Difference between revisions of "PHP-and-MySQL/C2/Multi-Dimensional-Arrays/Kannada"

From Script | Spoken-Tutorial
Jump to: navigation, search
 
Line 70: Line 70:
 
|-
 
|-
 
|02:13
 
|02:13
|ಹಾಗಾಗಿ ನಾನು '''echo''' ಎಂದು, ನಂತರ ನಮ್ಮ ಮೇನ್ ಅರೇ ಆಗಿರುವ  ''$alpha''' ಎಂದು  
+
|ಹಾಗಾಗಿ ನಾನು '''echo''' ಎಂದು, ನಂತರ ನಮ್ಮ ಮೇನ್ ಅರೇ ಆಗಿರುವ  '''$alpha''' ಎಂದು  
 
|-
 
|-
 
|02:19
 
|02:19

Latest revision as of 17:15, 29 April 2020

Time Narration
00:00 multidimensional array ಯಲ್ಲಿ ನೀವು ಇತರ ಅರೇ ಗಳನ್ನು ಸ್ಟೋರ್ ಮಾಡಬಹುದು.
00:06 ಇದು 'ಅಸೋಸಿಯೇಟಿವ್ ಅರೇ' ಯನ್ನು ಹೋಲುತ್ತದೆ.
00:09 ಈ ಅರೇಗಳಿಗೆ ಅವುಗಳೇ ಸಹವರ್ತಿ(ಅಸೋಸಿಯೇಟ್) ಗಳಾಗಿವೆ.
00:14 ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು, ಈ ಪ್ರೊಗ್ರಾಂ ಅನ್ನು ಪ್ರಾರಂಭಿಸೋಣ.
00:19 ಇಂಗ್ಲಿಷ್ ವರ್ಣಮಾಲೆಯಲ್ಲಿ ಒಂದು ಅಕ್ಷರದ ಸ್ಥಾನವನ್ನು ನೋಡಲು, ನಾನು ಈಗ ಒಂದು ಪ್ರೋಗ್ರಾಂ ಅನ್ನು ರಚಿಸುವೆನು.
00:26 ಉದಾಹರಣೆಗೆ, ನಾನು ವ್ಯಾಲ್ಯುವನ್ನು 1 ಎಂದು ಕೊಟ್ಟರೆ, ಇದು "A" in position 1 ಎಂದು echo ಮಾಡಬೇಕು.
00:33 ನಾನು ವ್ಯಾಲ್ಯುವನ್ನು ಎರಡು ಎಂದು ಕೊಟ್ಟರೆ ಅದು "B" in position 2 ಎಂದು ಹೇಳಬೇಕು.
00:38 ಮತ್ತು ಮೂರನ್ನು ಕೊಟ್ಟಾಗ ಅದು "C" is in position 3 ಎಂದು ಹೇಳುವುದು.. ಹೀಗೆ.
00:43 ಮೊದಲಿಗೆ ನಾನು ನನ್ನದೇ ಒಂದು ಅರೇ ಯನ್ನು ರಚಿಸುವೆನು.
00:53 ನೋಡಲು ಸುಲಭವಾಗುವಂತೆ ನಾನು ಇದನ್ನು ಕೆಳಗೆ ತರುವೆನು.
00:58 ನೀವು ಕೂಡ ಹೀಗೆ ಮಾಡಬಹುದು.
01:01 ಇದರ ಒಳಗಡೆ, ನಾನು ನನ್ನ ಸ್ವಂತ ಅರೇ ಯನ್ನು ರಚಿಸಿ ಅದನ್ನು "ABC" ಎಂದು ಕರೆಯುವೆನು.
01:10 ಇದು ಒಂದು ಅರೇ ಆಗಿದೆ.
01:15 ಮೊದಲು ನಾವು ಮಾಡಿದಂತೆ ಇದರ ಒಳಗೆ ವ್ಯಾಲ್ಯುಗಳನ್ನು ಸೇರಿಸುವ ಬದಲು, ಇಲ್ಲಿ ಒಂದು ಅರೇ ಅನ್ನು ಹೊಂದಿದ್ದೇವೆ.
01:24 ಮತ್ತು ಈ ಅರೇ ಯ ಒಳಗೆ ವ್ಯಾಲ್ಯುಗಳಿರುವವು. ಉದಾಹರಣೆಗೆ, ಇಲ್ಲಿ A, B, C ಮತ್ತು D ದೊಡ್ಡಕ್ಷರಗಳಿವೆ.
01:32 ಮತ್ತು ಈ ವ್ಯಾಲ್ಯುಗಳನ್ನು ಅಲ್ಪವಿರಾಮ ಚಿಹ್ನೆಯಿಂದ ಬೇರ್ಪಡಿಸಲಾಗಿದೆ.
01:41 ನಂತರ ನಾವು “123” ಎಂದು ಟೈಪ್ ಮಾಡುವೆವು ಮತ್ತು ಇದು ಒಂದು ಅರೇಗೆ ಸಮವಾಗಿದೆ.
01:46 ಈಗ ನಾವು 1, 2, 3, 4 ಎಂಬ ವ್ಯಾಲ್ಯುಗಳನ್ನು ಹೊಂದಿದ್ದೇವೆ.
01:53 ಇಲ್ಲಿ, ನಾನು ಅರೇಯ ಒಳಗಿರುವ ನಿರ್ದಿಷ್ಟವಾದ ಡೇಟಾ ವನ್ನು echo ಮಾಡುವುದನ್ನು ತೋರಿಸುವೆನು.
01:59 ನಾವು ನಮ್ಮ ಮೇನ್ ಅರೇ ಯನ್ನು ಕಾಲ್ ಮಾಡುವೆವು.
02:02 ಮತ್ತು ಈ ಅರೇಯನ್ನೂ ಕೂಡ ಕಾಲ್ ಮಾಡುವೆವು.
02:05 ನಂತರ ಅರೇಯ ಒಳಗಡೆ ಇರುವ, ನಾವು ಬಯಸುವ ಸ್ಥಾನವನ್ನು (ಪೊಸಿಷನ್) ಕಾಲ್ ಮಾಡುವೆವು. ಹಾಗಾಗಿ ಇದು ಅರೇಯ ಒಳಗೆ ಇನ್ನೊಂದು ಅರೇ ಆಗಿದೆ.
02:13 ಹಾಗಾಗಿ ನಾನು echo ಎಂದು, ನಂತರ ನಮ್ಮ ಮೇನ್ ಅರೇ ಆಗಿರುವ $alpha ಎಂದು
02:19 ಆನಂತರ ಚೌಕ ಆವರಣಗಳಲ್ಲಿ, 'ABC' ಎಂದು ಟೈಪ್ ಮಾಡುವೆನು.
02:23 ನಂತರ ಚೌಕ ಆವರಣಗಳಲ್ಲಿ, ನಾವು ಪಡೆಯಬೇಕಾದ ಎಲಿಮೆಂಟ್ ನ ಸ್ಥಾನವನ್ನು ಟೈಪ್ ಮಾಡಬೇಕು.
02:30 ಈಗ "A" ಎಂದು ಎಕೋ ಮಾಡುವುದು.
02:35 ಈಗ ಇದನ್ನು ರನ್ ಮಾಡೋಣ. ನಾವು "A" ಎಂದು ಔಟ್ಪುಟ್ ಅನ್ನು ಪಡೆದಿದ್ದೇವೆ.
02:47 ಇದನ್ನು ‘123’ ಎಂದು ಬದಲಿಸಿದರೆ, ಬಹುಷಃ ನಮಗೆ "1" ಎಂದು ಕೊಡುವುದು.
02:54 ನೀವು ಇದನ್ನು ಇಲ್ಲಿ ನೋಡಬಹುದು.
02:57 ಹೀಗೆ, ನಾವು ಮುಖ್ಯ ಅರೇ ಯ ಒಳಗೆ ಎರಡು ಅರೇಗಳನ್ನು ರಚಿಸಿ, ಅವುಗಳನ್ನು ಕಾಲ್ ಮಾಡಲು ಕಲಿತಿದ್ದೇವೆ.
03:05 ಈಗ, ಸಂಖ್ಯೆಗೆ ಅನುಸಾರವಾಗಿ ಅಕ್ಷರದ ಸ್ಥಾನವನ್ನು ಕಂಡುಹಿಡಿಯಲು ಒಂದು ಹೊಸ ಪ್ರೋಗ್ರಾಂಅನ್ನು ರಚಿಸುವೆನು.
03:13 ನಾನು postion = 0 ಎಂದು ಟೈಪ್ ಮಾಡುವೆನು ಏಕೆಂದರೆ ಅರೇ ಸೊನ್ನೆಯಿಂದ ಪ್ರಾರಂಭವಾಗುತ್ತದೆ.
03:30 ಈಗ ನಾನು Letter ಡ್ಯಾಶ್ is in position ಡ್ಯಾಶ್ ಎಂದು ಎಕೋ ಮಾಡುವೆನು.
03:39 ಇದು ತುಂಬ ಸರಳವಾಗಿದೆ.
03:42 ಇಲ್ಲಿ ನಾವು 3 ಎಂದು ಸ್ಥಾನವನ್ನು ನಮೂದಿಸುತ್ತೇವೆ ಎಂದುಕೊಳ್ಳಿ. "C" ಯು ವರ್ಣಮಾಲೆಯ ಮೂರನೇ ಸ್ಥಾನದಲ್ಲಿರುವುದರಿಂದ ನಾವು "C" ಯನ್ನು ಪಡೆಯುವೆವು.
03:53 ಹಾಗಾಗಿ, ನಮ್ಮ ಅಕ್ಷರವನ್ನು ಎಕೋ ಮಾಡಲು, ಮೊದಲನೆಯ ಡ್ಯಾಶ್ ನಲ್ಲಿ ನಾನು, $alpha
04:02 'ABC'
04:05 '$pos' ಎಂದು ಕೊಡುವೆನು.
04:07 'pos' ಇದು ಇಲ್ಲಿ ಸ್ಥಾನವನ್ನು ಸೂಚಿಸುತ್ತದೆ.
04:11 ಹಾಗಾಗಿ, ಸ್ಥಾನವು ಹೀಗಿದೆ - $alpha... '123'
04:19 ಮತ್ತು ‘$pos’.
04:23 ಈಗ, ಸ್ಥಾನವು 0 ಗೆ ಸಮವಾಗಿದೆ.
04:29 ನಾವು ಇದನ್ನು ಎಕೋ ಮಾಡಿದಾಗ, ಪೊಸಿಷನ್ ಸೊನ್ನೆ ಎಂದಿರುತ್ತದೆ.
04:36 ಒಳಗಿನ ಅರೇ 'ABC' ಯಲ್ಲಿ 'ಪೊಸಿಷನ್' ಸೊನ್ನೆ ಆಗಿದೆ. ವಾಸ್ತವದಲ್ಲಿ "A" ಯು ಸೊನ್ನೆಯ ಸ್ಥಾನದಲ್ಲಿದೆ.
04:47 123 ಅರೇಯಲ್ಲಿ ' ಪೊಸಿಷನ್' ಸೊನ್ನೆಯಲ್ಲಿ 1 ಇದೆ. ಹಾಗಾಗಿ ನಾವು "A" ಮೊದಲನೆಯ ಸ್ಥಾನದಲ್ಲಿದೆ ಎಂದು ಹೇಳುತ್ತಿದ್ದೇವೆ.
04:56 ಈಗ ಇದನ್ನು ರನ್ ಮಾಡೋಣ. "A" is in position 1 ಎಂದಿದೆ. ಈಗ ಇದನ್ನು 1 ಎಂದು ಬದಲಿಸೋಣ.
05:05 Refresh ಮಾಡಿ. "Letter B is in position 2". ಈಗ ಸೊನ್ನೆ ಅಥವಾ ಒಂದು ಎಂದು ಬರೆಯುವ ಅಗತ್ಯತೆಯನ್ನು ತೆಗೆದುಬಿಟ್ಟು, ಈ ಅಪ್ಲಿಕೇಶನ್ ಅನ್ನು ಪೂರ್ತಿ ಕ್ರಿಯಾತ್ಮಕ ಮತ್ತು ಸುಲಭವಾಗಿ ನ್ಯಾವಿಗೇಟ್ ಮಾಡಲು ಬರುವಂತೆ ಮಾಡುವೆನು.
05:21 ಸ್ಪಷ್ಟತೆಗಾಗಿ ನಾನು, ಕೊನೆಯಲ್ಲಿ ‘-1’ ಎಂದು ಮತ್ತು ಬ್ರ್ಯಾಕೆಟ್ ನಲ್ಲಿ 1 ಎಂದೂ ಇಡುವೆನು.
05:28 'ಪೊಸಿಷನ್' 1 ಮೈನಸ್ 1 ಸೊನ್ನೆಯೇ ಆಗಿರುವುದು. ಹಾಗಾಗಿ ಇಲ್ಲಿ, 1 ಎಂದು ಬರೆದಾಗ ಅದು ಸೊನ್ನೆ ಎಂದು ಬರೆದರೆ ಕೊಡುವ ಫಲಿತಾಂಶವನ್ನೇ ಕೊಡುವುದು. 2 ಎಂದು ಬರೆದರೆ 1 ಬರೆದಾಗ ಕೊಡುವ ಫಲಿತಾಂಶವನ್ನೇ ಕೊಡುವುದು. ಅಂದರೆ letter "B" is in position 2..ಹೀಗೆ.
05:43 ನಾನು ಇಲ್ಲಿ 1 ಎಂದರೆ, "A" is in position 1 ಎಂದು ಸಿಗುತ್ತದೆ. ನಾನು ಇಲ್ಲಿ ಸೊನ್ನೆ ಎಂದು ಹಾಕಿದರೆ, ಇಲ್ಲಿ -1 (ಮೈನಸ್ ೧) ಎಂಬ ಸ್ಥಾನ ವಿಲ್ಲ. ಅದ್ದರಿಂದ ನಾವು “Letter is in position” ಎಂದು ಪಡೆಯುವೆವು. ಇಲ್ಲಿ ನಾವು ಅಕ್ಷರವನ್ನಾಗಲಿ, ಸ್ಥಾನವನ್ನಾಗಲಿ ಹೊಂದಿಲ್ಲ.
06:01 ಹೀಗೆ, ನಾನು ಇದನ್ನು ಸುಲಭವಾಗಿರುವಂತೆ ಮಾಡಿದ್ದೇನೆ. ಧನ್ಯವಾದಗಳು.

Contributors and Content Editors

Sandhya.np14