Difference between revisions of "ExpEYES/C3/Transient-Response-of-Circuits/Kannada"

From Script | Spoken-Tutorial
Jump to: navigation, search
 
Line 250: Line 250:
 
|-
 
|-
 
|08:57
 
|08:57
|'''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………….. .
+
|'''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.
 
ವಂದನೆಗಳು.
 
ವಂದನೆಗಳು.
 
|}
 
|}

Latest revision as of 12:57, 23 September 2017

Time Narration
00:01 ನಮಸ್ಕಾರ. Transient Response of circuits (ಟ್ರಾನ್ಸಿಯೆಂಟ್ ರಿಸ್ಪಾನ್ಸ್ ಆಫ್ ಸರ್ಕೀಟ್ಸ್) ಎಂಬ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:08 ಈ ‘ಟ್ಯುಟೋರಿಯಲ್’ನಲ್ಲಿ, ನಾವು:
  • 'RC, RL' ಮತ್ತು 'LCR ಸರ್ಕೀಟ್' ಗಳ ‘ಟ್ರಾನ್ಸಿಯೆಂಟ್ ರಿಸ್ಪಾನ್ಸ್’
  • LCR ಸರ್ಕೀಟ್ ಗಳ 'ಅಂಡರ್-ಡ್ಯಾಂಪ್ಡ್ ಡಿಸ್ಚಾರ್ಜ್' (Underdamped discharge)
  • 'RC ಇಂಟಿಗ್ರೇಶನ್' ಹಾಗೂ 'ಡಿಫರೆನ್ಸಿಯೇಶನ್'

ಇವುಗಳನ್ನು ಕಲಿಯುವೆವು.

00:24 ಇಲ್ಲಿ ನಾನು:
  • ExpEYES ಆವೃತ್ತಿ 3.1.0
  • Ubuntu Linux OS (ಉಬಂಟು ಲಿನಕ್ಸ್ ಒ ಎಸ್) ಆವೃತ್ತಿ 14.10

ಇವುಗಳನ್ನು ಬಳಸುತ್ತಿದ್ದೇನೆ.

00:33 ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು ExpEYES Junior ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು.

ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ.

00:44 ಮೊದಲು, ನಾವು ಒಂದು 'ಸರ್ಕೀಟ್' ನ 'ಟ್ರಾನ್ಸಿಯೆಂಟ್ ರಿಸ್ಪಾನ್ಸ್'ಅನ್ನು (transient Response) ವ್ಯಾಖ್ಯಾನಿಸೋಣ.
00:49 ಕೆಪ್ಯಾಸಿಟರ್ ಗಳು ಅಥವಾ ‘ಇಂಡಕ್ಟರ್’ಗಳಲ್ಲಿ ಶೇಖರಿಸಿರುವ ಎನರ್ಜೀಗೆ ಒಂದು ‘ಸರ್ಕೀಟ್’ ತೋರಿಸುವ ಪ್ರತಿಕ್ರಿಯೆಯನ್ನು ‘ಟ್ರಾನ್ಸಿಯೆಂಟ್ ರಿಸ್ಪಾನ್ಸ್’ ಎಂದು ಹೇಳಲಾಗುತ್ತದೆ.

ಒಂದು 'ಕೆಪ್ಯಾಸಿಟರ್' ಅಥವಾ ಒಂದು 'ಇಂಡಕ್ಟರ್'ನಲ್ಲಿ ಶೇಖರಿಸಲಾದ ಎನರ್ಜಿಯನ್ನು (ಶಕ್ತಿ) ಒಂದು 'ರೆಜಿಸ್ಟರ್' ನ ಮೂಲಕ ನಷ್ಟಗೊಳಿಸಬಹುದು.

01:03 ಈಗ 'RC ‘ಸರ್ಕೀಟ್’ ನ ‘ಟ್ರಾನ್ಸಿಯೆಂಟ್ ರಿಸ್ಪಾನ್ಸ್’ಅನ್ನು ಮಾಡಿತೋರಿಸುವೆವು.
01:07 ಈ ಪ್ರಯೋಗದಲ್ಲಿ, ನಾವು:
  • 'RC ಸರ್ಕೀಟ್' ನ 'ಸ್ಟೆಪ್ ಅಪ್' ಮತ್ತು 'ಸ್ಟೆಪ್ ಡೌನ್' 'ವೋಲ್ಟೇಜ್ ಕರ್ವ್'ಗಳನ್ನು ರಚಿಸುವೆವು ಮತ್ತು
  • 'RC' ಯನ್ನು ಮಿಲಿ ಸೆಕೆಂಡ್ ಗಳಲ್ಲಿ ಅಳೆಯುವೆವು.
01:18 ಈ ಪ್ರಯೋಗವನ್ನು ಮಾಡಲು, OD1 ಅನ್ನು 1K ರೆಜಿಸ್ಟರ್ ನ ಮೂಲಕ A1 ಗೆ ಜೋಡಿಸಲಾಗಿದೆ.
01:24 A1 ಮತ್ತು ಗ್ರೌಂಡ್ (GND) ಗಳ ನಡುವೆ 1 uF (ಒಂದು ಮೈಕ್ರೋ ಫರಾಡ್) ಕೆಪ್ಯಾಸಿಟರ್ ಅನ್ನು ಜೋಡಿಸಲಾಗಿದೆ.

ಇದು ‘ಸರ್ಕೀಟ್’ ಡೈಗ್ರಾಮ್ ಆಗಿದೆ.

01:34 ನಾವು ಇದರ ಪರಿಣಾಮವನ್ನು 'ಪ್ಲಾಟ್ ವಿಂಡೋ'ದಲ್ಲಿ ನೋಡೋಣ.
01:36 'ಪ್ಲಾಟ್ ವಿಂಡೋ'ದಲ್ಲಿ, 'EXPERIMENTS' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. 'RC Circuit' ಅನ್ನು ಆಯ್ಕೆಮಾಡಿ.
01:43 'Transient response of RC Circuit' ಮತ್ತು 'Schematic' ಎಂಬ ವಿಂಡೋಗಳು ತೆರೆದುಕೊಳ್ಳುತ್ತವೆ.

'Schematic' ವಿಂಡೋ, 'RC Circuit Transient' ಅನ್ನು ತೋರಿಸುತ್ತದೆ.

01:52 'Transient response of RC Circuit' ವಿಂಡೋದಲ್ಲಿ, '0 to 5V STEP' ಬಟನ್ ನ ಮೇಲೆ ಕ್ಲಿಕ್ ಮಾಡಿ.

'ಸ್ಟೆಪ್ ಅಪ್' ವೋಲ್ಟೇಜ್ ಕರ್ವ್ ಅನ್ನು ಪ್ರದರ್ಶಿಸಲಾಗುತ್ತದೆ.

02:03 ಆಮೇಲೆ '5 to 0 V STEP' ಬಟನ್ ನ ಮೇಲೆ ಕ್ಲಿಕ್ ಮಾಡಿ. 'ಸ್ಟೆಪ್ ಡೌನ್' ವೋಲ್ಟೇಜ್ ಕರ್ವ್ ಅನ್ನು ಪ್ರದರ್ಶಿಸಲಾಗುತ್ತದೆ.
02:11 'Calculate RC' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.

'RC = 1.14 msec' ಇದೆ ಎಂದು ಪ್ರದರ್ಶಿಸಲಾಗುತ್ತಿದೆ.

02:20 ವಿಂಡೋಅನ್ನು ತೆರವುಗೊಳಿಸಲು 'Clear' ಬಟನ್ ನ ಮೇಲೆ ಕ್ಲಿಕ್ ಮಾಡಿ.
02:24 'CC Charge' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. 4.5 volts ಗೆ ಒಂದು ಅಡ್ಡಲಾದ ಟ್ರೇಸ್ ಕಂಡುಬರುತ್ತದೆ.
02:31 ನಂತರ:
  • ಕಾನ್ಸ್ಟಂಟ್ ಕರೆಂಟ್ ನಿಂದ ಕೆಪ್ಯಾಸಿಟರ್ ಅನ್ನು ಚಾರ್ಜ್ ಮಾಡುವುದು ಹಾಗೂ
  • RC ಯನ್ನು ಮಿಲಿ ಸೆಕೆಂಡ್ ಗಳಲ್ಲಿ ಅಳೆಯುವುದನ್ನು ನಾವು ತೋರಿಸುವೆವು
02:41 ‘ಸರ್ಕೀಟ್’ ನಲ್ಲಿ, ನಾವು OD1 ಗೆ ಬದಲಾಗಿ 1K ರೆಜಿಸ್ಟರ್ ಅನ್ನು CCS ಗೆ ಜೋಡಿಸುವೆವು. ಇದು ‘ಸರ್ಕೀಟ್’ ಡೈಗ್ರಾಮ್ ಆಗಿದೆ.
02:51 ವಿಂಡೋಅನ್ನು ತೆರವುಗೊಳಿಸಲು, 'CLEAR ' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
02:55 'CC Charge' ಬಟನ್ ನ ಮೇಲೆ ಕ್ಲಿಕ್ ಮಾಡಿ. 'ಕೆಪ್ಯಾಸಿಟರ್' ನ ವೋಲ್ಟೇಜ್ ಗಮನಾರ್ಹವಾಗಿ (exponentially) ವೃದ್ಧಿಸುತ್ತದೆ.
03:03 'Calculate RC' ಬಟನ್ ನ ಮೇಲೆ ಕ್ಲಿಕ್ ಮಾಡಿ. ವ್ಯಾಲ್ಯೂ,

'RC= 5.81 mSec' ಎಂದು ಪ್ರದರ್ಶಿಸಲಾಗುತ್ತದೆ.

03:12 ಈಗ 'RL ಸರ್ಕೀಟ್' ನ ‘ಟ್ರಾನ್ಸಿಯೆಂಟ್ ರಿಸ್ಪಾನ್ಸ್’ ಅನ್ನು ಮಾಡಿತೋರಿಸುವೆವು.
03:17 ಈ ಪ್ರಯೋಗದಲ್ಲಿ:
  • RL ನ 'ಸ್ಟೆಪ್ ಅಪ್' ಮತ್ತು 'ಸ್ಟೆಪ್ ಡೌನ್' 'ವೋಲ್ಟೇಜ್ ಕರ್ವ್'ಗಳನ್ನು ರಚಿಸುವೆವು ಮತ್ತು
  • R/L ಅನ್ನು ಅಳೆಯುವೆವು.
03:26 ಈ ಪ್ರಯೋಗದಲ್ಲಿ,

IN1 ಅನ್ನು OD1 ಗೆ ಜೋಡಿಸಲಾಗಿದೆ. OD1 ಅನ್ನು '1K' ರೆಜಿಸ್ಟರ್ ನ ಮೂಲಕ A1 ಗೆ ಜೋಡಿಸಲಾಗಿದೆ. A1 ಅನ್ನು ಒಂದು ಕಾಯ್ಲ್ ನ ಮೂಲಕ GND ಗೆ ಜೋಡಿಸಲಾಗಿದೆ.

03:38 ಇದು ‘ಸರ್ಕೀಟ್’ ಡೈಗ್ರಾಮ್ ಆಗಿದೆ.
03:41 ನಾವು ಪರಿಣಾಮವನ್ನು 'ಪ್ಲಾಟ್ ವಿಂಡೋ' ದ ಮೇಲೆ ನೋಡೋಣ.
03:44 'ಪ್ಲಾಟ್ ವಿಂಡೋ' ದಲ್ಲಿ, 'EXPERIMENTS' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. 'RL Circuit' ಅನ್ನು ಆಯ್ಕೆಮಾಡಿ.
03:51 'Transient response of RL Circuit' ಮತ್ತು 'Schematic' ಎಂಬ ವಿಂಡೋಗಳು ತೆರೆದುಕೊಳ್ಳುತ್ತವೆ.

'Schematic' ವಿಂಡೋ 'RL Circuit, Transient' ಅನ್ನುತೋರಿಸುತ್ತದೆ.

04:02 'Transient response of RL Circuit' ವಿಂಡೋದಲ್ಲಿ, '0 to 5V STEP' ಬಟನ್ ನ ಮೇಲೆ ಕ್ಲಿಕ್ ಮಾಡಿ.

'ಸ್ಟೆಪ್ ಅಪ್' ವೋಲ್ಟೇಜ್ ಕರ್ವ್ ಅನ್ನುಪ್ರದರ್ಶಿಸಲಾಗುತ್ತದೆ.

04:12 '5 to 0 V STEP' ಬಟನ್ ನ ಮೇಲೆ ಕ್ಲಿಕ್ ಮಾಡಿ. 'ಸ್ಟೆಪ್ ಡೌನ್' ವೋಲ್ಟೇಜ್ ಕರ್ವ್ ಅನ್ನು ಪ್ರದರ್ಶಿಸಲಾಗುತ್ತದೆ.
04:20 ವ್ಯಾಲ್ಯೂಗಳನ್ನು ಪ್ರದರ್ಶಿಸಲು, 'Calculate R/L' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
04:26 'L/R' ನ ವ್ಯಾಲ್ಯೂ, 0.083 mSec (ಮಿಲಿ ಸೆಕೆಂಡ್ ಗಳು),

'Rind' ನ ವ್ಯಾಲ್ಯೂ, 529 Ohm ಗಳು,

04:35 ’ಇಂಡಕ್ಟರ್’ ನ ವ್ಯಾಲ್ಯೂ 127.6mH (ಮಿಲಿ ಹೆನ್ರೀ) ಆಗಿರುತ್ತವೆ.

ಇಲ್ಲಿ - 'R' ರೆಸಿಸ್ಟನ್ಸ್, 'L' ಇಂಡಕ್ಟನ್ಸ್ ಮತ್ತು 'Rind' - ‘ಇಂಡಕ್ಟರ್’ ನ ರೆಸಿಸ್ಟನ್ಸ್ ಆಗಿವೆ.

04:50 ಒಂದು ಅಸೈನ್ಮೆಂಟ್-

’ಸಿರೀಸ್’ ನಲ್ಲಿ ಜೋಡಿಸಲಾದ ಎರಡು ಕಾಯ್ಲ್ ಗಳನ್ನು ಬಳಸಿ, 'RL ಸರ್ಕೀಟ್' ನ ವೋಲ್ಟೇಜ್ ಕರ್ವ್ ಗಳನ್ನು ರಚಿಸಿ.

04:57 ಈಗ, ನಾವು 'LCR ಸರ್ಕೀಟ್' ನ 'ಅಂಡರ್-ಡ್ಯಾಂಪ್ಡ್ ಡಿಸ್ಚಾರ್ಜ್' ಅನ್ನು (underdamped discharge) ತೋರಿಸುತ್ತೇವೆ.
05:02 ಈ ಪ್ರಯೋಗದಲ್ಲಿ, OD1 ಅನ್ನು ಒಂದು ಕಾಯ್ಲ್ ನ ಮೂಲಕ A1 ಗೆ ಜೋಡಿಸಲಾಗಿದೆ.
05:07 A1 ಅನ್ನು '0.1uF' (0.1 ಮೈಕ್ರೋ ಫರಾಡ್) ಕೆಪ್ಯಾಸಿಟನ್ಸ್ ಮೂಲಕ GND ಗೆ ಜೋಡಿಸಲಾಗಿದೆ. ಇದು ‘ಸರ್ಕೀಟ್’ ಡೈಗ್ರಾಮ್ ಆಗಿದೆ.
05:15 ನಾವು ಪರಿಣಾಮವನ್ನು 'ಪ್ಲಾಟ್ ವಿಂಡೋ' ದ ಮೇಲೆ ನೋಡೋಣ.
05:18 'ಪ್ಲಾಟ್ ವಿಂಡೋದಲ್ಲಿ', 'EXPERIMENTS' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. 'RLC Discharge' ಅನ್ನು ಆಯ್ಕೆಮಾಡಿ.
05:25 'EYES Junior: RLC Discharge' ವಿಂಡೋ ಹಾಗೂ 'Schematic' ವಿಂಡೋಗಳು ತೆರೆದುಕೊಳ್ಳುತ್ತವೆ. 'Schematic' ವಿಂಡೋ, 'RLC Circuit, Transient' ಅನ್ನು ತೋರಿಸುತ್ತದೆ.
05:35 'EYES Junior: RLC Discharge' ವಿಂಡೋದಲ್ಲಿ, '5->0V STEP' ಬಟನ್ ನ ಮೇಲೆ ಕ್ಲಿಕ್ ಮಾಡಿ. 'ಸ್ಟೆಪ್ ಡೌನ್' ವೋಲ್ಟೇಜ್ ಕರ್ವ್ ಅನ್ನು ಪ್ರದರ್ಶಿಸಲಾಗಿದೆ.
05:45 'mS/div' ಸ್ಲೈಡರ್ ಅನ್ನು ಕದಲಿಸಿ ಮತ್ತು '5->0V STEP' ಬಟನ್ ನ ಮೇಲೆ ಕ್ಲಿಕ್ ಮಾಡಿ. 'ಅಂಡರ್-ಡ್ಯಾಂಪ್ಡ್ ಡಿಸ್ಚಾರ್ಜ್ ಕರ್ವ್' (Underdamped discharge curve) ಅನ್ನು ಪ್ರದರ್ಶಿಸಲಾಗಿದೆ.
05:55 ವ್ಯಾಲ್ಯೂಗಳನ್ನು ತೋರಿಸಲು, 'FIT' ಬಟನ್ ನ ಮೇಲೆ ಕ್ಲಿಕ್ ಮಾಡಿ.

'Resonant Frequency = 1.38 KHz' ಮತ್ತು 'Damping = 0.300'.

06:08 ಒಂದು ಅಸೈನ್ಮೆಂಟ್-

ಒಂದು 2K ರೆಜಿಸ್ಟರ್ ಅನ್ನು ಬಳಸಿ, LCR ‘ಸರ್ಕೀಟ್’ನ 'ಓವರ್-ಡ್ಯಾಂಪ್ಡ್ ಡಿಸ್ಚಾರ್ಜ್' ಅನ್ನು (overdamped discharge) ರಚಿಸಿ. ಇದು ‘ಸರ್ಕೀಟ್’ ಡೈಗ್ರಾಮ್ ಆಗಿದೆ.

06:18 ಈಗ, 'RC integration' ಅನ್ನು ಮಾಡಿತೋರಿಸುವೆವು.
06:21 ಈ ಪ್ರಯೋಗದಲ್ಲಿ ನಾವು, ಒಂದು ಚೌಕ ತರಂಗವನ್ನು ತ್ರಿಕೋನ ತರಂಗವನ್ನಾಗಿ ಬದಲಾಯಿಸುವೆವು.
06:28 ಇಲ್ಲಿ, SQR2 ಅನ್ನು 1K ರೆಜಿಸ್ಟರ್ ನ ಮೂಲಕ A1 ಗೆ ಜೋಡಿಸಲಾಗಿದೆ. ಇದು ‘ಸರ್ಕೀಟ್’ ಡೈಗ್ರಾಮ್ ಆಗಿದೆ.
06:34 ಇದರ ಪರಿಣಾಮವನ್ನು ನಾವು 'ಪ್ಲಾಟ್ ವಿಂಡೋ' ದ ಮೇಲೆ ನೋಡೋಣ.
06:38 'ಪ್ಲಾಟ್ ವಿಂಡೋ' ದಲ್ಲಿ, SQR2 ಅನ್ನು 1000 Hz ಗಳಿಗೆ ಸೆಟ್ ಮಾಡಿ. SQR2 ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
06:45 'ಫ್ರಿಕ್ವೆನ್ಸಿ ಸ್ಲೈಡರ್' ಅನ್ನು ಜರುಗಿಸಿ.
06:48 ತರಂಗವನ್ನು ಸರಿಹೊಂದಿಸಲು, mSec/div ಸ್ಲೈಡರ್ ಅನ್ನು ಜರುಗಿಸಿ. ಒಂದು ಚೌಕ ತರಂಗವನ್ನು ರಚಿಸಲಾಗಿದೆ.
06:56 ಇದೇ ಕನೆಕ್ಷನ್ ನಲ್ಲಿ, A1 ಅನ್ನು 1uF (ಒಂದು ಮೈಕ್ರೋ ಫರಾಡ್) ಕೆಪ್ಯಾಸಿಟರ್ ನ ಮೂಲಕ GND ಗೆ ಜೋಡಿಸಿ. ಇದು ‘ಸರ್ಕೀಟ್’ ಡೈಗ್ರಾಮ್ ಆಗಿದೆ.
07:05 ಒಂದು ತ್ರಿಕೋನ ತರಂಗವನ್ನು ರಚಿಸಲಾಗಿದೆ. RC ಯನ್ನು ಇಂಟಿಗ್ರೇಟ್ ಮಾಡಿದಾಗ, ಒಂದು ಚೌಕ ತರಂಗವು ತ್ರಿಕೋನ ತರಂಗವಾಗಿ ಬದಲಾಯಿಸಿದೆ.
07:14 ತ್ರಿಕೋನ ತರಂಗದ 'Grace' ಪ್ಲಾಟ್ ಅನ್ನು ತೋರಿಸಲು, 'XMG' ಬಟನ್ ನ ಮೇಲೆ ಕ್ಲಿಕ್ ಮಾಡಿ.
07:20 ಈಗ, 'RC ಡಿಫರೆನ್ಸಿಯೇಶನ್' ಅನ್ನು ಮಾಡಿತೋರಿಸುವೆವು.
07:24 ಈ ಪ್ರಯೋಗದಲ್ಲಿ, ನಾವು ಒಂದು ಚೌಕ ತರಂಗವನ್ನು ಕಿರಿದಾದ ಸ್ಪೈಕ್ ಗಳ ತರಂಗವನ್ನಾಗಿ ಬದಲಾಯಿಸುವೆವು.
07:31 ಈ ಪ್ರಯೋಗದಲ್ಲಿ, SQR2 ಅನ್ನು 1uF (ಒಂದು ಮೈಕ್ರೋ ಫರಾಡ್) ಕೆಪ್ಯಾಸಿಟರ್ ನ ಮೂಲಕ A1 ಗೆ ಜೋಡಿಸಲಾಗಿದೆ. ಇದು ‘ಸರ್ಕೀಟ್’ ಡೈಗ್ರಾಮ್ ಆಗಿದೆ.
07:40 ನಾವು ಪರಿಣಾಮವನ್ನು 'ಪ್ಲಾಟ್ ವಿಂಡೋ' ದ ಮೇಲೆ ನೋಡೋಣ.
07:43 ಒಂದು ಚೌಕ ತರಂಗವು ರಚಿಸಲ್ಪಟ್ಟಿದೆ.
07:46 ಇದೇ ಕನೆಕ್ಷನ್ ನಲ್ಲಿ, A1 ಅನ್ನು 1K ರೆಜಿಸ್ಟರ್ ನ ಮೂಲಕ GND ಗೆ ಜೋಡಿಸಿ. ಇದು ‘ಸರ್ಕೀಟ್’ ಡೈಗ್ರಾಮ್ ಆಗಿದೆ.
07:55 'ಪ್ಲಾಟ್ ವಿಂಡೋ' ದಲ್ಲಿ, SQR2 ಅನ್ನು 100 Hz ಗೆ ಸೆಟ್ ಮಾಡಿ.
08:00 ತರಂಗಗಳನ್ನು ಸರಿಹೊಂದಿಸಲು, mSec/div ಸ್ಲೈಡರ್ ಅನ್ನು ಕದಲಿಸಿ. ಕಿರಿದಾದ 'ಸ್ಪೈಕ್' ಗಳ (narrow spikes) ಒಂದು ತರಂಗವು ರಚಿಸಲ್ಪಟ್ಟಿದೆ.
08:08 RC ಯನ್ನು 'ಡಿಫರೆನ್ಸಿಯೇಟ್' ಮಾಡಿದಾಗ, ಚೌಕ ತರಂಗವು (square wave), ಕಿರಿದಾದ 'ಸ್ಪೈಕ್' ಗಳ (narrow spikes) ತರಂಗವಾಗಿ ಬದಲಾಯಿಸಿದೆ.
08:15 'Grace' ಪ್ಲಾಟ್ ಅನ್ನು ತೋರಿಸಲು, XMG ಬಟನ್ ನ ಮೇಲೆ ಕ್ಲಿಕ್ ಮಾಡಿ.
08:19 ಸಂಕ್ಷಿಪ್ತವಾಗಿ,
08:21 ಈ ಟ್ಯುಟೋರಿಯಲ್ ನಲ್ಲಿ, ನಾವು -
  • RC, RL ಮತ್ತು LCR ‘ಸರ್ಕೀಟ್’ ಗಳ‘ ಟ್ರಾನ್ಸಿಯೆಂಟ್ ರಿಸ್ಪಾನ್ಸ್’
  • LCR ‘ಸರ್ಕೀಟ್’ ನ 'ಅಂಡರ್-ಡ್ಯಾಂಪ್ಡ್ ಡಿಸ್ಚಾರ್ಜ್' (Underdamped discharge)
  • 'RC ಇಂಟಿಗ್ರೇಶನ್' ಮತ್ತು 'ಡಿಫರೆನ್ಸಿಯೇಶನ್' ಇವುಗಳನ್ನು ಕಲಿತಿದ್ದೇವೆ.
08:36 ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:44 ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
08:51 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
08:57 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.

ವಂದನೆಗಳು.

Contributors and Content Editors

Sandhya.np14