Difference between revisions of "Netbeans/C3/Connecting-to-a-MySQL-Database/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 202: | Line 202: | ||
|- | |- | ||
| 04:36 | | 04:36 | ||
− | |ಮೊದಲು, '''MySQL database''' ಸರ್ವರ್, ನಿಮ್ಮ ಮಷಿನ್ ನಲ್ಲಿ ರನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ | + | |ಮೊದಲು, '''MySQL database''' ಸರ್ವರ್, ನಿಮ್ಮ ಮಷಿನ್ ನಲ್ಲಿ ರನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. |
|- | |- | ||
Line 292: | Line 292: | ||
|- | |- | ||
| 07:00 | | 07:00 | ||
− | |''' Tables, Views''' ಮತ್ತು'''Procedures. ''' | + | |''' Tables, Views''' ಮತ್ತು '''Procedures.''' |
|- | |- | ||
Line 311: | Line 311: | ||
|- | |- | ||
| 07:42 | | 07:42 | ||
− | |ಈ ಕ್ವೆರಿಯನ್ನು ಎಕ್ಸೀಕ್ಯೂಟ್ ಮಾಡಲು, ಮೇಲ್ಗಡೆ ಇರುವ ಟಾಸ್ಕ್ ಬಾರ್ ನಲ್ಲಿ '''Run SQL''' ಐಕಾನ್ ಅನ್ನು ರೈಟ್-ಕ್ಲಿಕ್ ಮಾಡಿ | + | |ಈ ಕ್ವೆರಿಯನ್ನು ಎಕ್ಸೀಕ್ಯೂಟ್ ಮಾಡಲು, ಮೇಲ್ಗಡೆ ಇರುವ ಟಾಸ್ಕ್ ಬಾರ್ ನಲ್ಲಿ '''Run SQL''' ಐಕಾನ್ ಅನ್ನು ರೈಟ್-ಕ್ಲಿಕ್ ಮಾಡಿ. |
|- | |- | ||
| 07:51 | | 07:51 | ||
Line 401: | Line 401: | ||
|- | |- | ||
| 10:43 | | 10:43 | ||
− | |ಮೇನ್ ವಿಂಡೊದಲ್ಲಿ, ಒಂದು ಹೊಸ '''SQL ''' ಎಡಿಟರ್ ತೆರೆದುಕೊಳ್ಳುತ್ತದೆ. | + | |ಮೇನ್ ವಿಂಡೊದಲ್ಲಿ, ಒಂದು ಹೊಸ '''SQL''' ಎಡಿಟರ್ ತೆರೆದುಕೊಳ್ಳುತ್ತದೆ. |
|- | |- | ||
| 10:47 | | 10:47 |
Revision as of 10:51, 8 October 2018
Time | Narration |
00:00 | ಎಲ್ಲರಿಗೂ ನಮಸ್ಕಾರಗಳು. |
00:02 | 'Connecting to a MySQL Database' ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:09 | MySQL ಸರ್ವರ್ ನ ಗುಣಲಕ್ಷಣಗಳನ್ನು ಕಾನ್ಫಿಗರ್ ಮಾಡಲು, |
00:14 | MySQL ಸರ್ವರ್ ಅನ್ನು ಪ್ರಾರಂಭಿಸಲು, |
00:17 | ಡೇಟಾಬೇಸ್ ಅನ್ನು ರಚಿಸಲು ಮತ್ತು ಅದನ್ನು ಸಂಪರ್ಕಿಸಲು ಕಲಿಯುವೆವು. |
00:20 | ಡೇಟಾಬೇಸ್ ಟೇಬಲ್ ಗಳನ್ನು ರಚಿಸಲು- ಇದರಲ್ಲಿ ನಾವು ಎರಡು ವಿಧಾನಗಳನ್ನು ನೋಡುವೆವು: |
00:26 | 1. sql ಎಡಿಟರ್ ಅನ್ನು ಬಳಸುವುದು |
00:29 | 2. create table ಡೈಲಾಗ್ ಅನ್ನು ಬಳಸುವುದು |
00:33 | ಮತ್ತು ಕೊನೆಯದಾಗಿ, SQL ಸ್ಕ್ರಿಪ್ಟ್ ಅನ್ನು ರನ್ ಮಾಡಲು ಕಲಿಯುವೆವು. |
00:37 | ಇಲ್ಲಿ, ವಿವರಣೆಗಾಗಿ ನಾನು Linux Operating System Ubuntu ಆವೃತ್ತಿ 12.04 |
00:44 | ಮತ್ತು Netbeans IDE ಆವೃತ್ತಿ 7.1.1 ಇವುಗಳನ್ನು ಬಳಸುತ್ತಿದೇನೆ. |
00:48 | ನಿಮಗೆ Java Development Kit (JDK) ಆವೃತ್ತಿ 6 |
00:54 | ಮತ್ತು MySQL database ಸರ್ವರ್ ನ ಆವಶ್ಯಕತೆ ಸಹ ಇದೆ. |
00:57 | ಈ ಟ್ಯುಟೋರಿಯಲ್ ಅನ್ನು ಕಲಿಯಲು, 'ಡೇಟಾಬೇಸ್ ಮ್ಯಾನೇಜ್ಮೆಂಟ್' ನ ಬಗ್ಗೆ ತಿಳಿದಿರುವುದು ಅಗತ್ಯವಾಗಿದೆ. |
01:03 | ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು, ಇಲ್ಲಿ ತೋರಿಸಿದ ಲಿಂಕ್ ನಲ್ಲಿ PHP and MySQL ಸ್ಪೋಕನ್ ಟ್ಯುಟೋರಿಯಲ್ ಗಳನ್ನು ನೋಡಿ. |
01:10 | ಈ ಟ್ಯುಟೋರಿಯಲ್ ನಲ್ಲಿ, ಪ್ರಮಾಣಿತ ಪ್ರೋಗ್ರಾಮಿಂಗ್ ಪರಿಭಾಷೆಯನ್ನು ಬಳಸಲಾಗಿದೆ. |
01:16 | ಈ ಟ್ಯುಟೋರಿಯಲ್, Netbeans IDE ಇಂದ MySQL database ಗೆ ಸಂಪರ್ಕವನ್ನು ಹೇಗೆ ಒದಗಿಸಬೇಕೆಂದು ತೋರಿಸುತ್ತದೆ. |
01:24 | ಒಮ್ಮೆ ಸಂಪರ್ಕ ವನ್ನು ಕೊಟ್ಟ ನಂತರ, ನಾವು IDE ಯ Database Explorer ನಲ್ಲಿ, MySQL ನೊಂದಿಗೆ ಕೆಲಸ ಮಾಡುವೆವು. |
01:31 | ಈಗ ನಾವು IDE ಗೆ ಬದಲಾಯಿಸೋಣ. |
01:36 | Netbeans IDE, MySQL RDBMS ಗಾಗಿ ಬೇಕಾದ ಎಲ್ಲ ಸಪೋರ್ಟ್ ನೊಂದಿಗೆ ಬರುತ್ತದೆ. |
01:42 | 'ನೆಟ್ಬೀನ್ಸ್' ನಲ್ಲಿ MySQL ಡೇಟಾಬೇಸ್ ಸರ್ವರ್ ಅನ್ನು ಆಕ್ಸೆಸ್ ಮಾಡುವ ಮೊದಲು, MySQL ಸರ್ವರ್ ನ ಗುಣಲಕ್ಷಣಗಳನ್ನು ನೀವು ಕಾನ್ಫಿಗರ್ ಮಾಡಲೇಬೇಕು. |
01:51 | Services ವಿಂಡೋದಲ್ಲಿ, Databases ನೋಡ್ ನ ಮೇಲೆ ರೈಟ್-ಕ್ಲಿಕ್ ಮಾಡಿ. |
01:56 | MySQL server properties ಎಂಬ ಡೈಲಾಗ್-ಬಾಕ್ಸ್ ಅನ್ನು ತೆರೆಯಲು, Register MySQL Server ಅನ್ನು ಆರಿಸಿಕೊಳ್ಳಿ. |
02:05 | Server Host Name ಮತ್ತು Port ಗಳು ಸರಿಯಾಗಿವೆ ಎಂದು ಖಚಿತಪಡಿಸಿಕೊಳ್ಳಿ. |
02:10 | ಗಮನಿಸಿ: IDE, "localhost" ಅನ್ನು ಡೀಫಾಲ್ಟ್ server host name ಎಂದು ನಮೂದಿಸುತ್ತದೆ. |
02:18 | 3306, ಡೀಫಾಲ್ಟ್ server port ನಂಬರ್ ಆಗಿದೆ. |
02:23 | ಇಲ್ಲಿ ತೋರಿಸಿರದಿದ್ದರೆ, Administrator Username ಅನ್ನು ನಮೂದಿಸಿ. |
02:27 | ನನ್ನ ಸಿಸ್ಟಂನಲ್ಲಿ, Administrator Username, "root" ಎಂದು ಇದೆ. |
02:33 | Administrator password ಅನ್ನು ನಮೂದಿಸಿ. |
02:36 | ನನ್ನ ಸಿಸ್ಟಂನಲ್ಲಿ, ಪಾಸ್ವರ್ಡ್ ಅನ್ನು ನಮೂದಿಸಿಲ್ಲ. |
02:40 | ಡೈಲಾಗ್-ಬಾಕ್ಸ್ ನ ಮೇಲ್ಭಾಗದಲ್ಲಿರುವ Admin Properties ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
02:45 | MySQL server ಅನ್ನು ನಿಯಂತ್ರಿಸಲಿಕ್ಕಾಗಿ ಮಾಹಿತಿಯನ್ನು ನಮೂದಿಸಲು ಇದು ನಿಮಗೆ ಅನುಮತಿಸುತ್ತದೆ. |
02:51 | Path/URL to admin tool: ಫೀಲ್ಡ್ ನಲ್ಲಿ, |
02:56 | ನಿಮ್ಮ MySQL Administration ಅಪ್ಲಿಕೇಶನ್ ಇರುವ ಲೊಕೇಶನ್ ಅನ್ನು (ಸ್ಥಳವನ್ನು) ಟೈಪ್ ಮಾಡಿ ಅಥವಾ ಅಲ್ಲಿಗೆ ಬ್ರೌಸ್ ಮಾಡಿ. |
03:02 | ನನ್ನ ಸಿಸ್ಟಂನಲ್ಲಿ, ಟೂಲ್ ನ ಲೊಕೇಶನ್, /usr/bin/mysqladmin ಆಗಿದೆ. |
03:12 | Arguments ಫೀಲ್ಡ್ ನಲ್ಲಿ, admin tool ಗಾಗಿ ಯಾವುದೇ ಆರ್ಗ್ಯುಮೆಂಟ್ ಗಳನ್ನು ಟೈಪ್ ಮಾಡಿ. |
03:18 | ಇದನ್ನು ಖಾಲಿಯಾಗಿಯೂ ಇಡಬಹುದು. |
03:22 | Path to start command: ಫೀಲ್ಡ್ ನಲ್ಲಿ, |
03:25 | MySQL start ಕಮಾಂಡ್ ಇರುವ ಲೊಕೇಶನ್ ಅನ್ನು ಟೈಪ್ ಮಾಡಿ ಅಥವಾ ಅಲ್ಲಿಗೆ ಬ್ರೌಸ್ ಮಾಡಿ. |
03:29 | ನನ್ನ ಸಿಸ್ಟಂನಲ್ಲಿ, ಇದು ಹೀಗಿದೆ: /usr/bin/mysqld_safe. |
03:38 | start ಕಮಾಂಡ್ ಗಾಗಿ, Arguments ಫೀಲ್ಡ್ ನಲ್ಲಿ ಯಾವುದೇ ಆರ್ಗ್ಯುಮೆಂಟ್ ಗಳನ್ನು ಟೈಪ್ ಮಾಡಿ. |
03:42 | ಇಲ್ಲಿ, ನಾನು ಹೀಗೆ ಟೈಪ್ ಮಾಡುವೆನು: -u space root space start. |
03:51 | Path to stop command: ನಲ್ಲಿ, |
03:54 | MySQL stop ಕಮಾಂಡ್ ಇರುವ ಲೊಕೇಶನ್ ಅನ್ನು ಟೈಪ್ ಮಾಡಿ ಅಥವಾ ಅಲ್ಲಿಗೆ ಬ್ರೌಸ್ ಮಾಡಿ. |
03:58 | ಇದು, ಸಾಮಾನ್ಯವಾಗಿ MySQL ಇನ್ಸ್ಟಾಲೇಶನ್ ಡೈರೆಕ್ಟರಿಯ bin ಫೋಲ್ಡರ್ ನಲ್ಲಿ, mysqladmin ಗೆ ಪಾಥ್ ಆಗಿದೆ. |
04:06 | ನನ್ನ ಸಿಸ್ಟಂನಲ್ಲಿ, ಇದು ಹೀಗಿದೆ: /usr/bin/mysqladmin. |
04:14 | ಒಂದುವೇಳೆ, ಕಮಾಂಡ್ mysqladmin ಆಗಿದ್ದರೆ, Arguments ಫೀಲ್ಡ್ ನಲ್ಲಿ, ಹೀಗೆ ಟೈಪ್ ಮಾಡಿ: -u space root space stop. |
04:27 | ಮುಗಿದ ನಂತರ, Admin Properties ಟ್ಯಾಬ್, ಸ್ಕ್ರೀನ್ ಮೇಲೆ ತೋರಿಸಿದಂತೆ ಕಾಣಬೇಕು. |
04:33 | OK ಅನ್ನು ಕ್ಲಿಕ್ ಮಾಡಿ. |
04:36 | ಮೊದಲು, MySQL database ಸರ್ವರ್, ನಿಮ್ಮ ಮಷಿನ್ ನಲ್ಲಿ ರನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. |
04:42 | Service ವಿಂಡೋದಲ್ಲಿಯ, MySQL server ನೋಡ್, MySQL database server ಗೆ ಸಂಪರ್ಕವನ್ನು ಕೊಡಲಾಗಿದೆಯೇ ಎಂಬುದನ್ನು ತೋರಿಸುತ್ತದೆ. |
04:52 | ಅದು ರನ್ ಅಗುತ್ತಿದೆ ಎಂದು ಖಚಿತಪಡಿಸಿಕೊಂಡ ನಂತರ, Databases >> MySQL server ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Connect ಅನ್ನು ಆರಿಸಿಕೊಳ್ಳಿ. |
05:05 | MySQL server ನೋಡ್ ಅನ್ನು ವಿಸ್ತರಿಸಿದಾಗ, ಅದು ಲಭ್ಯವಿರುವ ಎಲ್ಲ MySQL database ಗಳನ್ನು ತೋರಿಸುತ್ತದೆ. |
05:13 | ಸಾಮಾನ್ಯವಾಗಿ, SQL ಎಡಿಟರ್ ಮೂಲಕ ಡೇಟಾಬೇಸ್ ಗಳೊಂದಿಗೆ ವ್ಯವಹರಿಸಲಾಗುತ್ತದೆ. |
05:19 | ಈ ಕೆಲಸಕ್ಕಾಗಿ, Netbeans ಬಿಲ್ಟ್-ಇನ್ SQL Editor ಅನ್ನು ಹೊಂದಿದೆ. |
05:23 | connection ನೋಡ್ ನ ಮೇಲೆ ರೈಟ್-ಕ್ಲಿಕ್ ಮಾಡಿ, ನೀವು ಇದನ್ನು ಆಕ್ಸೆಸ್ ಮಾಡಬಹುದು. |
05:29 | ಈಗ ನಾವು SQL ಎಡಿಟರ್ ಅನ್ನು ಬಳಸಿ, ಒಂದು ಹೊಸ 'ಡೇಟಾಬೇಸ್ ಇನ್ಸ್ಟನ್ಸ್' (database instance) ಅನ್ನು ಕ್ರಿಯೇಟ್ ಮಾಡೋಣ. |
05:34 | Services ವಿಂಡೋದಲ್ಲಿ, MySQL server ನೋಡ್ ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Create Database ಅನ್ನು ಆರಿಸಿಕೊಳ್ಳಿ. |
05:44 | Create Database ಡೈಲಾಗ್ ನಲ್ಲಿ, ಹೊಸ ಡೇಟಾಬೇಸ್ ನ ಹೆಸರನ್ನು ಟೈಪ್ ಮಾಡಿ. |
05:50 | ನಾನು ಇದನ್ನು "mynewdatabase" ಎಂದು ಹೆಸರಿಸುತ್ತೇನೆ. |
05:56 | ಯಾವುದೇ ಒಂದು ಯೂಸರ್ ನಿಗೆ, ನೀವು full access ಅನ್ನು ಸಹ ಕೊಡಬಹುದು. |
06:01 | ಡೀಫಾಲ್ಟ್ ಆಗಿ, ಅಡ್ಮಿನ್ ಯೂಸರ್ ನು ಮಾತ್ರ ಕೆಲವು ಕಮಾಂಡ್ ಗಳನ್ನು ನಿರ್ವಹಿಸಲು ಪರ್ಮಿಶನ್ ಗಳನ್ನು ಹೊಂದಿರುತ್ತಾನೆ. |
06:08 | ಈ ಡ್ರಾಪ್-ಡೌನ್ ಲಿಸ್ಟ್, ಪರ್ಮಿಶನ್ ಗಳನ್ನು ಒಬ್ಬ ನಿರ್ದಿಷ್ಟ ಯೂಸರ್ ನಿಗೆ ಕೊಡಲು ನಿಮಗೆ ಅನುಮತಿಸುತ್ತದೆ. |
06:13 | ಟೇಬಲ್ ಗಳನ್ನು 'ಡ್ರಾಪ್' ಮಾಡುವುದನ್ನು ಹೊರತುಪಡಿಸಿ, ಬಳಕೆದಾರರಿಗೆ ಹೆಚ್ಚಿನ ಪರ್ಮಿಶನ್ ಗಳನ್ನು ಒದಗಿಸುವುದು ಒಳ್ಳೆಯ ಅಭ್ಯಾಸವಾಗಿದೆ. |
06:18 | ಮತ್ತು ಅವರ ಅಪ್ಲಿಕೇಶನ್ ನಿಂದ ಕ್ರಿಯೇಟ್ ಮಾಡಲಾದ ಡೇಟಾಬೇಸ್ ಗಳನ್ನು ಮಾತ್ರ ಮಾರ್ಪಡಿಸಲು ಬಳಕೆದಾರರಿಗೆ ಅನುಮತಿ ಕೊಡಬೇಕು. |
06:25 | ಆದರೆ ಸಧ್ಯಕ್ಕೆ, ನಾವು ಚೆಕ್-ಬಾಕ್ಸ್ ಅನ್ನು ಆಯ್ಕೆಮಾಡುವುದು ಬೇಡ. |
06:30 | OK ಅನ್ನು ಕ್ಲಿಕ್ ಮಾಡಿ. |
06:34 | ಈಗ ನಾವು ಟೇಬಲ್ ಗಳನ್ನು, ಕ್ರಿಯೇಟ್ ಮಾಡೋಣ. ಅವುಗಳನ್ನು ಡೇಟಾದಿಂದ ತುಂಬಿಸೋಣ. ಮತ್ತು ಟೇಬಲ್ ಗಳಲ್ಲಿ ನಿರ್ವಹಿಸಲಾದ ಡೇಟಾಅನ್ನು ಮಾರ್ಪಡಿಸೋಣ. |
06:41 | "mynewdatabase" ಸಧ್ಯಕ್ಕೆ ಖಾಲಿ ಇದೆ. |
06:44 | ಟೇಬಲ್ ಗಳಲ್ಲಿ ಡೇಟಾಅನ್ನು ಸೇರಿಸಲು, ಮೊದಲನೆಯ ವಿಧಾನವನ್ನು ನಾವು ನೋಡೋಣ. |
06:48 | Database explorer ನಲ್ಲಿ, mynewdatabase ಕನೆಕ್ಷನ್ ನೋಡ್ ಅನ್ನು ವಿಸ್ತರಿಸಿ. |
06:58 | ಇಲ್ಲಿ ಮೂರು ಸಬ್-ಫೋಲ್ಡರ್ ಗಳಿವೆ: |
07:00 | Tables, Views ಮತ್ತು Procedures. |
07:04 | Tables ಫೋಲ್ಡರ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Execute Command ಅನ್ನು ಆರಿಸಿಕೊಳ್ಳಿ. |
07:11 | ಮೇನ್ ವಿಂಡೋದಲ್ಲಿ, SQL Editor ನಲ್ಲಿ ಒಂದು ಖಾಲಿ ಕ್ಯಾನ್ವಾಸ್ ತೆರೆದುಕೊಳ್ಳುತ್ತದೆ. |
07:16 | ನಾವು ಈ SQL editor ನಲ್ಲಿ, ಒಂದು ಸರಳವಾದ ಕ್ವೆರಿಯನ್ನು ಟೈಪ್ ಮಾಡೋಣ. |
07:30 | ಈಗ ನಾನು SQL editor ನಲ್ಲಿ, ಒಂದು ಸರಳವಾದ ಕ್ವೆರಿಯನ್ನು ಟೈಪ್ ಮಾಡಿದ್ದೇನೆ. |
07:36 | ಇದು, ಸಧ್ಯದಲ್ಲೇ ನಾವು ಕ್ರಿಯೇಟ್ ಮಾಡಲಿರುವ Counselor ಎಂಬ ಟೇಬಲ್ ಗಾಗಿ ವ್ಯಾಖ್ಯಾನವಾಗಿದೆ. |
07:42 | ಈ ಕ್ವೆರಿಯನ್ನು ಎಕ್ಸೀಕ್ಯೂಟ್ ಮಾಡಲು, ಮೇಲ್ಗಡೆ ಇರುವ ಟಾಸ್ಕ್ ಬಾರ್ ನಲ್ಲಿ Run SQL ಐಕಾನ್ ಅನ್ನು ರೈಟ್-ಕ್ಲಿಕ್ ಮಾಡಿ. |
07:51 | ಅಥವಾ, SQL Editorನ ಒಳಗಡೆ ರೈಟ್-ಕ್ಲಿಕ್ ಮಾಡಿ ಹಾಗೂ Run Statement ಅನ್ನು ಆರಿಸಿಕೊಳ್ಳಿ. |
08:00 | IDE, Counselor ಎಂಬ ಟೇಬಲ್ ಅನ್ನು ಡೇಟಾಬೇಸ್ ನಲ್ಲಿ ತಯಾರಿಸುತ್ತದೆ. |
08:04 | ನೀವು ಈ ಮೆಸೇಜ್ ಅನ್ನು Output ವಿಂಡೋದಲ್ಲಿ ನೋಡಬಹುದು. |
08:12 | ಕಮಾಂಡ್ ಅನ್ನು ಯಶಸ್ವಿಯಾಗಿ ಎಕ್ಸೀಕ್ಯೂಟ್ ಮಾಡಲಾಗಿದೆ ಎಂದು ಇದು ಹೇಳುತ್ತದೆ. |
08:17 | ಈ ಬದಲಾವಣೆಗಳನ್ನು ಪರೀಕ್ಷಿಸಲು, Database Explorer ನಲ್ಲಿ Tables ನೋಡ್ ಅನ್ನು ರೈಟ್-ಕ್ಲಿಕ್ ಮಾಡಿ. |
08:25 | Refresh ಅನ್ನು ಆರಿಸಿಕೊಳ್ಳಿ. |
08:28 | ಇದು, ಸೂಚಿಸಲಾದ ಡೇಟಾಬೇಸ್ ನ ಪ್ರಸ್ತುತ ಸ್ಟ್ಯಾಟಸ್ ಅನ್ನು ಅಪ್-ಡೇಟ್ ಮಾಡುತ್ತದೆ. |
08:32 | ಈ ಹೊಸ Counselor ಟೇಬಲ್, Tables ಎಂಬ ಆಯ್ಕೆಯ ಅಡಿಯಲ್ಲಿ ಈಗ ಕಾಣಿಸುತ್ತದೆ. |
08:40 | Table ನೋಡ್ ಅನ್ನು ವಿಸ್ತರಿಸಿದರೆ, ನೀವು ಕ್ರಿಯೇಟ್ ಮಾಡಿದ ಕಾಲಂ ಗಳನ್ನು ನೋಡಬಹುದು. |
08:46 | ಈಗ ನಾವು ಟೇಬಲ್ ಗಳಲ್ಲಿ ಡೇಟಾ ಅನ್ನು ಸೇರಿಸಲು ಇನ್ನೊಂದು ವಿಧಾನವನ್ನು ನೋಡೋಣ. |
08:51 | ಅರ್ಥಾತ್, Create Table ಡೈಲಾಗ್ ಅನ್ನು ಬಳಸಿ. |
08:54 | Database Explorer ನಲ್ಲಿ, Tables ನೋಡ್ ಅನ್ನು ರೈಟ್-ಕ್ಲಿಕ್ ಮಾಡಿ. ಮತ್ತು Create Table ಅನ್ನು ಆರಿಸಿಕೊಳ್ಳಿ. |
09:03 | ಈಗ Create Table ಎಂಬ ಡೈಲಾಗ್ ತೆರೆದುಕೊಳ್ಳುತ್ತದೆ. |
09:06 | Table name ಎಂಬ ಟೆಕ್ಸ್ಟ್-ಫೀಲ್ಡ್ ನಲ್ಲಿ, "Subject" ಎಂದು ಟೈಪ್ ಮಾಡಿ. |
09:13 | Add Column ಮೇಲೆ ಕ್ಲಿಕ್ ಮಾಡಿ. |
09:16 | Add Column ಡೈಲಾಗ್ ನಲ್ಲಿ, Name ಫೀಲ್ಡ್ ನಲ್ಲಿ "id" ಎಂದು ಟೈಪ್ ಮಾಡಿ. |
09:22 | ಡೇಟಾ-ಟೈಪ್ ಗಾಗಿ, Type ಡ್ರಾಪ್-ಡೌನ್ ಮೆನ್ಯುದಿಂದ SMALLINT ಅನ್ನು ಆರಿಸಿಕೊಳ್ಳಿ. |
09:30 | Add Column ಡೈಲಾಗ್-ಬಾಕ್ಸ್ ನಲ್ಲಿ, Primary Key ಚೆಕ್-ಬಾಕ್ಸ್ ಅನ್ನು ಆಯ್ಕೆಮಾಡಿ. |
09:35 | ನಿಮ್ಮ ಟೇಬಲ್ ಗಾಗಿ, ಪ್ರೈಮರಿ-ಕೀ ಯನ್ನು ಸೂಚಿಸಲು ಹೀಗೆ ಮಾಡುತ್ತೇವೆ. |
09:39 | ಗಮನಿಸಿ: ನೀವು Primary Key ಚೆಕ್-ಬಾಕ್ಸ್ ಅನ್ನು ಆಯ್ಕೆಮಾಡಿದಾಗ, Index ಹಾಗೂ Unique ಚೆಕ್-ಬಾಕ್ಸ್ ಗಳು ತಾವಾಗಿಯೇ ಆಯ್ಕೆಯಾಗುತ್ತವೆ. |
09:49 | ಹಾಗೆಯೇ, Null ಚೆಕ್-ಬಾಕ್ಸ್ ನ ಆಯ್ಕೆಯನ್ನು ರದ್ದುಮಾಡುತ್ತೇವೆ. |
09:53 | ಏಕೆಂದರೆ, ಪ್ರೈಮರಿ-ಕೀ ಗಳನ್ನು ಡೇಟಾಬೇಸ್ ನಲ್ಲಿ ವಿಶಿಷ್ಟವಾದ ರೋ ಅನ್ನು ಗುರುತಿಸಲು ಬಳಸಲಾಗುತ್ತದೆ. |
09:59 | OK ಅನ್ನು ಕ್ಲಿಕ್ ಮಾಡಿ. |
10:03 | ಇನ್ನುಳಿದ ಕಾಲಂಗಳನ್ನು ಸೇರಿಸಲು, ಸ್ಕ್ರೀನ್ ಮೇಲೆ ತೋರಿಸಿದಂತೆ ಈ ವಿಧಾನವನ್ನು ಪುನರಾವರ್ತಿಸಿ. |
10:09 | ಈಗ ನಾವು, Subject ಎಂಬ ಒಂದು ಟೇಬಲ್ ಅನ್ನು ಕ್ರಿಯೇಟ್ ಮಾಡಿದ್ದೇವೆ. ಇದು, Name, Description ಹಾಗೂ Counselor ID ಇವುಗಳ ಡೇಟಾ ಅನ್ನು ಹೊಂದಿರುವುದು. |
10:20 | OK ಅನ್ನು ಕ್ಲಿಕ್ ಮಾಡಿ. |
10:23 | ಡೇಟಾಬೇಸ್ ನಲ್ಲಿ SQL ಕ್ವೆರಿಗಳನ್ನು ರನ್ ಮಾಡುವುದರ ಮೂಲಕ, ನಾವು 'ಡೇಟಾಬೇಸ್ ಸ್ಟ್ರಕ್ಚರ್' (database structure) ಗಳಲ್ಲಿ ನಿರ್ವಹಿಸಲಾದ ಡೇಟಾ ಅನ್ನು ಸೇರಿಸಬಹುದು, ಮಾರ್ಪಡಿಸಬಹುದು ಮತ್ತು ತೆಗೆದುಹಾಕಬಹುದು. |
10:32 | ನಾವು Counselor ಟೇಬಲ್ ಗೆ, ಒಂದು ಹೊಸ ರೆಕಾರ್ಡ್ ಅನ್ನು ಸೇರಿಸೋಣ. |
10:35 | Tables ನೋಡ್ ನ ಕಾಂಟೆಕ್ಸ್ಟ್ ಮೆನ್ಯುದಿಂದ, Execute Command ಅನ್ನು ಆರಿಸಿಕೊಳ್ಳಿ. |
10:43 | ಮೇನ್ ವಿಂಡೊದಲ್ಲಿ, ಒಂದು ಹೊಸ SQL ಎಡಿಟರ್ ತೆರೆದುಕೊಳ್ಳುತ್ತದೆ. |
10:47 | SQL ಎಡಿಟರ್ ನಲ್ಲಿ, ನಾವು ಒಂದು ಸರಳವಾದ ಕ್ವೆರಿಯನ್ನು ಟೈಪ್ ಮಾಡೋಣ. |
11:00 | ಈ ಕ್ವೆರಿಯನ್ನು ಎಕ್ಸೀಕ್ಯೂಟ್ ಮಾಡಲು, source editor ನ ಒಳಗಡೆ ರೈಟ್-ಕ್ಲಿಕ್ ಮಾಡಿ ಮತ್ತು Run Statement ಅನ್ನು ಆರಿಸಿಕೊಳ್ಳಿ. |
11:07 | ಈಗ, ಹೊಸ ರೆಕಾರ್ಡ್ ಅನ್ನು ಈ ಟೇಬಲ್ ಗೆ ಸೇರಿಸಲಾಗಿದೆ ಎಂಬುದನ್ನು ನಾವು ಪರೀಕ್ಷಿಸೋಣ. |
11:12 | Counselor ಟೇಬಲ್ ಅನ್ನು ರೈಟ್-ಕ್ಲಿಕ್ ಮಾಡಿ ಮತ್ತು View Data ಅನ್ನು ಆರಿಸಿಕೊಳ್ಳಿ. |
11:18 | ಮೇನ್ ವಿಂಡೋದಲ್ಲಿ, ಒಂದು ಹೊಸ SQL Editor ತೆರೆದುಕೊಳ್ಳುತ್ತದೆ. |
11:21 | ಟೇಬಲ್ ನಿಂದ ಎಲ್ಲಾ ಡೇಟಾವನ್ನು ಆಯ್ಕೆಮಾಡುವ ಒಂದು ಕ್ವೆರಿಯು ತಾನಾಗಿಯೆ ಉತ್ಪತ್ತಿಯಾಗುತ್ತದೆ. |
11:27 | ಈ ಸ್ಟೇಟ್ಮೆಂಟ್ ನ ಫಲಿತಾಂಶಗಳನ್ನು ವರ್ಕ್-ಸ್ಪೇಸ್ ನ ಕೆಳಗಡೆ, ಒಂದು ' ಟೇಬಲ್ ವ್ಯೂ' ನಲ್ಲಿ ತೋರಿಸಲಾಗುತ್ತದೆ. |
11:41 | ಗಮನಿಸಿ: ಈಗಷ್ಟೆ ನಾವು ಕೊಟ್ಟ ಡೇಟಾ ದೊಂದಿಗೆ, ಒಂದು ಹೊಸ ಸಾಲನ್ನು ಸೇರಿಸಲಾಗಿದೆ. |
11:46 | ಹೊರಗಿನ SQL ಸ್ಕ್ರಿಪ್ಟ್ ಅನ್ನು ಸಹ IDE ಯಲ್ಲಿ ನೇರವಾಗಿ ನಾವು ರನ್ ಮಾಡಬಹುದು. |
11:52 | ಇಲ್ಲಿ ವಿವರಣೆಗಾಗಿ, ನನ್ನ ಹತ್ತಿರ ಒಂದು SQL ಕ್ವೆರಿ ಇದೆ. |
11:59 | ಈಗಷ್ಟೇ ನಾವು ಕ್ರಿಯೇಟ್ ಮಾಡಿದ ಟೇಬಲ್ ಗಳಂತಹ ಎರಡು ಟೇಬಲ್ ಗಳನ್ನು ಈ ಸ್ಕ್ರಿಪ್ಟ್, ಕ್ರಿಯೇಟ್ ಮಾಡುತ್ತದೆ. |
12:04 | i.e. Counselor ಹಾಗೂ Subject. |
12:09 | ಏಕೆಂದರೆ, ಈ ಸ್ಕ್ರಿಪ್ಟ್, ಈ ಟೇಬಲ್ ಗಳನ್ನು ತಿದ್ದಿಬರೆಯುತ್ತದೆ. |
12:12 | ಈ ಎರಡು ಟೇಬಲ್ ಗಳು ಈಗಾಗಲೇ ಇಲ್ಲಿ ಇದ್ದರೆ, ನಾವು ಅವುಗಳನ್ನು ಡಿಲೀಟ್ ಮಾಡುವೆವು. |
12:16 | ಟೇಬಲ್ ಗಳನ್ನು ತೆಗೆದುಹಾಕಲು (ಡಿಲೀಟ್), Counselor ಟೇಬಲ್ ನ ಮೇಲೆ ರೈಟ್-ಕ್ಲಿಕ್ ಮಾಡಿ. |
12:21 | ಮತ್ತು Delete ಅನ್ನು ಆರಿಸಿಕೊಳ್ಳಿ. |
12:24 | Confirm Object Deletion ಎಂಬ ಡೈಲಾಗ್-ಬಾಕ್ಸ್ ನಲ್ಲಿ, Yes ಅನ್ನು ಕ್ಲಿಕ್ ಮಾಡಿ. |
12:31 | Subject ಟೇಬಲ್ ಗಾಗಿ ಇದನ್ನೇ ಪುನರಾವರ್ತಿಸಿ. |
12:38 | ಈಗ, ನಿಮ್ಮ ಸಿಸ್ಟಂ ನಲ್ಲಿರುವ SQL ಕ್ವೆರಿ ಫೈಲ್ ಅನ್ನು ತೆರೆಯಿರಿ. |
12:43 | File ಮೆನ್ಯೂನಿಂದ, Open File ಅನ್ನು ಆರಿಸಿಕೊಳ್ಳಿ. |
12:48 | ಈ ಫೈಲ್ ಇರುವ ಲೊಕೇಶನ್ ಗೆ ಬ್ರೌಸ್ ಮಾಡಿ. |
12:54 | ಸ್ಕ್ರಿಪ್ಟ್, SQL ಎಡಿಟರ್ ನಲ್ಲಿ ತನ್ನಷ್ಟಕ್ಕೆ ತಾನೇ ತೆರೆದುಕೊಳ್ಳುತ್ತದೆ. |
12:59 | mynewdatabase ಗೆ ಮಾಡಿರುವ ಕನೆಕ್ಷನ್ ಆಯ್ಕೆಯಾಗಿರುವುದನ್ನು ಖಚಿತಪಡಿಸಿಕೊಳ್ಳಿ. |
13:03 | ಎಡಿಟರ್ ನ ಮೇಲ್ಭಾಗದಲ್ಲಿರುವ Connection ಎಂಬ ಡ್ರಾಪ್-ಡೌನ್ ಟೂಲ್-ಬಾರ್ ನಲ್ಲಿ, ಇದನ್ನು ಪರೀಕ್ಷಿಸಿ. |
13:13 | ಟಾಸ್ಕ್-ಬಾರ್ ನಲ್ಲಿRun SQL ಬಟನ್ ಅನ್ನು ಕ್ಲಿಕ್ ಮಾಡಿ. |
13:17 | ಮತ್ತು, ಆಯ್ಕೆಮಾಡಿದ ಡೇಟಾಬೇಸ್ ಗಾಗಿ, ಸ್ಕ್ರಿಪ್ಟ್ ಅನ್ನು ಎಕ್ಸೀಕ್ಯೂಟ್ ಮಾಡಲಾಗುತ್ತದೆ. |
13:22 | mynewdatabase ಕನೆಕ್ಷನ್ ನೋಡ್ ಅನ್ನು ರೈಟ್-ಕ್ಲಿಕ್ ಮಾಡಿ ಮತ್ತು Refresh ಅನ್ನು ಆರಿಸಿಕೊಳ್ಳಿ. |
13:28 | ಇದು, ಡೇಟಾಬೇಸ್ ಕಾಂಪೋನೆಂಟ್ ಅನ್ನು, ಸೂಚಿಸಲಾದ ಡೇಟಾಬೇಸ್ ನ ಈಗಿನ ಸ್ಟ್ಯಾಟಸ್ ಗೆ ಅಪ್ಡೇಟ್ ಮಾಡುತ್ತದೆ. |
13:34 | ಈಗ ಈ ಟೇಬಲ್ ಗಳಲ್ಲಿ ಯಾವುದರ ಮೇಲಾದರೂ ರೈಟ್-ಕ್ಲಿಕ್ ಮಾಡಿ ಮತ್ತು View Data ಅನ್ನು ಆರಿಸಿಕೊಳ್ಳಿ. |
13:41 | ನೀವು 'ವರ್ಕ್-ಸ್ಪೇಸ್' ನ ಕೆಳಗಡೆ, ಹೊಸ ಟೇಬಲ್ ಗಳಲ್ಲಿ ಇರುವ ಡೇಟಾ ಅನ್ನು ನೋಡಬಹುದು. |
13:52 | ಈ ಟ್ಯುಟೋರಿಯಲ್ ನಲ್ಲಿ, ನೀವು - |
13:54 | ನಿಮ್ಮ ಕಂಪ್ಯೂಟರ್ ನಲ್ಲಿ, MySQL ಅನ್ನು ಕಾನ್ಫಿಗರ್ ಮಾಡಲು, |
13:57 | IDE ಯಿಂದ 'ಡೇಟಾಬೇಸ್ ಸರ್ವರ್' ಗೆ ಸಂಪರ್ಕವನ್ನು ಒದಗಿಸಲು, |
14:02 | ಡೇಟಾ ಅನ್ನು ಕ್ರಿಯೇಟ್, ಡಿಲೀಟ್ ಮಾಡಲು ಮತ್ತು ಬದಲಾಯಿಸಲು |
14:06 | ಹಾಗೂ, SQL ಕ್ವೆರಿ ಗಳನ್ನು ರನ್ ಮಾಡಲು ಕಲಿತಿರುವಿರಿ. |
14:10 | ಒಂದು ಅಸೈನ್ಮೆಂಟ್ ಇದೆ: |
14:11 | ಟೇಬಲ್ ಗಳೊಂದಿಗೆ ಇನ್ನೊಂದು ಡೇಟಾಬೇಸ್ ಇನ್ಸ್ಟನ್ಸ್ ಅನ್ನು (instance) ಕ್ರಿಯೇಟ್ ಮಾಡಿ. |
14:15 | ನಿಮ್ಮ ವೈಯಕ್ತಿಕ ಪುಸ್ತಕಗಳ ಲೈಬ್ರರಿ ಯನ್ನು ನಿರ್ವಹಿಸಲು ಅವಶ್ಯವಿರುವ ಡೇಟಾದಿಂದ ಈ ಟೇಬಲ್ ಗಳನ್ನು ತುಂಬಿ. |
14:21 | ಮತ್ತು, ಡೇಟಾಅನ್ನು ನೋಡಲು, ಈ SQL ಸ್ಟೇಟ್ಮೆಂಟ್ ಗಳನ್ನು ರನ್ ಮಾಡಿ. |
14:29 | ನಾನು ಇಂತಹದೇ ಒಂದು ಡೇಟಾಬೇಸ್ ಅನ್ನು ಕ್ರಿಯೇಟ್ ಮಾಡಿದ್ದೇನೆ. ಇದು ನನ್ನ ವೈಯಕ್ತಿಕ ಮೂವಿಗಳ ಲೈಬ್ರರಿಯ ವಿವರಗಳನ್ನು ನಿರ್ವಹಿಸುತ್ತದೆ. |
14:37 | ನಿಮ್ಮ ಅಸೈನ್ಮೆಂಟ್ ಹೀಗೆ ಇರಬೇಕು. |
14:44 | ಸ್ಕ್ರೀನ್ ಮೇಲೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ. |
14:48 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
14:51 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
14:56 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ |
15:01 | ಮತ್ತು, ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
15:04 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:
contact@spoken-tutorial.org |
15:10 | Spoken Tutorial ಪ್ರಕಲ್ಪವು Talk to a Teacher ಎಂಬ ಪ್ರಕಲ್ಪದ ಒಂದು ಭಾಗವಾಗಿದೆ. |
15:15 | ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
15:20 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. |
15:27 | ಈ ಟ್ಯುಟೋರಿಯಲ್, IT for Change ಅವರ ಕೊಡುಗೆಯಾಗಿದೆ. |
15:30 | ಧನ್ಯವಾದಗಳು. |