|
|
Line 1: |
Line 1: |
− | {|border=1
| |
− | |<center>Time</center>
| |
− | |<center>Narration</center>
| |
| | | |
− | |-
| |
− | |00:01
| |
− | | '''Cradle hold for Breastfeeding''' (ಸ್ತನ್ಯಪಾನಕ್ಕಾಗಿ ಕ್ರೇಡಲ್ ಹೋಲ್ಡ್) ಎಂಬ ಈ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
| |
− | |-
| |
− | |00:06
| |
− | | ಈ ಟ್ಯುಟೋರಿಯಲ್ ನಲ್ಲಿ, ನಾವು -
| |
− | |-
| |
− | |00:09
| |
− | |ತಾಯಿಯು ಮಗುವಿಗೆ ಹಾಲುಣಿಸುವಾಗ ಆರಿಸಿಕೊಳ್ಳಬೇಕಾದ ಸರಿಯಾದ ವಿಧಾನ,
| |
− | |-
| |
− | |00:15
| |
− | | ಹಾಲುಣಿಸುವ ಮೊದಲು ತಾಯಿಯ ಪೂರ್ವ ಸಿದ್ಧತೆಗಳು ಮತ್ತು
| |
− | |-
| |
− | |00:18
| |
− | | 'ಕ್ರೇಡಲ್ ಹೋಲ್ಡ್' ಅನ್ನು ಹೇಗೆ ಮಾಡುವುದು ಇವುಗಳ ಬಗ್ಗೆ ಕಲಿಯುತ್ತೇವೆ.
| |
− | |-
| |
− | |00:22
| |
− | | ನಾವು ಈಗ ಆರಂಭಿಸೋಣ.
| |
− | ಪ್ರಪಂಚದಾದ್ಯಂತ, ತಾಯಂದಿರು ವಿವಿಧ ರೀತಿಯಲ್ಲಿ ತಮ್ಮ ಶಿಶುವನ್ನು ಹಿಡಿದುಕೊಂಡು ಸ್ತನ್ಯಪಾನ ಮಾಡಿಸುತ್ತಾರೆ.
| |
− |
| |
− | ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ ಚರ್ಚಿಸಿದಂತೆ, ತಾಯಿಯು ತನ್ನ ಮಗುವಿಗೆ ಹಾಲುಣಿಸುವ ಅತ್ಯುತ್ತಮ ವಿಧಾನದಲ್ಲಿ -
| |
− | |-
| |
− | |00:39
| |
− | | ತಾಯಿ ಮತ್ತು ಮಗು ಇಬ್ಬರೂ ಹಾಲುಣಿಸುವ ಸಂಪೂರ್ಣ ಅವಧಿಯಲ್ಲಿ ಆರಾಮವಾಗಿ ಇರುತ್ತಾರೆ.
| |
− | |-
| |
− | |00:45
| |
− | |ಮಗು, ತಾಯಿಯ ಸ್ತನಕ್ಕೆ ಸರಿಯಾಗಿ ಅಂಟಿಕೊಳ್ಳಲು (attach)
| |
− | |-
| |
− | |00:50
| |
− | | ಮತ್ತು ಸಾಕಷ್ಟು ಹಾಲನ್ನು ಪಡೆಯಲು ಸಾಧ್ಯವಾಗಿರುತ್ತದೆ.
| |
− | |-
| |
− | |00:54
| |
− | |'ಕ್ರೇಡಲ್ ಹೋಲ್ಡ್' ಎಂಬ ವಿಧಾನದ ಬಗ್ಗೆ ನಾವು ಕಲಿಯೋಣ.
| |
− | |-
| |
− | |00:59
| |
− | | ಮಗುವಿಗೆ ಹಾಲುಣಿಸುವ ಮೊದಲು, ತಾಯಿಯು ಸಾಬೂನು ಮತ್ತು ನೀರಿನಿಂದ ತನ್ನ ಕೈಗಳನ್ನು
| |
− | |-
| |
− | |01:05
| |
− | | ತೊಳೆದುಕೊಂಡು ಚೆನ್ನಾಗಿ ಒಣಗಿಸಿಕೊಳ್ಳಬೇಕು.
| |
− | |-
| |
− | |01:10
| |
− | | ನಂತರ, ಅವಳು ಒಂದು ಲೋಟ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು.
| |
− | |-
| |
− | |01:15
| |
− | |ಹಾಲುಣಿಸುವ ತಾಯಂದಿರು, ದಿನದಲ್ಲಿ ಸರಾಸರಿ 750 ರಿಂದ 850 ಮಿಲಿಲೀಟರ್ ಹಾಲನ್ನು ಉತ್ಪಾದಿಸುತ್ತಾರೆ.
| |
− | |-
| |
− | |01:22
| |
− | |ಆದ್ದರಿಂದ, ಅವರು ತಮ್ಮ ದೈನಂದಿನ ನೀರಿನ ಸೇವನೆಯನ್ನು ಹೆಚ್ಚಿಸುವುದು ಅವಶ್ಯವಾಗಿದೆ.
| |
− | |-
| |
− | |01:27
| |
− | | ನಂತರ, ನಾವು ತಾಯಿಯ ಸ್ಥಿತಿ ಯ ಬಗ್ಗೆ (position) ಚರ್ಚಿಸೋಣ.
| |
− | |-
| |
− | |01:31
| |
− | | ತಾಯಿಯು ನೆಲದ ಮೇಲೆ ಅಥವಾ ಹಾಸಿಗೆಯ ಮೇಲೆ, ಸುಖಾಸನದಲ್ಲಿ (cross legged position)
| |
− | |-
| |
− | |01:36
| |
− | | ಅಥವಾ, ಕುರ್ಚಿಯಲ್ಲಿ ನೆಲದ ಮೇಲೆ ತನ್ನ ಪಾದಗಳನ್ನು ಊರಿಕೊಂಡು ಕುಳಿತುಕೊಳ್ಳಬೇಕು.
| |
− | |-
| |
− | |01:41
| |
− | |ಕುರ್ಚಿ ತುಂಬಾ ಎತ್ತರವಾಗಿದ್ದು ಅವಳ ಪಾದಗಳು ನೆಲಕ್ಕೆ ತಲುಪದಿದ್ದರೆ, ಆಗ-
| |
− | |-
| |
− | |01:47
| |
− | | ಆಕೆಯು ತನ್ನ ಪಾದಗಳನ್ನು ಸಣ್ಣ ಸ್ಟೂಲ್ ಮೇಲೆ ಅಥವಾ ನೆಲದ ಮೇಲೆ ಇರಿಸಿದ ದಿಂಬುಗಳ ಮೇಲೆ ಇಟ್ಟುಕೊಳ್ಳಬಹುದು.
| |
− | |-
| |
− | |01:53
| |
− | | ಕುಳಿತಿರುವಾಗ ಬೆನ್ನು ನೋವನ್ನು ತಪ್ಪಿಸಲು- ಅವಳ ಬೆನ್ನು ನೇರವಾಗಿದ್ದು
| |
− | |-
| |
− | |02:00
| |
− | | ಭುಜಗಳು ಏರಿಸಿದ ಅಥವಾ ಇಳಿಸಿದ ಸ್ಥಿತಿಯಲ್ಲಿರದೆ, ವಿರಾಮದಲ್ಲಿ ಇರುವುದನ್ನು ಅವಳು ಖಚಿತಪಡಿಸಿಕೊಳ್ಳಬೇಕು.
| |
− | |-
| |
− | |02:05
| |
− | | ಈ ವಿರಾಮದ ಸ್ಥಿತಿಯು ಹಾಲುಣಿಸುವ ಅವಧಿಯ ಉದ್ದಕ್ಕೂ ಹಾಗೆಯೇ ಇರಬೇಕು.
| |
− | |-
| |
− | |02:12
| |
− | |ಈಗ, ತಾಯಿಯು ಮಗುವಿಗೆ ಹಾಲುಣಿಸುವ ಸ್ತನವನ್ನು ಮಾತ್ರ ಹೊರಗೆ ತೆಗೆಯಬೇಕು.
| |
− | |-
| |
− | |02:18
| |
− | | ಅವಳು ಸ್ತನದ ಮೇಲೆ ತನ್ನ ಬ್ರಾ ಅಥವಾ ರವಿಕೆಯ ಒತ್ತಡವು ಬಾರದಂತೆ ನೋಡಿಕೊಳ್ಳಬೇಕು.
| |
− | |-
| |
− | |02:25
| |
− | | ತಾಯಿಯು ಆರಾಮವಾಗಿ ಕುಳಿತುಕೊಂಡ ನಂತರ, ಮಗುವನ್ನು ಅವಳ ಬಳಿಗೆ ತರಬೇಕು.
| |
− | |-
| |
− | |02:29
| |
− | | ತಾಯಿಯು ಹಾಲುಣಿಸುವ ಸ್ತನದ ಬದಿಯ ತೋಳಿನಿಂದ, ತನ್ನ ಮಗುವನ್ನು ಹಿಡಿದಿರಬೇಕು.
| |
− | |-
| |
− | |02:37
| |
− | |ಮಗುವಿನ ತಲೆಯನ್ನು ಅದೇ ಕೈಯ ಮೊಣಕೈನ ಒಳಭಾಗದಲ್ಲಿ ಆರಾಮವಾಗಿ ಇರಿಸಬೇಕು.
| |
− | |-
| |
− | |02:44
| |
− | | ಅದೇ ತೋಳಿನಿಂದ, ತಾಯಿಯು ತನ್ನ ಶಿಶುವಿನ ತಲೆ, ಕುತ್ತಿಗೆ ಮತ್ತು ದೇಹವನ್ನು ಹಿಡಿದುಕೊಂಡಿರಬೇಕು.
| |
− | |-
| |
− | |02:51
| |
− | | ಈ ಚಿತ್ರದಲ್ಲಿ, ತಾಯಿಯು ಮಗುವಿಗೆ ತನ್ನ ಬಲಗಡೆಯ ಸ್ತನದಿಂದ ಹಾಲುಣಿಸುವಳು.
| |
− | |-
| |
− | |02:56
| |
− | |ಆದ್ದರಿಂದ, ಮಗುವಿನ ಶರೀರವನ್ನು ಹಿಡಿದುಕೊಳ್ಳಲು ಅವಳು ತನ್ನ ಬಲತೋಳನ್ನು ಬಳಸುತ್ತಿದ್ದಾಳೆ ಮತ್ತು
| |
− | |-
| |
− | |03:04
| |
− | |ಮಗುವಿನ ತಲೆಯು ಬಲಗಡೆಯ ಮೊಣಕೈನ ಒಳಭಾಗದಲ್ಲಿ ಆರಾಮವಾಗಿ ಇರಿಸಲ್ಪಟ್ಟಿದೆ.
| |
− | |-
| |
− | |03:10
| |
− | |ಮಗುವನ್ನು ಎತ್ತಿಕೊಳ್ಳಲು ತಾಯಿಗೆ ಸಹಾಯವು ಬೇಕಾಗಿದ್ದರೆ, ಅವಳು ಮಗುವಿನ ಕೆಳಗೆ, ತನ್ನ ತೊಡೆಯ ಮೇಲೆ ಒಂದು ದಿಂಬನ್ನು ಇಟ್ಟುಕೊಳ್ಳಬಹುದು.
| |
− | |-
| |
− | |03:19
| |
− | | ನೆನಪಿಡಿ, ತಾಯಿಯು ಯಾವಾಗಲೂ ತನ್ನ ಬೆನ್ನನ್ನು ಬಗ್ಗಿಸಿ ಸ್ತನವನ್ನು ಮಗುವಿನ ಹತ್ತಿರ ತರಬಾರದು.
| |
− | |-
| |
− | |03:25
| |
− | | ಇದರಿಂದ ಅವಳಿಗೆ ತೊಂದರೆಯಾಗುತ್ತದೆ ಮತ್ತು ಬೆನ್ನು ನೋವು ಬರುತ್ತದೆ.
| |
− | |-
| |
− | |03:30
| |
− | | ಅವಳು ಯಾವಾಗಲೂ ಬೆನ್ನನ್ನು ನೇರವಾಗಿ ಇಟ್ಟುಕೊಳ್ಳಬೇಕು ಮತ್ತು ತನ್ನ ಎದೆಗೆ ತಲುಪುವಂತೆ ಮಗುವನ್ನು ಎತ್ತಿಕೊಳ್ಳಬೇಕು.
| |
− | |-
| |
− | |03:36
| |
− | |ನಂತರ, ಮಗುವನ್ನು ಸರಿಯಾಗಿ ಹೇಗೆ ಇರಿಸುವುದು ಎಂದು ನಾವು ಕಲಿಯೋಣ.
| |
− | |-
| |
− | |03:42
| |
− | | ಮಗುವಿನ ಹೊಟ್ಟೆಯು, ತಾಯಿಯ ದೇಹಕ್ಕೆ ಮೃದುವಾಗಿ ಒತ್ತಿರಬೇಕು.
| |
− | |-
| |
− | |03:47
| |
− | |ಅವರಿಬ್ಬರ ದೇಹಗಳ ನಡುವಿನ ದೂರವು ಕಡಿಮೆಯಾದಷ್ಟು, ಸ್ತನವನ್ನು ತಲುಪುವ ಮಗುವಿನ ಪ್ರಯತ್ನವು ಸಹ ಕಡಿಮೆ ಆಗುತ್ತದೆ.
| |
− | |-
| |
− | |03:54
| |
− | | ಮತ್ತು, ಮಗುವಿಗೆ ಸರಿಯಾಗಿ ಹೊಂದಿಸಿಕೊಳ್ಳಲು ಸುಲಭವಾಗುತ್ತದೆ.
| |
− | |-
| |
− | |04:00
| |
− | | ಮಗುವಿನ ಸಂಪೂರ್ಣ ದೇಹವನ್ನು ಹಿಡಿದುಕೊಳ್ಳಬೇಕಾದ ವಿಧಾನವು ಎರಡನೇ ಪ್ರಮುಖ ಅಂಶವಾಗಿದೆ.
| |
− | |-
| |
− | |04:08
| |
− | |ನಾವು ಆಹಾರವನ್ನು ಸೇವಿಸುವಾಗ ನಮ್ಮ ತಲೆ, ಕುತ್ತಿಗೆ ಮತ್ತು ದೇಹವು ಯಾವಾಗಲೂ ಒಂದೇ ದಿಕ್ಕಿನಲ್ಲಿ ಇರುವುದನ್ನು ನೀವು ಗಮನಿಸಿರಬಹುದು.
| |
− | |-
| |
− | |04:16
| |
− | | ಆದರೆ ಸ್ತನ್ಯಪಾನ ಮಾಡಿಸುವಾಗ, ಕೆಲವು ಸಲ ತಾಯಂದಿರು ಮಗುವಿನ ತಲೆಯನ್ನು ಪಕ್ಕಕ್ಕೆ ತಿರುಗಿಸಿರುತ್ತಾರೆ.
| |
− | |-
| |
− | |04:23
| |
− | |ಹಾಲುಣಿಸುವಾಗ ಇದು ಮಗುವಿಗೆ ಅನಾನುಕೂಲವನ್ನು ಮಾಡುತ್ತದೆ.
| |
− | |-
| |
− | |04:28
| |
− | |ಸ್ತನ್ಯಪಾನ ಮಾಡಿಸುವಾಗ, ಮಗುವಿನ ತಲೆ, ಕುತ್ತಿಗೆ ಮತ್ತು ದೇಹವು ಒಂದೇ ಸಾಲಿನಲ್ಲಿರಬೇಕು.
| |
− | |-
| |
− | |04:35
| |
− | |ಇದರಿಂದ ಮಗುವಿಗೆ ಹಾಲನ್ನು ನುಂಗಲು ಸುಲಭವಾಗುತ್ತದೆ.
| |
− | |-
| |
− | |04:41
| |
− | |ಮಗುವಿನ ದೇಹವನ್ನು ಹೊಂದಿಸುವ ಬಗ್ಗೆ, ಈಗ ನಾವು ಮೂರನೆಯ ಅಂಶಕ್ಕೆ ಬರುತ್ತೇವೆ.
| |
− | |-
| |
− | |04:46
| |
− | |ತಾಯಿಯು ತನ್ನ ಮಗುವಿನ ಪೂರ್ತಿ ಶರೀರವನ್ನು ಹಿಡಿದುಕೊಳ್ಳಬೇಕು.
| |
− | |-
| |
− | |04:51
| |
− | |ಇಲ್ಲದಿದ್ದರೆ, ಮಗುವು ತಾಯಿಯ ಸ್ತನಕ್ಕೆ ಗಟ್ಟಿಯಾಗಿ ಹೊಂದಿಸಿಕೊಳ್ಳಲು (attach) ಬಹಳ ಪ್ರಯತ್ನಿಸಬೇಕಾಗುವುದು.
| |
− | |-
| |
− | |04:58
| |
− | |ನಂತರ, ನಾವು ಮಗುವಿನ ಮೂಗು ಮತ್ತು ಗದ್ದಗಳ ಸ್ಥಾನವನ್ನು ನೋಡೋಣ.
| |
− | |-
| |
− | |05:03
| |
− | |ಶಿಶುವಿನ ಮೂಗು ಮತ್ತು ತಾಯಿಯ ಮೊಲೆತೊಟ್ಟು ಒಂದೇ ಸಾಲಿನಲ್ಲಿರಬೇಕು.
| |
− | |-
| |
− | |05:07
| |
− | |ಮತ್ತು, ಗದ್ದವು ಮುಂದೆ ಬಂದಿದ್ದು ಸ್ತನಕ್ಕೆ ಅತೀ ಹತ್ತಿರವಾಗಿರಬೇಕು.
| |
− | |-
| |
− | |05:13
| |
− | | ಲ್ಯಾಚಿಂಗ್ ಸಮಯದಲ್ಲಿ, ಶಿಶು ಅರಿಯೋಲಾದ ಕೆಳಗಿನ ಹೆಚ್ಚು ಭಾಗವನ್ನು ಒಳಗೆ ತೆಗೆದುಕೊಳ್ಳುವುದನ್ನು ಇದು ಖಚಿತಪಡಿಸುತ್ತದೆ.
| |
− | |-
| |
− | |05:19
| |
− | |ಹೀಗಾಗಿ, ಹೆಚ್ಚು ಹಾಲನ್ನು ಕುಡಿಯಲು ಕೆಳದವಡೆಯನ್ನು ಬಳಸುತ್ತದೆ.
| |
− | |-
| |
− | |05:26
| |
− | | ದಯವಿಟ್ಟು ಗಮನಿಸಿ: ಅರಿಯೋಲಾ, ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗವಾಗಿದೆ.
| |
− | |-
| |
− | |05:32
| |
− | | ಈಗ ಮಗುವನ್ನು ಸರಿಯಾಗಿ ಹಿಡಿದುಕೊಂಡಿರುವುದರಿಂದ,
| |
− | |-
| |
− | |05:35
| |
− | | ಸ್ತನವನ್ನು ಹೇಗೆ ಹಿಡಿದುಕೊಳ್ಳಬೇಕು ಎಂದು ನಾವು ಕಲಿಯೋಣ.
| |
− | |-
| |
− | |05:39
| |
− | |ತಾಯಿಯು ತನ್ನ ಖಾಲಿ ಇರುವ ಕೈಯ ಬೆರಳುಗಳನ್ನು ಬಳಸಿ, U ಆಕಾರದಲ್ಲಿ ಇರುವಂತೆ ಮೇಲಿನಿಂದ ತನ್ನ ಸ್ತನವನ್ನು ಹಿಡಿಯಬೇಕು.
| |
− | |-
| |
− | |05:48
| |
− | |ಈ ಚಿತ್ರದಲ್ಲಿ, ತಾಯಿಯು ತನ್ನ ಬಲಗಡೆಯ ಸ್ತನವನ್ನು ಹಿಡಿದುಕೊಳ್ಳಲು ಎಡಗೈಯನ್ನು ಬಳಸುತ್ತಾಳೆ.
| |
− | |-
| |
− | |05:55
| |
− | |ಹೆಬ್ಬೆರಳು ಮತ್ತು ಬೆರಳುಗಳ ಸರಿಯಾದ ಸ್ಥಾನವನ್ನು ತಿಳಿದುಕೊಳ್ಳಲು, ತಾಯಿಯ ಬಲ ಮೊಲೆಯಲ್ಲಿ, ಮೊಲೆತೊಟ್ಟನ್ನು ಗಡಿಯಾರದ ಕೇಂದ್ರ ಎಂದು ಊಹಿಸಿ.
| |
− | |-
| |
− | |06:04
| |
− | |ತಾಯಿಯು ತನ್ನ ಎಡ ಹೆಬ್ಬೆರಳನ್ನು, ಈ ಗಡಿಯಾರದಲ್ಲಿ ಗಂಟೆ 3 ಆದ ಹಾಗೆ ಇಡಬೇಕು.
| |
− | |-
| |
− | |06:10
| |
− | |ಅವಳ ಎಡ ತೋರುಬೆರಳು ಮತ್ತು ಮಧ್ಯದ ಬೆರಳನ್ನು ಗಂಟೆ 9 ಆದಾಗಿನ ಹಾಗೆ ಇಡಬೇಕು.
| |
− | |-
| |
− | |06:18
| |
− | |ಸ್ತನವನ್ನು ಹಿಡಿದಿರುವ ತಾಯಿಯ ಬೆರಳುಗಳು, ಯಾವಾಗಲೂ ಮಗುವಿನ ತುಟಿಗಳಿರುವ ದಿಕ್ಕಿನಲ್ಲಿಯೇ ಇರಬೇಕು.
| |
− | |-
| |
− | |06:25
| |
− | | ಯಾಕೆ? ಸರಳವಾದ ಒಂದು ಉದಾಹರಣೆಯನ್ನು ಬಳಸಿ, ನಾವು ಇದನ್ನು ತಿಳಿದುಕೊಳ್ಳೋಣ.
| |
− | |-
| |
− | |06:30
| |
− | |ನಾವು ವಡಾ-ಪಾವ್ ಅಥವಾ ಬರ್ಗರ್ ಅನ್ನು ತಿನ್ನುವಾಗ, ನಮ್ಮ ತುಟಿಗಳು ಅಡ್ಡಲಾಗಿ ತೆರೆದುಕೊಳ್ಳುತ್ತವೆ.
| |
− | |-
| |
− | |06:35
| |
− | |ದೊಡ್ಡ ತುತ್ತನ್ನು ತೆಗೆದುಕೊಳ್ಳಲು, ನಾವು ವಡಾ-ಪಾವ್ ಅಥವಾ ಬರ್ಗರ್ ಅನ್ನು ಅಡ್ಡಲಾಗಿ ಹಿಡಿದುಕೊಳ್ಳುತ್ತೇವೆ.
| |
− | |-
| |
− | |06:40
| |
− | |ಇಲ್ಲಿ, ಹೆಬ್ಬೆರಳು ಮತ್ತು ಬೆರಳುಗಳನ್ನು ತುಟಿಗಳ ದಿಕ್ಕಿನಲ್ಲಿ ಇರಿಸಲಾಗುತ್ತದೆ.
| |
− | |-
| |
− | |06:46
| |
− | |ವಡಾ-ಪಾವ್ ಅಥವಾ ಬರ್ಗರ್ ಅನ್ನು ಲಂಬವಾಗಿ ಹಿಡಿದಿದ್ದರೆ, ದೊಡ್ಡ ತುತ್ತನ್ನು ತೆಗೆದುಕೊಳ್ಳಲು ನಮಗೆ ಸಾಧ್ಯವಾಗುವುದಿಲ್ಲ.
| |
− | |-
| |
− | |06:53
| |
− | | ಹಾಗೆಯೇ, ಮಗುವಿನ ತುಟಿಗಳ ದಿಕ್ಕನ್ನು ಗಮನಿಸಿ. ತುಟಿಗಳು ಇಲ್ಲಿ ಲಂಬವಾಗಿವೆ.
| |
− | |-
| |
− | |07:00
| |
− | |ಆದ್ದರಿಂದ, ಬೆರಳುಗಳು ಮತ್ತು ಹೆಬ್ಬೆರಳನ್ನು ಕೂಡ ಸ್ತನದ ಮೇಲೆ ಲಂಬವಾಗಿ ಇಡಬೇಕು.
| |
− | |-
| |
− | |07:06
| |
− | |ಇದು, ಮಗುವಿಗೆ ತನ್ನ ಬಾಯಿಯಲ್ಲಿ ಕೆಳಗಿನ ಅರಿಯೋಲಾದ ದೊಡ್ಡ ಭಾಗವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
| |
− | |-
| |
− | |07:13
| |
− | |ಮಗುವಿನ ತುಟಿಗಳ ದಿಕ್ಕಿನಲ್ಲಿ ಇರುವುದರ ಜೊತೆಗೆ, ತಾಯಿಯ ಹೆಬ್ಬೆರಳು ಮತ್ತು ಬೆರಳುಗಳು ಯಾವಾಗಲೂ ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರದಲ್ಲಿ ಇರಬೇಕು.
| |
− | |-
| |
− | |07:23
| |
− | | ಮತ್ತೆ, ವಡಾ-ಪಾವ್ ಅಥವಾ ಬರ್ಗರ್ ಅನ್ನು ತಿನ್ನುವಾಗ, ನಾವು ಅದನ್ನು ಬಹಳ ಹತ್ತಿರದಲ್ಲಿ ಹಿಡಿದುಕೊಂಡರೆ, ನಮ್ಮ ಬೆರಳುಗಳು ದೊಡ್ಡ ತುತ್ತನ್ನು ತೆಗೆದುಕೊಳ್ಳದಂತೆ ಬಾಯಿಗೆ ಅಡ್ಡಬರುತ್ತವೆ.
| |
− | |-
| |
− | |07:34
| |
− | |ನಾವು ಅದನ್ನು ತುಂಬಾ ದೂರದಲ್ಲಿ ಹಿಡಿದರೆ, ಅದು ನಮ್ಮ ಬಾಯಿಯಲ್ಲಿ ಹೋಗಬಹುದಾದ ಆಕಾರದಲ್ಲಿ ಇರುವುದಿಲ್ಲ.
| |
− | |-
| |
− | |07:41
| |
− | |ಆದ್ದರಿಂದ, ದೊಡ್ಡ ತುತ್ತನ್ನು ತೆಗೆದುಕೊಳ್ಳಲು, ಅದನ್ನು ಸರಿಯಾದ ದೂರದಲ್ಲಿ ಹಿಡಿದುಕೊಳ್ಳುತ್ತೇವೆ.
| |
− | |-
| |
− | |07:47
| |
− | |ಹೀಗೆಯೇ, ಈ ಚಿತ್ರದಲ್ಲಿ ತೋರಿಸಿರುವಂತೆ, ಮಗುವಿಗೆ ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರವು ಸರಿಯಾಗಿದೆ.
| |
− | |-
| |
− | |07:55
| |
− | | ಈ ಅಂತರವು, ಕೆಳಗಿನ ಅಂಶಗಳನ್ನು ಖಚಿತಪಡಿಸುತ್ತದೆ-
| |
− | ಮಗುವು ತನ್ನ ಬಾಯಿಯಲ್ಲಿ ಅರಿಯೋಲಾದ ದೊಡ್ಡ ಭಾಗವನ್ನು ತೆಗೆದುಕೊಳ್ಳುವಾಗ ತಾಯಿಯ ಬೆರಳುಗಳು ಅಡ್ಡಬರುವುದಿಲ್ಲ,
| |
− | |-
| |
− | |08:05
| |
− | |ತಾಯಿಯು ಕೇವಲ ಮೊಲೆತೊಟ್ಟನ್ನು ಮಾತ್ರ ಒತ್ತುವುದಿಲ್ಲ. ಏಕೆಂದರೆ, ಇದರಿಂದ ತುಂಬಾ ಕಡಿಮೆ ಹಾಲು ಸಿಗುತ್ತದೆ.
| |
− | |-
| |
− | |08:11
| |
− | |ತಾಯಿಯು ಹೆಚ್ಚು ಹಾಲು ಹೊರಗೆ ಬರಲು, ಅರಿಯೋಲಾದ ಕೆಳಗಿನ ಹಾಲಿನ ದೊಡ್ಡ ನಾಳಗಳನ್ನು ಒತ್ತುತ್ತಾಳೆ.
| |
− | |-
| |
− | |08:17
| |
− | | ಮತ್ತು, ಮಗುವಿಗೆ ಗಟ್ಟಿಯಾಗಿ ಅಂಟಿಕೊಳ್ಳಲು ಸಹಾಯವಾಗುವಂತೆ, ಸ್ತನವನ್ನು ಸರಿಯಾಗಿ ಹಿಡಿಯಲಾಗಿದೆ.
| |
− | |-
| |
− | |08:23
| |
− | |ನೆನಪಿಡಿ-
| |
− | ಮಗುವಿನ ಗದ್ದ ಇರುವ ಸ್ತನದ ಬದಿಯಲ್ಲಿ, ತಾಯಿಯ ಹೆಬ್ಬೆರಳು ಇರಬೇಕು.
| |
− | |-
| |
− | |08:30
| |
− | |ಮತ್ತು, ಮಗುವಿನ ಮೂಗು ಇರುವ ಸ್ತನದ ಬದಿಯಲ್ಲಿ, ಅವಳ 2 ಬೆರಳುಗಳು ಇರಬೇಕು.
| |
− | |-
| |
− | |08:36
| |
− | |ನಾವು ವಡಾ- ಪಾವ್ ಅಥವಾ ಬರ್ಗರ್ ನ ಉದಾಹರಣೆಗೆ ಹಿಂತಿರುಗೋಣ.
| |
− | |-
| |
− | |08:41
| |
− | |ವಡಾ-ಪಾವ್ ಅಥವಾ ಬರ್ಗರ್ ಅನ್ನು ಸರಿಯಾಗಿ ಹಿಡಿದ ನಂತರ, ನಾವು ದೊಡ್ಡ ತುತ್ತು (bite) ತೆಗೆದುಕೊಳ್ಳಲು ಅದನ್ನು ಅದುಮಿ ಹಿಡಿಯುತ್ತೇವೆ.
| |
− | |-
| |
− | |08:48
| |
− | |ಹೀಗೆಯೇ, ತಾಯಿಯು ಮೇಲಿನಿಂದ U ಆಕಾರದಲ್ಲಿ, ತನ್ನ ಸ್ತನವನ್ನು ಮೆತ್ತಗೆ ಒತ್ತಿ ಹಿಡಿಯಬೇಕು.
| |
− | |-
| |
− | |08:54
| |
− | |ಇದು, ಮಗುವಿಗೆ ಕೆಳಗಿನ ಅರಿಯೋಲಾದ ದೊಡ್ಡ ಭಾಗವನ್ನು ತನ್ನ ಬಾಯಿಯಲ್ಲಿ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
| |
− | |-
| |
− | |09:01
| |
− | |ಆದರೆ ನೆನಪಿಡಿ, ತಾಯಿಯು ತನ್ನ ಸ್ತನವನ್ನು ತಲೆಕೆಳಗಾದ V ಆಕಾರದಲ್ಲಿ ಅದುಮಬಾರದು.
| |
− | |-
| |
− | |09:07
| |
− | |V ಆಕಾರದ ಒತ್ತುವಿಕೆಯು ಸ್ತನವನ್ನು ಹಿಸುಕುತ್ತದೆ ಮತ್ತು ನಿಪ್ಪಲ್ ಫೀಡಿಂಗ್ ಅನ್ನು ಉಂಟುಮಾಡುತ್ತದೆ.
| |
− | |-
| |
− | |09:14
| |
− | |ಅಲ್ಲದೆ, ಹೆಬ್ಬೆರಳು ಮತ್ತು ಬೆರಳುಗಳಿಂದ ಸ್ತನವನ್ನು ಸಮನಾಗಿ ಒತ್ತಲಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳಿ.
| |
− | |-
| |
− | |09:21
| |
− | |ಇಲ್ಲದಿದ್ದರೆ, ಮೊಲೆತೊಟ್ಟು ಬಲ ಅಥವಾ ಎಡಭಾಗಕ್ಕೆ ಸರಿಯುತ್ತದೆ
| |
− | |-
| |
− | |09:27
| |
− | |ಮತ್ತು ಸ್ತನಕ್ಕೆ ಸರಿಯಾಗಿ ಹೊಂದಿಸಿಕೊಳ್ಳಲು ಮಗುವಿಗೆ ಸಾಧ್ಯವಾಗುವುದಿಲ್ಲ.
| |
− | |-
| |
− | |09:32
| |
− | |ನೆನಪಿಡಿ, ಮಗುವಿನ ಕಡೆಗೆ ಸ್ತನವನ್ನು ಬದಿಯಿಂದ ತಳ್ಳುವ ಮೂಲಕ ಅದನ್ನು ಮಗುವಿನೆಡೆಗೆ ತರಬೇಡಿ.
| |
− | |-
| |
− | |09:39
| |
− | | ಯಾವಾಗಲೂ ಮಗುವನ್ನು ಸ್ತನದ ಕಡೆಗೆ ತನ್ನಿ.
| |
− | |-
| |
− | |09:43
| |
− | |ಈಗ, ಮಗು 'ಕ್ರೇಡಲ್ ಹೋಲ್ಡ್' ನಲ್ಲಿದೆ ಮತ್ತು ಸ್ತನ್ಯಪಾನಕ್ಕಾಗಿ ಹೊಂದಿಸಿಕೊಳ್ಳಲು ಸಿದ್ಧವಾಗಿದೆ.
| |
− | |-
| |
− | |09:49
| |
− | |ತಾಯಿಯ ಸ್ತನಕ್ಕೆ ಮಗುವನ್ನು ಸರಿಯಾದ ಜೋಡಿಸುವ ವಿಧಾನದ ಬಗ್ಗೆ, ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
| |
− | |-
| |
− | |09:58
| |
− | | ಒಮ್ಮೆ ಮಗು ಸ್ತನಕ್ಕೆ ಸರಿಯಾಗಿ ಅಂಟಿಕೊಂಡಿತೆಂದರೆ ಮತ್ತು ಸ್ತನವು ತುಂಬಾ ಭಾರವಾಗಿರದಿದ್ದರೆ ಆಗ -
| |
− | |-
| |
− | |10:05
| |
− | | ತಾಯಿಯು ಸ್ತನವನ್ನು ತನ್ನ ಕೈಯಿಂದ ಬಿಡಬೇಕು.
| |
− | |-
| |
− | |10:09
| |
− | | ಮತ್ತು ಆ ಕೈಯನ್ನು ಮಗುವಿನ ಆಧಾರಕ್ಕಾಗಿ ಕೆಳಗೆ ತರಬೇಕು.
| |
− | |-
| |
− | |10:14
| |
− | | ಈ ಸ್ಥಾನದಲ್ಲಿ, ತಾಯಿಯು ತನ್ನ ಎರಡೂ ತೋಳುಗಳನ್ನು ತನ್ನ ಶರೀರದ ತುಂಬಾ ಹತ್ತಿರಕ್ಕೆ ತರಬೇಕು.
| |
− | |-
| |
− | |10:21
| |
− | | ಹಾಲುಣಿಸುವ ಸಮಯದಲ್ಲಿ ಇದು ಅವಳನ್ನು ಆರಾಮವಾಗಿಡುತ್ತದೆ.
| |
− | |-
| |
− | |10:26
| |
− | | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
| |
− | |-
| |
− | |10:29
| |
− | | ಧನ್ಯವಾದಗಳು.
| |
− | |}
| |