Difference between revisions of "Health-and-Nutrition/C2/Breastfeeding-latching/Kannada"

From Script | Spoken-Tutorial
Jump to: navigation, search
Line 13: Line 13:
 
| ನಾವು ಪ್ರಾರಂಭಿಸುವ ಮೊದಲು ದಯವಿಟ್ಟು ಗಮನಿಸಿ, ಪರಿಣಾಮಕಾರಿಯಾದ ಸ್ತನ್ಯಪಾನಕ್ಕಾಗಿ, ಸರಿಯಾಗಿ ಲ್ಯಾಚ್ ಮಾಡುವುದು (ಹೊಂದಿಸುವುದು) ಬಹಳ ಮುಖ್ಯವಾಗಿದೆ.
 
| ನಾವು ಪ್ರಾರಂಭಿಸುವ ಮೊದಲು ದಯವಿಟ್ಟು ಗಮನಿಸಿ, ಪರಿಣಾಮಕಾರಿಯಾದ ಸ್ತನ್ಯಪಾನಕ್ಕಾಗಿ, ಸರಿಯಾಗಿ ಲ್ಯಾಚ್ ಮಾಡುವುದು (ಹೊಂದಿಸುವುದು) ಬಹಳ ಮುಖ್ಯವಾಗಿದೆ.
 
|-  
 
|-  
| 02:29
+
| 00:29
 
| ಸ್ತನಕ್ಕೆ ಮಗುವಿನ ಬಾಯಿಯು ಸರಿಯಾಗಿ ಅಂಟಿಕೊಳ್ಳದಿದ್ದರೆ, ಆಗ ಅದು ಕೇವಲ ಮೊಲೆತೊಟ್ಟಿನಿಂದ ಹಾಲುಣಿಸುವುದಾಗುತ್ತದೆ.
 
| ಸ್ತನಕ್ಕೆ ಮಗುವಿನ ಬಾಯಿಯು ಸರಿಯಾಗಿ ಅಂಟಿಕೊಳ್ಳದಿದ್ದರೆ, ಆಗ ಅದು ಕೇವಲ ಮೊಲೆತೊಟ್ಟಿನಿಂದ ಹಾಲುಣಿಸುವುದಾಗುತ್ತದೆ.
 
|-  
 
|-  
Line 148: Line 148:
 
| ತಾಯಿಗೆ ಮೊಲೆಯುಣಿಸುವಾಗ ನೋವಾಗುತ್ತಿದ್ದರೆ ಬಹುಶಃ ಮಗುವು ಸರಿಯಾಗಿ ಅಂಟಿಕೊಂಡಿರಲಿಕ್ಕಿಲ್ಲ.
 
| ತಾಯಿಗೆ ಮೊಲೆಯುಣಿಸುವಾಗ ನೋವಾಗುತ್ತಿದ್ದರೆ ಬಹುಶಃ ಮಗುವು ಸರಿಯಾಗಿ ಅಂಟಿಕೊಂಡಿರಲಿಕ್ಕಿಲ್ಲ.
 
|-  
 
|-  
|   05:35
+
| 05:35
 
| ಸಾಧಾರಣ ಜೋಡಣೆಯ ಸಾಮಾನ್ಯ ಕಾರಣಗಳಲ್ಲಿ ಒಂದನ್ನು ನಾವು ನೋಡೋಣ.
 
| ಸಾಧಾರಣ ಜೋಡಣೆಯ ಸಾಮಾನ್ಯ ಕಾರಣಗಳಲ್ಲಿ ಒಂದನ್ನು ನಾವು ನೋಡೋಣ.
 
|-  
 
|-  

Revision as of 16:19, 29 January 2019

Time
Narration
00:02 Breastfeeding Latching (ಬ್ರೆಸ್ಟ್ ಫೀಡಿಂಗ್ ಲ್ಯಾಚಿಂಗ್) ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ, ಮಗು ಸ್ತನಕ್ಕೆ ಗಟ್ಟಿಯಾಗಿ ಅಂಟಿಕೊಳ್ಳಲು ಬೇಕಾಗಿರುವ ಸರಿಯಾದ ಲ್ಯಾಚಿಂಗ್ ತಂತ್ರ ಮತ್ತು ದಿನದಲ್ಲಿ ಎಷ್ಟು ಸಲ ಹಾಲುಣಿಸಬೇಕು ಇವುಗಳ ಬಗ್ಗೆ ನಾವು ಕಲಿಯಲಿದ್ದೇವೆ.
00:20 ನಾವು ಪ್ರಾರಂಭಿಸುವ ಮೊದಲು ದಯವಿಟ್ಟು ಗಮನಿಸಿ, ಪರಿಣಾಮಕಾರಿಯಾದ ಸ್ತನ್ಯಪಾನಕ್ಕಾಗಿ, ಸರಿಯಾಗಿ ಲ್ಯಾಚ್ ಮಾಡುವುದು (ಹೊಂದಿಸುವುದು) ಬಹಳ ಮುಖ್ಯವಾಗಿದೆ.
00:29 ಸ್ತನಕ್ಕೆ ಮಗುವಿನ ಬಾಯಿಯು ಸರಿಯಾಗಿ ಅಂಟಿಕೊಳ್ಳದಿದ್ದರೆ, ಆಗ ಅದು ಕೇವಲ ಮೊಲೆತೊಟ್ಟಿನಿಂದ ಹಾಲುಣಿಸುವುದಾಗುತ್ತದೆ.
00:36 ಇದು ಮಗುವಿಗೆ ಬಹಳ ಕಡಿಮೆ ಹಾಲು ಕೊಡುತ್ತದೆ.
00:40 ಆದರೆ, ಸ್ತನದ ಅರಿಯೋಲಾದ ಕೆಳಗಿನ ಭಾಗಕ್ಕೆ ಮಗುವಿನ ಗಟ್ಟಿಯಾದ ಅಂಟಿಕೊಳ್ಳುವಿಕೆಯು ಮಗುವಿಗೆ ಸಾಕಷ್ಟು ಹಾಲು ಕೊಡುತ್ತದೆ.
00:50 ದಯವಿಟ್ಟು ಗಮನಿಸಿ, ಅರಿಯೋಲಾ ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗವಾಗಿದೆ.
00:56 ಈಗ ನಾವು ವಿವರಿಸೋಣ. ಮೊದಲಿಗೆ, ತಾಯಿಯು ತನ್ನ ಮಗುವನ್ನು ಸೂಕ್ತವಾದ ಹಾಲುಣಿಸುವ ಪದ್ಧತಿಯಲ್ಲಿ (ಹಿಡಿತ) ಹಿಡಿದುಕೊಳ್ಳಬೇಕು.
01:05 ಈ ಹಿಡಿತಗಳ ಬಗ್ಗೆ ಇದೇ ಸರಣಿಯ ಇತರ ವೀಡಿಯೊಗಳಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ.
01:11 'ಕ್ರಾಸ್ ಕ್ರೇಡಲ್ ಹೋಲ್ಡ್' ಅನ್ನು ಬಳಸಿ, ಈ ಟ್ಯುಟೋರಿಯಲ್ ಅನ್ನು ವಿವರಿಸಲಾಗುತ್ತದೆ.
01:16 ನೆನಪಿಡಿ - ಶಿಶುವನ್ನು ಸರಿಯಾಗಿ ಹಿಡಿದುಕೊಳ್ಳುವುದು, ಸಫಲವಾದ ಲ್ಯಾಚಿಂಗ್ ಮತ್ತು ಹಾಲುಣಿಸುವುದಕ್ಕೆ ಅಗತ್ಯವಾಗಿದೆ.
01:24 ಈ ಚಿತ್ರದಲ್ಲಿ, ತಾಯಿಯು ಮಗುವನ್ನು “ಕ್ರಾಸ್ ಕ್ರೇಡಲ್ ಹೋಲ್ಡ್” ನಲ್ಲಿ ಸರಿಯಾಗಿ ಹಿಡಿದುಕೊಂಡಿದ್ದಾಳೆ.
01:31 ಮತ್ತು, ಮಗು ಸ್ತನ್ಯಪಾನಕ್ಕಾಗಿ ಜೋಡಿಸಿಕೊಳ್ಳಲು ಸಿದ್ಧವಾಗಿದೆ.
01:35 ಲ್ಯಾಚ್ ಮಾಡುವ ಮೊದಲು, ಮಗು ತನ್ನ ಬಾಯಿಯನ್ನು ಆಕಳಿಸುತ್ತಿರುವಂತೆ ಅಗಲವಾಗಿ ತೆರೆಯುವುದು ಮುಖ್ಯವಾಗಿದೆ.
01:42 ಯಾಕೆ? ವಡಾ- ಪಾವ್ ಅಥವಾ ಬರ್ಗರ್ ತಿನ್ನುವ ಒಬ್ಬ ವಯಸ್ಕನ ಉದಾಹರಣೆಯ ಮೂಲಕ ಇದನ್ನು ನಾವು ಅರ್ಥಮಾಡಿಕೊಳ್ಳೋಣ.
01:49 ವಡಾ- ಪಾವ್ ಅಥವಾ ಬರ್ಗರ್ ನ ದೊಡ್ಡ ತುತ್ತನ್ನು ತೆಗೆದುಕೊಳ್ಳಲು, ನಾವು ನಮ್ಮ ಬಾಯಿಯನ್ನು ಅಗಲವಾಗಿ ತೆರೆಯುತ್ತೇವೆ.
01:56 ಹಾಗೆಯೇ, ಅಗಲವಾಗಿ ತೆರೆದ ಬಾಯಿಯು ಸ್ತನದ ದೊಡ್ಡ ಭಾಗವನ್ನು ತನ್ನ ಬಾಯಿಯಲ್ಲಿ ತೆಗೆದುಕೊಳ್ಳಲು ಮಗುವಿಗೆ ಸಹಾಯ ಮಾಡುತ್ತದೆ.
02:04 ಅಗಲವಾಗಿ ತನ್ನ ಬಾಯಿ ತೆರೆಯುವಂತೆ ಮಗುವನ್ನು ಪ್ರೋತ್ಸಾಹಿಸಲು- ಮಗು ಬಾಯಿಯನ್ನು ಅಗಲವಾಗಿ ತೆರೆಯುವವರೆಗೆ, ತಾಯಿಯು ತನ್ನ ಮೊಲೆತೊಟ್ಟನ್ನು ಮಗುವಿನ ಮೇಲಿನ ತುಟಿಗೆ ಲಘುವಾಗಿ ಉಜ್ಜಬೇಕು.
02:16 ತಾಳ್ಮೆಯಿಂದಿರಿ. ಕೆಲವೊಮ್ಮೆ, ಬಾಯಿಯನ್ನು ಅಗಲವಾಗಿ ತೆರೆಯಲು ಮಗುವಿಗೆ ಕೆಲವು ಸೆಕೆಂಡುಗಳಿಂದ 2 ನಿಮಿಷಗಳವರೆಗೆ ತೆಗೆದುಕೊಳ್ಳಬಹುದು.
02:25 ನೆನಪಿನಲ್ಲಿಡಿ: ಸ್ತನ್ಯಪಾನಕ್ಕಾಗಿ ಮಗುವನ್ನು ಹೇಗೆ ಹಿಡಿದಿದ್ದರೂ, ಸ್ತನವನ್ನು ಹಿಡಿದಿರುವ ತಾಯಿಯ ಬೆರಳುಗಳು ಮತ್ತು ಹೆಬ್ಬೆರಳು ಯಾವಾಗಲೂ ಮಗುವಿನ ತುಟಿಗಳಿಗೆ ಸಮಾನಾಂತರವಾಗಿರಬೇಕು.
02:36 ಮಗು ತನ್ನ ಬಾಯಿಯನ್ನು ಅಗಲವಾಗಿ ತೆರೆದಾಗ, ಅದರ ಕೆಳತುಟಿಯು ಅರಿಯೋಲಾದ ಅಡಿಯಲ್ಲಿ ಇರಬೇಕು.
02:43 ಮತ್ತು, ಮೊಲೆತೊಟ್ಟು ಮಗುವಿನ ಬಾಯಿಯ ಮೇಲ್ಭಾಗದತ್ತ ಇರಬೇಕು, ಆದರೆ ಬಾಯಿಯ ಮಧ್ಯಭಾಗದೆಡೆಗೆ ಅಲ್ಲ.
02:50 ಈಗ, ತಾಯಿಯು ಶೀಘ್ರವಾಗಿ ಮಗುವಿನ ಬಾಯಿಯಲ್ಲಿ ತನ್ನ ಸ್ತನವನ್ನು ಇರಿಸಬೇಕು.
02:55 ಮಗುವಿನ ತಲೆಯನ್ನು ಹೊರಮುಖವಾಗಿ ಸ್ವಲ್ಪ ಬಾಗಿಸುವ ಮೂಲಕ ಮೊದಲು ಅವಳು ಮಗುವಿನ ಗದ್ದವನ್ನು ಸ್ತನದತ್ತ ನೂಕಬೇಕು.
03:02 ಮಗುವಿನ ಬಾಯಿಯನ್ನು ತಲುಪಲು, ಆಕೆಯು ತನ್ನ ಬೆನ್ನನ್ನು ಬಾಗಿಸಬಾರದು ಅಥವಾ ತನ್ನ ಸ್ತನವನ್ನು ನೂಕಬಾರದು.
03:08 ಶಿಶುವಿನ ಭುಜದ ಹಿಂಭಾಗದಲ್ಲಿ ಮೃದುವಾಗಿ ತಳ್ಳುವ ಮೂಲಕ, ಮಗುವನ್ನು ಸ್ತನದೆಡೆಗೆ ತರಬೇಕು.
03:15 ಲ್ಯಾಚಿಂಗ್ ನಲ್ಲಿರುವ ಅತಿ ಮುಖ್ಯ ಅಂಶವೆಂದರೆ, ತಾಯಿಯ ಅರಿಯೋಲಾದ ಕೆಳಭಾಗವು ಮಗುವಿನ ಬಾಯಿಯಲ್ಲಿ ಇರಬೇಕು.
03:25 ಇದು, ಮೊಲೆತೊಟ್ಟು ಮಗುವಿನ ಬಾಯಿಯಲ್ಲಿ ಆರಾಮವಾಗಿರುವ ಪ್ರದೇಶವನ್ನು ತಲುಪಲು ಸಹಾಯ ಮಾಡುತ್ತದೆ.
03:31 ಮಗು ತನ್ನ ಕೆಳತುಟಿಯ ಹತ್ತಿರದ ಅರಿಯೋಲಾದ ಭಾಗವನ್ನು ತನ್ನ ನಾಲಿಗೆಯಿಂದ ಒತ್ತುತ್ತಿರಬೇಕು.
03:37 ಇದು ದೊಡ್ಡ ಹಾಲಿನ ನಾಳಗಳನ್ನು ಒತ್ತುತ್ತದೆ ಮತ್ತು ಹೆಚ್ಚು ಹಾಲು ಹೊರಬರುತ್ತದೆ.
03:42 ನಂತರ ಮಗುವನ್ನು ಸ್ತನಕ್ಕೆ ಗಟ್ಟಿಯಾಗಿ ಹಿಡಿದುಕೊಂಡಿದೆಯೆ ಎಂದು ಪರಿಶೀಲಿಸಬೇಕು.
03:48 ಗಟ್ಟಿಯಾಗಿ ಜೋಡಿಸಿರುವುದನ್ನು ಖಚಿತಪಡಿಸಿಕೊಳ್ಳಲು, ತಾಯಿಯು ಕೆಳಗಿನವುಗಳನ್ನು ನೋಡಬೇಕು:
03:54 ಮಗುವಿನ ಬಾಯಿಯು ಅಗಲವಾಗಿ ತೆರೆದುಕೊಂಡಿದೆ,
03:57 ಮಗುವಿನ ಮೇಲಿನ ತುಟಿಯ ಹತ್ತಿರ ಕಾಣುವ ಅರಿಯೋಲಾದ ಭಾಗವು, ಮಗುವಿನ ಕೆಳ ತುಟಿಯ ಹತ್ತಿರ ಕಾಣಿಸುವದಕ್ಕಿಂತ ಹೆಚ್ಚಾಗಿದೆ.
04:06 ಮಗುವಿನ ಕೆಳಗಿನ ಗದ್ದವನ್ನು ತಾಯಿಯ ಸ್ತನವು ಸಂಪೂರ್ಣವಾಗಿ ಆವರಿಸಿದೆ.
04:11 ಮಗುವಿನ ದವಡೆಯು, ಅದು ಹಾಲು ನುಂಗುತ್ತಿದ್ದಂತೆ ಸ್ಫುಟವಾಗಿ ಕೆಳಗೆ ಇಳಿಯುತ್ತದೆ.
04:16 ಮತ್ತು, ಮಗುವಿನ ಕೆಳತುಟಿಯು ಹೊರಮುಖವಾಗಿ ತಿರುಚಿಕೊಂಡಿದೆ.
04:22 ಚೆನ್ನಾಗಿ ಜೋಡಿಸಿಕೊಂಡ ಮಗುವಿನಲ್ಲಿ, ಇದು ಹೆಚ್ಚಾಗಿ ಸ್ತನದಲ್ಲಿ ಮರೆಯಾಗಿರುತ್ತದೆ.
04:28 ಅಂತಹ ಸಂದರ್ಭಗಳಲ್ಲಿ, ಮಗುವಿನ ಕೆಳತುಟಿಯ ಹತ್ತಿರದ ಸ್ತನವನ್ನು ಮೆತ್ತಗೆ ಒತ್ತಿ. ಮತ್ತು, ಮಗುವಿನ ಕೆಳತುಟಿಯು ಹೊರಮುಖವಾಗಿ ಬಾಗಿಕೊಂಡಿದೆಯೆ ಎಂದು ಪರಿಶೀಲಿಸಿ.
04:41 ನಂತರ, ಮಗುವಿನ ಮೂಗನ್ನು ನೋಡಿ. ಮಗುವಿನ ಮೂಗು ತಾಯಿಯ ಸ್ತನಕ್ಕೆ ಒತ್ತಿದ್ದರೆ, ಆಗ -
04:49 ಮಗುವಿನ ಗದ್ದವು ತನ್ನ ಸ್ತನದಲ್ಲಿ ಇನ್ನಷ್ಟು ಒಳಗೆ ನೂಕುವಂತೆ, ತಾಯಿಯು ಮಗುವಿನ ತಲೆಯನ್ನು ಸ್ವಲ್ಪ ಹೊರಕ್ಕೆ ಬಾಗಿಸಬಹುದು.
04:58 ಮತ್ತು ಮಗುವಿನ ಮೂಗು ಹಾಗೂ ಹಣೆಯನ್ನು ಸ್ತನದಿಂದ ದೂರ ಸರಿಸಲಾಗುತ್ತದೆ.
05:04 ಹೀಗೆ ಮಾಡುವುದರಿಂದ, ಸ್ತನಕ್ಕೆ ಮಗುವಿನ ಜೋಡಣೆಯನ್ನು ಬಲವಾಗಿಸುತ್ತದೆ.
05:09 ಮಗುವಿನ ಪೂರ್ತಿ ಮುಖವನ್ನು ಸ್ತನದಿಂದ ದೂರ ಸರಿಸಬೇಡಿ.
05:13 ಇದು, ಮೊಲೆತೊಟ್ಟಿನಿಂದ ಹಾಲುಣಿಸುವಂತೆ ಮಾಡಬಹುದು.
05:16 ನೆನಪಿಡಿ, ಹಾಲುಣಿಸುವಿಕೆಯು ತಾಯಿಗೆ ಆರಾಮದಾಯಕ ಆಗಿರಬೇಕು.
05:21 ಅವಳಿಗೆ ಮೊಲೆತೊಟ್ಟಿನ ಮೇಲೆ ಚಿವುಟಿದ, ಎಳೆದ ಅಥವಾ ಉಜ್ಜಿದ ಭಾವನೆ ಬರಬಾರದು.
05:27 ತಾಯಿಗೆ ಮೊಲೆಯುಣಿಸುವಾಗ ನೋವಾಗುತ್ತಿದ್ದರೆ ಬಹುಶಃ ಮಗುವು ಸರಿಯಾಗಿ ಅಂಟಿಕೊಂಡಿರಲಿಕ್ಕಿಲ್ಲ.
05:35 ಸಾಧಾರಣ ಜೋಡಣೆಯ ಸಾಮಾನ್ಯ ಕಾರಣಗಳಲ್ಲಿ ಒಂದನ್ನು ನಾವು ನೋಡೋಣ.
05:40 ಅನೇಕ ತಾಯಂದಿರು ಮೊಲೆತೊಟ್ಟನ್ನು ಮಾತ್ರ ಮಗುವಿನ ಬಾಯಿಯಲ್ಲಿ ಇಡಲು, ತಮ್ಮ ಅರಿಯೋಲಾವನ್ನು ಒತ್ತಿ ಹಿಡಿಯುತ್ತಾರೆ.
05:48 ಇಲ್ಲಿ, ಮಗುವಿನ ಬಾಯಿಯು ಅಗಲವಾಗಿ ತೆರೆದಿಲ್ಲ.
05:52 ಮಗು ಮೊಲೆತೊಟ್ಟಿಗೆ ಮಾತ್ರ ಅಂಟಿಕೊಳ್ಳುತ್ತದೆ.
05:56 ಇಲ್ಲಿ, ಮಗುವಿನ ಮೇಲಿನ ಮತ್ತು ಕೆಳತುಟಿಗಳ ಹತ್ತಿರ ಅರಿಯೋಲಾದ ಸಮನಾದ ಭಾಗವು ಕಂಡುಬರುತ್ತದೆ.
06:04 ಮಗುವಿನ ಗದ್ದವು ಸ್ತನದಿಂದ ದೂರವಿದೆ.
06:07 ಮಗು ನಿರಂತರವಾಗಿ, ಬೇಗನೆ ಹಾಲು ಕುಡಿಯುವ ರೀತಿಯನ್ನು ಹೊಂದಿದೆ.
06:14 ಹೀರಿಕೊಳ್ಳುವಾಗ, ಮಗುವಿನ ಕೆನ್ನೆಗಳಲ್ಲಿ ಗುಳಿ ಬರುತ್ತದೆ.
06:17 ಹಾಲು ನುಂಗುತ್ತಿರುವಾಗ ಮಗುವಿನ ದವಡೆಯು ಸ್ಫುಟವಾಗಿ ಇಳಿಯುವುದಿಲ್ಲ.
06:23 ಮತ್ತು, ಮಗುವಿನ ಬಾಯಿಯ ಬಿರುಸಾದ ಭಾಗದಲ್ಲಿ ಮೊಲೆತೊಟ್ಟನ್ನು ಜಿಗುಟಿದಂತೆ ಹಾಗು ಒತ್ತಿದಂತೆ ಆಗುತ್ತದೆ.
06:31 ಇದು ತಾಯಿಗೆ ನೋವುಂಟುಮಾಡುತ್ತದೆ ಮತ್ತು ಮೊಲೆತೊಟ್ಟನ್ನು ಗಾಯಗೊಳಿಸಬಹುದು.
06:37 ಅಲ್ಲದೆ, ಮೊಲೆತೊಟ್ಟಿನಿಂದ ಹಾಲುಣಿಸುವಾಗ, ಅರಿಯೋಲಾದ ಕೆಳಗಿರುವ ದೊಡ್ಡ ಹಾಲಿನ ನಾಳಗಳಿಂದ ಮಗುವಿಗೆ ಹಾಲು ಸಿಗಲು ಸಾಧ್ಯವಿಲ್ಲ.
06:45 ಆದ್ದರಿಂದ, ಮಗುವಿಗೆ ಸಾಕಷ್ಟು ಹಾಲು ಸಿಗುವುದಿಲ್ಲ.
06:50 ಮಗುವು ಮೊಲೆತೊಟ್ಟಿನಿಂದ ಮಾತ್ರ ಹೀರುತ್ತಿದ್ದರೆ, ಆಗ
06:54 ಮಗುವಿನ ಬಾಯಿಯ ಮೂಲೆಯೊಳಗೆ ತಾಯಿಯು ತನ್ನ ಸ್ವಚ್ಛವಿರುವ ಕಿರುಬೆರಳನ್ನು ಹಾಕಬೇಕು.
06:59 ತನ್ನ ಮೊಲೆತೊಟ್ಟಿನ ಮೇಲಿನ ಮಗುವಿನ ಎಳೆತವನ್ನು ಬಿಡುಗಡೆ ಮಾಡಲು ಅವಳು ಅದನ್ನು ಬಳಸಬೇಕು.
07:04 ನಂತರ, ಆಕೆಯು ಮಗುವನ್ನು ಮತ್ತೆ ಅದೇ ಸ್ತನದ ಮೇಲೆ ಜೋಡಿಸಬೇಕು ಹಾಗೂ ಸರಿಯಾದ ಲ್ಯಾಚ್ ಅನ್ನು ಖಚಿತಪಡಿಸಿಕೊಳ್ಳಬೇಕು.
07:11 ಸರಿಯಾದ ಲ್ಯಾಚಿಂಗ್ ನ ನಂತರ, ಮಗು ಫೋರ್-ಮಿಲ್ಕ್ ಮತ್ತು ಹೈಂಡ್- ಮಿಲ್ಕ್ ಗಳನ್ನು ಸಾಕಷ್ಟು ಪಡೆಯುತ್ತಿದೆ ಎಂದು ತಾಯಿಯು ಖಚಿತಪಡಿಸಿಕೊಳ್ಳಬೇಕು.
07:19 ಫೋರ್- ಮಿಲ್ಕ್ ಎಂದರೆ ಸ್ತನದ ಮುಂಭಾಗದಲ್ಲಿ ಸಂಗ್ರಹವಾಗಿರುವ ನೀರಿನಂತಹ ಹಾಲು.
07:25 ಇದು ನೀರು ಮತ್ತು ಪ್ರೋಟೀನ್ ನಿಂದ ಮಾಡಲ್ಪಟ್ಟಿದೆ.
07:29 ಇದು ಮಗುವಿನ ಬೆಳವಣಿಗೆಗೆ ಮತ್ತು ಮಗುವನ್ನು ಬಲಶಾಲಿಯಾಗಿಸಲು ಅಗತ್ಯವಿರುತ್ತದೆ.
07:36 ಹೈಂಡ್ – ಮಿಲ್ಕ್, ಸ್ತನದ ಹಿಂಭಾಗದಲ್ಲಿ ಸಂಗ್ರಹವಾಗಿರುವ ಗಟ್ಟಿಯಾದ ಹಾಲು.
07:42 ಇದು ಮುಖ್ಯವಾಗಿ ಕೊಬ್ಬಿನಿಂದ ಮಾಡಲ್ಪಟ್ಟಿದೆ.
07:46 ಮಗುವಿನ ಮಿದುಳಿನ ಬೆಳವಣಿಗೆ ಮತ್ತು ತೂಕ ಹೆಚ್ಚಾಗಲು ಇದು ಅಗತ್ಯವಾಗಿದೆ.
07:53 ಮಗು ಫೋರ್-ಮಿಲ್ಕ್ ಮತ್ತು ಹೈಂಡ್- ಮಿಲ್ಕ್ ಎರಡನ್ನೂ ಪಡೆಯುತ್ತಿದೆ ಎಂದು ಖಚಿತಪಡಿಸಿಕೊಳ್ಳಲು, ತಾಯಿಯು ಇನ್ನೊಂದು ಸ್ತನವನ್ನು ಕೊಡುವ ಮೊದಲು ಒಂದು ಸ್ತನದಿಂದ ಪೂರ್ತಿಯಾಗಿ ಮಗುವಿಗೆ ಹಾಲುಣಿಸಬೇಕು.
08:05 ಮಗುವಿಗೆ ಒಂದು ಸ್ತನದಿಂದ ಸಂಪೂರ್ಣವಾಗಿ ಹಾಲುಣಿಸಿದ್ದಾಳೆಯೆ ಎಂದು ಪರಿಶೀಲಿಸಲು, ತಾಯಿಯು ಆ ಸ್ತನದಿಂದ ತನ್ನ ಕೈಯಿಂದ ಹಾಲನ್ನು ಹಿಂಡಬೇಕು.
08:15 ತೆಳುವಾದ ನೀರಿನಂತಹ ಹಾಲು ಸ್ತನದಿಂದ ಹೊರಬಂದರೆ,
08:19 ಅಥವಾ, ಹಿಂಡಿದಾಗ ಗಟ್ಟಿಯಾದ ಹೈಂಡ್ – ಮಿಲ್ಕ್ ನ ಉತ್ತಮ ಹರಿವು ಇದ್ದರೆ,
08:24 ಆಗ, ತಾಯಿಯು ತನ್ನ ಮಗುವನ್ನು ಅದೇ ಸ್ತನಕ್ಕೆ ಮತ್ತೆ ಹಿಡಿದುಕೊಳ್ಳಬೇಕು.
08:29 ಕೈಯಿಂದ ಹಿಂಡಿದಾಗ, ಗಟ್ಟಿಯಾದ ಹೈಂಡ್ – ಮಿಲ್ಕ್ ನ ಹರಿವು ಕಡಿಮೆಯಾಗಿ ಕೆಲವು ಹನಿಗಳಷ್ಟು ಮಾತ್ರ ಆದಾಗ,
08:35 ತಾಯಿಯು ಮಗುವಿಗೆ ಆ ಸ್ತನದಿಂದ ಸಂಪೂರ್ಣವಾಗಿ ಹಾಲುಣಿಸಿದ್ದಾಳೆ ಎಂದು ಅರ್ಥ.
08:41 ಆದರೆ, ಇನ್ನೊಂದು ಸ್ತನವನ್ನು ಕೊಡುವ ಮೊದಲು, ತಾಯಿಯು ಮಗುವನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು, ನಂತರ ಮಗುವನ್ನು ಸ್ವಲ್ಪ ಮುಂದಕ್ಕೆ ಬಾಗಿಸಿ ಮತ್ತು ಮಗುವಿನ ದವಡೆಯನ್ನು ತನ್ನ ಕೈಯಿಂದ ಬಟ್ಟಲಿನಂತೆ ಮಾಡಿ, ತೇಗುವಂತೆ ಪ್ರೋತ್ಸಾಹಿಸಬೇಕು.
09:00 ಮಗು 2 ರಿಂದ 3 ನಿಮಿಷಗಳೊಳಗೆ ತೇಗಬೇಕು.
09:04 ಮುಂದಿನ 5 ನಿಮಿಷಗಳಲ್ಲಿ ತೇಗು ಬರದಿದ್ದರೆ,
09:08 ಮಗು ಸ್ತನಕ್ಕೆ ಬಹಳ ಚೆನ್ನಾಗಿ ಜೋಡಿಸಿಕೊಂಡಿತ್ತು ಎಂದು ಅದರ ಅರ್ಥ.
09:14 ಮತ್ತು, ಹಾಲುಣಿಸುವಾಗ ಮಗು ತನ್ನ ಹೊಟ್ಟೆಯಲ್ಲಿ ಹೆಚ್ಚಿನ ಗಾಳಿಯನ್ನು ಒಳಗೆ ತೆಗೆದುಕೊಂಡಿಲ್ಲ.
09:21 ಮಗುವಿಗೆ ಈಗ ತಾಯಿಯು ತನ್ನ ಇನ್ನೊಂದು ಸ್ತನದಿಂದ ಹಾಲುಣಿಸಬೇಕು.
09:26 ಮಗುವಿನ ಹೊಟ್ಟೆಯು ತುಂಬಿದ್ದರೆ, ಅದು ಇನ್ನೊಂದು ಸ್ತನದಿಂದ ಹಾಲು ಕುಡಿಯುವುದಿಲ್ಲ.
09:32 ಆದರೆ ತಾಯಿಯು ಮಗುವಿಗೆ ಯಾವಾಗಲೂ ಎರಡೂ ಸ್ತನಗಳನ್ನು ಹಾಲೂಡಲು ಕೊಡಬೇಕು.
09:39 ಅವಳು ನಿರ್ಧಾರ ಮಾಡುವುದನ್ನು ಮಗುವಿಗೇ ಬಿಡಬೇಕು.
09:45 ಸ್ತನ್ಯಪಾನ ಮಾಡುವಾಗ ಮಗು ನಿದ್ದೆ ಹೋದರೆ, ಮಗುವಿನ ಅಂಗಾಲುಗಳನ್ನು ಮೆತ್ತಗೆ ತಟ್ಟುವುದರ ಮೂಲಕ,
09:55 ಅಥವಾ ಮಗುವಿನ ಬೆನ್ನಿಗೆ ಮೆತ್ತಗೆ ಕಚಗುಳಿ ಇಟ್ಟು
09:59 ಅಥವಾ, ತೇಗಲು ತೋರಿಸಿದ ಸ್ಥಿತಿಯಲ್ಲಿ ಮಗುವನ್ನು ಕುಳಿತುಕೊಳ್ಳುವಂತೆ ಮಾಡಿ ತಾಯಿಯು ಮಗುವನ್ನು ಎಚ್ಚರಗೊಳಿಸಬೇಕು.
10:04 ಸರಿಯಾದ ತಂತ್ರದ ಜೊತೆಗೆ, ದಿನದಲ್ಲಿ ಎಷ್ಟು ಸಲ ಹಾಲುಣಿಸಬೇಕು ಎನ್ನುವುದು ಸಹ ಮುಖ್ಯವಾಗಿದೆ.
10:12 ತಾಯಿಯು ತನ್ನ ಮಗುವಿಗೆ 24 ಗಂಟೆಗಳಲ್ಲಿ ಕನಿಷ್ಠ 12 ಬಾರಿ ಹಾಲುಣಿಸಬೇಕು.
10:17 ಇದರಲ್ಲಿ ಅವಳು 2 ರಿಂದ 3 ಸಲವಾದರೂ ರಾತ್ರಿಯಲ್ಲಿ ಹಾಲುಣಿಸಬೇಕು.
10:24 ತಾಯಿಯು ಮಗುವಿಗೆ ಎದೆಹಾಲು ಕೊಡಲು: ಮಗು ಅಲುಗಾಡುವುದು,
10:32 ಬಾಯಿ ತೆಗೆಯುವುದು, ತಲೆಯನ್ನು ತಿರುಗಿಸುವುದು, ತನ್ನ ಕೈಯನ್ನು ಬಾಯಿಗೆ ತರುವುದು,
10:37 ಬೆರಳುಗಳನ್ನು ಚೀಪುವುದು ಮತ್ತು ತನ್ನ ಶರೀರವನ್ನು ಹಿಗ್ಗಿಸುವುದು ಮುಂತಾದ ಹಸಿವಿನ ಸೂಚನೆಗಳನ್ನು ಗಮನಿಸಬೇಕು.
10:42 ಮಗು ಎದೆಹಾಲಿಗಾಗಿ ಅಳುವುದಕ್ಕೆ ಪ್ರಾರಂಭಿಸಿದಲ್ಲಿ, ಆಗ ತುಂಬಾ ತಡವಾಗಿದೆ ಎಂದು ಅದರ ಅರ್ಥ.
10:49 ದಯವಿಟ್ಟು ಗಮನಿಸಿ - 2 ವಾರಗಳು, 6 ವಾರಗಳು ಮತ್ತು 3 ತಿಂಗಳ ವಯಸ್ಸಿನ ಮಗುವಿನ ಬೆಳವಣಿಗೆಯಲ್ಲಿ ಶೀಘ್ರ ಹೆಚ್ಚಳವಿದೆ.
10:59 ಮತ್ತು ಮಗುವಿಗೆ ಹೆಚ್ಚು ಹಾಲು ಬೇಕಾಗುತ್ತದೆ.
11:05 ಅಲ್ಲದೆ, ಮಗುವಿಗೆ ಹೆಚ್ಚು ಸಲ ಹಾಲುಣಿಸಿದಾಗ ತಾಯಿಯ ಎದೆಹಾಲಿನ ಉತ್ಪಾದನೆಯು ಹೆಚ್ಚಾಗುತ್ತದೆ.
11:12 ಆದ್ದರಿಂದ, ಇಂತಹ ಶೀಘ್ರ ಬೆಳವಣಿಗೆಯ ಅವಧಿಗಳಲ್ಲಿ ತಾಯಿಯು ಮೆಲಿಂದ ಮೇಲೆ ಹಾಲುಣಿಸಬೇಕು.
11:19 ನೆನಪಿಡಿ, ಮೊದಲ ಆರು ತಿಂಗಳುಗಳ ಕಾಲ ಮಗುವಿಗಾಗಿ ಎದೆಹಾಲು ಉತ್ತಮ ಪೋಷಕಾಂಶವಾಗಿದೆ.
11:30 ಮತ್ತು, ಉತ್ತಮವಾದ ಜೋಡಣೆಯು ಯಶಸ್ವಿಯಾದ ಸ್ತನ್ಯಪಾನಕ್ಕೆ ಅತ್ಯವಶ್ಯವಾಗಿದೆ.
11:36 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
11:41 ನಾವು ಈ ಟ್ಯುಟೋರಿಯಲ್ ನಲ್ಲಿ, ಮಗು ಸ್ತನಕ್ಕೆ ಗಟ್ಟಿಯಾಗಿ ಜೋಡಿಸಿಕೊಳ್ಳಲು ಬೇಕಾಗಿರುವ ಸರಿಯಾದ ಲ್ಯಾಚಿಂಗ್ ತಂತ್ರ ಮತ್ತು ಹಾಲುಣಿಸುವ ಆವರ್ತನಗಳ ಬಗ್ಗೆ ಕಲಿತಿದ್ದೇವೆ.
11:54 ಈ ಟ್ಯುಟೋರಿಯಲ್, Spoken Tutorial Project, IIT Bombay ಇವರ ಕೊಡುಗೆಯಾಗಿದೆ.
12:02 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD ಮೂಲಕ ಭಾರತ ಸರಕಾರದ ಅನುದಾನವನ್ನು ಪಡೆದಿದೆ.

ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.

12:15 ಈ ಟ್ಯುಟೋರಿಯಲ್, WHEELS Global Foundation ನ ಉದಾರ ಕೊಡುಗೆಯಿಂದ ಭಾಗಶಃ ಅನುದಾನವನ್ನು ಪಡೆದಿದೆ.
12:22 ಈ ಟ್ಯುಟೋರಿಯಲ್, Maa aur Shishu Poshan (ಮಾ ಔರ್ ಶಿಶು ಪೋಷಣ್) ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.

ಈ ಟ್ಯುಟೋರಿಯಲ್ ನ ಡೊಮೇನ್ ರಿವ್ಯೂ ಮಾಡಿದವರು Dr. ರೂಪಲ್ ದಲಾಲ್, MD ಪೀಡಿಯಾಟ್ರಿಕ್ಸ್.

12:34 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Debosmita, Sandhya.np14