Difference between revisions of "Health-and-Nutrition/C2/Storage-of-expressed-breastmilk/Kannada"
From Script | Spoken-Tutorial
Sandhya.np14 (Talk | contribs) (Created page with "{|border=1 | <center>Time</center> |<center>Narration</center> |- |00:01 | '''Storage of expressed breastmilk''' ಎಂಬ 'ಸ್ಪೋಕನ್ ಟ್ಯುಟೋರಿಯ...") |
Sandhya.np14 (Talk | contribs) |
||
Line 66: | Line 66: | ||
|- | |- | ||
| 02:30 | | 02:30 | ||
− | | ಎದೆಹಾಲನ್ನು ಫ್ರಿಜ್ ನ ಅತ್ಯಂತ ಕೆಳಗಿನ ಶೆಲ್ಫ್ ನ ಹಿಂಭಾಗದಲ್ಲಿ ಇರಿಸಬೇಕು. | + | | ಎದೆಹಾಲನ್ನು ಫ್ರಿಜ್ ನ ಅತ್ಯಂತ ಕೆಳಗಿನ ಶೆಲ್ಫ್ ನ ಹಿಂಭಾಗದಲ್ಲಿ ಇರಿಸಬೇಕು. ಇದು ಫ್ರಿಜ್ ನಲ್ಲಿ ಅತ್ಯಂತ ತಂಪಾದ ಭಾಗವಾಗಿದೆ. |
− | ಇದು ಫ್ರಿಜ್ ನಲ್ಲಿ ಅತ್ಯಂತ ತಂಪಾದ ಭಾಗವಾಗಿದೆ. | + | |
|- | |- | ||
| 02:40 | | 02:40 |
Revision as of 14:55, 13 August 2019
|
|
00:01 | Storage of expressed breastmilk ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, ಹೊರತೆಗೆದ ಎದೆಹಾಲನ್ನು ನಂತರದ ಬಳಕೆಗಾಗಿ ಸುರಕ್ಷಿತವಾಗಿ ಸಂಗ್ರಹಿಸಿ ಇಡುವುದರ ಬಗ್ಗೆ ಕಲಿಯುವೆವು. |
00:14 | ಎದೆಹಾಲು ಹೊರಗೆ ತೆಗೆಯುವುದರಿಂದ ಮಗು ಮತ್ತು ತಾಯಿಗೆ ಅನೇಕ ಪ್ರಯೋಜನಗಳಿವೆ. |
00:22 | ಕೈಯಿಂದ ಎದೆಹಾಲನ್ನು ಹೊರತೆಗೆಯುವ ಬಗ್ಗೆ ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ. |
00:29 | ಹೊರತೆಗೆದ ಎದೆಹಾಲನ್ನು ಸುರಕ್ಷಿತವಾಗಿ ಸಂಗ್ರಹಿಸಿ ಬಳಸಬೇಕು. |
00:34 | ಇದರಿಂದ, ಹಾಲಿನ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಬಹುದು. |
00:39 | ಎದೆಹಾಲನ್ನು ನಿರ್ವಹಿಸುವ ಮೊದಲು, ತಾಯಿಯು ತನ್ನ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆದು ಒಣಗಿಸಬೇಕು. |
00:47 | ಎದೆಹಾಲನ್ನು ಸಂಗ್ರಹಿಸಲು, ಅವಳು ಮುಚ್ಚಳವಿರುವ ಸ್ಟೀಲ್ ಅಥವಾ ಗಾಜಿನ ಅಗಲವಾದ ಬಾಯಿಯ ಪಾತ್ರೆಗಳನ್ನು ಬಳಸಬೇಕು. |
00:56 | ಸ್ಟೀಲ್ ಪಾತ್ರೆಗಳನ್ನು ಶಿಫಾರಸು ಮಾಡಲಾಗಿದ್ದರೂ, ಕೆಲವು ಚಿತ್ರಗಳಲ್ಲಿ ನಾವು ಗಾಜಿನ ಪಾತ್ರೆಗಳನ್ನು ಬಳಸಿದ್ದೇವೆ. |
01:03 | ಪಾತ್ರೆಯೊಳಗಿನ ಹಾಲನ್ನು ನೋಡಲು ಇದು ನಮಗೆ ಸಹಾಯ ಮಾಡುತ್ತದೆ. |
01:09 | ತಾಯಿಯು ಆಯ್ಕೆಮಾಡಿದ ಪಾತ್ರೆಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆಯಬೇಕು. |
01:14 | ಆನಂತರ, ಈ ಪಾತ್ರೆಗಳನ್ನು ಕನಿಷ್ಟ 10 ನಿಮಿಷಗಳ ಕಾಲ ಕುದಿಯುವ ನೀರಿನಲ್ಲಿ ಇಡಬೇಕು. |
01:21 | ಆಮೇಲೆ ಪಾತ್ರೆಗಳನ್ನು ಹವೆಯಲ್ಲಿ ಅಥವಾ ಶುಚಿಯಾದ ಬಟ್ಟೆಯಿಂದ ಒರೆಸಿ ಚೆನ್ನಾಗಿ ಒಣಗಿಸಬೇಕು. |
01:31 | ಕಿಚನ್ ಟಾವೆಲ್ ನಂತಹ ಬಳಸಲಾದ ಬಟ್ಟೆಯಿಂದ, ಈ ಪಾತ್ರೆಗಳನ್ನು ಎಂದಿಗೂ ಒಣಗಿಸಬಾರದು. |
01:40 | ಶುಚಿಮಾಡಿದ ಪಾತ್ರೆಯನ್ನು ಸರಿಯಾಗಿ ಒಣಗಿಸಿದ ನಂತರ, ಹೊರತೆಗೆದ ಹಾಲನ್ನು ಅವಳು ಪಾತ್ರೆಗಳಲ್ಲಿ ಸುರಿಯಬೇಕು. |
01:48 | ಪ್ರತಿಯೊಂದು ಪಾತ್ರೆಯಲ್ಲಿ, ಒಂದು ಬಾರಿ ಕುಡಿಸಲು ಅಥವಾ ಸುಮಾರು 60 ರಿಂದ 90 ಮಿಲಿಲೀಟರ್ ನಷ್ಟು ಹಾಲನ್ನು ಮಾತ್ರ ಸಂಗ್ರಹಿಸಬೇಕು. |
01:58 | ತಾಯಿಯು ತನ್ನ ಎದೆಹಾಲನ್ನು ಫ್ರೀಜ್ ಮಾಡಲು ಬಯಸಿದರೆ, ಪಾತ್ರೆಯ ಮೇಲ್ಭಾಗದಲ್ಲಿ ಒಂದು ಇಂಚು ಜಾಗವನ್ನು ಬಿಡಬೇಕು.
ಏಕೆಂದರೆ, ಹೆಪ್ಪುಗಟ್ಟಿದಾಗ ಎದೆಹಾಲಿನ ಗಾತ್ರ ಹೆಚ್ಚಾಗುತ್ತದೆ. |
02:12 | ಪ್ರತಿಯೊಂದು ಪಾತ್ರೆಯ ಮೇಲೆ, ಹಾಲನ್ನು ಹೊರತೆಗೆದ ದಿನಾಂಕ ಮತ್ತು ಸಮಯವನ್ನು ನಮೂದಿಸಬೇಕು. |
02:18 | ನಂತರ, ಎದೆಹಾಲು ತುಂಬಿದ ಈ ಪಾತ್ರೆಗಳನ್ನು ಸಾಧ್ಯವಾದಷ್ಟು ತಂಪಾದ ಸ್ಥಳದಲ್ಲಿ ಇರಿಸಬೇಕು. |
02:25 | ಫ್ರಿಜ್ ಅನ್ನು ಹೊಂದಿದ್ದರೆ, ಹಾಲನ್ನು ಅದರಲ್ಲಿ ಇಡುವುದು ಒಳ್ಳೆಯದು. |
02:30 | ಎದೆಹಾಲನ್ನು ಫ್ರಿಜ್ ನ ಅತ್ಯಂತ ಕೆಳಗಿನ ಶೆಲ್ಫ್ ನ ಹಿಂಭಾಗದಲ್ಲಿ ಇರಿಸಬೇಕು. ಇದು ಫ್ರಿಜ್ ನಲ್ಲಿ ಅತ್ಯಂತ ತಂಪಾದ ಭಾಗವಾಗಿದೆ. |
02:40 | ಎದೆಹಾಲನ್ನು ಎಂದಿಗೂ ಫ್ರಿಜ್ ನ ಬಾಗಿಲಲ್ಲಿ ಇರಿಸಬೇಡಿ. |
02:44 | ಕಡಿಮೆ ತಾಪಮಾನ ಇದ್ದಷ್ಟು, ಹೆಚ್ಚು ಸಮಯ ಶೇಖರಿಸಿ ಇಡಬಹುದು. |
02:49 | ಶುಚಿಯಾಗಿರುವ ಫ್ರಿಜ್ ನಲ್ಲಿ, ಎದೆಹಾಲನ್ನು 7 ದಿನಗಳವರೆಗೆ ಸಂಗ್ರಹಿಸಿ ಇಡಬಹುದು. |
02:56 | ಅದನ್ನು ನಿರಂತರವಾಗಿ ತಂಪಾಗಿ ಇಡಬೇಕು. |
02:59 | ನೆನಪಿಡಿ, ಫ್ರಿಜ್ ನ ಬಾಗಿಲನ್ನು ಮತ್ತೆ ಮತ್ತೆ ತೆರೆಯುವುದರಿಂದ, ಅದರ ಒಳಗಿನ ತಾಪಮಾನವು ಹೆಚ್ಚಾಗುವ ಸಾಧ್ಯತೆ ಇದೆ. |
03:07 | ವಿದ್ಯುತ್ ಕಡಿತ ಅಥವಾ ಇತರ ಕಾರಣಗಳಿಂದಾಗಿ, ಶೇಖರಣೆಯ ಸಮಯದಲ್ಲಿ ಫ್ರಿಜ್ ನ ತಾಪಮಾನವು ಹೆಚ್ಚಾದರೆ, ಆಗ ತಾಯಿಯು ಈ ಎದೆಹಾಲನ್ನು 6 ಗಂಟೆಗಳ ಒಳಗೆ ಬಳಸಬೇಕು. |
03:19 | 6 ಗಂಟೆಗಳ ಒಳಗೆ ಈ ಎದೆಹಾಲನ್ನು ಬಳಸದಿದ್ದರೆ, ಅವಳು ಅದನ್ನು ಎಸೆದುಬಿಡಬೇಕು. |
03:26 | ತಾಯಿಯ ಹತ್ತಿರ ಫ್ರಿಜ್ ಇಲ್ಲದಿದ್ದರೆ, ಮನೆಯಲ್ಲಿ ಸುರಕ್ಷಿತವಾದ, ತಂಪಾದ ಹಾಗೂ ಕತ್ತಲಿರುವ ಸ್ಥಳದಲ್ಲಿ ಎದೆಹಾಲನ್ನು 6 ಗಂಟೆಗಳವರೆಗೆ ಸಂಗ್ರಹಿಸಬಹುದು. |
03:39 | ಕೊಠಡಿಯು ಬಿಸಿಯಾಗಿದ್ದರೆ, ತಣ್ಣೀರಿನಿಂದ ತುಂಬಿದ ಮಣ್ಣಿನ ಮಡಕೆಯ ಬಳಿಯಲ್ಲಿಟ್ಟು ಅಥವಾ ತಣ್ಣೀರಿನಿಂದ ತುಂಬಿದ ಪಾತ್ರೆಯಲ್ಲಿಟ್ಟು ಎದೆಹಾಲನ್ನು ಸಂಗ್ರಹಿಸಬಹುದು. |
03:51 | ತಾಜಾ ಎದೆಹಾಲು, ಸೋಂಕು ನಿವಾರಕಗಳನ್ನು ಒಳಗೊಂಡಿದೆ. |
03:58 | ಆದ್ದರಿಂದ, ಇದು ಹಸುವಿನ ಹಾಲಿಗಿಂತ ಹೆಚ್ಚು ಕಾಲ ಹಾಳಾಗದೆ ಉಳಿಯುತ್ತದೆ. |
04:03 | ಫ್ರಿಜ್ನ ಹೊರಗೆ ಮತ್ತು ಬಿಸಿಯಾದ ವಾತಾವರಣದಲ್ಲಿ ಸಹ, ತಾಜಾ ಎದೆಹಾಲಿನಲ್ಲಿ ಕನಿಷ್ಠ 6 ಗಂಟೆಗಳ ಕಾಲ ಸೂಕ್ಷ್ಮಜೀವಿಗಳು ಬೆಳೆಯಲು ಆರಂಭಿಸುವುದಿಲ್ಲ. |
04:15 | ಫ್ರಿಜ್ನ ಹೊರಗೆ ಎದೆಹಾಲನ್ನು ಸಂಗ್ರಹಿಸುವ ಇನ್ನೊಂದು ವಿಧಾನವೆಂದರೆ, ಪ್ರತಿ 24 ಗಂಟೆಗಳಿಗೊಮ್ಮೆ ಬದಲಾಯಿಸಲ್ಪಡುವ ಐಸ್-ಪ್ಯಾಕ್ ಗಳೊಂದಿಗೆ, ತಂಪಾದ ಚೀಲ ಅಥವಾ ಪೆಟ್ಟಿಗೆಯನ್ನು ಬಳಸುವುದು. |
04:27 | ಹಾಲನ್ನು ಈ ಐಸ್ ಪ್ಯಾಕ್ಗಳಿಂದ ರಕ್ಷಿಸಬೇಕು. ಅದು ಹೆಪ್ಪುಗಟ್ಟುವ ಸಾಧ್ಯತೆ ಇದೆ. |
04:33 | ಹಾಲನ್ನು ಕೊಂಡೊಯ್ಯಲು ತಂಪಾದ ಚೀಲವನ್ನು ಸಹ ಬಳಸಬಹುದು. |
04:38 | ಎದೆಹಾಲನ್ನು 7 ದಿನಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಬೇಕಾಗಿದ್ದರೆ, ತಾಯಿಯು ಹಾಲನ್ನು ಹೊರತೆಗೆದ ಮೇಲೆ, ಆದಷ್ಟು ಬೇಗ ಅದನ್ನು ಫ್ರೀಜ್ ಮಾಡಬೇಕು. |
04:49 | ಫ್ರಿಜ್ ನ ಫ್ರೀಜರ್ ನಲ್ಲಿ ಹೆಪ್ಪುಗಟ್ಟಿದ ಹಾಲು, 2 ವಾರಗಳವರೆಗೆ ಚೆನ್ನಾಗಿರುತ್ತದೆ. |
04:56 | ಪ್ರತ್ಯೇಕ ಫ್ರೀಜರ್ನಲ್ಲಿ ಸಂಗ್ರಹಿಸಿಟ್ಟ ಹಾಲು, 3 ರಿಂದ 6 ತಿಂಗಳವರೆಗೆ ಚೆನ್ನಾಗಿರುತ್ತದೆ. |
05:04 | ಮೊದಲೇ ಫ್ರೀಜ್ ಮಾಡಿದ ಎದೆಹಾಲನ್ನು, ಫ್ರಿಜ್ನ ಎಲ್ಲಕ್ಕಿಂತ ಕೆಳಗಿನ ಶೆಲ್ಫ್ ನಲ್ಲಿ ರಾತ್ರಿಯೆಲ್ಲ ಇರಿಸಿ ಡಿಫ್ರಾಸ್ಟ್ ಮಾಡಿದಾಗ, ಅದನ್ನು 24 ಗಂಟೆಗಳ ಒಳಗೆ ಬಳಸಬೇಕು. |
05:17 | ಮತ್ತು ಅದನ್ನು ಫ್ರಿಜ್ ನ ಹೊರಗೆ ಇರಿಸಿ ಡಿಫ್ರಾಸ್ಟ್ ಮಾಡಿದಾಗ, ಅದನ್ನು 2 ಗಂಟೆಗಳ ಒಳಗೆ ಬಳಸಬೇಕು. |
05:25 | ಹೀಗೆ ಸಂಗ್ರಹಿಸಿದ ಎದೆಹಾಲನ್ನು ಮಗುವಿಗಾಗಿ ಹೇಗೆ ಅಣಿಗೊಳಿಸುವುದು ಮತ್ತು ಅದನ್ನು ಮಗುವಿಗೆ ಹೇಗೆ ಕುಡಿಸುವುದು, |
05:32 | ಇವುಗಳ ಬಗ್ಗೆ ಬೇರೆ ಟ್ಯುಟೋರಿಯಲ್ ಗಳಲ್ಲಿ ನಾವು ವಿವರಿಸಿದ್ದೇವೆ. |
05:37 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀಮತಿ ನಯನಾ ಭಟ್. ಧನ್ಯವಾದಗಳು. |