Difference between revisions of "LibreOffice-Suite-Draw/C4/Working-with-3D-objects/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 72: | Line 72: | ||
|- | |- | ||
|02:14 | |02:14 | ||
− | | ಎಡಭಾಗದಲ್ಲಿ ನಾವು ಒಂದು ಟೆಕ್ಸ್ಟ್-ಬಾಕ್ಸ್ ಅನ್ನು ಸೇರಿಸೋಣ ಮತ್ತು ಅದರ ಒಳಗೆ | + | | ಎಡಭಾಗದಲ್ಲಿ ನಾವು ಒಂದು ಟೆಕ್ಸ್ಟ್-ಬಾಕ್ಸ್ ಅನ್ನು ಸೇರಿಸೋಣ ಮತ್ತು ಅದರ ಒಳಗೆ '''2D Shapes''' ಎಂದು ಟೈಪ್ ಮಾಡೋಣ. |
|- | |- | ||
|02:23 | |02:23 | ||
− | |ಬಲಭಾಗದಲ್ಲಿ ಮತ್ತೊಂದು ಟೆಕ್ಸ್ಟ್-ಬಾಕ್ಸ್ ಅನ್ನು ನಾವು ಸೇರಿಸೋಣ ಮತ್ತು ಅದರೊಳಗೆ | + | |ಬಲಭಾಗದಲ್ಲಿ ಮತ್ತೊಂದು ಟೆಕ್ಸ್ಟ್-ಬಾಕ್ಸ್ ಅನ್ನು ನಾವು ಸೇರಿಸೋಣ ಮತ್ತು ಅದರೊಳಗೆ '''3D Shapes''' ಎಂದು ಟೈಪ್ ಮಾಡೋಣ. |
|- | |- | ||
|02:30 | |02:30 | ||
− | |'''3D toolbars'''ಅನ್ನು ನಾವು ಸಕ್ರಿಯಗೊಳಿಸೋಣ. | + | |'''3D toolbars''' ಅನ್ನು ನಾವು ಸಕ್ರಿಯಗೊಳಿಸೋಣ. |
|- | |- | ||
|02:33 | |02:33 |
Latest revision as of 13:09, 30 January 2019
Time | Narration |
00:01 | LibreOffice Draw ನಲ್ಲಿ (ಲಿಬ್ರೆ ಆಫಿಸ್ ಡ್ರಾ), 3D Objects ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ, ಕೆಳಗಿನ ಆಯ್ಕೆಗಳನ್ನು ಬಳಸಿಕೊಂಡು '3D ಆಬ್ಜೆಕ್ಟ್' ಗಳನ್ನು ಹೇಗೆ ರಚಿಸುವುದು ಎಂಬುದನ್ನು ನೀವು ಕಲಿಯುವಿರಿ:
Extrusion (ಎಕ್ಸ್ಟ್ರುಶನ್), 3D Toolbar (3D ಟೂಲ್ ಬಾರ್), 3D Rotation Object (3D ರೊಟೇಶನ್ ಆಬ್ಜೆಕ್ಟ್). |
00:16 | Duplication ಅನ್ನು ಬಳಸಿಕೊಂಡು ಎಡಿಟ್ ಮಾಡಲು, 'ಆಬ್ಜೆಕ್ಟ್' ಗಳಿಗೆ '3D' ಪರಿಣಾಮಗಳನ್ನು ಅನ್ವಯಿಸಲು ಮತ್ತು ವಿಶೇಷ ಪರಿಣಾಮಗಳನ್ನು ಕೊಡಲು ನೀವು ಕಲಿಯುವಿರಿ. |
00:24 | ಈ ಟ್ಯುಟೋರಿಯಲ್ ಅನ್ನು ಬಳಸಲು, ನೀವು Draw ನಲ್ಲಿ, 'ಪ್ರಾಥಮಿಕ' ಮತ್ತು 'ಮಧ್ಯಮ' ಮಟ್ಟದ ಟ್ಯುಟೋರಿಯಲ್ ಗಳನ್ನು ಚೆನ್ನಾಗಿ ತಿಳಿದಿರಬೇಕು. |
00:30 | ಇಲ್ಲಿ, ನಾವು Ubuntu Linux ಆವೃತ್ತಿ 10.04 ಅನ್ನು ನಮ್ಮ ಆಪರೇಟಿಂಗ್ ಸಿಸ್ಟಮ್ ಎಂದು ಮತ್ತು LibreOffice Suite (ಲಿಬ್ರೆ ಆಫಿಸ್ ಸೂಟ್) ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ. |
00:40 | 2D ಆಕೃತಿ ಮತ್ತು ಅದಕ್ಕೆ ಸಮನಾದ 3D ರೂಪವನ್ನು ತೋರಿಸುವ ಒಂದು ಜ್ಯಾಮಿತಿಯ ಚಾರ್ಟ್ ಅನ್ನು ನಾವು ರಚಿಸೋಣ. ಉದಾಹರಣೆಗೆ, ಚೌಕವು ಒಂದು 2D ಆಬ್ಜೆಕ್ಟ್ ಆಗಿದ್ದು, ಘನವು ಅದರ 3D ರೂಪವಾಗಿದೆ. |
00:53 | ನಾವು ಇಲ್ಲಿ, "3DObjectsChart" ಎಂಬ ಹೆಸರಿನ ಒಂದು ಹೊಸ 'ಡ್ರಾ' ಫೈಲ್ ಅನ್ನು ಹೊಂದಿದ್ದೇವೆ. |
00:59 | ಡ್ರಾಯಿಂಗ್ ಅನ್ನು ಪ್ರಾರಂಭಿಸುವ ಮೊದಲು, ನಾವು 'ಗ್ರಿಡ್' ಗಳನ್ನು ಮತ್ತು 'ಗೈಡ್ ಲೈನ್ಸ್' ಅನ್ನು ಸಕ್ರಿಯಗೊಳಿಸೋಣ. ನಾವು ಇವುಗಳ ಬಗ್ಗೆ ಹಿಂದಿನ ಟ್ಯುಟೋರಿಯಲ್ ಗಳಲ್ಲಿ ಕಲಿತಿದ್ದೇವೆ. |
01:08 | ಮೇನ್ ಮೆನುವಿನಿಂದ, View ಮೆಲೆ ಕ್ಲಿಕ್ ಮಾಡಿ. Grid ಮತ್ತು Display Grid ಅನ್ನು ಆಯ್ಕೆಮಾಡಿ. |
01:17 | ನಂತರ ಮತ್ತೆ View ಮೇಲೆ ಕ್ಲಿಕ್ ಮಾಡಿ. Guides ಮತ್ತು Display Guides ಅನ್ನು ಆಯ್ಕೆಮಾಡಿ. |
01:23 | ನಾನು ಎರಡೂ ರೂಲರ್ ಗಳನ್ನು ಸೆಂಟಿಮೀಟರ್ ಗಳಿಗೆ ಸೆಟ್ ಮಾಡಲು ಬಯಸುತ್ತೇನೆ. |
01:29 | ಅಡ್ಡವಾದ ರೂಲರ್ ಮೇಲೆ 'ಮೌಸ್ ಪಾಯಿಂಟರ್' ಅನ್ನು ಇರಿಸಿ. ಈಗ, ರೈಟ್- ಕ್ಲಿಕ್ ಮಾಡಿ ಮತ್ತು Centimeter ಅನ್ನು ಆಯ್ಕೆಮಾಡಿ. |
01:38 | ಲಂಬವಾದ ರೂಲರ್ ಮೇಲೆ 'ಮೌಸ್ ಪಾಯಿಂಟರ್' ಅನ್ನು ಇರಿಸಿ. ಮತ್ತೊಮ್ಮೆ, ರೈಟ್- ಕ್ಲಿಕ್ ಮಾಡಿ ಮತ್ತು Centimeter ಅನ್ನು ಆಯ್ಕೆಮಾಡಿ. |
01:45 | ಈಗ ನಾವು ಪೇಜ್ ನ ಮೇಲ್ಭಾಗದಲ್ಲಿ, ಒಂದು ಟೆಕ್ಸ್ಟ್-ಬಾಕ್ಸ್ ಅನ್ನು ರಚಿಸೋಣ. |
01:49 | ಅದರ ಒಳಗೆ, ಈ ಟೆಕ್ಸ್ಟ್ ಅನ್ನು ಸೇರಿಸೋಣ: Geometric shapes in 2D and 3D. |
01:55 | ಈಗ ನಾವು 'ಸ್ನ್ಯಾಪ್ ಲೈನ್' ಅನ್ನು ಬಳಸಿ, ಪೇಜ್ ಅನ್ನು ಎರಡು ಲಂಬವಾದ ಅರ್ಧ ಭಾಗಗಳಾಗಿ ವಿಭಾಗಿಸೋಣ. |
02:01 | ಲಂಬವಾದ ರೂಲರ್ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು 'ಡ್ರಾ' ಪೇಜ್ ಗೆ ಎಳೆಯಿರಿ. |
02:05 | ಒಂದು ಲಂಬವಾದ ಚುಕ್ಕೆಗಳ ಸಾಲು ಕಾಣಿಸಿಕೊಳ್ಳುತ್ತದೆ. |
02:08 | ಪೇಜ್ ಅನ್ನು ಎರಡು ಅರ್ಧಗಳಲ್ಲಿ ವಿಭಾಗಿಸುವಂತೆ ಈ ಚುಕ್ಕೆಗಳ ರೇಖೆಯನ್ನು ಇರಿಸಿ. |
02:14 | ಎಡಭಾಗದಲ್ಲಿ ನಾವು ಒಂದು ಟೆಕ್ಸ್ಟ್-ಬಾಕ್ಸ್ ಅನ್ನು ಸೇರಿಸೋಣ ಮತ್ತು ಅದರ ಒಳಗೆ 2D Shapes ಎಂದು ಟೈಪ್ ಮಾಡೋಣ. |
02:23 | ಬಲಭಾಗದಲ್ಲಿ ಮತ್ತೊಂದು ಟೆಕ್ಸ್ಟ್-ಬಾಕ್ಸ್ ಅನ್ನು ನಾವು ಸೇರಿಸೋಣ ಮತ್ತು ಅದರೊಳಗೆ 3D Shapes ಎಂದು ಟೈಪ್ ಮಾಡೋಣ. |
02:30 | 3D toolbars ಅನ್ನು ನಾವು ಸಕ್ರಿಯಗೊಳಿಸೋಣ. |
02:33 | ಮೇನ್ ಮೆನುವಿನಿಂದ, View ಮೇಲೆ ಕ್ಲಿಕ್ ಮಾಡಿ. Toolbars ಮತ್ತು 3D-Objects ಅನ್ನು ಆಯ್ಕೆಮಾಡಿ. |
02:43 | ಮತ್ತೊಮ್ಮೆ, View ಮೇಲೆ ಕ್ಲಿಕ್ ಮಾಡಿ. Toolbars ಮತ್ತು 3D-settings ಅನ್ನು ಆಯ್ಕೆಮಾಡಿ. |
02:53 | 3D-Objects ಮತ್ತು 3D-Settings ಟೂಲ್- ಬಾಕ್ಸ್ ಗಳು ಪ್ರದರ್ಶಿತವಾಗುತ್ತವೆ. |
03:02 | ನಾವು ಮೊದಲಿಗೆ 2D ಆಕೃತಿಗಳನ್ನು ರಚಿಸುವೆವು. |
03:05 | ನಾವು ಒಂದು ಆಯತ, ಚೌಕ, ವೃತ್ತ ಮತ್ತು ತ್ರಿಕೋನವನ್ನು ರಚಿಸುತ್ತೇವೆ ಮತ್ತು ಅವುಗಳನ್ನು ಒಂದರ ಕೆಳಗೆ ಒಂದರಂತೆ ಇಡುತ್ತೇವೆ. |
03:14 | '2D ಆಬ್ಜೆಕ್ಟ್' ಅನ್ನು ಬಳಸಿಕೊಂಡು '3D ಆಬ್ಜೆಕ್ಟ್' ಅನ್ನು ಪಡೆಯುವ ವಿಧಾನವನ್ನು 'ಎಕ್ಸ್ಟ್ರುಶನ್' (Extrusion) ಎಂದು ಕರೆಯಲಾಗುತ್ತದೆ. |
03:19 | ಇಲ್ಲಿ, '3D ಆಬ್ಜೆಕ್ಟ್' ಅನ್ನು ರಚಿಸಲು, ಮೇಲ್ಮೈಯನ್ನು ಹೊರಕ್ಕೆ ಸರಿಸಲಾಗುತ್ತದೆ. |
03:25 | ಮೊದಲು, ನಾವು ಆಯತದ ಬಣ್ಣವನ್ನು "Turquoise 1" (ಟರ್ಕೊಯಿಸ್ 1) ಗೆ ಬದಲಾಯಿಸೋಣ. |
03:31 | ಆಯತದ ಒಂದು ಕಾಪಿ ಯನ್ನು ನಾವು ಮಾಡೋಣ. |
03:35 | ಕಾಪಿ ಮಾಡಲಾದ ಆಯತವನ್ನು ಎಳೆಯೋಣ ಮತ್ತು ಅದನ್ನು ಪೇಜ್ ನ ಬಲಗಡೆಯ ಅರ್ಧಭಾಗದಲ್ಲಿ ಇರಿಸೋಣ. |
03:40 | ಈಗ, ಇದು ಇನ್ನೂ ಆಯ್ಕೆಆಗಿರುವಾಗಲೇ, ಕಾಂಟೆಕ್ಸ್ಟ್- ಮೆನುವನ್ನು ವೀಕ್ಷಿಸಲು ರೈಟ್- ಕ್ಲಿಕ್ ಮಾಡಿ. |
03:45 | ಈಗ, Convert ನ ಮೇಲೆ ಕ್ಲಿಕ್ ಮಾಡಿ ಮತ್ತು To 3D ಯನ್ನು ಆಯ್ಕೆ ಮಾಡಿ. |
03:48 | 2D ಆಯತವನ್ನು ಒಂದು ಘನರೂಪಕ್ಕೆ ಪರಿವರ್ತಿಸಲಾಗುತ್ತದೆ. |
03:52 | ಆಯತಾಕಾರದ ಒಳಗೆ, ನಾವು “Rectangle” ಎಂದು ಟೈಪ್ ಮಾಡೋಣ. |
03:55 | ಆದಾಗ್ಯೂ, ನಾವು 3D ಆಬ್ಜೆಕ್ಟ್ ಗಳ ಒಳಗೆ, ಟೆಕ್ಸ್ಟ್ ಅನ್ನು ಟೈಪ್ ಮಾಡಲು ಸಾಧ್ಯವಿಲ್ಲ. |
04:00 | ಟೆಕ್ಸ್ಟ್ ಅನ್ನು ಟೈಪ್ ಮಾಡಲು, ನಾವು Text tool ಅನ್ನು ಬಳಸಬೇಕಾಗಿದೆ. |
04:04 | Text tool ನ ಮೇಲೆ ಕ್ಲಿಕ್ ಮಾಡಿ ಮತ್ತು ಘನವಸ್ತುವಿನ ಒಳಗೆ, ಒಂದು ಟೆಕ್ಸ್ಟ್-ಬಾಕ್ಸ್ ಅನ್ನು ರಚಿಸಿ. |
04:10 | ಅದರ ಒಳಗೆ “Cuboid” ಎಂದು ಟೈಪ್ ಮಾಡಿ. |
04:14 | ಈ ಟೆಕ್ಸ್ಟ್-ಬಾಕ್ಸ್ ಮತ್ತು ಘನವಸ್ತುಗಳನ್ನು ಎರಡು ಪ್ರತ್ಯೇಕ ವಸ್ತುಗಳು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಇವುಗಳನ್ನು ಗುಂಪು ಮಾಡೋಣ. |
04:21 | ಹೀಗೆಯೇ, ನಾವು ಚೌಕ, ವೃತ್ತ ಮತ್ತು ತ್ರಿಕೋನಗಳಿಗೆ ಬಣ್ಣ ತುಂಬಬಹುದು ಮತ್ತು ಅವುಗಳನ್ನು '3D ಆಬ್ಜೆಕ್ಟ್' ಗೆ ಪರಿವರ್ತಿಸಬಹುದು. |
04:30 | '2D' ಮತ್ತು '3D' ಆಕೃತಿಗಳ ಒಂದು ಚಾರ್ಟ್ ಅನ್ನು ತಯಾರಿಸಲು, ನಾವು 'ಎಕ್ಸ್ಟ್ರುಶನ್' ಅನ್ನು (Extrusion) ಬಳಸಿದ್ದೇವೆ. |
04:36 | ಈ ಟ್ಯುಟೋರಿಯಲ್ ಅನ್ನು ಇಲ್ಲಿ ನಿಲ್ಲಿಸಿ ಮತ್ತು ಈ ಅಸೈನ್ಮೆಂಟ್ ಅನ್ನು ಮಾಡಿ. |
04:40 | ನಿಮ್ಮ Draw (ಡ್ರಾ) ಫೈಲ್ ಗೆ, ಒಂದು ಹೊಸ ಪೇಜ್ ಅನ್ನು ಸೇರಿಸಿ. |
04:42 | ಒಂದು ಚೌಕವನ್ನು ರಚಿಸಿ ಮತ್ತು Square ಎಂಬ ಟೆಕ್ಸ್ಟ್ ಅನ್ನು ಟೈಪ್ ಮಾಡಿ. |
04:46 | ಟೆಕ್ಸ್ಟ್ ನೊಂದಿಗೆ ಚೌಕವನ್ನು 3D ಗೆ ಪರಿವರ್ತಿಸಿ. |
04:49 | 2D ಚೌಕದಲ್ಲಿಯ ಟೆಕ್ಸ್ಟ್ ನೊಂದಿಗೆ ಇದನ್ನು ಹೋಲಿಸಿ. |
04:53 | ಸೂಚನೆ: 3D ಆಬ್ಜೆಕ್ಟ್ ಗಳನ್ನು ರಚಿಸಲು, 3D Settings ಟೂಲ್-ಬಾರ್ ಅನ್ನು ಬಳಸಿ. |
04:58 | Draw ಸಿದ್ಧವಿರುವ 3D ಆಕಾರಗಳನ್ನು ಕೂಡ ಒದಗಿಸುತ್ತದೆ. |
05:01 | 3D Objects ಟೂಲ್-ಬಾರ್ ಅನ್ನು ಬಳಸಿ, ಈ ಆಕಾರಗಳನ್ನು ನೀವು ಸೇರಿಸಬಹುದು. |
05:09 | ನಮ್ಮ Draw ಫೈಲ್ ನಲ್ಲಿ, ನಾವು ಒಂದು ಹೊಸ ಪೇಜ್ ಅನ್ನು ಸೇರಿಸೋಣ. |
05:13 | 3D-Objects ಟೂಲ್-ಬಾರ್ ನಿಂದ, ನಾವು Shell ಎಂಬ ಒಂದು ಆಕಾರವನ್ನು ಆಯ್ಕೆಮಾಡೋಣ. |
05:18 | ನಂತರ ಅದನ್ನು ಪೇಜ್ ನಲ್ಲಿ ಎಳೆಯಿರಿ. |
05:24 | Draw, '2D ಆಬ್ಜೆಕ್ಟ್' ಗಳ ರೊಟೇಶನ್ ಅನ್ನು (ತಿರುಗುವಿಕೆ) ಬಳಸಿಕೊಂಡು, '3D ಆಬ್ಜೆಕ್ಟ್' ಗಳನ್ನು ರಚಿಸಲು ಸಹ ನಿಮಗೆ ಅವಕಾಶ ನೀಡುತ್ತದೆ. |
05:33 | ನಮ್ಮ Draw ಪೇಜ್ ನಲ್ಲಿ, ನಾವು ಒಂದು '2D' ಆಕಾರವನ್ನು, ಎಂದರೆ ವೃತ್ತವನ್ನು ರಚಿಸೋಣ. |
05:39 | 'ಕಾಂಟೆಕ್ಸ್ಟ್ ಮೆನ್ಯು' ಗಾಗಿ, ರೈಟ್-ಕ್ಲಿಕ್ ಮಾಡಿ ಮತ್ತು Convert ಅನ್ನು ಆಯ್ಕೆಮಾಡಿ. ನಂತರ To 3D Rotation Object ಅನ್ನು ಆರಿಸಿಕೊಳ್ಳಿ. |
05:47 | ವೃತ್ತಕ್ಕೆ ಏನಾಗುತ್ತದೆ ಎಂಬುದನ್ನು ಗಮನಿಸಿ. ಇದು ಈಗ ಒಂದು '3D ಆಬ್ಜೆಕ್ಟ್' ಆಗಿದೆ. |
05:54 | ಕೆಳಗಿರುವ Drawing ಟೂಲ್-ಬಾರ್ ನಲ್ಲಿರುವ Fontwork Gallery (ಫಾಂಟ್ವರ್ಕ್ ಗ್ಯಾಲರಿ) ಐಕಾನ್ ಮೇಲೆ ಕ್ಲಿಕ್ ಮಾಡಿ. |
05:59 | ನಾವು Favorite 16 ಅನ್ನು ಆಯ್ಕೆ ಮಾಡಿ OK ಬಟನ್ ಅನ್ನು ಕ್ಲಿಕ್ ಮಾಡೋಣ. |
06:04 | ನಮ್ಮ Draw ಪೇಜ್ ನಲ್ಲಿ, Fontwork ಎಂಬ ಟೆಕ್ಸ್ಟ್ ಅನ್ನು ಪ್ರದರ್ಶಿಸಲಾಗಿದೆ. |
06:09 | ನಾವು ಈ ಟೆಕ್ಸ್ಟ್ ಅನ್ನು ನಮಗೆ ಬೇಕಾದಂತೆ ರಿ-ಸೈಜ್ ಮಾಡಬಹುದು. |
06:12 | ಈಗ, ನಮಗೆ ಅದೇ ಜಾಗದಲ್ಲಿ ಬೇರೆ ಟೆಕ್ಸ್ಟ್ ಬೇಕಾಗಿರಬಹುದು. ಅದನ್ನು ನಾವು ಹೇಗೆ ಮಾಡಬೇಕು? |
06:17 | Fontwork ಟೆಕ್ಸ್ಟ್ ನ ಒಳಗೆ, ಸುಮ್ಮನೆ ಡಬಲ್-ಕ್ಲಿಕ್ ಮಾಡಿ. |
06:21 | ಈಗ, ನೀವು Fontwork ಎಂಬ ಪದವನ್ನು, ಕಪ್ಪು ಬಣ್ಣದಲ್ಲಿ ದೊಡ್ಡ ಟೆಕ್ಸ್ಟ್ ನ ಒಳಗೆ ಕಾಣಬಹುದು. |
06:26 | ಈ ಟೆಕ್ಸ್ಟ್ ಅನ್ನು ಆಯ್ಕೆಮಾಡಿ ಮತ್ತು "Spoken Tutorials" ಎಂದು ಟೈಪ್ ಮಾಡಿ. |
06:30 | ಈಗ, Draw ಪೇಜ್ ನಲ್ಲಿ, ಎಲ್ಲಿಯಾದರೂ ಕ್ಲಿಕ್ ಮಾಡಿ. |
06:33 | ಈಗ "Spoken Tutorials" ಎಂಬ ಪದಗಳು ಪೇಜ್ ನಲ್ಲಿ, ಕಾಣಿಸಿಕೊಳ್ಳುತ್ತವೆ. |
06:36 | ನಂತರ, '3D ಆಬ್ಜೆಕ್ಟ್' ಗಳಿಗೆ ಪರಿಣಾಮಗಳನ್ನು ಹೇಗೆ ಅನ್ವಯಿಸುವುದೆಂದು ನಾವು ಕಲಿಯೋಣ. |
06:41 | ಒಂದು ಗೋಲಾಕಾರಕ್ಕೆ ನಾವು ಪರಿಣಾಮಗಳನ್ನು ಅನ್ವಯಿಸೋಣ. |
06:44 | ಆದ್ದರಿಂದ, ಅದನ್ನು ಆಯ್ಕೆಮಾಡಿ. ಕಾಂಟೆಕ್ಸ್ಟ್ ಮೆನ್ಯುಗಾಗಿ ರೈಟ್- ಕ್ಲಿಕ್ ಮಾಡಿ. ಈಗ 3D Effects ಅನ್ನು ಆಯ್ಕೆಮಾಡಿ. |
06:51 | ನೀವು ಇಲ್ಲಿ ಹಲವಾರು ಆಯ್ಕೆಗಳನ್ನು ನೋಡಬಹುದು. |
06:57 | ಡೆಮೊ ಗಾಗಿ, ನಾವು Depth ಎಂಬ ಪ್ಯಾರಾಮೀಟರ್ ಅನ್ನು 3cm ಗೆ ಬದಲಾಯಿಸೋಣ. |
07:05 | Segments ನ ಅಡಿಯಲ್ಲಿ, ನಾವು Horizontal ಅನ್ನು 12 ಕ್ಕೆ ಬದಲಾಯಿಸೋಣ. |
07:10 | Normal ನ ಅಡಿಯಲ್ಲಿ, ನಾವು Flat ಎಂಬ ಆಯ್ಕೆಯನ್ನು ಆರಿಸಿಕೊಳ್ಳೋಣ. |
07:14 | ಆಬ್ಜೆಕ್ಟ್ ನ ನೋಟವನ್ನು ಅದರ 'ಪ್ರಿವ್ಯೂ ವಿಂಡೊ'ದಲ್ಲಿ ಗಮನಿಸಿ. |
07:19 | ಈಗ, ಡೈಲಾಗ್-ಬಾಕ್ಸ್ ನ ಮೇಲ್ತುದಿಯ ಬಲಮೂಲೆಯಲ್ಲಿರುವ Assign ಎಂಬ ಐಕಾನ್ ಮೇಲೆ ಕ್ಲಿಕ್ ಮಾಡಿ. |
07:26 | ನಂತರ, ಡೈಲಾಗ್-ಬಾಕ್ಸ್ ಯಿಂದ ಹೊರಬರಲು, ಮೇಲಿನ ಎಡಮೂಲೆಯಲ್ಲಿರುವ X ಗುರುತಿನ ಮೇಲೆ ಕ್ಲಿಕ್ ಮಾಡಿ. |
07:32 | ನಮ್ಮ ಆಕಾರವನ್ನು ಈಗ ಗಮನಿಸಿ. ನಾವು ಆಯ್ಕೆ ಮಾಡಿದ ಪರಿಣಾಮಗಳನ್ನು ಇದಕ್ಕೆ ಅನ್ವಯಿಸಲಾಗಿದೆ. |
07:38 | ನಿಮಗಾಗಿ ಒಂದು ಅಸೈನ್ಮೆಂಟ್ ಇಲ್ಲಿದೆ. ಸ್ಲೈಡ್ ನಲ್ಲಿ ತೋರಿಸಿದ ಹಾಗೆ ಇರುವ ಒಂದು ಚಿತ್ರವನ್ನು ರಚಿಸಿ. |
07:45 | ಇದನ್ನು ಮಾಡಲು 3D Effects ಡೈಲಾಗ್-ಬಾಕ್ಸ್ ಅನ್ನು ಬಳಸಿ. |
07:49 | Duplication ಅನ್ನು ಬಳಸಿಕೊಂಡು, '2D' ಮತ್ತು '3D' ಆಬ್ಜೆಕ್ಟ್ ಗಳೊಂದಿಗೆ ನೀವು ವಿಶೇಷ ಪರಿಣಾಮಗಳನ್ನು ಸಹ ಸೃಷ್ಟಿಸಬಹುದು. |
07:55 | ನಾವು ಒಂದು ಹೊಸ ಪೇಜ್ ಅನ್ನು ತಯಾರಿಸಿ, ಅದರಲ್ಲಿ ಒಂದು ಆಯತವನ್ನು ರಚಿಸೋಣ. |
08:00 | Duplication ಅನ್ನು ಬಳಸಿಕೊಂಡು, '2D' ಆಯತದಲ್ಲಿ ನಾವು ಒಂದು ಪರಿಣಾಮವನ್ನು ಸೃಷ್ಟಿಸೋಣ. |
08:04 | 'ಮೇನ್ ಮೆನ್ಯೂ' ನಿಂದ, Edit ಅನ್ನು ಆಯ್ಕೆ ಮಾಡಿ ಮತ್ತು Duplicate ಅನ್ನು ಕ್ಲಿಕ್ ಮಾಡಿ. |
08:09 | Duplicate ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
08:12 | ನಾವು ಕೆಳಗಿನ ವ್ಯಾಲ್ಯೂಗಳನ್ನು ನಮೂದಿಸೋಣ –
Number of copies = 10 |
08:18 | Placement ನ ಅಡಿಯಲ್ಲಿ, X Axis = 10 |
08:26 | Y Axis = 20 |
08:30 | Angle = 0 degrees. |
08:34 | ನಾವು Enlargement Width ಮತ್ತು Height ಗಳನ್ನು ಡೀಫಾಲ್ಟ್ ಆಗಿ ಇಡುತ್ತೇವೆ. |
08:44 | ನಾವು Start ನ ಬಣ್ಣವನ್ನು Yellow ಹಾಗೂ End ನ ಬಣ್ಣವನ್ನು Red ಬಣ್ಣಕ್ಕೆ ಬದಲಾಯಿಸುತ್ತೇವೆ. |
08:57 | OK ಯನ್ನು ಕ್ಲಿಕ್ ಮಾಡಿ, ನಾವು ಪಡೆದ ವಿಶಿಷ್ಟ ಪರಿಣಾಮಗಳನ್ನು ನೋಡಿ! |
09:04 | angles ಮತ್ತು ಇತರ ವ್ಯಾಲ್ಯೂಗಳನ್ನು ಬದಲಾಯಿಸುವ ಮೂಲಕ ನೀವು ಇನ್ನಷ್ಟು ಪರಿಣಾಮಗಳನ್ನು ಪಡೆಯಬಹುದು. |
09:09 | ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
09:12 | ಈ ಟ್ಯುಟೋರಿಯಲ್ ನಲ್ಲಿ, ಈ ಕೆಳಗಿನ ಆಯ್ಕೆಗಳನ್ನು ಬಳಸಿಕೊಂಡು 3D ಆಬ್ಜೆಕ್ಟ್ ಗಳನ್ನು ಹೇಗೆ ರಚಿಸುವುದು ಎಂದು ನಾವು ಕಲಿತಿದ್ದೇವೆ:
Extrusion, 3D toolbar, 3D Rotation Object. |
09:23 | ನಾವು '3D ಆಬ್ಜೆಕ್ಟ್' ಗಳನ್ನು ಎಡಿಟ್ ಮಾಡಲು ಮತ್ತು '3D ಇಫೆಕ್ಟ್' ಗಳನ್ನು ಆಬ್ಜೆಕ್ಟ್ ಗಳಿಗೆ ಅನ್ವಯಿಸಲು ಕಲಿತಿದ್ದೇವೆ. |
09:27 | Duplication ಅನ್ನು ಬಳಸಿ ವಿಶೇಷ ಪರಿಣಾಮಗಳನ್ನು ರಚಿಸಲು ಸಹ ನಾವು ಕಲಿತಿದ್ದೇವೆ. |
09:32 | ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ. |
09:35 | ಇದು ಸ್ಪೋಕನ್- ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
09:39 | ನಿಮಗೆ ಉತ್ತಮ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಅದನ್ನು ಡೌನ್ಲೋಡ್ ಮಾಡಿ ವೀಕ್ಷಿಸಬಹುದು. |
09:44 | ಸ್ಪೋಕನ್- ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:49 | ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:53 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:
contact at spoken hyphen tutorial dot org. |
09:59 | 'ಸ್ಪೋಕನ್ ಟ್ಯುಟೋರಿಯಲ್' ಪ್ರಕಲ್ಪವು, 'ಟಾಕ್ ಟು ಎ ಟೀಚರ್' ಎಂಬ ಪ್ರಕಲ್ಪದ ಒಂದು ಭಾಗವಾಗಿದೆ. |
10:03 | ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
10:10 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು, ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:
spoken hyphen tutorial dot org slash NMEICT hyphen Intro. |
10:20 | ಈ ಟ್ಯುಟೋರಿಯಲ್, DesiCrew Solutions Pvt. Ltd. ಅವರ ಕೊಡುಗೆಯಾಗಿದೆ.
ವಂದನೆಗಳು. |