Difference between revisions of "Avogadro/C2/Build-molecules/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 102: | Line 102: | ||
|- | |- | ||
| 02:19 | | 02:19 | ||
− | | '''Draw Settings ''' ಮೆನ್ಯುವಿನಡಿಯಲ್ಲಿ, ನಾವು '''Element ''' ಹಾಗೂ ''' Bond Order ''' ಎಂಬ ಡ್ರಾಪ್- ಡೌನ್ ಬಟನ್ ಗಳನ್ನು ಮತ್ತು | + | | '''Draw Settings ''' ಮೆನ್ಯುವಿನಡಿಯಲ್ಲಿ, ನಾವು '''Element ''' ಹಾಗೂ ''' Bond Order ''' ಎಂಬ ಡ್ರಾಪ್- ಡೌನ್ ಬಟನ್ ಗಳನ್ನು ಮತ್ತು ''' Adjust Hydrogens''' ಎಂಬ ಚೆಕ್ ಬಾಕ್ಸ್ ಅನ್ನು ನೋಡಬಹುದು. |
− | ''' Adjust Hydrogens''' ಎಂಬ ಚೆಕ್ ಬಾಕ್ಸ್ ಅನ್ನು ನೋಡಬಹುದು. | + | |
|- | |- | ||
| 02:30 | | 02:30 | ||
Line 259: | Line 258: | ||
|- | |- | ||
| 06:39 | | 06:39 | ||
− | |ಉದಾಹರಣೆಗೆ : ನಾನು ''' Isoprene ''' ಅನ್ನು ಬಳಸಿ ರಚಿಸಲಾದ, Vitamin A ಮತ್ತು natural rubber ಅನ್ನು ತೋರಿಸುವೆನು | + | |ಉದಾಹರಣೆಗೆ : ನಾನು ''' Isoprene ''' ಅನ್ನು ಬಳಸಿ ರಚಿಸಲಾದ, Vitamin A ಮತ್ತು natural rubber ಅನ್ನು ತೋರಿಸುವೆನು. |
|- | |- | ||
| 06:47 | | 06:47 | ||
Line 431: | Line 430: | ||
| 11:36 | | 11:36 | ||
| ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. | | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. | ||
− | ಧನ್ಯವಾದಗಳು | + | ಧನ್ಯವಾದಗಳು. |
|} | |} |
Revision as of 17:13, 5 July 2018
Time | Narration |
00:01 | Build Molecules ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು: ಡೇಟಾಬೇಸ್ ನಿಂದ ಅಣುಗಳನ್ನು ಇಂಪೋರ್ಟ್ ಮಾಡುವುದು, |
00:11 | ತಿರುಗಿಸುವುದು (ರೋಟೇಟ್ ಮಾಡುವುದು), ಝೂಮ್ ಇನ್ ಮತ್ತು ಝೂಮ್ ಔಟ್ ಮಾಡುವುದು, |
00:15 | ಪ್ಯಾನಲ್ ನ ಮೇಲೆ ಅಣುಗಳನ್ನು ನಿರ್ಮಿಸುವುದು, |
00:17 | ಫೋರ್ಸ್ ಫೀಲ್ಡ್ ಅನ್ನು ಸ್ಥಾಪಿಸುವುದು ಮತ್ತು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡುವುದು, |
00:21 | ಬಾಂಡ್ ನ ಉದ್ದ, ಕೋನಗಳು ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು, |
00:25 | ಫ್ರ್ಯಾಗ್ಮೆಂಟ್ ಲೈಬ್ರರಿಯನ್ನು ತೋರಿಸುವುದು, |
00:27 | ಡಿ.ಎನ್.ಎ. ಅಣುಗಳು ಮತ್ತು ಪೆಪ್ಟೈಡ್ ಗಳನ್ನು ನಿರ್ಮಿಸುವುದು- ಇವುಗಳ ಕುರಿತು ಕಲಿಯುವೆವು. |
00:31 | ಇಲ್ಲಿ ನಾನು Ubuntu Linux OS 14.04 ಆವೃತ್ತಿ,
Avogadro 1.1.1 ಆವೃತ್ತಿ ಮತ್ತು ಇಂಟರ್ನೆಟ್ ಸಂಪರ್ಕ- ಇವುಗಳನ್ನು ಬಳಸುತ್ತಿದ್ದೇನೆ. |
00:44 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ರಸಾಯನ ಶಾಸ್ತ್ರದ ಬಗ್ಗೆ ತಿಳಿದಿರಬೇಕು. Avogadro ವನ್ನು ಡೌನ್ಲೋಡ್ ಮಾಡಲು, ದಯವಿಟ್ಟುsourceforge.net/projects/avogadro ಈ ಲಿಂಕ್ ಅನ್ನು ಬಳಸಿ. |
00:53 | ನಾನು ಈಗಾಗಲೇ Avogadro ವನ್ನು ಡೌನ್ಲೋಡ್ ಮಾಡಿದ್ದೇನೆ. |
00:56 | Avogadro ವನ್ನು ಓಪನ್ ಮಾಡಲು, Dash home ನ ಮೇಲೆ ಕ್ಲಿಕ್ ಮಾಡಿ. |
01:00 | ಸರ್ಚ್ ಬಾರ್ ನಲ್ಲಿ, avogadro ಎಂದು ಟೈಪ್ ಮಾಡಿ. |
01:02 | ಅಪ್ಲಿಕೇಷನ್ ಅನ್ನು ಓಪನ್ ಮಾಡಲು, Avogadro ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
01:08 | ಈಗ ನಾವು ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್ ನಿಂದ, ಒಂದು xylene ಅಣುವನ್ನು ಇಂಪೋರ್ಟ್ ಮಾಡುವುದರಿಂದ ಆರಂಭಿಸೋಣ. |
01:15 | ಒಂದು ಅಣುವನ್ನು ಇಂಪೋರ್ಟ್ ಮಾಡಲು, ನಮಗೆ ಸಕ್ರಿಯವಾಗಿರುವ ಇಂಟರ್ನೆಟ್ ಸಂಪರ್ಕ ಬೇಕು. |
01:19 | File ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ, Import ಗೆ ಹೋಗಿ. |
01:23 | ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ. |
01:25 | Fetch by chemical name ಅನ್ನು ಆಯ್ಕೆ ಮಾಡಿ. |
01:28 | Chemical name ಎಂಬ ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
01:30 | ವಿವರಣೆಗಾಗಿ , ನಾನು ಸರ್ಚ್-ಬಾಕ್ಸ್ ನಲ್ಲಿ xylene ಎಂದು ಟೈಪ್ ಮಾಡುವೆನು. |
01:36 | OK ಬಟನ್ ನ ಮೇಲೆ ಕ್ಲಿಕ್ ಮಾಡಿ. |
01:38 | ಈಗ ಪ್ಯಾನಲ್ ನ ಮೇಲೆ ನಾವು xylene ಅಣುವನ್ನು ಹೊಂದಿದ್ದೇವೆ. |
01:42 | ಈಗ Panel ನಲ್ಲಿ ಅಣುವನ್ನು ತಿರುಗಿಸೋಣ. |
01:45 | ಟೂಲ್ ಬಾರ್ ನಲ್ಲಿ, Navigation tool ನ ಮೇಲೆ ಕ್ಲಿಕ್ ಮಾಡಿ. |
01:49 | ಕರ್ಸರ್ ಅನ್ನು ಅಣುವಿನ ಮೇಲೆ ಇಡಿ. |
01:52 | ಮೌಸ್ ನ ಎಡ ಬಟನ್ ಅನ್ನು ಹಿಡಿದುಕೊಂಡು ಎಳೆಯಿರಿ. |
01:56 | ದಿಕ್ಸೂಚಿ ಬಾಣಗಳು, ಈ ಎಳೆಯುವಿಕೆಯನ್ನು ಸೂಚಿಸುತ್ತಿರುವುದನ್ನು ಗಮನಿಸಿ. |
02:00 | ಅಣುವನ್ನು ಟ್ರಾನ್ಸ್ಲೇಟ್ ಮಾಡಲು, ಮೌಸ್ ನ ಬಲ ಬಟನ್ ಅನ್ನು ಒತ್ತಿ ಡ್ರ್ಯಾಗ್ ಮಾಡಿ. |
02:06 | ಸ್ಟ್ರಕ್ಚರ್ ಅನ್ನು ಝೂಮ್ ಇನ್ ಮತ್ತು ಝೂಮ್ ಔಟ್ ಮಾಡಲು, ಮೌಸ್ ನ ಚಕ್ರವನ್ನು ಸ್ಕ್ರೋಲ್ ಮಾಡಿ. |
02:10 | ಈಗ ಒಂದು ಅಣುವನ್ನು ರಚಿಸುವುದು ಹೇಗೆ ಎಂದು ಕಲಿಯೋಣ. |
02:14 | ಒಂದು ಅಣುವನ್ನು ರಚಿಸಲು, ಟೂಲ್ ಬಾರ್ ನಲ್ಲಿಯ Draw Tool ಐಕಾನ್ ಅನ್ನು ಕ್ಲಿಕ್ ಮಾಡಿ. |
02:19 | Draw Settings ಮೆನ್ಯುವಿನಡಿಯಲ್ಲಿ, ನಾವು Element ಹಾಗೂ Bond Order ಎಂಬ ಡ್ರಾಪ್- ಡೌನ್ ಬಟನ್ ಗಳನ್ನು ಮತ್ತು Adjust Hydrogens ಎಂಬ ಚೆಕ್ ಬಾಕ್ಸ್ ಅನ್ನು ನೋಡಬಹುದು. |
02:30 | ನಿಮಗೆ ಸ್ಟ್ರಕ್ಚರ್ ನಲ್ಲಿ ಹೈಡ್ರೋಜನ್ ಗಳು (ಜಲಜನಕ) ಬೇಡವಾದಲ್ಲಿ Adjust Hydrogens ಎಂಬ ಚೆಕ್ ಬಾಕ್ಸ್ ಅನ್ನು ಅನ್-ಚೆಕ್ ಮಾಡಿ. |
02:37 | Element ಡ್ರಾಪ್- ಡೌನ್ ಲಿಸ್ಟ್, ಎಲಿಮೆಂಟ್ ಗಳ (ಮೂಲವಸ್ತು) ಪಟ್ಟಿಯನ್ನು ತೋರಿಸುತ್ತದೆ. |
02:42 | ಸಂಪೂರ್ಣ Periodic table (ಪೀರಿಯೋಡಿಕ್ ಟೇಬಲ್) ಅನ್ನು ಬೇರೆಯದೇ ವಿಂಡೋದಲ್ಲಿ ನೋಡಲು, Other ನ ಮೇಲೆ ಕ್ಲಿಕ್ ಮಾಡಿ. |
02:48 | ವಿಂಡೋವನ್ನು ಕ್ಲೋಸ್ ಮಾಡಲು, Close ನ (X ಗುರುತು) ಮೇಲೆ ಕ್ಲಿಕ್ ಮಾಡಿ. |
02:51 | ಈಗ ಪ್ಯಾನಲ್ ನ ಮೇಲೆ, Aniline (ಅನಿಲಿನ್) ನ ಸ್ಟ್ರಕ್ಚರ್ ಅನ್ನು ರಚಿಸೋಣ. |
02:55 | Element ಡ್ರಾಪ್- ಡೌನ್ ಲಿಸ್ಟ್ ನಲ್ಲಿ, Carbon ಅನ್ನು ಆಯ್ಕೆಮಾಡಿ. |
02:59 | Bond Order ಡ್ರಾಪ್- ಡೌನ್ ಲಿಸ್ಟ್ ನಲ್ಲಿ, Single ಅನ್ನು ಆಯ್ಕೆಮಾಡಿ. |
03:03 | Panel ನ ಮೇಲೆ ಕ್ಲಿಕ್ ಮಾಡಿ. |
03:05 | ಆರು ಕಾರ್ಬನ್ (ಇಂಗಾಲ) ಪರಮಾಣುಗಳ ಮುಚ್ಚಿದ ಸರಪಣಿಯನ್ನು ರಚಿಸಲು ಡ್ರ್ಯಾಗ್ & ಡ್ರಾಪ್ ಮಾಡಿ. |
03:10 | ಡಬಲ್ ಬಾಂಡ್ ಗಳನ್ನು ತೋರಿಸಲು, Bond Order ಡ್ರಾಪ್ ಡೌನ್ ನಿಂದ Double ಅನ್ನು ಆಯ್ಕೆಮಾಡಿ. |
03:16 | ಬೆಂಝೀನ್ ನ ಸ್ಟ್ರಕ್ಚರ್ ಅನ್ನು ಪಡೆಯಲು, ಒಂದು ಬಿಟ್ಟು ಮತ್ತೊಂದು ಬಾಂಡ್ ನ ಮೇಲೆ ಕ್ಲಿಕ್ ಮಾಡಿ. |
03:21 | Aniline ನ ಸ್ಟ್ರಕ್ಚರ್ ಅನ್ನು ಪೂರ್ತಿಗೊಳಿಸೋಣ. |
03:24 | Element ಡ್ರಾಪ್ ಡೌನ್ ಲಿಸ್ಟ್ ನಲ್ಲಿ, Nitrogen ಅನ್ನು ಆಯ್ಕೆಮಾಡಿ. |
03:29 | Bond Order ಡ್ರಾಪ್- ಡೌನ್ ನಲ್ಲಿ, Single ಅನ್ನು ಆಯ್ಕೆಮಾಡಿ. |
03:33 | ಸ್ಟ್ರಕ್ಚರ್ ನಲ್ಲಿ, ಯಾವುದಾದರೂ ಒಂದು ಕಾರ್ಬನ್ (ಇಂಗಾಲ) ಅಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ. |
03:39 | Build ಮೆನ್ಯುವಿಗೆ ಹೋಗಿ ಮತ್ತು Add Hydrogens ಅನ್ನು ಆಯ್ಕೆಮಾಡಿ. |
03:45 | ನಾವು ಪ್ಯಾನಲ್ ನಲ್ಲಿ, Aniline ನ ಸ್ಟ್ರಕ್ಚರ್ ಅನ್ನು ಪಡೆದಿದ್ದೇವೆ. |
03:49 | ಸ್ಟೇಬಲ್ ಕನ್ಫರ್ಮೇಶನ್ ಅನ್ನು ಪಡೆಯಲು, ಪ್ಯಾನಲ್ ನಲ್ಲಿಯ Aniline ಸ್ಟ್ರಕ್ಚರ್ ಅನ್ನು ಆಪ್ಟಿಮೈಜ್ ಮಾಡಬೇಕು. |
03:56 | ಆಪ್ಟಿಮೈಜ್ ಮಾಡಲು, ಟೂಲ್ ಬಾರ್ ನಲ್ಲಿ, Auto Optimization Tool ನ ಮೇಲೆ ಕ್ಲಿಕ್ ಮಾಡಿ. |
04:02 | ಎಡ ಭಾಗದಲ್ಲಿ, AutoOptimization Settings ಎಂಬ ಮೆನ್ಯು ಕಾಣಿಸುತ್ತದೆ. |
04:06 | Force Field ಎಂಬ ಡ್ರಾಪ್- ಡೌನ್ ಲಿಸ್ಟ್ ಅನ್ನು ಕ್ಲಿಕ್ ಮಾಡಿ, MMFF94 ಅನ್ನು ಆಯ್ಕೆ ಮಾಡಿ. |
04:13 | MMFF94 ಅನ್ನು ಸಾಮಾನ್ಯವಾಗಿ, ಚಿಕ್ಕ ಸಾವಯವ (ಆರ್ಗ್ಯಾನಿಕ್) ಅಣುಗಳನ್ನು ಆಪ್ಟಿಮೈಜ್ ಮಾಡಲು ಬಳಸಲಾಗುತ್ತದೆ. |
04:20 | Start ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:23 | ಆಪ್ಟಿಮೈಜ್ ಮಾಡುವುದನ್ನು ಪೂರ್ತಿಗೊಳಿಸಲು, ಕೆಲವು ಸೆಕೆಂಡ್ ಗಳು ಬೇಕಾಗುವುದು. |
04:28 | Optimization Setting ಅನ್ನು ಕ್ಲೋಸ್ ಮಾಡಲು, Stop ನ ಮೇಲೆ ಕ್ಲಿಕ್ ಮಾಡಿ. |
04:33 | ಈಗ 'ಅನಿಲಿನ್' ನ ಬಾಂಡ್ ಗಳ ಉದ್ದ, ಬಾಂಡ್ ನ ಕೋನಗಳು ಮತ್ತು 'ಡೈಹೆಡ್ರಲ್ ಆಂಗಲ್' (dihedral angle) ಗಳನ್ನು ಅಳತೆ ಮಾಡೋಣ. |
04:40 | ಟೂಲ್ ಬಾರ್ ನಲ್ಲಿ, Click to Measure ಐಕಾನ್ ಅನ್ನು ಆಯ್ಕೆ ಮಾಡಿ. |
04:44 | ಅಂತರವನ್ನು ಅಳೆಯಲು, ಯಾವುದೇ ಎರಡು ಅಕ್ಕಪಕ್ಕದ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ. |
04:49 | ಕೋನಗಳನ್ನು ಅಳೆಯಲು, ಯಾವುದಾದರೂ ಮೂರು ಕ್ರಮಾನುಗತ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ. |
04:55 | 'ಡೈಹೆಡ್ರಲ್ ಆಂಗಲ್' ಗಳನ್ನು ಅಳೆಯಲು, ಯಾವುದಾದರೂ ನಾಲ್ಕು ಕ್ರಮಾನುಗತ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ. |
05:02 | ಅಳತೆ ಮಾಡಿದ ವ್ಯಾಲ್ಯುಗಳು, ಪ್ಯಾನಲ್ ನ ಕೆಳಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. |
05:07 | ಫೈಲ್ ಅನ್ನು ಸೇವ್ ಮಾಡಲು, File , ನಂತರ Save As ಗಳನ್ನು ಕ್ಲಿಕ್ ಮಾಡಿ. |
05:13 | Save Molecule As ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
05:17 | File Name ಅನ್ನು, Aniline.cml ಎಂದು ಟೈಪ್ ಮಾಡಿ. |
05:21 | ಲೊಕೇಷನ್ ಅನ್ನು Desktop ಎಂದು ಆಯ್ಕೆಮಾಡಿ ಮತ್ತು Save ಬಟನ್ ನ ಮೇಲೆ ಕ್ಲಿಕ್ ಮಾಡಿ. |
05:28 | ಒಂದು ಹೊಸ ವಿಂಡೋ ವನ್ನು ಓಪನ್ ಮಾಡಲು, New ಐಕಾನ್ ಅನ್ನು ಕ್ಲಿಕ್ ಮಾಡಿ. |
05:32 | Avogadro ಸಾಪ್ಟ್ವೇರ್, fragment ಲೈಬ್ರರಿಯನ್ನು ಬಳಸಿ, ಸಂಯುಕ್ತ (ಕಾಂಪ್ಲೆಕ್ಸ್) ಅಣುಗಳನ್ನು ರಚಿಸಲು ಒಂದು ವಿಧಾನವನ್ನು ಹೊಂದಿದೆ. |
05:38 | Build ಮೆನ್ಯುವಿಗೆ ಹೋಗಿ. |
05:40 | ನಂತರ Insert ಗೆ ಹೋಗಿ, Fragment ಅನ್ನು ಆರಿಸಿಕೊಳ್ಳಿ. |
05:45 | Insert Fragment ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
05:49 | ವಿಭಿನ್ನ ರಾಸಾಯನಿಕ ಸ್ಟ್ರಕ್ಚರ್ ಗಳ, cml ಫೈಲ್ ಗಳನ್ನು ಹೊಂದಿರುವ ಫೋಲ್ಡರ್ ಗಳ ಲಿಸ್ಟ್ ಅನ್ನು ನಾವು ನೋಡಬಹುದು. |
05:55 | ಉದಾಹರಣೆಗೆ, ನಾವು alkenes (ಆಲ್ಕೀನ್ಸ್) ಫೋಲ್ಡರ್ ಅನ್ನು ಓಪನ್ ಮಾಡೋಣ. |
06:00 | ಫೋಲ್ಡರ್ ನಲ್ಲಿರುವುದನ್ನು ನೋಡಲು, ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ. |
06:04 | 2-methyl-buta-1,3-diene.cml ಅನ್ನು ಆಯ್ಕೆಮಾಡಿ. |
06:10 | Insert ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:13 | ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, Close ಬಟನ್ ಅನ್ನು ಕ್ಲಿಕ್ ಮಾಡಿ. |
06:17 | ಪ್ಯಾನಲ್ ನಲ್ಲಿ, 2-methyl-1,3-butadiene ಸ್ಟ್ರಕ್ಚರ್ ಅನ್ನು ತೋರಿಸಲಾಗುತ್ತದೆ. |
06:22 | ಇದನ್ನು ಸಾಮಾನ್ಯವಾಗಿ Isoprene (ಐಸೋಪ್ರೀನ್) ಎಂದು ಕರೆಯುತ್ತಾರೆ. |
06:26 | ನಾವು Isoprene (ಐಸೋಪ್ರೀನ್) ಅನ್ನು ಬಳಸಿ ಅನೇಕ ಸ್ವಾಭಾವಿಕ ಉತ್ಪನ್ನಗಳನ್ನು ರಚಿಸಬಹುದು. |
06:30 | ಈ ಅಣು, ಸೆಲೆಕ್ಟ್ ಮೋಡ್ ನಲ್ಲಿದೆ. |
06:33 | ಡಿ-ಸೆಲೆಕ್ಟ್ ಮಾಡಲು, CTRL, SHIFT ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ. |
06:39 | ಉದಾಹರಣೆಗೆ : ನಾನು Isoprene ಅನ್ನು ಬಳಸಿ ರಚಿಸಲಾದ, Vitamin A ಮತ್ತು natural rubber ಅನ್ನು ತೋರಿಸುವೆನು. |
06:47 | Vitamin A, natural rubber |
06:51 | ನಾನು Isoprene (ಐಸೋಪ್ರೀನ್) ಅನ್ನು ಒಂದು ಮೂಲೆಗೆ ಟ್ರಾನ್ಸ್ಲೇಟ್ ಮಾಡುವೆನು. |
06:56 | ಕ್ರಮವಾಗಿ Build >> Insert >> Fragment ಗಳ ಮೇಲೆ ಕ್ಲಿಕ್ ಮಾಡಿ. |
07:02 | ಕೆಳಗೆ ಸ್ಕ್ರೋಲ್ ಮಾಡಿ, macrocycles ಫೋಲ್ಡರ್ ಗೆ ಹೋಗಿ. ಅದನ್ನು ಓಪನ್ ಮಾಡಲು ಡಬಲ್ ಕ್ಲಿಕ್ ಮಾಡಿ. |
07:08 | porphin ಫ್ರ್ಯಾಗ್ಮೆಂಟ್ ಅನ್ನು ಆಯ್ಕೆ ಮಾಡಿ, ಮತ್ತು Insert ಅನ್ನು ಕ್ಲಿಕ್ ಮಾಡಿ. |
07:14 | ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
07:16 | porphyrin ಫ್ರ್ಯಾಗ್ಮೆಂಟ್ ಅನ್ನು ಬಳಸಿ, ನಾವು Chlorophyll (ಕ್ಲೋರೋಫಿಲ್) ಮತ್ತು Vitamin B12 ಗಳಂತಹ ಸಂಕೀರ್ಣ ರಾಸಾಯನಿಕ ಸ್ಟ್ರಕ್ಚರ್ ಗಳನ್ನು ರಚಿಸಬಹುದು. |
07:25 | Chlorophyll (ಕ್ಲೋರೋಫಿಲ್) |
07:27 | Vitamin B12 (ವೈಟಮಿನ್ B12) |
07:30 | Avogadro ವನ್ನು ಬಳಸಿ, DNA ಮತ್ತು peptide ಗಳಂತಹ ಸಂಕೀರ್ಣ ಅಣುಗಳನ್ನು ಸಹ ರಚಿಸಬಹುದು. |
07:37 | New ಐಕಾನ್ ಅನ್ನು ಬಳಸಿ ಒಂದು ಹೊಸ ವಿಂಡೋವನ್ನು ಓಪನ್ ಮಾಡಿ. |
07:41 | ಒಂದು DNA ಅಣುವನ್ನು ಸೇರಿಸಲು: ಕ್ರಮವಾಗಿ Build ಮೆನ್ಯು, ನಂತರ Insert ಗೆ ಹೋಗಿ, ಸಬ್ ಮೆನ್ಯುವಿನಲ್ಲಿ DNA/RNA ಯನ್ನು ಕ್ಲಿಕ್ ಮಾಡಿ. |
07:51 | Insert Nucleic Acids ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
07:55 | DNA/RNA Builder ಡ್ರಾಪ್- ಡೌನ್ ನಲ್ಲಿ , DNA ಯನ್ನು ಆಯ್ಕೆಮಾಡಿ. |
08:00 | ನಾಲ್ಕು 'ನ್ಯೂಕ್ಲಿಕ್ ಆಸಿಡ್ ಬೇಸ್' ಗಳನ್ನು (nucleic acid base) ಬಟನ್ ಗಳಾಗಿ ತೋರಿಸಲಾಗಿದೆ. |
08:05 | Nucleic acid ಸಿಕ್ವೆನ್ಸ್ ಅನ್ನು ಆಯ್ಕೆಮಾಡಲು, ಬಟನ್ ಗಳ ಮೇಲೆ ಕ್ಲಿಕ್ ಮಾಡಿ. |
08:10 | ನೀವು, ನಿಮಗೆ ಬೇಕಾದ acid ಗಳ ಸಿಕ್ವೆನ್ಸ್ ಅನ್ನು ಆರಿಸಿಕೊಳ್ಳಬಹುದು. |
08:14 | ವಿವರಣೆಗಾಗಿ ನಾನು, A T G C A T G C ಯನ್ನು ಆರಿಸಿಕೊಳ್ಳುತ್ತೇನೆ. |
08:26 | Nucleic acid ಗಳ ಆಯ್ಕೆಯ ಕ್ರಮವು, Sequence ಎಂಬ ಟೆಕ್ಸ್ಟ್ ಬಾಕ್ಸ್ ನಲ್ಲಿ ಕಾಣಿಸುತ್ತದೆ. |
08:32 | Bases Per Turn ಡ್ರಾಪ್ ಡೌನ್ ನಲ್ಲಿ, A ಯನ್ನು ಆಯ್ಕೆ ಮಾಡಿ. "5" ಆಯ್ಕೆ ಮಾಡಿ, ಇದು ಪ್ರತಿ Helix ನಲ್ಲಿ ಇರುವ ಬೇಸ್ ಪೇರ್ ಗಳ ಸಂಖ್ಯೆ ಆಗಿದೆ. |
08:41 | Strands ಅನ್ನು Single ಎಂದು ಆಯ್ಕೆ ಮಾಡಿ ಮತ್ತು Insert ಬಟನ್ ನ ಮೇಲೆ ಕ್ಲಿಕ್ ಮಾಡಿ. |
08:47 | ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, Close ಅನ್ನು ಒತ್ತಿ. |
08:51 | ಈಗ ನಾವು ಪ್ಯಾನಲ್ ನಲ್ಲಿ, ಒಂದೇ ಸ್ಟ್ರ್ಯಾಂಡ್ ನ DNA ಅಣುವನ್ನು ಹೊಂದಿದ್ದೇವೆ. |
08:56 | ಸ್ಟ್ರಕ್ಚರ್ ಅನ್ನು ಝೂಮ್ ಔಟ್ ಮಾಡಿ, ಪ್ಯಾನಲ್ ನ ಮಧ್ಯಭಾಗಕ್ಕೆ ಎಳೆದು ತನ್ನಿ. |
09:01 | ಪ್ಯಾನಲ್ ನಲ್ಲಿ, DNA ಅಣುವನ್ನು ಡಿಸೆಲೆಕ್ಟ್ ಮಾಡಲು, CTRL, Shift ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ. |
09:09 | Insert ಮೆನ್ಯುವಿನಲ್ಲಿಯ Peptide ಆಯ್ಕೆಯನ್ನು ಬಳಸಿ, ನಾವು 'ಪೆಪ್ಟೈಡ್' ನ ಸಿಕ್ವೆನ್ಸ್ ಅನ್ನು ಕೂಡ ರಚಿಸಬಹುದು. |
09:16 | ಮತ್ತೊಮ್ಮೆ, ಒಂದು ಹೊಸ ವಿಂಡೋವನ್ನು ಓಪನ್ ಮಾಡಲು, New ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
09:21 | Build ಮೆನ್ಯು ನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ, Insert , ನಂತರ Peptide ಗೆ ಹೋಗಿ. |
09:26 | Insert Peptide ಡೈಲಾಗ್ ಬಾಕ್ಸ್ ಕಾಣಿಸುತ್ತದೆ. |
09:29 | amino acids ಬಟನ್ ಗಳನ್ನು ಕ್ಲಿಕ್ ಮಾಡುವುದರ ಮೂಲಕ, Peptide ಸಿಕ್ವೆನ್ಸ್ ಗಾಗಿ, amino acid ಗಳನ್ನು ಆಯ್ಕೆ ಮಾಡಿ. |
09:36 | ವಿವರಣೆಗಾಗಿ, ನಾನು ಸಿಕ್ವೆನ್ಸ್ ಅನ್ನು Glycine(Gly) -Valine(Val) -Proline(Pro) and Cystine(Cys) ಎಂದು ಆಯ್ಕೆಮಾಡುವೆನು. |
09:45 | ಆಯ್ಕೆಯ ಕ್ರಮವು, Sequence ಟೆಕ್ಸ್ಟ್ ಬಾಕ್ಸ್ ನಲ್ಲಿ ಕಂಡುಬರುತ್ತದೆ. |
09:50 | Insert Peptide ಬಟನ್ ನ ಮೇಲೆ ಕ್ಲಿಕ್ ಮಾಡಿ. |
09:53 | Insert Peptide ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
09:57 | ಪ್ಯಾನಲ್ ನ ಮೇಲೆ Peptide ನ ಚೈನ್ ಕಾಣಿಸುತ್ತದೆ. |
10:00 | ಪ್ಯಾನಲ್ ನಲ್ಲಿ Peptide ಅನ್ನು ಡಿಸೆಲೆಕ್ಟ್ ಮಾಡಲು, CTRL, Shift ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ. |
10:07 | ನೀವು ನಿಮ್ಮ ಆಯ್ಕೆಯ amino acid ಗಳನ್ನು ಆಯ್ಕೆ ಮಾಡಿಕೊಂಡು, ಪೆಪ್ಟೈಡ್ ನ ಸಿಕ್ವೆನ್ಸ್ ಯನ್ನು ರಚಿಸಬಹುದು. |
10:13 | ಸಂಕ್ಷಿಪ್ತವಾಗಿ, |
10:15 | ಈ ಟ್ಯುಟೋರಿಯಲ್ ನಲ್ಲಿ ನಾವು: |
10:18 | ಡೇಟಾಬೇಸ್ ನಿಂದ ಅಣುಗಳನ್ನು ಇಂಪೋರ್ಟ್ ಮಾಡುವುದು, |
10:21 | ತಿರುಗಿಸುವುದು (ರೋಟೇಟ್ ಮಾಡುವುದು), ಝೂಮ್ ಇನ್ ಮತ್ತು ಝೂಮ್ ಔಟ್ ಮಾಡುವುದು, |
10:24 | ಪ್ಯಾನಲ್ ನ ಮೇಲೆ ಅಣುಗಳನ್ನು ನಿರ್ಮಿಸುವುದು, |
10:26 | ಫೋರ್ಸ್ ಫೀಲ್ಡ್ ಅನ್ನು ಸೆಟ್ ಅಪ್ ಮಾಡುವುದು ಮತ್ತು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡುವುದು, |
10:30 | ಬಾಂಡ್ ಗಳ ಉದ್ದ, ಕೋನಗಳು ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು, |
10:35 | ಫ್ರ್ಯಾಗ್ಮೆಂಟ್ ಲೈಬ್ರರಿಯನ್ನು ತೋರಿಸುವುದು, |
10:37 | DNA ಅಣುಗಳು ಮತ್ತು Peptide ಗಳನ್ನು ರಚಿಸುವುದು- ಇವುಗಳ ಕುರಿತು ಕಲಿತಿದ್ದೇವೆ. |
10:41 | ಒಂದು ಅಸೈನ್ಮೆಂಟ್ - ಈ ಕೆಳಗಿನ ಅಮಿನೋ ಆಸಿಡ್ ರೆಸಿಡ್ಯೂಗಳನ್ನು ಬಳಸಿ, ಒಂದು ಪ್ರೋಟೀನ್ ಸಿಕ್ವೆನ್ಸ್ ಅನ್ನು ರಚಿಸಿ: |
10:49 | UFF ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ. |
10:53 | ಇಮೇಜ್ ಅನ್ನು .cml ಫೈಲ್ ಎಂದು ಸೇವ್ ಮಾಡಿ. |
10:58 | Nucleic acids: AUGC ಯನ್ನು ಬಳಸಿ, RNA ಸಿಕ್ವೆನ್ಸ್ ಅನ್ನು ರಚಿಸಿ. |
11:04 | MMFF94 ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ. |
11:10 | ಇಮೇಜ್ ಅನ್ನು .cml ಫೈಲ್ ಎಂದು ಸೇವ್ ಮಾಡಿ. |
11:14 | ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸಿಕೊಡುತ್ತದೆ. |
11:18 | ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
11:23 | ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
11:30 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
11:36 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು. |