Difference between revisions of "Koha-Library-Management-System/C2/Add-Budget-and-Allocate-Funds/Kannada"

From Script | Spoken-Tutorial
Jump to: navigation, search
Line 226: Line 226:
 
| ಈಗ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ, ಇಲ್ಲಿ ಹೇಳಿದಂತಹ ವಿವರಗಳನ್ನು ತುಂಬಿ:
 
| ಈಗ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ, ಇಲ್ಲಿ ಹೇಳಿದಂತಹ ವಿವರಗಳನ್ನು ತುಂಬಿ:
 
'''Fund code: Books'''
 
'''Fund code: Books'''
 +
 
'''Fund name: Books fund'''.
 
'''Fund name: Books fund'''.
  

Revision as of 12:44, 20 March 2019

Time Narration
00:01 Add a Budget and allocate Funds ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು -

ಒಂದು Budget ಅನ್ನು (ಬಜೆಟ್) ಸೇರಿಸಲು,

ಬಜೆಟ್ ನ ನಕಲು ತಯಾರಿಸಲು ಮತ್ತು

Funds ಅನ್ನು ನಿಗದಿಪಡಿಸಲು ಕಲಿಯುವೆವು.

00:19 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04 ಮತ್ತು

Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ.

00:33 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು.
00:39 ಇದನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು.
00:45 Koha ದಲ್ಲಿ, Admin ಆಕ್ಸೆಸ್ ಅನ್ನು (access) ಸಹ ನೀವು ಹೊಂದಿರಬೇಕು.
00:49 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ.
00:56 ಈಗ ನಾವು ಒಂದು Budget ಅನ್ನು ಸೇರಿಸಲು ಕಲಿಯೋಣ.
01:01 ನಾವು ಪ್ರಾರಂಭಿಸುವ ಮೊದಲು, ನಾವು 'ಬಜೆಟ್' ಎಂದರೇನು ಅದನ್ನು ತಿಳಿಯೋಣ.

'ಆ್ಯಕ್ವೈಸಿಶನ್ಸ್' ಗೆ ಸಂಬಂಧಿಸಿದ, ಲೆಕ್ಕಪತ್ರದ ವ್ಯಾಲ್ಯೂಗಳನ್ನು ಟ್ರ್ಯಾಕ್ ಮಾಡಲು ಬಜೆಟ್ ಗಳನ್ನು ಬಳಸಲಾಗುತ್ತದೆ.

01:13 ಒಂದು ಬಂಡವಾಳವನ್ನು (fund) ಕ್ರಿಯೇಟ್ ಮಾಡುವ ಮೊದಲು, 'ಬಜೆಟ್' ಅನ್ನು ವ್ಯಾಖ್ಯಾನಿಸಬೇಕು.
01:18 ಉದಾಹರಣೆಗೆ - ಪ್ರಸ್ತುತ ವರ್ಷ 2017 ಗಾಗಿ ಬಜೆಟ್ ಅನ್ನು ಕ್ರಿಯೇಟ್ ಮಾಡಿ.
01:25 ಅದನ್ನು Books, Journals ಮತ್ತು/ಅಥವಾ Databases ಗಳಂತಹ ವಿವಿಧ ಭಾಗಗಳಿಗಾಗಿ Funds ಗಳಲ್ಲಿ ವಿಭಾಗಿಸಿ.
01:38 ದಯವಿಟ್ಟು ಗಮನಿಸಿ, 'ಬಜೆಟ್' ಗಳನ್ನು -

ಆರಂಭದಿಂದ ಅಥವಾ ಹಿಂದಿನ ವರ್ಷಗಳ ಯಾವುದಾದರೊಂದು ಬಜೆಟ್ ಅನ್ನು ನಕಲು ಮಾಡುವ ಮೂಲಕ

01:50 ಅಥವಾ, ಹಿಂದಿನ ವರ್ಷದ 'ಬಜೆಟ್' ಅನ್ನು ನಕಲು ಮಾಡುವ ಮೂಲಕ ಅಥವಾ ಹಿಂದಿನ ವರ್ಷದ 'ಬಜೆಟ್' ಅನ್ನು ಮುಚ್ಚುವ ಮೂಲಕ ಕ್ರಿಯೇಟ್ ಮಾಡಬಹುದು
02:00 ಹಿಂದಿನ ಟ್ಯುಟೋರಿಯಲ್ ಗಳಲ್ಲಿ ಹೇಳಿದ ಹಾಗೆ, Superlibrarian username Bella ಮತ್ತು ಅವಳ ಪಾಸ್ವರ್ಡ್ ನೊಂದಿಗೆ ಲಾಗ್-ಇನ್ ಮಾಡಿ.
02:10 'Koha' Home ಪೇಜ್ ನಲ್ಲಿ, Acquisitions ಮೇಲೆ ಕ್ಲಿಕ್ ಮಾಡಿ.
02:16 ಎಡಭಾಗದಲ್ಲಿರುವ ಆಯ್ಕೆಗಳಿಂದ Budgets ಮೇಲೆ ಕ್ಲಿಕ್ ಮಾಡಿ.
02:21 ಈಗ, New budget ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
02:26 ಮೊದಲು, ನಾವು ಈ Budget ಗಾಗಿ ಅವಧಿಯನ್ನು ಆರಿಸಿಕೊಳ್ಳಬೇಕು.
02:31 ಶೈಕ್ಷಣಿಕ ವರ್ಷ, ಹಣಕಾಸಿನ ವರ್ಷ ಅಥವಾ 'ಕ್ವಾರ್ಟರ್ ಇಯರ್' ಇತ್ಯಾದಿಗಳಿಗಾಗಿ ಬಜೆಟ್ ಅನ್ನು ತಯಾರಿಸಬಹುದು.
02:39 ನಾನು ಹಣಕಾಸಿನ ವರ್ಷಕ್ಕಾಗಿ ಬಜೆಟ್ ಅನ್ನು ತಯಾರಿಸುತ್ತೇನೆ.
02:43 Start ಮತ್ತು End dates ಗಳನ್ನು ಆರಿಸಿಕೊಳ್ಳುತ್ತೇನೆ.
02:48 ನಾನು -

Start date: ಅನ್ನು 04/01/2016 (MM/DD/YYYY) ಎಂದು,

End date: ಅನ್ನು 03/31/2017 (MM/DD/YYYY) ಎಂದು ಆಯ್ಕೆಮಾಡುವೆನು.

03:07 ನಂತರ ನಾವು ಬಜೆಟ್ ಗಾಗಿ description ಅನ್ನು ಕೊಡಬೇಕು.
03:11 ಆರ್ಡರ್ ಮಾಡುವ ಸಮಯದಲ್ಲಿ, ಇದನ್ನು ನಂತರ ಗುರುತಿಸಲು, ಇದು ನಮಗೆ ಸಹಾಯ ಮಾಡುತ್ತದೆ.
03:17 ಇಲ್ಲಿ, ನಾನು ಹೀಗೆ ಟೈಪ್ ಮಾಡುವೆನು: Spoken Tutorial Library 2016-2017 Phase I.
03:26 Amount ಬಾಕ್ಸ್ ನಲ್ಲಿ, ಈ ನಿರ್ದಿಷ್ಟ ಬಜೆಟ್ ಗಾಗಿ ನಾವು ಮೊತ್ತವನ್ನು ನಮೂದಿಸಬೇಕಾಗಿದೆ.
03:32 ಇದು, ಕೊಟ್ಟಿರುವ ಅವಧಿಯಲ್ಲಿ Spoken Tutorial Library ಗಾಗಿ ನಾವು ಖರ್ಚು ಮಾಡಬೇಕೆಂದಿರುವ ಒಟ್ಟು ಮೊತ್ತ ಆಗಿದೆ.
03:41 ಈ ಫೀಲ್ಡ್, ಅಂಕಿಗಳು ಮತ್ತು ದಶಮಾಂಶಗಳನ್ನು ಮಾತ್ರ ಸ್ವೀಕರಿಸುತ್ತದೆ ಎಂಬುದನ್ನು ಗಮನಿಸಿ.
03:47 ವಿಶೇಷ ಅಕ್ಷರಗಳು ಮತ್ತು ಚಿಹ್ನೆಗಳಿಗೆ ಅನುಮತಿ ಇಲ್ಲ.
03:51 ನಾವು ನಮೂದಿಸುವ Amount, ಆ ಲೈಬ್ರರಿಗಾಗಿ ಅನುಮೋದಿಸಲಾದ 'ಬಜೆಟ್' ಪ್ರಕಾರ ಇರಬೇಕು.
03:57 ಇಲ್ಲಿ, ನಾನು Rs. 5,00,000/- ಅನ್ನು Amount ಎಂದು ಸೇರಿಸುವೆನು.
04:03 ನಂತರ, Make a budget active ಮೇಲೆ ಕ್ಲಿಕ್ ಮಾಡಿ.
04:08 ಹೀಗೆ ಮಾಡಿದಾಗ, Acquisitions ಮೊಡ್ಯೂಲ್ ನಲ್ಲಿ, orders ಅನ್ನು ಕೊಡುವಾಗ, ಈ 'ಬಜೆಟ್', ಬಳಸಲು ಯೊಗ್ಯವಾಗಿರುತ್ತದೆ.
04:17 ಮತ್ತು, Budget End date ನ ನಂತರ order ಕೊಟ್ಟರೂ ಸಹ ಇದು ಹೀಗೇ ಉಳಿಯುತ್ತದೆ.
04:24 ಹಿಂದಿನ ವರ್ಷದ ಬಜೆಟ್ ನಲ್ಲಿ ಇರಿಸಲಾದ ಆರ್ಡರ್ ಗಳನ್ನು ದಾಖಲಿಸಲು ಸಹ ಇದು ನಮಗೆ ಅನುಮತಿಸುತ್ತದೆ.
04:31 ಮುಂದಿನದು Lock budget ಗಾಗಿ ಚೆಕ್-ಬಾಕ್ಸ್ ಆಗಿದೆ.
04:35 ಎಂದರೆ, library staff ನಿಂದ, Funds ಅನ್ನು ನಂತರ ಬದಲಾಯಿಸಲು ಸಾಧ್ಯವಿಲ್ಲ.
04:41 ನಾನು ಈ ಚೆಕ್-ಬಾಕ್ಸ್ ಅನ್ನು ಖಾಲಿ ಬಿಡುತ್ತೇನೆ.
04:45 ಎಲ್ಲ ನಮೂದುಗಳನ್ನು ಸೇರಿಸಿದ ನಂತರ, ಪೇಜ್ ನ ಕೆಳಗಡೆ ಇರುವ Save ಬಟನ್ ಮೇಲೆ ಕ್ಲಿಕ್ ಮಾಡಿ.
04:52 Budgets administration ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
04:57 ಇಲ್ಲಿ, +New Budget ಪೇಜ್ ನಲ್ಲಿ, ಮೊದಲು ಸೇರಿಸಲಾದ ವಿವರಗಳನ್ನು ನಾವು ನೋಡಬಹುದು.
05:04 ಈ ಪೇಜ್ ನಲ್ಲಿ -
05:08 Budget name ಟ್ಯಾಬ್ ನ ಅಡಿಯಲ್ಲಿ ವಿವರಣೆ,

Start date:,

End date:,

Total amount:,

Actions: ಈ ವಿವರಗಳು ಕಂಡುಬರುತ್ತವೆ.

05:19 ಅಗತ್ಯಕ್ಕೆ ಅನುಸಾರವಾಗಿ, ನಾವು ಒಂದು ನಿರ್ದಿಷ್ಟ ಬಜೆಟ್ ಅನ್ನು ಎಡಿಟ್, ಡಿಲೀಟ್ ಅಥವಾ ನಕಲು ಮಾಡಬಹುದು.
05:25 ಇದನ್ನು ಮಾಡಲು, ಆ Budget name ನ ಬಲತುದಿಯಲ್ಲಿ ಇರುವ Actions ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
05:33 ಡ್ರಾಪ್-ಡೌನ್ ನಿಂದ:

Edit,

Delete,

Duplicate,

Close ಅಥವಾ

Add fund ಇದರಲ್ಲಿಯ ಯಾವುದೇ ಆಯ್ಕೆಗಳನ್ನು ಆರಿಸಿಕೊಳ್ಳಿ.

05:44 Fiscal year ಗಾಗಿ, ಬಂಡವಾಳವನ್ನು (funds) ಹೇಗೆ ನಿಯೋಜಿಸುವುದು ಎಂದು ನಾವು ಕಲಿಯೋಣ.
05:49 ಇದೇ ಟೇಬಲ್ ನಲ್ಲಿ, ಬಂಡವಾಳವನ್ನು ನಿಗದಿಪಡಿಸಬೇಕಾಗಿರುವ ನಿರ್ದಿಷ್ಟ Budget Name ನ ಮೇಲೆ ಕ್ಲಿಕ್ ಮಾಡಿ.
05:56 ನಾನು Spoken Tutorial Library 2016-2017 Phase 1 ಮೇಲೆ ಕ್ಲಿಕ್ ಮಾಡುವೆನು.
06:05 Funds for 'Spoken Tutorial Library 2016-2017 Phase 1' ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
06:14 Funds for 'Spoken Tutorial Library 2016-2017 Phase 1’ ನ ಮೇಲ್ಗಡೆಯಲ್ಲಿ, New ಎಂಬ ಟ್ಯಾಬ್ ಅನ್ನು ಗುರುತಿಸಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
06:26 ಡ್ರಾಪ್-ಡೌನ್ ನಿಂದ, New fund for Spoken Tutorial Library 2016-2017 Phase 1 ಅನ್ನು ಆಯ್ಕೆಮಾಡಿ.
06:36 ಈಗ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ, ಇಲ್ಲಿ ಹೇಳಿದಂತಹ ವಿವರಗಳನ್ನು ತುಂಬಿ:

Fund code: Books

Fund name: Books fund.

06:47 Amount: ಅನ್ನು 25000 ಎಂದು ನಮೂದಿಸಿ.

Warning at (%): 10

06:55 Warning at (amount): ಗಾಗಿ, ನಾನು ಈಗಾಗಲೇ Warning at (%) ಅನ್ನು ತುಂಬಿರುವುದರಿಂದ, ಈ ಫೀಲ್ಡ್ ಅನ್ನು ನಾನು ಹಾಗೇ ಬಿಡುತ್ತೇನೆ.
07:02 Owner: ಮತ್ತು Users ಫೀಲ್ಡ್ ಗಳನ್ನು ಸಹ ನಾನು ಹಾಗೇ ಬಿಡುತ್ತೇನೆ.
07:08 Library: ಗಾಗಿ, ಡ್ರಾಪ್-ಡೌನ್ ನಿಂದ Spoken Tutorial Library ಅನ್ನು ಆಯ್ಕೆಮಾಡಿ.
07:14 ನಾನು Restrict access to: ಅನ್ನು ಇದ್ದ ಹಾಗೇ ಇಡುತ್ತೇನೆ.
07:19 Statistic 1 done on ಮತ್ತು Statistic 2 done on: ಗಳನ್ನು ಖಾಲಿ ಇಡುತ್ತೇನೆ.
07:27 ಎಲ್ಲ ವಿವರಗಳನ್ನು ತುಂಬಿದ ನಂತರ, ಪೇಜ್ ನ ಕೆಳಗಡೆ ಇರುವ Submit ಬಟನ್ ಮೇಲೆ ಕ್ಲಿಕ್ ಮಾಡಿ.
07:34 ಒಂದು ನಿರ್ದಿಷ್ಟ ಲೈಬ್ರರಿಗೆ ಸಂಬಂಧಿಸಿದ Fund ನ ಹಂಚಿಕೆಯ ಎಲ್ಲಾ ವಿವರಗಳು, ಈಗ ಟೇಬಲ್ ನ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ.
07:42 ಎಡಭಾಗದಲ್ಲಿರುವ ಆಯ್ಕೆಗಳಿಂದ, Budgets ಮೇಲೆ ಕ್ಲಿಕ್ ಮಾಡಿ.
07:47 ಬಜೆಟ್ ಅನ್ನು ಹೇಗೆ ನಕಲು ಮಾಡಬೇಕೆಂದು ನಾನು ಈಗ ತೋರಿಸುತ್ತೇನೆ.
07:51 ಆದರೆ ಇದಕ್ಕೂ ಮುಂಚೆ, ನಾವು ಬಜೆಟ್ ನ ನಕಲು ಏಕೆ ಮಾಡಬೇಕೆಂದು ತಿಳಿಯಬೇಕು.
07:57 ಒಂದುವೇಳೆ, ಮುಂದಿನ 'ಹಣಕಾಸಿನ ವರ್ಷ' ಕ್ಕಾಗಿ ಬಜೆಟ್ ಮೊತ್ತ ಮತ್ತು ಫಂಡ್ಸ್ ಮೊತ್ತಗಳೆರಡೂ ಒಂದೇ ಆಗಿದ್ದರೆ, ಆ ಸಂದರ್ಭದಲ್ಲಿ ನಾವು 'ಬಜೆಟ್' ಅನ್ನು ಹಾಗೇ ನಕಲು ಮಾಡಬಹುದು.
08:08 ಇದು 'ಲೈಬ್ರರಿ ಸ್ಟಾಫ್' ಗೆ ಬಹಳಷ್ಟು ಸಮಯ ಮತ್ತು ಶ್ರಮವನ್ನು ಉಳಿಸಲು ಸಹಾಯ ಮಾಡುತ್ತದೆ.
08:14 ಹೀಗೆ ಮಾಡಲು, ಆ Budget name ನ ಬಲತುದಿಯಲ್ಲಿರುವ Actions ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
08:22 ಡ್ರಾಪ್-ಡೌನ್ ನಿಂದ, Duplicate ಅನ್ನು ಆಯ್ಕೆಮಾಡಿ.
08:26 Duplicate Budget ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
08:30 ಹೊಸ Start date ಮತ್ತು End date ಗಳನ್ನು ನಮೂದಿಸಿ. ನಾನು ಮುಂದಿನ ವರ್ಷದ ಬಜೆಟ್ ಗಾಗಿ -
08:39 Start date: ಅನ್ನು 04/01/2017 (MM/DD/YYYY) ಎಂದು,

End date: ಅನ್ನು 03/31/2018 (MM/DD/YYYY) ಎಂದು ನಮೂದಿಸುವೆನು.

08:53 ಆಮೇಲೆ Description ಇದೆ.
08:56 Descriptionವಿವರಗಳು, ನಂತರ ಒಂದು ನಿರ್ದಿಷ್ಟವಾದ 'ಬಜೆಟ್' ನೊಂದಿಗೆ ಸುಲಭವಾಗಿ ಗುರುತಿಸಲು ಸಾಧ್ಯವಾಗುವಂತೆ ಇರಬೇಕು ಎಂಬುದನ್ನು ಗಮನಿಸಿ.

'ಕೋಹಾ', ಡೀಫಾಲ್ಟ್ ಆಗಿ, ಹಿಂದೆ ನಮೂದಿಸಿದ ವಿವರಣೆಯನ್ನು ತೋರಿಸುತ್ತದೆ.

09:10 ಆದರೆ ನಾನು, ಅದನ್ನು Spoken Tutorial Library 2017-2018, Phase II ಎಂದು ರಿ-ನೇಮ್ ಮಾಡುತ್ತೇನೆ.

ನಿಮ್ಮ ಲೈಬ್ರರಿಗೆ ಸಂಬಂಧಿಸಿದಂತೆ ಯಾವುದೇ ಹೆಸರನ್ನು ನೀವು ಕೊಡಬಹುದು.

09:24 Change amounts by: ಎಂಬ ಫೀಲ್ಡ್ ನಲ್ಲಿ, ಹಿಂದಿನ ವರ್ಷದ 'ಬಜೆಟ್' ನಿಂದ ತೆಗೆದುಕೊಳ್ಳಬೇಕಾದ ಪರ್ಸೆಂಟೇಜ್ ಅನ್ನು ನಮೂದಿಸಿ. ಅಥವಾ, ಅದೇ ಮೊತ್ತವನ್ನು ಮುಂದುವರಿಸಿ.
09:38 ನೆನಪಿಸಿಕೊಳ್ಳಿ, Spoken Tutorial Library ಗಾಗಿ Rs 5,00,000/- ಮೊತ್ತವನ್ನು ಅನುಮೋದಿಸಲಾಗಿತ್ತು.
09:45 ಆದ್ದರಿಂದ, ನಾನು Rs 1,00,000/- ಮೊತ್ತವನ್ನು ತೆಗೆದುಕೊಳ್ಳಲು, -20% (minus 20 percent) ಎಂದು ನಮೂದಿಸುವೆನು.
09:54 ಮುಂದಿನ ಫೀಲ್ಡ್ If amounts changed, round to a multiple of: ಎಂದು ಇದೆ. ನಾನು ಈ ಫೀಲ್ಡ್ ಅನ್ನು ಖಾಲಿ ಬಿಡುತ್ತೇನೆ.
10:03 ಆನಂತರ, ಇಲ್ಲಿ Mark the original Budget as inactive ಗಾಗಿ ಚೆಕ್-ಬಾಕ್ಸ್ ಇದೆ.
10:10 ಹೀಗೇ ಮಾಡಿದಾಗ, ಮೂಲ ಬಜೆಟ್ ಅನ್ನು ಇನ್ನು ಮುಂದೆ ಬಳಸಲು ಸಾಧ್ಯವಿಲ್ಲ. ಮತ್ತೊಮ್ಮೆ, ನಾನು ಈ ಬಾಕ್ಸ್ ಅನ್ನು ಖಾಲಿ ಬಿಡುತ್ತೇನೆ.
10:19 ಕೊನೆಯದಾಗಿ, ಇಲ್ಲಿ Set all funds to zero ಗಾಗಿ ಚೆಕ್-ಬಾಕ್ಸ್ ಇದೆ.
10:25 ಹೊಸ ಬಜೆಟ್, ಹಿಂದಿನ ಬಜೆಟ್ ನ ಹಾಗೇ 'ಫಂಡ್ ಸ್ಟ್ರಕ್ಚರ್' ಗಳನ್ನು (Fund structures) ಹೊಂದಿರಬೇಕು ಎಂದು ನೀವು ಬಯಸಿದರೆ, ಈ ಬಾಕ್ಸ್ ಅನ್ನು ಚೆಕ್ ಮಾಡಿ.
10:32 ಆದರೆ ದಯವಿಟ್ಟು ಗಮನಿಸಿ- ನೀವು Fund ನಲ್ಲಿ ಹಣವನ್ನು ನಮೂದಿಸುವವರೆಗೆ, ಯಾವುದೇ ಹಂಚಿಕೆಗಳನ್ನು ಅನುಮತಿಸಲಾಗುವುದಿಲ್ಲ. ನಾನು ಸಧ್ಯಕ್ಕೆ ಇದನ್ನು ಸಹ ಖಾಲಿ ಬಿಡುತ್ತೇನೆ.
10:44 ಎಲ್ಲಾ ವಿವರಗಳನ್ನು ನಮೂದಿಸಿದ ನಂತರ, ಪೇಜ್ ನ ಕೆಳಭಾಗದಲ್ಲಿರುವ Save changes ಮೇಲೆ ಕ್ಲಿಕ್ ಮಾಡಿ.
10:52 Spoken Tutorial Library 2017-2018 Phase II ಎಂಬ ನಕಲು ಬಜೆಟ್ ಗಾಗಿ ನಮೂದಿಸಲಾದ ವಿವರಗಳು, Budgets administration ಪೇಜ್ ನಲ್ಲಿ ಕಾಣಿಸಿಕೊಳ್ಳುತ್ತವೆ.
11:04 ಈಗ ನೀವು Koha Superlibrarian ಅಕೌಂಟ್ ನಿಂದ ಲಾಗ್-ಔಟ್ ಮಾಡಬಹುದು.
11:09 ಇದನ್ನು ಮಾಡಲು, ಮೊದಲು ಮೇಲಿನ ಬಲಮೂಲೆಗೆ ಹೋಗಿ. Spoken Tutorial Library ಮೇಲೆ ಕ್ಲಿಕ್ ಮಾಡಿ.

ಆಮೇಲೆ, ಡ್ರಾಪ್-ಡೌನ್ ನಿಂದ, Log out ಅನ್ನು ಆಯ್ಕೆಮಾಡಿ.

11:21 ಸಂಕ್ಷಿಪ್ತವಾಗಿ-

ಈ ಟ್ಯುಟೋರಿಯಲ್ ನಲ್ಲಿ ನಾವು - ಒಂದು Budget ಅನ್ನು ಸೇರಿಸಲು, Budget ನ ನಕಲು ತಯಾರಿಸಲು ಮತ್ತು Funds ಅನ್ನು ನಿಗದಿಮಾಡಲು ಕಲಿತಿದ್ದೇವೆ.

11:34 Budget ಗಾಗಿ ಅಸೈನ್ಮೆಂಟ್:

Rs.50 Lakhs ಅನ್ನು ನಿಗದಿಪಡಿಸಿದ ಬಜೆಟ್ ನೊಂದಿಗೆ, Financial year ಗಾಗಿ ಒಂದು ಹೊಸ Budget ಅನ್ನು ಸೇರಿಸಿ.

11:44 Funds ಅನ್ನು ನಿಗದಿಪಡಿಸುವುದಕ್ಕಾಗಿ ಅಸೈನ್ಮೆಂಟ್:

Non-print materialಗಾಗಿ, Rs 20 Lakhs ನ ಫಂಡ್ಸ್ ಅನ್ನು ನಿಗದಿಪಡಿಸಿ.

11:53 ಈ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ.
12:01 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
12:09 ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.
12:13 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.

ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ.

12:25 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14