Difference between revisions of "Java/C3/Static-Blocks/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
{| border=1
 
||'''Time'''
 
|| '''Narration'''
 
  
|-
 
||00:01
 
|| ಸ್ಟಾಟಿಕ್ ಬ್ಲಾಕ್ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ.
 
 
|-
 
||00:06
 
|| ಈ ಟ್ಯುಟೋರಿಯಲ್ನಲ್ಲಿ ನಾವು, ಸ್ಟಾಟಿಕ್ ಬ್ಲಾಕ್ಗಳು ಎಂದರೇನು, ಸ್ಟಾಟಿಕ್ ಬ್ಲಾಕ್ಗಳನ್ನು
 
 
|-
 
||00:10
 
|| ಹೇಗೆ ಘೋಷಿಸುವುದು ಮತ್ತು ಸ್ಟಾಟಿಕ್ ಬ್ಲಾಕ್ಗಳನ್ನು ಹೇಗೆ ಬಳಸುವುದು ಎಂಬುದನ್ನು ಕಲಿಯಲಿದ್ದೇವೆ.
 
 
|-
 
||00:16
 
|| ಇಲ್ಲಿ ನಾವು ಉಬಂಟು 14.04, ಜೆ.ಡಿ.ಕೆ 1.7 ಮತ್ತು ಎಕ್ಲಿಪ್ಸ್ 4.3.1 ಬಳಸಲಿದ್ದೇವೆ.
 
 
|-
 
||00:26
 
|| ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು ಎಕ್ಲಿಪ್ಸ್ ಐ.ಡಿ.ಇ ಯ ಮೂಲಭೂತ ಜ್ಞಾನವನ್ನು ಹೊಂದಿರಬೇಕು.
 
 
|-
 
||00:34
 
|| ನೀವು ಜಾವಾದಲ್ಲಿ ಇನ್ಸ್ಟೆನ್ಸ್ ವೇರಿಯೇಬಲ್ ಗಳು, ಸ್ಟಾಟಿಕ್ ವೇರಿಯೇಬಲ್ ಗಳು ಮತ್ತು ಸ್ಟಾಟಿಕ್ ಮೆಥಡ್ಗಳ ಜ್ಞಾನವನ್ನು ಹೊಂದಿರಬೇಕು.
 
 
|-
 
||00:43
 
|| ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ ಗೆ ಭೇಟಿ ನೀಡಿ.
 
 
|-
 
||00:48
 
|| ನಾವೀಗ ಸ್ಟಾಟಿಕ್ ಬ್ಲಾಕ್ಗಳ ಕುರಿತು ಕಲಿಯೋಣ.
 
 
|-
 
||00:52
 
|| ಸ್ಟಾಟಿಕ್ ಬ್ಲಾಕ್ಅನ್ನು ಹೆಚ್ಚಿನದಾಗಿ ಸ್ಟಾಟಿಕ್ ವೇರಿಯೇಬಲ್ಗಳ ಮೌಲ್ಯಗಳನ್ನು ಇನಿಶಿಯಲೈಸ್ (ಅನುಸ್ಥಾಪನೆ) ಮಾಡುವುದಕ್ಕೆ ಬಳಸಲಾಗುತ್ತದೆ.
 
 
|-
 
||00:59
 
|| ಸ್ಟಾಟಿಕ್ ಬ್ಲಾಕ್ಅನ್ನು static ಕೀವರ್ಡ್ ಬಳಸಿ ಘೋಷಿಸಲಾಗುತ್ತದೆ.
 
 
|-
 
||01:03
 
|| ಮೆಮೊರಿಯಲ್ಲಿ ಕ್ಲಾಸ್ ಅನ್ನು ಲೋಡ್ ಮಾಡಿದಾಗ ಸ್ಟಾಟಿಕ್ ಬ್ಲಾಕ್ಗಳನ್ನು ಎಕ್ಸಿಕ್ಯೂಟ್ (ಕಾರ್ಯಗತ) ಮಾಡಲಾಗುತ್ತದೆ.
 
 
|-
 
||01:08
 
|| ಪ್ರೋಗ್ರಾಂನಲ್ಲಿ ಸ್ಟಾಟಿಕ್ ಬ್ಲಾಕ್ಗಳಿದ್ದರೆ, ಕನ್ಸ್ಟ್ರಕ್ಟರ್ಗಳ ಮೊದಲು ಅವುಗಳನ್ನು ಇನ್ವೋಕ್ (ಜಾರಿಗೊಳಿಸು) ಮಾಡಲಾಗುತ್ತದೆ.
 
 
|-
 
||01:14
 
|| ನಾವು ಸ್ಟಾಟಿಕ್ ಬ್ಲಾಕ್ನ ಒಳಗೆ ಇನ್ಸ್ಟೆನ್ಸ್ ವೇರಿಯೇಬಲ್ಗಳನ್ನು ಆಕ್ಸೆಸ್ ಮಾಡಲಾಗದು.
 
 
|-
 
||01:19
 
||ಈಗ ನಾವು ಎಕ್ಲಿಪ್ಸ್ನತ್ತ ಸಾಗೋಣ ಮತ್ತು StaticBlockDemo ಎನ್ನುವ ಹೊಸ ಪ್ರಾಜೆಕ್ಟ್ ಅನ್ನು ರಚಿಸೋಣ.
 
 
|-
 
||01:26
 
|| ಈ ಪ್ರಾಜೆಕ್ಟ್ ನ ಒಳಗೆ, ಸ್ಟಾಟಿಕ್ ಬ್ಲಾಕ್ಗಳ ಬಳಕೆಯನ್ನು ತೋರಿಸಲು ಅಗತ್ಯ ಕ್ಲಾಸುಗಳನ್ನು ನಾವು ರಚಿಸಲಿದ್ದೇವೆ.
 
 
|-
 
||01:33
 
|| src ಫೋಲ್ಡರ್ನ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು New-> Class ಮೇಲೆ ಕ್ಲಿಕ್ ಮಾಡಿ.
 
 
|-
 
||01:38
 
|| ಕ್ಲಾಸ್ನ ಹೆಸರನ್ನು StudentEnroll ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
 
 
|-
 
||01:44
 
|| ಈಗ, StudentEnroll ಕ್ಲಾಸನ್ನು ಪ್ರತಿನಿಧಿಸಲು ಈ ಕೋಡ್ ಅನ್ನು ಟೈಪ್ ಮಾಡಿ. 
 
 
|-
 
||01:49
 
|| ಇಲ್ಲಿ ಕೌಂಟ್ ಮತ್ತು orgname ಎಂಬ ಎರಡು ಸ್ಟಾಟಿಕ್ ವೇರಿಯೇಬಲ್ಗಳು ಇವೆ ಎಂಬುದನ್ನು ಗಮನಿಸಿ.
 
 
|-
 
||01:54
 
|| ಈಗ Source -> ಮೇಲೆ ಕ್ಲಿಕ್ ಮಾಡಿ ಮತ್ತು Generate Constructor using Fields ಆರಿಸಿ.
 
 
|-
 
||02:00
 
|| ರಚಿಸಿದ ಕೋಡ್ನಿಂದ super ಕೀವರ್ಡ್ ಅನ್ನು ಅಳಿಸಿ.
 
 
|-
 
||02:04
 
|| ಕನ್ಸ್ಟ್ರಕ್ಟರ್ ಅನ್ನು ಇನ್ವೋಕ್ ಮಾಡಿದಾಗಲೆಲ್ಲ ಸಂದೇಶವೊಂದು ಪ್ರಿಂಟ್ (ಮುದ್ರಣ) ಆಗಲು ನಾವು ಇಷ್ಟಪಡುತ್ತೇವೆ.
 
 
|-
 
||02:09
 
|| “Constructor invoked” ಎಂದು ಪ್ರಿಂಟ್ ಮಾಡುವುದಕ್ಕಾಗಿ ಕನ್ಸ್ಟ್ರಕ್ಟರ್ ಒಳಗೆ ಈ ಕೋಡ್ ಅನ್ನು ಟೈಪ್ ಮಾಡಿ.
 
 
|-
 
||02:15
 
|| ಈಗ ವೇರಿಯೇಬಲ್ಗಳ ಮೌಲ್ಯಗಳನ್ನು ಪ್ರಿಂಟ್ ಮಾಡುವುದಕ್ಕಾಗಿ ನಾವು ಈ ಕ್ಲಾಸಿಗೆ showData( ) ವಿಧಾನವನ್ನು ಸೇರಿಸಲಿದ್ದೇವೆ. 
 
 
|-
 
||02:21
 
|| ಇದಕ್ಕಾಗಿ ಈ ಕೋಡ್‌ ಅನ್ನು ಟೈಪ್‌ ಮಾಡಿ.
 
 
|-
 
||02:23
 
|| ಈಗ, ಕೌಂಟ್‌ ಮತ್ತು orgname ನ ಮೌಲ್ಯಗಳನ್ನು ಇನಿಶಿಯಲೈಸ್ ಮಾಡುವುದಕ್ಕಾಗಿ ನಾವು ಸ್ಟಾಟಿಕ್‌ ಬ್ಲಾಕ್‌ ಅನ್ನು ಸೇರಿಸಲಿದ್ದೇವೆ.
 
 
|-
 
||02:29
 
|| ಈ ಕೋಡ್‌ ಅನ್ನು ಟೈಪ್‌ ಮಾಡಿ.
 
 
|-
 
||02:32
 
|| orgname ಮತ್ತು ಕೌಂಟ್‌ ವೇರಿಯೇಬಲ್‌ ಗಳು ಸ್ಟಾಟಿಕ್‌ ವೇರಿಯೇಬಲ್‌ ಗಳಾಗಿವೆ.
 
 
|-
 
||02:36
 
|| ಸುರುಳಿಯಾಕಾರದ ಆವರಣ ಚಿಹ್ನೆಗಳೊಳಗೆ ಇದ್ದು static ಕೀವರ್ಡ್ ನ ಉಪಸರ್ಗ ಹೊಂದಿರುವ ಕೋಡ್ಗಳ ಬ್ಲಾಕ್ ಸ್ಟಾಟಿಕ್ ಬ್ಲಾಕ್ ಆಗಿದೆ. 
 
 
|-
 
||02:42
 
|| ಈ ಸ್ಟಾಟಿಕ್ ಬ್ಲಾಕ್, count ಮತ್ತು orgname ನ ಮೌಲ್ಯಗಳನ್ನು 100 ಮತ್ತು IITM ಆಗಿ ಇನಿಶಿಯಲೈಸ್ ಮಾಡುತ್ತದೆ.
 
 
|-
 
||02:51
 
|| ಈ ಸ್ಟಾಟಿಕ್ ಬ್ಲಾಕ್ ಒಳಗೆ, “static block-1 is invoked” ಎಂದು ಪ್ರಿಂಟ್ ಮಾಡಲು ಈ ಕೋಡ್ ಅನ್ನು ಟೈಪ್ ಮಾಡಿ.
 
 
|-
 
||02:58
 
|| ಈಗ ನಾವು ಮೇನ್ ಮೆಥಡ್ ಅನ್ನು ಹೊಂದಿರುವ ಇನ್ನೊಂದು ಕ್ಲಾಸ್ ಅನ್ನು ಸೇರಿಸಲಿದ್ದೇವೆ.
 
 
|-
 
||03:03
 
|| ಇದಕ್ಕಾಗಿ default package ಮೇಲೆ ರೈಟ್ ಕ್ಲಿಕ್ ಮಾಡಿ, New-> Class ಮೇಲೆ ಕ್ಲಿಕ್ ಮಾಡಿ ಮತ್ತು ಹೆಸರನ್ನು Demo ಎಂದು ಟೈಪ್ ಮಾಡಿ.
 
 
|-
 
||03:11
 
|| ಈ ಕ್ಲಾಸ್ ಒಳಗೆ ನಾವು ಮೇನ್ ಮೆಥಡ್ ಹೊಂದಲಿದ್ದೇವೆ.
 
 
|-
 
||03:15
 
||  main ಎಂದು ಟೈಪ್ ಮಾಡಿ ಮತ್ತು ಮೇನ್ ಮೆಥಡ್ ರಚಿಸಲು Ctrl+space ಒತ್ತಿ.
 
 
|-
 
||03:21
 
|| ನಾವೀಗ StudentEnroll ಕ್ಲಾಸ್ನ ಅಬ್ಜೆಕ್ಟ್ ಅನ್ನು ರಚಿಸಲಿದ್ದೇವೆ.
 
 
|-
 
||03:25
 
|| s1 ಅಬ್ಜೆಕ್ಟ್ ರಚಿಸಲು ಈ ಕೋಡ್ ಅನ್ನು ಟೈಪ್ ಮಾಡಿ.
 
 
|-
 
||03:29
 
|| ಈಗ ಮೌಲ್ಯಗಳನ್ನು ಪ್ರಿಂಟ್ ಮಾಡಲು showData ವಿಧಾನವನ್ನು ಇನ್ವೋಕ್ ಮಾಡೋಣ.
 
 
|-
 
||03:33
 
|| s1.showData() semicolon ಎಂದು ಟೈಪ್ ಮಾಡಿ.
 
 
|-
 
||03:38
 
|| ನಾವೀಗ Demo ಪ್ರೋಗ್ರಾಂ ಅನ್ನು ರನ್ ಮಾಡೋಣ.
 
 
|-
 
||03:41
 
|| ಕನ್ಸ್ಟ್ರಕ್ಟರ್ನ ಮೊದಲು ಸ್ಟಾಟಿಕ್ ಬ್ಲಾಕ್ ಅನ್ನು ಇನ್ವೋಕ್ ಮಾಡಿರುವುದನ್ನು ನಾವು ಗಮನಿಸಬಹುದು.
 
 
|-
 
||03:46
 
|| count ಮತ್ತು orgname ನ ಮೌಲ್ಯಗಳು, ಸ್ಟಾಟಿಕ್ ಬ್ಲಾಕ್ನಲ್ಲಿ ನಿರೂಪಿಸಿರುವಂತೆ ಇನಿಶಿಯಲೈಸ್ ಆಗುತ್ತವೆ.
 
 
|-
 
||03:53
 
|| ನಾವೀಗ StudentEnroll ಕ್ಲಾಸಿಗೆ ಹಿಂತಿರುಗೋಣ.
 
 
|-
 
||03:57
 
|| ಸ್ಟಾಟಿಕ್ ಬ್ಲಾಕ್ನ ಒಳಗೆ id ಯ ಮೌಲ್ಯವನ್ನು ಇನಿಶಿಯಲೈಸ್ ಮಾಡಿದರೆ ಏನಾಗುತ್ತದೆ ಎಂಬುದನ್ನು ನೋಡೋಣ.
 
 
|-
 
||04:03
 
|| ಸ್ಟಾಟಿಕ್ ಬ್ಲಾಕ್ ಒಳಗೆ id equals IT01 semicolon ಎಂದು ಟೈಪ್ ಮಾಡಿ.
 
 
|-
 
||04:10
 
|| ಇಲ್ಲಿ ಎರರ್ (ದೋಷ) ಉಂಟಾಗಿರುವುದನ್ನು ನಾವು ನೋಡಬಹುದು.
 
 
|-
 
||04:13
 
|| ಇನ್ಸ್ಟೆನ್ಸ್ ವೇರಿಯೇಬಲ್ ಅನ್ನು ಸ್ಟಾಟಿಕ್ ಬ್ಲಾಕ್ ಒಳಗೆ ಆಕ್ಸೆಸ್ ಮಾಡಲಾಗದು ಎಂಬುದನ್ನು ಇದು ತೋರಿಸುತ್ತದೆ.
 
 
|-
 
||04:19
 
|| ನಾವೀಗ ಈ ಸಾಲನ್ನು ಕಮೆಂಟ್ ಮಾಡೋಣ ಮತ್ತು ಮುಂದುವರಿಯೋಣ.
 
 
|-
 
||04:25
 
|| ಈಗ ಸ್ಲೈಡ್ಗಳಿಗೆ ಮರಳೋಣ.
 
 
|-
 
||04:27
 
|| ಕ್ಲಾಸ್ ಒಂದು ಅನೇಕ ಸ್ಟಾಟಿಕ್ ಬ್ಲಾಕ್ಗಳನ್ನು ಹೊಂದಿರಬಹುದು.
 
 
|-
 
||04:30
 
|| ಇಂತಹ ಸಂದರ್ಭದಲ್ಲಿ, ಅವು ಮೂಲ ಕೋಡ್ನಲ್ಲಿ ಕಾಣಿಸಿಕೊಳ್ಳುವ ಕ್ರಮಾಂಕದಲ್ಲಿ ಒಮ್ಮೆ ಮಾತ್ರ ಕರೆಯಲಾಗುತ್ತದೆ.
 
 
|-
 
||04:37
 
|| ಇದನ್ನು ದೃಢೀಕರಿಸಲು ಎಕ್ಲಿಪ್ಸ್ ಗೆ ಸಾಗೋಣ.
 
 
|-
 
||04:40
 
|| ಈಗ ಇರುವುದರ ಜೊತೆಗೆ ಇನ್ನೊಂದು ಸ್ಟಾಟಿಕ್ ಬ್ಲಾಕ್ ಅನ್ನು ಸೇರಿಸೋಣ.
 
 
|-
 
||04:45
 
|| ಈ ಕೋಡ್ ಅನ್ನು ಟೈಪ್ ಮಾಡಿ.
 
 
|-
 
||04:47
 
|| ಈ ಸ್ಟಾಟಿಕ್ ಬ್ಲಾಕ್, count ಮತ್ತು orgname ಗಳ ಮೌಲ್ಯವನ್ನು ಕ್ರಮವಾಗಿ 200 ಮತ್ತು IITB ಆಗಿ ಇನಿಶಿಯಲೈಸ್ ಮಾಡುತ್ತದೆ.
 
 
|-
 
||04:57
 
|| ಈ ಸ್ಟಾಟಿಕ್ ಬ್ಲಾಕ್ ಒಳಗೆ, ಇಲ್ಲಿರುವ ಕೋಡ್ ಅನ್ನು ಟೈಪ್ ಮಾಡಿ.
 
 
|-
 
||05:01
 
|| ನಾವೀಗ Demo ಪ್ರೋಗ್ರಾಂ ಅನ್ನು ಇನ್ನೊಮ್ಮೆ ರನ್ ಮಾಡೋಣ.
 
 
|-
 
||05:04
 
|| ಈ ಔಟ್ಪುಟ್ನಿಂದ, ಎರಡನೇ ಸ್ಟಾಟಿಕ್ ಬ್ಲಾಕ್ ಅನ್ನು ಮೊದಲಿನ ನಂತರ ಇನ್ವೋಕ್ ಮಾಡಲಾಗಿದೆ ಎಂದು ನಾವು ದೃಢಪಡಿಸಬಹುದು.
 
 
|-
 
||05:10
 
|| count ಮತ್ತು orgname ಸ್ಟಾಟಿಕ್ ವೇರಿಯೇಬಲ್ಗಳ ಮೌಲ್ಯಗಳನ್ನು ಎರಡನೇ ಸ್ಟಾಟಿಕ್ ಬ್ಲಾಕ್ನ ಮೂಲಕ ಪರಿಷ್ಕರಿಸಬಹುದು.
 
 
|-
 
||05:18
 
|| ಅವೆಂದರೆ ಕ್ರಮವಾಗಿ 200 ಮತ್ತು IITB.
 
 
|-
 
||05:22
 
|| ಈಗ ಸಂಕ್ಷೇಪಿಸೋಣ.
 
 
|-
 
||05:24
 
|| ಈ ಟ್ಯುಟೋರಿಯಲ್ ನಲ್ಲಿ ನಾವು, ಸ್ಟಾಟಿಕ್ ಬ್ಲಾಕ್ ಎಂದರೇನು, ಸ್ಟಾಟಿಕ್ ಬ್ಲಾಕ್ ಅನ್ನು ಹೇಗೆ ಘೋಷಿಸುವುದು ಮತ್ತು ನಿರೂಪಿಸುವುದು ಮತ್ತು ಸ್ಟಾಟಿಕ್ ಬ್ಲಾಕ್ ಗಳನ್ನು ಹೇಗೆ ಇನ್ವೋಕ್ ಮಾಡಲಾಗುತ್ತದೆ ಮತ್ತು ಎಕ್ಸಿಕ್ಯೂಟ್ ಮಾಡಲಾಗುತ್ತದೆ ಎಂಬುದನ್ನು ಕಲಿತೆವು.
 
 
|-
 
||05:37
 
|| ಅಸೈನ್ಮೆಂಟ್ಗಾಗಿ, ಈ ಅಸೈನ್ಮೆಂಟ್, ಸ್ಟಾಟಿಕ್ ಮೆಥಡ್ಗಳ ಅಸೈನ್ಮೆಂಟ್ನ ಮುಂದುವರಿಕೆಯಾಗಿದೆ.
 
 
|-
 
||05:44
 
|| ನೀವು ಸ್ಟಾಟಿಕ್ ಮೆಥಡ್ಗಳ ಅಸೈನ್ಮೆಂಟ್ ಅನ್ನು ಪೂರ್ಣಗೊಳಿಸಿದ್ದೀರಿ ಎಂಬುದನ್ನು ಖಚಿತಪಡಿಸಿ.
 
 
|-
 
||05:48
 
|| ಈ ಹಿಂದಿನಂತೆಯೇ, ಈ ಸ್ಲೈಡ್ನಲ್ಲಿ ಸೂಚಿಸಿರುವಂತೆ CarService ಕ್ಲಾಸ್ ಅನ್ನು ವಿನ್ಯಾಸಗೊಳಿಸಿ.
 
 
|-
 
||05:54
 
|| ಇನ್ಸ್ಟೆನ್ಸ್ ವೇರಿಯೇಬಲ್ಗಳು ಮತ್ತು ಸ್ಟಾಟಿಕ್ ವೇರಿಯೇಬಲ್ಗಳನ್ನು ಗುರುತಿಸಿ.
 
 
|-
 
||05:58
 
|| ಇನ್ಸ್ಟೆನ್ಸ್ ವೇರಿಯೇಬಲ್ಗಳಿಗೆ ಮೌಲ್ಯಗಳನ್ನು ಇನಿಶಿಯಲೈಸ್ ಮಾಡಲು ಕನ್ಸ್ಟ್ರಕ್ಟರ್ ಒಂದನ್ನು ನಿರೂಪಿಸಿ.
 
 
|-
 
||06:03
 
|| ಸ್ಟಾಟಿಕ್ ವೇರಿಯೇಬಲ್ಗಳ ಮೌಲ್ಯಗಳನ್ನು ಇನಿಶಿಯಲೈಸ್ ಮಾಡಲು ಸ್ಟಾಟಿಕ್ ಬ್ಲಾಕ್ ಅನ್ನು ನಿರೂಪಿಸಿ.
 
 
|-
 
||06:08
 
|| ಜೊತೆಗೆ ಮೇನ್ ಮೆಥಡ್ ಹೊಂದಿರುವ Demo ಕ್ಲಾಸ್ ಅನ್ನು ರಚಿಸಿ.
 
 
|-
 
||06:12
 
|| ಮೇನ್ ಮೆಥಡ್ ಒಳಗೆ, CarService ನ ಕೆಲವು ಅಬ್ಜೆಕ್ಟ್ ಗಳನ್ನು ರಚಿಸಿ ಮತ್ತು show( ) ಮೆಥಡ್ ಅನ್ನು ಇನ್ವೋಕ್ ಮಾಡಿ.
 
|-
 
||06:19
 
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ.
 
 
|-
 
||06:24
 
|| ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
 
 
|-
 
||06:27
 
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
 
 
|-
 
||06:35
 
|| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
 
 
|-
 
||06:39
 
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
 
 
|-
 
||06:46
 
|| ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
 
 
|-
 
||06:50
 
|| ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.
 
|-
 
||06:58
 
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 
ಧನ್ಯವಾದಗಳು.
 
|-
 

Revision as of 20:08, 18 May 2020

Contributors and Content Editors

Sandhya.np14