Difference between revisions of "Git/C2/Inspection-and-Comparison-of-Git/Kannada"

From Script | Spoken-Tutorial
Jump to: navigation, search
 
Line 332: Line 332:
 
|-
 
|-
 
| 12:00
 
| 12:00
| IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ…..
+
| IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.
 
ವಂದನೆಗಳು.
 
ವಂದನೆಗಳು.
 
|}
 
|}

Latest revision as of 11:39, 31 August 2017

Time
Narration
00:01 'Inspection and comparison of Git' ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:
  • 'git diff' (ಗಿಟ್ ಡಿಫ್)
  • 'git show' (ಗಿಟ್ ಶೋ)
  • 'git blame' (ಗಿಟ್ ಬ್ಲೇಮ್) ಹಾಗೂ
  • 'git help' (ಗಿಟ್ ಹೆಲ್ಪ್) ಮುಂತಾದ ಕಮಾಂಡ್ ಗಳ ಬಗ್ಗೆ ಕಲಿಯುವೆವು.
00:17 ಈ ಟ್ಯುಟೋರಿಯಲ್ ಗಾಗಿ, ನಾನು:
  • Ubuntu Linux (ಉಬಂಟು ಲಿನಕ್ಸ್) 14.04
  • Git (ಗಿಟ್) 2.3.2 ಹಾಗೂ
  • gedit Text Editor (ಜಿ-ಎಡಿಟ್ ಟೆಕ್ಸ್ಟ್-ಎಡಿಟರ್) ಇವುಗಳನ್ನು ಬಳಸುತ್ತಿದ್ದೇನೆ.
00:29 ನಿಮಗೆ ಇಷ್ಟವಾದ ಯಾವುದೇ ಎಡಿಟರ್ ಅನ್ನು ನೀವು ಬಳಸಬಹುದು.
00:33 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಟರ್ಮಿನಲ್ ನ ಮೇಲೆ ಲಿನಕ್ಸ್ ಕಮಾಂಡ್ ಗಳನ್ನು ರನ್ ಮಾಡುವುದನ್ನು ತಿಳಿದಿರಬೇಕು.
00:40 ಇಲ್ಲದಿದ್ದರೆ, ಸಂಬಂಧಿತ Linux ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ.
00:46 ನಾವು 'git diff' ಕಮಾಂಡ್ ನೊಂದಿಗೆ ಆರಂಭಿಸೋಣ.
00:50 ಈ 'ಕಮಾಂಡ್', ಫೈಲ್ ಗಳ ಈಗಿನ ಸ್ಟ್ಯಾಟಸ್ ನ ಬದಲಾವಣೆಗಳನ್ನು ತೋರಿಸುವುದು.
00:55 ಈಗ, ಇದು ಕೆಲಸಮಾಡುವ ಬಗೆಯನ್ನು ನಾನು ನಿಮಗೆ ತೋರಿಸುವೆನು. 'ಟರ್ಮಿನಲ್' ಅನ್ನು ತೆರೆಯಲು 'Ctrl+Alt+T' ಕೀಗಳನ್ನು ಒತ್ತಿ.
01:03 ಈಮೊದಲು ಕ್ರಿಯೇಟ್ ಮಾಡಿರುವ ನಮ್ಮ 'mywebpage' ಎಂಬ ‘Git ‘ರಿಪಾಸಿಟರಿ’ ಗೆ ನಾವು ಹೋಗುವೆವು.
01:09 ಹೀಗೆ ಟೈಪ್ ಮಾಡಿ: 'cd space mywebpage' ಮತ್ತು ‘Enter’ ಅನ್ನು ಒತ್ತಿ.
01:15 ಪ್ರದರ್ಶಿಸಲು, ನಾನು 'html' ಫೈಲ್ ಗಳನ್ನು ಬಳಸುವುದನ್ನು ಮುಂದುವರೆಸುವೆನು.
01:20 ನಿಮಗೆ ಇಷ್ಟವಾದ ಯಾವುದೇ ಪ್ರಕಾರದ ಫೈಲ್ ಅನ್ನು ನೀವು ಬಳಸಬಹುದು.
01:24 ಪ್ರದರ್ಶಿಸಲಿಕ್ಕಾಗಿ, ಮೊದಲು ನಾನು 'history.html' ಎಂಬ ಒಂದು html ಫೈಲ್ ಅನ್ನು ಕ್ರಿಯೇಟ್ ಮಾಡಿ ಅದನ್ನು 'ಕಮಿಟ್' ಮಾಡುವೆನು.
01:32 ಹೀಗೆ ಟೈಪ್ ಮಾಡಿ: 'gedit space history.html space ampersand' ಹಾಗೂ ‘Enter’ ಅನ್ನು ಒತ್ತಿ.
01:41 ಮೊದಲು ಸೇವ್ ಮಾಡಿದ್ದ ನನ್ನ 'Writer' ಡಾಕ್ಯೂಮೆಂಟ್ ನಿಂದ, ಸ್ವಲ್ಪ ಕೋಡ್ ಅನ್ನು ಈ ಫೈಲ್ ನಲ್ಲಿ ನಾನು ಕಾಪಿ ಮತ್ತು ಪೇಸ್ಟ್ ಮಾಡುವೆನು.
01:48 ನಾವು ಫೈಲ್ ಅನ್ನು ಸೇವ್ ಮಾಡಿ, ಕ್ಲೋಸ್ ಮಾಡೋಣ.
01:51 ನಾವು ಫೈಲ್ ಅನ್ನು ಸೇರಿಸಿದಾಗ ಅಥವಾ ತೆಗೆದುಹಾಕಿದಾಗಲೆಲ್ಲ ನಮ್ಮ ಕೆಲಸವನ್ನು 'ಕಮಿಟ್' ಮಾಡಬೇಕು ಎಂಬುದನ್ನು ನೆನಪಿಸಿಕೊಳ್ಳಿ.
01:58 ಫೈಲ್ ಅನ್ನು 'ಸ್ಟೇಜಿಂಗ್ ಏರಿಯಾ' ಗೆ ಸೇರಿಸಲು, ಹೀಗೆ ಟೈಪ್ ಮಾಡಿ: 'git space add space history.html' ಹಾಗೂ ‘Enter’ ಅನ್ನು ಒತ್ತಿ.
02:08 ನಮ್ಮ ಕೆಲಸವನ್ನು ಕಮಿಟ್ ಮಾಡಲು, ಹೀಗೆ ಟೈಪ್ ಮಾಡಿ: 'git space commit space hyphen m space' ಡಬಲ್ ಕೋಟ್ಸ್ ನಲ್ಲಿ “Added history.html” ಮತ್ತು ‘Enter’ ಅನ್ನು ಒತ್ತಿ.
02:21 'git space log' ಎಂದು ಟೈಪ್ ಮಾಡಿ, ‘Enter’ ಅನ್ನು ಒತ್ತಿ, ನಾವು 'Git log' ಅನ್ನು ನೋಡೋಣ.
02:28 ಸಧ್ಯಕ್ಕೆ, ನಮ್ಮ 'ರಿಪಾಸಿಟರಿ' ಯಲ್ಲಿ ಎರಡು 'ಕಮಿಟ್' ಗಳು ಇರುತ್ತವೆ.
02:33 'gedit space mypage.html space history.html space ampersand' ಎಂದು ಟೈಪ್ ಮಾಡಿ, 'mypage.html' ಹಾಗೂ 'history.html' ಈ ಎರಡು ಫೈಲ್ ಗಳನ್ನು ತೆರೆಯಿರಿ.
02:47 ಇಲ್ಲಿ, ' mypage.html', ಹಿಂದಿನ ಟ್ಯುಟೊರಿಯಲ್ ನಲ್ಲಿ ನಾವು ಕ್ರಿಯೇಟ್ ಮಾಡಿದ ಫೈಲ್ ಆಗಿದೆ. ಈಗ, ‘Enter’ ಅನ್ನು ಒತ್ತಿ.
02:56 ನಾವು ಈ ಫೈಲ್ ಗಳಲ್ಲಿ ಕೆಲವು ಸಾಲುಗಳನ್ನು ಸೇರಿಸೋಣ ಮತ್ತು ತೆಗೆದುಹಾಕೋಣ.
03:01 ಆಮೇಲೆ ಫೈಲ್ ಗಳನ್ನು ಸೇವ್ ಮಾಡಿ, ಕ್ಲೋಸ್ ಮಾಡೋಣ.
03:05 ಕೆಲವು ಸಂದರ್ಭಗಳಲ್ಲಿ, ನಾವು ನಮ್ಮ ಫೈಲ್ ಗಳಲ್ಲಿ ಮಾಡಿರುವ ಬದಲಾವಣೆಗಳನ್ನು ನೆನಪಿಟ್ಟುಕೊಳ್ಳದೇ ಇರಬಹುದು.
03:11 ನಾವು 'git space status' ಎಂದು ಟೈಪ್ ಮಾಡಿ ಹಾಗೂ ‘Enter’ ಅನ್ನು ಒತ್ತಿ 'ಗಿಟ್ ಸ್ಟ್ಯಾಟಸ್' ಅನ್ನು ಪರೀಕ್ಷಿಸೋಣ.
03:19 ಅದು, ಮಾರ್ಪಡಿಸಿದ ಫೈಲ್ ಗಳ ಹೆಸರುಗಳನ್ನು ತೋರಿಸುತ್ತದೆ. ಆದರೆ, ನಮಗೆ ಇನ್ನಾವುದೇ ವಿವರಗಳನ್ನು ಪಡೆಯಲು ಸಾಧ್ಯವಿಲ್ಲ.
03:26 ನಮಗೆ ಈ ಫೈಲ್ ಗಳಿಗೆ ಮಾಡಲಾದ ನಿಜವಾದ ಬದಲಾವಣೆಗಳನ್ನು ತಿಳಿದುಕೊಳ್ಳಬೇಕಾಗಿದೆ. ಇದನ್ನು ಹೇಗೆ ಮಾಡುವುದೆಂದು ನಾವು ನೋಡೋಣ.
03:35 ಹೀಗೆ ಟೈಪ್ ಮಾಡಿ: 'git space diff' ಮತ್ತು ‘Enter’ ಅನ್ನು ಒತ್ತಿ.
03:40 ಈ ಕಮಾಂಡ್, ಫೈಲ್ ಗಳ ಈಗಿನ ಸ್ಥಿತಿಯನ್ನು ಇತ್ತೀಚಿನ ಕಮಿಟ್ ನೊಂದಿಗೆ ಹೋಲಿಸುವುದು.
03:46 ಇಲ್ಲಿ, 'history.html' ಫೈಲ್ ನ ಎರಡು ಆವೃತ್ತಿಗಳನ್ನು ನೀವು ನೋಡುವಿರಿ.
03:51 'a slash history.html', ಕೊನೆಯ ಕಮಿಟ್ ನ ಆವೃತ್ತಿಯಾಗಿದೆ. ಮತ್ತು, ಇದು ಋಣಾತ್ಮಕ ಚಿಹ್ನೆಯಿಂದ (minus ಚಿಹ್ನೆ) ಸೂಚಿತವಾಗಿದೆ.
04:00 'b slash history.html', ಈಗಿನ ಆವೃತ್ತಿಯಾಗಿದೆ. ಮತ್ತು, ಇದು ಧನಾತ್ಮಕ ಚಿಹ್ನೆಯಿಂದ (plus ಚಿಹ್ನೆ) ಸೂಚಿತವಾಗಿದೆ.
04:09 ಹೀಗಾಗಿ, ಇಲ್ಲಿ, ಋಣಾತ್ಮಕ ಚಿಹ್ನೆ ಹೊಂದಿರುವ ಕೆಂಪುಬಣ್ಣದ ಸಾಲು ಹಳೆಯ ಆವೃತ್ತಿಯಾಗಿದೆ.
04:15 ಮತ್ತು, ಧನಾತ್ಮಕ ಚಿಹ್ನೆ ಹೊಂದಿರುವ ಹಸಿರುಬಣ್ಣದ ಸಾಲು ಹೊಸ ಆವೃತ್ತಿಯಾಗಿದೆ.
04:20 ಇನ್ನೂ ಹೆಚ್ಚು ನೋಡಲು 'ಡೌನ್-ಆರೋ' ಕೀಯನ್ನು ಒತ್ತಿ.
04:23 ಇವು ನಾವು ಹೊಸ ಆವೃತ್ತಿಯಲ್ಲಿ ಸೇರಿಸಿದ ಸಾಲುಗಳಾಗಿವೆ.
04:28 ಅಲ್ಲದೇ, ನೀವು 'mypage.html' ಫೈಲ್ ನ ಬದಲಾವಣೆಗಳನ್ನು ಸಹ ನೋಡಬಹುದು. 'ಡೌನ್-ಆರೋ' ಕೀಯನ್ನು ಒತ್ತಿ.
04:35 ಹೊರಬರಲು 'q' ಕೀಯನ್ನು ಒತ್ತಿ.
04:38 ಇಲ್ಲಿ, ಔಟ್ಪುಟ್ ಅನ್ನು ಬಣ್ಣಗಳಲ್ಲಿ ಪ್ರದರ್ಶಿಸಲಾಗಿದೆ.
04:42 ನಮಗೆ ಬಣ್ಣಗಳೊಂದಿಗೆ ಸಾಲುಗಳನ್ನು ನೋಡಲು ಸಾಧ್ಯವಿಲ್ಲದಿದ್ದರೆ ಹೀಗೆ ಟೈಪ್ ಮಾಡಿ: 'git space config space hyphen hyphen global space color dot ui space true' ಮತ್ತು ‘Enter’ ಅನ್ನು ಒತ್ತಿ.
04:57 ನಿಮಗೆ ಬಣ್ಣಗಳನ್ನು ನೋಡುವುದು ಬೇಡವಾಗಿದ್ದರೆ, ದಯವಿಟ್ಟು ಈ ಕಮಾಂಡ್ ನಲ್ಲಿ 'true' ದ ಬದಲಾಗಿ 'false' ಅನ್ನು ಬಳಸಿ.
05:03 'git space diff' ಎಂದು ಟೈಪ್ ಮಾಡಿ ಹಾಗೂ ‘Enter’ ಅನ್ನು ಒತ್ತಿ. ಈಗ, ಔಟ್ಪುಟ್ ಅನ್ನು ಬಣ್ಣಗಳಿಲ್ಲದೇ ಪ್ರದರ್ಶಿಸಲಾಗಿದೆ.
05:13 ಆಮೇಲೆ, ಯಾವುದೇ ಒಂದು ನಿರ್ದಿಷ್ಟ ಫೈಲ್ ನಲ್ಲಿಯ ಬದಲಾವಣೆಗಳನ್ನು ಹೇಗೆ ನೋಡುವುದೆಂದು ನಾನು ನಿಮಗೆ ತೋರಿಸುತ್ತೇನೆ.
05:18 ಹೀಗೆ ಟೈಪ್ ಮಾಡಿ: 'git space diff space history.html' ಮತ್ತು ‘Enter’ ಅನ್ನು ಒತ್ತಿ.
05:25 ಇಲ್ಲಿ, 'history.html' ಫೈಲ್ ನಲ್ಲಿ ಮಾಡಿದ ಬದಲಾವಣೆಗಳನ್ನು ಮಾತ್ರ ನಾವು ನೋಡಬಹುದು.
05:31 ನಾವು ಈಗ ನಮ್ಮ ಫೈಲ್ ಗಳನ್ನು 'ಸ್ಟೇಜಿಂಗ್ ಏರಿಯಾ' ಗೆ ಸೇರಿಸೋಣ. ಹೀಗೆ ಟೈಪ್ ಮಾಡಿ: 'git space add space history.html space mypage.html' ಮತ್ತು ‘Enter’ ಅನ್ನು ಒತ್ತಿ.
05:44 ನಾವು 'git space diff' ಎಂದು ಟೈಪ್ ಮಾಡಿ ಹಾಗೂ ‘Enter’ ಅನ್ನು ಒತ್ತಿ ಮತ್ತೊಮ್ಮೆ 'Git diff' ಅನ್ನು ಪರೀಕ್ಷಿಸೋಣ.
05:52 ಈಸಲ ನಮಗೆ ಯಾವುದೇ ಔಟ್ಪುಟ್ ಸಿಗುವುದಿಲ್ಲ. ಏಕೆಂದರೆ, ನಮ್ಮ ಫೈಲ್ ಗಳು ಸ್ಟೇಜಿಂಗ್ ಏರಿಯಾ ಗೆ ಸೇರಿಸಲ್ಪಟ್ಟಿವೆ.
05:59 ಇಂತಹ ಸಂದರ್ಭದಲ್ಲಿ, ನಾವು ಹೀಗೆ ಟೈಪ್ ಮಾಡಬಹುದು: 'git space diff space hyphen hyphen staged'. ‘Enter’ ಅನ್ನು ಒತ್ತಿ.
06:08 ಈಗ, ನಾವು 'git diff' ಕಮಾಂಡ್ ನಲ್ಲಿ ಪಡೆದಂತಹ ಔಟ್ಪುಟ್ ಅನ್ನೇ ನೋಡಬಹುದು.
06:15 ಇದೇ ಪರಿಣಾಮವನ್ನು (result) ಪಡೆಯಲು, ನಾವು 'hyphen hyphen staged' ಗೆ ಬದಲಾಗಿ 'hyphen hyphen cached' ಅನ್ನು ಸಹ ಬಳಸಬಹುದು.
06:23 ನಾವು ಈಗಿರುವ ಸ್ಥಿತಿಯನ್ನು ಹಿಂದಿನ ಯಾವುದೇ ಕಮಿಟ್ ನೊಂದಿಗೆ ಹೇಗೆ ಹೋಲಿಸಬಹುದು?
06:28 ಮೊದಲು, ನಾವು 'git space log space hyphen hyphen oneline' ಎಂದು ಟೈಪ್ ಮಾಡಿ, ‘Enter’ ಅನ್ನು ಒತ್ತಿ 'Git log' ಅನ್ನು ನೋಡುವೆವು.
06:38 ಈಗ ನನಗೆ, ನನ್ನ ಸಧ್ಯದ ಸ್ಥಿತಿಯನ್ನು 'Initial commit' ನೊಂದಿಗೆ ಹೋಲಿಸಬೇಕಾಗಿದೆ ಎಂದುಕೊಳ್ಳಿ.
06:43 ಆದ್ದರಿಂದ, 'git space diff space' ಎಂದು ಟೈಪ್ ಮಾಡಿ. ಆಮೇಲೆ, 'Initial commit' ನ 'ಕಮಿಟ್ ಹ್ಯಾಶ್' ಅನ್ನು ಕಾಪಿ ಮತ್ತು ಪೇಸ್ಟ್ ಮಾಡಿ. 'Enter' ಅನ್ನು ಒತ್ತಿ.
06:52 ಇಲ್ಲಿ, ನಾವು ವ್ಯತ್ಯಾಸವನ್ನು ನೋಡಬಹುದು.
06:55 ಈ ರೀತಿಯಾಗಿ, ನಮ್ಮ ಸಧ್ಯದ ಸ್ಥಿತಿಯನ್ನು ‘ರಿಪಾಸಿಟರಿ’ ಯಲ್ಲಿಯ ಹಿಂದಿನ ಯಾವುದೇ ಕಮಿಟ್ ನೊಂದಿಗೆ ನಾವು ಹೋಲಿಸಬಹುದು.
07:02 ಹೀಗೆ, 'git diff' ಕಮಾಂಡ್ ಅನ್ನು ಬಳಸಿ, ಮಾರ್ಪಡಿಸಲಾದ ಫೈಲ್ ಗಳಲ್ಲಿಯ ಎಲ್ಲ ಬದಲಾವಣೆಗಳನ್ನು

ನಾವು ನೋಡಬಹುದು.

07:09 ಕಮಿಟ್ ಮಾಡುವ ಮೊದಲು ನಾವು ಏನನ್ನು ಬದಲಾಯಿಸಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇದು ನಮಗೆ ಸಹಾಯಮಾಡುವುದು.
07:15 ನಾವು ಈ ಘಟ್ಟದಲ್ಲಿ ನಮ್ಮ ಕೆಲಸವನ್ನು ಫ್ರೀಜ್ ಮಾಡೋಣ.
07:19 ಕಮಿಟ್ ಮಾಡಲು, ಹೀಗೆ ಟೈಪ್ ಮಾಡಿ: 'git space commit space hyphen m space' ಡಬಲ್ ಕೋಟ್ಸ್ ನಲ್ಲಿ “Added colors” ಮತ್ತು ‘Enter’ ಅನ್ನು ಒತ್ತಿ.
07:30 ಆಮೇಲೆ ನಾವು, ಎರಡು ಕಮಿಟ್ ಗಳ ನಡುವಿನ ವ್ಯತ್ಯಾಸವನ್ನು ಹೇಗೆ ನೋಡುವುದೆಂದು ತಿಳಿಯೋಣ.
07:35 ನಾವು 'git space log space hyphen hyphen oneline' ಎಂದು ಟೈಪ್ ಮಾಡಿ, ‘Enter’ ಅನ್ನು ಒತ್ತಿ, 'Git log' ಅನ್ನು ನೋಡೋಣ.
07:44 'git space diff space' ಎಂದು ಟೈಪ್ ಮಾಡಿ. ಆಮೇಲೆ, “Initial commit” ನ 'ಕಮಿಟ್ ಹ್ಯಾಶ್' ಅನ್ನು ಕಾಪಿ ಮತ್ತು ಪೇಸ್ಟ್ ಮಾಡಿ, ಸ್ಪೇಸ್,

ಈಗ, “Added colors” ನ 'ಕಮಿಟ್ ಹ್ಯಾಶ್' ಅನ್ನು ಕಾಪಿ ಮತ್ತು ಪೇಸ್ಟ್ ಮಾಡಿ ಮತ್ತು ‘Enter’ ಅನ್ನು ಒತ್ತಿ.

07:58 ಕೊಟ್ಟಿರುವ ಎರಡು ಕಮಿಟ್ ಗಳ ನಡುವಿನ ವ್ಯತ್ಯಾಸವನ್ನು ಈಗ ನೋಡಬಹುದು.
08:03 ನಂತರ, ನಾವು ಕೊನೆಯ ರಿವಿಜನ್ ಅನ್ನು, ಅದರ ಹಿಂದಿನ ರಿವಿಜನ್ ನೊಂದಿಗೆ ಹೋಲಿಸುವೆವು.
08:08 ಹೀಗೆ ಟೈಪ್ ಮಾಡಿ: 'git space diff space HEAD space HEAD tilde ' ಮತ್ತು ‘Enter’ ಅನ್ನು ಒತ್ತಿ.
08:16 'HEAD', “Added colors” ಎಂಬ 'ಕಮಿಟ್ ಮೆಸೇಜ್' ಅನ್ನು ಹೊಂದಿರುವ ಕೊನೆಯ ರಿವಿಜನ್ ಅನ್ನು ಸೂಚಿಸುತ್ತದೆ.
08:22 'HEAD tilde' ಕೊನೆಯದರ ಹಿಂದಿನ ರಿವಿಜನ್ ಅನ್ನು ಸೂಚಿಸುತ್ತದೆ. ಇದು, “Added history.html” ಎಂಬ 'ಕಮಿಟ್ ಮೆಸೇಜ್' ಅನ್ನು ಹೊಂದಿರುತ್ತದೆ.
08:30 ಇತ್ತೀಚಿನ ರಿವಿಜನ್ ಯಾವಾಗಲೂ 'HEAD' ಆಗಿರುತ್ತದೆ. ಇದರ ಹಿಂದಿನ ರಿವಿಜನ್ ಯಾವಾಗಲೂ 'HEAD tilde' ಇರುತ್ತದೆ.
08:39 ಹೀಗೆಯೇ, ಇತ್ತೀಚಿನ ರಿವಿಜನ್ ಗಿಂತ ಹಿಂದೆ ಎರಡನೆಯ ರಿವಿಜನ್ 'HEAD tilde 2', ಹಿಂದಿನ ಮೂರನೆಯ ರಿವಿಜನ್ 'HEAD tilde 3' ಹೀಗೆ.
08:50 ಟರ್ಮಿನಲ್ ಗೆ ಹಿಂದಿರುಗಿ.
08:53 ಈಗ, ನಾವು 'git show' ಎಂಬ ಕಮಾಂಡ್ ನ ಬಗ್ಗೆ ಕಲಿಯೋಣ. ಇದು ಕಮಿಟ್ ನ ಸಂಪೂರ್ಣ ವಿವರಗಳನ್ನು ನೋಡಲು ಸಹಾಯಮಾಡುತ್ತದೆ.
09:00 ಹೀಗೆ ಟೈಪ್ ಮಾಡಿ: 'git space show' ಹಾಗೂ 'Enter' ಅನ್ನು ಒತ್ತಿ.
09:04 ಈ ಕಮಾಂಡ್, ‘ರಿಪಾಸಿಟರಿ’ ಯಲ್ಲಿಯ ಇತ್ತೀಚಿನ ಕಮಿಟ್ ನ ವಿವರಗಳನ್ನು ತೋರಿಸುವುದು.
09:10 ಕಮಿಟ್ ನ ವಿವರಗಳೊಂದಿಗೆ ಫೈಲ್ ಗಳಿಗೆ ಯಾವ ಬದಲಾವಣೆಗಳನ್ನು ಮಾಡಿದೆ ಎಂದು ಇದು ತೋರಿಸುತ್ತದೆ.
09:16 ಈ ವೈಶಿಷ್ಟ್ಯವು ನಾವು ಜತೆಗೂಡಿ ಕೆಲಸಮಾಡುವಾಗ ಉಪಯುಕ್ತವಾಗಿದೆ.
09:20 ಈಗ, ನಾವು 'git space log space hyphen hyphen oneline' ಎಂದು ಟೈಪ್ ಮಾಡಿ, ‘Enter’ ಅನ್ನು ಒತ್ತಿ, 'Git log' ಅನ್ನು ನೋಡೋಣ.
09:30 'Initial commit' ನ ವಿವರಗಳನ್ನು ನೋಡಲು, ಹೀಗೆ ಟೈಪ್ ಮಾಡಿ: 'git space show space'. ಆಮೇಲೆ, 'Initial commit' ನ 'ಕಮಿಟ್ ಹ್ಯಾಶ್' ಅನ್ನು ಕಾಪಿ ಮತ್ತು ಪೇಸ್ಟ್ ಮಾಡಿ ಹಾಗೂ ‘Enter’ ಅನ್ನು ಒತ್ತಿ.
09:42 ಇಲ್ಲಿ, 'Initial commit' ನ ವಿವರಗಳನ್ನು ನೀವು ನೋಡಬಹುದು.
09:46 ಹೀಗೆ, ನಮ್ಮ ‘ರಿಪಾಸಿಟರಿ’ ಯ ಯಾವುದೇ ಕಮಿಟ್ ನ ವಿವರಗಳನ್ನು ನಾವು ನೋಡಬಹುದು.
09:51 ನಂತರ, ಒಂದು ಫೈಲ್ ನ ಸಂಪೂರ್ಣ ಹಿಸ್ಟರಿಯನ್ನು ಹೇಗೆ ನೋಡುವುದೆಂದು ನಾವು ಕಲಿಯೋಣ.
09:56 'mypage.html' ನ ಪೂರ್ಣ ಹಿಸ್ಟರಿಯನ್ನು ನೋಡಲು ಹೀಗೆ ಟೈಪ್ ಮಾಡಿ: 'git space blame space mypage.html' ಮತ್ತು ‘Enter’ ಅನ್ನು ಒತ್ತಿ.
10:07 ಇಲ್ಲಿ, 'mypage.html' ಫೈಲ್ ನ ಪೂರ್ಣ ಹಿಸ್ಟರಿಯನ್ನು, ಅರ್ಥಾತ್, ಕ್ರಿಯೇಟ್ ಮಾಡಿದಾಗಿನಿಂದ ಈಗಿನವರೆಗೆ, ನಾವು ನೋಡಬಹುದು.
10:17 ಹೀಗೆಯೇ, ನಿಮ್ಮ ‘ರಿಪಾಸಿಟರಿ’ ಯಲ್ಲಿಯ ಯಾವುದೇ ಫೈಲ್ ನ ಪೂರ್ತಿ ವಿವರಗಳನ್ನು ನೀವು ನೋಡಬಹುದು.
10:22 ಕೊನೆಯದಾಗಿ, 'Git' ನಿಂದ ಸಹಾಯವನ್ನು (help) ಹೇಗೆ ಪಡೆಯುವುದೆಂದು ನಾವು ನೋಡುವೆವು.
10:27 ಸಹಾಯವನ್ನು ಪಡೆಯಲು ಸಿಂಟ್ಯಾಕ್ಸ್ ಹೀಗಿದೆ -

'git help <verb> ' ಅಥವಾ 'git <verb> hyphen hyphen help ' ಅಥವಾ 'man git <verb>'

10:40 ಉದಾಹರಣೆಗೆ: 'git help show'
10:44 ನಾನು ಇದನ್ನು ಮಾಡಿ ತೋರಿಸುತ್ತೇನೆ. 'ಟರ್ಮಿನಲ್' ಗೆ ಹಿಂದಿರುಗಿ ಮತ್ತು 'git space help space show' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ.
10:55 ಇಲ್ಲಿ, ನಾವು 'show' ಕಮಾಂಡ್ ನ ಕೈಪಿಡಿಯನ್ನು (manual) ನೋಡಬಹುದು.
10:59 ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
11:03 ಸಂಕ್ಷಿಪ್ತವಾಗಿ,
11:04 ಈ ಟ್ಯುಟೋರಿಯಲ್ ನಲ್ಲಿ, ನಾವು:
  • 'git diff' (ಗಿಟ್ ಡಿಫ್)
  • 'git show' (ಗಿಟ್ ಶೋ)
  • 'git blame' (ಗಿಟ್ ಬ್ಲೇಮ್) ಹಾಗೂ
  • 'git help' (ಗಿಟ್ ಹೆಲ್ಪ್) ಮುಂತಾದ ಕಮಾಂಡ್ ಗಳ ಬಗ್ಗೆ ಕಲಿತಿದ್ದೇವೆ.
11:15 ಒಂದು ಅಸೈನ್ಮೆಂಟ್-
  • 'git reflog' (ಗಿಟ್ ರಿಫ್ಲಾಗ್)
  • 'git diff HEAD tilde HEAD' (ಗಿಟ್ ಡಿಫ್ ಹೆಡ್ ಟಿಲ್ಡೆ ಹೆಡ್)
  • 'git show HEAD' (ಗಿಟ್ ಶೋ ಹೆಡ್) ಹಾಗೂ
  • 'man git diff' (ಮ್ಯಾನ್ ಗಿಟ್ ಡಿಫ್) ಈ ಕಮಾಂಡ್ ಗಳ ಬಗ್ಗೆ ತಿಳಿದುಕೊಳ್ಳಿ.
11:29 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.

ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.

11:37 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ: contact@spoken-tutorial.org

11:48 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
11:55 ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:

[1]

12:00 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.

ವಂದನೆಗಳು.

Contributors and Content Editors

Sandhya.np14