Difference between revisions of "Health-and-Nutrition/C2/Breast-conditions/Kannada"

From Script | Spoken-Tutorial
Jump to: navigation, search
Line 253: Line 253:
 
| ನಾಲ್ಕನೇಯದು ಶೀಘ್ರವಾಗಿ ಸ್ತನ್ಯಪಾನವನ್ನು ಬಿಡಿಸುವುದು ಆಗಿದೆ. ಇದರಲ್ಲಿ, ಮಗು ಎದೆಹಾಲಿನ ಜೊತೆಗೆ ಇತರ ಆಹಾರಗಳನ್ನು ಸಹ ತಿನ್ನುತ್ತದೆ.
 
| ನಾಲ್ಕನೇಯದು ಶೀಘ್ರವಾಗಿ ಸ್ತನ್ಯಪಾನವನ್ನು ಬಿಡಿಸುವುದು ಆಗಿದೆ. ಇದರಲ್ಲಿ, ಮಗು ಎದೆಹಾಲಿನ ಜೊತೆಗೆ ಇತರ ಆಹಾರಗಳನ್ನು ಸಹ ತಿನ್ನುತ್ತದೆ.
 
|-
 
|-
| 07:59
+
| 07:50
 
| ಐದನೇಯದು, ಬಿಗಿಯಾದ ಬಟ್ಟೆ ಆಗಿದೆ - ತಾಯಿಯು ಬಿಗಿಯಾದ ಉಡುಪುಗಳನ್ನು ಬಳಸಿದರೆ, ವಿಶೇಷವಾಗಿ ರಾತ್ರಿಯಲ್ಲಿ ಬಿಗಿಯಾದ ಬ್ರಾ ಅನ್ನು ಧರಿಸಿದರೆ, ಅದು ಸ್ತನದ ಮೇಲೆ ಒತ್ತಡವನ್ನು ತರುತ್ತದೆ ಮತ್ತು ಹಾಲಿನ ನಾಳಗಳನ್ನು ನಿರ್ಬಂಧಿಸಬಹುದು.
 
| ಐದನೇಯದು, ಬಿಗಿಯಾದ ಬಟ್ಟೆ ಆಗಿದೆ - ತಾಯಿಯು ಬಿಗಿಯಾದ ಉಡುಪುಗಳನ್ನು ಬಳಸಿದರೆ, ವಿಶೇಷವಾಗಿ ರಾತ್ರಿಯಲ್ಲಿ ಬಿಗಿಯಾದ ಬ್ರಾ ಅನ್ನು ಧರಿಸಿದರೆ, ಅದು ಸ್ತನದ ಮೇಲೆ ಒತ್ತಡವನ್ನು ತರುತ್ತದೆ ಮತ್ತು ಹಾಲಿನ ನಾಳಗಳನ್ನು ನಿರ್ಬಂಧಿಸಬಹುದು.
 
|-
 
|-

Revision as of 08:47, 18 April 2019

Time
Narration
00:00 Breast conditions in lactating mothers ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು, ಬ್ರೆಸ್ಟ್ ಎಂಗಾರ್ಜ್ಮೆಂಟ್ (Breast engorgement) ಮತ್ತು ಮೊಲೆಯುರಿತ (Mastitis) ಇವುಗಳ ಬಗ್ಗೆ ಕಲಿಯುವೆವು.
00:13 “ಬ್ರೆಸ್ಟ್ ಎಂಗಾರ್ಜ್ಮೆಂಟ್” ನೊಂದಿಗೆ ನಾವು ಪ್ರಾರಂಭಿಸೋಣ.
00:17 'ಎಂಗಾರ್ಜ್ಮೆಂಟ್'- ಇದು ಹೆರಿಗೆಯ ನಂತರ ಸಾಮಾನ್ಯವಾಗಿ 3 ರಿಂದ 5 ದಿನಗಳಲ್ಲಿ ಕಂಡುಬರುತ್ತದೆ.
00:23 ಇದು ಎರಡೂ ಸ್ತನಗಳಲ್ಲಿ ಏಕಕಾಲದಲ್ಲಿ ಸಂಭವಿಸುತ್ತದೆ.
00:28 ತಾಯಿಯು “ಬ್ರೆಸ್ಟ್ ಎಂಗಾರ್ಜ್ಮೆಂಟ್” ಅನ್ನು ಸ್ತನ ತುಂಬುವಿಕೆ ಎಂದು ತಿಳಿಯಬಾರದು.
00:33 ಅದಕ್ಕಾಗಿ, ಈಗ ನಾವು ಸ್ತನದ ಎಂಗಾರ್ಜ್ಮೆಂಟ್ ಮತ್ತು ಸ್ತನಗಳ ತುಂಬುವಿಕೆಯ ನಡುವಿನ ವ್ಯತ್ಯಾಸವನ್ನು ಚರ್ಚಿಸೋಣ.
00:40 ಎಂಗಾರ್ಜ್ಮೆಂಟ್ ನಲ್ಲಿ, ಸ್ತನವು ಗಟ್ಟಿಯಾಗಿ, ಊದಿಕೊಂಡು ಮತ್ತು ಅತಿಯಾಗಿ ಹಾಲಿನಿಂದ ತುಂಬಿಕೊಳ್ಳುತ್ತದೆ.
00:46 ಇದು ಹೊಳೆಯುತ್ತಿರುವಂತೆ ಕಾಣುತ್ತದೆ ಮತ್ತು ಮೇಲ್ಮೈಯಲ್ಲಿ ಹಿಗ್ಗಿರುವ ರಕ್ತನಾಳಗಳನ್ನು ತೋರಿಸುತ್ತದೆ.
00:52 24 ಗಂಟೆಗಿಂತ ಹೆಚ್ಚು ಕಾಲ ತಾಯಿಯು ಜ್ವರದಿಂದ ಬಳಲಬಹುದು. ಮತ್ತು, ಮಗುವಿಗೆ ಲ್ಯಾಚ್ ಮಾಡಲು ಕಷ್ಟವಾಗುತ್ತದೆ.
01:01 ಆದರೆ ತುಂಬಿದ ಸ್ತನಗಳು ಸಹಜ ಸ್ಥಿತಿಯಲ್ಲಿರುತ್ತವೆ.
01:04 ತುಂಬಿದ ಸ್ತನಗಳು ದೊಡ್ಡದಾಗಿ ಕಾಣಿಸುತ್ತವೆ ಆದರೆ ಅವು ಹೊಳೆಯುವಂತೆ ಕಾಣುವುದಿಲ್ಲ.
01:10 ತುಂಬಿದ ಸ್ತನಗಳು ನೋಯುವದಿಲ್ಲ ಮತ್ತು ಸ್ತನಗಳು ತುಂಬಿರುವ ಅವಧಿಯಲ್ಲಿ ಜ್ವರವೂ ಇರುವುದಿಲ್ಲ.
01:17 ಈಗ, ನಾವು ಹಾಲುಣಿಸುವ ತಾಯಂದಿರಲ್ಲಿ, ಸ್ತನದ ಎಂಗಾರ್ಜ್ಮೆಂಟ್ ನ ಕಾರಣಗಳನ್ನು ಚರ್ಚಿಸೋಣ.
01:23 ಸ್ತನದ ಎಂಗಾರ್ಜ್ಮೆಂಟ್ -
01:27 ಹೆರಿಗೆಯಾದ ಕೂಡಲೇ ತಾಯಿಯು ಮಗುವಿಗೆ ಹಾಲುಣಿಸಿರದಿದ್ದರೆ,
01:32 ತಾಯಿಯು ಮಗುವಿಗೆ ಆಗಾಗ್ಗೆ ಹಾಲುಣಿಸದಿದ್ದರೆ,
01:36 ಹಾಲುಣಿಸುವಾಗ ತಾಯಿಯ ಸ್ತನಕ್ಕೆ ಮಗು ಸರಿಯಾಗಿ ಲ್ಯಾಚ್ ಆಗಿರದಿದ್ದರೆ ಮತ್ತು
01:42 ತಾಯಿಯು ಇದ್ದಕ್ಕಿದ್ದಂತೆ ಹಾಲುಣಿಸುವುದನ್ನು ನಿಲ್ಲಿಸಿದ್ದರೆ ಅಂತಹ ಪರಿಸ್ಥಿತಿಗಳಲ್ಲಿ ಇದು ಸಂಭವಿಸಬಹುದು.
01:47 ಈಗ, ನಾವು ಎಂಗಾರ್ಜ್ಮೆಂಟ್ ಗೆ ಹೇಗೆ ಚಿಕಿತ್ಸೆ ನೀಡುವುದು ಎಂದು ಚರ್ಚಿಸೋಣ.
01:51 ಮೊದಲು, ತಾಯಿಗೆ ತನ್ನ ಕೈಗಳನ್ನು ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಲು ಹೇಳಿ.
01:56 ನಂತರ ಮಗುವನ್ನು ತಾಯಿಯ ಹತ್ತಿರ ತನ್ನಿ. ಇದರಿಂದ ಅವಳು ಮಗುವನ್ನು ನೋಡಬಹುದು, ಮೂಸಿನೋಡಬಹುದು ಹಾಗೂ ಸ್ಪರ್ಶಿಸಬಹುದು.
02:03 ಮಗು ತುಂಬಾ ಗದ್ದಲ ಮಾಡಿದರೆ, ತಾಯಿಯು ಮಗುವಿನ ಟಾವೆಲ್ ಅನ್ನು ಮೂಸಿನೋಡಬಹುದು.
02:08 ಆನಂತರ, ತಾಯಿಯು ಒಂದು ಲೋಟ ನೀರನ್ನು ಕುಡಿಯಬೇಕು.
02:12 ಆಮೇಲೆ, 5 ರಿಂದ 10 ನಿಮಿಷಗಳವರೆಗೆ ಬೆಚ್ಚನೆಯ ಒದ್ದೆ ಬಟ್ಟೆಯನ್ನು ಸ್ತನದ ಮೇಲೆ ಇರಿಸಿ ಅಥವಾ
02:18 ತಾಯಿಯು ಬೆಚ್ಚಗಿನ ನೀರಿನ ಶವರ್ ಸಹ ಮಾಡಬಹುದು.
02:21 ಇದು ಎದೆಹಾಲು ಹೊರಬರಲು ಸಹಾಯ ಮಾಡುವುದು.
02:24 ಅದರ ನಂತರ, ಆರೋಗ್ಯ ಕಾರ್ಯಕರ್ತನು ತಾಯಿಗೆ ವಿಶ್ರಾಂತಿ ಪಡೆಯಲು ಹೇಳಬೇಕು. ಏಕೆಂದರೆ, ಹೆಚ್ಚಿನ ಒತ್ತಡವು ಲೆಟ್-ಡೌನ್ ರಿಫ್ಲೆಕ್ಸ್ ಮೇಲೆ ಪ್ರಭಾವ ಬೀರುತ್ತದೆ
02:33 ಮತ್ತು, ಹಾಲು ಹೊರಗೆ ಬರುವುದಿಲ್ಲ.
02:36 ಈಗ, ಆರೋಗ್ಯ ಕಾರ್ಯಕರ್ತ ಅಥವಾ ಕುಟುಂಬದ ಸದಸ್ಯನು, ತಾಯಿಯ ಕುತ್ತಿಗೆ ಮತ್ತು ಬೆನ್ನಿನ ಮೇಲ್ಭಾಗದ ಮೇಲೆ ಮಸಾಜ್ ಮಾಡಬೇಕು.
02:43 ಇದು ಎದೆಹಾಲು ಹೊರಗೆ ಬರಲು ಸಹಾಯ ಮಾಡುವುದು.
02:46 ಏಕೆಂದರೆ, ಬೆನ್ನಿನ ಮೆಲ್ಭಾಗ ಮತ್ತು ಎದೆಗೆ ಒಂದೇ ನರಗಳು ಹೋಗುತ್ತವೆ.
02:52 ನಂತರ, ತಾಯಿಯು ತನ್ನ ಸ್ತನವನ್ನು ವೃತ್ತಾಕಾರದ ಚಲನೆಯಲ್ಲಿ ಮೆತ್ತಗೆ ಮಾಲೀಸು ಮಾಡಲು ಆರಂಭಿಸಬೇಕು.
02:57 ಮಾಲೀಸು ಮಾಡಿದಾಗ ಅವಳಿಗೆ ಆರಾಮವೆನಿಸುವುದು ಮತ್ತು ಲೆಟ್-ಡೌನ್ ರಿಫ್ಲೆಕ್ಸ್ ಅನ್ನು ಸುಧಾರಿಸುವುದು.
03:03 ಈ ಎಲ್ಲವುಗಳು, ಆಕ್ಸೀಟೋಸಿನ್ ಅನ್ನು (Oxytocin) ಬಿಡುಗಡೆ ಮಾಡಲು ಸಹಾಯ ಮಾಡುತ್ತವೆ.
03:07 ಇದನ್ನು “ಆಕ್ಸೀಟೋಸಿನ್ ರಿಫ್ಲೆಕ್ಸ್” ಅಥವಾ “ಲೆಟ್-ಡೌನ್ ರಿಫ್ಲೆಕ್ಸ್” ಎಂದು ಹೇಳಲಾಗುತ್ತದೆ.
03:12 “ಆಕ್ಸೀಟೋಸಿನ್” ಇದು, ಎದೆಹಾಲು ಹೊರಗೆ ಬರಲು ಸಹಾಯ ಮಾಡುವ ಒಂದು ಹಾರ್ಮೋನ್ ಆಗಿದೆ.
03:17 ಆಮೇಲೆ ತಾಯಿಯು, ಅರಿಯೋಲಾ ವನ್ನು ಮೃದುವಾಗಿಸಲು, ತನ್ನ ಕೈಯಿಂದ ಸ್ವಲ್ಪ ಹಾಲನ್ನು ಹೊರಗೆ ತೆಗೆಯಬೇಕು.
03:23 ಸ್ತನಕ್ಕೆ ಸರಿಯಾಗಿ ಲ್ಯಾಚ್ ಮಾಡಲು ಅದು ಮಗುವಿಗೆ ಸಹಾಯ ಮಾಡುತ್ತದೆ.
03:27 ಎದೆಹಾಲನ್ನು ಹೊರತೆಗೆಯುವಾಗ, ತಾಯಿಯು ಅರಿಯೋಲಾದ ಸುತ್ತಲೂ ಒತ್ತಡವನ್ನು ಹಾಕಬೇಕು.
03:33 ಹಾಲನ್ನು ಹೊರತೆಗೆದ ನಂತರ, ತಾಯಿಯು ಅರಿಯೋಲಾವನ್ನು ಮಗುವಿನ ಬಾಯಿಯಲ್ಲಿ ಇರಿಸಬೇಕು. ಕಾರಣ, ಮಗುವಿಗೆ ತನ್ನಷ್ಟಕ್ಕೆ ತಾನೇ ಜೋಡಿಸಿಕೊಳ್ಳಲು ಕಷ್ಟವಾಗುತ್ತದೆ.
03:43 ಎರಡೂ ಸ್ತನಗಳಿಂದ ಹಾಲುಣಿಸಲು ಪ್ರಯತ್ನಿಸಬೇಕು.
03:46 ಎರಡು ಸ್ತನ್ಯಪಾನಗಳ ನಡುವೆ, ತಾಯಿಯು 5 ರಿಂದ 10 ನಿಮಿಷಗಳವರೆಗೆ ತಣ್ಣಗಿರುವ ಹಸಿಬಟ್ಟೆಯನ್ನು ಸ್ತನಗಳ ಮೇಲೆ ಇಟ್ಟುಕೊಳ್ಳಬೇಕು.
03:54 ಅಥವಾ, ತಾಯಿಯು ತಣ್ಣಗಿನ ಕ್ಯಾಬೇಜ್ ಎಲೆಗಳನ್ನು ಸ್ತನಗಳ ಮೇಲೆ ಇಟ್ಟುಕೊಳ್ಳಬಹುದು.
03:58 ಅವಳು ಈ ಕ್ಯಾಬೇಜ್ ಎಲೆಗಳನ್ನು ರೆಫ್ರಿಜರೇಟರ್ ನಲ್ಲಿ ಅಥವಾ ಒಂದು ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿ ಇಡಬಹುದು.
04:04 ಸ್ತನದ ಮೃದುತ್ವ (tenderness) ಹಾಗೂ ಎಡಿಮಾ ಗಳನ್ನು (edema) ಕಡಿಮೆ ಮಾಡಲು ಇದು ಸಹಾಯಮಾಡುತ್ತದೆ.
04:09 ಆಮೇಲೆ ತಾಯಿಯು ಆಗಾಗ್ಗೆ ಹಾಲುಣಿಸಬೇಕು.
04:13 ಈಗ, ಸ್ತನದ ಎಂಗಾರ್ಜ್ಮೆಂಟ್ ಅನ್ನು ಹೇಗೆ ತಡೆಯಬಹುದೆಂದು ನಾವು ತಿಳಿಯೋಣ.
04:17 ಮೊದಲು, ಮಗುವಿನ ಹಸಿವಿನ ಸೂಚನೆಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಉದಾಹರಣೆಗೆ - ಮೈಮುರಿಯುವಿಕೆ.
04:25 ಹೆಚ್ಚುತ್ತಿರುವ ರೂಟಿಂಗ್ ರಿಫ್ಲೆಕ್ಸ್,
04:28 ರೂಟಿಂಗ್ ರಿಫ್ಲೆಕ್ಸ್ ನಲ್ಲಿ, ಮಗು ಅದರ ಗಲ್ಲ ಅಥವಾ ಬಾಯಿಯನ್ನು ಸ್ಪರ್ಶಿಸಿದ ಯಾವುದೇ ವಸ್ತುವಿನೆಡೆಗೆ ತನ್ನ ತಲೆಯನ್ನು ಹೊರಳಿಸುತ್ತದೆ.
04:36 ಬೆರಳುಗಳನ್ನು ಚೀಪುವುದು,
04:39 ತಡಮಾಡಿದರೆ ಮಗು ಅಳಲು ಆರಂಭಿಸುತ್ತದೆ.
04:43 ಮಗು ಹಸಿದಿರುವ ಸೂಚನೆಯನ್ನು ಕೊಡುತ್ತಲೇ ಹಾಲುಣಿಸಿ, ಅಳುವವರೆಗೆ ಕಾಯಬೇಡಿ.
04:50 ಮಗು ಸರಿಯಾಗಿ ಲ್ಯಾಚ್ ಮಾಡಿಕೊಂಡಿದೆ ಮತ್ತು ಸಾಕಷ್ಟು ಹಾಲು ಪಡೆಯುತ್ತಿದೆ ಎಂದು ಖಚಿತಪಡಿಸಿಕೊಳ್ಳಿ.
04:55 ನೆನಪಿಡಿ, ಒಂದು ಸ್ತನವು ಪೂರ್ತಿಯಾಗಿ ಖಾಲಿ ಆದ ಮೇಲೆ ಮಾತ್ರ ಇನ್ನೊಂದು ಸ್ತನಕ್ಕೆ ಬದಲಾಯಿಸಿ.
05:02 ನಂತರ, ಮೊಲೆಯುರಿತ (Mastitis) ಎಂಬ ಸ್ತನದ ಇನ್ನೊಂದು ಸಮಸ್ಯೆಯನ್ನು ನಾವು ತಿಳಿದುಕೊಳ್ಳೋಣ.
05:08 ಈ ಪರಿಸ್ಥಿತಿಯಲ್ಲಿ, ಸ್ತನದ ಒಂದು ಭಾಗವು ಕೆಂಪಾಗಿ, ಬಾತುಕೊಂಡು ಗಟ್ಟಿಯಾಗುತ್ತದೆ.
05:14 ತಾಯಿಯು ತೀವ್ರ ನೋವು, ಜ್ವರ ಹಾಗೂ ಅನಾರೋಗ್ಯದಿಂದ ಬಳಲುತ್ತಾಳೆ.
05:18 ಅನೇಕ ತಾಯಂದಿರು ಮೊದಲ 6 ವಾರಗಳಲ್ಲಿ ಮೊಲೆಯುರಿತವನ್ನು ಅನುಭವಿಸುತ್ತಾರೆ.
05:22 ಆದರೆ, ಇದು ಹಾಲುಣಿಸುವ ಅವಧಿಯಲ್ಲಿ ಯಾವಾಗಲೂ ಸಂಭವಿಸಬಹುದು.
05:27 ಕೆಲವು ಸಲ ಇದನ್ನು “ಬ್ರೆಸ್ಟ್ ಎಂಗಾರ್ಜ್ಮೆಂಟ್” ಎಂದು ತಪ್ಪಾಗಿ ತಿಳಿಯಬಹುದು.
05:31 ಆದಾಗ್ಯೂ, “ಎಂಗಾರ್ಜ್ಮೆಂಟ್” ಇಡೀ ಸ್ತನವನ್ನು, ಕೆಲವೊಮ್ಮೆ ಎರಡೂ ಸ್ತನಗಳನ್ನು ಬಾಧಿಸಬಹುದು.
05:37 ಆದರೆ, ಮೊಲೆಯುರಿತವು ಸ್ತನದ ಒಂದು ಭಾಗವನ್ನು ಮತ್ತು ಸಾಮಾನ್ಯವಾಗಿ ಒಂದೇ ಸ್ತನವನ್ನು ಬಾಧಿಸುತ್ತದೆ.
05:44 “ಎಂಗಾರ್ಜ್” ಆದ ಸ್ತನದಲ್ಲಿ ಮೊಲೆಯುರಿತವು ಆಗಬಹುದು ಅಥವಾ ತಡೆಹಿಡಿದ ನಾಳಗಳ ಸ್ಥಿತಿಯನ್ನು ಅನುಸರಿಸಬಹುದು.
05:51 ಈಗ, ತಡೆಹಿಡಿದ ನಾಳಕ್ಕೆ (blocked duct) ಚಿಕಿತ್ಸೆ ಮಾಡದಿದ್ದರೆ ಅದು ಹೇಗೆ ಮೊಲೆಯುರಿತವಾಗಿ (ಮ್ಯಸ್ಟೈಟಿಸ್) ಬೆಳೆಯುತ್ತದೆ ಎಂದು ನಾವು ಚರ್ಚಿಸುತ್ತೇವೆ.
05:59 ತಡೆಹಿಡಿದ ನಾಳ (Blocked duct) - ಈ ಸ್ಥಿತಿಯಲ್ಲಿ, ಸ್ತನದ ಒಂದು ಭಾಗದಿಂದ ಹಾಲನ್ನು ತೆಗೆಯಲಾಗುವದಿಲ್ಲ.
06:04 ಸಾಮಾನ್ಯವಾಗಿ ಈ ನಾಳವು ಗಟ್ಟಿಯಾದ ಹಾಲಿನಿಂದ ತಡೆಹಿಡಿಯಲ್ಪಟ್ಟ ಸ್ತನದ ಭಾಗವಾಗಿದೆ.
06:11 ಇದು ಗಡ್ಡೆಗಳು ಉಂಟಾಗಲು ಕಾರಣವಾಗುತ್ತದೆ. ಈ ಗಡ್ಡೆಯು ಮೃದುವಾಗಿದ್ದು, ಅನೇಕವೇಳೆ ಅದರ ಮೇಲಿನ ಚರ್ಮವು ಕೆಂಪಾಗಿರುತ್ತದೆ.
06:20 ತಡೆಹಿಡಿದ ನಾಳ ಮತ್ತು ಸ್ತನಗಳ ಎಂಗಾರ್ಜ್ಮೆಂಟ್, ಮಿಲ್ಕ್ ಸ್ಟಾಸಿಸ್ ಅನ್ನು ಉಂಟುಮಾಡುತ್ತವೆ.
06:24 ಸ್ತನದ ಒಂದು ಭಾಗದಲ್ಲಿ, ತಡೆಹಿಡಿದ ನಾಳಗಳು ಮತ್ತು ಸ್ತನಗಳ ಎಂಗಾರ್ಜ್ಮೆಂಟ್ನಲ್ಲಿ ಹಾಲು ಉಳಿದಾಗ, ಇದನ್ನು 'ಸ್ಟಾಸಿಸ್' (stasis) ಎಂದು ಕರೆಯಲಾಗುತ್ತದೆ.
06:32 ಈ 'ಸ್ಟಾಸಿಸ್' ಅನ್ನು ತೆಗೆದುಹಾಕದಿದ್ದರೆ, ಇದು ಸ್ತನ ಅಂಗಾಂಶದ ಉರಿಯೂತಕ್ಕೆ (inflammation) ಕಾರಣವಾಗಬಹುದು. ಇದನ್ನು ಸೋಂಕುರಹಿತ ಮ್ಯಸ್ಟೈಟಿಸ್ (non-infective mastitis) ಎಂದು ಕರೆಯಲಾಗುತ್ತದೆ.
06:42 ಆದರೆ, ಕೆಲವೊಮ್ಮೆ ಸ್ತನವು ಬ್ಯಾಕ್ಟೀರಿಯಾದಿಂದ ಸೋಂಕಿಗೆ ಒಳಗಾಗುತ್ತದೆ ಮತ್ತು ಇದನ್ನು ಸೋಂಕಿನ ಮೊಲೆಯುರಿತ (infective mastitis) ಎಂದು ಕರೆಯಲಾಗುತ್ತದೆ.
06:51 ಈ ಪರಿಸ್ಥಿತಿಗಳಲ್ಲಿ - ಒಂದುವೇಳೆ ಬಿರುಕು, ಸ್ತನದ ಮೇಲಿದ್ದು ಮೊಲೆಯುರಿತಕ್ಕೆ ಚಿಕಿತ್ಸೆ ಮಾಡದಿದ್ದರೆ ಮತ್ತು ಚಿಕಿತ್ಸೆಯು ತಡವಾದರೆ,
06:56 ಆಗ ಬ್ಯಾಕ್ಟೀರಿಯಾ ಸುಲಭವಾಗಿ ಬಿರುಕಿನ ಮೂಲಕ ಪ್ರವೇಶಿಸುತ್ತದೆ.
07:06 ಸ್ತನದ ಹುಣ್ಣು, ಚಿಕಿತ್ಸೆ ಮಾಡದ ಮ್ಯಸ್ಟೈಟಿಸ್ ನ ಮುಂದುವರೆದ ಸ್ಥಿತಿ ಎನ್ನುವುದನ್ನು ಗಮನಿಸಿ.
07:11 ಈಗ, ಮೊಲೆಯುರಿತದ (ಮ್ಯಸ್ಟೈಟಿಸ್) ಕಾರಣಗಳನ್ನು ನಾವು ಚರ್ಚಿಸೋಣ.
07:15 ಮೊಲೆಯುರಿತದ ಅತಿಮುಖ್ಯ ಕಾರಣವು ವಿರಳವಾದ ಹಾಲುಣಿಸುವಿಕೆ ಆಗಿದೆ.
07:21 ಹಾಲುಣಿಸುವ ತಾಯಿಯು ಕೆಲಸ ಮಾಡುವ ಮಹಿಳೆಯಾಗಿದ್ದರೆ, ಆಗಾಗ್ಗೆ ಸ್ತನ್ಯಪಾನ ಮಾಡಿಸುವುದು ಅವಳಿಗೆ ಒಂದು ಸವಾಲು ಆಗುತ್ತದೆ.
07:27 ತಾಯಿ ಅಥವಾ ಮಗುವಿನ ಅನಾರೋಗ್ಯವು, ವಿರಳವಾದ ಸ್ತನ್ಯಪಾನಕ್ಕಾಗಿ ಇರುವ ಇನ್ನೊಂದು ಕಾರಣವಾಗಿದೆ.
07:33 ಎರಡನೆಯದು ಮೊಲೆತೊಟ್ಟಿನಿಂದ ಹಾಲುಣಿಸುವುದು ಆಗಿದೆ. ಇದರಲ್ಲಿ, ಮಗು ಸಂಪೂರ್ಣವಾಗಿ ಸ್ತನವನ್ನು ಖಾಲಿ ಮಾಡುವುದಿಲ್ಲ.
07:40 ಮೂರನೆಯದು ಹಾಲಿನ ಅತಿಯಾದ ಪೂರೈಕೆ ಆಗಿದೆ.
07:43 ನಾಲ್ಕನೇಯದು ಶೀಘ್ರವಾಗಿ ಸ್ತನ್ಯಪಾನವನ್ನು ಬಿಡಿಸುವುದು ಆಗಿದೆ. ಇದರಲ್ಲಿ, ಮಗು ಎದೆಹಾಲಿನ ಜೊತೆಗೆ ಇತರ ಆಹಾರಗಳನ್ನು ಸಹ ತಿನ್ನುತ್ತದೆ.
07:50 ಐದನೇಯದು, ಬಿಗಿಯಾದ ಬಟ್ಟೆ ಆಗಿದೆ - ತಾಯಿಯು ಬಿಗಿಯಾದ ಉಡುಪುಗಳನ್ನು ಬಳಸಿದರೆ, ವಿಶೇಷವಾಗಿ ರಾತ್ರಿಯಲ್ಲಿ ಬಿಗಿಯಾದ ಬ್ರಾ ಅನ್ನು ಧರಿಸಿದರೆ, ಅದು ಸ್ತನದ ಮೇಲೆ ಒತ್ತಡವನ್ನು ತರುತ್ತದೆ ಮತ್ತು ಹಾಲಿನ ನಾಳಗಳನ್ನು ನಿರ್ಬಂಧಿಸಬಹುದು.
08:03 ಆರನೆಯದು ತಾಯಿಗೆ ಸಂಬಂಧಿಸಿದ ಒತ್ತಡ - ತಾಯಿಯು ಯಾವುದೇ ಒತ್ತಡದ ಪರಿಸ್ಥಿತಿಯಲ್ಲಿ ಇದ್ದರೆ, ಅದು ಲೆಟ್-ಡೌನ್ ರಿಫ್ಲೆಕ್ಸ್ ನ ಮೇಲೆ ಪರಿಣಾಮ ಬೀರುತ್ತದೆ.
08:12 ಏಳನೆಯದು ಮೊಲೆತೊಟ್ಟುಗಳ ಬಿರುಕು- ಇದು ಬ್ಯಾಕ್ಟೀರಿಯಾ ಸ್ತನ ಅಂಗಾಂಶದಲ್ಲಿ ಪ್ರವೇಶಿಸಲು ದಾರಿ ಮಾಡಿಕೊಡುತ್ತದೆ ಮತ್ತು ಮೊಲೆಯುರಿತಕ್ಕೆ ಕಾರಣವಾಗಬಹುದು.
08:22 ಮೊಲೆಯುರಿತಕ್ಕಾಗಿ ಇರುವ ಚಿಕಿತ್ಸೆಯನ್ನು ನಾವು ನೋಡೋಣ.
08:26 ಮೊದಲು ಕಾರಣವನ್ನು ಗುರುತಿಸಲು ಪ್ರಯತ್ನಿಸಿ. ನಂತರ ಚಿಕಿತ್ಸೆಯನ್ನು ಆರಂಭಿಸಿ.
08:31 ತಾಯಿಯು ಹಾಲುಣಿಸುವ ಮೊದಲು ಬೆಚ್ಚಗಿನ ಕಾಂಪ್ರೆಸ್ ಗಳನ್ನು ಬಳಸಬೇಕು.
08:35 ಅಥವಾ ಬೆಚ್ಚಗಿನ ನೀರಿನ ಶವರ್ ಮಾಡಬೇಕು.
08:37 ಅವಳು ಮೊದಲು ಬಾಧಿತ ಸ್ತನದಿಂದ ಹಾಲುಣಿಸುವುದನ್ನು ಆರಂಭಿಸಬೇಕು.
08:42 ಇದರಿಂದ ನೋವು ಹೆಚ್ಚಾದರೆ ಅಥವಾ ಲೆಟ್-ಡೌನ್ ರಿಫ್ಲೆಕ್ಸ್ ನ ಮೇಲೆ ಪರಿಣಾಮವಾದರೆ, ಆಗ ಇನ್ನೊಂದು ಸ್ತನದಿಂದ ಆರಂಭಿಸಬೇಕು.
08:50 ನೆನಪಿಡಿ, ಮೇಲಿಂದಮೇಲೆ ಹಾಲುಣಿಸುವುದು ಅವಶ್ಯವಾಗಿದೆ.
08:55 ತೆರೆದ ಗಾಯವು ಮೊಲೆತೊಟ್ಟಿನ ಮೇಲೆ ಅಥವಾ ಅರಿಯೋಲಾದ ಮೇಲೆ ಇಲ್ಲದಿದ್ದರೆ, ಆಗ ತಾಯಿಯು ಬಾಧಿತ ಸ್ತನದಿಂದ ಹಾಲುಣಿಸಬಹುದು.
09:04 ನೆನಪಿಡಿ, ತಾಯಿಯು ಮೊಲೆಯುರಿತ ಇರುವ ಸ್ತನದಿಂದ ಹಾಲುಣಿಸುತ್ತಿರುವಾಗಲೆಲ್ಲ
09:09 ಮಗುವಿಗೆ ಸೋಂಕಿನ ಅಪಾಯವಿರುತ್ತದೆ. ಆದ್ದರಿಂದ ಅವಳು ಸೋಂಕಿನ ಚಿಹ್ನೆಗಳಿಗಾಗಿ ಮಗುವನ್ನು ಗಮನಿಸುತ್ತಿರಬೇಕು.
09:17 ಏಕೆಂದರೆ ಬಾಧಿತ ಸ್ತನದಿಂದ ಬರುವ ಎದೆ ಹಾಲು, ಹಲವು ಹಾನಿಕಾರಕ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ.
09:24 ಸ್ತನಗಳನ್ನು ಮಾಲೀಸು ಮಾಡುವುದರಿಂದ ಹಾಲಿನ ಪ್ರಮಾಣವು ಸುಧಾರಿಸಬಹುದು.
09:28 ಅದು ಬಾಧಿತ ಜಾಗದಿಂದ ಮೊಲೆತೊಟ್ಟಿನ ದಿಕ್ಕಿನಲ್ಲಿ ನಯವಾದ ಮಾಲೀಸು ಆಗಿರಬೇಕು.
09:34 ಮತ್ತು, ತಾಯಿಯು ಸಾಕಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು.
09:37 ರೋಗಲಕ್ಷಣಗಳು ತೀವ್ರವಾಗಿದ್ದರೆ, ಅವಳು ವೈದ್ಯರನ್ನು ಸಂಪರ್ಕಿಸಬೇಕು.
09:40 Breast abscess ಅನ್ನು (ಬ್ರೆಸ್ಟ್ ಆಬ್ಸೆಸ್- ಸ್ತನದ ಹುಣ್ಣು) ಬರಿದು ಮಾಡಲು ಶಸ್ತ್ರಚಿಕಿತ್ಸೆಯ ಮತ್ತು 'ಆಂಟಿಬಯೋಟಿಕ್' ಗಳ ಅಗತ್ಯವಿರುತ್ತದೆ.
09:47 ಇವುಗಳಲ್ಲದೆ, ತಾಯಿಯು ತನ್ನ ದೇಹದ ವಿಶ್ರಾಂತಿಗಾಗಿ ಹಾಗೂ ಆಳವಾಗಿ ಮತ್ತು ಸಮವಾಗಿ ಉಸಿರಾಡಲು ವಿಶೇಷ ಪ್ರಯತ್ನ ಮಾಡಬೇಕು.
09:55 ಹಿತವಾದ ಸಂಗೀತವನ್ನು ಕೇಳುವುದು ಮತ್ತು ತನ್ನ ಮಗುವಿನ ಬಗ್ಗೆ ವಿಚಾರ ಮಾಡುವುದು ಲೆಟ್-ಡೌನ್ ರಿಫ್ಲೆಕ್ಸ್ ಅನ್ನು ಆರಂಭಿಸಲು ಸಹಾಯ ಮಾಡುತ್ತದೆ.
10:04 ನೆನಪಿನಲ್ಲಿಡಿ- ಮೊಲೆಯುರಿತವನ್ನು ತಡೆಹಿಡಿಯಲು, ಸರಿಯಾದ ಲ್ಯಾಚಿಂಗ್ ಅವಶ್ಯವಾಗಿದೆ.
10:09 ಅದು ಬ್ಲಾಕ್ ಆದ ನಾಳವನ್ನು ತಡೆಯುತ್ತದೆ ಮತ್ತು ಮಗುವಿಗೆ ಸಾಕಷ್ಟು ಹಾಲು ಸಿಗುತ್ತದೆ.
10:14 ಸ್ತನದ ಈ ಎಲ್ಲ ಪರಿಸ್ಥಿತಿಗಳನ್ನು ತಡೆಹಿಡಿಯಲು, ಸರಿಯಾದ ಹೊಂದಿಸುವಿಕೆ ಮತ್ತು ಮಗುವನ್ನು ಸರಿಯಾಗಿ ಹಿಡಿದುಕೊಳ್ಳುವುದು ಹಾಗೂ ಆಗಾಗ್ಗೆ ಹಾಲುಣಿಸುವುದು ಅವಶ್ಯವಾಗಿದೆ.
10:24 ಇಲ್ಲಿಗೆ ನಾವು, ಹಾಲುಣಿಸುವ ತಾಯಂದಿರ ಸ್ತನಗಳ ಪರಿಸ್ಥಿತಿಯ ಬಗ್ಗೆ ಇರುವ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
10:31 ಈ ಟ್ಯುಟೋರಿಯಲ್ ನಲ್ಲಿ, ನಾವು ಬ್ರೆಸ್ಟ್ ಎಂಗಾರ್ಜ್ಮೆಂಟ್ ಮತ್ತು ಮೊಲೆಯುರಿತ ಇವುಗಳ ಬಗ್ಗೆ ತಿಳಿದುಕೊಂಡೆವು.
10:37 ಈ ಟ್ಯುಟೋರಿಯಲ್, Spoken Tutorial Project, IIT Bombay ಇವರ ಕೊಡುಗೆಯಾಗಿದೆ.
10:43 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD ಮೂಲಕ ಭಾರತ ಸರಕಾರದ ಅನುದಾನವನ್ನು ಪಡೆದಿದೆ.

ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.

10:56 ಈ ಟ್ಯುಟೋರಿಯಲ್, WHEELS Global Foundation ನ ಉದಾರ ಕೊಡುಗೆಯಿಂದ ಭಾಗಶಃ ಅನುದಾನವನ್ನು ಪಡೆದಿದ್ದು,
11:03 Maa aur Shishu Poshan (ಮಾ ಔರ್ ಶಿಶು ಪೋಷಣ್) ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
11:07 ಈ ಟ್ಯುಟೋರಿಯಲ್ ನ ಡೊಮೇನ್ ರಿವ್ಯೂ ಮಾಡಿದವರು, Dr. ರೂಪಲ್ ದಲಾಲ್, MD ಪೀಡಿಯಾಟ್ರಿಕ್ಸ್ ಮತ್ತು Dr. ತರು ಜಿಂದಾಲ್, MS. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು.
11:20 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Debosmita, Sandhya.np14