Difference between revisions of "Health-and-Nutrition/C2/Side-lying-hold-for-breastfeeding/Kannada"

From Script | Spoken-Tutorial
Jump to: navigation, search
 
Line 258: Line 258:
 
ಒಂದುವೇಳೆ, ತಾಯಿಗೆ ತನ್ನ ಇನ್ನೊಂದು ಸ್ತನದಿಂದ ಹಾಲುಣಿಸಬೇಕಾಗಿದ್ದರೆ, ಆಗ ಅವಳು ಆ ಬದಿಗೆ ಹೊರಳಬೇಕು.
 
ಒಂದುವೇಳೆ, ತಾಯಿಗೆ ತನ್ನ ಇನ್ನೊಂದು ಸ್ತನದಿಂದ ಹಾಲುಣಿಸಬೇಕಾಗಿದ್ದರೆ, ಆಗ ಅವಳು ಆ ಬದಿಗೆ ಹೊರಳಬೇಕು.
 
|-  
 
|-  
|09:43
+
|09:41
 
| ಈ ಚಿತ್ರದಲ್ಲಿರುವ ತಾಯಿಯು ಎಡಗಡೆಯ ಸ್ತನದಿಂದ ಹಾಲುಣಿಸಲು ತನ್ನ ಎಡಬದಿಗೆ ಹೊರಳಿದ್ದಾಳೆ.  
 
| ಈ ಚಿತ್ರದಲ್ಲಿರುವ ತಾಯಿಯು ಎಡಗಡೆಯ ಸ್ತನದಿಂದ ಹಾಲುಣಿಸಲು ತನ್ನ ಎಡಬದಿಗೆ ಹೊರಳಿದ್ದಾಳೆ.  
 
|-  
 
|-  
|09:50
+
|09:47
 
| ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.  
 
| ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.  
ಈ ಸ್ಕ್ರಿಪ್ಟ್ ನ ಅನುವಾದಕಿ '''IIT Bombay''' ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಗ್ಲೋರಿಯಾ.
+
|-
 +
|09:50
 +
|ಈ ಸ್ಕ್ರಿಪ್ಟ್ ನ ಅನುವಾದಕಿ '''IIT Bombay''' ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಗ್ಲೋರಿಯಾ.
 
ಧನ್ಯವಾದಗಳು.
 
ಧನ್ಯವಾದಗಳು.
 +
|-
 
|}
 
|}

Latest revision as of 12:10, 27 August 2020

Time
Narration
00:01 Side-Lying hold for breastfeeding ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು, ತಾಯಿಯು ಹಾಲುಣಿಸುವಾಗ ಮಗುವನ್ನು ಹಿಡಿದುಕೊಳ್ಳುವ ಸರಿಯಾದ ವಿಧಾನವನ್ನು ಆರಿಸಿಕೊಳ್ಳುವುದು,
00:13 ಸ್ತನ್ಯಪಾನದ ಮೊದಲು ತಾಯಿಯ ತಯಾರಿ ಮತ್ತು 'ಸೈಡ್-ಲೈಯಿಂಗ್ ಹೋಲ್ಡ್' ಅನ್ನು ಹೇಗೆ ಮಾಡುವುದು ಇವುಗಳ ಬಗ್ಗೆ ಕಲಿಯುವೆವು.
00:20 ನಾವು ಈಗ ಆರಂಭಿಸೋಣ. ಪ್ರಪಂಚದಾದ್ಯಂತ ತಾಯಂದಿರು ತಮ್ಮ ಮಗುವನ್ನು ವಿವಿಧ ರೀತಿಯಲ್ಲಿ ಹಿಡಿದುಕೊಂಡು ಸ್ತನ್ಯಪಾನ ಮಾಡಿಸುತ್ತಾರೆ.
00:27 ಹಿಂದಿನ ಟ್ಯುಟೋರಿಯಲ್ ನಲ್ಲಿ ವಿವರಿಸಿದಂತೆ, ತಾಯಿಯು ಹಾಲುಣಿಸುವಾಗ ಅವಳ ಮಗುವನ್ನು ಹಿಡಿದುಕೊಳ್ಳುವ ಅತ್ಯುತ್ತಮ ವಿಧಾನವು ಈ ಕೆಳಗಿನಂತೆ ಇರುತ್ತದೆ:

ಹಾಲುಣಿಸುವ ಸಂಪೂರ್ಣ ಅವಧಿಯಲ್ಲಿ, ತಾಯಿ ಮತ್ತು ಮಗು ಇಬ್ಬರೂ ಆರಾಮವಾಗಿರುತ್ತಾರೆ.

00:40 ಮಗು, ತಾಯಿಯ ಸ್ತನಕ್ಕೆ ಚೆನ್ನಾಗಿ ಜೋಡಿಸಿಕೊಳ್ಳಲು ಸಾಧ್ಯವಾಗಿರುತ್ತದೆ.
00:45 ಮತ್ತು, ಮಗುವಿಗೆ ಸಾಕಷ್ಟು ಹಾಲು ಸಿಗುತ್ತದೆ.
00:49 'ಸೈಡ್-ಲೈಯಿಂಗ್ ಹೋಲ್ಡ್' (Side-lying hold) ಎಂಬ ಒಂದು ಹೊಸ ವಿಧಾನದ ಬಗ್ಗೆ ನಾವು ತಿಳಿದುಕೊಳ್ಳೋಣ.
00:54 ತಾಯಿಯು ರಾತ್ರಿಯಲ್ಲಿ ಹಾಲುಣಿಸುತ್ತಿದ್ದರೆ,
00:59 ಅಥವಾ, ತಾಯಿಗೆ ಸಿಸೇರಿಯನ್ ಸೆಕ್ಷನ್ ವಿಧಾನದಲ್ಲಿ ಹೆರಿಗೆಯಾಗಿದ್ದರೆ,
01:03 ಅಥವಾ, ತಾಯಿಯು ದಣಿದಿದ್ದರೆ ಅಂತಹ ಸಂದರ್ಭಗಳಲ್ಲಿ ಈ ವಿಧಾನವನ್ನು ಶಿಫಾರಸು ಮಾಡಲಾಗುತ್ತದೆ.
01:06 ಮಗುವಿಗೆ ಹಾಲುಣಿಸುವ ಮೊದಲು ತಾಯಿಯು ಸಾಬೂನು ಹಾಗೂ ನೀರಿನಿಂದ ತನ್ನ ಕೈಗಳನ್ನು ಚೆನ್ನಾಗಿ ತೊಳೆದುಕೊಂಡು ಒಣಗಿಸಬೇಕು.
01:14 ನಂತರ ಅವಳು ಒಂದು ಲೋಟ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು.
01:18 ಹಾಲುಣಿಸುವ ತಾಯಂದಿರು ದಿನದಲ್ಲಿ ಸರಾಸರಿ 750 ರಿಂದ 850 ಮಿಲಿಲೀಟರ್ ಹಾಲನ್ನು ಉತ್ಪಾದಿಸುತ್ತಾರೆ.

ಆದ್ದರಿಂದ, ಅವರು ತಮ್ಮ ದೈನಂದಿನ ನೀರಿನ ಸೇವನೆಯನ್ನು ಹೆಚ್ಚಿಸಿಕೊಳ್ಳಬೇಕು.

01:30 ನಂತರ, ತಾಯಿಯು ಮಗುವಿಗೆ ಹಾಲುಣಿಸುವ ಸ್ತನವನ್ನು ಮಾತ್ರ ಹೊರಗೆ ತೆಗೆಯಬೇಕು.
01:35 ಅವಳು ಸ್ತನದ ಮೇಲೆ ತನ್ನ ಬ್ರಾ ಅಥವಾ ಕುಪ್ಪಸದ ಒತ್ತಡವು ಬಾರದಂತೆ ನೋಡಿಕೊಳ್ಳಬೇಕು.
01:41 ನಂತರ, ತಾಯಿಯು ಹಾಲುಣಿಸಬೇಕೆಂದಿರುವ ಸ್ತನದ ಬದಿಯಲ್ಲಿ ಹೊರಳಿ, ಆರಾಮವಾಗಿ ಒರಗಿಕೊಳ್ಳಬೇಕು.
01:48 ಅವಳು ತನ್ನ ತಲೆಯ ಕೆಳಗೆ ಒಂದು ದಿಂಬನ್ನು ಇಟ್ಟುಕೊಳ್ಳಬೇಕು. ಮತ್ತು, ನಿದ್ದೆಯಲ್ಲಿ ಹೊರಳಿ ಬೀಳದಂತೆ, ಕಾಲುಗಳ ನಡುವೆ ಒಂದು ದಿಂಬನ್ನು ಇಟ್ಟುಕೊಳ್ಳಬೇಕು.
01:57 ಈ ಚಿತ್ರದಲ್ಲಿ, ತಾಯಿಯು ಮಗುವಿಗೆ ತನ್ನ ಬಲಗಡೆಯ ಸ್ತನದಿಂದ ಹಾಲುಣಿಸುವಳು. ಆದ್ದರಿಂದ ಅವಳು ಬಲಮಗ್ಗುಲಾಗಿ ಒರಗಿಕೊಂಡಿದ್ದಾಳೆ.
02:06 ನಂತರ, ಮಗುವನ್ನು ಸರಿಯಾಗಿ ಹೇಗೆ ಹಿಡಿದುಕೊಳ್ಳುವುದು ಎಂಬುದನ್ನು ಕಲಿಯೋಣ.
02:12 ಮಗುವಿನ ಹೊಟ್ಟೆಯನ್ನು ತಾಯಿಯ ದೇಹವು ಮೃದುವಾಗಿ ಒತ್ತುವಂತೆ, ಮಗುವನ್ನು ಮಗ್ಗುಲಾಗಿ ಇರಿಸಿ.
02:21 ತಾಯಿಯು ತಾನು ಮಗ್ಗುಲಾಗಿ ಮಲಗಿರುವ ಬದಿಯ ಕೈಯಿಂದ, ತನ್ನ ಮಗುವಿನ ಬೆನ್ನನ್ನು ಹಿಡಿದುಕೊಳ್ಳಬೇಕು.
02:29 ಈ ಚಿತ್ರದಲ್ಲಿರುವ ತಾಯಿಯು, ಬಲಗೈಯಿಂದ ತನ್ನ ಮಗುವಿನ ಬೆನ್ನನ್ನು ಹಿಡಿದುಕೊಂಡಿದ್ದಾಳೆ.
02:36 ಮಗುವನ್ನು ತನ್ನ ಹತ್ತಿರದಲ್ಲಿ ಹಿಡಿದುಕೊಳ್ಳಲು, ತಾಯಿಯು ಮಗುವಿನ ಬೆನ್ನಹಿಂದೆ ಒಂದು ದಿಂಬನ್ನು ಇಡಬಹುದು.
02:42 ಅವರಿಬ್ಬರ ದೇಹಗಳ ನಡುವಿನ ಕಡಿಮೆ ಅಂತರವು, ಸ್ತನವನ್ನು ತಲುಪುವ ಮಗುವಿನ ಪ್ರಯತ್ನವನ್ನು ಕಡಿಮೆ ಮಾಡುತ್ತದೆ.
02:49 ಮತ್ತು, ಮಗು ತಾಯಿಯ ಸ್ತನಕ್ಕೆ ಸರಿಯಾಗಿ ಅಂಟಿಕೊಳ್ಳಲು ಸುಲಭವಾಗುತ್ತದೆ.
02:55 ನೆನಪಿಡಿ, ಯಾವಾಗಲೂ ತಾಯಿಯು ತನ್ನ ಬೆನ್ನನ್ನು ಬಗ್ಗಿಸಿ ಸ್ತನವನ್ನು ಮಗುವಿನ ಹತ್ತಿರ ತರಬಾರದು.

ಇದು ಮಗುವಿನ ಹೊಟ್ಟೆ ಮತ್ತು ತಾಯಿಯ ಶರೀರದ ನಡುವಿನ ದೂರವನ್ನು ಹೆಚ್ಚಿಸುವುದು.

03:06 ಅವಳು ತನ್ನ ಬೆನ್ನನ್ನು ಯಾವಾಗಲೂ ನೇರವಾಗಿ ಇಟ್ಟುಕೊಳ್ಳಬೇಕು ಮತ್ತು ಮಗುವನ್ನು ಸ್ತನದೆಡೆಗೆ ತರಬೇಕು.
03:12 ಎರಡನೆಯದಾಗಿ, ಮಗುವಿನ ಸಂಪೂರ್ಣ ಶರೀರವನ್ನು ಹಿಡಿದುಕೊಂಡಿರುವ ದಿಕ್ಕು ಸಹ ಮುಖ್ಯವಾಗಿದೆ.
03:21 ನಾವು ಆಹಾರವನ್ನು ಸೇವಿಸುವಾಗ, ನಮ್ಮ ತಲೆ, ಕುತ್ತಿಗೆ ಮತ್ತು ದೇಹವು ಯಾವಾಗಲೂ ಒಂದೇ ದಿಕ್ಕಿನಲ್ಲಿ ಇರುವುದನ್ನು ನೀವು ಗಮನಿಸಿರಬಹುದು.
03:31 ಹೀಗೆಯೇ, ಸ್ತನ್ಯಪಾನ ಮಾಡಿಸುವಾಗ ಮಗುವಿನ ತಲೆ, ಕುತ್ತಿಗೆ ಮತ್ತು ದೇಹವು ಒಂದೇ ದಿಕ್ಕಿನಲ್ಲಿರಬೇಕು.
03:39 ಇದು ಮಗುವಿಗೆ ಹಾಲನ್ನು ನುಂಗಲು ಸುಲಭವಾಗುವಂತೆ ಮಾಡುತ್ತದೆ.
03:44 ಈಗ ಮಗುವಿನ ದೇಹವನ್ನು ಹೊಂದಿಸುವ ಬಗ್ಗೆ ನಾವು ಮೂರನೆಯ ವಿಧಾನಕ್ಕೆ ಬರುತ್ತೇವೆ.
03:50 ತಾಯಿಯು ತನ್ನ ಕೈಯಿಂದ ಮಗುವಿನ ಬೆನ್ನನ್ನು ಹಿಡಿದುಕೊಳ್ಳಬೇಕು.
03:54 ಇಲ್ಲದಿದ್ದರೆ, ಮಗುವು ತಾಯಿಯ ಸ್ತನಕ್ಕೆ ಗಟ್ಟಿಯಾಗಿ ಅಂಟಿಕೊಳ್ಳಲು (attach) ಬಹಳ ಪ್ರಯತ್ನಿಸಬೇಕಾಗುವುದು.
04:01 ನಂತರ, ನಾವು ಮಗುವಿನ ಮೂಗು ಮತ್ತು ಗದ್ದಗಳ ಸ್ಥಾನವನ್ನು ನೋಡೋಣ.
04:07 ಶಿಶುವಿನ ಮೂಗು, ತಾಯಿಯ ಮೊಲೆತೊಟ್ಟು ಒಂದೇ ಸಾಲಿನಲ್ಲಿರಬೇಕು.
04:13 ಮತ್ತು, ಗದ್ದವು ಮುಂದೆ ಬಂದಿದ್ದು ಸ್ತನಕ್ಕೆ ಅತೀ ಹತ್ತಿರವಾಗಿರಬೇಕು.
04:17 ಲ್ಯಾಚಿಂಗ್ ಸಮಯದಲ್ಲಿ, ಶಿಶು ಅರಿಯೋಲಾದ ಕೆಳಭಾಗದಲ್ಲಿ ಹೆಚ್ಚಿನ ಭಾಗವನ್ನು ತೆಗೆದುಕೊಳ್ಳುವುದನ್ನು ಇದು ಖಚಿತಪಡಿಸುತ್ತದೆ.
04:25 ಹೀಗಾಗಿ, ಹೆಚ್ಚು ಹಾಲನ್ನು ಚೆನ್ನಾಗಿ ಕುಡಿಯಲು ಕೆಳದವಡೆಯನ್ನು ಬಳಸುತ್ತದೆ.
04:32 ದಯವಿಟ್ಟು ಗಮನಿಸಿ: ಅರಿಯೋಲಾ, ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗವಾಗಿದೆ.
04:39 ಈಗ ಮಗುವನ್ನು ಸರಿಯಾಗಿ ಹಿಡಿದುಕೊಂಡಿರುವುದರಿಂದ, ಸ್ತನವನ್ನು ಹೇಗೆ ಹಿಡಿದುಕೊಳ್ಳಬೇಕು ಎಂದು ನಾವು ಕಲಿಯೋಣ.
04:46 ತನ್ನ ಖಾಲಿ ಇರುವ ಕೈಯ ಬೆರಳುಗಳನ್ನು ಬಳಸಿ, ತಾಯಿಯು C ಆಕಾರದಲ್ಲಿ ಇರುವಂತೆ ಬದಿಯಿಂದ ತನ್ನ ಸ್ತನವನ್ನು ಹಿಡಿಯಬೇಕು.
04:55 ಈ ಚಿತ್ರದಲ್ಲಿರುವ ತಾಯಿಯು, ತನ್ನ ಬಲಗಡೆಯ ಸ್ತನವನ್ನು ಹಿಡಿದುಕೊಳ್ಳಲು ಎಡಗೈಯನ್ನು ಬಳಸುತ್ತಾಳೆ.
05:05 ಸ್ತನವನ್ನು ಹಿಡಿದುಕೊಂಡಿರುವ ಬೆರಳುಗಳು ಯಾವಾಗಲೂ ಮಗುವಿನ ತುಟಿಗಳಿರುವ ದಿಕ್ಕಿನಲ್ಲಿಯೇ ಇರಬೇಕು.
05:13 ಯಾಕೆ? ಸರಳವಾದ ಒಂದು ಉದಾಹರಣೆಯನ್ನು ಬಳಸಿ, ನಾವು ಇದನ್ನು ತಿಳಿದುಕೊಳ್ಳೋಣ.
05:18 ನಾವು ವಡಾ-ಪಾವ್ ಅಥವಾ ಬರ್ಗರ್ ಅನ್ನು ತಿನ್ನುವಾಗ, ನಮ್ಮ ತುಟಿಗಳು ಅಡ್ಡಲಾಗಿ ತೆರೆದುಕೊಳ್ಳುತ್ತವೆ.
05:25 ದೊಡ್ಡ ತುತ್ತನ್ನು ತೆಗೆದುಕೊಳ್ಳಲು, ನಾವು ವಡಾ-ಪಾವ್ ಅಥವಾ ಬರ್ಗರ್ ಅನ್ನು ಅಡ್ಡಲಾಗಿ ಹಿಡಿದುಕೊಳ್ಳುತ್ತೇವೆ.
05:31 ಇಲ್ಲಿ, ಹೆಬ್ಬೆರಳು ಮತ್ತು ಬೆರಳುಗಳನ್ನು ತುಟಿಗಳಿರುವ ದಿಕ್ಕಿನಲ್ಲಿ ಇರಿಸಲಾಗಿದೆ.
05:37 ನಾವು ವಡಾ-ಪಾವ್ ಅಥವಾ ಬರ್ಗರ್ ಅನ್ನು ಲಂಬವಾಗಿ ಹಿಡಿದರೆ, ದೊಡ್ಡ ತುತ್ತನ್ನು ತೆಗೆದುಕೊಳ್ಳಲು ನಮಗೆ ಸಾಧ್ಯವಾಗುವುದಿಲ್ಲ.
05:44 ಹಾಗೆಯೇ, ಮಗುವಿನ ತುಟಿಗಳ ದಿಕ್ಕನ್ನು ಗಮನಿಸಿ. ತುಟಿಗಳು ಇಲ್ಲಿ ಅಡ್ಡಲಾಗಿವೆ.
05:51 ಆದ್ದರಿಂದ, ತಾಯಿಯ ಬೆರಳುಗಳು ಮತ್ತು ಹೆಬ್ಬೆರಳನ್ನು ಕೂಡ ಸ್ತನದ ಮೇಲೆ ಅಡ್ಡಲಾಗಿ ಇರಿಸಬೇಕು.
05:59 ಇದು, ಮಗುವಿಗೆ ತನ್ನ ಬಾಯಿಯಲ್ಲಿ ಕೆಳಗಿನ ಅರಿಯೋಲಾದ ದೊಡ್ಡ ಭಾಗವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
06:05 ಮಗುವಿನ ತುಟಿಗಳ ದಿಕ್ಕಿನಲ್ಲಿ ಇರುವುದರ ಜೊತೆಗೇ ತಾಯಿಯ ಹೆಬ್ಬೆರಳು ಮತ್ತು ಬೆರಳುಗಳು ಯಾವಾಗಲೂ ಮೊಲೆತೊಟ್ಟಿನಿಂದ 3 ಬೆರಳುಗಳ ದೂರದಲ್ಲಿರಬೇಕು.
06:18 ಮತ್ತೆ, ವಡಾ-ಪಾವ್ ಅಥವಾ ಬರ್ಗರ್ ಅನ್ನು ತಿನ್ನುವಾಗ, ನಾವು ಅದನ್ನು ಬಹಳ ಹತ್ತಿರದಲ್ಲಿ ಹಿಡಿದುಕೊಂಡರೆ, ನಮ್ಮ ಬೆರಳುಗಳು ದೊಡ್ಡ ತುತ್ತನ್ನು ತೆಗೆದುಕೊಳ್ಳದಂತೆ ಬಾಯಿಗೆ ಅಡ್ಡಬರುತ್ತವೆ.
06:28 ನಾವು ಅದನ್ನು ತುಂಬಾ ದೂರದಲ್ಲಿ ಹಿಡಿದರೆ, ಅದು ನಮ್ಮ ಬಾಯಿಯಲ್ಲಿ ಹೋಗಲು ಯೋಗ್ಯವಾದ ಆಕಾರದಲ್ಲಿ ಇರುವುದಿಲ್ಲ.
06:34 ಆದ್ದರಿಂದ, ದೊಡ್ಡ ತುತ್ತನ್ನು ತೆಗೆದುಕೊಳ್ಳಲು, ನಾವು ಅದನ್ನು ಸರಿಯಾದ ಅಂತರದಲ್ಲಿ ಹಿಡಿದುಕೊಳ್ಳುತ್ತೇವೆ.
06:40 ಹೀಗೆಯೇ, ಈ ಚಿತ್ರದಲ್ಲಿ ತೋರಿಸಿರುವಂತೆ, ಮಗುವಿಗಾಗಿ ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರವು ಸರಿಯಾಗಿದೆ.
06:49 ಮಗುವು ತನ್ನ ಬಾಯಿಯಲ್ಲಿ ಕೆಳಗಿನ ಅರಿಯೋಲಾವನ್ನು ತೆಗೆದುಕೊಳ್ಳುವಾಗ ತಾಯಿಯ ಬೆರಳುಗಳು ಅಡ್ಡಬರುವುದಿಲ್ಲ,
06:58 ತಾಯಿಯು ಕೇವಲ ಮೊಲೆತೊಟ್ಟನ್ನು ಮಾತ್ರ ಒತ್ತುವುದಿಲ್ಲ. ಏಕೆಂದರೆ, ಇದರಿಂದ ತುಂಬಾ ಕಡಿಮೆ ಹಾಲು ಸಿಗುತ್ತದೆ,
07:05 ತಾಯಿಯು, ಹೆಚ್ಚು ಹಾಲು ಹೊರಗೆ ಬರಲು ಅರಿಯೋಲಾದ ಕೆಳಗೆ, ಹಾಲಿನ ದೊಡ್ಡ ನಾಳಗಳನ್ನು ಒತ್ತುತ್ತಾಳೆ,
07:12 ಮತ್ತು, ಮಗುವಿಗೆ ಗಟ್ಟಿಯಾಗಿ ಅಂಟಿಕೊಳ್ಳಲು ಸಹಾಯವಾಗುವಂತೆ ಸ್ತನವನ್ನು ಸರಿಯಾಗಿ ಹಿಡಿಯಲಾಗಿದೆ ಎಂದು ಈ ದೂರವು ಖಚಿತಪಡಿಸುತ್ತದೆ.
07:19 ನಾವು ವಡಾ- ಪಾವ್ ಅಥವಾ ಬರ್ಗರ್ ನ ಉದಾಹರಣೆಗೆ ಹಿಂತಿರುಗೋಣ.
07:24 ವಡಾ-ಪಾವ್ ಅಥವಾ ಬರ್ಗರ್ ಅನ್ನು ಸರಿಯಾಗಿ ಹಿಡಿದ ನಂತರ, ದೊಡ್ಡ ತುತ್ತು (bite) ತೆಗೆದುಕೊಳ್ಳಲು ನಾವು ಯಾವಾಗಲೂ ಅದನ್ನು ಅದುಮಿ ಹಿಡಿಯುತ್ತೇವೆ.
07:32 ಹೀಗೆಯೇ, ತಾಯಿಯು ತನ್ನ ಸ್ತನವನ್ನು ಬದಿಯಿಂದ C ಆಕಾರದಲ್ಲಿ ಮೆತ್ತಗೆ ಅದುಮಬೇಕು.

ಇದು, ಮಗುವಿಗೆ ಸ್ತನದ ದೊಡ್ಡ ಭಾಗವನ್ನು ತನ್ನ ಬಾಯಿಯಲ್ಲಿ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

07:46 ಆದರೆ ನೆನಪಿಡಿ, ತಾಯಿಯು ತನ್ನ ಸ್ತನವನ್ನು ಕತ್ತರಿಯ ಆಕಾರದಲ್ಲಿ ಹಿಡಿದು ಅದುಮಬಾರದು.
07:53 ಕತ್ತರಿಯ ಆಕಾರದ ಒತ್ತುವಿಕೆಯು ಸ್ತನವನ್ನು ಹಿಸುಕುತ್ತದೆ ಮತ್ತು ನಿಪ್ಪಲ್ ಫೀಡಿಂಗ್ ಅನ್ನು ಉಂಟುಮಾಡುತ್ತದೆ.
08:00 ಅಲ್ಲದೆ, ಹೆಬ್ಬೆರಳು ಮತ್ತು ಬೆರಳುಗಳಿಂದ ಸ್ತನವನ್ನು ಸಮನಾಗಿ ಒತ್ತಲಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳಿ.
08:07 ಇಲ್ಲದಿದ್ದರೆ, ಮೊಲೆತೊಟ್ಟು ಮೇಲ್ಗಡೆ ಅಥವಾ ಕೆಳಗೆ ಸರಿದುಬಿಡುತ್ತದೆ.
08:14 ಮತ್ತು ಮಗು ಎದೆಗೆ ಸರಿಯಾಗಿ ಜೋಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
08:19 ಈಗ, ಮಗು 'ಸೈಡ್-ಲೈಯಿಂಗ್ ಹೋಲ್ಡ್' ನಲ್ಲಿ ಇದೆ. ಮತ್ತು, ಹಾಲುಕುಡಿಯಲು ಸ್ತನಕ್ಕೆ ಜೋಡಿಸಿಕೊಳ್ಳಲು ಸಿದ್ಧವಾಗಿದೆ.
08:27 ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ, ಸ್ತನಕ್ಕೆ ಮಗುವಿನ ಸರಿಯಾದ ಜೋಡಣೆಯ ಬಗ್ಗೆ ವಿವರಿಸಲಾಗಿದೆ.
08:34 ಮಗು ಸ್ತನಕ್ಕೆ ಸರಿಯಾಗಿ ಅಂಟಿಕೊಂಡ ಕೂಡಲೇ ತಾಯಿಯು ಸ್ತನವನ್ನು ತನ್ನ ಕೈಯಿಂದ ಬಿಡಬೇಕು.
08:41 ಮಗುವಿನ ಬೆನ್ನನ್ನು ಹಿಡಿದುಕೊಳ್ಳಲು ಮತ್ತು ಮಗುವನ್ನು ತನ್ನ ಶರೀರದ ಹತ್ತಿರ ಇಟ್ಟುಕೊಳ್ಳಲು ಅವಳು ಈ ಕೈಯನ್ನು ಬಳಸಬೇಕು.
08:49 ಅಲ್ಲದೇ, ಅವಳು ತನ್ನ ಇನ್ನೊಂದು ಕೈಯನ್ನು ಮಗುವಿನ ಬೆನ್ನಿನಿಂದ ಸರಿಸಿ ಅದನ್ನು ತನ್ನ ಶರೀರಕ್ಕೆ 90 ಡಿಗ್ರೀಯಲ್ಲಿ ಇರುವಂತೆ ಇಡಬೇಕು.
08:58 ಅವಳು ಆ ಕೈಯ ಮೊಣಕೈಯನ್ನು ಬಾಗಿಸಬೇಕು. ಆಮೇಲೆ, ಆ ಕೈಯನ್ನು ದಿಂಬಿನ ಕೆಳಗೆ ತೂರಿಸಬೇಕು.
09:04 ಈ ಚಿತ್ರದಲ್ಲಿರುವ ತಾಯಿಯು, ತನ್ನ ಎಡಗೈಯಲ್ಲಿ ಹಿಡಿದಿದ್ದ ಬಲಗಡೆಯ ಸ್ತನವನ್ನು ಬಿಟ್ಟಿದ್ದಾಳೆ.
09:11 ಅವಳು ಎಡಗೈಯನ್ನು, ಮಗುವಿನ ಬೆನ್ನನ್ನು ಹಿಡಿಯಲು ಮತ್ತು ಮಗುವನ್ನು ತನ್ನ ಹತ್ತಿರದಲ್ಲಿ ಹಿಡಿದುಕೊಳ್ಳಲು ಬಳಸುತ್ತಿದ್ದಾಳೆ.
09:19 ಅವಳು ತನ್ನ ಬಲಗೈಯನ್ನು ಮಗುವಿನ ಬೆನ್ನಿನಿಂದ ಸರಿಸಿದ್ದಾಳೆ.
09:22 ಅವಳು ಅದನ್ನು ತನ್ನ ಶರೀರಕ್ಕೆ 90 ಡಿಗ್ರೀಯಲ್ಲಿಇರಿಸಿದ್ದಾಳೆ.
09:26 ಅವಳ ಬಲ ಮೊಣಕೈ ಬಾಗಿದೆ.
09:29 ಅವಳ ಬಲಗೈಯನ್ನು ದಿಂಬಿನ ಕೆಳಗೆ ಇರಿಸಲಾಗಿದೆ.
09:33 ಮೊದಲನೆಯ ಸ್ತನದಿಂದ ಹಾಲುಣಿಸಿದ ನಂತರ-

ಒಂದುವೇಳೆ, ತಾಯಿಗೆ ತನ್ನ ಇನ್ನೊಂದು ಸ್ತನದಿಂದ ಹಾಲುಣಿಸಬೇಕಾಗಿದ್ದರೆ, ಆಗ ಅವಳು ಆ ಬದಿಗೆ ಹೊರಳಬೇಕು.

09:41 ಈ ಚಿತ್ರದಲ್ಲಿರುವ ತಾಯಿಯು ಎಡಗಡೆಯ ಸ್ತನದಿಂದ ಹಾಲುಣಿಸಲು ತನ್ನ ಎಡಬದಿಗೆ ಹೊರಳಿದ್ದಾಳೆ.
09:47 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
09:50 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Debosmita, Sandhya.np14