Difference between revisions of "LibreOffice-Suite-Base/C2/Add-Push-Button-to-a-form/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 |'''Time''' |'''Narration''' |- ||00:00 || ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್...") |
Sandhya.np14 (Talk | contribs) |
||
Line 268: | Line 268: | ||
|- | |- | ||
||08:18 | ||08:18 | ||
− | || | + | || ನಂತರದ ಕೆಳಗಿನ ಸಾಲಿನಲ್ಲಿ 4 ಕಿರಿದಾದ ಪುಶ್ ಬಟನ್ ಗಳನ್ನು ಸೇರಿಸಿ. ದಾಖಲೆಗಳಲ್ಲಿ ನ್ಯಾವಿಗೇಟ್ ಮಾಡಲು ಈ ಬಟನ್ ಗಳು ನಮಗೆ ಸಹಾಯ ಮಾಡಬೇಕು. |
− | + | ||
|- | |- | ||
||08:30 | ||08:30 |
Revision as of 14:25, 17 January 2020
Time | Narration |
00:00 | ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:03 | ಈ ಟ್ಯುಟೋರಿಯಲ್ ನಲ್ಲಿ, ನಾವು ಫಾರ್ಮ್ ಗೆ 'ಪುಶ್ ಬಟನ್' ಅನ್ನು ಸೇರಿಸುವ ಬಗ್ಗೆ ಕಲಿಯುವೆವು. |
00:10 | ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು, ಫಾರ್ಮ್ ಗೆ 'list box form control' ಸೇರಿಸುವುದನ್ನು ಕಲಿತೆವು. |
00:17 | ಈ ಟ್ಯುಟೋರಿಯಲ್ ನಲ್ಲಿ ಈಗ, ಫಾರ್ಮ್ ಗೆ 'ಪುಶ್ ಬಟನ್' ಗಳನ್ನು ಸೇರಿಸುವುದನ್ನು ಕಲಿಯುವೆವು. |
00:24 | ‘ಲಿಬರ್ ಆಫಿಸ್ ಬೇಸ್’ ಪ್ರೋಗ್ರಾಂ ಈಗಾಗಲೇ ತೆರೆದಿರದಿದ್ದರೆ ನಾವು ಅದನ್ನು ಮೊದಲು ತೆರೆಯೋಣ. |
00:36 | ಮತ್ತು ನಮ್ಮ 'Library' ಡೇಟಾಬೇಸ್ ತೆರೆಯೋಣ. ಈಗಾಗಲೇ ಇರುವ ಡೇಟಾಬೇಸ್ ಅನ್ನು ತೆರೆಯುವುದನ್ನು ನೀವು ಬಹುಶಃ ಕಲಿತಿರಬೇಕು. |
00:45 | File ಮೆನುವಿನ ಅಡಿಯಲ್ಲಿ 'Open' ಮೇಲೆ ಕ್ಲಿಕ್ ಮಾಡಿ ಮತ್ತು 'Library' ಡೇಟಾಬೇಸ್ ಆರಿಸಿ. |
00:52 | ನಾವೀಗ 'Library' ಡೇಟಾಬೇಸ್ ನಲ್ಲಿದ್ದೇವೆ. |
00:56 | ನಾವು ಕಳೆದ ಟ್ಯುಟೋರಿಯಲ್ ನಲ್ಲಿ ಬಳಸಿದ 'Books Issued to Members' ಎಂಬ ಫಾರ್ಮ್ ಅನ್ನು ತೆರೆಯೋಣ. |
01:04 | ಇದನ್ನು ಮಾಡಲು, ನಾವು ಎಡ ಪ್ಯಾನಲ್ ನಲ್ಲಿರುವ Forms ಐಕಾನ್ ಮೇಲೆ ಕ್ಲಿಕ್ ಮಾಡೋಣ. |
01:09 | ಮತ್ತು ಬಲ ಪ್ಯಾನಲ್ ನಲ್ಲಿರುವ 'Books Issued to Members' ಫಾರ್ಮ್ ಮೇಲೆ ರೈಟ್ ಕ್ಲಿಕ್ ಮಾಡಿ. |
01:16 | ಈಗ 'Edit' ಮೇಲೆ ಕ್ಲಿಕ್ ಮಾಡಿ. |
01:19 | ನಾವೀಗ Form Design ವಿಂಡೋದಲ್ಲಿದ್ದೇವೆ. |
01:23 | ನಮ್ಮ 'ಫಾರ್ಮ್'ಗೆ 'ಪುಶ್ ಬಟನ್' ಗಳನ್ನು ಸೇರಿಸುವ ಮೊದಲು, Member name ನ ಎರಡನೇ list box ಗೆ ಸ್ವಲ್ಪ ದಾರಿ ಮಾಡೋಣ. |
01:34 | ನೆನಪಿಡಿ, ಕಳೆದ ಟ್ಯುಟೋರಿಯಲ್ ನಲ್ಲಿ ನಮಗೆ ಎರಡನೇ ಲಿಸ್ಟ್ ಬಾಕ್ಸ್ ಅನ್ನು ರಚಿಸುವ ಅಸೈನ್ಮೆಂಟ್ ಇತ್ತು. |
01:41 | ಮೊದಲಿಗೆ, 'Member Name' ಲೇಬಲ್ ನ ಬಲಭಾಗದಲ್ಲಿರುವ ಟೆಕ್ಸ್ಟ್ ಬಾಕ್ಸ್ ಅನ್ನು |
01:50 | ಅದರ ಮೇಲೆ ರೈಟ್-ಕ್ಲಿಕ್ ಮಾಡಿ, ನಂತರ 'Cut' ಮೇಲೆ ಕ್ಲಿಕ್ ಮಾಡಿ ತೆಗೆದುಬಿಡೋಣ. |
01:57 | ಟೆಕ್ಸ್ಟ್-ಬಾಕ್ಸ್ ಅನ್ನು ಡಿಲೀಟ್ ಮಾಡಲಾಗಿದೆ. |
02:00 | ನಂತರ, 'ಫಾರ್ಮ್ ಎಲಿಮೆಂಟ್' ಗಳನ್ನು ಹೊಂದಿಸೋಣ. |
02:04 | ಲಿಸ್ಟ್-ಬಾಕ್ಸ್ ಗಳಿಗೆ ಟೆಕ್ಸ್ಟ್ ಬಾಕ್ಸ್ ಗಳಿಗಿಂತ ಹೆಚ್ಚು ಸ್ಥಳ ಬೇಕಿರುವುದರಿಂದ, ನಾವು ಫಾರ್ಮ್ ಎಲಿಮೆಂಟ್ಸ್ ಅನ್ನು ಫಾರ್ಮ್ ನಲ್ಲಿ ಇನ್ನಷ್ಟು ಕೆಳಕ್ಕೆ ತಳ್ಳೋಣ. |
02:15 | ನಾವು ಈ ರೀತಿ ಮಾಡಲಿದ್ದೇವೆ. |
02:17 | ಮೊದಲಿಗೆ 'Book title' ಲೇಬಲ್ ಕೆಳಗೆ ಇರುವ ಎಲ್ಲಾ ಫಾರ್ಮ್ ಎಲಿಮೆಂಟ್ ಗಳನ್ನು ಆಯ್ಕೆಮಾಡೋಣ. |
02:26 | ಇದಕ್ಕಾಗಿ ನಾವು ಕ್ಲಿಕ್, ಡ್ರ್ಯಾಗ್ ಮತ್ತು ಡ್ರಾಪ್ ವಿಧಾನವನ್ನು ಬಳಸಲಿದ್ದೇವೆ. |
02:32 | ನಂತರ, ನಾವು ಆಯ್ದ ಭಾಗದ ಮೇಲೆ ಕ್ಲಿಕ್ ಮಾಡೋಣ ಮತ್ತು ಇದನ್ನು ಲಂಬವಾಗಿ ಕೆಳಗೆ ಎಳೆಯೋಣ. |
02:39 | ಹೀಗೆ 'Book Title' ಲೇಬಲ್ ಪಕ್ಕದಲ್ಲಿಯ ಮೊದಲ ಲಿಸ್ಟ್-ಬಾಕ್ಸ್ ಗೆ ಸಾಕಷ್ಟು ಸ್ಥಳಾವಕಾಶ ಇರಬೇಕು. |
02:48 | ಈಗ, 'Member Name' ಲೇಬಲ್ ಗಾಗಿಯೂ ಹೀಗೆಯೇ ಮಾಡೋಣ. |
03:05 | ಈಗ, 'Member Name' ಲೇಬಲ್ ನ ಎಡಬದಿಯಲ್ಲಿರುವ ಎರಡನೇ ಲಿಸ್ಟ್ ಬಾಕ್ಸ್ ಅನ್ನು ಕ್ಲಿಕ್, ಡ್ರ್ಯಾಗ್ ಮತ್ತು ಡ್ರಾಪ್ ಮಾಡೋಣ. |
03:14 | ಮತ್ತು ಉಳಿದ ಫಾರ್ಮ್ ಕಂಟ್ರೋಲ್ಸ್ ಜೊತೆ ಚೆನ್ನಾಗಿ ಹೊಂದಿಕೆಯಾಗುವಂತೆ ಇದರ ಬಲಕ್ಕೆ ಸರಿಸೋಣ. |
03:22 | ಸರಿ, ಈಗ 'Control, S' ಕೀಬೋರ್ಡ್ ಶಾರ್ಟ್ಕಟ್ ಅನ್ನು ಬಳಸಿ, ನಾವು 'ಫಾರ್ಮ್' ಮೇಲೆ ಈತನಕ ಮಾಡಿದ ಕೆಲಸವನ್ನು ಫಾರ್ಮ್ 'save' ಮಾಡೋಣ. |
03:32 | ಈಗ, ನಾವು 'Push buttons' ಅನ್ನು ನಮ್ಮ ಫಾರ್ಮ್ ಗೆ ಸೇರಿಸಲು ತಯಾರಾಗಿದ್ದೇವೆ. |
03:39 | ಪುಶ್ ಬಟನ್, ಫಾರ್ಮ್ ಕಂಟ್ರೋಲ್ ನ ಇನ್ನೊಂದು ಉದಾಹರಣೆಯಾಗಿದೆ. |
03:44 | ನಮಗೆ 'OK, Cancel, Next' ಮತ್ತು 'Finish' ಬಟನ್ ಗಳು ಪರಿಚಿತ; ಇವು ಪುಶ್ ಬಟನ್ ಗಳ ಉದಾಹರಣೆಗಳಾಗಿವೆ. |
03:56 | 'Base' ಮೂಲಕ, ನಾವು ಪುಶ್ ಬಟನ್ ಗಳನ್ನು ನಮ್ಮ ಫಾರ್ಮ್ ಗೆ ಸೇರಿಸಬಹುದು ಮತ್ತು ಕ್ಲಿಕ್ ಮಾಡಿದಾಗ ನಿರ್ದಿಷ್ಟ ಕ್ರಿಯೆಗಳನ್ನು ಮಾಡಲು Base ಗೆ ಸೂಚನೆ ನೀಡಬಹುದು. |
04:07 | 'Save' ಅಥವಾ 'Undo' ಅಥವಾ 'Delete' ಗಳು ಸಹ ಕೆಲ ಉದಾಹರಣೆಗಳಾಗಿವೆ. |
04:14 | ಇದು ಹೇಗೆ ಎಂದು ನೋಡೋಣ. |
04:17 | ನಾವೀಗ, ಇಲ್ಲಿ ಚಿತ್ರದಲ್ಲಿ ತೋರಿಸಿರುವಂತೆ, ಇತರ ಫಾರ್ಮ್ ಎಲಿಮೆಂಟ್ ಗಳ ಕೆಳಗಡೆ, ನಮ್ಮ ಫಾರ್ಮ್ ಗೆ ನಾಲ್ಕು ಪುಶ್ ಬಟನ್ ಗಳನ್ನು ಸೇರಿಸೋಣ. |
04:30 | ಇದನ್ನು ಮಾಡಲು, ನಾವು ನಮ್ಮ 'Form Design' ವಿಂಡೋ ಗೆ ಮರಳೋಣ. |
04:35 | 'ಫಾರ್ಮ್ ಕಂಟ್ರೋಲ್' ಟೂಲ್ ಬಾರ್ ನಲ್ಲಿ, 'Push button' ಐಕಾನ್ ಮೇಲೆ ಒಮ್ಮೆ ಕ್ಲಿಕ್ ಮಾಡೋಣ. |
04:43 | ಈ ಐಕಾನ್, 'OK' ಯನ್ನು ಹೊಂದಿದ್ದು, ಒಂದು ಬಟನ್ ನಂತೆ ಕಾಣಿಸುತ್ತದೆ. |
04:50 | ಮೌಸ್-ಪಾಯಿಂಟರ್ ಒಂದು ಅಧಿಕ ಚಿಹ್ನೆಯಂತೆ ಕಾಣುವುದನ್ನು ಗಮನಿಸಿ. |
04:57 | ಈಗ ಕ್ಲಿಕ್, ಡ್ರ್ಯಾಗ್ ಮತ್ತು ಡ್ರಾಪ್ ಮಾಡಿ, ನಮ್ಮ ಮೊದಲ ಬಟನ್ ಅನ್ನು, ಫಾರ್ಮ್ ನಲ್ಲಿ ಇತರ ಎಲ್ಲಾ ಎಲಿಮೆಂಟ್ ಗಳ ಕೆಳಗೆ, ಫಾರ್ಮ್ ನ ಎಡಭಾಗಕ್ಕೆ ಎಳೆಯೋಣ. |
05:10 | ಇದನ್ನು 'ರಿ-ಸೈಜ್' ಮಾಡಲಿದ್ದೇವೆ. |
05:14 | ಈಗ ನಾವು ಹೀಗೆಯೇ ಇನ್ನು ಮೂರು ಸಲ ಪುನರಾವರ್ತಿಸೋಣ. |
05:27 | ನಾವೀಗ, ಒಂದೇ ಸಾಲಿನಲ್ಲಿರುವ ಇನ್ನೂ ಮೂರು ಬಟನ್ ಗಳನ್ನು ಹೊಂದಿದ್ದೇವೆ. |
05:35 | ನಾವು 'ಫಾರ್ಮ್' ನಲ್ಲಿ ಪುಶ್-ಬಟನ್ ಗಳನ್ನು ಎಳೆದಿದ್ದೇವೆ. ಈಗ ಅವುಗಳ ಲೇಬಲ್ ಗಳನ್ನು ಬದಲಾಯಿಸೋಣ. |
05:43 | ಇದನ್ನು ಮಾಡಲು, ಮೊದಲ ಬಟನ್ ಮೇಲೆ ಡಬಲ್-ಕ್ಲಿಕ್ ಮಾಡಿ. |
05:49 | ನಾವೀಗ 'Properties' ವಿಂಡೋಅನ್ನು ನೋಡುತ್ತಿದ್ದೇವೆ. ಇಲ್ಲಿ ನಾವು, 'Label' ನಲ್ಲಿ 'Save Record' ಎಂದು ಟೈಪ್ ಮಾಡೋಣ. |
05:59 | ಈಗ, ಫಾರ್ಮ್ ನಲ್ಲಿ ಎರಡನೇ ಬಟನ್ ಮೇಲೆ ಕ್ಲಿಕ್ ಮಾಡೋಣ. |
06:06 | ಮತ್ತು 'Properties window' ನಲ್ಲಿ, 'Label' ನಲ್ಲಿ 'Undo Changes' ಎಂದು ಟೈಪ್ ಮಾಡಲಿದ್ದೇವೆ. |
06:15 | ಮೂರನೇ ಮತ್ತು ನಾಲ್ಕನೇ ಬಟನ್ ಗಳಿಗಾಗಿ, ನಾವು ಕ್ರಮವಾಗಿ 'Delete Record' ಮತ್ತು |
06:25 | 'New Record' ಎಂದು ಟೈಪ್ ಮಾಡೋಣ. |
06:31 | ಈಗ, ಅವುಗಳ ಕೆಲಸಗಳನ್ನು ನಿರೂಪಿಸೋಣ. |
06:37 | ಇದನ್ನು ಮಾಡಲು, 'Save Record' ಬಟನ್ ಮೇಲೆ ಕ್ಲಿಕ್ ಮಾಡೋಣ. |
06:43 | ಮತ್ತು 'Properties window' ನಲ್ಲಿ, 'Action' ಲೇಬಲ್ ಕಾಣುವ ತನಕ ಕೆಳಕ್ಕೆ ಸ್ಕ್ರೋಲ್ ಮಾಡೋಣ. |
06:51 | ಇಲ್ಲಿ, ನಾವು ಡ್ರಾಪ್ ಡೌನ್ ಲಿಸ್ಟ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ, ನಂತರ 'Save record' ಮೇಲೆ ಕ್ಲಿಕ್ ಮಾಡುವೆವು. |
06:59 | ಇನ್ನುಳಿದ ಮೂರು ಬಟನ್ ಗಳಿಗಾಗಿ, ಇದೇ ಕ್ರಮವನ್ನು ಅನುಸರಿಸೋಣ. |
07:05 | 'Undo Changes' ಬಟನ್ ಗಾಗಿ, ನಾವು 'Undo data entry' ಎಂಬ Action ಅನ್ನು ಆರಿಸುವೆವು. |
07:12 | 'Delete Record' ಬಟನ್ ಗಾಗಿ, ನಾವು 'Delete Record' ಎಂಬ Action ಅನ್ನು ಆರಿಸುವೆವು. |
07:18 | ಮತ್ತು 'New Record' ಬಟನ್ ಗಾಗಿ, ನಾವು 'New record' ಎಂಬ Action ಅನ್ನು ಆರಿಸುವೆವು. |
07:25 | ಹೀಗೆ, ನಾವೀಗ 'ಪುಶ್ ಬಟನ್' ಗಳನ್ನು ಸೇರಿಸಿದ್ದೇವೆ. |
07:29 | ಸರಿ, ನಾವೀಗ 'Control, S' ಕೀಬೋರ್ಡ್ ಶಾರ್ಟ್ಕಟ್ ಅನ್ನು ಬಳಸಿ, ನಮ್ಮ 'ಫಾರ್ಮ್' ಅನ್ನು 'ಸೇವ್' ಮಾಡೋಣ ಮತ್ತು ಈ 'ವಿಂಡೋ' ಅನ್ನು ಮುಚ್ಚೋಣ. |
07:40 | ಮುಂದಿನ ಟ್ಯುಟೋರಿಯಲ್ ನಲ್ಲಿ, ನಾವು ನಮ್ಮ ಫಾರ್ಮ್ ಗೆ ಇನ್ನೂ ಮೂರು ಸರಳ ಮಾರ್ಪಾಡುಗಳನ್ನು ಮಾಡಲು ಕಲಿಯುವೆವು |
07:47 | ಆಗ ನಾವು ಫಾರ್ಮ್ ಅನ್ನು ಡೇಟಾ ಎಂಟ್ರಿ ಮತ್ತು ಡೇಟಾ ಅಪ್ಡೇಟ್ ಗಳಿಗಾಗಿ ಬಳಸಬಹುದು. |
07:54 | ಉದಾಹರಣೆಗೆ, ಗ್ರಂಥಾಲಯದ ಸದಸ್ಯನೊಬ್ಬ ಪುಸ್ತಕವೊಂದನ್ನು ಹಿಂದಿರುಗಿಸಿದಾಗ, ಈ 'ಫಾರ್ಮ್' ಅನ್ನು ಬಳಸಿ, ಡೇಟಾಬೇಸ್ ನಲ್ಲಿ ಈ ಮಾಹಿತಿಯನ್ನು ನಾವು ಅಪ್ಡೇಟ್ ಮಾಡಬಹುದು. |
08:06 | ಇಲ್ಲೊಂದು ಅಸೈನ್ ಮೆಂಟ್ ಇದೆ: |
08:08 | ಫಾರ್ಮ್ ನಲ್ಲಿ, ನಾಲ್ಕನೆಯ ಪುಶ್ ಬಟನ್ ಪಕ್ಕದಲ್ಲಿ, ಐದನೇಯ ಪುಶ್ ಬಟನ್ ಅನ್ನು ಫಾರ್ಮ್ ಗೆ ಸೇರಿಸಿ. ಇದನ್ನು ಬಳಸಿದಾಗ, ಇದು ಫಾರ್ಮ್ ಅನ್ನು 'ರಿಫ್ರೆಶ್' ಮಾಡಬೇಕು. |
08:18 | ನಂತರದ ಕೆಳಗಿನ ಸಾಲಿನಲ್ಲಿ 4 ಕಿರಿದಾದ ಪುಶ್ ಬಟನ್ ಗಳನ್ನು ಸೇರಿಸಿ. ದಾಖಲೆಗಳಲ್ಲಿ ನ್ಯಾವಿಗೇಟ್ ಮಾಡಲು ಈ ಬಟನ್ ಗಳು ನಮಗೆ ಸಹಾಯ ಮಾಡಬೇಕು. |
08:30 | ಇಲ್ಲಿಗೆ ನಾವು ‘ಲಿಬರ್ ಆಫಿಸ್ ಬೇಸ್’ ನಲ್ಲಿಯ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
08:35 | ಸಂಕ್ಷಿಪ್ತವಾಗಿ, ಫಾರ್ಮ್ ಗೆ ಪುಶ್-ಬಟನ್ ಅನ್ನು ಸೇರಿಸುವುದನ್ನು ನಾವು ಕಲಿತೆವು. |
08:40 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ‘ಟಾಕ್ ಟು ಎ ಟೀಚರ್’ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD, ಮೂಲಕ ಭಾರತ ಸರ್ಕಾರದ ನೆರವು ಪಡೆದಿದೆ. |
08:52 | ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: http://spoken-tutorial.org. |
08:57 | ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ. |
09:02 | ಈ ಸ್ಕ್ರಿಪ್ಟ್ ನ ಅನುವಾದಕ ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ---------- .
ಧನ್ಯವಾದಗಳು. |