Difference between revisions of "PERL/C3/Referencing-and-Dereferencing/Kannada"

From Script | Spoken-Tutorial
Jump to: navigation, search
 
Line 363: Line 363:
 
|-
 
|-
 
| 11:02
 
| 11:02
| IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .
+
| IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.
 
ವಂದನೆಗಳು.
 
ವಂದನೆಗಳು.
 
|}
 
|}

Latest revision as of 11:23, 6 October 2017

Time
Narration
00:01 Referencing and Dereferencing in Perl (ರೆಫರೆನ್ಸಿಂಗ್ ಆಂಡ್ ಡಿ-ರೆಫರೆನ್ಸಿಂಗ್ ಇನ್ ಪರ್ಲ್) ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು:
  • ಸ್ಕೇಲಾರ್ ರೆಫರೆನ್ಸ್ ಗಳು
  • ಆರೇ ರೆಫರೆನ್ಸ್ ಗಳು
  • ಹ್ಯಾಶ್ ರೆಫರೆನ್ಸ್ ಗಳು
  • ಡಿ-ರೆಫರೆನ್ಸ್ ಗಳು ಹಾಗೂ
  • ಅರೇ/ಹ್ಯಾಶ್ ರೆಫರೆನ್ಸ್ ಗಳ ಎಲಿಮೆಂಟ್ ಗಳನ್ನು ಹೇಗೆ ಸೇರಿಸುವುದು, ತೆಗೆದುಹಾಕುವುದು ಮತ್ತು ಆಕ್ಸೆಸ್ (access) ಮಾಡುವುದು, ಇವುಗಳ ಬಗ್ಗೆ ಕಲಿಯುವೆವು.
00:22 ಈ ಟ್ಯುಟೋರಿಯಲ್ ಗಾಗಿ, ನಾನು:
  • Ubuntu Linux 12.04 ಆಪರೇಟಿಂಗ್ ಸಿಸ್ಟಂ
  • Perl 5.14.2 ಮತ್ತು
  • gedit ಟೆಕ್ಸ್ಟ್-ಎಡಿಟರ್ ಗಳನ್ನು ಬಳಸುತ್ತಿದ್ದೇನೆ.
00:33 ನೀವು, ನಿಮಗೆ ಇಷ್ಟವಾದ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ಬಳಸಬಹುದು.
00:37 ನಿಮಗೆ -
  • ಪರ್ಲ್ (Perl) ಪ್ರೊಗ್ರಾಮಿಂಗ್
  • ಆರೇ ಫಂಕ್ಷನ್ ಗಳು ಹಾಗೂ
  • ಹ್ಯಾಶ್ ಫಂಕ್ಷನ್ ಗಳ ಬಗ್ಗೆ ತಿಳಿದಿರುವುದು ಅವಶ್ಯಕ.
00:43 ಇಲ್ಲದಿದ್ದರೆ, ಸಂಬಂಧಿತ Perl ಸ್ಪೋಕನ್ ಟ್ಯುಟೋರಿಯಲ್ ಗಳನ್ನು Spoken Tutorial ವೆಬ್ಸೈಟ್ ಮೇಲೆ ನೋಡಿ.
00:49 ’ರೆಫರೆನ್ಸ್’ ಎಂದರೆ ಏನು?
00:51 'ರೆಫರೆನ್ಸ್' ಎನ್ನುವುದು ಒಂದು ವೇರಿಯೇಬಲ್, ಆರೇ, ಹ್ಯಾಶ್ ಅಥವಾ ಸಬ್-ರುಟೀನ್ ಗಳಿಗೆ ಒಂದು ಪಾಯಿಂಟರ್ (pointer) ಅಥವಾ ಅಡ್ರೆಸ್ (address) ಆಗಿದೆ.
00:58 ಇದು ನೇರವಾಗಿ ಡೇಟಾಅನ್ನು ಹೊಂದಿರುವುದಿಲ್ಲ.
01:01 'ರೆಫರೆನ್ಸ್', ಒಂದು ಸುಲಭವಾದ, ಅಚ್ಚುಕಟ್ಟಾದ ಸ್ಕೇಲರ್ ವ್ಯಾಲ್ಯೂ ಆಗಿದೆ.
01:05 ನೀವು ದೊಡ್ಡ ಡೇಟಾ-ಸ್ಟ್ರಕ್ಚರ್ ಗಳನ್ನು ರವಾನಿಸಿದಾಗ (pass) ಅಥವಾ ರಿಟರ್ನ್ ಮಾಡಿದಾಗ, 'ರೆಫರೆನ್ಸ್', ಪರ್ಲ್ ಕೋಡ್ ನ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ.
01:12 ಇದು, ಸಬ್-ರುಟೀನ್ ಗೆ ವ್ಯಾಲ್ಯೂದ ಬದಲಾಗಿ ರೆಫರೆನ್ಸ್ ಅನ್ನು ಪಾಸ್ ಮಾಡುವುದರಿಂದ, ಮೆಮರೀಯನ್ನು ಉಳಿಸುತ್ತದೆ.
01:18 ಹೀಗಾಗಿ, ಕ್ಲಿಷ್ಟವಾದ ಪರ್ಲ್ ಡೇಟಾ-ಸ್ಟಕ್ಚರ್ ಗಳನ್ನು ನಿರ್ವಹಿಸುವುದು ಸುಲಭವಾಗುತ್ತದೆ.
01:22 'ರೆಫರೆನ್ಸ್'ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾವು ತಿಳಿಯೋಣ.
01:25 ನಾವು ಯಾವುದೇ ವೇರಿಯೇಬಲ್, ಸಬ್-ರುಟೀನ್ ಅಥವಾ ವ್ಯಾಲ್ಯೂದ ಮುಂದೆ ಒಂದು ಬ್ಯಾಕ್-ಸ್ಲ್ಯಾಶ್ (\) ಇಡುವುದರ ಮೂಲಕ ಅದಕ್ಕಾಗಿ ಒಂದು 'ರೆಫರೆನ್ಸ್'ಅನ್ನು ಕ್ರಿಯೇಟ್ ಮಾಡಬಹುದು.
01:33 ಸ್ಕೇಲಾರ್ ವೇರಿಯೇಬಲ್, ಇಲ್ಲಿ ತೋರಿಸಿದಂತೆ ಬ್ಯಾಕ್-ಸ್ಲ್ಯಾಶ್ (\) ಹಾಗೂ ಡಾಲರ್ ಚಿಹ್ನೆಗಳಿಂದ ($) ರೆಫರೆನ್ಸ್ ಮಾಡಲ್ಪಡುತ್ತದೆ.
01:39 'ಆರೇ' ವೇರಿಯೇಬಲ್, ಬ್ಯಾಕ್-ಸ್ಲ್ಯಾಶ್ (\) ಹಾಗೂ 'ಆಟ್ ದ ರೇಟ್' ಚಿಹ್ನೆಗಳಿಂದ (@) ರೆಫರೆನ್ಸ್ ಮಾಡಲ್ಪಡುತ್ತದೆ.
01:45 'ಹ್ಯಾಶ್' ವೇರಿಯೇಬಲ್, ಇಲ್ಲಿ ಉದಾಹರಣೆಯಲ್ಲಿ ತೋರಿಸಿದಂತೆ, ಬ್ಯಾಕ್-ಸ್ಲ್ಯಾಶ್ (\) ಹಾಗೂ ಪರ್ಸೆಂಟೇಜ್ ಚಿಹ್ನೆಗಳಿಂದ (%) ರೆಫರೆನ್ಸ್ ಮಾಡಲ್ಪಡುತ್ತದೆ.
01:53 'ಡಿ-ರೆಫರೆನ್ಸ್' ಎಂದರೇನು?
01:55 ಒಂದು ರೆಫರೆನ್ಸ್ ಅನ್ನು ಡಿ-ರೆಫರೆನ್ಸ್ ಮಾಡಿದಾಗ, ನಿಜವಾದ ವ್ಯಾಲ್ಯುಅನ್ನು ರಿಟರ್ನ್ (ಹಿಂದಿರುಗಿಸು) ಮಾಡಲಾಗುತ್ತದೆ.
02:00 ರೆಫರೆನ್ಸ್ ವೇರಿಯೇಬಲ್ ಅನ್ನು ಕರ್ಲಿ-ಬ್ರಾಕೆಟ್ಸ್ ನ ಒಳಗೆ ಇಡುವುದರಿಂದ
02:06 ಮತ್ತು ಎಡಗಡೆಯ ಕರ್ಲಿ-ಬ್ರಾಕೆಟ್ ನ ಮೊದಲು, ರೆಫರೆನ್ಸ್ ನ ಟೈಪ್ ಅನ್ನು ಸೂಚಿಸುವ ಒಂದು ಅಕ್ಷರವನ್ನು ಇಡುವುದರಿಂದ ಡಿ-ರೆಫರೆನ್ಸ್ ಮಾಡಲಾಗುತ್ತದೆ.
02:12 ನಾವು ವೇರಿಯೇಬಲ್ ಗಳನ್ನು ಡಿ-ರೆಫರೆನ್ಸ್ ಮಾಡುವ ಬಗೆಯನ್ನು ನೋಡೋಣ.
02:16 'ಸ್ಕೇಲಾರ್ ವೇರಿಯೇಬಲ್'ಅನ್ನು, ಡಾಲರ್ ಚಿಹ್ನೆ ($) ಮತ್ತು ಕರ್ಲೀ ಬ್ರಾಕೆಟ್ಸ್ ಗಳಿಂದ ಡಿ-ರೆಫರೆನ್ಸ್ ಮಾಡಲಾಗುತ್ತದೆ.
02:21 'ಆರೇ ವೇರಿಯೇಬಲ್'ಅನ್ನು, 'ಆಟ್ ದ ರೇಟ್' ಚಿಹ್ನೆ (@) ಮತ್ತು ಕರ್ಲೀ ಬ್ರಾಕೆಟ್ಸ್ ಗಳಿಂದ ಡಿ-ರೆಫರೆನ್ಸ್ ಮಾಡಲಾಗುತ್ತದೆ.
02:27 'ಹ್ಯಾಶ್ ವೇರಿಯೇಬಲ್'ಅನ್ನು, 'ಪರ್ಸೆಂಟೇಜ್' ಚಿಹ್ನೆ (%) ಮತ್ತು ಕರ್ಲೀ ಬ್ರಾಕೆಟ್ಸ್ ಗಳಿಂದ ಡಿ-ರೆಫರೆನ್ಸ್ ಮಾಡಲಾಗುತ್ತದೆ.
02:33 ಸ್ಕೇಲಾರ್ ರೆಫರೆನ್ಸ್ ಮತ್ತು ಡಿ-ರೆಫರೆನ್ಸ್ ಗಾಗಿ, ನಾವು ಒಂದು ಸರಳವಾದ ಪ್ರೊಗ್ರಾಂಅನ್ನು ನೋಡೋಣ.
02:38 ನಾನು 'gedit' ಟೆಕ್ಸ್ಟ್-ಎಡಿಟರ್ ನಲ್ಲಿ, ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಓಪನ್ ಮಾಡುತ್ತೇನೆ.
02:43 ಟರ್ಮಿನಲ್ ಅನ್ನು ಓಪನ್ ಮಾಡಿ ಹೀಗೆ ಟೈಪ್ ಮಾಡಿ: 'gedit scalarRef dot pl ampersand' ಮತ್ತು 'Enter' ಅನ್ನು ಒತ್ತಿ.
02:50 ಈ ಕೆಳಗಿನ ಕೋಡ್ ಅನ್ನು ಸ್ಕ್ರೀನ್ ನ ಮೇಲೆ ತೋರಿಸಿದಂತೆ ಟೈಪ್ ಮಾಡಿ.
02:55 ನಾನು ಕೋಡ್ ಅನ್ನು ವಿವರಿಸುತ್ತೇನೆ.
02:57 ಮೊದಲನೆಯ ಸಾಲು- '$a' ಎಂಬ ಒಂದು ಸ್ಕೇಲಾರ್ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿ ಅದನ್ನು 10 ಕ್ಕೆ ಇನಿಶಿಯಲೈಸ್ ಮಾಡುತ್ತದೆ.
03:03 ಮೊದಲು ಹೇಳಿದಂತೆ, ಸ್ಕೇಲಾರ್ ವೇರಿಯೇಬಲ್, ಬ್ಯಾಕ್-ಸ್ಲ್ಯಾಶ್ (\) ಹಾಗೂ ಡಾಲರ್ ಚಿಹ್ನೆಗಳಿಂದ ($) ರೆಫರೆನ್ಸ್ ಮಾಡಲ್ಪಡುತ್ತದೆ.
03:10 ಈ ಸಾಲು, ರೆಫರೆನ್ಸ್ ಎಂದು ಕ್ರಿಯೇಟ್ ಮಾಡಲಾದ ವೇರಿಯೇಬಲ್ ನ ಮೆಮರೀ ಅಡ್ರೆಸ್ ಅನ್ನು ಪ್ರಿಂಟ್ ಮಾಡುವುದು.
03:16 ನಿಜವಾದ ವ್ಯಾಲ್ಯೂಅನ್ನು ಪ್ರಿಂಟ್ ಮಾಡಲು, '$' ಚಿಹ್ನೆ ಮತ್ತು ಅನಂತರ ಕರ್ಲಿ ಬ್ರಾಕೆಟ್ಸ್ ನಿಂದ ವೇರಿಯೇಬಲ್ ಅನ್ನು ಡಿ-ರೆಫರೆನ್ಸ್ ಮಾಡಲಾಗುವುದು.
03:23 ಇಲ್ಲಿ, 'ref()' ಫಂಕ್ಷನ್, ರೆಫರನ್ಸ್ ಟೈಪ್ ಅನ್ನು 'ಸ್ಕೇಲಾರ್' ಅಥವಾ 'ಆರೇ' ಅಥವಾ 'ಹ್ಯಾಶ್' ಎಂದು ಹಿಂದಿರುಗಿಸುವುದು (ರಿಟರ್ನ್).
03:30 ಈಗ, ಫೈಲನ್ನು ಸೇವ್ ಮಾಡಲು 'Ctrl+S' ಒತ್ತಿ.
03:34 ನಾವು ಪ್ರೊಗ್ರಾಂಅನ್ನು ಎಕ್ಸೀಕ್ಯೂಟ್ ಮಾಡೋಣ.
03:36 ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl scalarRef dot pl' ಮತ್ತು 'Enter' ಅನ್ನು ಒತ್ತಿ.
03:43 ಇಲ್ಲಿ ಕಾಣುತ್ತಿರುವ ಔಟ್ಪುಟ್ ಅನ್ನು ತೋರಿಸಲಾಗುತ್ತದೆ.
03:46 ಮೊದಲನೆಯ ಸಾಲು, ವ್ಯಾಲ್ಯೂ 10 ಅನ್ನು ಸ್ಟೋರ್ ಮಾಡಲಾದ ಮೆಮರೀಯ ಅಡ್ರೆಸ್ ಅನ್ನು ತೋರಿಸುತ್ತದೆ.
03:51 ಎರಡನೆಯ ಸಾಲು, ನಿಜವಾಗಿಯೂ ವ್ಯಾಲ್ಯೂ 10 ಅನ್ನು ಹಿಂದಿರುಗಿಸುತ್ತದೆ.
03:55 'Ref()' ಫಂಕ್ಷನ್, “Scalar” ಅನ್ನು ಔಟ್ಪುಟ್ ಎಂದು ರಿಟರ್ನ್ ಮಾಡುತ್ತದೆ.
03:59 ನಂತರ ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ, ಒಂದು 'ಆರೇ'ಯ ರೆಫರೆನ್ಸ್ ಹಾಗೂ ಡಿ-ರೆಫರೆನ್ಸ್ ಗಳನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾವು ತಿಳಿದುಕೊಳ್ಳೋಣ.
04:07 ನನ್ನ ಹತ್ತಿರ ಈಗಾಗಲೇ ಒಂದು ಸ್ಯಾಂಪಲ್ ಪ್ರೊಗ್ರಾಂ ಇದೆ. ನಾನು ಇದನ್ನು 'gedit' ಟೆಕ್ಸ್ಟ್ ಎಡಿಟರ್ ನಲ್ಲಿ ಓಪನ್ ಮಾಡುತ್ತೇನೆ.
04:13 ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡಿ: 'gedit arrayRef dot pl ampersand' ಮತ್ತು 'Enter' ಅನ್ನು ಒತ್ತಿ.
04:20 ಸ್ಕ್ರೀನ್ ನ ಮೇಲೆ ತೋರಿಸಿದಂತೆ, 'arrayRef dot pl' ಎಂಬ ಫೈಲ್ ನಲ್ಲಿ, ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ.
04:26 ಈಗ ನಾನು ಕೋಡ್ ಅನ್ನು ವಿವರಿಸುತ್ತೇನೆ.
04:28 ಇಲ್ಲಿ, ಮೊದಲನೆಯ ಸಾಲಿನಲ್ಲಿ, ನಾನು '@color' ಎಂಬ ಒಂದು ಆರೇಯನ್ನು ಡಿಕ್ಲೇರ್ ಮಾಡಿ ಅದನ್ನು ಮೂರು ವ್ಯಾಲ್ಯೂಗಳಿಂದ ಇನಿಶಿಯಲೈಸ್ ಮಾಡಿದ್ದೇನೆ.
04:35 ಇದನ್ನು 'backslash @color' ನೊಂದಿಗೆ ರೆಫರೆನ್ಸ್ ಮಾಡಲಾಗುತ್ತದೆ. ಇದು, ಆರೇಯ ಹೆಸರು ಆಗಿದ್ದು ' $colorRef' ಗೆ ಇದನ್ನು ಅಸೈನ್ ಮಾಡಲಾಗಿದೆ.
04:42 'print' ಸ್ಟೇಟ್ಮೆಂಟ್, ರೆಫರೆನ್ಸ್ ವ್ಯಾಲ್ಯೂ ಮತ್ತು ಡಿ-ರೆಫರೆನ್ಸ್ ಮಾಡಲಾದ ವ್ಯಾಲ್ಯೂ ಗಳನ್ನು ಪ್ರಿಂಟ್ ಮಾಡುವುದು.
04:47 ಈಗ, ಫೈಲನ್ನು ಸೇವ್ ಮಾಡಲು 'Ctrl+S' ಒತ್ತಿ.
04:51 ನಾವು ಪ್ರೊಗ್ರಾಂಅನ್ನು ಎಕ್ಸೀಕ್ಯೂಟ್ ಮಾಡೋಣ.
04:53 ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl arrayRef dot pl' ಮತ್ತು 'Enter' ಅನ್ನು ಒತ್ತಿ.
05:00 ಇಲ್ಲಿ ಕಾಣುತ್ತಿರುವ ಔಟ್ಪುಟ್ ಅನ್ನು ತೋರಿಸಲಾಗುವುದು.
05:04 ಮೊದಲನೆಯ ಸಾಲು, ರೆಫರೆನ್ಸ್ ಮಾಡಲಾದ ವೇರಿಯೇಬಲ್ ನ ಮೆಮರೀ ಅಡ್ರೆಸ್ ಅನ್ನು ಔಟ್ಪುಟ್ ಎಂದು ತೋರಿಸುತ್ತದೆ.
05:10 ಎರಡನೆಯ ಸಾಲು, ನಿಜವಾದ ಎಂದರೆ, ಡಿ-ರೆಫರೆನ್ಸ್ ಮಾಡಲಾದ ವ್ಯಾಲ್ಯೂಅನ್ನು ತೋರಿಸುತ್ತದೆ.
05:16 ನಂತರ, ಒಂದು ಆರೇ ಗಾಗಿ 'ಡೈರೆಕ್ಟ್ ರೆಫರೆನ್ಸ್' ಅನ್ನು ಹೇಗೆ ಡಿಕ್ಲೇರ್ ಮಾಡುವುದೆಂದು ನಾವು ನೋಡುವೆವು.
05:21 ನಾವು ನಮ್ಮ ಪ್ರೊಗ್ರಾಂಗೆ ಹಿಂದಿರುಗೋಣ.
05:24 ಒಂದು ಆರೇ ಗಾಗಿ 'ಡೈರೆಕ್ಟ್ ರೆಫರೆನ್ಸ್' ಅನ್ನು ತೋರಿಸಲು, ನಾನು ಈಗಿರುವ ಪ್ರೊಗ್ರಾಂಅನ್ನು ಬದಲಾಯಿಸಿದ್ದೇನೆ.
05:29 ಇಲ್ಲಿ ತೋರಿಸಿದಂತೆ ಚದರ ಬ್ರಾಕೆಟ್ಗಳನ್ನು (square brackets) [] ಬಳಸಿ, ಆರೇ ಗಾಗಿ ನೀವು 'ಡೈರೆಕ್ಟ್ ರೆಫರೆನ್ಸ್' ಅನ್ನು ಕ್ರಿಯೇಟ್ ಮಾಡಬಹುದು.
05:35 ಡಿ-ರೆಫರೆನ್ಸ್ ಮಾಡಲು, ಆರೋ ಆಪರೇಟರ್ (arrow operator “->”) ಅನ್ನು ಬಳಸಿ.
05:39 ಪ್ರಿಂಟ್ ಸ್ಟೇಟ್ಮೆಂಟ್, 'Green' ಎಂಬ ಔಟ್ಪುಟ್ ಅನ್ನು ಪ್ರಿಂಟ್ ಮಾಡುವುದು.
05:43 ಇಲ್ಲಿ, ಪ್ರಿಂಟ್ ಸ್ಟೇಟ್ಮೆಂಟ್, index[1] ನ ವ್ಯಾಲ್ಯೂಅನ್ನು, ಎಂದರೆ, ನಮ್ಮ ಪ್ರೊಗ್ರಾಂನಲ್ಲಿ 'Green' ಅನ್ನು ತೆಗೆದುಕೊಳ್ಳುತ್ತದೆ.
05:50 ಫೈಲನ್ನು ಸೇವ್ ಮಾಡಲು, 'Ctrl+S' ಅನ್ನು ಒತ್ತಿ.
05:54 ಟರ್ಮಿನಲ್ ಗೆ ಹಿಂದಿರುಗಿ ಮತ್ತು ಹೀಗೆ ಟೈಪ್ ಮಾಡಿ: 'perl arrayRef dot pl' ಮತ್ತು ಎಕ್ಸೀಕ್ಯೂಟ್ ಮಾಡಲು 'Enter' ಅನ್ನು ಒತ್ತಿ.
06:03 'ಡೈರೆಕ್ಟ್ ಹ್ಯಾಶ್ ರೆಫರೆನ್ಸ್' ಅನ್ನು ಬಳಸುವುದರ ಬಗ್ಗೆ, ಇದೇ ಕೋಡ್ ಫೈಲ್ ನಲ್ಲಿ ನಾನು ಒಂದು ಉದಾಹರಣೆಯನ್ನು ತೋರಿಸುವೆನು.

ಆದ್ದರಿಂದ, ನಾವು 'gedit' ಗೆ ಬದಲಾಯಿಸೋಣ.

06:11 ಇಲ್ಲಿ ತೋರಿಸಿದಂತೆ ಕರ್ಲೀ ಬ್ರಾಕೆಟ್ಸ್ ಅನ್ನು ಬಳಸಿ, ನೀವು ಹ್ಯಾಶ್ ಗೆ ಒಂದು 'ಡೈರೆಕ್ಟ್ ರೆಫರೆನ್ಸ್' ಅನ್ನು ಕ್ರಿಯೇಟ್ ಮಾಡಬಹುದು.
06:18 ಡಿ-ರೆಫರೆನ್ಸ್ ಮಾಡಲು, ಆರೋ ಆಪರೇಟರ್ (arrow operator “->”) ಅನ್ನು ಬಳಸಿ. “Name”, ಹ್ಯಾಶ್ ಕೀ ಆಗಿದೆ.
06:24 ಕೋಡ್ ನ ಈ ಬ್ಲಾಕ್ ಅನ್ನು ಎಕ್ಸೀಕ್ಯೂಟ್ ಮಾಡಿದ ಮೇಲೆ, ಎರಡೂ ಪ್ರಿಂಟ್ ಸ್ಟೇಟ್ಮೆಂಟ್ ಗಳು 'Sunil' ಎಂಬ ಔಟ್ಪುಟ್ ಅನ್ನು ಪ್ರಿಂಟ್ ಮಾಡುತ್ತವೆ.
06:31 ನಂತರ, ಒಂದು 'ಆರೇ ರೆಫರೆನ್ಸ್' ಗೆ ಎಲಿಮೆಂಟ್ ಗಳನ್ನು ಹೇಗೆ ಸೇರಿಸುವುದು, ತೆಗೆದುಹಾಕುವುದು, ಆಕ್ಸೆಸ್ ಮಾಡುವುದು ಎನ್ನುವುದನ್ನು ಒಂದು ಸ್ಯಾಂಪಲ್ ಪ್ರೊಗ್ರಾಮ್ ನೊಂದಿಗೆ ನಾವು ನೋಡುವೆವು.
06:39 ನನ್ನ ಹತ್ತಿರ ಈಗಾಗಲೇ ಒಂದು ಸ್ಯಾಂಪಲ್ ಪ್ರೊಗ್ರಾಮ್ ಇದೆ. ನಾನು ಇದನ್ನು 'gedit ಟೆಕ್ಸ್ಟ್ ಎಡಿಟರ್' ನಲ್ಲಿ ಓಪನ್ ಮಾಡುತ್ತೇನೆ.
06:45 ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'gedit arrayRefadd dot pl ampersand' ಹಾಗೂ 'Enter' ಅನ್ನು ಒತ್ತಿ.
06:54 ಈಗ, 'gedit' ನಲ್ಲಿ 'arrayRefadd.pl' ಎಂಬ ಫೈಲ್ ಓಪನ್ ಆಗಿದೆ. ಇಲ್ಲಿ ತೋರಿಸಿದಂತೆ, ಕೋಡ್ ಅನ್ನು ನಿಮ್ಮ ಫೈಲ್ ನಲ್ಲಿ ಟೈಪ್ ಮಾಡಿ.
07:02 ಮೊದಲನೆಯ ಸಾಲು, ಆರೇಯನ್ನು ಇನಿಶಿಯಲೈಸ್ ಮಾಡುತ್ತದೆ.
07:06 ನಾವು 'backslash @numarray' ಯೊಂದಿಗೆ ಒಂದು ಆರೇಯನ್ನು ರೆಫರೆನ್ಸ್ ಮಾಡಿದ್ದೇವೆ ಮತ್ತು '$ref' ಗೆ ಅಸೈನ್ ಮಾಡಿದ್ದೇವೆ.
07:13 ಈಗ, ಒಂದು 'ಆರೇ ರೆಫರೆನ್ಸ್'ನಿಂದ, ಒಂದು ನಿರ್ದಿಷ್ಟ ಎಲಿಮೆಂಟ್ ಅನ್ನು ಹೇಗೆ ಆಕ್ಸೆಸ್ ಮಾಡುವುದೆಂದು ನಾವು ನೋಡುವೆವು.
07:19 ನಾವು ಒಂದು ನಿರ್ದಿಷ್ಟ ವ್ಯಾಲ್ಯೂಅನ್ನು ಆಕ್ಸೆಸ್ ಮಾಡಲು, ಚದರ ಬ್ರಾಕೆಟ್ಗಳಲ್ಲಿ 'ಆರೇ ಇಂಡೆಕ್ಸ್'ಅನ್ನು “[ ]” ಮತ್ತು ಅದನ್ನು ಡಿ-ರೆಫರೆನ್ಸ್ ಮಾಡಲು 'ಆರೋ ಆಪರೇಟರ್ ' (arrow operator “->”) ಅನ್ನು ಬಳಸಬೇಕಾಗುತ್ತದೆ.
07:28 ಪ್ರಿಂಟ್ ಸ್ಟೇಟ್ಮೆಂಟ್, index[0] ದ ವ್ಯಾಲ್ಯೂಅನ್ನು ಪ್ರಿಂಟ್ ಮಾಡುವುದು.
07:32 'push()' ಎಂಬ ಫಂಕ್ಷನ್, ಆರೇ ರೆಫರೆನ್ಸ್ ನ ಕೊನೆಯ ಸ್ಥಾನದಲ್ಲಿ ಎಲಿಮೆಂಟ್ ಗಳನ್ನು ಸೇರಿಸುತ್ತದೆ.

ಈ ಸಂದರ್ಭದಲ್ಲಿ, ಈಗಿರುವ ಆರೇ: 1, 2, 3, 4 ಗಳ ಕೊನೆಯಲ್ಲಿ 5, 6, 7 ಗಳು ಸೇರಿಸಲ್ಪಟ್ಟಿವೆ.

07:47 ಈ ಪ್ರಿಂಟ್ ಸ್ಟೇಟೆಂಟ್, ಆರೇ ರೆಫರೆನ್ಸ್ ಗೆ ಸೇರಿಸಿದ ನಂತರ ಔಟ್ಪುಟ್ ಅನ್ನು ತೋರಿಸುತ್ತದೆ.
07:53 'pop()' ಎಂಬ ಫಂಕ್ಷನ್, 'ಆರೇ ರೆಫರೆನ್ಸ್'ನ ಕೊನೆಯ ಸ್ಥಾನದಿಂದ ಎಲಿಮೆಂಟ್ ಅನ್ನು ತೆಗೆದುಹಾಕುತ್ತದೆ.
07:58 ನಮ್ಮ ಉದಾಹರಣೆಯಲ್ಲಿ, ಈಗ ಇರುವ ಆರೇ ರೆಫರೆನ್ಸ್ ನಿಂದ 7 ಅನ್ನು ತೆಗೆದುಹಾಕಲಾಗುವುದು.
08:03 'print' ಸ್ಟೇಟ್ಮೆಂಟ್, ಆರೇ ರೆಫರೆನ್ಸ್ ನಿಂದ ತೆಗೆದುಹಾಕಿದ ಮೇಲೆ ಔಟ್ಪುಟ್ ಅನ್ನು ತೋರಿಸುತ್ತದೆ.
08:08 ಈಗ, ಫೈಲನ್ನು ಸೇವ್ ಮಾಡಲು 'Ctrl+S' ಅನ್ನು ಒತ್ತಿ.
08:11 ನಾವು ಪ್ರೊಗ್ರಾಂಅನ್ನು ಎಕ್ಸೀಕ್ಯೂಟ್ ಮಾಡೋಣ.
08:14 ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl arrayRefadd dot pl' ಮತ್ತು 'Enter' ಅನ್ನು ಒತ್ತಿ.
08:22 ಇಲ್ಲಿ ತೋರಿಸಿದಂತೆ ಔಟ್ಪುಟ್ ಅನ್ನು ಪ್ರದರ್ಶಿಸಲಾಗುತ್ತದೆ.
08:26 ಈಗ, ನಾವು 'ಹ್ಯಾಶ್ ರೆಫರೆನ್ಸ್' ನ ಎಲಿಮೆಂಟ್ ಗಳನ್ನು ಸೇರಿಸಲು, ತೆಗೆದುಹಾಕಲು ಮತ್ತು ಆಕ್ಸೆಸ್ ಮಾಡಲು ಇನ್ನೊಂದು ಸ್ಯಾಂಪಲ್ ಪ್ರೊಗ್ರಾಂಅನ್ನು ನೋಡೋಣ.
08:34 ಟರ್ಮಿನಲ್ ನ ಮೇಲೆ ಹೀಗೆ ಟೈಪ್ ಮಾಡಿ: 'gedit hashRefadd dot pl ampersand' ಮತ್ತು 'Enter' ಅನ್ನು ಒತ್ತಿ.
08:42 ಇದು, 'gedit' ನಲ್ಲಿ 'hashRefadd.pl' ಎಂಬ ಫೈಲನ್ನು ಓಪನ್ ಮಾಡುವುದು.
08:47 ನಾನು ಸ್ಯಾಂಪಲ್ ಪ್ರೊಗ್ರಾಂಅನ್ನು ವಿವರಿಸುತ್ತೇನೆ.
08:50 '$weektemp' ಎಂಬ ಸ್ಕೇಲರ್-ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಲು ಸಾಧ್ಯವಿರುವ, ಒಂದು ಡೈರೆಕ್ಟ್ ಹ್ಯಾಶ್-ರೆಫರೆನ್ಸ್ ಅನ್ನು ನಾನು ಡಿಕ್ಲೇರ್ ಮಾಡಿದ್ದೇನೆ.
08:57 ನಾನು ಹ್ಯಾಶ್-ರೆಫರೆನ್ಸ್ ಅನ್ನು ಪ್ರತಿನಿಧಿಸಲು ಕರ್ಲೀ ಬ್ರಾಕೆಟ್ಗಳನ್ನು ಮತ್ತು ಡಿ-ರೆಫರೆನ್ಸ್ ಮಾಡಲು ಆರೋ-ಆಪರೇಟರ್ (arrow operator) ಅನ್ನು ಬಳಸಿದ್ದೇನೆ.
09:04 ಈ ಕೋಡ್, Monday ದಿಂದ Friday ವರೆಗಿನ ತಾಪಮಾನದ (temperature) ವ್ಯಾಲ್ಯೂಗಳನ್ನು ಸ್ಟೋರ್ ಮಾಡುತ್ತದೆ.
09:09 ಹ್ಯಾಶ್ ನ ಕೀಗಳಲ್ಲಿ ಲೂಪ್ ಮಾಡಲು, ನಾನು “keys” ಎಂಬ ಬಿಲ್ಟ್-ಇನ್ ಫಂಕ್ಷನ್ ಅನ್ನು ಬಳಸುತ್ತಿದ್ದೇನೆ.
09:15 'print' ಸ್ಟೇಟ್ಮೆಂಟ್, ಹ್ಯಾಶ್ ನ ಪ್ರತಿಯೊಂದು ಎಲಿಮೆಂಟ್ ಅನ್ನು ಪ್ರಿಂಟ್ ಮಾಡುವುದು.
09:19 ಒಂದು ಎಲಿಮೆಂಟ್ ನ ನಿರ್ದಿಷ್ಟ ವ್ಯಾಲ್ಯೂಅನ್ನು, ಇಲ್ಲಿ ತೋರಿಸಿದಂತೆ ನಾವು ಆಕ್ಸೆಸ್ ಮಾಡಬಹುದು.
09:25 'print' ಸ್ಟೇಟ್ಮೆಂಟ್, Monday ದ ತಾಪಮಾನವನ್ನು (temperature) ಪ್ರಿಂಟ್ ಮಾಡುವುದು.
09:29 ಈಗ, ಫೈಲನ್ನು ಸೇವ್ ಮಾಡಿ.
09:32 ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl hashRefadd dot pl' ಮತ್ತು ಔಟ್ಪುಟ್ ಅನ್ನು ನೋಡಲು 'Enter' ಅನ್ನು ಒತ್ತಿ.
09:41 ಹ್ಯಾಶ್ ಕೀಗಳು ಮತ್ತು ಹ್ಯಾಶ್ ವ್ಯಾಲ್ಯೂಗಳು, ಇಷ್ಟಬಂದಂತೆ ಸ್ಟೋರ್ ಮಾಡಲ್ಪಟ್ಟಿವೆ.
09:46 ತೋರಿಸಲಾದ ಔಟ್ಪುಟ್, ಅವುಗಳನ್ನು ಸೇರಿಸಿದ ಕ್ರಮಕ್ಕೆ ಸಂಬಂಧಿಸಿರುವದಿಲ್ಲ.
09:52 ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ,
09:57 ಈ ಟ್ಯುಟೋರಿಯಲ್ ನಲ್ಲಿ, ನಾವು:
  • ಸ್ಕೇಲಾರ್ ರೆಫರೆನ್ಸ್ ಗಳು
  • ಆರೇ ರೆಫರೆನ್ಸ್ ಗಳು
  • ಹ್ಯಾಶ್ ' ರೆಫರೆನ್ಸ್ ಗಳು
  • ಡಿ- ರೆಫರೆನ್ಸ್ ಗಳು ಹಾಗೂ
  • ಅರೇ/ಹ್ಯಾಶ್ ರೆಫರೆನ್ಸ್ ಗಳ ಎಲಿಮೆಂಟ್ ಗಳನ್ನು ಹೇಗೆ ಸೇರಿಸುವುದು, ತೆಗೆದುಹಾಕುವುದು ಮತ್ತು ಆಕ್ಸೆಸ್ (access) ಮಾಡುವುದು, ಇವುಗಳ ಬಗ್ಗೆ ಉದಾಹರಣೆಗಳೊಂದಿಗೆ ಕಲಿತಿದ್ದೇವೆ.
10:14 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:

ನಮ್ಮ 'hashRefadd dot pl' ಎಂಬ ಫೈಲ್ ನಲ್ಲಿ, ಹ್ಯಾಶ್ weektemp ನಲ್ಲಿ, “Saturday” ಹಾಗೂ “Sunday” ಗಳೆಂಬ ಹೊಸ ಕೀಗಳನ್ನು ಸೇರಿಸಿ.

10:24 ಕೊನೆಯಲ್ಲಿ, “Saturday” ಎಂಬ ಕೀಯನ್ನು ಡಿಲೀಟ್ ಮಾಡಿ.
10:27 ಹ್ಯಾಶ್ “weektemp” ಎಂದು ಪ್ರಿಂಟ್ ಮಾಡಿ.
10:30 ಪ್ರೊಗ್ರಾಂಅನ್ನು ಸೇವ್ ಮಾಡಿ ಮತ್ತು ಎಕ್ಸೀಕ್ಯೂಟ್ ಮಾಡಿ. ಈಗ, ಫಲಿತಾಂಶವನ್ನು ನೋಡಿ.
10:35 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
10:42 ನಾವು ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ನಮ್ಮ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಇಲ್ಲಿಗೆ ಬರೆಯಿರಿ:

contact@spoken-tutorial.org

10:51 ಇದು NMEICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.

ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: spoken hyphen tutorial dot org slash NMEICT hyphen Intro.

11:02 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.

ವಂದನೆಗಳು.

Contributors and Content Editors

Sandhya.np14