
09:11 | ಬಟ್ಟೆಯ ಹೊರಗಿನಿಂದ ಮಗುವಿನ ಕೆಳಭಾಗವನ್ನು ಹಿಡಿದುಕೊಳ್ಳಲು, ಇನ್ನೊಂದು ಕೈಯನ್ನು ಬಳಸಿ. |
09:16 | ನಂತರ ಮಗುವನ್ನು ಮೇಲೆ ಎತ್ತಿಕೊಂಡು, ಸುತ್ತಿದ ಬಟ್ಟೆಯಿಂದ ಮಗುವನ್ನು ಮುಕ್ತಗೊಳಿಸಿ. |
09:21 | ಅದರ ನಂತರ, ಶಿಶುವಿನ ತಲೆಯನ್ನು ಹೀಗೆ ಹಿಡಿದುಕೊಳ್ಳಲು ನೆನಪಿಡಿ- |
09:26 | ಹೆಬ್ಬೆರಳು ಒಂದು ಕಿವಿಯ ಹಿಂದೆ ಮತ್ತು |
09:28 | ಉಳಿದ ಬೆರಳುಗಳು ಇನ್ನೊಂದು ಕಿವಿಯ ಸುತ್ತಲೂ ಇರಬೇಕು. |
09:30 | KMC ಸಮಯದಲ್ಲಿ- |
09:32 | ಈ ಕೆಳಗಿನ ಸಂದರ್ಭಗಳಲ್ಲಿ, ತಾಯಿಯು ತಕ್ಷಣವೇ ವೈದ್ಯ ಮತ್ತು ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಬೇಕು- |
09:37 | ಮಗು ಚುರುಕಾಗಿ, ಚಟುವಟಿಕೆಯಿಂದ ಇರದಿದ್ದರೆ, |
09:41 | ಮಗು ವೇಗವಾಗಿ ಉಸಿರಾಡುತ್ತಿದ್ದರೆ ಅಥವಾ ದೀರ್ಘ ವಿರಾಮವನ್ನು ಪಡೆಯುತ್ತಿದ್ದರೆ, |
09:46 | ಮಗುವಿನ ತುಟಿಗಳು ಅಥವಾ ನಾಲಿಗೆ ನೀಲಿ ಬಣ್ಣಕ್ಕೆ ತಿರುಗಿದರೆ, |
09:50 | ಮತ್ತು ಮಗುವಿನ ಪಾದಗಳು ತಣ್ಣಗಾದಾಗ. |
09:53 | ಇಲ್ಲಿಗೆ, Kangaroo mother care ಟ್ಯುಟೋರಿಯಲ್ ಮುಗಿಯಿತು. |
09:57 | ಈ ಸ್ಕ್ರಿಪ್ಟ್ ಗೆ ಧ್ವನಿ ನೀಡಿದವರು ಶ್ರೀಮತಿ ನಯನಾ ಭಟ್.
ಧನ್ಯವಾದಗಳು. |