Difference between revisions of "Moodle-Learning-Management-System/C2/Plugins-in-Moodle/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 395: | Line 395: | ||
|- | |- | ||
| 12:59 | | 12:59 | ||
− | | ಎಲ್ಲ ಯೂಸರ್ ಗಳ ಸ್ಟ್ಯಾಟಸ್ ಅನ್ನು''''Present'''' ಎಂದು ಸೆಟ್ ಮಾಡಲು, ''''P'''' ಯ ಕೆಳಗಿರುವ ರೆಡಿಯೋ ಬಟನ್ ಅನ್ನು ಒತ್ತಿ. ಗೈರು | + | | ಎಲ್ಲ ಯೂಸರ್ ಗಳ ಸ್ಟ್ಯಾಟಸ್ ಅನ್ನು''''Present'''' ಎಂದು ಸೆಟ್ ಮಾಡಲು, ''''P'''' ಯ ಕೆಳಗಿರುವ ರೆಡಿಯೋ ಬಟನ್ ಅನ್ನು ಒತ್ತಿ. ಗೈರು ಹಾಜರಿರುವ ವಿದ್ಯಾರ್ಥಿಗಳಿಗೆ ಮಾತ್ರ ''''A'''' ಎಂದು ಗುರುತುಹಾಕಿ. |
|- | |- | ||
| 13:10 | | 13:10 |
Latest revision as of 10:30, 21 January 2020
Time | Narration |
00:01 | Installing plugins in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು ಪ್ಲಗ್-ಇನ್ ಗಳು ಮತ್ತು ಮೂಡಲ್ ನಲ್ಲಿ ಪ್ಲಗ್-ಇನ್ ಅನ್ನು ಇನ್ಸ್ಟಾಲ್ ಮಾಡುವುದರ ಬಗ್ಗೆ ಕಲಿಯುವೆವು. |
00:15 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, |
00:23 | XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, |
00:31 | Moodle 3.3 , |
00:33 | Firefox ವೆಬ್-ಬ್ರೌಸರ್ ಮತ್ತು ಸಕ್ರಿಯವಾಗಿರುವ ಇಂಟರ್ನೆಟ್ ಸಂಪರ್ಕವನ್ನು ಬಳಸಿದ್ದೇನೆ. |
00:40 | ನಿಮ್ಮ ಆಯ್ಕೆಯ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು. |
00:44 | ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು. ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. |
00:52 | ಈ ಟ್ಯುಟೋರಿಯಲ್ ಅನ್ನು ಕಲಿಯುವವರು ತಮ್ಮ Moodle ವೆಬ್ಸೈಟ್ ನಲ್ಲಿ ಕೆಲವು ಕೋರ್ಸ್ ಗಳನ್ನು ಹಾಗೂ ಯೂಸರ್ ಗಳನ್ನು ರಚಿಸಿರಬೇಕು. |
00:59 | ಇಲ್ಲದಿದ್ದರೆ, ಈ ವೆಬ್ಸೈಟ್ ನಲ್ಲಿ ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ನೋಡಿ. |
01:06 | plugins(ಪ್ಲಗ್ ಇನ್ಸ್) ಎಂದರೇನು?
Plugin ಗಳು ಈಗಿರುವ ಸಾಫ್ಟ್ವೇರ್ ಗೆ ಕೆಲವು ವೈಶಿಷ್ಟ್ಯಗಳನ್ನು ಸೇರಿಸುವ ಆಡ್-ಆನ್ (add-on) ಟೂಲ್ ಗಳಾಗಿವೆ. |
01:15 | ಮೂಡಲ್ ನಲ್ಲಿ, ಟೀಚರ್ ಮತ್ತು ‘ಸೈಟ್ ಅಡ್ಮಿನಿಸ್ಟ್ರೇಟರ್’ ಗಳಿಗಾಗಿ ಹಲವಾರು ಉಪಯುಕ್ತ ಪ್ಲಗ್-ಇನ್ ಗಳಿವೆ. |
01:22 | ಇವುಗಳು plugins ಡೈರಕ್ಟರಿಯಲ್ಲಿ ಲಭ್ಯವಿರುತ್ತವೆ. |
01:26 | ಬ್ರೌಸರ್ ಅನ್ನು ತೆರೆದು, ಹೀಗೆ ಟೈಪ್ ಮಾಡಿ: |
01:36 | ಈ ಪೇಜ್ ನಲ್ಲಿ, Purpose ಮತ್ತು Plugin Type ಗಳನ್ನು ಆಧರಿಸಿ ಫಿಲ್ಟರ್ ಗಳಿವೆ. |
01:41 | ಇಲ್ಲಿ ಕಸ್ಟಮ್-ಸರ್ಚ್ ಗಾಗಿ ಒಂದು search ಬಾಕ್ಸ್ ಸಹ ಇದೆ. |
01:46, | ಬಲಗಡೆ ಮೇಲ್ಭಾಗದಲ್ಲಿ ಕೆಲವು ಸಂಖ್ಯೆಗಳು ಕಾಣಿಸುತ್ತವೆ. ಅವುಗಳ ಕೆಳಗಿರುವ ಟೆಕ್ಸ್ಟ್, ಅವು ಏನೆಂದು ವಿವರಿಸುತ್ತವೆ. |
01:53 | ಈ ಟ್ಯುಟೋರಿಯಲ್ ನಲ್ಲಿ, ಅಟೆಂಡೆನ್ಸ್ ಪ್ಲಗ್-ಇನ್ ಅನ್ನು ಇನ್ಸ್ಟಾಲ್ ಮಾಡುವುದನ್ನು ಕಲಿಯುವೆವು. |
01:59 | search ಬಾಕ್ಸ್ ನಲ್ಲಿ attendance ಎಂದು ಟೈಪ್ ಮಾಡಿ, Search ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:05 | ಟೈಟಲ್ ಅಥವಾ ವಿವರಣೆಯಲ್ಲಿ ಈ ಕೀವರ್ಡ್ ಅನ್ನು ಹೊಂದಿರುವ ಅನೇಕ ಪ್ಲಗ್-ಇನ್ ಗಳನ್ನು ಇಲ್ಲಿ ನಾವು ನೋಡುತ್ತೇವೆ. |
02:13 | Attendance ಪ್ಲಗ್-ಇನ್ ಮೇಲೆ ಕ್ಲಿಕ್ ಮಾಡಿ.
ವಿವರಣೆಯಲ್ಲಿ “A plugin that allows an attendance log to be kept” ಹೀಗಿದೆ. |
02:22 | ನಾನು ಹೇಳಿದ ಪ್ಲಗ್-ಇನ್ ಮೇಲೆ ನೀವು ಕ್ಲಿಕ್ ಮಾಡಿರುವುದನ್ನು ಪರೀಕ್ಷಿಸಲು, ಹೊಸ ಪೇಜ್ ನ ಟೈಟಲ್ ಅನ್ನು ನೋಡಿ. |
02:30 | ಅದರ ಟೈಟಲ್ Activities ಕೋಲನ್ Attendance ಎಂದಿರಬೇಕು. |
02:36 | ಈ ಪ್ಲಗ್ ಇನ್, ಮೂಡಲ್ ನಲ್ಲಿ ‘ಅಟೆಂಡೆನ್ಸ್ ಲಾಗ್’ ಅನ್ನು ಇಡಲು ಟೀಚರ್ ಗೆ ಅನುಮತಿಸುತ್ತದೆ. |
02:42 | ಹೊಸ ಪ್ಲಗ್-ಇನ್ ಅನ್ನು ಇನ್ಸ್ಟಾಲ್ ಮಾಡುವ ಮೊದಲು, ನೀವು ಬಳಸುತ್ತಿರುವ ಮೂಡಲ್ ನ ಆವೃತ್ತಿಯಲ್ಲಿ ಅದು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಿ. |
02:50 | Versions ಲಿಂಕ್ ನ ಮೇಲೆ ಕ್ಲಿಕ್ ಮಾಡಿ, ಅದು ಬೆಂಬಲಿಸುವ ಆವೃತ್ತಿ ಯನ್ನು ನೋಡಿಕೊಳ್ಳಿ. |
02:56 | ನಮ್ಮ Moodle 3.3 ಆವೃತ್ತಿಯಲ್ಲಿ ಅದು ಲಭ್ಯವಿರುವುದನ್ನು ನೋಡಲು ಕೆಳಕ್ಕೆ ಸ್ಕ್ರೋಲ್ ಮಾಡಿ. |
03:03 | Description ಲಿಂಕ್ ಗೆ ಹಿಂದಿರುಗಿ. |
03:06 | ಈ ಪ್ಲಗ್ ಇನ್, ನಿಮ್ಮ ಉದ್ದೇಶವನ್ನು ಪೂರೈಸುವುದೇ ಎಂದು ತಿಳಿಯಲು ವಿವರಣೆಯನ್ನು ಓದಿ. |
03:12 | ಪ್ಲಗ್-ಇನ್ ಅನ್ನು ಬಳಸಲು ಬೇಕಾದ ಅವಶ್ಯಕತೆಗಳು ಮತ್ತು ಬಳಸುವ ಸೂಚನೆಗಳನ್ನು ಕೂಡ ಇದು ಹೇಳುತ್ತದೆ. |
03:20 | ಇದನ್ನು ಅನೇಕ ವೆಬ್ಸೈಟ್ ಗಳಲ್ಲಿ ಬಳಸಲಾಗಿದೆ ಮತ್ತು ಅನೇಕ ಅಭಿಮಾನಿಗಳನ್ನು ಇದು ಹೊಂದಿದೆ ಎಂದು ಇಲ್ಲಿ ನೋಡಬಹುದು. |
03:27 | ಪ್ಲಗ್-ಇನ್ ಉಪಯುಕ್ತವಾಗಿದೆ ಮತ್ತು ಬಳಸಲು ಸುಲಭ ಎಂದು ಇದು ಪ್ರಮಾಣೀಕರಿಸುತ್ತದೆ. |
03:33 | ಇನ್ನೂ ಕೆಳಕ್ಕೆ ಸ್ಕ್ರೋಲ್ ಮಾಡಿ ಈ ಪ್ಲಗ್ ಇನ್ ಕುರಿತು ಬೇರೆಯವರು ಕೇಳಿದ ಪ್ರಶ್ನೆಗಳನ್ನು ಸಹ ನೀವು ನೋಡಬಹುದು. |
03:40 | ಪ್ಲಗ್ ಇನ್ ಅನ್ನು ಇನ್ಸ್ಟಾಲ್ ಮಾಡಬೇಕೆಂದು ನಿಮಗೆ ಮನವರಿಕೆಯಾದಾಗ, Versions ಲಿಂಕ್ ಗೆ ಹಿಂದಿರುಗಿ. |
03:46 | Download ಬಟನ್ ನ ಮೇಲೆ ಕ್ಲಿಕ್ ಮಾಡಿ. |
03:49 | ನಿಮ್ಮ ಲೋಕಲ್ ಸಿಸ್ಟಮ್ ನಲ್ಲಿ ಫೈಲ್ ಅನ್ನು ಸೇವ್ ಮಾಡಿ. ನಾನು ಇದನ್ನು ಈಗಾಗಲೇ ನನ್ನ ಸಿಸ್ಟಮ್ ನಲ್ಲಿ ಸೇವ್ ಮಾಡಿದ್ದೇನೆ. |
03:55 | ಹೊಸ ಟ್ಯಾಬ್ ಅನ್ನು ತೆರೆದು, ನಿಮ್ಮ Moodle ವೆಬ್ಸೈಟ್ ನಲ್ಲಿ site administrator ಎಂದು ಲಾಗಿನ್ ಮಾಡಿ. |
04:02 | XAMPP ಸರ್ವೀಸ್ ರನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. |
04:06 | ಈಗ ನಾವು ‘ಅಡ್ಮಿನ್ ಡ್ಯಾಶ್ ಬೋರ್ಡ್’ ನಲ್ಲಿದ್ದೇವೆ. |
04:09 | ಎಡಭಾಗದಲ್ಲಿರುವ Site Administration ಅನ್ನು ಕ್ಲಿಕ್ ಮಾಡಿ. |
04:13 | ಈಗ Plugins ಟ್ಯಾಬ್ ಮೇಲೆ, ನಂತರ Install plugins ಲಿಂಕ್ ಮೇಲೆ ಕ್ಲಿಕ್ ಮಾಡಿ. |
04:20 | ಪ್ಲಗ್ ಇನ್ ಅನ್ನು ಇನ್ಸ್ಟಾಲ್ ಮಾಡಲು, Moodle plugins directory ಮೂಲಕ ಮತ್ತು zip ಅಪ್ಲೋಡ್ ಮೂಲಕ ಹೀಗೆ ಎರಡು ವಿಧಾನಗಳಿವೆ. |
04:29 | ನಾವು ಎರಡನೆಯ ವಿಧಾನವನ್ನು ಮಾತ್ರ ನೋಡುವೆವು. |
04:33 | ಮೊದಲನೆ ವಿಧಾನಕ್ಕಾಗಿ ನಾವು moodle.org ನಲ್ಲಿ ಅಕೌಂಟ್ ಅನ್ನು ಹೊಂದಿರಬೇಕು. ಹಾಗಾಗಿ ನಾವು ಅದನ್ನು ಬಿಡುತ್ತಿದ್ದೇವೆ. |
04:41 | Zip package ನ ಬದಿಯಲ್ಲಿರುವ Choose a file ಬಟನ್ ಅನ್ನು ಕ್ಲಿಕ್ ಮಾಡಿ. |
04:46 | ಎಡಭಾಗದಲ್ಲಿರುವ Upload a file ಲಿಂಕ್ ಅನ್ನು ಈಗಾಗಲೇ ಆಯ್ಕೆ ಮಾಡಿರದಿದ್ದರೆ, ಅದನ್ನು ಕ್ಲಿಕ್ ಮಾಡಿ. |
04:52 | Browse ಬಟನ್ ಅನ್ನು ಕ್ಲಿಕ್ ಮಾಡಿ, ನೀವು ಪ್ಲಗ್ ಇನ್ ಫೈಲ್ ಅನ್ನು ಸೇವ್ ಮಾಡಿದ ಜಾಗಕ್ಕೆ ಹೋಗಿ. |
04:59 | ನಾವು ಮೊದಲೇ ಡೌನ್ಲೋಡ್ ಮಾಡಿದ ಝಿಪ್ ಫೈಲ್ ಅನ್ನು ಆಯ್ಕೆಮಾಡಿ. |
05:03 | ನಂತರ ಈ ವಿಂಡೋದ ಕೆಳಗಿರುವ Upload this file ಬಟನ್ ಅನ್ನು ಕ್ಲಿಕ್ ಮಾಡಿ. |
05:08 | ಈಗ ಕೆಳಗಡೆ ಇರುವ Install plugin from the ZIP file ಬಟನ್ ಅನ್ನು ಕ್ಲಿಕ್ ಮಾಡಿ. |
05:14 | ಈ ಪೇಜ್ ನಲ್ಲಿ ನಿಮಗೆ ಒಂದು ಎರರ್ ಸಿಗಬಹುದು. |
05:18 | ಎರರ್ ಮೆಸೇಜ್, Validating mod_attendance ... Error ಎಂದು ಹೇಳುತ್ತದೆ. |
05:24 | Cancel ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
05:27 | ಇದು ನಮಗೆ, ಈ ಡೈರೆಕ್ಟರಿ ಗೆ write permission ಕೊಡಬೇಕೆಂಬ ಸೂಚನೆಯಾಗಿದೆ. |
05:33 | ಆದ್ದರಿಂದ Control + Alt + T ಕೀಗಳನ್ನು ಒತ್ತಿ, ಟರ್ಮಿನಲ್ ಅನ್ನು ತೆರೆಯಿರಿ. |
05:39 | ಹೀಗೆ ಟೈಪ್ ಮಾಡಿ: sudo space chmod space 777 space slash opt slash lampp slash htdocs slash moodle slash mod slash |
05:56 | ಕೇಳಿದರೆ, ‘ಅಡ್ಮಿನಿಸ್ಟ್ರೇಟಿವ್ ಪಾಸ್ವರ್ಡ್’ ಅನ್ನು ನಮೂದಿಸಿ ಮತ್ತು Enter ಅನ್ನು ಒತ್ತಿ. |
06:02 | ಬ್ರೌಸರ್ ಗೆ ಹಿಂದಿರುಗೋಣ ಮತ್ತು ಈ ಕ್ರಿಯೆಯನ್ನು ಪುನರಾವರ್ತಿಸೋಣ. |
06:09 | ಈ ಬಾರಿ, ವ್ಯಾಲಿಡೇಷನ್ ಯಶಸ್ವಿಯಾಗಿದೆ ಎಂಬ ಸಂದೇಶ ನಮಗೆ ಸಿಗುವುದು. Continue ಬಟನ್ ಅನ್ನು ಕ್ಲಿಕ್ ಮಾಡಿ. |
06:17 | ಗಮನಿಸಿ, ಮೇಲೆ ಹೇಳಿದ ಎರರ್ ಅನ್ನು ನೀವು ಪಡೆದರೆ ಮಾತ್ರ ಈ ಹೆಚ್ಚಿನ ಕೆಲಸವನ್ನು ಮಾಡಬೇಕಾಗುವುದು. |
06:25 | ಈಗ, ಪ್ಲಗ್ ಇನ್ ಡೌನ್ಲೋಡ್ ಆಗಿದ್ದು ಮೂಡಲ್ ನ ಈ ಆವೃತ್ತಿಗಾಗಿ ವ್ಯಾಲಿಡೇಟ್ ಮಾಡಲಾಗಿದೆ. |
06:31 | ನಂತರ, ನಮಗೆ Plugins check ಎಂಬ ಹೆಸರಿನ ಪೇಜ್ ಸಿಗುವುದು. |
06:36 | ಇಲ್ಲಿ ಹಸಿರು ಬಣ್ಣದಲ್ಲಿರುವ ಸ್ಟೇಟಸ್ ನ ಮಾಹಿತಿಯನ್ನು ಗಮನಿಸಿ. ಇದು To be installed ಎಂದು ಹೇಳುತ್ತಿದೆ. |
06:43 | Upgrade Moodle database now ಬಟನ್ ಅನ್ನು ಕ್ಲಿಕ್ ಮಾಡಿ. |
06:47 | ಇದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ದಯವಿಟ್ಟು ಬ್ರೌಸರ್ ವಿಂಡೋ ವನ್ನು ರಿಫ್ರೆಶ್ ಅಥವಾ ಕ್ಲೋಸ್ ಮಾಡುವುದು ಬೇಡ. |
06:53 | success ಸಂದೇಶ ಕಾಣಿಸಿದಾಗ, Continue ಬಟನ್ ಅನ್ನು ಕ್ಲಿಕ್ ಮಾಡಿ. |
06:58 | ಈಗ ನಾವು New settings ಪೇಜ್ ನಲ್ಲಿದ್ದೇವೆ. |
07:02 | ಏನಾದರೂ ಬದಲಿಸಬೇಕೆ ಎಂದು ನೋಡಲು, ಎಲ್ಲ ಸೆಟ್ಟಿಂಗ್ ಗಳನ್ನು ಒಮ್ಮೆ ನೋಡಿ. ನನಗೆ ಏನನ್ನೂ ಬದಲಾಯಿಸಬೇಕಾಗಿಲ್ಲ. |
07:10 | ನಂತರ, ಪೇಜ್ ನ ಕೆಳಗಿರುವ Save Changes ಬಟನ್ ಅನ್ನು ಕ್ಲಿಕ್ ಮಾಡಿ. |
07:16 | ಕೆಲವು ಎಚ್ಚರಿಕೆ ಸಂದೇಶಗಳನ್ನು ನೀವು ನೋಡಬಹುದು. ಸಧ್ಯಕ್ಕೆ ಅವುಗಳನ್ನು ನಿರ್ಲಕ್ಷಿಸಿ. |
07:21 | ಪ್ಲಗ್ ಇನ್ ಯಶಸ್ವಿಯಾಗಿ ಇನ್ಸ್ಟಾಲ್ ಆಗಿದೆಯೆ ಎಂದು ನೋಡಲು, ಎಡ ಪ್ಯಾನಲ್ ನಲ್ಲಿ Site Administration ಅನ್ನು ಕ್ಲಿಕ್ ಮಾಡಿ. |
07:29 | Plugins ಟ್ಯಾಬ್ ಮೇಲೆ, ನಂತರ Plugins overview ಮೇಲೆ ಕ್ಲಿಕ್ ಮಾಡಿ. |
07:36 | ಇದು, ಡಿಫಾಲ್ಟ್ ಆಗಿ ಇನ್ಸ್ಟಾಲ್ ಆದ ಮತ್ತು |
07:40 | ನೀವು ಇನ್ಸ್ಟಾಲ್ ಮಾಡಿದ ಎಲ್ಲಾ ಪ್ಲಗ್-ಇನ್ ಗಳ ಪಟ್ಟಿಯನ್ನು ತೋರಿಸುವುದು. |
07:46 | ನನ್ನ ಸೈಟ್ ನಲ್ಲಿ, ಇಷ್ಟು ಪ್ಲಗ್ ಇನ್ ಗಳು ಇನ್ಸ್ಟಾಲ್ ಆಗಿರುವುದನ್ನು ಇದು ತೋರಿಸುತ್ತಿದೆ. |
07:51 | ಇನ್ಸ್ಟಾಲ್ ಆಗಿರುವ ಹೆಚ್ಚಿನ ಪ್ಲಗ್ ಇನ್ ಗಳನ್ನು ನೋಡಲು, ಟೇಬಲ್ ನ ಮೇಲ್ಭಾಗದಲ್ಲಿಯ Additional plugins ಲಿಂಕ್ ಅನ್ನು ಕ್ಲಿಕ್ ಮಾಡಿ. |
07:59 | ಇಲ್ಲಿ Settings ಹಾಗೂ ಈ ಪೇಜ್ ನಿಂದ ಪ್ಲಗ್ ಇನ್ ಗಳನ್ನು uninstall ಮಾಡಲು ಲಿಂಕ್ ಗಳಿವೆ. |
08:05 | ಈಗ ಟೀಚರ್ ಗಳು ಮತ್ತು ಅಡ್ಮಿನಿಸ್ಟ್ರೇಟರ್ ಗಳು ತಮ್ಮ ಕೋರ್ಸ್ ಗಳಿಗೆ ಅಟೆಂಡೆನ್ಸ್ ಅನ್ನು ಕ್ರಿಯೇಟ್ ಮಾಡಬಹುದು. |
08:11 | ಎಡ ಪ್ಯಾನಲ್ ನಲ್ಲಿರುವ Site administration ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ. |
08:16 | ನಂತರ Courses ಮತ್ತು Manage Courses and categories ಗಳ ಮೇಲೆ ಕ್ಲಿಕ್ ಮಾಡಿ. |
08:21 | ಎಡಗಡೆಯಿರುವ Course category ಯಲ್ಲಿ, 1st year Maths ಅನ್ನು ಕ್ಲಿಕ್ ಮಾಡಿ. |
08:26 | ಬಲಗಡೆಯಿರುವ Calculus ಕೋರ್ಸ್ ಅನ್ನು ಕ್ಲಿಕ್ ಮಾಡಿ. |
08:30 | ಕೆಳಗೆ Calculus ಕೋರ್ಸ್ ನ ವಿವರಗಳ ವಿಭಾಗಕ್ಕೆ ಸ್ಕ್ರೋಲ್ ಮಾಡಿ. Calculus ಕೋರ್ಸ್ ಅನ್ನು ನೋಡಲು, View ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
08:40 | ಮೇಲೆ ಬಲಗಡೆಯಿರುವ gear ಐಕಾನ್ ಮೇಲೆ, ನಂತರ Turn editing on ನ ಮೇಲೆ ಕ್ಲಿಕ್ ಮಾಡಿ. |
08:47 | ಟಾಪಿಕ್ಸ್ ನ ಮೊದಲಿರುವ, ಕೆಳಗೆ ಬಲಗಡೆ ಇರುವ Add an activity or resource ನ ಮೇಲೆ ಕ್ಲಿಕ್ ಮಾಡಿ. |
08:54 | ಅಟೆಂಡೆನ್ಸ್ ಅನ್ನು ಕ್ರಿಯೇಟ್ ಮಾಡಲು, Attendance activity ಮೇಲೆ ಡಬಲ್- ಕ್ಲಿಕ್ ಮಾಡಿ. |
09:00 | name ಮತ್ತು description ಅನ್ನು ಇಲ್ಲಿ ತೋರಿಸಿರುವಂತೆ ನಮೂದಿಸಿ. |
09:04 | Grade ವಿಭಾಗವನ್ನು ವಿಸ್ತರಿಸಿ. |
09:07 | ಅಟೆಂಡೆನ್ಸ್ ಗಾಗಿ ಬಳಸುವ ಗ್ರೇಡಿಂಗ್ ವಿಧಾನವನ್ನು ಈ ಡ್ರಾಪ್-ಡೌನ್ ನಿರ್ಧರಿಸುವುದು. |
09:12 | ಕೋರ್ಸ್ ಗ್ರೇಡ್ ಗೆ, ಅಟೆಂಡೆನ್ಸ್ ಅನ್ನು ಪರಿಗಣಿಸಬೇಕಿದ್ದರೆ, ಗರಿಷ್ಟ ವ್ಯಾಲ್ಯೂ ವನ್ನು ಸೆಟ್ ಮಾಡಿ. ಡಿಫಾಲ್ಟ್ 100 ಆಗಿದೆ. |
09:21 | ನಾನು Grade ಅನ್ನು None ಎಂದು ಆಯ್ಕೆ ಮಾಡುವೆನು. |
09:24 | ಉಳಿದ ಆಯ್ಕೆಗಳು ಡಿಫಾಲ್ಟ್ ಆಗಿರಲಿ. |
09:27 | ಕೆಳಗೆ ಸ್ಕ್ರೋಲ್ ಮಾಡಿ Save and display ಬಟನ್ ಅನ್ನು ಕ್ಲಿಕ್ ಮಾಡಿ. |
09:31 | ನಾವು ಈಗ ಹೊಸ ಪೇಜ್ ನಲ್ಲಿ ಇದ್ದೇವೆ. |
09:34 | ಇಲ್ಲಿ Status set ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
09:38 | ಅಟೆಂಡೆನ್ಸ್ ಗಾಗಿ, Present , Late , Excused ಮತ್ತು Absent ಎಂಬ ನಾಲ್ಕು ಡಿಫಾಲ್ಟ್ ಸ್ಟ್ಯಾಟಸ್ ಗಳಿವೆ. |
09:47 | ನಿಮ್ಮ ಅವಶ್ಯಕತೆಗೆ ತಕ್ಕಂತೆ, ನೀವು ಇವುಗಳನ್ನು ಡಿಲೀಟ್ ಮಾಡಬಹುದು ಅಥವಾ ಹೆಚ್ಚಿನದನ್ನು ಸೇರಿಸಬಹುದು. |
09:53 | ಸ್ಟ್ಯಾಟಸ್ ಗಳನ್ನು ಬೇರೆ ಹೆಸರಿನಿಂದ ಕರೆಯುವುದಾದರೆ, ಅವುಗಳನ್ನು ಇಲ್ಲಿ ನೀವು ಮಾರ್ಪಡಿಸಬಹುದು. |
09:59 | Excused ಸ್ಟ್ಯಾಟಸ್ ಅನ್ನು ಡಿಲೀಟ್ ಮಾಡುವೆನು. ಏಕೆಂದರೆ, ನಾನು ಅದನ್ನು ನನ್ನ ತರಗತಿಯಲ್ಲಿ ಬಳಸುವುದಿಲ್ಲ. |
10:07 | ದೃಢೀಕರಣ ಸಂದೇಶದ ಬಾಕ್ಸ್ ಕಾಣಿಸುವುದು.
Continue ಬಟನ್ ಅನ್ನು ಕ್ಲಿಕ್ ಮಾಡಿ. |
10:13 | ಈಗ Add session ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
10:16 | ನೀವು ಸೇರಿಸಬೇಕಾದ ಮೊದಲ ಸೆಶನ್ ನ ದಿನಾಂಕವನ್ನು ಆಯ್ಕೆ ಮಾಡಿ.
ನಾನು ಇದನ್ನು 4 ಜೂನ್ 2019 ಎಂದು ಇಡುವೆನು. |
10:24 | ಸೆಶನ್ ನ ಆರಂಭದ ಮತ್ತು ಮುಗಿಯುವ ಸಮಯವನ್ನು ಆಯ್ಕೆಮಾಡಿ. |
10:27 | ಗಮನಿಸಿ: ಟೈಮ್ ಫೀಲ್ಡ್, 24-ಗಂಟೆಯ ಗಡಿಯಾರವನ್ನು ಹೊಂದಿದೆ.
ಹೀಗಾಗಿ 3:15 pm ರಿಂದ 4:05pm ವರೆಗಿನ ತರಗತಿಯು 15:15 ರಿಂದ 16:05 ರವರೆಗೆ ಇರುತ್ತದೆ. |
10:43 | ಈ ಅವಧಿಯ ಕುರಿತು ಸಣ್ಣ Description ಅನ್ನು ಟೈಪ್ ಮಾಡಿ. |
10:46 | ಈ Description ಫೀಲ್ಡ್ ಅನ್ನು ಖಾಲಿ ಬಿಟ್ಟರೆ, ಡಿಫಾಲ್ಟ್ ಆಗಿ ಇದು “Regular class session” ಆಗಿರುತ್ತದೆ. |
10:54 | Multiple sessions ವಿಭಾಗವನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ. |
10:59 | ನಿಮ್ಮ ತರಗತಿಯು ನಿಯಮಿತವಾಗಿ ಸೇರುತ್ತಿದ್ದರೆ, ನೀವು ಒಂದೇ ಸಮಯಕ್ಕೆ ಅನೇಕ ಸೆಷನ್ ಗಳನ್ನು ಕ್ರಿಯೇಟ್ ಮಾಡಬಹುದು. |
11:06 | Repeat the session above as follows ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
11:11 | ನಿಮ್ಮ ತರಗತಿಯು ವಾರದ ನಿರ್ದಿಷ್ಟ ದಿನಗಳಲ್ಲಿ ಸೇರುತ್ತಿದ್ದರೆ, ವಾರದ ಆ ದಿನಗಳನ್ನು ಆಯ್ಕೆ ಮಾಡಿ.
ನಾನು ನನ್ನ ತರಗತಿಗಾಗಿ Monday ಯನ್ನು ಆಯ್ಕೆ ಮಾಡುವೆನು. |
11:20 | ಮುಂದಿನ ಆಯ್ಕೆ Repeat every ಡ್ರಾಪ್-ಡೌನ್ ಆಗಿದೆ.
ತರಗತಿಯು ಪ್ರತಿವಾರ ಸೇರುತ್ತಿದ್ದರೆ, 1 ಅನ್ನು ಆಯ್ಕೆಮಾಡಿ. |
11:28 | ತರಗತಿಯು ಮೊದಲನೆಯ ಸೆಶನ್ ಆದ ಎರಡು ವಾರದ ನಂತರ ಸೇರುತ್ತಿದ್ದರೆ, 2 ಅನ್ನು ಆಯ್ಕೆ ಮಾಡಿ. ಹೀಗೆ .. |
11:35 | ನಾನು ಇದನ್ನು 1 ಎಂದು ಇಡುವೆನು. |
11:38 | ಇದರರ್ಥ, ನನ್ನ ತರಗತಿಯು ಪ್ರತಿ ಸೋಮವಾರ 3:15 pm ಗೆ, 50 ನಿಮಿಷಗಳ ಕಾಲ ಸೇರುವುದು. |
11:45 | Repeat until ಇದು ಕೊನೆಯ ಸೆಶನ್ ನ ದಿನಾಂಕವಾಗಿದೆ. |
11:49 | ನಾನು ಇದನ್ನು 30th March 2020 ಎನ್ನುತ್ತೇನೆ. |
11:54 | ನಂತರ, Student recording ವಿಭಾಗವನ್ನು ವಿಸ್ತರಿಸಲು ಅದರ ಮೇಲೆ ಕ್ಲಿಕ್ ಮಾಡಿ. |
12:00 | ವಿದ್ಯಾರ್ಥಿಗಳು ತಮ್ಮ ಹಾಜರಿಯನ್ನು ತಾವೆ ದಾಖಲಿಸಲಿ ಎಂದು ನೀವು ಬಯಸಿದರೆ, ಈ ವಿಭಾಗದಲ್ಲಿನ ಫೀಲ್ಡ್ ಗಳನ್ನು ಭರ್ತಿಮಾಡಿ. |
12:07 | ನಾನು ಈ ವಿಭಾಗವನ್ನು ಬಿಟ್ಟುಬಿಡುವೆನು. |
12:09 | ಕೆಳಕ್ಕೆ ಸ್ಕ್ರೋಲ್ ಮಾಡಿ. ಪೇಜ್ ನ ಕೆಳಗಿರುವ Add ಬಟನ್ ಅನ್ನು ಕ್ಲಿಕ್ ಮಾಡಿ. |
12:15 | 43 sessions were successfully generated. ಎಂಬ ದೃಢೀಕರಣದ ಸಂದೇಶ (ಕನ್ಫರ್ಮೇಶನ್ ಮೆಸೇಜ್) ಕಾಣುವುದು. |
12:22 | ನಾನು ಆಯ್ಕೆ ಮಾಡಿದ ದಿನಾಂಕಗಳನ್ನು ಬಿಟ್ಟು ನೀವು ಬೇರೆ ಆಯ್ಕೆ ಮಾಡಿದ್ದರೆ, ಸೆಶನ್ ಗಳ ಸಂಖ್ಯೆ ಇಲ್ಲಿ ಬೇರೆ ಇರುವುದು. |
12:28 | ಪ್ರತಿಯೊಂದು ಸೆಶನ್ ನ ಮುಂದೆ ಇರುವ ಐಕಾನ್ ಗಳನ್ನು ನೋಡಿ. |
12:32 | ಟೀಚರ್ ಇವುಗಳನ್ನು ಉಪಯೋಗಿಸಿ ಹಾಜರಿ ತೆಗೆದುಕೊಳ್ಳುವುದು ಮತ್ತು ಸೆಶನ್ ಅನ್ನು ಎಡಿಟ್ ಅಥವಾ ಡಿಲೀಟ್ ಮಾಡಬಹುದು. |
12:39 | ನೀವು ಅಟೆಂಡೆನ್ಸ್ ತೆಗೆದುಕೊಳ್ಳಲು ಬಯಸುವ ವಾರಕ್ಕಾಗಿ, Take attendance ಐಕಾನ್ ಅನ್ನು ಕ್ಲಿಕ್ ಮಾಡಿ. |
12:46 | ಈ ಕೋರ್ಸ್ ಗೆ ದಾಖಲಾಗಿರುವ ಎಲ್ಲ ವಿದ್ಯಾರ್ಥಿಗಳ ಪಟ್ಟಿಯನ್ನು ನೀವು ನೋಡಬಹುದು ಮತ್ತು ನೀವು ಅವರ ಅಟೆಂಡೆನ್ಸ್ ಅನ್ನು ಗುರುತು ಹಾಕಬಹುದು. |
12:53 | P, L ಮತ್ತು A ಗಳು ಸೆಟ್ಟಿಂಗ್ಸ್ ನಲ್ಲಿ ಮೊದಲೇ ನಾವು ಆಯ್ಕೆಮಾಡಿದ ಸ್ಟ್ಯಾಟಸ್ ಗಳಾಗಿವೆ. |
12:59 | ಎಲ್ಲ ಯೂಸರ್ ಗಳ ಸ್ಟ್ಯಾಟಸ್ ಅನ್ನು'Present' ಎಂದು ಸೆಟ್ ಮಾಡಲು, 'P' ಯ ಕೆಳಗಿರುವ ರೆಡಿಯೋ ಬಟನ್ ಅನ್ನು ಒತ್ತಿ. ಗೈರು ಹಾಜರಿರುವ ವಿದ್ಯಾರ್ಥಿಗಳಿಗೆ ಮಾತ್ರ 'A' ಎಂದು ಗುರುತುಹಾಕಿ. |
13:10 | ನೀವು ಅಟೆಂಡೆನ್ಸ್ ಅನ್ನು ಗುರುತಿಸಿದ ನಂತರ, ಪೇಜ್ ನ ಕೆಳಭಾಗದಲ್ಲಿರುವ Save attendance ಬಟನ್ ನ ಮೇಲೆ ಕ್ಲಿಕ್ ಮಾಡಿ. |
13:18 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಸಂಕ್ಷಿಪ್ತವಾಗಿ, |
13:24 | ಈ ಟ್ಯುಟೋರಿಯಲ್ ನಲ್ಲಿ ನಾವು ಪ್ಲಗ್-ಇನ್ ಗಳು ಮತ್ತು ಪ್ಲಗ್-ಇನ್ ಅನ್ನು ಇನ್ಸ್ಟಾಲ್ ಮಾಡುವುದರ ಬಗ್ಗೆ ಕಲಿತಿದ್ದೇವೆ. |
13:32 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ: |
13:35 | Projectes TAC Dept ನಿಂದ ನಿರ್ವಹಿಸಲಾಗುವ plugin Font family ಯನ್ನು ಹುಡುಕಿ. |
13:42 | ಪ್ಲಗ್-ಇನ್ ನ ಡಿಫಾಲ್ಟ್ ಸೆಟ್ಟಿಂಗ್ ಗಳೊಂದಿಗೆ ಅದನ್ನು ಇನ್ಸ್ಟಾಲ್ ಮಾಡಿ. |
13:46 | ಪ್ಲಗ್-ಇನ್ ಇನ್ಸ್ಟಾಲ್ ಆಗಿದೆಯೆಂದು Plugins overview ವಿಭಾಗದಿಂದ ಖಚಿತಪಡಿಸಿಕೊಳ್ಳಿ. |
13:52 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
14:00 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
14:10 | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. |
14:14 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
14:27 | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |