Difference between revisions of "Xfig/C2/Simple-block-diagram/Kannada"
From Script | Spoken-Tutorial
Sandhya.np14 (Talk | contribs) (Created page with "{|Border=1 |'''Timing''' |'''Narration''' |- |00:00 | '''Xfig''' ಅನ್ನು ಬಳಸಿ, '''block diagram creation''' ನ ಬಗೆಗಿನ ಈ 'ಸ್ಪೋಕನ್...") |
Sandhya.np14 (Talk | contribs) |
||
Line 281: | Line 281: | ||
|- | |- | ||
|08:21 | |08:21 | ||
− | |ಬಾಕ್ಸ್ ನ ಮಧ್ಯಭಾಗದಲ್ಲಿ ಕ್ಲಿಕ್ | + | |ಬಾಕ್ಸ್ ನ ಮಧ್ಯಭಾಗದಲ್ಲಿ ಕ್ಲಿಕ್ ಮಾಡೋಣ. |
|- | |- | ||
|08:29 | |08:29 |
Revision as of 17:43, 30 January 2019
Timing | Narration |
00:00 | Xfig ಅನ್ನು ಬಳಸಿ, block diagram creation ನ ಬಗೆಗಿನ ಈ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, ಕೆಳಗೆ ಕೊಟ್ಟಿರುವಂತಹ ಬ್ಲಾಕ್ ಡೈಗ್ರಾಮ್ ಗಳನ್ನು ಹೇಗೆ ರಚಿಸಬೇಕೆಂದು ವಿವರಿಸಲಿದ್ದೇವೆ. |
00:17 | ಇದಕ್ಕೆ ಬೇಕಾಗಿರುವ ಟೂಲ್ ಗಳನ್ನು ನಾವು ನೋಡೋಣ: |
00:19 | ನಾನು Xfig ಎಂಬ ಒಂದು ಬ್ಲಾಕ್-ಡೈಗ್ರಾಮ್ ಮ್ಯಾನಿಪುಲೇಶನ್ ಟೂಲ್ ಅನ್ನು ಬಳಸುವೆನು. |
00:24 | ನಾನು 3.2 ನೇ ಆವೃತ್ತಿ, patch level 5 ಅನ್ನು ಬಳಸುತ್ತಿದ್ದೇನೆ. |
00:29 | ನಾನು 'ಟರ್ಮಿನಲ್' ಮತ್ತು 'pdf' ಬ್ರೌಸರ್ ಅನ್ನು ಸಹ ಬಳಸಲಿದ್ದೇನೆ. |
00:37 | ನಾನು Mac OS X ನಲ್ಲಿ ಈ ಟ್ಯುಟೋರಿಯಲ್ ಅನ್ನು ತಯಾರಿಸುತ್ತಿದ್ದೇನೆ. |
00:41 | Xfig, Linux ಮತ್ತು Windows ಗಳಲ್ಲಿ ಸಹ ಕೆಲಸ ಮಾಡುತ್ತದೆ. |
00:45 | ಲಿನಕ್ಸ್ ನಲ್ಲಿ ಇನ್ಸ್ಟಾಲ್ ಮಾಡುವುದು ಎಲ್ಲಕ್ಕಿಂತ ಸುಲಭವಾಗಿದೆ. |
00:50 | Xfig ನ್ನು ಬಳಸುವ ರೀತಿಯು, ಮೂರರಲ್ಲೂ ಒಂದೇ ರೀತಿಯಾಗಿದೆ. |
00:56 | Xfig ಗಾಗಿ, ಮೂರು ಬಟನ್ ಗಳುಳ್ಳ ಮೌಸ್ ಅನ್ನು ಬಳಸುವುದನ್ನು ಶಿಫಾರಸು ಮಾಡಲಾಗಿದೆ. |
01:00 | ಆದರೆ, ಈ ಕೆಲಸಕ್ಕಾಗಿ ಒಂದು ಅಥವಾ ಎರಡು ಬಟನ್ ಗಳಿರುವ ಮೌಸ್ ಅನ್ನು ಸಹ ಕಾನ್ಫಿಗರ್ ಮಾಡಬಹುದು. |
01:07 | Xfig ಗಾಗಿ 'ಯೂಸರ್ ಮ್ಯಾನ್ಯುವಲ್' (ಬಳಕೆದಾರರ ಕೈಪಿಡಿ), ವೆಬ್ ನಲ್ಲಿ ಉಪಲಭ್ಯವಿದೆ. |
01:16 | ನಾವು ಅದನ್ನು ನೋಡೋಣ. ಈ ಪೇಜ್ ನಲ್ಲಿ, Xfig ನ ಬಗ್ಗೆ ಪ್ರಸ್ತಾವನೆಯನ್ನು ಕಾಣಬಹುದು. |
01:23 | ಈ ಮ್ಯಾನ್ಯುವಲ್ ನ Table of Contents ಅನ್ನು ನಾವಿಲ್ಲಿ ಕಾಣಬಹುದು. |
01:28 | ಇದರ ಮೇಲೆ ಕ್ಲಿಕ್ ಮಾಡೋಣ. |
01:31 | ಇಲ್ಲಿ, Xfig ನ್ನು ರಚಿಸಿದ ಜನರ ವಿವರಣೆಯನ್ನು ನಾವು ನೋಡಬಹುದು. |
01:36 | ನಾವು ಈ ಪೇಜ್ ಅನ್ನು ನೋಡೋಣ. |
01:40 | ನಾನೀಗ ಈ ಟ್ಯುಟೋರಿಯಲ್ ಗಾಗಿ, 'ಸ್ಕ್ರೀನ್ ಕಾನ್ಫಿಗರೇಶನ್' ಅನ್ನು ವಿವರಿಸಲಿದ್ದೇನೆ. |
01:46 | ಇದು ಸ್ಲೈಡ್ ಗಳು, Xfig, ಇಂಟರ್ನೆಟ್ ಬ್ರೌಸರ್-ಫೈರ್-ಫಾಕ್ಸ್ ಮತ್ತು ಟರ್ಮಿನಲ್ ಗಳನ್ನು ಹೊಂದಿದೆ. |
01:58 | ಮ್ಯಾಕ್ ನಲ್ಲಿ Xfig ನ್ನು ಆರಂಭಿಸಲು, ನಾನು ಈ ಕಮಾಂಡ್ ಅನ್ನು ಬಳಸಿದ್ದೇನೆ. |
02:04 | ಒಂದರಿಂದ ಇನ್ನೊಂದಕ್ಕೆ ಸುಲಭವಾಗಿ ಬದಲಾಯಿಸಲು ಸಾಧ್ಯವಾಗುವಂತೆ, ಇವುಗಳನ್ನು ಒಂದರ ಮೇಲೊಂದರಂತೆ ಜೋಡಿಸಲಾಗಿದೆ. |
02:10 | ಕೇಳುಗರು ಬದಲಾವಣೆಯನ್ನು ಸುಲಭವಾಗಿ ನೋಡಬಹುದು, ಊಹಿಸಬೇಕಾಗಿಲ್ಲ. |
02:17 | Xfig ನೊಂದಿಗೆ ಆರಂಭಿಸೋಣ. |
02:20 | Xfig ವರ್ಕ್-ಶೀಟ್ ನ ಎಡಭಾಗವು, drawing ಮೋಡ್ ಪ್ಯಾನಲ್ ಅನ್ನು ಹೊಂದಿದೆ. |
02:26 | ಈ ಪ್ಯಾನಲ್ ನಲ್ಲಿ ಮೇಲಿನ ಅರ್ಧಭಾಗದಲ್ಲಿರುವ ಬಟನ್ ಗಳನ್ನು, ವಿವಿಧ ಆಬ್ಜೆಕ್ಟ್ ಗಳನ್ನು ರಚಿಸಲು ಬಳಸಬಹುದು. |
02:33 | ಅವುಗಳೊಂದಿಗೆ ಕೆಲಸಮಾಡಲು, ಕೆಳಗಿರುವ ಬಟನ್ ಗಳನ್ನು ಬಳಸಲಾಗುತ್ತದೆ. |
02:39 | ಮೇಲಿರುವ ಬಟನ್ ಗಳನ್ನು ಬಳಸಿ, File ಮತ್ತು Edit ಕೆಲಸಗಳನ್ನು ಮಾಡಬಹುದು . |
02:46 | ಮಧ್ಯದಲ್ಲಿರುವ ಸ್ಥಳವನ್ನು 'ಕ್ಯಾನ್ವಾಸ್' ಎನ್ನುತ್ತೇವೆ. |
02:50 | ಇಲ್ಲಿಯೇ ಆಕೃತಿಯನ್ನು ರಚಿಸಲಾಗುವುದು. |
02:53 | ಈಗ ನಾವು ಡ್ರಾ ಮಾಡಲು ಆರಂಭಿಸೋಣ. |
02:55 | ನಾನು ಮಾಡುವ ಮೊದಲ ಕೆಲಸ, ಕ್ಯಾನ್ವಾಸ್ ನ ಮೇಲೆ ಗ್ರಿಡ್ ಗಳನ್ನು ಬರೆಯುವುದು ಆಗಿದೆ. |
03:01 | ಕೆಳಗೆ ಇರುವ Grid Mode ಬಟನ್ ಅನ್ನು ಕ್ಲಿಕ್ ಮಾಡುವುದರ ಮೂಲಕ ನಾನಿದನ್ನು ಮಾಡುತ್ತೇನೆ. |
03:05 | ನಾವು ವಿವಿಧ ಗ್ರಿಡ್ ಸೈಜ್ ಗಳನ್ನು ಆಯ್ಕೆ ಮಾಡಬಹುದು. ನಾನು ಮಧ್ಯದಲ್ಲಿರುವುದನ್ನು ಆಯ್ಕೆ ಮಾಡುವೆನು. |
03:11 | ನಾವು ಸೇರಿಸುವ ಆಬ್ಜೆಕ್ಟ್ ಗಳನ್ನು ಹೊಂದಿಸಲು, ಗ್ರಿಡ್ ಗಳು ಸಹಾಯಮಾಡುತ್ತವೆ. |
03:16 | ಈ ಟ್ಯುಟೋರಿಯಲ್ ನಲ್ಲಿ, ಕ್ಲಿಕ್ ಮಾಡಿ ಎಂದರೆ, ಮೌಸ್ ನ ಎಡಗಡೆಯ ಬಟನ್ ನ್ನು ಒತ್ತಿ, ನಂತರ ಬಿಟ್ಟುಬಿಡುವುದು ಎಂದರ್ಥ. |
03:21 | ಇದೆ ರೀತಿ, ಬಟನ್ ನ ಆಯ್ಕೆ ಎಂದರೆ, ನೀವು ಲೆಫ್ಟ್-ಮೌಸ್ ಬಟನ್ ಅನ್ನು ಬಳಸಿ ಕ್ಲಿಕ್ ಮಾಡುವುದೆಂದರ್ಥ. |
03:29 | ಒಂದುವೇಳೆ ಬೇರೆ ಕೆಲಸವಾಗಬೇಕಿದ್ದರೆ, ನಾನು ಅದನ್ನು ಪ್ರತ್ಯೇಕವಾಗಿ ಹೇಳುತ್ತೇನೆ. |
03:34 | ನಮ್ಮ ಡೈಗ್ರಾಮ್ ಗೆ ಬಾಕ್ಸ್ ಇರಬೇಕಾಗಿರುವುದರಿಂದ, ಎಡಗಡೆಯ ಪ್ಯಾನಲ್ ನಿಂದ ನಾವು ಚೂಪಾದ ಮೂಲೆಗಳಿರುವ Box ನ ಚಿಹ್ನೆಯನ್ನು ಆಯ್ಕೆ ಮಾಡೋಣ. |
03:43 | ನಾವು ಬಾಕ್ಸ್ ಅನ್ನು ಇಡಬೇಕೆಂದಿರುವ ಸ್ಥಾನಕ್ಕೆ ಹೋಗುವೆವು. |
03:50 | ನಾವು ಮೌಸ್ ಅನ್ನು ಇಲ್ಲಿ ಕ್ಲಿಕ್ ಮಾಡೋಣ. |
03:53 | ಇದು ಬಾಕ್ಸ್ ನ ವಾಯುವ್ಯ ಮೂಲೆಯನ್ನು ಆಯ್ಕೆ ಮಾಡುತ್ತದೆ. |
03:57 | ಬಾಕ್ಸ್, ನಮಗೆ ಬೇಕಾದ ಸೈಜ್ ನದ್ದು ಆಗುವವವರೆಗೆ, ಮೌಸ್ ಅನ್ನು ವಿರುದ್ಧ ದಿಕ್ಕಿನಲ್ಲಿ ನಡೆಸಿ. |
04:12 | ಸರಿಯಾದ ಸೈಜಿನ ಬಾಕ್ಸ್ ರಚನೆಯಾದ ಬಳಿಕ, ನಾವು ಮೌಸ್ ಅನ್ನು ಮತ್ತೊಮ್ಮೆ ಕ್ಲಿಕ್ ಮಾಡಬಹುದು. |
04:16 | ಈಗ ಬಾಕ್ಸ್ ನ ರಚನೆಯಾಗಿದೆ. |
04:18 | ಈಗ, Xfig ನಲ್ಲಿ Edit ಅನ್ನುಹೇಗೆ ಬಳಸುವುದೆಂದು ನಾವು ವಿವರಿಸುತ್ತೇವೆ. ಇದನ್ನು ಬಳಸಿ, ಬಾಕ್ಸ್ ನ ದಪ್ಪವನ್ನು ನಾವು ಹೆಚ್ಚಿಸುವೆವು . |
04:26 | ಎಡಭಾಗದ ಪ್ಯಾನಲ್ ನಲ್ಲಿರುವ Edit ಬಟನ್ ನ್ನು ಒತ್ತೋಣ. |
04:31 | ಬಾಕ್ಸ್ ನ ಎಲ್ಲ ಮುಖ್ಯ ಅಂಶಗಳು ಪ್ರದರ್ಶಿತವಾಗಿರುವುದನ್ನು ನಾವು ನೋಡಬಹುದು. |
04:36 | ಇವುಗಳಲ್ಲಿ ಯಾವುದೋ ಒಂದು ಪಾಯಿಂಟ್ ಅನ್ನು ಕ್ಲಿಕ್ ಮಾಡಿ, ಬಾಕ್ಸ್ ಅನ್ನು ಆಯ್ಕೆ ಮಾಡೋಣ. |
04:41 | ಒಂದು ಡೈಲಾಗ್ ಬಾಕ್ಸ್ ತೆರೆಯುತ್ತದೆ. |
04:43 | ನಾವು ಮೌಸ್ ಅನ್ನು Width ಬಾಕ್ಸ್ ಗೆ ಕೊಂಡೊಯ್ಯೋಣ. |
04:47 | ಮೌಸ್-ಪಾಯಿಂಟರ್, ಬಾಕ್ಸ್ ನ ಒಳಗಡೆ ಇರುವುದನ್ನು ಖಚಿತಪಡಿಸಿಕೊಳ್ಳಿ. |
04:51 | ಡಿಫಾಲ್ಟ್ ವ್ಯಾಲ್ಯು, 1 ಅನ್ನು ಡಿಲೀಟ್ ಮಾಡೋಣ. |
04:55 | ಮೌಸ್, ಬಾಕ್ಸ್ ನ ಒಳಗೆ ಇರದಿದ್ದರೆ, ಬಾಕ್ಸ್ ನಲ್ಲಿ ಇರುವುದನ್ನು ಬದಲಾಯಿಸಲು ಸಾಧ್ಯವಿಲ್ಲ. |
05:01 | ಬಾಕ್ಸ್ ನಲ್ಲಿ ನಮೂದಿಸುತ್ತಿರುವಾಗ, ಮೌಸ್ ಹೊರಗೆ ಸರಿದರೆ, ದಯವಿಟ್ಟು ಅದನ್ನು ಒಳಗೆ ತಂದು ಟೈಪಿಂಗ್ ಅನ್ನು ಮುಂದುವರಿಸಿ. |
05:07 | ಈಗ 2 ಅನ್ನು ನಮೂದಿಸೋಣ. |
05:13 | ನಾವು Done ಅನ್ನು ಕ್ಲಿಕ್ ಮಾಡುತ್ತೇವೆ. ನಾನಿದನ್ನು ನಿಮಗೆ ತೋರಿಸುತ್ತೇನೆ. |
05:17 | Done ಅನ್ನು ಕ್ಲಿಕ್ ಮಾಡಿ ಮತ್ತು ಡೈಲಾಗ್ ಬಾಕ್ಸ್ ನಿಂದ ಹೊರಗೆ ಬನ್ನಿ. |
05:20 | ಬಾಕ್ಸ್ ನ ದಪ್ಪವು ಹೆಚ್ಚಾಗಿರುವುದನ್ನು ನಾವು ನೋಡುತ್ತೇವೆ. |
05:24 | ಬಾಣದ ಚಿಹ್ನೆ ಇರುವ ರೇಖೆಗಳನ್ನು ನಾವು ಸೇರಿಸಬೇಕಾಗಿದೆ . |
05:28 | ಎಡಭಾಗದ ಪ್ಯಾನಲ್ ನಿಂದ POLYLINE ಎನ್ನುವ ಬಟನ್ ಆನ್ನು ಆಯ್ಕೆ ಮಾಡೋಣ. |
05:34 | ಕೆಳಗಡೆ ಇರುವ ಪ್ಯಾನಲ್, 'ಅಟ್ರಿಬ್ಯೂಟ್ಸ್ ಪ್ಯಾನೆಲ್' (Attributes panel) ಆಗಿದೆ. |
05:40 | ಈ ಪ್ಯಾನಲ್ ನಲ್ಲಿ ಲಭ್ಯವಿರುವ ಬಟನ್ ಗಳನ್ನು ಉಪಯೋಗಿಸಿ ಪ್ರತಿಯೊಂದು ಆಬ್ಜೆಕ್ಟ್ ನ ಪ್ಯಾರಾಮೀಟರ್ ಗಳನ್ನು ಬದಲಾಯಿಸಬಹುದು. |
05:45 | ಆಯ್ದ ಆಬ್ಜೆಕ್ಟ್ ಗೆ ಅನುಗುಣವಾಗಿ, ಬಟನ್ ಗಳ ಸಂಖ್ಯೆ ಬದಲಾಗುತ್ತದೆ. |
05:52 | 'ಅಟ್ರಿಬ್ಯೂಟ್ಸ್ ಪ್ಯಾನೆಲ್' ನಿಂದ, Arrow Mode ಎನ್ನುವ ಬಟನ್ ನ್ನು ಆಯ್ಕೆ ಮಾಡೋಣ. |
05:57 | ಡೈಲಾಗ್ ಬಾಕ್ಸ್ ನಲ್ಲಿರುವ ಎರಡನೆಯ ಆಯ್ಕೆಯನ್ನು ಆರಿಸಿಕೊಳ್ಳೋಣ. ಇದು, ಗೆರೆಯ ಕೊನೆಯಲ್ಲಿ ಬಾಣದ ಚಿಹ್ನೆಯನ್ನು ಕೊಡುತ್ತದೆ. |
06:04 | ನಾವು Arrow Type ಬಟನ್ ನ್ನು ಕ್ಲಿಕ್ ಮಾಡೋಣ. |
06:08 | ಈಗ ಕಾಣಿಸಿಕೊಳ್ಳುವ ವಿಂಡೋದಲ್ಲಿ, ನಮಗೆ ಬೇಕಾದ ಆರೋಹೆಡ್ ಅನ್ನು ನಾವು ಆಯ್ಕೆಮಾಡುತ್ತೇವೆ. |
06:14 | ನಮಗೆ ರೇಖೆಯು ಆರಂಭವಾಗಬೇಕಾದ ಸ್ಥಾನದಲ್ಲಿ, ಕ್ಲಿಕ್ ಮಾಡೋಣ. |
06:23 | ಈ ರೇಖೆಯ ಕೊನೆಯ ಬಿಂದುವಿನತ್ತ ಮೌಸ್ ಅನ್ನು ಕೊಂಡೊಯ್ಯೋಣ. |
06:31 | ಅಲ್ಲಿ, ಮಧ್ಯದ ಮೌಸ್ ಬಟನ್ ಅನ್ನು ಕ್ಲಿಕ್ ಮಾಡೋಣ. |
06:36 | ಬಾಣದ ಚಿಹ್ನೆಯೊಂದಿಗೆ ರೇಖೆಯು ರಚಿತವಾಗಿದೆ. |
06:39 | ನೆನಪಿಡಿ, ಆರೋವನ್ನು ಪೂರ್ಣಗೊಳಿಸಲು ನೀವು ಮಧ್ಯದ ಬಟನ್ ಅನ್ನು ಒತ್ತಬೇಕು. |
06:43 | ಎಡ ಅಥವಾ ಬಲಗಡೆಯ ಬಟನ್ ಅಲ್ಲ. |
06:45 | ಒಂದುವೇಳೆ ತಪ್ಪು ಮಾಡಿದ್ದರೆ, ದಯವಿಟ್ಟು Edit ನ್ನು ಕ್ಲಿಕ್ ಮಾಡಿ Undo ಅನ್ನು ಒತ್ತಿರಿ. |
06:52 | ಕಾಪಿ (copy) ಮಾಡುವುದರ ಮೂಲಕ, ಬಾಕ್ಸ್ ನ ಔಟ್ಪುಟ್ ನಲ್ಲಿ ನಾವು ಬೇರೊಂದು ರೇಖೆಯನ್ನು ಎಳೆಯೋಣ. |
06:59 | ಎಡಭಾಗದ ಪ್ಯಾನಲ್ ನಿಂದ, COPY ಬಟನ್ ಅನ್ನು ಆಯ್ಕೆ ಮಾಡಿ. |
07:05 | ಲೈನ್ ಅನ್ನು ಆಯ್ಕೆಮಾಡಿ. |
07:09 | ನಿಮಗೆ ಲೈನ್ ಬೇಕಾಗಿರುವಲ್ಲಿ ಮೌಸ್ ಅನ್ನು ಕೊಂಡೊಯ್ದು ಅಲ್ಲಿ ಕ್ಲಿಕ್ ಮಾಡಿ. |
07:15 | ಈ ಲೈನ್ ಅನ್ನು ಕಾಪಿ ಮಾಡಲಾಗಿದೆ. |
07:18 | ಈಗ ಸ್ವಲ್ಪ ಟೆಕ್ಸ್ಟ್ ಅನ್ನು ಸೇರಿಸೋಣ. |
07:21 | ಎಡಭಾಗದ ಪ್ಯಾನಲ್ ನಲ್ಲಿ, T ಯಿಂದ ಸೂಚಿತವಾಗಿರುವ ಟೆಕ್ಸ್ಟ್-ಬಾಕ್ಸ್ ಅನ್ನು ಕ್ಲಿಕ್ ಮಾಡೋಣ. |
07:29 | ಟೆಕ್ಸ್ಟ್ ನ ಫಾಂಟ್-ಸೈಜ್ ನ್ನು ಆಯ್ಕೆ ಮಾಡೋಣ. |
07:35 | 'ಅಟ್ರಿಬ್ಯೂಟ್ಸ್ ಪ್ಯಾನೆಲ್' ನಿಂದ Text Size ಬಟನ್ ಅನ್ನು ಕ್ಲಿಕ್ ಮಾಡೋಣ. ಒಂದು ಡೈಲಾಗ್ ವಿಂಡೋ ಸಿಗುತ್ತದೆ. |
07:41 | ಮೌಸ್ ಅನ್ನು ವ್ಯಾಲ್ಯು ಬಾಕ್ಸ್ ನೆಡೆಗೆ ಕೊಂಡೊಯ್ದು ಅಲ್ಲಿಯೇ ಇಡೋಣ. |
07:46 | ಡೀಫಾಲ್ಟ್ ವ್ಯಾಲ್ಯು 12 ಅನ್ನು ಡಿಲೀಟ್ ಮಾಡಿ, 16 ಅನ್ನು ಸೇರಿಸೋಣ. |
07:52 | Set ಎನ್ನುವ ಬಟನ್ ಅನ್ನು ಆಯ್ಕೆಮಾಡೋಣ . |
07:56 | ಡೈಲಾಗ್ ಬಾಕ್ಸ್ ಮುಚ್ಚಿಕೊಳ್ಳುತ್ತದೆ. ಮತ್ತು 'ಅಟ್ರಿಬ್ಯೂಟ್ಸ್ ಪ್ಯಾನೆಲ್' ನಲ್ಲಿ ಈಗ Text Size ಅನ್ನು 16 ಎಂದು ತೋರಿಸಲಾಗುತ್ತದೆ. |
08:05 | ಟೆಕ್ಸ್ಟ್ ಅನ್ನು ಸೆಂಟರ್-ಅಲೈನ್ ಮಾಡೋಣ. |
08:08 | 'ಅಟ್ರಿಬ್ಯೂಟ್ಸ್ ಪ್ಯಾನೆಲ್' ನಲ್ಲಿರುವ Text Just ಬಟನ್ ಅನ್ನು ಕ್ಲಿಕ್ ಮಾಡೋಣ. |
08:13 | ಒಂದು ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
08:15 | ಸೆಂಟರ್-ಅಲೈನ್ ಮಾಡಲು, ಮಧ್ಯದಲ್ಲಿರುವುದನ್ನು ಆಯ್ಕೆ ಮಾಡೋಣ. |
08:21 | ಬಾಕ್ಸ್ ನ ಮಧ್ಯಭಾಗದಲ್ಲಿ ಕ್ಲಿಕ್ ಮಾಡೋಣ. |
08:29 | ನಾನು Plant ಎಂದು ಟೈಪ್ ಮಾಡಿ ಮೌಸ್ ಅನ್ನು ಕ್ಲಿಕ್ ಮಾಡುವೆನು. |
08:36 | ಟೆಕ್ಸ್ಟ್ ಅನ್ನು ರಚಿಸಲಾಗಿದೆ. |
08:38 | ಆವಶ್ಯವಿದ್ದರೆ, ಎಡಭಾಗದ ಪ್ಯಾನಲ್ ನಲ್ಲಿರುವ Move ಕೀಯನ್ನು ಬಳಸಿ, ನಾನು ಟೆಕ್ಸ್ಟ್ ಅನ್ನು ಸರಿಸಬಹುದು. |
08:50 | ಈ ಆಕೃತಿಯನ್ನು ನಾವು ಸೇವ್ ಮಾಡೋಣ. |
08:52 | Xfig ನ ಮೇಲ್ತುದಿಯ ಎಡಮೂಲೆಯಲ್ಲಿರುವ File ಬಟನ್ ಅನ್ನು ಕ್ಲಿಕ್ ಮಾಡಿ. ಮೌಸ್ ಅನ್ನು ಒತ್ತಿ ಹಿಡಿದು Save ಗೆ ಎಳೆದು ತಂದು ನಂತರ ಬಿಟ್ಟುಬಿಡಿ. |
09:04 | ಇದು ಮೊದಲಬಾರಿ ಆಗಿರುವುದರಿಂದ, Xfig, ಫೈಲ್ ನ ಹೆಸರನ್ನು ಕೇಳುತ್ತದೆ. |
09:09 | ನಾವು ಡಿರೆಕ್ಟರಿಯನ್ನು, ನಂತರ ಫೈಲ್ ನ ಹೆಸರನ್ನು ಆಯ್ಕೆಮಾಡಬಹುದು. |
09:12 | ಹೆಸರನ್ನು "block" ಎಂದು ಟೈಪ್ ಮಾಡಿ, Save ಅನ್ನು ಆಯ್ಕೆಮಾಡೋಣ. |
09:27 | ಫೈಲ್, "block.fig" ಎಂದು ಸೇವ್ ಆಗುತ್ತದೆ. |
09:30 | ನೀವು ಆ ಹೆಸರನ್ನು ಮೇಲ್ತುದಿಯಲ್ಲಿ ಗಮನಿಸಬಹುದು. |
09:34 | ಈಗ ನಾವು ಫೈಲ್ ಅನ್ನು ಎಕ್ಸ್ಪೋರ್ಟ್ ಮಾಡೋಣ. |
09:36 | ಮತ್ತೊಮ್ಮೆ File ಬಟನ್ ನ್ನು ಕ್ಲಿಕ್ ಮಾಡಿ. ಮೌಸ್ ಅನ್ನು ಒತ್ತಿ ಹಿಡಿದು Export ಗೆ ಎಳೆದು ತನ್ನಿ. |
09:47 | Language ನ ಬದಿಯಲ್ಲಿರುವ ಬಾಕ್ಸ್ ನ್ನು ಕ್ಲಿಕ್ ಮಾಡಿ. PDF Format ಅನ್ನು ಆಯ್ಕೆಮಾಡಲು, ಮೌಸ್ ಅನ್ನು ಒತ್ತಿ ಹಿಡಿದು PDF ಗೆ ಎಳೆದು ತಂದು ಕೀಯನ್ನು ಬಿಟ್ಟುಬಿಡಿ. |
09:59 | ಈಗ Export ಬಟನ್ ಅನ್ನು ಕ್ಲಿಕ್ ಮಾಡಿ. ನಾವು "block.pdf" ಫೈಲ್ ಅನ್ನು ಪಡೆಯುತ್ತೇವೆ. |
10:05 | ಟರ್ಮಿನಲ್ ನಿಂದ, open block.pdf ಕಮಾಂಡ್ ನೊಂದಿಗೆ ಈ ಫೈಲ್ ಅನ್ನು ತೆರೆಯೋಣ. |
10:18 | ನಮಗೆ ಬೇಕಾಗಿರುವ ಬ್ಲಾಕ್ ಡೈಗ್ರಾಮ್ ಅನ್ನು ಈಗ ನಾವು ಪಡೆದಿದ್ದೇವೆ. |
10:21 | ನಮ್ಮ ಉದ್ದೇಶವನ್ನು ನಾವು ಪೂರ್ಣಗೊಳಿಸಿದ್ದೇವೆ. ನಮಗೆ ಬೇಕಾದ ಆಕೃತಿಯನ್ನು ನಾವು ಪಡೆದಿದ್ದೇವೆ. |
10:30 | ನಿಮಗಾಗಿ ಇಲ್ಲಿ ಒಂದು ಅಸೈನ್ಮೆಂಟ್ ಇದೆ. |
10:33 | ಬಾಕ್ಸ್ ಗೆ ಬದಲಾಗಿ ಬೇರೆ ಆಬ್ಜೆಕ್ಟ್ ಗಳನ್ನು ಬಳಸಿ. |
10:36 | Polyline ಅನ್ನು ಬಳಸಿ, ಒಂದು ಆಯತವನ್ನು ರಚಿಸಿ. ಆಕೃತಿಯಲ್ಲಿರುವ ಬಾಣದ ಚಿಹ್ನೆಗಳ ಗಾತ್ರ ಮತ್ತು ದಿಕ್ಕುಗಳನ್ನು ಬದಲಾಯಿಸಿ. |
10:43 | ಟೆಕ್ಸ್ಟ್, ಲೈನ್ ಮತ್ತು ಬಾಕ್ಸ್ ಗಳನ್ನು ಸ್ಥಳಾಂತರಿಸಿ. |
10:48 | ಫೈಲ್ ಅನ್ನು 'eps' ಫಾರ್ಮ್ಯಾಟ್ ನಲ್ಲಿ ಎಕ್ಸ್ಪೊರ್ಟ್ ಮಾಡಿ ಮತ್ತು ಅದನ್ನು ವೀಕ್ಷಿಸಿ. |
10:51 | ಎಡಿಟರ್ ನಲ್ಲಿ, "block.fig" ಫೈಲ್ ನ್ನು ವೀಕ್ಷಿಸಿ ಮತ್ತು ವಿಭಿನ್ನ ಘಟಕಗಳನ್ನು ಗುರುತಿಸಿ. |
10:58 | ಸಂಪೂರ್ಣವಾಗಿ ವಿಭಿನ್ನವಾಗಿರುವ ಬ್ಲಾಕ್ ಡೈಗ್ರಾಮ್ ಗಳನ್ನು ರಚಿಸಿ. |
11:02 | ನಾವು ಈಗ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
11:06 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ಟಾಕ್ ಟು ಎ ಟೀಚರ್ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಹೊಂದಿದೆ. |
11:18 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು, ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
11:28 | ನಾನು ಇನ್ನೂ ಕೆಲವು ವೆಬ್-ಪೇಜ್ ಗಳನ್ನು ಡೌನ್ಲೋಡ್ ಮಾಡಿದ್ದೇನೆ. |
11:38 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ವೆಬ್ಸೈಟ್ ಹೀಗಿದೆ: |
11:48 | “What is a Spoken Tutorial” ಎಂಬ ಲಿಂಕ್ ನಲ್ಲಿ, ಈ ಪ್ರಕಲ್ಪದ ಬಗ್ಗೆ ವಿವರಿಸುವ ವೀಡಿಯೋ ಲಭ್ಯವಿದೆ. |
11:57 | ಈ spoken-tutorial.org/wiki ಯಲ್ಲಿ ನಮ್ಮ ಪ್ರಕಲ್ಪಗಳನ್ನು ಆಧರಿಸಿರುವ FOSS ಟೂಲ್ ಗಳನ್ನು ನಾವು ಪಟ್ಟಿಮಾಡಿದ್ದೇವೆ. |
12:12 | ನಾವು Xfig ಗೆ ಮೀಸಲಾದ ಪೇಜ್ ಅನ್ನೂ ಸಹ ನೋಡೋಣ. |
12:27 | ನಿಮ್ಮ ಸಹಭಾಗಿತ್ವ ಮತ್ತು ಸಲಹೆಗಳನ್ನು ನಾವು ಸ್ವಾಗತಿಸುತ್ತೇವೆ. ಈ ಟ್ಯುಟೋರಿಯಲ್, ಪ್ರೊಫೆಸರ್ ಕಣ್ಣನ್ ಮೌದ್ಗಲ್ಯ ಅವರ ಕೊಡುಗೆಯಾಗಿದೆ.
ಈ ಸ್ಕ್ರಿಪ್ಟ್ ನ ಅನುವಾದಕಿ ಸುಚೇತಾ ವಸುವಜ ಮತ್ತು ಧ್ವನಿ ........... ಧನ್ಯವಾದಗಳು. |