Difference between revisions of "ExpEYES/C2/Introduction-to-ExpEYES-Junior/Kannada"

From Script | Spoken-Tutorial
Jump to: navigation, search
(Created page with "{| border=1 ||'''Time''' ||'''Narration''' |- |00:01 |ನಮಸ್ಕಾರ. '''Introduction to ExpEYES Junior''' ಎಂಬ ‘ಟ್ಯುಟೋರಿಯಲ್’ಗೆ ನ...")
 
 
Line 289: Line 289:
 
|10:32
 
|10:32
 
|‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.  
 
|‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.  
'''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………….. .
+
'''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.
 
|-
 
|-
 
|10:43
 
|10:43
 
| ವಂದನೆಗಳು.
 
| ವಂದನೆಗಳು.

Latest revision as of 18:30, 20 September 2017

Time Narration
00:01 ನಮಸ್ಕಾರ. Introduction to ExpEYES Junior ಎಂಬ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:07 ಈ ‘ಟ್ಯುಟೋರಿಯಲ್’ನಲ್ಲಿ, ನಾವು:
  • 'ExpEYES Junior' (ಎಕ್ಸ್ಪೈಸ್ ಜೂನಿಯರ್) ಎಂಬ ಸಾಧನ ಬಗ್ಗೆ
  • ಇದರ ವೈಶಿಷ್ಟ್ಯಗಳು
  • ಇದನ್ನು ಹೇಗೆ ಖರೀದಿಸುವುದು
  • ಈ ಸಾಫ್ಟ್ವೇರ್ ಅನ್ನು ವಿವಿಧ ಆಪರೇಟಿಂಗ್ ಸಿಸ್ಟಂಗಳ ಮೇಲೆ ಇನ್ಸ್ಟಾಲ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು.
00:19 ನಾವು-
  • ಈ ಸಾಧನವನ್ನು ಸಿಸ್ಟಂಗೆ ಜೋಡಿಸಲು ಮತ್ತು
  • ಒಂದು ಸರಳವಾದ ಪ್ರಯೋಗವನ್ನು ಮಾಡಿತೋರಿಸಲು ಸಹ ಕಲಿಯುವೆವು.
00:26 ಇಲ್ಲಿ ನಾನು:
  • ExpEYES ಆವೃತ್ತಿ 3.1.0
  • Ubuntu Linux OS (ಉಬಂಟು ಲಿನಕ್ಸ್ ಒ ಎಸ್) ಆವೃತ್ತಿ 14.04
00:35 * Andriod ಆವೃತ್ತಿ 5.0.2
  • Windows ಆವೃತ್ತಿ 7
  • Firefox browser ಆವೃತ್ತಿ 35.0.1 ಇವುಗಳನ್ನು ಬಳಸುತ್ತಿದ್ದೇನೆ.
00:45 ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು ಹೈಸ್ಕೂಲ್ ಮಟ್ಟದ ಭೌತಶಾಸ್ತ್ರವನ್ನು ತಿಳಿದಿರಬೇಕು.
00:51 'ExpEYES' ಎಂದರೆ ಏನು ಎಂಬುದನ್ನು ಮೊದಲು ನಾವು ನೋಡೋಣ.
  • 'ExpEYES' ಎಂದರೆ 'Experiments for Young Engineers and Scientists'.
  • ಇದನ್ನುಭೌತಶಾಸ್ತ್ರ ಮತ್ತು ಇಲೆಕ್ಟ್ರಾನಿಕ್ಸ್ ನ ಪ್ರಯೋಗಗಳನ್ನು ಮಾಡಲು ಬಳಸಲಾಗುತ್ತದೆ.
01:06 'ExpEYES Junior' ಸಾಧನವು ಹೀಗೆ ಕಾಣುತ್ತದೆ.
  • ಇದು ಒಂದು ಸಣ್ಣ ಆಯತಾಕಾರದ ಬಾಕ್ಸ್ ಆಗಿದ್ದು 8.6 x 5.8 x 1.6 ಘನ ಸೆಂ. ಅಳತೆಯನ್ನು ಹೊಂದಿದೆ. (cm3).
  • ಸುಮಾರು 60 ಗ್ರಾಂ ತೂಕವನ್ನು ಹೊಂದಿದೆ.
01:24 ಈ ಸಾಧನವನ್ನು 'USB' ಪೋರ್ಟ್ ನ ಮೂಲಕ ಸಿಸ್ಟಂಗೆ ಜೋಡಿಸಬಹುದು.
01:28 ಇಲ್ಲಿ, 'ExpEYES Junior' ದ ಕೆಲವು ಪ್ರಮುಖ ವೈಶಿಷ್ಟ್ಯಗಳ ಒಂದು ಪಟ್ಟಿ ಇದೆ.
01:33 * ಈ ಸಾಧನವು ವೋಲ್ಟೇಜ್ಗಳನ್ನು ಅಳೆಯಬಲ್ಲದು, ಪ್ಲಾಟ್ ಗಳನ್ನು ಹಾಗೂ ತರಂಗರೂಪಗಳನ್ನು (waveforms) ತಯಾರಿಸಬಹುದು.
  • ಇದರ ಬೆಲೆ ಕಡಿಮೆ ಮತ್ತು ಸರಿಯಾದ ಮಾಪನಗಳನ್ನು ಕೊಡುತ್ತದೆ.
  • ಈ ಸಾಧನವು ಬಿಲ್ಟ್-ಇನ್ ಸಿಗ್ನಲ್ ಜೆನರೇಟರ್ ಹಾಗೂ ಆಸಿಲೋಸ್ಕೋಪ್ ಗಳನ್ನು ಹೊಂದಿದೆ.
01:48 * ಇದು 12 ಬಿಟ್ ಇನ್ಪುಟ್/ ಔಟ್ಪುಟ್ 'ಅನಲಾಗ್' (analog) ರೆಸೊಲ್ಯುಶನ್ ಅನ್ನು ಹೊಂದಿರುತ್ತದೆ.
  • ಇದು ಮೈಕ್ರೋಸೆಕೆಂಡ್ ಗಳ ಸಮಯದ ರೆಸೊಲ್ಯುಶನ್ ಅನ್ನು ಹೊಂದಿದೆ.
  • ಸಾಫ್ಟ್ವೇರ್, 'Bootable ISO' ಇಮೇಜ್ ನಲ್ಲಿ ಲಭ್ಯವಿದೆ.
02:00 ನಾವು ಈ ಸಾಧನವನ್ನು ಆನ್-ಲೈನ್ ನಲ್ಲಿ ಹೇಗೆ ಖರೀದಿಸುವುದೆಂದು ನೋಡೋಣ.
02:03 Firefox ವೆಬ್-ಬ್ರೌಸರ್ ಅನ್ನು ಓಪನ್ ಮಾಡಿ. ಅಡ್ರೆಸ್-ಬಾರ್ ನಲ್ಲಿ, ಹೀಗೆ ಟೈಪ್ ಮಾಡಿ:

http://expeyes.in/hardware-availability ಮತ್ತು 'Enter' ಅನ್ನು ಒತ್ತಿ.

02:18 ಈ ಸಾಧನವನ್ನು ಖರೀದಿಸಲು ಬೇಕಾಗಿರುವ ಎಲ್ಲ ವಿವರಗಳೊಂದಿಗೆ ಒಂದು ವೆಬ್-ಪೇಜ್ ತೆರೆದುಕೊಳ್ಳುತ್ತದೆ.
02:22 ವಿವಿಧ ಆಪರೇಟಿಂಗ್ ಸಿಸ್ಟಂಗಳ ಮೇಲೆ ಈ ಸಾಫ್ಟ್ವೇರ್ ನ ಲಭ್ಯತೆಯ ಬಗ್ಗೆ ನಾವು ತಿಳಿದುಕೊಳ್ಳೋಣ.
02:28 * 'ExpEYES Junior' ನ ಸಾಫ್ಟ್ವೇರ್ ಅನ್ನು, 'ಪೈಥನ್' (Python) ಎಂಬ ಕಂಪ್ಯೂಟರ್ ಭಾಷೆಯಲ್ಲಿ ಕೋಡ್ ಮಾಡಲಾಗಿದೆ.
  • ಇದು ಉಚಿತ ಹಾಗೂ ಓಪನ್ ಸೋರ್ಸ್ ಸಾಫ್ಟ್ವೇರ್ ಆಗಿದೆ.
  • ಇದನ್ನು 'GNU General Public License' ನ ಅಡಿಯಲ್ಲಿ ವಿತರಿಸಲಾಗಿದೆ.
02:41 ಈ ಸಾಫ್ಟ್ವೇರ್ -
  • 'GNU/Linux' (ಜಿ ಎನ್ ಯು ಲಿನಕ್ಸ್)
  • 'Netbook' (ನೆಟ್ಬುಕ್)
  • 'Android' (ಆಂಡ್ರೈಡ್) ಹಾಗೂ
  • 'Windows' (ವಿಂಡೋಸ್) ಇವುಗಳ ಮೇಲೆ ಕೆಲಸ ಮಾಡುತ್ತದೆ.
02:48 'ಉಬಂಟು ಲಿನಕ್ಸ್ ಒ ಎಸ್' ನ (Ubuntu Linux OS) ಮೇಲೆ ಇನ್ಸ್ಟಾಲ್ ಮಾಡುವುದರೊಂದಿಗೆ ನಾವು ಆರಂಭಿಸೋಣ.
02:52 ನಾವು ಸಾಫ್ಟ್ವೇರ್ ಅನ್ನು ನೇರವಾಗಿ 'Ubuntu Software Center' ನಿಂದ ಇನ್ಸ್ಟಾಲ್ ಮಾಡಬಹುದು.
02:57 ಪರ್ಯಾಯವಾಗಿ, Firefox ವೆಬ್ ಬ್ರೌಸರ್ ಅನ್ನು ಓಪನ್ ಮಾಡಿ. ಅಡ್ರೆಸ್ ಬಾರ್ ನಲ್ಲಿ, ಹೀಗೆ ಟೈಪ್ ಮಾಡಿ: http://expeyes.in
03:08 ಪೇಜ್ ನಲ್ಲಿ, 'SOFTWARE' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.

'Software Installation' ಎಂಬ ಪೇಜ್ ತೆರೆದುಕೊಳ್ಳುತ್ತದೆ.

03:15 'expeyes.deb' ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.

'Save File' ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. 'Save File' ಅನ್ನು ಆಯ್ಕೆಮಾಡಿ ಮತ್ತು 'OK' ಯ ಮೇಲೆ ಕ್ಲಿಕ್ ಮಾಡಿ.

03:26 ಡೌನ್ಲೋಡ್ ಮಾಡಲಾದ ಫೈಲ್ ನ ಮೇಲೆ ಕ್ಲಿಕ್ ಮಾಡಿ.
03:29 ಫೈಲ್, 'Ubuntu Software Centre' ನಲ್ಲಿ ತೆರೆದುಕೊಳ್ಳುತ್ತದೆ. 'Install' ಬಟನ್ ಮೇಲೆ ಕ್ಲಿಕ್ ಮಾಡಿ.
03:35 'Authenticate' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. ಸಿಸ್ಟಂ ಪಾಸ್ವರ್ಡ್ ಅನ್ನು ಟೈಪ್ ಮಾಡಿ ಮತ್ತು 'Authenticate' ಬಟನ್ ನ ಮೇಲೆ ಕ್ಲಿಕ್ ಮಾಡಿ.
03:42 ಇನ್ಸ್ಟಾಲ್ ಮಾಡಲು ಕೆಲವು ನಿಮಿಷಗಳು ಬೇಕಾಗಬಹುದು.
03:45 ಸಾಫ್ಟ್ವೇರ್ ಇಂಟರ್ಫೇಸ್ ಅನ್ನು ಓಪನ್ ಮಾಡಲು, 'Dash Home' ನ ಮೇಲೆ ಕ್ಲಿಕ್ ಮಾಡಿ. 'ಸರ್ಚ್ ಬಾರ್' ನಲ್ಲಿ "expeyes junior" ಎಂದು ಟೈಪ್ ಮಾಡಿ.
03:54 'ExpEYES Junior' ಐಕಾನ್ ಕಾಣಿಸಿಕೊಳ್ಳುತ್ತದೆ. ಇಂಟರ್ಫೇಸ್ ಅನ್ನು ಓಪನ್ ಮಾಡಲು ಇದರ ಮೇಲೆ ಕ್ಲಿಕ್ ಮಾಡಿ.
04:00 ನಾವು ನೆಟ್ಬುಕ್ ನ (Netbook) ಮೇಲೆ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡೋಣ.
04:03 ನೆಟ್ಬುಕ್ ನ ಮೇಲೆ, 'ಎಲ್-ಉಬಂಟು ಸಾಫ್ಟ್ವೇರ್ ಸೆಂಟರ್' (Lubuntu Software Center) ಅನ್ನು ಬಳಸಿ 'ExpEYES Junior' ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡಬಹುದು.
04:10 'Software Center' ಐಕಾನ್ ಮೇಲೆ ರೈಟ್- ಕ್ಲಿಕ್ ಮಾಡಿ. 'Open' ಅನ್ನು ಆಯ್ಕೆಮಾಡಿ. 'Lubuntu Software Center' ಎಂಬ ವಿಂಡೋ ತೆರೆದುಕೊಳ್ಳುತ್ತದೆ.
04:19 'Search a package' ಬಾಕ್ಸ್ ನಲ್ಲಿ, "expeyes" ಎಂದು ಟೈಪ್ ಮಾಡಿ. 'Expeyes' ಐಕಾನ್ ಕಾಣಿಸಿಕೊಳ್ಳುತ್ತದೆ. ಐಕಾನ್ ಅನ್ನು ಆಯ್ಕೆಮಾಡಿ.
04:28 'ಸ್ಟೇಟಸ್-ಬಾರ್' ನ ಮೇಲೆ, 'Add to the Apps Basket' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
04:33 'ಮೆನ್ಯು ಬಾರ್' ನ ಮೇಲೆ, 'Apps Basket' ಬಟನ್ ನ ಮೇಲೆ ಕ್ಲಿಕ್ ಮಾಡಿ. 'Apps Basket' ಎಂಬ ವಿಂಡೋ ತೆರೆದುಕೊಳ್ಳುತ್ತದೆ.
04:41 'Package' ಲಿಸ್ಟ್ ನಿಂದ, 'Expeyes' ಅನ್ನು ಆಯ್ಕೆಮಾಡಿ. 'Install Packages' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
04:48 'Authenticate' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. ಸಿಸ್ಟಂ ಪಾಸ್ವರ್ಡ್ ಅನ್ನು ಟೈಪ್ ಮಾಡಿ ಮತ್ತು 'Authenticate' ಬಟನ್ ನ ಮೇಲೆ ಕ್ಲಿಕ್ ಮಾಡಿ.
04:56 'Installing packages' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. ಇನ್ಸ್ಟಾಲ್ ಮಾಡಲು ಕೆಲವು ನಿಮಿಷಗಳು ಬೇಕಾಗುತ್ತದೆ.
05:03 'USB' ಕೇಬಲ್ ಅನ್ನು ಬಳಸಿ ನೆಟ್ಬುಕ್ ಅನ್ನು ಈ ಸಾಧನಕ್ಕೆ ಜೋಡಿಸಿ.
05:08 'ನೆಟ್ಬುಕ್' ನಲ್ಲಿ ಸಾಫ್ಟ್ವೇರ್ ಇಂಟರ್ಫೇಸ್ ಅನ್ನು ಓಪನ್ ಮಾಡಲು - 'Start' ಬಟನ್ ಮೇಲೆ ಕ್ಲಿಕ್ ಮಾಡಿ >> 'Education' ಇರುವಲ್ಲಿಗೆ ಹೋಗಿ >>
05:15 'ExpEYES Junior' ಅನ್ನು ಆಯ್ಕೆಮಾಡಿ. ಸಾಫ್ಟ್ವೇರ್ ಇಂಟರ್ಫೇಸ್ ತೆರೆದುಕೊಳ್ಳುತ್ತದೆ.
05:21 ನಾವು 'Android' ನ ಮೇಲೆ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡೋಣ.
05:25 ದಯವಿಟ್ಟು ನಿಮ್ಮ 'Android' ಸಾಧನದ ಮೇಲೆ, 'Wi Fi' ಅಥವಾ 'ಡೇಟಾ ಪ್ಯಾಕ್' ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಿ.
05:31 'ExpEYES Junior' ಸಾಧನವನ್ನು 'OTG' ಕೇಬಲ್ ಮೂಲಕ ನಿಮ್ಮ ಮೊಬೈಲ್ ಗೆ ಜೋಡಿಸಬಹುದು.
05:38 ನಿಮ್ಮ ಮೊಬೈಲ್ ನಲ್ಲಿ, 'Home' ಬಟನ್ ನ ಮೇಲೆ ಕ್ಲಿಕ್ ಮಾಡಿ >> 'Google Play Store' ಇರುವಲ್ಲಿಗೆ ಹೋಗಿ >>
05:44 'APPS' ಮೇಲೆ ಕ್ಲಿಕ್ ಮಾಡಿ. 'APPS' ಪೇಜ್ ತೆರೆದುಕೊಳ್ಳುತ್ತದೆ.
05:48 ಮೇಲ್ಗಡೆ ಬಲಮೂಲೆಯಲ್ಲಿ ಇರುವ ಭೂತಗನ್ನಡಿಯ ಮೇಲೆ ಕ್ಲಿಕ್ ಮಾಡಿ.
05:53 "expeyes" ಎಂದು ಟೈಪ್ ಮಾಡಿ, 'ExpEYES' ಮೇಲೆ ಕ್ಲಿಕ್ ಮಾಡಿ. 'INSTALL' ಮೇಲೆ ಕ್ಲಿಕ್ ಮಾಡಿ.
05:59 'ಲೈಸೆನ್ಸ್ ಅಗ್ರೀಮೆಂಟ್' ಅನ್ನು ಒಪ್ಪಿಕೊಳ್ಳಿ. ಡೌನ್ಲೋಡ್ ಆಗಲು ಆರಂಭವಾಗುತ್ತದೆ.
06:05 ಡೌನ್ಲೋಡ್ ಮಾಡುವುದು ಆದಮೇಲೆ, 'OPEN' ಮೇಲೆ ಕ್ಲಿಕ್ ಮಾಡಿ.
06:09 'ExpEYES Experiments' ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
06:12 'Use by default for this USB device' ಎಂಬ ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
06:17 'OK' ಮೇಲೆ ಕ್ಲಿಕ್ ಮಾಡಿ. ಇಂಟರ್ಫೇಸ್ ತೆರೆದುಕೊಳ್ಳುತ್ತದೆ.
06:21 ನಾವು 'Windows' ಆಪರೇಟಿಂಗ್ ಸಿಸ್ಟಂನ ಮೇಲೆ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡೋಣ.
06:27 ನಿಮ್ಮ ಡೀಫಾಲ್ಟ್ ವೆಬ್ ಬ್ರೌಸರ್ ಅನ್ನು ಓಪನ್ ಮಾಡಿ. ಅಡ್ರೆಸ್-ಬಾರ್ ನಲ್ಲಿ, URL "expeyes.in" ಅನ್ನು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.

'ExpEYES' ಪೇಜ್ ತೆರೆದುಕೊಳ್ಳುತ್ತದೆ.

06:40 'SOFTWARE' ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. 'MS Windows' ಇರುವಲ್ಲಿಗೆ ಸ್ಕ್ರೋಲ್-ಡೌನ್ ಮಾಡಿ.
06:45 'Windows' ನಲ್ಲಿ ಇನ್ಸ್ಟಾಲ್ ಮಾಡಲು, ನಮಗೆ 'ಪೈಥನ್ ಇಂಟರ್ಪ್ರಿಟರ್' ಮತ್ತು ಅಗತ್ಯವಿರುವ ಲೈಬ್ರರಿಗಳನ್ನು ಇನ್ಸ್ಟಾಲ್ ಮಾಡುವುದು ಅವಶ್ಯವಾಗಿದೆ.
06:52 ಈ ಕೆಳಗಿನ ಡ್ರೈವರ್ ಗಳು ಮತ್ತು ಫೈಲ್ ಗಳನ್ನು ಡೌನ್ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ:

http://www.ftdichip.com/Drivers/CDM/CDM20814_Setup.exe

06:57 ನಾನು ಈಗಾಗಲೇ ಎಲ್ಲ ಫೈಲ್ ಗಳನ್ನು ನನ್ನ 'Downloads library' ಯಲ್ಲಿ ಡೌನ್ಲೋಡ್ ಮಾಡಿದ್ದೇನೆ.
07:02 'expeyes-3.0.0' ಝಿಪ್ ಫೈಲ್ ನ ಮೇಲೆ ರೈಟ್- ಕ್ಲಿಕ್ ಮಾಡಿ ಮತ್ತು 'Extract Here' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಫೈಲ್ ಅನ್ನು ಎಕ್ಸ್ಟ್ರ್ಯಾಕ್ಟ್ ಮಾಡಲಾಗಿದೆ.
07:14 'expeyes-3.0.0' ಫೋಲ್ಡರ್ ನ ಮೇಲೆ ಡಬಲ್-ಕ್ಲಿಕ್ ಮಾಡಿ.
07:21 'eyes-junior' ಎಂಬ ಫೋಲ್ಡರ್ ನ ಮೇಲೆ ಡಬಲ್ ಕ್ಲಿಕ್ ಮಾಡಿ. ಫೈಲ್ ಗಳ ಒಂದು ಲಿಸ್ಟ್ ತೆರೆದುಕೊಳ್ಳುತ್ತದೆ.
07:27 'croplus' ಎಂಬ ಫೈಲ್ ಇರುವಲ್ಲಿಗೆ ಹೋಗಿ. ರೈಟ್-ಕ್ಲಿಕ್ ಮಾಡಿ ಮತ್ತು 'Properties' ಅನ್ನು ಆಯ್ಕೆಮಾಡಿ. 'croplus Properties' ವಿಂಡೋ ತೆರೆದುಕೊಳ್ಳುತ್ತದೆ.
07:36 'Change' ಬಟನ್ ಮೇಲೆ ಕ್ಲಿಕ್ ಮಾಡಿ. 'Python' ಅನ್ನು ಆಯ್ಕೆಮಾಡಿ, ಆಮೇಲೆ 'OK' ಮೇಲೆ ಕ್ಲಿಕ್ ಮಾಡಿ.
07:44 'Properties' ವಿಂಡೋದಲ್ಲಿ 'OK' ಮೇಲೆ ಕ್ಲಿಕ್ ಮಾಡಿ. 'croplus' ಫೈಲನ್ನು ಡಬಲ್-ಕ್ಲಿಕ್ ಮಾಡಿ.
07:51 'Python exe' ಫೈಲ್ ರನ್ ಆಗುತ್ತಿರುವುದನ್ನು ನೀವು ನೋಡಬಹುದು. ಸಾಫ್ಟ್ವೇರ್ ಇಂಟರ್ಫೇಸ್ ತೆರೆದುಕೊಳ್ಳುತ್ತದೆ.
07:59 ದಯವಿಟ್ಟು ಗಮನಿಸಿ- 'Windows 8/8.1' ಮೇಲೆ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡುವಾಗ, ‘settings’ ನಲ್ಲಿ 'unsigned driver installation' ಅನ್ನು ಸಕ್ರಿಯಗೊಳಿಸಿ.
08:10 ಸಿಸ್ಟಂಗೆ, ಸಾಧನವನ್ನು ನಾವು 'USB' ಪೋರ್ಟ್ ನ ಮೂಲಕ ಜೋಡಿಸಬಹುದು. ಜೋಡಿಸಿದ ನಂತರ, ಸಾಫ್ಟ್ವೇರ್ ಇಂಟರ್ಫೇಸ್ ತೆರೆದುಕೊಳ್ಳುತ್ತದೆ.
08:19 ಈಗ, ನಾನು ಸಾಧನ ಹಾಗೂ ಇಂಟರ್ಫೇಸ್ ಗಳನ್ನು ಬಳಸಿ ಒಂದು ಪ್ರಯೋಗವನ್ನು ತೋರಿಸುತ್ತೇನೆ.
08:25 ಈ ಪ್ರಯೋಗದಲ್ಲಿ, ನಾವು ಬಾಹ್ಯ ಮತ್ತು ಆಂತರಿಕ ಮೂಲಗಳ ವೋಲ್ಟೇಜ್ ಗಳನ್ನು ಅಳೆಯುತ್ತೇವೆ ಮತ್ತು ಹೋಲಿಸುತ್ತೇವೆ.
08:33 ಈ ಪ್ರಯೋಗವನ್ನು ತೋರಿಸಲು, ನಮಗೆ ವೋಲ್ಟೇಜ್ ನ ಬಾಹ್ಯ ಮೂಲದಂತೆ ಒಂದು ಬ್ಯಾಟರಿಯ ಅಗತ್ಯವಿದೆ. ಬ್ಯಾಟರಿಯ 'ವೋಲ್ಟೇಜ್' “3V” ಆಗಿದೆ.
08:44 ಈ ಪ್ರಯೋಗಕ್ಕಾಗಿ, 'ಗ್ರೌಂಡ್ (GND)' ಟರ್ಮಿನಲ್ ಹಾಗೂ 'A1' ಟರ್ಮಿನಲ್ ಗಳನ್ನು ಬ್ಯಾಟರಿಗೆ ಜೋಡಿಸಲಾಗಿದೆ.
08:50 ಇಂಟರ್ಫೇಸ್ ನಲ್ಲಿ 'A1' ಟರ್ಮಿನಲ್ ನ ವೋಲ್ಟೇಜ್ ಅನ್ನು ತೋರಿಸಲು, 'A1' ಮೇಲೆ ಕ್ಲಿಕ್ ಮಾಡಿ. ತೋರಿಸಲಾದ ವೋಲ್ಟೇಜ್ “+3.15V” ಆಗಿದೆ.
09:00 ಕನೆಕ್ಷನ್ ಅನ್ನು ರಿವರ್ಸ್ ಮಾಡಿದಾಗ, ವೋಲ್ಟೇಜ್ “-3.14V” ಇರುತ್ತದೆ.
09:06 ಬ್ಯಾಟರಿಯ ಬದಲಾಗಿ, ನಾವು 'PVS' ಅನ್ನು ವೋಲ್ಟೇಜ್ ನ ಇಂಟರ್ನಲ್ ಸೋರ್ಸ್ ಎಂದು ಬಳಸಬಹುದು. ಈ ಪ್ರಯೋಗಕ್ಕಾಗಿ, 'A1' ಅನ್ನು 'PVS' ಗೆ ಜೋಡಿಸಲಾಗಿದೆ.
09:17 ಇಂಟರ್ಫೇಸ್ ನ ಬಲಭಾಗದಲ್ಲಿ, 'Set PVS' ವ್ಯಾಲ್ಯೂ= '3V' ಮತ್ತು 'Enter' ಅನ್ನು ಒತ್ತಿ. ಪ್ರದರ್ಶಿಸಲಾದ 'PVS' ನ ವೋಲ್ಟೇಜ್ '3.001V'.
09:31 ಮೇಲ್ಗಡೆ ಎಡಮೂಲೆಯಲ್ಲಿ, 'A1' ಮೇಲೆ ಕ್ಲಿಕ್ ಮಾಡಿ. 'A1' ದ ತೋರಿಸಲಾದ ವೋಲ್ಟೇಜ್ “3.008V” ಆಗಿದೆ.
09:40 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು:
  • 'ExpEYES Junior' ಎಂಬ ಸಾಧನದ ಬಗ್ಗೆ
  • ಇದರ ವೈಶಿಷ್ಟ್ಯಗಳು
  • ಈ ಸಾಧನವನ್ನು ಹೇಗೆ ಖರೀದಿಸುವುದು
09:49 * ಲಿನಕ್ಸ್, ನೆಟ್ಬುಕ್, ಆಂಡ್ರೈಡ್ ಹಾಗೂ ವಿಂಡೋಸ್ ಗಳ ಮೇಲೆ ಸಾಫ್ಟ್ವೇರ್ ಅನ್ನುಹೇಗೆ ಇನ್ಸ್ಟಾಲ್ ಮಾಡುವುದು
  • ಈ ಸಾಧನವನ್ನು ಸಿಸ್ಟಂಗೆ ಜೋಡಿಸುವುದು ಇವುಗಳ ಬಗ್ಗೆ ಮತ್ತು
  • ಒಂದು ಸರಳವಾದ ಪ್ರಯೋಗವನ್ನು ಮಾಡಿತೋರಿಸಲು ಕಲಿತಿದ್ದೇವೆ.
10:03 ಒಂದು ಅಸೈನ್ಮೆಂಟ್ -

ನಿಮ್ಮ ಆಪರೇಟಿಂಗ್ ಸಿಸ್ಟಂಗೆ ಅನುಗುಣವಾಗಿ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡಿ.

10:09 'ExpEYES Junior' ಅನ್ನು 'Inter-University Accelerator Centre, New Delhi' ಯ 'PHOENIX' ಪ್ರೊಜೆಕ್ಟ್ ನ ಮೂಲಕ ರೂಪಿಸಿ, ಅಭಿವೃದ್ಧಿ ಪಡಿಸಲಾಗಿದೆ.
10:17 ಈ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
10:25 ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ.
10:32 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.

IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.

10:43 ವಂದನೆಗಳು.

Contributors and Content Editors

Sandhya.np14