Difference between revisions of "Health-and-Nutrition/C2/Cradle-Hold-for-Breastfeeding/Kannada"
From Script | Spoken-Tutorial
Sandhya.np14 (Talk | contribs) |
|||
Line 311: | Line 311: | ||
|- | |- | ||
|10:29 | |10:29 | ||
− | | ಧನ್ಯವಾದಗಳು. | + | | ಧ್ವನಿ, ಶ್ರೀಮತಿ ನಯನಾ ಭಟ್, ಧನ್ಯವಾದಗಳು. |
|} | |} |
Revision as of 10:16, 10 June 2019
00:01 | Cradle hold for Breastfeeding (ಸ್ತನ್ಯಪಾನಕ್ಕಾಗಿ ಕ್ರೇಡಲ್ ಹೋಲ್ಡ್) 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು - |
00:09 | ತಾಯಿಯು ಮಗುವಿಗೆ ಹಾಲುಣಿಸುವ ಆರಿಸಿಕೊಳ್ಳಬೇಕಾದ ಸರಿಯಾದ ವಿಧಾನ, |
00:15 | ಹಾಲುಣಿಸುವ ಮೊದಲು ತಾಯಿಯ ಪೂರ್ವ ಸಿದ್ಧತೆಗಳು, |
00:18 | 'ಕ್ರೇಡಲ್ ಹೋಲ್ಡ್' ಅನ್ನು ಮಾಡುವ ಬಗೆ ಇವುಗಳನ್ನು ಕಲಿಯುವೆವು. |
00:22 | ತಾಯಂದಿರು ವಿವಿಧ ರೀತಿಯಲ್ಲಿ ಶಿಶುವನ್ನು ಹಿಡಿದುಕೊಂಡು ಸ್ತನ್ಯಪಾನ ಮಾಡಿಸುತ್ತಾರೆ.
ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ ಹೇಳಿದಂತೆ, ತಾಯಿಯು ಮಗುವಿಗೆ ಹಾಲುಣಿಸುವ ಅತ್ಯುತ್ತಮ ವಿಧಾನದಲ್ಲಿ - |
00:39 | ತಾಯಿ, ಮಗು ಇಬ್ಬರೂ ಹಾಲುಣಿಸುವ ಅವಧಿಯಲ್ಲಿ ಆರಾಮವಾಗಿ ಇರುತ್ತಾರೆ. |
00:45 | ಮಗು, ತಾಯಿಯ ಸ್ತನಕ್ಕೆ ಸರಿಯಾಗಿ ಅಂಟಿಕೊಳ್ಳಲು (attach), |
00:50 | ಮತ್ತು ಸಾಕಷ್ಟು ಹಾಲನ್ನು ಪಡೆಯಲು ಸಾಧ್ಯವಾಗುತ್ತದೆ. |
00:54 | ಈಗ 'ಕ್ರೇಡಲ್ ಹೋಲ್ಡ್' ಎಂಬ ವಿಧಾನದ ಬಗ್ಗೆ ಕಲಿಯೋಣ. |
00:59 | ಮಗುವಿಗೆ ಹಾಲುಣಿಸುವ ಮೊದಲು, ತಾಯಿಯು ಸಾಬೂನು ಮತ್ತು ನೀರಿನಿಂದ ತನ್ನ ಕೈಗಳನ್ನು |
01:05 | ತೊಳೆದುಕೊಂಡು ಚೆನ್ನಾಗಿ ಒಣಗಿಸಿಕೊಳ್ಳಬೇಕು. |
01:10 | ನಂತರ, ಅವಳು ಒಂದು ಲೋಟ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. |
01:15 | ಹಾಲುಣಿಸುವ ತಾಯಂದಿರು, ದಿನದಲ್ಲಿ ಸರಾಸರಿ 750 ರಿಂದ 850 ಮಿಲಿಲೀಟರ್ ಹಾಲನ್ನು ಕೊಡುತ್ತಾರೆ. |
01:22 | ಆದ್ದರಿಂದ, ಅವರು ತಮ್ಮ ದೈನಂದಿನ ನೀರಿನ ಸೇವನೆಯನ್ನು ಹೆಚ್ಚಿಸುವುದು ಅವಶ್ಯವಾಗಿದೆ. |
01:27 | ತಾಯಿಯ ಸ್ಥಿತಿಯ ಬಗ್ಗೆ (position) ಈಗ ನಾವು ಚರ್ಚಿಸೋಣ. |
01:31 | ತಾಯಿಯು ನೆಲದ ಮೇಲೆ ಅಥವಾ ಹಾಸಿಗೆಯ ಮೇಲೆ, ಸುಖಾಸನದಲ್ಲಿ (cross legged position) |
01:36 | ಅಥವಾ ಕುರ್ಚಿಯಲ್ಲಿ ನೆಲದ ಮೇಲೆ ಪಾದಗಳನ್ನು ಊರಿ ಕುಳಿತುಕೊಳ್ಳಬೇಕು. |
01:41 | ಕುರ್ಚಿ ತುಂಬಾ ಎತ್ತರವಿದ್ದು ಅವಳ ಪಾದಗಳು ನೆಲಕ್ಕೆ ತಾಗದಿದ್ದರೆ, ಆಗ- |
01:47 | ಆಕೆಯು ತನ್ನ ಪಾದಗಳನ್ನು ಸಣ್ಣ ಸ್ಟೂಲ್ ಅಥವಾ ನೆಲದ ಮೇಲಿರಿಸಿದ ದಿಂಬುಗಳ ಮೇಲೆ ಇಡಬಹುದು. |
01:53 | ಕುಳಿತಿರುವಾಗ ಬೆನ್ನು ನೋವನ್ನು ತಪ್ಪಿಸಲು- ಅವಳ ಬೆನ್ನು ನೇರವಾಗಿದ್ದು |
02:00 | ಭುಜಗಳು ಏರಿಸಿದ ಅಥವಾ ಇಳಿಸಿದ ಸ್ಥಿತಿಯಲ್ಲಿರದೆ, ವಿರಾಮದಲ್ಲಿ ಇರುವಂತೆ ನೋಡಿಕೊಳ್ಳಬೇಕು. |
02:05 | ಈ ವಿರಾಮದ ಸ್ಥಿತಿಯು ಹಾಲುಣಿಸುವ ಅವಧಿಯ ಉದ್ದಕ್ಕೂ ಹಾಗೆಯೇ ಇರಬೇಕು. |
02:12 | ಈಗ, ತಾಯಿಯು ಮಗುವಿಗೆ ಹಾಲುಣಿಸುವ ಸ್ತನವನ್ನು ಮಾತ್ರ ಹೊರಗೆ ತೆಗೆಯಬೇಕು. |
02:18 | ಅವಳು ಸ್ತನದ ಮೇಲೆ ಬ್ರಾ ಅಥವಾ ರವಿಕೆಯ ಒತ್ತಡವು ಬಾರದಂತೆ ನೋಡಿಕೊಳ್ಳಬೇಕು. |
02:25 | ಅವಳು ಆರಾಮವಾಗಿ ಕುಳಿತ ಮೇಲೆ ಮಗುವನ್ನು ಅವಳ ಬಳಿಗೆ ತರಬೇಕು. |
02:29 | ತಾಯಿಯು ಹಾಲುಣಿಸುವ ಸ್ತನದ ಬದಿಯ ತೋಳಿನಿಂದ, ಮಗುವನ್ನು ಹಿಡಿದಿರಬೇಕು. |
02:37 | ಮಗುವಿನ ತಲೆಯನ್ನು ಅದೇ ಕೈಯ ಮೊಣಕೈನ ಒಳಭಾಗದಲ್ಲಿ ಆರಾಮವಾಗಿ ಇರಿಸಬೇಕು. |
02:44 | ಅದೇ ತೋಳಿನಿಂದ, ಶಿಶುವಿನ ತಲೆ, ಕುತ್ತಿಗೆ ಮತ್ತು ದೇಹವನ್ನು ಹಿಡಿದುಕೊಂಡಿರಬೇಕು. |
02:51 | ಈ ಚಿತ್ರದಲ್ಲಿ, ತಾಯಿಯು ಮಗುವಿಗೆ ತನ್ನ ಬಲಗಡೆಯ ಸ್ತನದಿಂದ ಹಾಲುಣಿಸುವಳು. |
02:56 | ಆದ್ದರಿಂದ, ಮಗುವಿನ ಶರೀರವನ್ನು ಹಿಡಿದುಕೊಳ್ಳಲು ಅವಳು ಬಲತೋಳನ್ನು ಬಳಸುತ್ತಿದ್ದಾಳೆ ಮತ್ತು |
03:04 | ಮಗುವಿನ ತಲೆಯು ಬಲಗಡೆಯ ಮೊಣಕೈನ ಒಳಭಾಗದಲ್ಲಿ ಇರಿಸಲ್ಪಟ್ಟಿದೆ. |
03:10 | ಮಗುವನ್ನು ಎತ್ತಿಕೊಳ್ಳಲು ಸಹಾಯವು ಬೇಕಾಗಿದ್ದರೆ, ಅವಳು ಮಗುವಿನ ಕೆಳಗೆ, ತನ್ನ ತೊಡೆಯ ಮೇಲೆ ದಿಂಬನ್ನು ಇಡಬಹುದು. |
03:19 | ನೆನಪಿಡಿ, ತಾಯಿಯು ತನ್ನ ಬೆನ್ನನ್ನು ಬಗ್ಗಿಸಿ ಸ್ತನವನ್ನು ಮಗುವಿನ ಹತ್ತಿರ ತರಬಾರದು. |
03:25 | ಇದರಿಂದ ಅವಳಿಗೆ ತೊಂದರೆಯಾಗುತ್ತದೆ ಮತ್ತು ಬೆನ್ನು ನೋವು ಬರುತ್ತದೆ. |
03:30 | ಅವಳು ಬೆನ್ನನ್ನು ನೇರವಾಗಿಟ್ಟು, ಮಗುವನ್ನು ತನ್ನ ಎದೆಗೆ ತಲುಪುವಂತೆ ಎತ್ತಿಕೊಳ್ಳಬೇಕು. |
03:36 | ಈಗ, ಮಗುವನ್ನು ಸರಿಯಾಗಿ ಹೇಗೆ ಇಡುವುದು ಎಂದು ತಿಳಿಯೋಣ. |
03:42 | ಮಗುವಿನ ಹೊಟ್ಟೆಯು, ತಾಯಿಯ ದೇಹಕ್ಕೆ ಮೃದುವಾಗಿ ಒತ್ತಿರಬೇಕು. |
03:47 | ಅವರ ದೇಹಗಳ ನಡುವಿನ ದೂರವು ಕಡಿಮೆಯಾದರೆ, ಸ್ತನವನ್ನು ತಲುಪುವ ಮಗುವಿನ ಪ್ರಯತ್ನವೂ ಕಡಿಮೆ ಆಗುತ್ತದೆ. |
03:54 | ಮತ್ತು, ಮಗುವಿಗೆ ಸರಿಯಾಗಿ ಜೋಡಿಸಿಕೊಳ್ಳಲು ಸುಲಭವಾಗುತ್ತದೆ. |
04:00 | ಮಗುವನ್ನು ಹಿಡಿದುಕೊಳ್ಳುವ ವಿಧಾನವು ಎರಡನೇ ಮುಖ್ಯ ಅಂಶವಾಗಿದೆ. |
04:08 | ನಾವು ಆಹಾರವನ್ನು ಸೇವಿಸುವಾಗ ನಮ್ಮ ತಲೆ, ಕುತ್ತಿಗೆ ಮತ್ತು ದೇಹವು ಯಾವಾಗಲೂ ಒಂದೇ ದಿಕ್ಕಿನಲ್ಲಿ ಇರುತ್ತದೆ. |
04:16 | ಆದರೆ ಸ್ತನ್ಯಪಾನ ಮಾಡಿಸುವಾಗ, ಕೆಲವು ಸಲ ತಾಯಂದಿರು ಮಗುವಿನ ತಲೆಯನ್ನು ಪಕ್ಕಕ್ಕೆ ಹೊರಳಿಸಿರುತ್ತಾರೆ. |
04:23 | ಹಾಲುಣಿಸುವಾಗ ಇದು ಮಗುವಿಗೆ ಅನಾನುಕೂಲವನ್ನು ಮಾಡುತ್ತದೆ. |
04:28 | ಸ್ತನ್ಯಪಾನ ಮಾಡಿಸುವಾಗ, ಮಗುವಿನ ತಲೆ, ಕುತ್ತಿಗೆ ಮತ್ತು ದೇಹವು ಒಂದೇ ಸಾಲಿನಲ್ಲಿರಬೇಕು. |
04:35 | ಇದರಿಂದ ಮಗುವಿಗೆ ಹಾಲನ್ನು ನುಂಗಲು ಸುಲಭವಾಗುತ್ತದೆ. |
04:41 | ಮಗುವನ್ನು ಹೊಂದಿಸುವ ಬಗ್ಗೆ, ಈಗ ಮೂರನೆಯ ಅಂಶಕ್ಕೆ ಬರುತ್ತೇವೆ. |
04:46 | ತಾಯಿಯು ಮಗುವಿನ ಪೂರ್ತಿ ಶರೀರವನ್ನು ಹಿಡಿದುಕೊಳ್ಳಬೇಕು. |
04:51 | ಇಲ್ಲದಿದ್ದರೆ, ಮಗುವು ಸ್ತನಕ್ಕೆ ಸರಿಯಾಗಿ ಜೋಡಿಸಿಕೊಳ್ಳಲು (attach) ಪ್ರಯತ್ನಿಸಬೇಕಾಗುವುದು. |
04:58 | ನಂತರ, ಮಗುವಿನ ಮೂಗು ಮತ್ತು ಗದ್ದಗಳ ಸ್ಥಾನವನ್ನು ನೋಡೋಣ. |
05:03 | ಶಿಶುವಿನ ಮೂಗು ಮತ್ತು ಮೊಲೆತೊಟ್ಟು ಒಂದೇ ಸಾಲಿನಲ್ಲಿರಬೇಕು. |
05:07 | ಮತ್ತು, ಗದ್ದವು ಮುಂದೆ ಬಂದಿದ್ದು ಸ್ತನಕ್ಕೆ ಅತೀ ಹತ್ತಿರವಾಗಿರಬೇಕು. |
05:13 | ಇದರಿಂದ ಲ್ಯಾಚಿಂಗ್ ನಲ್ಲಿ, ಶಿಶು ಅರಿಯೋಲಾದ ಕೆಳಗಿನ ಹೆಚ್ಚು ಭಾಗವನ್ನು ಒಳಗೆ ತೆಗೆದುಕೊಳ್ಳುತ್ತದೆ. |
05:19 | ಹೀಗಾಗಿ, ಹೆಚ್ಚು ಹಾಲನ್ನು ಕುಡಿಯಲು ಕೆಳದವಡೆಯನ್ನು ಬಳಸುತ್ತದೆ. |
05:26 | ಗಮನಿಸಿ: ಅರಿಯೋಲಾ, ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗವಾಗಿದೆ. |
05:32 | ಈಗ ಮಗುವನ್ನು ಸರಿಯಾಗಿ ಹಿಡಿದಿರುವುದರಿಂದ, |
05:35 | ಸ್ತನವನ್ನು ಹಿಡಿದುಕೊಳ್ಳುವ ಬಗೆಯನ್ನು ಕಲಿಯೋಣ. |
05:39 | ತಾಯಿಯು ತನ್ನ ಖಾಲಿ ಇರುವ ಕೈ ಬೆರಳುಗಳನ್ನು ಬಳಸಿ, U ಆಕಾರದಲ್ಲಿ ಮೇಲಿನಿಂದ ತನ್ನ ಸ್ತನವನ್ನು ಹಿಡಿಯಬೇಕು. |
05:48 | ಈ ಚಿತ್ರದಲ್ಲಿ, ತಾಯಿಯು ತನ್ನ ಬಲ ಸ್ತನವನ್ನು ಹಿಡಿಯಲು ಎಡಗೈಯನ್ನು ಬಳಸುತ್ತಾಳೆ. |
05:55 | ಹೆಬ್ಬೆರಳು ಮತ್ತು ಬೆರಳುಗಳ ಸರಿಯಾದ ಸ್ಥಾನವನ್ನು ತಿಳಿಯಲು, ತಾಯಿಯ ಬಲ ಮೊಲೆತೊಟ್ಟನ್ನು ಗಡಿಯಾರದ ಕೇಂದ್ರ ಎಂದು ಊಹಿಸಿ. |
06:04 | ತಾಯಿಯು ಎಡ ಹೆಬ್ಬೆರಳನ್ನು, ಈ ಗಡಿಯಾರದಲ್ಲಿ ಗಂಟೆ 3 ಆದ ಹಾಗೆ ಇಡಬೇಕು. |
06:10 | ಅವಳ ಎಡ ತೋರುಬೆರಳು ಮತ್ತು ಮಧ್ಯದ ಬೆರಳನ್ನು ಗಂಟೆ 9 ಆದಾಗಿನ ಹಾಗೆ ಇಡಬೇಕು. |
06:18 | ಸ್ತನವನ್ನು ಹಿಡಿದಿರುವ ತಾಯಿಯ ಬೆರಳುಗಳು, ಮಗುವಿನ ತುಟಿಗಳಿರುವ ದಿಕ್ಕಿನಲ್ಲಿಯೇ ಇರಬೇಕು. |
06:25 | ಯಾಕೆ?
ಒಂದು ಉದಾಹರಣೆಯನ್ನು ಬಳಸಿ, ಇದನ್ನು ತಿಳಿದುಕೊಳ್ಳೋಣ. |
06:30 | ವಡಾ-ಪಾವ್ ಅಥವಾ ಬರ್ಗರ್ ತಿನ್ನುವಾಗ, ನಮ್ಮ ತುಟಿಗಳು ಅಡ್ಡಲಾಗಿ ತೆರೆದಿವೆ. |
06:35 | ದೊಡ್ಡ ತುತ್ತು ತೆಗೆದುಕೊಳ್ಳಲು, ವಡಾ-ಪಾವ್ ಅಥವಾ ಬರ್ಗರ್ ಅನ್ನು ಅಡ್ಡಲಾಗಿ ಹಿಡಿಯುತ್ತೇವೆ. |
06:40 | ಇಲ್ಲಿ, ಹೆಬ್ಬೆರಳು ಮತ್ತು ಬೆರಳುಗಳನ್ನು ತುಟಿಗಳ ದಿಕ್ಕಿನಲ್ಲಿ ಇಡುತ್ತೇವೆ. |
06:46 | ವಡಾ-ಪಾವ್ ಅಥವಾ ಬರ್ಗರ್ ಅನ್ನು ನೆಟ್ಟಗೆ ಹಿಡಿದಿದ್ದರೆ, ದೊಡ್ಡ ತುತ್ತನ್ನು ಕಚ್ಚಲು ಸಾಧ್ಯವಾಗುವುದಿಲ್ಲ. |
06:53 | ಹಾಗೆಯೇ, ಮಗುವಿನ ತುಟಿಗಳ ದಿಕ್ಕನ್ನು ಗಮನಿಸಿ. ತುಟಿಗಳು ಇಲ್ಲಿ ಲಂಬವಾಗಿವೆ. |
07:00 | ಆದ್ದರಿಂದ, ಬೆರಳುಗಳು ಮತ್ತು ಹೆಬ್ಬೆರಳನ್ನು ಕೂಡ ಸ್ತನದ ಮೇಲೆ ಲಂಬವಾಗಿ ಇಡಬೇಕು. |
07:06 | ಇದರಿಂದ, ಮಗುವಿಗೆ ಬಾಯಿಯಲ್ಲಿ ಕೆಳಗಿನ ಅರಿಯೋಲಾದ ದೊಡ್ಡ ಭಾಗವನ್ನು ತೆಗೆದುಕೊಳ್ಳಲು ಸಹಾಯವಾಗುತ್ತದೆ. |
07:13 | ಅಲ್ಲದೆ, ತಾಯಿಯ ಹೆಬ್ಬೆರಳು ಮತ್ತು ಬೆರಳುಗಳು ಯಾವಾಗಲೂ ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರದಲ್ಲಿ ಇರಬೇಕು. |
07:23 | ವಡಾ-ಪಾವ್ ಅಥವಾ ಬರ್ಗರ್ ತಿನ್ನುವಾಗ, ಅದನ್ನು ಬಹಳ ಹತ್ತಿರದಲ್ಲಿ ಹಿಡಿದುಕೊಂಡರೆ, ನಮ್ಮ ಬೆರಳುಗಳು ದೊಡ್ಡ ತುತ್ತನ್ನು ಕಚ್ಚುವಾಗ ಬಾಯಿಗೆ ಅಡ್ಡಬರುತ್ತವೆ. |
07:34 | ತುಂಬಾ ದೂರದಲ್ಲಿ ಹಿಡಿದರೆ, ಅದು ನಮ್ಮ ಬಾಯಿಯಲ್ಲಿ ಸಾಲುವ ಆಕಾರದಲ್ಲಿ ಇರುವುದಿಲ್ಲ. |
07:41 | ಹೀಗಾಗಿ, ದೊಡ್ಡ ತುತ್ತನ್ನು ಕಚ್ಚಲು, ಅದನ್ನು ಸರಿಯಾದ ದೂರದಲ್ಲಿ ಹಿಡಿಯುತ್ತೇವೆ. |
07:47 | ಈ ಚಿತ್ರದಲ್ಲಿ ತೋರಿಸಿರುವಂತೆ, ಮಗುವಿಗೆ ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರವು ಸರಿಯಾಗಿದೆ. |
07:55 | ಈ ಅಂತರವು, ಕೆಳಗಿನ ಅಂಶಗಳನ್ನು ಖಚಿತಪಡಿಸುತ್ತದೆ-
ಮಗುವು ತನ್ನ ಬಾಯಿಯಲ್ಲಿ ಅರಿಯೋಲಾದ ದೊಡ್ಡ ಭಾಗವನ್ನು ಕಚ್ಚಿದಾಗ ತಾಯಿಯ ಬೆರಳುಗಳು ಅಡ್ಡಬರುವುದಿಲ್ಲ, |
08:05 | ತಾಯಿಯು ಮೊಲೆತೊಟ್ಟನ್ನು ಮಾತ್ರ ಒತ್ತುವುದಿಲ್ಲ. ಇದರಿಂದ ತುಂಬಾ ಕಡಿಮೆ ಹಾಲು ಸಿಗುತ್ತದೆ. |
08:11 | ಹೆಚ್ಚು ಹಾಲು ಬರಲು, ಅರಿಯೋಲಾದ ಕೆಳಗಿನ ಹಾಲಿನ ದೊಡ್ಡ ನಾಳಗಳನ್ನು ಒತ್ತುತ್ತಾಳೆ. |
08:17 | ಮತ್ತು, ಮಗು ಸರಿಯಾಗಿ ಅಂಟಿಕೊಳ್ಳುವಂತೆ ಸ್ತನವನ್ನು ಹಿಡಿಯಲಾಗಿದೆ. |
08:23 | ನೆನಪಿಡಿ- ಮಗುವಿನ ಗದ್ದ ಇರುವ ಸ್ತನದ ಬದಿಯಲ್ಲಿ, ತಾಯಿಯ ಹೆಬ್ಬೆರಳು |
08:30 | ಮತ್ತು ಮಗುವಿನ ಮೂಗು ಇರುವ ಸ್ತನದ ಬದಿಯಲ್ಲಿ 2 ಬೆರಳುಗಳು ಇರಬೇಕು. |
08:36 | ವಡಾ- ಪಾವ್ ಅಥವಾ ಬರ್ಗರ್ ನ ಉದಾಹರಣೆಗೆ ಹಿಂತಿರುಗಿ. |
08:41 | ವಡಾ-ಪಾವ್ ಅಥವಾ ಬರ್ಗರ್ ಅನ್ನು ಸರಿಯಾಗಿ ಹಿಡಿದ ನಂತರ, ದೊಡ್ಡದಾಗಿ ಕಚ್ಚಲು ಅದನ್ನು ಅದುಮಿ ಹಿಡಿಯುತ್ತೇವೆ. |
08:48 | ಹೀಗೆಯೇ, ತಾಯಿಯು ಮೇಲಿನಿಂದ U ಆಕಾರದಲ್ಲಿ, ಸ್ತನವನ್ನು ಮೆತ್ತಗೆ ಒತ್ತಿ ಹಿಡಿಯಬೇಕು. |
08:54 | ಇದು, ಮಗುವಿಗೆ ಕೆಳಗಿನ ಅರಿಯೋಲಾದ ದೊಡ್ಡ ಭಾಗವನ್ನು ಬಾಯಿಯಲ್ಲಿ ಹಿಡಿಯಲು ಸಹಾಯ ಮಾಡುತ್ತದೆ. |
09:01 | ನೆನಪಿಡಿ, ತಾಯಿಯು ಸ್ತನವನ್ನು ತಲೆಕೆಳಗಾದ V ಆಕಾರದಲ್ಲಿ ಅದುಮಬಾರದು. |
09:07 | V ಆಕಾರದ ಒತ್ತುವಿಕೆಯು ಸ್ತನವನ್ನು ಹಿಸುಕಿ, ನಿಪ್ಪಲ್ ಫೀಡಿಂಗ್ ಗೆ ಕಾರಣವಾಗುತ್ತದೆ. |
09:14 | ಅಲ್ಲದೆ, ಹೆಬ್ಬೆರಳು ಮತ್ತು ಬೆರಳುಗಳಿಂದ ಸ್ತನವನ್ನು ಸಮನಾಗಿ ಒತ್ತವುದನ್ನು ಖಚಿತಪಡಿಸಿಕೊಳ್ಳಿ. |
09:21 | ಇಲ್ಲದಿದ್ದರೆ, ಮೊಲೆತೊಟ್ಟು ಬಲ ಅಥವಾ ಎಡಭಾಗಕ್ಕೆ ಸರಿಯುತ್ತದೆ |
09:27 | ಮತ್ತು ಸ್ತನಕ್ಕೆ ಸರಿಯಾಗಿ ಜೋಡಿಸಿಕೊಳ್ಳಲು ಮಗುವಿಗೆ ಸಾಧ್ಯವಾಗುವುದಿಲ್ಲ. |
09:32 | ನೆನಪಿಡಿ, ಮಗುವಿನ ಕಡೆಗೆ ಸ್ತನವನ್ನು ಬದಿಯಿಂದ ತಳ್ಳುವ ಮೂಲಕ ಅದನ್ನು ಮಗುವಿನೆಡೆಗೆ ತರಬೇಡಿ. |
09:39 | ಯಾವಾಗಲೂ ಮಗುವನ್ನು ಸ್ತನದ ಕಡೆಗೆ ತನ್ನಿ. |
09:43 | ಈಗ, ಮಗು 'ಕ್ರೇಡಲ್ ಹೋಲ್ಡ್' ನಲ್ಲಿದೆ ಮತ್ತು ಸ್ತನ್ಯಪಾನಕ್ಕಾಗಿ ಜೋಡಿಸಿಕೊಳ್ಳಲು ಸಿದ್ಧವಾಗಿದೆ. |
09:49 | ಸ್ತನಕ್ಕೆ ಮಗುವಿನ ಸರಿಯಾದ ಜೋಡಣೆಯ ಬಗ್ಗೆ, ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ. |
09:58 | ಮಗು ಸ್ತನಕ್ಕೆ ಸರಿಯಾಗಿ ಅಂಟಿಕೊಂಡ ಮೇಲೆ ಮತ್ತು ಸ್ತನವು ತುಂಬಾ ಭಾರವಾಗಿರದಿದ್ದರೆ ಆಗ - |
10:05 | ತಾಯಿಯು ಸ್ತನವನ್ನು ಕೈಯಿಂದ ಬಿಡಬೇಕು. |
10:09 | ಮತ್ತು ಆ ಕೈಯನ್ನು ಮಗುವನ್ನು ಹಿಡಿಯಲು ಕೆಳಗೆ ತರಬೇಕು. |
10:14 | ಈ ಸ್ಥಾನದಲ್ಲಿ, ತಾಯಿಯು ತನ್ನ ಎರಡೂ ತೋಳುಗಳನ್ನು ಶರೀರದ ಹತ್ತಿರಕ್ಕೆ ತರಬೇಕು. |
10:21 | ಹಾಲುಣಿಸುವ ಸಮಯದಲ್ಲಿ ಇದು ಅವಳನ್ನು ಆರಾಮವಾಗಿಡುತ್ತದೆ. |
10:26 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
10:29 | ಧ್ವನಿ, ಶ್ರೀಮತಿ ನಯನಾ ಭಟ್, ಧನ್ಯವಾದಗಳು. |