Difference between revisions of "LibreOffice-Suite-Base/C2/Create-reports/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 ||'''Time''' || '''Narration''' |- ||00:00 ||’ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್ ಗೆ...") |
Sandhya.np14 (Talk | contribs) |
||
Line 53: | Line 53: | ||
|- | |- | ||
||01:32 | ||01:32 | ||
− | || ರಿಪೋರ್ಟ್ ಗಳಲ್ಲಿ ಸ್ಟಾಟಿಕ್ ಮತ್ತು ಡೈನಾಮಿಕ್ ಎಂಬ ಎರಡು | + | || ರಿಪೋರ್ಟ್ ಗಳಲ್ಲಿ ಸ್ಟಾಟಿಕ್ ಮತ್ತು ಡೈನಾಮಿಕ್ ಎಂಬ ಎರಡು ವರ್ಗಗಳಿವೆ. |
|- | |- |
Revision as of 11:57, 25 March 2020
Time | Narration |
00:00 | ’ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:03 | ಈ ಟ್ಯುಟೋರಿಯಲ್ ನಲ್ಲಿ ನಾವು: |
00:07 | ರಿಪೋರ್ಟ್ ರಚಿಸಲು, ರಿಪೋರ್ಟ್ ಫೀಲ್ಡ್ ಗಳನ್ನು ಆಯ್ಕೆಮಾಡಲು, ಲೇಬಲ್ ಮಾಡಲು ಮತ್ತು ವರ್ಗೀಕರಿಸಲು, |
00:12 | ರಿಪೋರ್ಟ್ ಲೇಔಟ್, ಮತ್ತು ಸ್ಟಾಟಿಕ್ ಅಥವಾ ಡೈನಾಮಿಕ್ ರಿಪೋರ್ಟ್ ವಿಧವನ್ನು ಆಯ್ಕೆಮಾಡಲು ಕಲಿಯಲಿದ್ದೇವೆ. |
00:19 | ಇದಕ್ಕಾಗಿ, ನಮ್ಮ ಪರಿಚಿತ “ಲೈಬ್ರರಿ” ಡೇಟಾಬೇಸ್ ಉದಾಹರಣೆಯನ್ನು ಪರಿಗಣಿಸೋಣ. |
00:27 | ಇಲ್ಲಿ, ಈ “Lbrary” ಡೇಟಾಬೇಸ್ ನಲ್ಲಿ, ನಾವು ಪುಸ್ತಕಗಳು ಮತ್ತು ಸದಸ್ಯರ ಕುರಿತು ಮಾಹಿತಿಯನ್ನು ಶೇಖರಿಸಿದ್ದೇವೆ. |
00:36 | ಅಲ್ಲದೆ, ಸದಸ್ಯರಿಗೆ ನೀಡಿರುವ ಪುಸ್ತಕಗಳನ್ನು ಟ್ರ್ಯಾಕ್ ಮಾಡಲು ನಾವು ಒಂದು ಟೇಬಲ್ ಅನ್ನು ಸಹ ಹೊಂದಿದ್ದೇವೆ. |
00:42 | ಹಿಂದಿನ ಟ್ಯುಟೋರಿಯಲ್ ಗಳಲ್ಲಿ ನಾವು, ಫಾರ್ಮ್ ಗಳು ಮತ್ತು ಕ್ವೆರಿಗಳನ್ನು ರಚಿಸಲು ಕಲಿತೆವು. |
00:48 | ರಿಪೋರ್ಟ್ ತಯಾರಿಸುವುದನ್ನು ಕಲಿಯುವ ಮೊದಲು, ರಿಪೋರ್ಟ್ ಅಂದರೆ ಏನು ಎಂದು ತಿಳಿದುಕೊಳ್ಳೋಣ. |
00:56 | ಕ್ವೆರಿಯಂತೆಯೇ, ರಿಪೋರ್ಟ್ ಸಹ ಡೇಟಾಬೇಸ್ ನಿಂದ ಮಾಹಿತಿಯನ್ನು ಮರಳಿ ಪಡೆಯುವ ಇನ್ನೊಂದು ವಿಧಾನವಾಗಿದೆ. |
01:05 | ಓದಲು ಅಥವಾ ಪ್ರಿಂಟ್ ಮಾಡಲು ಸುಲಭವಾಗುವಂತೆ, ಇದರ ಲೇಔಟ್ ಹಾಗೂ ನೋಟವನ್ನು ನಾವು ಕಸ್ಟಮೈಸ್ ಮಾಡಬಹುದು. |
01:14 | ಡೇಟಾಬೇಸ್ ನ ಟೇಬಲ್ ಗಳು ಅಥವಾ ಕ್ವೆರಿಗಳಿಂದ ರಿಪೋರ್ಟ್ ಗಳನ್ನು ರಚಿಸಬಹುದು. |
01:21 | ಅವು ಟೇಬಲ್ ನಲ್ಲಿಯ ಅಥವಾ ಕ್ವೆರಿಯಲ್ಲಿಯ ಎಲ್ಲಾ ಫೀಲ್ಡ್ ಗಳನ್ನು ಅಥವಾ ಫೀಲ್ಡ್ ಗಳ ಆಯ್ದ ಗ್ರುಪ್ ಗಳನ್ನು ಸಹ ಹೊಂದಿರಬಹುದು. |
01:32 | ರಿಪೋರ್ಟ್ ಗಳಲ್ಲಿ ಸ್ಟಾಟಿಕ್ ಮತ್ತು ಡೈನಾಮಿಕ್ ಎಂಬ ಎರಡು ವರ್ಗಗಳಿವೆ. |
01:38 | ಸ್ಟಾಟಿಕ್-ರಿಪೋರ್ಟ್ ಅನ್ನು ನೋಡಲು ತೆರೆದಾಗ, ಇದು |
01:42 | ರಿಪೋರ್ಟ್ ತಯಾರಿಸುವಾಗ ಇದ್ದ ಡೇಟಾವನ್ನೇ ಯಾವಾಗಲೂ ತೋರಿಸುತ್ತದೆ. |
01:48 | ಇದನ್ನು ಸ್ನ್ಯಾಪ್-ಶಾಟ್ ಎಂದು ಸಹ ಕರೆಯಲಾಗುತ್ತದೆ. |
01:52 | ಆದರೆ ಡೈನಾಮಿಕ್ ರಿಪೋರ್ಟ್ ಅನ್ನು ನೋಡಲು ತೆರೆದಾಗ, ಇದು ಡೇಟಾಬೇಸ್ ನ ಪ್ರಸ್ತುತ ಡೇಟಾವನ್ನೇ ತೋರಿಸುತ್ತದೆ. |
02:00 | ಸರಿ, ನಾವೀಗ ಒಂದು ಸ್ಯಾಂಪಲ್ ರಿಪೋರ್ಟ್ ಅನ್ನು ತಯಾರಿಸೋಣ. |
02:05 | 'Library' ಡೇಟಾಬೇಸ್ ನಲ್ಲಿ, |
02:08 | ಎಡ ಪ್ಯಾನೆಲ್ ನಲ್ಲಿ ‘Reports’ ಐಕಾನ್ ಮೇಲೆ ಕ್ಲಿಕ್ ಮಾಡೋಣ. |
02:12 | ಈಗ ಬಲ ಪ್ಯಾನೆಲ್ ನಲ್ಲಿ, ‘Use Wizard to create report’ ಮೇಲೆ ಕ್ಲಿಕ್ ಮಾಡೋಣ. |
02:18 | ರಿಪೋರ್ಟ್ ಗಳನ್ನು ತಯಾರಿಸಲು, ಇದೊಂದು ಸುಲಭ ಮತ್ತು ಶೀಘ್ರ ವಾದ ಆಯ್ಕೆಯಾಗಿದೆ. |
02:24 | ನಾವೀಗ ‘Report Builder’ ಎಂಬ ಒಂದು ಹೊಸ ವಿಂಡೋವನ್ನು ನೋಡುತ್ತಿದ್ದೇವೆ. |
02:31 | ಅಲ್ಲದೆ ಎಡಗಡೆಯಲ್ಲಿ 6 ಹಂತಗಳನ್ನು ಪಟ್ಟಿ ಮಾಡಿರುವ ವಿಜಾರ್ಡ್ ಅನ್ನು ನಾವು ಕಾಣಬಹುದು. |
02:39 | ಕಳೆದ ಟ್ಯುಟೋರಿಯಲ್ ನಲ್ಲಿ ನಾವು ತಯಾರಿಸಿದ 'History of books issued to the Library members’ ಎಂಬ ಕ್ವೆರಿಯನ್ನು ಆಧರಿಸಿ |
02:47 | ರಿಪೋರ್ಟ್ ಒಂದನ್ನು ತಯಾರಿಸಲು ನಾವು ವಿಜಾರ್ಡ್ ನತ್ತ ಗಮನಹರಿಸೋಣ. |
02:51 | ನಾವೀಗ ‘Step 1 - Field Selection’ ನಲ್ಲಿದ್ದೇವೆ. |
02:56 | ಇಲ್ಲಿ ನಾವು ರಿಪೋರ್ಟ್ ಡೇಟಾದ ಮೂಲವನ್ನು ಸೂಚಿಸಲಿದ್ದೇವೆ. ಇದು ಒಂದು ಟೇಬಲ್ ಅಥವಾ ಕ್ವೆರಿ ಆಗಿರಬಹುದು. |
03:05 | ನಂತರ ಮೇಲ್ಗಡೆ ಇರುವ ಡ್ರಾಪ್ ಡೌನ್ ಲಿಸ್ಟ್ ನಿಂದ ನಮ್ಮ ಕ್ವೆರಿ ‘History of Books Issued to Members’ ಅನ್ನು ಆಯ್ಕೆ ಮಾಡೋಣ. |
03:14 | ಈಗ ಎಡಗಡೆಯಲ್ಲಿ, ಕ್ವೆರಿಯಲ್ಲಿ ಲಭ್ಯವಿರುವ ಫೀಲ್ಡ್ ಗಳ ಪಟ್ಟಿಯನ್ನು ನೋಡುತ್ತೇವೆ. |
03:21 | ನಮ್ಮ ರಿಪೋರ್ಟ್ ನಲ್ಲಿ ಎಲ್ಲಾ ಫೀಲ್ಡ್ ಗಳು ಇರಬೇಕು. ಇದಕ್ಕಾಗಿ ನಾವು ಬಲಗಡೆಯ ಡಬಲ್ – ಆರೋ ಬಟನ್ ಮೇಲೆ ಕ್ಲಿಕ್ ಮಾಡುವೆವು. |
03:30 | ಮುಂದಿನ ಹಂತಕ್ಕೆ ಹೋಗಲು ಇಲ್ಲಿ ‘Next’ ಬಟನ್ ಮೇಲೆ ಕ್ಲಿಕ್ ಮಾಡೋಣ. |
03:35 | ‘Step 2. Labelling Fields’. |
03:39 | ಚಿತ್ರದಲ್ಲಿ ತೋರಿಸಿರುವಂತೆ, ಈಗ ಲೇಬಲ್ ಟೆಕ್ಸ್ಟ್-ಬಾಕ್ಸ್ ಗಳಲ್ಲಿ ಈ ವಿವರಣಾತ್ಮಕ ಲೇಬಲ್ ಗಳನ್ನು ಟೈಪ್ ಮಾಡೋಣ. |
03:50 | ಸರಿ, ಈಗ ನಾವು ‘Next’ ಬಟನ್ ಮೇಲೆ ಕ್ಲಿಕ್ ಮಾಡೋಣ. |
03:55 | ಇಲ್ಲಿ ನಾವು ‘Step 3 – Grouping’ ನಲ್ಲಿದ್ದೇವೆ. |
03:59 | ಆಯ್ದ ಫೀಲ್ಡ್ ಗಳ ಸೆಟ್ ಮೂಲಕ, ಡೇಟಾವನ್ನು ಗುಂಪುಗೂಡಿಸುವ ಅಗತ್ಯವಿದ್ದಾಗ ಇದನ್ನು ಬಳಸಲಾಗುತ್ತದೆ. |
04:05 | ಉದಾಹರಣೆಗೆ – ನಮ್ಮ ರಿಪೋರ್ಟ್ ನಲ್ಲಿ ‘Book title’ ಗಳ ಮೂಲಕ ನಾವು ಡೇಟಾವನ್ನು ವರ್ಗೀಕರಿಸಬಹುದು. |
04:12 | ನಾವು ಇದನ್ನು ಮಾಡಿದಾಗ, ಬುಕ್ ಟೈಟಲ್ ಮತ್ತು ಆ ಪುಸ್ತಕವನ್ನು ಪಡೆದ ಎಲ್ಲಾ ಸದಸ್ಯರನ್ನು ನಾವು ರಿಪೋರ್ಟ್ ನಲ್ಲಿ ನೋಡಬಹುದು. |
04:22 | ನಂತರ ನಾವು ಮುಂದಿನ ಬುಕ್ ಟೈಟಲ್ ಅನ್ನು ನೋಡುವೆವು..ಹೀಗೆ. |
04:27 | ಸದ್ಯಕ್ಕೆ, ನಾವು ನಮ್ಮ ರಿಪೋರ್ಟ್ ಅನ್ನು ಸರಳವಾಗಿಡೋಣ. |
04:31 | ಈಗ ‘Next’ ಬಟನ್ ಮೇಲೆ ಕ್ಲಿಕ್ ಮಾಡೋಣ. |
04:36 | ಈಗ ನಾವು 'Step 4 - Sorting Options' ನಲ್ಲಿದ್ದೇವೆ. |
04:41 | ಇದೀಗ ನಾವು ಡೇಟಾವನ್ನು ಕಾಲಾನುಕ್ರಮದಲ್ಲಿ ವರ್ಗೀಕರಿಸಿ |
04:46 | ನಂತರ ಬುಕ್-ಟೈಟಲ್ ಪ್ರಕಾರ ಏರಿಕೆ ಕ್ರಮದಲ್ಲಿ ವರ್ಗೀಕರಿಸೋಣ. |
04:52 | ಇದಕ್ಕಾಗಿ, ನಾವು ‘Sort by’ ಡ್ರಾಪ್-ಡೌನ್ ಬಾಕ್ಸ್ ಮೇಲೆ, ನಂತರ |
04:58 | ‘Issue Date’ ಮೇಲೆ ಕ್ಲಿಕ್ ಮಾಡುವೆವು. |
05:03 | ನಂತರ ಎರಡನೇ ಡ್ರಾಪ್-ಡೌನ್ ಬಾಕ್ಸ್ ಮೇಲೆ, ಆಮೇಲೆ |
05:08 | ‘Book Title’ ಮೇಲೆ ಕ್ಲಿಕ್ ಮಾಡುವೆವು. |
05:12 | ಈಗ ‘Next’ ಬಟನ್ ಮೇಲೆ ಕ್ಲಿಕ್ ಮಾಡೋಣ. |
05:16 | ಸರಿ. ‘Step 5- Choose Layout’. |
05:20 | ರಿಪೋರ್ಟ್ ಹೇಗಿರಬೇಕು ಮತ್ತು ಹೇಗೆ ಕಾಣಬೇಕು ಎಂದು ಇಲ್ಲಿ ಕಸ್ಟಮೈಸ್ ಮಾಡಬಹುದು. |
05:25 | ನಾವೀಗ ‘Columnar, single-column’ ಲೇಔಟ್ ಲಿಸ್ಟ್ ಮೇಲೆ ಕ್ಲಿಕ್ ಮಾಡೋಣ. |
05:31 | ಹಿನ್ನೆಲೆಯ ‘Report Builder’ ರಿಫ್ರೆಶ್ ಆಗಿರುವುದನ್ನು ಗಮನಿಸಿ. |
05:36 | ಎಡಗಡೆಯಲ್ಲಿ ಎಲ್ಲಾ ಲೇಬಲ್ ಗಳು ಮತ್ತು ಬಲಗಡೆಯಲ್ಲಿ ಅವುಗಳಿಗೆ ಸಂಬಂಧಿಸಿದ ಫೀಲ್ಡ್ ಗಳನ್ನು ಇದು ತೋರಿಸುತ್ತದೆ. |
05:43 | ನಾವೀಗ ‘Columnar, two columns’ ಮೇಲೆ ಕ್ಲಿಕ್ ಮಾಡೋಣ. |
05:48 | ಎರಡು ಕಾಲಂ ನ ಲೇಔಟ್ ತೋರಿಸಲು ಕೆಳಗಿನ ವಿಂಡೋ ಮತ್ತೆ ರಿಫ್ರೆಶ್ ಆಗಿದೆ. |
05:54 | ಈ ರೀತಿ, ಬೇಸ್ ವಿಜಾರ್ಡ್ ಒದಗಿಸುವ ಯಾವುದೇ ಲೇಔಟ್ ಅನ್ನು ನಾವು ಆರಿಸಬಹುದು. |
06:02 | ನಂತರ ನಮ್ಮ ಅಗತ್ಯತೆಗೆ ತಕ್ಕಂತೆ ನಾವು ಇದನ್ನು ಮಾರ್ಪಡಿಸಬಹುದು. |
06:07 | ಸದ್ಯಕ್ಕೆ ನಾವು ಮೊದಲ ಐಟಂ ‘Tabular’ ಮೇಲೆ ಕ್ಲಿಕ್ ಮಾಡಿ |
06:12 | ನಂತರ ‘Next’ ಬಟನ್ ಮೇಲೆ ಕ್ಲಿಕ್ ಮಾಡೋಣ. |
06:16 | ಸರಿ, ಕೊನೆಯ 'Step - Create Report'. |
06:20 | ನಾವು ಇಲ್ಲಿ ನಮ್ಮ ರಿಪೋರ್ಟ್ ಗೆ "Books Issued to Members: Report History" ಎಂಬ ವಿವರಣಾತ್ಮಕ ಶೀರ್ಷಿಕೆಯನ್ನು ಕೊಡೋಣ. |
06:30 | ನಮ್ಮ ರಿಪೋರ್ಟ್, ಯಾವಾಗಲೂ ಡೇಟಾಬೇಸ್ ನಿಂದ ಇತ್ತೀಚಿನ ಡೇಟಾ ತೋರಿಸುವಂತೆ ನಾವು ಅದನ್ನು ತಯಾರಿಸೋಣ. |
06:38 | ರಿಪೋರ್ಟ್ ಅನ್ನು ನೋಡಲು ತೆರೆದಾಗಲೆಲ್ಲ ನಾವು ಇತ್ತೀಚಿನ ಡೇಟಾವನ್ನು ನೋಡಲು ಇಚ್ಛಿಸುತ್ತೇವೆ. |
06:45 | ಇದಕ್ಕಾಗಿ ನಾವು ‘Dynamic Report’ ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ. |
06:52 | ಸರಿ, ನಮ್ಮ ರಿಪೋರ್ಟ್ ಈಗ ತಯಾರಾಗಿದೆ. ‘Create Report now’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ. |
06:59 | ಕೊನೆಯದಾಗಿ ‘Finish’ ಬಟನ್ ಮೇಲೆ ಕ್ಲಿಕ್ ಮಾಡೋಣ. |
07:05 | ನಾವೀಗ ಹೊಸ ವಿಂಡೋವನ್ನು ನೋಡುತ್ತಿದ್ದೇವೆ ಹಾಗೂ ಇದು ಈಗಷ್ಟೇ ತಯಾರು ಮಾಡಿದ ರಿಪೋರ್ಟ್ ಆಗಿದೆ. |
07:12 | ಗಮನಿಸಿ: ಇದು ಮೇಲ್ಗಡೆ ಫೀಲ್ಡ್-ಲೇಬಲ್ ಗಳನ್ನು, ಬೋಲ್ಡ್ ಫಾಂಟ್ ನಲ್ಲಿ ಹೊಂದಿದ್ದು ಡೇಟಾವನ್ನು ಟೇಬಲ್ ನ ರೂಪದಲ್ಲಿ ಪಟ್ಟಿ ಮಾಡಲಾಗಿದೆ. |
07:24 | ಅಲ್ಲದೆ, ಇದನ್ನು ‘Issue Date’ ಫೀಲ್ಡ್ ನ ಪ್ರಕಾರ ಏರಿಕೆ ಕ್ರಮದಲ್ಲಿ, ಅಂದರೆ ಕಾಲಾನುಕ್ರಮದಲ್ಲಿ, ನಂತರ 'Book Title' ಪ್ರಕಾರ ಏರಿಕೆ ಕ್ರಮದಲ್ಲಿ ವರ್ಗೀಕರಣ ಮಾಡಲಾಗಿದೆ. |
07:38 | ಹೀಗೆ, ಲೈಬ್ರರಿ ಸದಸ್ಯರಿಗೆ ಕಾಲಾನುಕ್ರಮದಲ್ಲಿ ನೀಡಿರುವ ಪುಸ್ತಕಗಳ ರಿಪೋರ್ಟ್ ಅನ್ನು ನಾವು ತಯಾರಿಸಿದ್ದೇವೆ. |
07:46 | ಮುಂದಿನ ಟ್ಯುಟೋರಿಯಲ್ ನಲ್ಲಿ, ನಮ್ಮ ರಿಪೋರ್ಟ್ ಅನ್ನು ಮಾರ್ಪಡಿಸಲು ಕಲಿಯುವೆವು. |
07:52 | ಇಲ್ಲೊಂದು ಅಸೈನ್ಮೆಂಟ್ ಇದೆ: |
07:54 | ಲೈಬ್ರರಿಯಲ್ಲಿರುವ ಎಲ್ಲಾ ಪುಸ್ತಕಗಳನ್ನು, ಅವುಗಳ ಪಬ್ಲಿಷರ್ ಗಳ ಪ್ರಕಾರ ವರ್ಗೀಕರಿಸಿದ ಒಂದು ರಿಪೋರ್ಟ್ ಅನ್ನು ತಯಾರಿಸಿ. |
08:01 | ‘Publishers’ ಮತ್ತು ‘Book titles’ ಎರಡೂ ಏರಿಕೆ ಕ್ರಮದಲ್ಲಿ ಇರಬೇಕು. |
08:07 | ‘ಕಾಲಮ್ನಾರ್, ಸಿಂಗಲ್ ಕಾಲಂ ಲೇಔಟ್’ ಅನ್ನು ಬಳಸಿ. |
08:11 | ಇಲ್ಲಿಗೆ ನಾವು ‘ಲಿಬರ್ ಆಫಿಸ್ ಬೇಸ್’ ನಲ್ಲಿ ‘Create reports’ ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
08:17 | ಸಂಕ್ಷಿಪ್ತವಾಗಿ ನಾವು: |
08:21 | ರಿಪೋರ್ಟ್ ಅನ್ನು ತಯಾರಿಸಲು, ರಿಪೋರ್ಟ್ ಫೀಲ್ಡ್ ಗಳ ಆಯ್ಕೆ, ಲೇಬಲ್ ಮಾಡುವುದು ಮತ್ತು ವರ್ಗೀಕರಣ, |
08:25 | ರಿಪೋರ್ಟ್ ಲೇಔಟ್ ನ ಆಯ್ಕೆ ಮತ್ತು ಸ್ಟಾಟಿಕ್ ಅಥವಾ ಡೈನಾಮಿಕ್ ರಿಪೋರ್ಟ್ ವಿಧವನ್ನು ಆರಿಸಲು ಕಲಿತೆವು. |
08:31 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD ಮೂಲಕ ಭಾರತ ಸರ್ಕಾರದ ನೆರವು ಪಡೆದಿದೆ. |
08:42 | ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: http://spoken-tutorial.org. |
08:48 | ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ. |
08:51 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
ಧನ್ಯವಾದಗಳು. |