Difference between revisions of "LibreOffice-Suite-Draw/C3/Basics-of-Layers-Password-Encryption-PDF/Kannada"

From Script | Spoken-Tutorial
Jump to: navigation, search
Line 154: Line 154:
 
|-
 
|-
 
|03:07
 
|03:07
|'''context menu''' ಅನ್ನು ನೋಡಲು, ರೈಟ್-ಕ್ಲಿಕ್ ಮಾಡಿ ಮತ್ತು'''Modify Layer''' ಅನ್ನು ಆಯ್ಕೆಮಾಡಿ.
+
|'''context menu''' ಅನ್ನು ನೋಡಲು, ರೈಟ್-ಕ್ಲಿಕ್ ಮಾಡಿ ಮತ್ತು '''Modify Layer''' ಅನ್ನು ಆಯ್ಕೆಮಾಡಿ.
  
 
|-
 
|-
Line 186: Line 186:
 
|-
 
|-
 
|03:45
 
|03:45
|'''Home'''ನಿಂದ '''School Campus''' ವರೆಗೆ ಎರಡು ದಾರಿಗಳನ್ನು ರಚಿಸಿ.
+
|'''Home''' ನಿಂದ '''School Campus''' ವರೆಗೆ ಎರಡು ದಾರಿಗಳನ್ನು ರಚಿಸಿ.
  
 
|-
 
|-
Line 194: Line 194:
 
|-
 
|-
 
|04:01
 
|04:01
|ನಾವು ಈಗ ಫೈಲ್ ಅನ್ನು ಒಂದು '''PDF''' ಆಗಿ ಹೇಗೆ ಎಕ್ಸ್ಪೋರ್ಟ್ ಮಾಡುವುದು ಮತ್ತು ನಮ್ಮ'''Draw''' ಫೈಲ್ ಅನ್ನು ಹೇಗೆ 'ಪಾಸ್ವರ್ಡ್ ಪ್ರೊಟೆಕ್ಟ್' ಮಾಡುವುದೆಂದು ಕಲಿಯೋಣ.  
+
|ನಾವು ಈಗ ಫೈಲ್ ಅನ್ನು ಒಂದು '''PDF''' ಆಗಿ ಹೇಗೆ ಎಕ್ಸ್ಪೋರ್ಟ್ ಮಾಡುವುದು ಮತ್ತು ನಮ್ಮ '''Draw''' ಫೈಲ್ ಅನ್ನು ಹೇಗೆ 'ಪಾಸ್ವರ್ಡ್ ಪ್ರೊಟೆಕ್ಟ್' ಮಾಡುವುದೆಂದು ಕಲಿಯೋಣ.  
 
|-
 
|-
 
|04:10
 
|04:10

Revision as of 19:53, 28 January 2019

Time Narration
00:01 LibreOffice Draw - Basics of Layers and Password Encryption PDF ಎಂಬ Spoken Tutorial ಗೆ ನಿಮಗೆ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ, ನೀವು layers ನ ಮೂಲಭೂತ ಅಂಶಗಳನ್ನು ಕಲಿಯುವಿರಿ.
00:12 ನೀವು: ಒಂದು Draw ಫೈಲ್ ಅನ್ನು password encryption (ಪಾಸ್ವರ್ಡ್ ಎನ್ಕ್ರಿಪ್ಶನ್) ಅನ್ನು ಬಳಸಿ ಹೇಗೆ ರಕ್ಷಿಸುವುದು ಮತ್ತು
00:18 ಅದನ್ನು PDF ನಂತೆ ಹೇಗೆ ಎಕ್ಸ್ಪೋರ್ಟ್ ಮಾಡುವುದು ಇವುಗಳನ್ನು ಸಹ ಕಲಿಯುವಿರಿ.
00:21 ಇಲ್ಲಿ, ನಾವು: Ubuntu Linux ಆವೃತ್ತಿ 10.04 ಆಪರೇಟಿಂಗ್ ಸಿಸ್ಟಂ ಮತ್ತು LibreOffice Suite ಆವೃತ್ತಿ 3.3.4 ಇವುಗಳನ್ನು ಬಳಸುತ್ತಿದ್ದೇವೆ.
00:30 ನಾವು 'Route Map' ಎಂಬ ಫೈಲ್ ಅನ್ನು ತೆರೆಯೋಣ.
00:33 Layers (ಲೇಯರ್ಸ್) ಎಂದರೇನು? ಲೇಯರ್ಸ್ ಗಳು ಪಾರದರ್ಶಕ ಶೀಟ್ ಗಳಾಗಿದ್ದು, ಇವುಗಳನ್ನು ಒಂದರ ಮೇಲೆ ಒಂದರಂತೆ ಇರಿಸಲಾಗಿದೆ.
00:42 ಪ್ರತಿಯೊಂದು Draw ಫೈಲ್ ಗೆ, ಮೂರು ಲೇಯರ್ ಗಳಿವೆ.
00:44 ಡೀಫಾಲ್ಟ್ ಆಗಿ, Layout (ಲೇಔಟ್) ಎಂಬ ಲೇಯರ್ ಅನ್ನು ಪ್ರದರ್ಶಿಸಲಾಗಿದೆ.
00:48 ನಮ್ಮ ಬಹುಪಾಲು ಗ್ರಾಫಿಕ್ಸ್ ಅನ್ನು ನಾವು ಇಲ್ಲಿಯೇ ರಚಿಸುತ್ತೇವೆ.
00:51 ಬಟನ್ ಮತ್ತು ಫಾರ್ಮ್ ಗಳಂತಹ ನಿಯಂತ್ರಣ ಅಂಶಗಳನ್ನು ಸಂಗ್ರಹಿಸಲು, "Controls" (ಕಂಟ್ರೋಲ್ಸ್) ಲೇಯರ್ ಅನ್ನು ಬಳಸಲಾಗುತ್ತದೆ.
00:57 ಜಟಿಲವಾದ ರೇಖಾಚಿತ್ರಗಳಿಗೆ, ಆಯಾಮ (ಡೈಮೆನ್ಶನ್) ರೇಖೆಗಳನ್ನು ಅಥವಾ ಮಾಪನ ರೇಖೆಗಳನ್ನು ನಿರೂಪಿಸಲು, "Dimension" (ಡೈಮೆನ್ಶನ್) ಲೇಯರ್ ಅನ್ನು ಬಳಸಲಾಗುತ್ತದೆ.
01:06 ಉದಾಹರಣೆಗೆ, ಒಂದು ಮನೆಯ ರೇಖಾಚಿತ್ರವು, ಖಚಿತವಾದ ಗೋಡೆಗಳ ಮಾಪನಗಳು, ವಿದ್ಯುತ್ ವೈರಿಂಗ್ ನ ಸ್ಥಾನಗಳು ಇತ್ಯಾದಿಗಳನ್ನು ಹೊಂದಿರಬೇಕು.
01:19 ಮನೆಯಿಂದ (ಹೌಸ್) ಶಾಲೆಗೆ (ಸ್ಕೂಲ್) ದಾರಿಯನ್ನು ತೋರಿಸುವ ಮೂರು ನಕ್ಷೆಗಳನ್ನು ನಾವು ಪ್ರಿಂಟ್ ಮಾಡೋಣ.
01:26 ಇವುಗಳನ್ನು Map 1, Map 2 ಮತ್ತು Map 3 ಎಂದು ಕರೆಯೋಣ.
01:31 Map 1, ಈ ಪ್ರದೇಶದಲ್ಲಿನ ಎಲ್ಲಾ ಲ್ಯಾಂಡ್-ಮಾರ್ಕ್ ಗಳನ್ನು (ಮೈಲಿಗಲ್ಲು) ತೋರಿಸುತ್ತದೆ.
01:35 Map 2 ರಲ್ಲಿ, ಎರಡು ಸರೋವರಗಳು (ಲೇಕ್ಸ್), 'ಸ್ಟೇಡಿಯಂ' ಮತ್ತು 'ಕಮರ್ಷಿಯಲ್ ಕಾಂಪ್ಲೆಕ್ಸ್' ಅನ್ನು ಹೊರತುಪಡಿಸಿ, ನಾವು ಎಲ್ಲ ಆಬ್ಜೆಕ್ಟ್ ಗಳನ್ನು ತೋರಿಸೋಣ.
01:43 Map 3 ರಲ್ಲಿ, 'ಪಾರ್ಕ್' ಅನ್ನು ಹೊರತುಪಡಿಸಿ ಎಲ್ಲ ಆಬ್ಜೆಕ್ಟ್ ಗಳನ್ನು ತೋರಿಸೋಣ.
01:48 ಇವುಗಳನ್ನು ತೋರಿಸಲು, ನಾವು ಮೂರು ಪ್ರತ್ಯೇಕ ನಕ್ಷೆಗಳನ್ನು ರಚಿಸಬೇಕೇ?
01:51 ಇಲ್ಲ. Draw, ಲೇಯರ್ಸ್ ಸಹಾಯದಿಂದ ಇದಕ್ಕೆ ಪರಿಹಾರವನ್ನು ಒದಗಿಸುತ್ತದೆ.
01:58 ಹೀಗೆ, ಹಲವು ಮಾಹಿತಿಯ ಲೇಯರ್ ಗಳನ್ನು ಹೊಂದಿದ ಕೇವಲ ಒಂದು ಮ್ಯಾಪ್ ಫೈಲ್, ಇರಬಹುದು.
02:03 ನಾವು ಒಂದು Draw ಪೇಜ್ ಅನ್ನು ಬಳಸಿ, ಲೇಯರ್ ಗಳ ಸಂಯೋಜನೆಯನ್ನು ಪ್ರಿಂಟ್ ಮಾಡಬಹುದು ಅಥವಾ ವೀಕ್ಷಿಸಬಹುದು.
02:10 ನಾವು RouteMap ಗೆ ಕೆಲವು ಲೇಯರ್ ಗಳನ್ನು ಸೇರಿಸೋಣ.
02:13 Layout ಲೇಯರ್ ನ ಮೇಲೆ ಕ್ಲಿಕ್ ಮಾಡಿ.
02:15 ರೈಟ್-ಕ್ಲಿಕ್ ಮಾಡಿ ಮತ್ತು Insert Layer ಅನ್ನು ಆಯ್ಕೆಮಾಡಿ.
02:18 Insert layer ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
02:22 Name ಫೀಲ್ಡ್ ನಲ್ಲಿ, Layer four ಎಂದು ಟೈಪ್ ಮಾಡಿ.
02:24 ನಿಮ್ಮ ರೇಖಾಚಿತ್ರಕ್ಕೆ ಸಂಬಂಧಿಸಿದಂತೆ, ಯಾವುದೇ ಶೀರ್ಷಿಕೆ ಮತ್ತು ವಿವರಣೆಯನ್ನು ನೀವು ಸೇರಿಸಬಹುದು.
02:30 “Visible” ಹಾಗೂ “Printable” ಬಾಕ್ಸ್ ಗಳನ್ನು ಗುರುತಿಸಿ.
02:34 ಡೈಲಾಗ್-ಬಾಕ್ಸ್ ನಿಂದ ಹೊರಬರಲು, OK ಅನ್ನು ಕ್ಲಿಕ್ ಮಾಡಿ.
02:37 ಮತ್ತೊಮ್ಮೆ "Layout" ಲೇಯರ್ ನ ಮೇಲೆ ಕ್ಲಿಕ್ ಮಾಡಿ.
02:40 Draw ಪೇಜ್ ನ ಮೇಲೆ, ಮ್ಯಾಪ್ ಅನ್ನು ಆಯ್ಕೆಮಾಡಿ ಮತ್ತು ಅದನ್ನು ಅನ್-ಗ್ರುಪ್ (ungroup) ಮಾಡಿ.
02:44 ಈಗ, ನಾವು Lakes ಅನ್ನು ಆಯ್ಕೆ ಮಾಡೋಣ.
02:46 Shift ಕೀಅನ್ನು ಒತ್ತಿ ಮತ್ತು Stadium ಹಾಗೂ Commercial complex ಗಳನ್ನು ಆಯ್ಕೆಮಾಡಿ.
02:52 ನಂತರ, ರೈಟ್-ಕ್ಲಿಕ್ ಮಾಡಿ ಮತ್ತು Cut ಅನ್ನು ಆಯ್ಕೆಮಾಡಿ.
02:55 ನಂತರ “Layer four” ಎಂಬ ಲೇಯರ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಅವುಗಳನ್ನು ಪೇಸ್ಟ್ ಮಾಡಿ.
02:59 Layout ಲೇಯರ್ ನಲ್ಲಿ ಇದ್ದಂತೆಯೇ, ಅದೇ ಸ್ಥಾನಗಳಲ್ಲಿ ಅವುಗಳನ್ನು ಪೇಸ್ಟ್ ಮಾಡಲಾಗಿದೆ.
03:04 ಮತ್ತೊಮ್ಮೆ Layer Four ಅನ್ನು ಕ್ಲಿಕ್ ಮಾಡಿ.
03:07 context menu ಅನ್ನು ನೋಡಲು, ರೈಟ್-ಕ್ಲಿಕ್ ಮಾಡಿ ಮತ್ತು Modify Layer ಅನ್ನು ಆಯ್ಕೆಮಾಡಿ.
03:12 Modify Layer ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
03:15 Visible ಎಂಬ ಬಾಕ್ಸ್ ಅನ್ನು ಅನ್-ಚೆಕ್ ಮಾಡಿ. OK ಅನ್ನು ಕ್ಲಿಕ್ ಮಾಡಿ.
03:18 Layer Four ನಲ್ಲಿರುವ ವಸ್ತುಗಳು ಇನ್ನು ಮುಂದೆ ಕಾಣುವುದಿಲ್ಲ.
03:21 ಆಬ್ಜೆಕ್ಟ್ ಗಳು ಅಲ್ಲಿ ಇರುತ್ತವೆ ಆದರೆ ಅವುಗಳು ಗೋಚರಿಸುವುದಿಲ್ಲ.
03:26 Layout ಲೇಯರ್ ಅನ್ನು ಕ್ಲಿಕ್ ಮಾಡಿ. ಒಂದುವೇಳೆ, ಟ್ಯಾಬ್ ಕಾಣಿಸದಿದ್ದರೆ, Layout ಲೇಯರ್ ಕಾಣಿಸುವವರೆಗೂ ಲೆಫ್ಟ್-ಆರೋ ಬಟನ್ ಅನ್ನು ಒತ್ತಿ.
03:35 ನಮ್ಮ Map 2 ಈಗ ಪೂರ್ಣಗೊಂಡಿದೆ! ಹೀಗೆಯೇ, ನಾವು Map 3 ಅನ್ನು ಸಹ ರಚಿಸಬಹುದು.
03:42 ಈ ಟ್ಯುಟೋರಿಯಲ್ ಅನ್ನು ಇಲ್ಲಿಗೆ ನಿಲ್ಲಿಸಿ ಮತ್ತು ಈ ಅಸೈನ್ಮೆಂಟ್ ಅನ್ನು ಮಾಡಿ.
03:45 Home ನಿಂದ School Campus ವರೆಗೆ ಎರಡು ದಾರಿಗಳನ್ನು ರಚಿಸಿ.
03:49 RouteMap ಚಿತ್ರದಲ್ಲಿ, ಪ್ರತಿಯೊಂದು ದಾರಿಯನ್ನು ಪ್ರತ್ಯೇಕ ಲೇಯರ್ ನಲ್ಲಿ ರಚಿಸಿ. ಇದರಿಂದಾಗಿ ಅವುಗಳನ್ನು ಎರಡು ವಿಭಿನ್ನ ನಕ್ಷೆಗಳಂತೆ ಪ್ರಿಂಟ್ ಮಾಡಬಹುದು, ಪ್ರತಿಯೊಂದೂ ಒಂದು ಮಾರ್ಗವನ್ನು ಮಾತ್ರ ಪ್ರದರ್ಶಿಸುತ್ತದೆ.
04:01 ನಾವು ಈಗ ಫೈಲ್ ಅನ್ನು ಒಂದು PDF ಆಗಿ ಹೇಗೆ ಎಕ್ಸ್ಪೋರ್ಟ್ ಮಾಡುವುದು ಮತ್ತು ನಮ್ಮ Draw ಫೈಲ್ ಅನ್ನು ಹೇಗೆ 'ಪಾಸ್ವರ್ಡ್ ಪ್ರೊಟೆಕ್ಟ್' ಮಾಡುವುದೆಂದು ಕಲಿಯೋಣ.
04:10 ಮೊದಲಿಗೆ, “RouteMap” ಎಂಬ ಈ Draw ಫೈಲ್ ಅನ್ನು, 'PDF' ಎಂದು ಸೇವ್ ಮಾಡೋಣ.
04:14 ಮೇನ್ ಮೆನುವಿನಿಂದ, File ಅನ್ನು ಆಯ್ಕೆಮಾಡಿ ಮತ್ತು “Export as PDF” ಅನ್ನು ಕ್ಲಿಕ್ ಮಾಡಿ.
04:19 PDF ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
04:21 ಮೊದಲು, ನಾವು “General” ಎಂಬ ಆಯ್ಕೆಗಳನ್ನು ಆರಿಸಿಕೊಳ್ಳೋಣ.
04:24 “General” ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
04:26 ನಾವು Draw ಫೈಲ್ ನಲ್ಲಿರುವ ಎಲ್ಲ ಪೇಜ್ ಗಳನ್ನು 'ಪಿಡಿಎಫ್' ಗೆ ಪರಿವರ್ತಿಸುತ್ತಿದ್ದೇವೆ. ಆದ್ದರಿಂದ Range ನ ಅಡಿಯಲ್ಲಿ, All ಅನ್ನು ಆಯ್ಕೆಮಾಡೋಣ.
04:34 Images ನ ಅಡಿಯಲ್ಲಿ, ನಾವು “JPEG compression” ಅನ್ನು ಆಯ್ಕೆಮಾಡುವೆವು.
04:38 ಇದು, ಕಂಪ್ರೆಶನ್ ಗಾಗಿ ಬಳಸಲಾಗುವ ಅತ್ಯಂತ ಸಾಮಾನ್ಯ ಫಾರ್ಮ್ಯಾಟ್ ಆಗಿದೆ.
04:42 ಈಗ, Initial View ಟ್ಯಾಬ್ ಅನ್ನು ಕ್ಲಿಕ್ ಮಾಡಿ.
04:45 ನಾವು ಡೈಲಾಗ್-ಬಾಕ್ಸ್ ನಲ್ಲಿ ತೋರಿಸಲಾದ ಡೀಫಾಲ್ಟ್ ವ್ಯಾಲ್ಯೂಗಳನ್ನು ಇರಿಸಿಕೊಳ್ಳುತ್ತೇವೆ.
04:49 ಈಗ, Links ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
04:52 ನಾವು Draw ಫೈಲ್ ನಲ್ಲಿ ಲಿಂಕ್ ಗಳನ್ನು ಸೇರಿಸಿರಬಹುದು.
04:55 ಮತ್ತೊಮ್ಮೆ, Links ಗಾಗಿ ಸೆಟ್ ಮಾಡಿದ ಡೀಫಾಲ್ಟ್ ವ್ಯಾಲ್ಯೂಗಳನ್ನು ಇರಿಸೋಣ.
04:59 ಈಗ, 'ಪಿ ಡಿ ಎಫ್' ಡಾಕ್ಯುಮೆಂಟ್ ಅನ್ನು ರಕ್ಷಿಸಲು, ಒಂದು ಪಾಸ್ವರ್ಡ್ ಅನ್ನು ಕೊಡೋಣ.
05:03 ಇದಕ್ಕಾಗಿ, “Security” ಟ್ಯಾಬ್ ಅನ್ನು ಕ್ಲಿಕ್ ಮಾಡಿ.
05:07 Set open password ಬಟನ್ ಮೇಲೆ ಕ್ಲಿಕ್ ಮಾಡಿ.
05:10 Set Open Password ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
05:14 “Password” ಫೀಲ್ಡ್ ನಲ್ಲಿ, ನಿಮ್ಮ ಫೈಲ್ ಅನ್ನು ರಕ್ಷಿಸಲು ನಿಮಗಿಷ್ಟವಾದ ಯಾವುದೇ ಪಾಸ್ವರ್ಡ್ ಅನ್ನು ಟೈಪ್ ಮಾಡಿ.
05:20 ನಾನು ನನ್ನ ಪಾಸ್ವರ್ಡ್ ಅನ್ನು "Protect101" ಎಂದು ಸೆಟ್ ಮಾಡುತ್ತೇನೆ.
05:24 Confirm ಫೀಲ್ಡ್ ನಲ್ಲಿ, ನಾನು ನನ್ನ ಪಾಸ್ವರ್ಡ್- “Protect101” ಅನ್ನು ಪುನಃ ಟೈಪ್ ಮಾಡುತ್ತೇನೆ. OK ಅನ್ನು ಕ್ಲಿಕ್ ಮಾಡಿ.
05:31 ನಂತರ, ಡಾಕ್ಯುಮೆಂಟ್ ಅನ್ನು ಪ್ರಿಂಟ್ ಮಾಡಲು ಅಥವಾ ಮಾರ್ಪಡಿಸಲು ಪರ್ಮಿಶನ್ ಪಾಸ್ವರ್ಡ್ ಅನ್ನು ನಾವು ಸೆಟ್ ಮಾಡೋಣ.
05:37 Set permission password ಬಟನ್ ಮೇಲೆ ಕ್ಲಿಕ್ ಮಾಡಿ.
05:41 Password ಫೀಲ್ಡ್ ನಲ್ಲಿ, ನಿಮಗಿಷ್ಟವಾದ ಪಾಸ್ವರ್ಡ್ ಅನ್ನು ಟೈಪ್ ಮಾಡಿ. ನಾನು ProtectAgain0 ಎಂದು ಟೈಪ್ ಮಾಡುತ್ತೇನೆ.
05:49 Confirm ಫೀಲ್ಡ್ ನಲ್ಲಿ , ನಾನು ಪಾಸ್ವರ್ಡ್ ProtectAgain0 ಅನ್ನು ಪುನಃ ಟೈಪ್ ಮಾಡುತ್ತೇನೆ ಮತ್ತು OK ಅನ್ನು ಕ್ಲಿಕ್ ಮಾಡುತ್ತೇನೆ.
05:57 ಈಗ Printing ಮತ್ತು Changes ಗಾಗಿ ಪರ್ಮಿಶನ್ ಗಳು ಸಕ್ರಿಯವಾಗಿರುವುದನ್ನು ಗಮನಿಸಿ.
06:03 ಸಂಖ್ಯೆಗಳು ಮತ್ತು ವಿಶೇಷ ಅಕ್ಷರಗಳನ್ನು ಹೊಂದಿರುವ, ಕನಿಷ್ಠ ಆರು ಅಕ್ಷರಗಳ ಪಾಸ್ವರ್ಡ್ ಅನ್ನು ಆರಿಸಿಕೊಳ್ಳುವುದು ಒಳ್ಳೆಯ ಅಭ್ಯಾಸ.
06:14 Printing ನ ಅಡಿಯಲ್ಲಿ, Not Permitted ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
06:18 ಸರಿಯಾದ ಪಾಸ್ವರ್ಡ್ ಅನ್ನು ಒದಗಿಸಿದರೆ ಮಾತ್ರ 'ಪಿಡಿಎಫ್' ಅನ್ನು ಪ್ರಿಂಟ್ ಮಾಡಬಹುದು. ಇಲ್ಲದಿದ್ದರೆ ಅದನ್ನು ಪ್ರಿಂಟ್ ಮಾಡಲು ಸಾಧ್ಯವಿಲ್ಲ.
06:25 Changes ನ ಅಡಿಯಲ್ಲಿ, Not Permitted ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
06:29 ಸರಿಯಾದ ಪಾಸ್ವರ್ಡ್ ಅನ್ನು ಒದಗಿಸಿದರೆ ಮಾತ್ರ, ಪಾಸ್ವರ್ಡ್ ಅನ್ನು ಎಡಿಟ್ ಮಾಡಬಹುದು, ಇಲ್ಲದಿದ್ದರೆ ಇದನ್ನು ಬದಲಾಯಿಸಲು ಸಾಧ್ಯವಿಲ್ಲ.
06:36 ಈಗ ನಾವು, ಕೆಳಗಿರುವ Export' ಬಟನ್ ಅನ್ನು ಕ್ಲಿಕ್ ಮಾಡೋಣ.
06:41 Export ಎಂಬ ಡೈಲಾಗ್- ಬಾಕ್ಸ್ ಕಾಣಿಸಿಕೊಳ್ಳುತ್ತದೆ.
06:43 ಎಡಗಡೆಯ ಪ್ಯಾನೆಲ್ ನಿಂದ, Places ನ ಅಡಿಯಲ್ಲಿ, ನಿಮ್ಮ ಫೈಲ್ ಅನ್ನು ಸೇವ್ ಮಾಡಬೇಕಾದ ಸ್ಥಳವನ್ನು ಕ್ಲಿಕ್ ಮಾಡಿ. ನಾನು Desktop ಅನ್ನು ಆಯ್ಕೆಮಾಡುತ್ತೇನೆ.
06:53 File type ನ ಅಡಿಯಲ್ಲಿ, PDF - Portable Document Format ಅನ್ನು ಕ್ಲಿಕ್ ಮಾಡಿ.
06:57 ಮತ್ತು Save ಬಟನ್ ನ ಮೇಲೆ ಕ್ಲಿಕ್ ಮಾಡಿ.
07:01 Draw ಫೈಲ್ ಅನ್ನು ಈಗ PDF ಫೈಲ್ ಆಗಿ ಪರಿವರ್ತಿಸಲಾಗಿದೆ ಮತ್ತು ಅದನ್ನು ಡೆಸ್ಕ್-ಟಾಪ್ ನ ಮೇಲೆ ಸೇವ್ ಮಾಡಲಾಗಿದೆ.
07:07 ಈಗ ನಾವು ಡೆಸ್ಕ್-ಟಾಪ್ ಗೆ ಬದಲಾಯಿಸೋಣ.
07:09 ಡೆಸ್ಕ್-ಟಾಪ್ ನಲ್ಲಿ, RouteMap PDF ಫೈಲ್ ನ ಮೇಲೆ ಡಬಲ್-ಕ್ಲಿಕ್ ಮಾಡಿ.
07:14 Enter password ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
07:17 "Password" ಫೀಲ್ಡ್ ನಲ್ಲಿ, ನಾವು Protect111 ಎಂದು ತಪ್ಪು ಪಾಸ್ವರ್ಡ್ ಅನ್ನು ಟೈಪ್ ಮಾಡೋಣ.
07:23 Unlock Document ಬಟನ್ ಮೇಲೆ ಕ್ಲಿಕ್ ಮಾಡಿ.
07:26 password ಫೀಲ್ಡ್, ಖಾಲಿ ಆಗಿರುವುದನ್ನು ನೀವು ನೋಡುವಿರಿ ಹಾಗೂ ಪಾಸ್ವರ್ಡ್ ಅನ್ನು ಮತ್ತೊಮ್ಮೆ ನಮೂದಿಸಲು ನಮಗೆ ಸೂಚಿಸಲಾಗುತ್ತದೆ.
07:35 Password ಫೀಲ್ಡ್ ನಲ್ಲಿ, ನಾವು ಸರಿಯಾದ ಪಾಸ್ವರ್ಡ್ "Protect101" ಅನ್ನು ಟೈಪ್ ಮಾಡೋಣ.
07:40 Unlock Document ಬಟನ್ ನ ಮೇಲೆ ಕ್ಲಿಕ್ ಮಾಡಿ. PDF ಫೈಲ್ ತೆರೆಯುತ್ತದೆ.
07:46 ನಮ್ಮDraw ಫೈಲ್ ಅನ್ನು ನಾವು PDF ಆಗಿ ಪರಿವರ್ತಿಸಿದ್ದೇವೆ ಮತ್ತು ಇದನ್ನು ಯಶಸ್ವಿಯಾಗಿ password-protected ಮಾಡಲಾಗಿದೆ!
07:53 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
07:57 ಇಲ್ಲಿ ನಾವು: ಲೇಯರ್ಸ್ ಬಗ್ಗೆ,
08:00 ಒಂದು Draw ಫೈಲ್ ಅನ್ನು PDF ಆಗಿ ಪರಿವರ್ತಿಸಲು ಮತ್ತು
08:03 ಇದನ್ನು 'ಪಾಸ್ವರ್ಡ್ ಎನ್ಕ್ರಿಪ್ಶನ್' (password encryption) ಬಳಸಿಕೊಂಡು ಹೇಗೆ ರಕ್ಷಿಸುವುದು ಎಂಬುದನ್ನು ಕಲಿತಿದ್ದೇವೆ.
08:08 ನಿಮಗಾಗಿ ಇಲ್ಲಿ ಒಂದು ಅಸೈನ್ಮೆಂಟ್ ಇದೆ.
08:11 “RouteMap” ಫೈಲ್ ನ ಇನ್ನೊಂದುPDF ಅನ್ನು ರಚಿಸಿ.
08:14 PDF ಡೈಲಾಗ್-ಬಾಕ್ಸ್ ನಲ್ಲಿ, “Initial View” ಆಯ್ಕೆಗಳನ್ನು ಬದಲಾಯಿಸಿ.
08:17 ಏನಾಗುತ್ತದೆ ಎಂಬುದನ್ನು ಗಮನಿಸಿ.
08:20 “User Interface” ಗಾಗಿ ಇರುವ ಎಲ್ಲ ಆಯ್ಕೆಗಳನ್ನು ಚೆಕ್ ಮಾಡಿ.
08:23 permission passwords ಅನ್ನು ಸೆಟ್ ಮಾಡಿ.
08:25 PDF ಅನ್ನು ಪ್ರಿಂಟ್ ಮಾಡಿ.
08:28 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ.
08:31 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
08:34 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:40 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು:
08:42 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
08:45 ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:50 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:

contact at spoken hyphen tutorial dot org.

08:58 Spoken Tutorial ಪ್ರಕಲ್ಪವು, Talk to a Teacher ಎಂಬ ಪ್ರಕಲ್ಪದ ಒಂದು ಭಾಗವಾಗಿದೆ.
09:03 ಇದು ನ್ಯಾಶನಲ್ ಮಿಶನ್ ಆನ್ ಎಜುಕೇಶನ್, ICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
09:11 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:

spoken hyphen tutorial dot org slash NMEICT hyphen Intro

09:23 ಈ ಟ್ಯುಟೋರಿಯಲ್, DesiCrew Solutions Pvt. Ltd ಅವರ ಕೊಡುಗೆಯಾಗಿದೆ. ಈ ಸ್ಕ್ರಿಪ್ಟ್ ನ ಅನುವಾದಕಿ, ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ...

ವಂದನೆಗಳು.

Contributors and Content Editors

Sandhya.np14