Difference between revisions of "Digital-Divide/C2/First-aid-measures-for-ChickenPox/Kannada"

From Script | Spoken-Tutorial
Jump to: navigation, search
 
Line 216: Line 216:
 
|-
 
|-
 
| 06:30
 
| 06:30
|'''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .  
+
|'''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.  
 
|-
 
|-
 
| 06:33
 
| 06:33
 
|ಧನ್ಯವಾದಗಳು.
 
|ಧನ್ಯವಾದಗಳು.
 
|}
 
|}

Latest revision as of 18:01, 18 September 2017

Time Narration
00:06 ಅಶೋಕನು ತನ್ನ ಹೊಲದಿಂದ ಬರುತ್ತಾನೆ ಮತ್ತು ಜ್ವರ ಹಾಗೂ ಶರೀರದಲ್ಲಿಯ ನೋವಿನ ಬಗ್ಗೆ ದೂರುತ್ತಾನೆ.
00:12 ಅವನ ಹೆಂಡತಿ ಅನಿತಾ, ಅವನತ್ತ ನೋಡುತ್ತಾಳೆ ಮತ್ತು ಅವನ ಕೈ, ಕಾಲುಗಳ ಮೇಲಿನ ಗುಳ್ಳೆಗಳನ್ನು ಗಮನಿಸುತ್ತಾಳೆ.
00:18 ಅವಳು ಗಾಬರಿಯಾಗಿದ್ದಾಳೆ ಮತ್ತು ದೇವತೆಯು ತನ್ನ ಗಂಡನ ಮೇಲೆ ಕೋಪಿಸಿಕೊಂಡಿದ್ದಾಳೆ ಎಂದು ಹೇಳುತ್ತಾಳೆ.
00:24 ತನ್ನ ಮಕ್ಕಳಿಗೆ ಬೇಗನೆ ಮನೆಯಿಂದ ಹೊರಗೆ ಹೋಗಲು ಹೇಳುತ್ತಾಳೆ.
00:29 ತಾಯಿ ಹಾಗೂ ಮಕ್ಕಳು ಮನೆಯಿಂದ ಹೊರಗೆ ಬಂದು ಹೊರಗಿನಿಂದ ಬಾಗಿಲಿಗೆ ಬೀಗ ಹಾಕುತ್ತಾರೆ.
00:35 ಅಷ್ಟರಲ್ಲಿ ಅದೇ ಹಾದಿಯಲ್ಲಿ ಹೋಗುತ್ತಿದ್ದ ಹಳ್ಳಿಯ ಆಸ್ಪತ್ರೆಯ ವೈದ್ಯರು ಅನಿತಾಳನ್ನು ನೋಡಿ ಮಾತನಾಡಿಸುತ್ತಾರೆ.
00:43 ಅನಿತಾ ಮತ್ತು ಅವಳ ಮಕ್ಕಳ ಆತಂಕಗೊಡ ಮುಖಗಳನ್ನು ನೋಡಿ ಅದರ ಕಾರಣವನ್ನು ಕೇಳುತ್ತಾರೆ.
00:51 ಅನಿತಾ, ತನ್ನ ಗಂಡನ ಮೇಲೆ ದೇವತೆಗೆ ಕೋಪ ಬಂದಿರುವ ಬಗ್ಗೆ ವೈದ್ಯರಿಗೆ ಹೇಳುತ್ತಾಳೆ.
00:57 ವೈದ್ಯೆಯು ತನಗೆ ಅನಿತಾಳ ಗಂಡನನ್ನು ನೋಡಬೇಕಾಗಿದೆ ಎಂದು ಹೇಳುತ್ತಾಳೆ.
01:02 ಆದರೆ ಅನಿತಾ ಇದಕ್ಕೆ ಸಮ್ಮತಿಸುವುದಿಲ್ಲ. ವೈದ್ಯೆಯು ತನ್ನ ಗಂಡನನ್ನು ನೋಡುವುದು ಬೇಡ ಎಂದು ಹೇಳುತ್ತಾಳೆ.
01:07 ವೈದ್ಯೆಯು ಅನಿತಾಳ ಮಾತನ್ನು ಅಲಕ್ಷಿಸಿ ಮನೆಯ ಒಳಗೆ ಹೋಗುತ್ತಾಳೆ. ಅನಿತಾ ಅರೆಮನಸ್ಸಿನಿಂದ ಅನುಸರಿಸುತ್ತಾಳೆ.
01:15 ವೈದ್ಯೆಯು ಅಶೋಕನನ್ನು ಪರೀಕ್ಷಿಸಿ ಅವನಿಗೆ 'ಚಿಕನ್ ಪಾಕ್ಸ್' (ಸಿಡುಬು ರೋಗ) ಬಂದಿದೆ ಎಂದು ಹೇಳುತ್ತಾಳೆ.
01:21 ಆದರೆ ಅಶೋಕ ಮತ್ತು ಅನಿತಾಗೆ 'ಚಿಕನ್ ಪಾಕ್ಸ್' ಬಗ್ಗೆ ಏನೂ ಗೊತ್ತಿಲ್ಲ.
01:26 ಅವರು ಪ್ರಶ್ನಾರ್ಥಕವಾಗಿ ವೈದ್ಯೆಯನ್ನು ನೋಡುತ್ತಾರೆ.
01:29 Bridging the Digital Divide ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
01:34 ಇಲ್ಲಿ ನಾವು: 'ಚಿಕನ್ ಪಾಕ್ಸ್', ಈ ರೋಗದ ಲಕ್ಷಣಗಳು, ಕಾರಣಗಳು, ಈ ರೋಗ ಬಂದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಇವುಗಳ ಬಗ್ಗೆ ಚರ್ಚೆ ಮಾಡುವೆವು.
01:42 ಮೊದಲು ನಾವು 'ಚಿಕನ್ ಪಾಕ್ಸ್' ಎಂದರೇನು ಎಂಬುದನ್ನು ನೋಡೋಣ.
01:46 'ಚಿಕನ್ ಪಾಕ್ಸ್', ಒಂದು ವೈರಲ್-ಇನ್ಫೆಕ್ಶನ್ (ಅಂಟು ಜಾಡ್ಯ) ಆಗಿದೆ. ಇದರಲ್ಲಿ, ಶರೀರದ ಮೇಲೆ ತುರಿಕೆಯ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.
01:53 'ಚಿಕನ್-ಪಾಕ್ಸ್ ವ್ಯಾಕ್ಸೀನ್' (ಸಿಡುಬಿನ ಚುಚ್ಚುಮದ್ದು) ಈ ರೋಗವನ್ನು ತಡೆಗಟ್ಟಲು ತುಂಬಾ ಸಹಾಯಮಾಡುತ್ತದೆ.
01:58 ಚುಚ್ಚುಮದ್ದು ಹಾಕಿಸಿಕೊಂಡರೂ ಸಹ ಕೆಲವರಿಗೆ 'ಚಿಕನ್ ಪಾಕ್ಸ್' ಬರಬಹುದು. ಆದರೆ ಅವರ ಸಂಖ್ಯೆ ಕಡಿಮೆ ಮತ್ತು
02:03 ಅವರಲ್ಲಿ ರೋಗವು ಹೆಚ್ಚು ತೀವ್ರವಾಗಿರುವುದಿಲ್ಲ.
02:06 ಸಾಮಾನ್ಯವಾಗಿ, 'ಚಿಕನ್ ಪಾಕ್ಸ್' ಸೌಮ್ಯವಾಗಿದ್ದು ಜೀವಕ್ಕೆ ಅಪಾಯವಿರುವುದಿಲ್ಲ.
02:10 ಆದರೆ, ಕೆಲವುಸಲ ಇದು ಗಂಭೀರವಾಗಿದ್ದು ರೋಗಿಯನ್ನು ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ, ರೋಗಿಯು ಸಾಯಲೂಬಹುದು.
02:18 'ಚಿಕನ್ ಪಾಕ್ಸ್':
02:20 * ಗರ್ಭಿಣಿ ಸ್ತ್ರೀಯರು
02:22 * ನವಜಾತ ಶಿಶುಗಳು
02:25 * ಹದಿಹರೆಯದವರು ಹಾಗೂ ವಯಸ್ಕರು ಮತ್ತು
02:28 * ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿದವರಿಗೆ ತಗುಲುವ ಸಾಧ್ಯತೆಗಳಿವೆ.
02:32 ನಿಮಗೆ ಒಂದು ಸಲ 'ಚಿಕನ್ ಪಾಕ್ಸ್' ಬಂದು ಹೋಗಿದ್ದರೆ, ಸಾಮಾನ್ಯವಾಗಿ ವೈರಸ್ ಮತ್ತೊಮ್ಮೆ ಕಾಣಿಸಿಕೊಳ್ಳುವುದಿಲ್ಲ.
02:38 ಎರಡನೆಯ ಸಲ 'ಚಿಕನ್ ಪಾಕ್ಸ್' ಬಂದರೆ ಅದನ್ನು 'ಶಿಂಗಲ್ಸ್' (shingles) ಎನ್ನುತ್ತಾರೆ.
02:45 'ಚಿಕನ್ ಪಾಕ್ಸ್'ನ ಕೆಲವು ರೋಗಲಕ್ಷಣಗಳನ್ನು ಈಗ ನಾವು ನೋಡೋಣ:
02:50 * ಎರಡು ದಿನಗಳಿಗಿಂತ ಹೆಚ್ಚು ಇರುವ ಜ್ವರ
02:54 * ಕೆಂಪಾದ, ಬೆಚ್ಚಗಿನ ಮತ್ತು ನೋಯುತ್ತಿರುವ ಚರ್ಮ
02:58 * ಮನೆಯಲ್ಲಿಯ ಚಿಕಿತ್ಸೆಯಿಂದ ಉಪಶಮನ ಆಗಲಾರದ ಅತಿಯಾದ ತುರಿಕೆ
03:03 * ಎರಡು ವಾರಗಳಿಗಿಂತ ಹೆಚ್ಚು ಅವಧಿಯಲ್ಲಿ ಇರುವ ದದ್ದುಗಳು.
03:08 'ಚಿಕನ್ ಪಾಕ್ಸ್'ನ ಅವಧಿ ಮತ್ತು ಸಾಂಕ್ರಾಮಿಕತೆಯನ್ನು ಈಗ ನಾವು ನೋಡೋಣ.
03:13 'ಚಿಕನ್ ಪಾಕ್ಸ್'ನ ಗುಳ್ಳೆಗಳು, 3 ರಿಂದ 5 ದಿನಗಳಲ್ಲಿ ರೂಪುಗೊಳ್ಳುತ್ತವೆ ಮತ್ತು 7 ರಿಂದ 10 ದಿನಗಳಲ್ಲಿ ಗಡುಸಾಗುತ್ತವೆ.
03:22 ಕಾಣಿಸಿಕೊಂಡ 1 ರಿಂದ 2 ದಿನಗಳಲ್ಲಿ ಇದು ಸೋಂಕುರೋಗವಾಗುತ್ತದೆ.
03:27 ಎಲ್ಲ ಗುಳ್ಳೆಗಳು ಗಡುಸಾಗುವವರೆಗೆ (ಒಣಗುವವರೆಗೆ) ಇದು ಸೋಂಕುರೋಗವಾಗಿಯೇ ಇರುತ್ತದೆ.
03:33 ಇದು ತೀವ್ರವಾದ ಸೋಂಕುರೋಗವಾಗಿದ್ದು, ಒಬ್ಬರಿಂದ ಇನ್ನೊಬ್ಬರಿಗೆ ಬಹಳ ಸುಲಭವಾಗಿ ಹರಡಬಹುದು.
03:39 ಈಗ ನಾವು 'ಚಿಕನ್ ಪಾಕ್ಸ್'ನ ಕಾರಣಗಳನ್ನು ನೋಡೋಣ.
03:47 ನೀವು 'ಚಿಕನ್ ಪಾಕ್ಸ್'ನ ಗುಳ್ಳೆಯ ದ್ರವವನ್ನು ಮುಟ್ಟುವುದರಿಂದ ಅಥವಾ
03:52 ರೋಗಿಯು ನಿಮ್ಮ ಸಮೀಪದಲ್ಲಿ ಕೆಮ್ಮಿದಾಗ ಅಥವಾ ಸೀನಿದಾಗ ನಿಮಗೆ 'ಚಿಕನ್ ಪಾಕ್ಸ್' ಬರಬಹುದು.
04:00 ನಿಮಗೆ ಹಿಂದೆ ಯಾವಾಗಲೂ 'ಚಿಕನ್ ಪಾಕ್ಸ್' ಬಂದಿರದಿದ್ದರೆ ಮತ್ತು
04:03 'ಚಿಕನ್ ಪಾಕ್ಸ್' ಲಸಿಕೆಯನ್ನು ಸಹ ತೆಗೆದುಕೊಂಡಿರದಿದ್ದರೆ ಅಪಾಯವು ಹೆಚ್ಚು.
04:08 ನಮಗೆ 'ಚಿಕನ್ ಪಾಕ್ಸ್' ಬಂದಾಗ ನಾವು ಏನು ಮಾಡಬೇಕು ಎಂಬುದನ್ನು ಈಗ ನೋಡೋಣ -
04:14 * ಅದು 'ಚಿಕನ್ ಪಾಕ್ಸ್' ಆಗಿದೆ ಮತ್ತು ಸೊಳ್ಳೆ/ಕೀಟದ ಕಡಿತವಲ್ಲ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.
04:20 * ಮಿತ ಆಹಾರವನ್ನು ಸೇವಿಸಿ, ಮನೆಯಲ್ಲಿ ತಯಾರಿಸಿದ ಆಹಾರವು ಉತ್ತಮ.
04:26 * ಮೊದಲ ಕೆಲವು ದಿನ, ತಣ್ಣಗಿನ ಅಥವಾ ಬೆಚ್ಚಗಿನ ನೀರಿನಲ್ಲಿ ಪ್ರತಿ 3-4 ಗಂಟೆಗಳಿಗೊಮ್ಮೆ ಸ್ನಾನ ಮಾಡಿ.
04:33 * ಸ್ನಾನದ ನೀರಿಗೆ ಬೇವಿನ ಎಲೆಗಳನ್ನು ಸೇರಿಸಿ, ಇದು ತುರಿಕೆಯನ್ನು ಕಡಿಮೆ ಮಾಡುತ್ತದೆ.
04:38 * ಸ್ನಾನವನ್ನು ಮಾಡಿ ಶರೀರವನ್ನು ಮೆತ್ತಗೆ ಒರೆಸಿ.
04:42 * ಸಾಕಷ್ಟು ನೀರು, ಎಳನೀರು, ಬಾರ್ಲಿ ಅಥವಾ ಯಾವುದೇ ತಂಪಾಗಿಸುವ ಪಾನೀಯವನ್ನು ಕುಡಿಯಿರಿ.
04:49 * ರೋಗವು ಹರಡುವುದನ್ನು ತಡೆಯಲು ರೋಗಿಯ ಬಟ್ಟೆಗಳನ್ನು ಬೇರೆಯಾಗಿ ತೊಳೆಯಿರಿ.
04:55 * ನಿಮಗೆ ಮೊದಲು 'ಚಿಕನ್ ಪಾಕ್ಸ್' ಬಂದಿರದಿದ್ದರೆ ಅಥವಾ ಲಸಿಕೆಯನ್ನು ಪಡೆದಿರದಿದ್ದರೆ, ನೀವು ಲಸಿಕೆಯನ್ನು ತೆಗೆದುಕೊಳ್ಳಬೇಕು.
05:02 'ಚಿಕನ್ ಪಾಕ್ಸ್' ಬಂದಾಗ ಏನು ಮಾಡಬಾರದು ಎಂಬುದನ್ನು ಈಗ ನಾವು ನೋಡೋಣ.
05:08 ತುರಿಸುವ ಕೆಂಪು ಗುಳ್ಳೆಗಳನ್ನು ಕೆರೆದುಕೊಳ್ಳುವುದನ್ನು ತಪ್ಪಿಸಿ.
05:10 ಇದು ಬ್ಯಾಕ್ಟೀರಿಯಾದ ಸೋಂಕುಗಳಿಗೆ ಮತ್ತು ಗಾಯದ ಕಲೆಗಳಿಗೆ ಕಾರಣವಾಗಬಹುದು.
05:15 ಬೇರೆಯವರ ಸಂಪರ್ಕದಿಂದ ದೂರವಿರಿ ಏಕೆಂದರೆ ರೋಗ ಅವರಿಗೂ ತಗುಲಬಹುದು.
05:22 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ನೆನಪಿಡಿ, ವೈದ್ಯಕೀಯ ನೆರವನ್ನು ಪಡೆಯುವುದು ಯಾವಾಗಲೂ ಒಳ್ಳೆಯದು.
05:28 ಧನ್ಯವಾದಗಳು.
05:32 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
05:35 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
05:39 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
05:44 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
05:49 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
05:53 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

06:01 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
06:05 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
06:12 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org\NMEICT-Intro

06:22 ಈ ವೀಡಿಯೋದಲ್ಲಿ, ಅನಿಮೇಶನ್ ಆರತಿ ಅವರದು ಹಾಗೂ ಚಿತ್ರಗಳು ಸೌರಭ್ ಗಾಡ್ಗಿಲ್ ಅವರದ್ದು.
06:30 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.
06:33 ಧನ್ಯವಾದಗಳು.

Contributors and Content Editors

Sandhya.np14