Difference between revisions of "FrontAccounting-2.4.7/C2/Purchase-and-Reports-in-FrontAccounting/Kannada"

From Script | Spoken-Tutorial
Jump to: navigation, search
(Created page with "{| border=1 ||'''Time''' || '''Narration''' |- ||00:01 || FrontAccounting ನಲ್ಲಿ ಪರ್ಚೇಸ್ ಮತ್ತು ರಿಪೋರ್ಟ್ ಗಳ ಕುರಿ...")
 
 
Line 505: Line 505:
 
||10.53
 
||10.53
 
|| ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
 
|| ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
+
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 +
ಧನ್ಯವಾದಗಳು.
  
 
|-
 
|-

Latest revision as of 13:00, 15 June 2020

Time Narration


00:01 FrontAccounting ನಲ್ಲಿ ಪರ್ಚೇಸ್ ಮತ್ತು ರಿಪೋರ್ಟ್ ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು,

ಸಪ್ಲಾಯರ್ ಗಳನ್ನು ಸೇರಿಸಲು,

00:13 ಪರ್ಚೇಸ್ ಆರ್ಡರ್ ಎಂಟ್ರಿ ಮಾಡಲು,
00:15 ಸಪ್ಲಾಯರ್ ಗಳ ಇನ್ವಾಯ್ಸ್ ರಚಿಸಲು ಮತ್ತು ಟ್ರಾನ್ಸಾಕ್ಷನ್ ಗಳ ಮೇಲೆ ವಿವಿಧ ರಿಪೋರ್ಟ್ ಗಳನ್ನು ತಯಾರಿಸಲು ಕಲಿಯಲಿದ್ದೇವೆ.
00:24 ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು

ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.40 ಮತ್ತು

00:32 FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ.
00:37 ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಮತ್ತು ಬುಕ್ಕೀಪಿಂಗ್ ತತ್ವಗಳ ಜ್ಞಾನ ಹೊಂದಿರಬೇಕು.
00:47 ಮತ್ತು ನೀವು ಈಗಾಗಲೇ FrontAccounting ನಲ್ಲಿ ಆರ್ಗನೈಸೇಶನ್/ಕಂಪನಿ ಸ್ಥಾಪಿಸಿರಬೇಕು.
00:53 ಇಲ್ಲದಿದ್ದಲ್ಲಿ, ಸಂಬಂಧಿತ FrontAccounting ಟ್ಯುಟೋರಿಯಲ್ ಗಳಿಗಾಗಿ ಈ ವೆಬ್ ಸೈಟ್ ಗೆ ಭೇಟಿ ನೀಡಿ.
00:59 FrontAccounting ಇಂಟರ್ ಫೇಸ್ ನಲ್ಲಿ ಕೆಲಸ ಮಾಡಲು ಶುರು ಮಾಡುವ ಮೊದಲು XAMPP ಸರ್ವಿಸ್ ಗಳನ್ನು ಪ್ರಾರಂಭಿಸಿ.
01:05 ನಾವೀಗ ಪರ್ಚೇಸ್ ನ ಅರ್ಥವನ್ನು ನೋಡೋಣ.
01:09 ಪರ್ಚೇಸ್ ಎಂದರೆ ವ್ಯಕ್ತಿ ಅಥವಾ ಉದ್ಯಮವು ಖರೀದಿಸಿದ ಉತ್ಪನ್ನ ಅಥವಾ ಸೇವೆ.
01:17 ತನ್ನ ಗುರಿಯನ್ನು ಪೂರ್ಣಗೊಳಿಸಲು ಉದ್ಯಮವೊಂದು ಸರಕು ಅಥವಾ ಸೇವೆಗಳನ್ನು ಪಡೆಯಲು ಯತ್ನಿಸುವುದು.
01:24 ನಾವೀಗ FrontAccounting ಇಂಟರ್ಫೇಸ್ ತೆರೆಯೋಣ.
01:28 ಬ್ರೌಸರ್ ತೆರೆದು localhost/account ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
01:36 ಲಾಗಿನ್ ಪುಟ ಕಾಣಿಸಿಕೊಳ್ಳುತ್ತದೆ.
01:39 ಅಡ್ಮಿನ್ ಅನ್ನು ಯೂಸರ್ ನೇಮ್ ಆಗಿ ಮತ್ತು ಇದರ ಪಾಸ್ ವರ್ಡ್ ಟೈಪ್ ಮಾಡಿ.

ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.

01:47 FrontAccounting ಇಂಟರ್ ಫೇಸ್ ತೆರೆದುಕೊಳ್ಳುತ್ತದೆ.

Purchases ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

01:53 FrontAccounting ನಲ್ಲಿ ಪರ್ಚೇಸ್ ಗಳಿಗಾಗಿ ಯಾವ ವಿಧಾನ ಅನುಸರಿಸಬೇಕು ಎಂದು ನೋಡೋಣ.
01:58 ಪರ್ಚೇಸ್ ಎಂಟ್ರಿಗೆ ಅನುಸರಿಸಬೇಕಾದ ಹೆಜ್ಜೆಗಳೆಂದರೆ:

ಸಪ್ಲಾಯರ್ಸ್ ಸೇರಿಸಿ,

02:04 ಪರ್ಚೇಸ್ ಆರ್ಡರ್ ಎಂಟ್ರಿ,
02:07 ಸಪ್ಲಾಯರ್ನಿಂದ ರಿಸೀವೇಬಲ್ ನೋಟ್ ಮತ್ತು ಸಪ್ಲಾಯರ್ಸ್ ಇನ್ವಾಯ್ಸ್ ಮಾಡಿ.
02:13 ಆದರೆ ಮೊದಲಿಗೆ ನಾವು ಸಪ್ಲಾಯರ್ ನ ಅರ್ಥವನ್ನು ತಿಳಿಯೋಣ.
02:18 ಸಪ್ಲಾಯರ್ ಎಂದರೆ ಸರಕುಗಳು ಅಥವಾ ಸೇವೆಗಳನ್ನು ಒದಗಿಸುವ ವ್ಯಕ್ತಿ ಅಥವಾ ಉದ್ಯಮ.
02:24 FrontAccounting ಇಂಟರ್ ಫೇಸ್ ಗೆ ಮರಳಿ.
02:27 Maintenance ಪ್ಯಾನಲ್ ನಲ್ಲಿ Suppliers ಲಿಂಕ್ ಮೇಲೆ ಕ್ಲಿಕ್ ಮಾಡಿ.
02:32 ಇಲ್ಲಿ ಸಪ್ಲಾಯರ್ ಗೆ ಸಂಬಂಧಿಸಿದ ಎಲ್ಲಾ ಅಗತ್ಯ ಮಾಹಿತಿಯನ್ನು ನಾವು ತುಂಬಬೇಕು.

ಇಲ್ಲಿ ತೋರಿಸಿರುವಂತೆ ನಾನು ಅಗತ್ಯ ಮಾಹಿತಿಗಳನ್ನು ತುಂಬಿದ್ದೇನೆ.

02:42 ಕೆಳಗೆ ಸ್ಕ್ರಾಲ್ ಮಾಡಿ.

ವಿಂಡೋವಿನ ಕೆಳಭಾಗದಲ್ಲಿ Add New Supplier Details ಬಟನ್ ಮೇಲೆ ಕ್ಲಿಕ್ ಮಾಡಿ.

02:50 ಸೇವ್ ಮಾಡಿರುವ ಎಂಟ್ರಿಗಾಗಿ ನಾವು ದೃಢೀಕರಣ ಸಂದೇಶವನ್ನು ನೋಡಬಹುದು.
02:55 ಹೊಸ ಪರ್ಚೇಸ್ ಆರ್ಡರ್ ಎಂಟ್ರಿಗಾಗಿ ನಾವು ಬದಲಾವಣೆಗಳನ್ನು ಅನ್ವಯಿಸಬೇಕು.
03:00 ಕೆಳಗೆ ಸ್ಕ್ರಾಲ್ ಮಾಡಿ ಮತ್ತು ವಿಂಡೋವಿನ ಕೆಳಭಾಗದಲ್ಲಿ Update Supplier ಬಟನ್ ಮೇಲೆ ಕ್ಲಿಕ್ ಮಾಡಿ.
03:06 ನಾವು ಸಪ್ಲಾಯರ್ ಅನ್ನು ಪರಿಷ್ಕರಿಸಿದ್ದೇವೆ ಎಂದು ಸಕ್ಸಸ್ ಮೆಸೇಜ್ ತೋರಿಸುತ್ತದೆ.
03:11 ಕೆಳಗೆ ಸ್ಕ್ರಾಲ್ ಮಾಡಿ. ವಿಂಡೋವಿನ ಕೆಳಭಾಗದಲ್ಲಿ Back ಲಿಂಕ್ ಮೇಲೆ ಕ್ಲಿಕ್ ಮಾಡಿ.
03:17 ನಾವೀಗ ಪರ್ಚೇಸ್ ಆರ್ಡರ್ ಎಂಟ್ರಿ ಮಾಡೋಣ.

ಇದನ್ನು, ಸಿಸ್ಟಂನಲ್ಲಿ ಎಲ್ಲಾ ಪರ್ಚೇಸ್ ಆರ್ಡರ್ ಗಳನ್ನು ನೋಂದಾಯಿಸಲು ಬಳಸಲಾಗುತ್ತದೆ.

03:25 Transactions ಪ್ಯಾನಲ್ ನಲ್ಲಿ Purchase Order Entry ಲಿಂಕ್ ಮೇಲೆ ಕ್ಲಿಕ್ ಮಾಡಿ.
03:30 ಸಪ್ಲಾಯರ್ ನ ಹೆಸರು ಮತ್ತು ಇತರ ಸಂಬಂಧಿತ ಮಾಹಿತಿಯೊಂದಿಗೆ ನಾವು ವಿವರಗಳನ್ನು ನೋಡಬಹುದು.
03:36 ಇದು ಏಕೆಂದರೆ, ನಾವು ಈ ಹಿಂದೆಯೇ ಸಪ್ಲಾಯರ್ನ ವಿವರಗಳನ್ನು ಪರಿಷ್ಕರಿಸಿದ್ದೇವೆ.
03:42 ಸಪ್ಲಾಯರ್ ನ ರೆಫರನ್ಸ್ ನೀಡುವುದು ಕಡ್ಡಾಯ.
03:46 ಸಪ್ಲಾಯರ್ ನ ರೆಫರನ್ಸ್ ಅನ್ನು S001 ಎಂದು ಟೈಪ್ ಮಾಡುತ್ತೇನೆ.
03:53 Item Description ಡ್ರಾಪ್ ಡೌನ್ ಮೆನುವಿನಲ್ಲಿItem ಅನ್ನು Dell laptop ಎಂದು ಟೈಪ್ ಮಾಡಿ.
04:00 Quantity ಫೀಲ್ಡ್ ನಲ್ಲಿ ನಾವು ಪ್ರಮಾಣವನ್ನು 2 ಎಂದು ಟೈಪ್ ಮಾಡುತ್ತೇನೆ.
04:05 ಇದೇ ಪ್ರಕಾರ Required Delivery Date ಆರಿಸಿ.
04:09 ಡೀಫಾಲ್ಟ್ ಆಗಿ ಇದು ಆರ್ಡರ್ ದಿನಾಂಕದ 10 ದಿನಗಳ ನಂತರ ಆಗಿದೆ.

ನಾನು ಅದನ್ನೇ ಉಳಿಸುತ್ತೇನೆ.

04:15 ಈಗ Price before Tax ಫೀಲ್ಡ್ನಲ್ಲಿ ನಾನು Price ಅನ್ನು 48,000 ಎಂದು ಟೈಪ್ ಮಾಡುತ್ತೇನೆ.
04:22 ಎಂಟ್ರಿಯನ್ನು ಸೇವ್ ಮಾಡಲು, ಸಾಲಿನ ಬಲ ತುದಿಯಲ್ಲಿ Add Item ಬಟನ್ ಮೇಲೆ ಕ್ಲಿಕ್ ಮಾಡಿ.
04:28 ನಾವು ಅಮೌಂಟ್ ಟೋಟಲ್ ಅನ್ನು ಜಿ.ಎಸ್ಟಿ ಜೊತೆಗೆ ನೋಡಬಹುದು.
04:32 ಈಗ, ವಿಂಡೋವಿನ ಕೆಳಭಾಗದಲ್ಲಿ Place Order ಬಟನ್ ಮೇಲೆ ಕ್ಲಿಕ್ ಮಾಡಿ.
04:37 ಪರ್ಚೇಸ್ ಆರ್ಡರ್ ಅನ್ನು ಮಾಡಲಾಗಿದೆ ಎಂಬುದನ್ನು ಸಕ್ಸಸ್ ಮೆಸೇಜ್ ತೋರಿಸುತ್ತದೆ.
04:42 ನಾವೀಗ ಪರ್ಚೇಸ್ ಆರ್ಡರ್ಗೆ ಐಟಂಗಳನ್ನು ಸ್ವೀಕರಿಸಬೇಕು.
04:47 ವಿಂಡೋದಲ್ಲಿ Receive Items on this Purchase Order ಮೇಲೆ ಕ್ಲಿಕ್ ಮಾಡಿ.
04:53 ನಾವು ನಮ್ಮ ಪರ್ಚೇಸ್ ಆರ್ಡರ್ ಗೆ ಸ್ವೀಕರಿಸಿದ ಐಟಂಗಳ ವಿವರಗಳನ್ನು ನೋಡಬಹುದು.
04:58 ವಿಂಡೋವಿನ ಕೆಳಭಾಗದಲ್ಲಿ Process Receive Items ಬಟನ್ ಮೇಲೆ ಕ್ಲಿಕ್ ಮಾಡಿ.
05:03 ನಾವು “Purchase Order delivery has been processed” ಎನ್ನುವ ಸಂದೇಶವನ್ನು ನೋಡಬಹುದು.
05:08 ಇದರ ಕೆಳಗೆ ನಾವು ಇನ್ನಷ್ಟು ಆಯ್ಕೆಗಳನ್ನು ನೋಡಬಹುದು.
05:12 ಈ ಆಯ್ಕೆಗಳನ್ನು ನಂತರ ನೀವಾಗಿಯೇ ಶೋಧಿಸಬಹುದು.
05:16 ಇದರ ನಂತರ ನಾವು ಪರ್ಚೇಸ್ ಇನ್ವಾಯ್ಸ್ ಅನ್ನು ಸ್ವೀಕರಿಸಬೇಕು.
05:21 ಇದಕ್ಕಾಗಿ Entry purchase invoice for this receival ಲಿಂಕ್ ಮೇಲೆ ಕ್ಲಿಕ್ ಮಾಡಿ.
05:27 ಇಲ್ಲಿ ನಾವು ಸಪ್ಲಾಯರ್ ಇನ್ವಾಯ್ಸ್ ನಮೂದಿಸಲು ವಿವರಗಳನ್ನು ನೋಡಬಹುದು.
05:32 S001 ಅನ್ನು ಸಪ್ಲಾಯರ್ ನ ರೆಫರನ್ಸ್ ಆಗಿ ಟೈಪ್ ಮಾಡಿ.
05:37 ನೀವು ಸಪ್ಲಾಯರ್ ರೆಫರನ್ಸ್ ನೀಡದಿದ್ದರೆ ಇದು ಎರರ್ ನೀಡುತ್ತದೆ.
05:42 ಸಾಲಿನ ಬಲ ತುದಿಯಲ್ಲಿ ಇರುವ Add ಬಟನ್ ಮೇಲೆ ಕ್ಲಿಕ್ ಮಾಡಿ.

ಕೆಳಗೆ ಸ್ಕ್ರಾಲ್ ಮಾಡಿ.

05:47 ನಾವು ಜಿಎಸ್ಟಿ ಜೊತೆಗೆ ಇನ್ವಾಯ್ಸ್ ವಿವರಗಳನ್ನು ನೋಡಬಹುದು.
05:52 ವಿಂಡೋವಿನ ಕೆಳಭಾಗದಲ್ಲಿ Enter Invoice ಬಟನ್ ಮೇಲೆ ಕ್ಲಿಕ್ ಮಾಡಿ.
05:56 ನಾವು ಸಪ್ಲಾಯರ್ ಇನ್ವಾಯ್ಸ್ ಅನ್ನು ಯಶಸ್ವಿಯಾಗಿ ಪ್ರಕ್ರಿಯೆಗೊಳಿಸಿದ್ದೇವೆ ಎನ್ನುವ ಸಂದೇಶವನ್ನು ನೋಡಬಹುದು.
06:02 ನಂತರ, ಮಾಡಿರುವ ಇನ್ವಾಯ್ಸ್ ಗೆ ಪ್ರತಿಯಾಗಿ ಸಪ್ಲಾಯರ್ಗೆ ಪಾವತಿ ಮಾಡಬೇಕು.
06:08 Entry supplier payment for this invoice ಲಿಂಕ್ ಮೇಲೆ ಕ್ಲಿಕ್ ಮಾಡಿ.
06:13 ನಾವು ಸಪ್ಲಾಯರ್ ಗೆ ಪಾವತಿ ಮಾಡಬೇಕು ಎಂದು ತೋರಿಸುವ ಸಪ್ಲಾಯರ್ ಇನ್ವಾಯ್ಸ್ ಅನ್ನು ನೋಡಬಹುದು.
06:19 ಅಲ್ಲದೆ ಸಪ್ಲಾಯರ್ಗೆ ಪಾವತಿ ಮಾಡಲು ಇಲ್ಲಿ ಒಂದಷ್ಟು ಬ್ಯಾಂಕ್ ಬ್ಯಾಲನ್ಸ್ ಇದೆ.
06:24 Memo ಫೀಲ್ಡ್ನಲ್ಲಿ ‘Being payment made to the supplier - S001’ ಎಂದು ಟೈಪ್ ಮಾಡಿ.
06:31 ನಂತರ ವಿಂಡೋವಿನ ಕೆಳಭಾಗದಲ್ಲಿ Enter Payment ಬಟನ್ ಮೇಲೆ ಕ್ಲಿಕ್ ಮಾಡಿ.
06:36 ನಾವು ಯಶಸ್ವಿಯಾಗಿ ಪೇಮೆಂಟ್ ಮಾಡಿದ್ದೇವೆ ಎಂದು ದೃಢೀಕರಣ ಸಂದೇಶವು ತೋರಿಸುತ್ತದೆ.
06:41 ಇದರ ಕೆಳಗೆ ನಾವು ಇನ್ನಷ್ಟು ಆಯ್ಕೆಗಳನ್ನು ನೋಡಬಹುದು.

ಇವುಗಳನ್ನು ನೀವಾಗಿಯೇ ನಂತರ ಶೋಧಿಸಬಹುದು.

06:48 View the GL journal Entries for this Payment ಲಿಂಕ್ ಮೇಲೆ ಕ್ಲಿಕ್ ಮಾಡಿ.
06:55 ವಿಂಡೋವಿನ ಕೆಳಭಾಗದಲ್ಲಿ close ಲಿಂಕ್ ಮೇಲೆ ಕ್ಲಿಕ್ ಮಾಡಿ.
06:59 ಅಸೈನ್ ಮೆಂಟ್ ಆಗಿ ಇದನ್ನು ಪೂರ್ಣಗೊಳಿಸಿ:

Suppliers ಆಯ್ಕೆ ಬಳಸಿ ಪರ್ಚೇಸ್ಗೆ ಹೊಸ ಸಪ್ಲಾಯರ್ ಸೇರಿಸಿ.

07:07 ಹೊಸ ಪರ್ಚೇಸ್ ಆರ್ಡರ್ ಎಂಟ್ರಿ ಮಾಡಿ.
07:10 ಈ ಇನ್ವಾಯ್ಸ್ ಗೆ ಸಪ್ಲಾಯರ್ ಪೇಮೆಂಟ್ ಮಾಡಿ.
07:14 ಮತ್ತು ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ನೋಡಿ.
07:20 ಇಲ್ಲಿತನಕ ನಮ್ಮ ಕಂಪನಿಯನ್ನು ನಾವು ಸೇಲ್ಸ್ ಮತ್ತು ಪರ್ಚೇಸ್ ಗಳಿಗೆ ಸಂಬಂಧಿಸಿದ ಕೆಲವು ಟ್ರಾನ್ಸಾಕ್ಷನ್ ಗಳನ್ನು ಮಾಡಿದ್ದೇವೆ.
07:27 ನಾವೀಗ ಈ ಟ್ರಾನ್ಸಾಕ್ಷನ್ ಗಳಿಗೆ ಸಂಬಂಧಿಸಿದ ವಿವಿಧ ರಿಪೋರ್ಟ್ ಗಳನ್ನು ನೋಡೋಣ.
07:33 Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
07:37 Inquiries and Reports ಪ್ಯಾನಲ್ ಅಡಿಯಲ್ಲಿ Banking Reports ಲಿಂಕ್ ಮೇಲೆ ಕ್ಲಿಕ್ ಮಾಡಿ.
07:43 ಬಲ ಪ್ಯಾನಲ್ ನಲ್ಲಿ Bank statement ಲಿಂಕ್ ಮೇಲೆ ಕ್ಲಿಕ್ ಮಾಡಿ.
07:47 ಬಲ ಪ್ಯಾನಲ್ನಲ್ಲಿ Bank Accounts ಫೀಲ್ಡ್ ಅನ್ನು Current account ಆಗಿ ಇಡಿ.
07:52 ರಿಪೋರ್ಟ್ ಗಳನ್ನು ನೋಡಲು ಟ್ರಾನ್ಸಾಕ್ಷನ್ ಗಳಿಗೆ Start Date ಮತ್ತು End Date ಆರಿಸಿ.
07:58 ಮೇಲ್ಗಡೆ ಬಲ ಮೂಲೆಯಲ್ಲಿ Display:Bank statement ಬಟನ್ ಮೇಲೆ ಕ್ಲಿಕ್ ಮಾಡಿ.
08:04 ನಾವು ಕ್ರೋಢೀಕೃತ ಬ್ಯಾಂಕ್ ಸ್ಟೇಟ್ಮೆಂಟ್ ರಿಪೋರ್ಟ್ ನೋಡಬಹುದು.
08:08 ಈ ವಿಂಡೋವನ್ನು ಮುಚ್ಚಿ.
08:10 ನಂತರ Sales ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
08:13 Inquiries and Reports ಪ್ಯಾನಲ್ ನಲ್ಲಿ Customer and Sales Reports ಮೇಲೆ ಕ್ಲಿಕ್ ಮಾಡಿ.
08:19 ಮುಂದಿನ ವಿಂಡೋದಲ್ಲಿ Report Classes ಅಡಿಯಲ್ಲಿ General Ledger ಲಿಂಕ್ ಮೇಲೆ ಕ್ಲಿಕ್ ಮಾಡಿ.
08:26 ನಂತರ ಬಲಗಡೆಯ ಪ್ಯಾನಲ್ ಮೇಲೆ List of Journal Entries ಲಿಂಕ್ ಮೇಲೆ ಕ್ಲಿಕ್ ಮಾಡಿ.
08:31 ರಿಪೋರ್ಟ್ ನೋಡಲು ಟ್ರಾನ್ಸಾಕ್ಷನ್ ಗಳಿಗೆ Start Date ಮತ್ತು End Date ಆರಿಸಿ.
08:37 ಮೇಲ್ಗಡೆಗೆ ಬಲ ಮೂಲೆಯಲ್ಲಿ Display:List of journal entries ಬಟನ್ ಮೇಲೆ ಕ್ಲಿಕ್ ಮಾಡಿ.
08:44 ಕಂಪನಿಯಲ್ಲಿ ನಮೂದಿಸಿದ ಎಲ್ಲಾ ಜರ್ನಲ್ ಎಂಟ್ರಿಗಳನ್ನು ನಾವು ನೋಡಬಹುದು.
08:50 ಈ ವಿಂಡೋವನ್ನು ಮುಚ್ಚೋಣ.
08:52 Report classes ಅಡಿಯಲ್ಲಿ General Ledger ಲಿಂಕ್ ಮೇಲೆ ಕ್ಲಿಕ್ ಮಾಡಿ.
08:57 ಬಲ ಪ್ಯಾನಲ್ ನಲ್ಲಿ Trial Balance ಲಿಂಕ್ ಮೇಲೆ ಕ್ಲಿಕ್ ಮಾಡಿ.
09:01 ರಿಪೋರ್ಟ್ ನೋಡಲು ಟ್ರಾನ್ಸಾಕ್ಷನ್ ಗಳಿಗಾಗಿ Start Date ಮತ್ತು End Date ಆರಿಸಿ.
09:07 ಮೇಲ್ಗಡೆ ಬಲಭಾಗದಲ್ಲಿ Display:Trial balance ಬಟನ್ ಮೇಲೆ ಕ್ಲಿಕ್ ಮಾಡಿ.
09:12 ನಾವು ಸಂಬಂಧಿಸಿದ ರಿಪೋರ್ಟ್ ನೋಡಬಹುದು.
09:15 ಇದು ಎಲ್ಲಾ ಜನರಲ್ ಲೆಡ್ಜರ್ ಅಕೌಂಟ್ ಗಳ ಪಟ್ಟಿಯನ್ನು ಆಧರಿಸಿದೆ.
09:20 ವಿಂಡೋ ಮುಚ್ಚಿರಿ.
09:22 Report classes ಅಡಿಯಲ್ಲಿ General Ledger ಲಿಂಕ್ ಮೇಲೆ ಕ್ಲಿಕ್ ಮಾಡಿ.
09:27 ಬಲ ಪ್ಯಾನಲ್ ನಲ್ಲಿ Balance Sheet ಲಿಂಕ್ ಮೇಲೆ ಕ್ಲಿಕ್ ಮಾಡಿ.
09:31 ರಿಪೋರ್ಟ್ ನೋಡಲು ಟ್ರಾನ್ಸಾಕ್ಷನ್ ಗಳಿಗೆ Start Date ಮತ್ತು End Date ಆರಿಸಿ.
09:37 ಮೇಲ್ಗಡೆ ಬಲಕ್ಕೆ Display: Balance sheet ಬಟನ್ ಮೇಲೆ ಕ್ಲಿಕ್ ಮಾಡಿ.
09:42 ನಾವು ಅಸೆಟ್ ಗಳು ಮತ್ತು ಲಯಾಬಿಲಿಟಿಗಳ ಸಂಬಂಧಿಸಿದ ರಿಪೋರ್ಟ್ ಗಳನ್ನು ನೋಡಬಹುದು.
09:48 ವಿಂಡೋವನ್ನು ಮುಚ್ಚಿರಿ.
09:50 Report classes ಅಡಿಯಲ್ಲಿ Customer ಲಿಂಕ್ ಮೇಲೆ ಕ್ಲಿಕ್ ಮಾಡಿ.
09:55 ಇಲ್ಲಿ ನಾವು Price listing, customer detail listing, Customer trial balance ನೋಡಬಹುದು.
10:02 ಈ ರಿಪೋರ್ಟ್ಗಳನ್ನು ನೀವಾಗಿಯೇ ಅನ್ವೇಷಿಸಿ.
10:05 ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ.

ನಾವೀಗ ಸಂಕ್ಷೇಪಿಸೋಣ.

10:11 ಈ ಟ್ಯುಟೋರಿಯಲ್ನಲ್ಲಿ ನಾವು:

ಸಪ್ಲಾಯರ್ ಗಳನ್ನು ಸೇರಿಸಲು,

10:16 ಪರ್ಚೇಸ್ ಆರ್ಡರ್ ಎಂಟ್ರಿ ಮಾಡಲು,
10:19 ಸಪ್ಲಾಯರ್ ಗಳ ಇನ್ವಾಯ್ಸ್ ಮಾಡಲು,
10:22 ಮತ್ತು ಟ್ರಾನ್ಸಾಕ್ಷನ್ ಗಳ ಮೇಲಿನ ವಿವಿಧ ರಿಪೋರ್ಟ್ ಗಳನ್ನು ಪಡೆಯಲು ಕಲಿತೆವು.
10:26 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
10:34 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
10:43 ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
10:47 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
10.53 ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.

ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

Melkamiyar, Sandhya.np14