Difference between revisions of "Linux/C2/Redirection-Pipes/Kannada"
From Script | Spoken-Tutorial
PoojaMoolya (Talk | contribs) |
|||
Line 193: | Line 193: | ||
|- | |- | ||
|03:31 | |03:31 | ||
− | ||ಈಗ Enter ಒತ್ತಿ. | + | ||ಈಗ Enter ಒತ್ತಿ. ಏನಾಗಬಹುದು? ನಾವು ಮಿನುಗುತ್ತಿರುವ ಕರ್ಸರ್ ನೋಡುತ್ತಿದ್ದೇವೆ. ಇದರ ಅರ್ಥ ನಾವು ಕೀಬೋರ್ಡ್ ಮೂಲಕ ಬರೆಯಬೇಕು ಎಂದು. |
− | + | ||
− | + | ||
− | + | ||
− | + | ||
|- | |- | ||
Line 233: | Line 229: | ||
|- | |- | ||
|04:12 | |04:12 | ||
− | ||ಈಗ ನಾವು ಹೀಗೆ ಬರೆದಲ್ಲಿ | + | ||ಈಗ ನಾವು ಹೀಗೆ ಬರೆದಲ್ಲಿ " wc space 'left-angled bracket" space test1 dot txt” |
− | + | ||
− | " wc space 'left-angled bracket" space test1 dot txt” | + | |
|- | |- | ||
Line 291: | Line 285: | ||
|- | |- | ||
|05:20 | |05:20 | ||
− | ||n ಎಂಬುದು ಫೈಲ್ ಡಿಸ್ಕ್ರಿಪ್ಟರನ್ನು ಸೂಚಿಸುತ್ತದೆ ಎಂದು ಊಹಿಸಿಕೊಳ್ಳಿ. | + | ||n ಎಂಬುದು ಫೈಲ್ ಡಿಸ್ಕ್ರಿಪ್ಟರನ್ನು ಸೂಚಿಸುತ್ತದೆ ಎಂದು ಊಹಿಸಿಕೊಳ್ಳಿ.ಫೈಲ್ ಡಿಸ್ಕ್ರಿಪ್ಟರ್ n ನಿಂದ ಫೈಲ್ ಗೆ ಔಟ್ ಪುಟ್ ರಿಡೈರೆಕ್ಟ್ ಮಾಡುತ್ತದೆ. |
− | + | ||
− | + | ||
− | + | ||
− | + | ||
|- | |- | ||
Line 375: | Line 365: | ||
|- | |- | ||
|06:57 | |06:57 | ||
− | ||ನಾವು ಇದನ್ನು ಈ ರೀತಿ ಬರೆಯುತ್ತೇವೆ ಅಂದುಕೊಳ್ಳಿ, | + | ||ನಾವು ಇದನ್ನು ಈ ರೀತಿ ಬರೆಯುತ್ತೇವೆ ಅಂದುಕೊಳ್ಳಿ, "wc space test1 dot txt 'right-angled bracket' wc_results dot txt" . |
− | + | ||
− | + | ||
− | + | ||
− | + | ||
Line 400: | Line 386: | ||
|- | |- | ||
|07:30 | |07:30 | ||
− | ||ನಾವೀಗ ಪುನಃ test2 ಫೈಲ್ ನ ಜೊತೆಗೆ ಕಮಾಂಡ್ ಅನ್ನು ಹೊರಡಿಸಬೇಕಾದರೆ ನಾವು ಹೀಗೆ ಟೈಪ್ ಮಾಡೋಣ, | + | ||ನಾವೀಗ ಪುನಃ test2 ಫೈಲ್ ನ ಜೊತೆಗೆ ಕಮಾಂಡ್ ಅನ್ನು ಹೊರಡಿಸಬೇಕಾದರೆ ನಾವು ಹೀಗೆ ಟೈಪ್ ಮಾಡೋಣ, "wc space test2 dot txt 'right-angled bracket' wc_results dot txt" |
− | + | ||
− | + | ||
− | + | ||
− | + | ||
|- | |- | ||
Line 436: | Line 418: | ||
|- | |- | ||
|08:38 | |08:38 | ||
− | ||ನಮಗೆ ತಿಳಿದಿರುವ ಹಾಗೆ aaa ಹೆಸರಿನ ಯಾವುದೇ ಫೈಲುಗಳು ಅಸ್ತಿತ್ವದಲ್ಲಿ ಇಲ್ಲ. ಈಗ ಈ ಕೆಳಗಿರುವಂತೆ ಬರೆಯಿರಿ. | + | ||ನಮಗೆ ತಿಳಿದಿರುವ ಹಾಗೆ aaa ಹೆಸರಿನ ಯಾವುದೇ ಫೈಲುಗಳು ಅಸ್ತಿತ್ವದಲ್ಲಿ ಇಲ್ಲ. ಈಗ ಈ ಕೆಳಗಿರುವಂತೆ ಬರೆಯಿರಿ."wc space aaa" |
− | + | ||
− | + | ||
− | + | ||
− | + | ||
|- | |- | ||
Line 452: | Line 430: | ||
|- | |- | ||
|08:55 | |08:55 | ||
− | ||ಇದಕ್ಕಾಗಿ ಕಮಾಂಡ್ ಅನ್ನು ಕೊಡೋಣ. | + | ||ಇದಕ್ಕಾಗಿ ಕಮಾಂಡ್ ಅನ್ನು ಕೊಡೋಣ."wc space aaa space 2 'right-anged bracket' errorlog dot txt" |
− | + | ||
− | + | ||
− | + | ||
− | + | ||
|- | |- | ||
Line 464: | Line 438: | ||
|- | |- | ||
|09:12 | |09:12 | ||
− | ||ಇದನ್ನು ನಾವು ಈ ಕಮಾಂಡ್ ನ ಮೂಲಕ ನೋಡಬಹುದಾಗಿದೆ. | + | ||ಇದನ್ನು ನಾವು ಈ ಕಮಾಂಡ್ ನ ಮೂಲಕ ನೋಡಬಹುದಾಗಿದೆ."cat space errorlog dot txt" |
− | + | ||
− | + | ||
− | + | ||
− | + | ||
|- | |- |
Revision as of 15:14, 20 March 2017
Time | Narration |
00:00 | Redirection ಮತ್ತು Pipes ಗಳ ಬಗೆಗಿನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಇಲ್ಲಿ ನಾನು ಉಬುಂಟು 10.04 ಅನ್ನು ಬಳಸುತ್ತಿದ್ದೇನೆ. |
00:09 | ನೀವು ಈಗಾಗಲೇ ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ನ ಬಗ್ಗೆ ಹಾಗೂ ಕಮಾಂಡ್ ಗಳ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿರುವಿರಿ ಎಂದು ಭಾವಿಸುತ್ತೇನೆ. |
00:16 | ನೀವು ಆಸಕ್ತರಿದ್ದಲ್ಲಿ, ಇದು ಈ ಕೆಳಗಿನ ವೆಬ್ಸೈಟ್ ನಲ್ಲಿ ಸಿಗುವ ಇನ್ನೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಲಭ್ಯವಿದೆ. |
00:22 | ಲಿನೆಕ್ಸ್ ಎಂಬುದು ಕೇಸ್ ಸೆನ್ಸಿಟಿವ್ ಎಂಬುದನ್ನು ಕೂಡಾ ಗಮನಿಸಿ. |
00:25 | ಈ ಟ್ಯುಟೋರಿಯಲ್ ನಲ್ಲಿ ಎಲ್ಲಾ ಕಮಾಂಡ್ಸ್ ಗಳನ್ನೂ ಲೋವರ್ ಕೇಸ್ನಲ್ಲಿ ಬಳಸಲಾಗಿದೆ. ಇಲ್ಲವಾದಲ್ಲಿ ತಿಳಿಸಲಾಗುತ್ತದೆ. |
00:32 | ನಾವು ಲಿನಕ್ಸ್ ನಲ್ಲಿ ಹೆಚ್ಚಿನ ಕೆಲಸಗಳನ್ನು ಟರ್ಮಿನಲ್ ಮೂಲಕ ಮಾಡುತ್ತೇವೆ. |
00:35 | ನಾವು ಕಮಾಂಡ್ ಗಳನ್ನು ಕಾರ್ಯಗತಗೊಳಿಸಲು ಸಾಮಾನ್ಯವಾಗಿ ಕೀಬೋರ್ಡ್ ಅನ್ನು ಬಳಸುತ್ತೇವೆ. |
00:39 | ಈಗ ನಮಗೆ Date ಮತ್ತು Time ನ್ನು ತಿಳಿಯಬೇಕಾಗಿದೆ ಎಂದು ಅಂದುಕೊಳ್ಳಿ, |
00:41 | ಇದಕ್ಕಾಗಿ ನಾವು ಕೀಬೋರ್ಡ್ ನಲ್ಲಿ "date" ಎಂದು ಟೈಪ್ ಮಾಡಿ ಎಂಟರ್ ಒತ್ತುತ್ತೇವೆ. |
00:46 | ಹೀಗೆ ಸಾಮಾನ್ಯವಾಗಿ ನಾವು ಕೀಬೋರ್ಡ್ ಮೂಲಕ ಇನ್ ಪುಟ್ ಕೊಡುತ್ತೇವೆ. |
00:48 | ಹಾಗೆಯೇ ನಮ್ಮ ಕಮಾಂಡ್ ನ ಔಟ್ ಪುಟ್ ಕೂಡಾ ಟರ್ಮಿನಲ್ ವಿಂಡೋದಲ್ಲಿ ಪ್ರದರ್ಶಿತವಾಗುವುದನ್ನು ಕಾಣಬಹುದು. |
00:56 | ನಾವು ಕೆಲವು ಕಮಾಂಡ್ ಗಳನ್ನು ಕಾರ್ಯಗತಗೊಳಿಸುವ ಸಂದರ್ಭದಲ್ಲಿ ಕೆಲವೊಂದು ಎರರ್ ಗಳು ಕೂಡಾ ಕಂಡು ಬರುತ್ತದೆ. |
00:59 | ಉದಾಹರಣೆಗೆ ನಾವು "cat space aaa" ಟೈಪ್ ಮಾಡಿ, Enter ಒತ್ತೋಣ. |
01:05 | ಈಗ aaa ಹೆಸರಿನ ಯಾವುದೇ ಫೈಲ್ ಗಳು ಅಸ್ತಿತ್ವದಲ್ಲಿಲ್ಲ. |
01:08 | ಹಾಗಾಗಿ, ಅದನ್ನು ಸೂಚಿಸಿ ಒಂದು ಎರರ್ ಕಾಣಿಸುತ್ತದೆ. |
01:10 | ಈಗ ಈ ಎರರ್ ಕೂಡಾ ಟರ್ಮಿನಲ್ ವಿಂಡೋದಲ್ಲಿ ಕಾಣಿಸುತ್ತದೆ. ಆದ್ದರಿಂದ ನಾವು ಎರರ್ ವರದಿಯನ್ನೂ ಕೂಡಾ ಟರ್ಮಿನಲ್ ನಲ್ಲಿ ನೋಡಬಹುದು. |
01:20 | ಈಗ ಇನ್ ಪುಟ್ಟಿಂಗ್, ಔಟ್ ಪುಟ್ಟಿಂಗ್ ಮತ್ತು ಎರರ್ ವರದಿ, ಇವು ಕಮಾಂಡ್ ಗಳಿಗೆ ಸಂಬಂಧಿಸಿದ ಮೂರು ವಿಶೇಷ ಕ್ರಿಯೆಗಳು. |
01:24 | ರಿಡೈರೆಕ್ಷನ್ ನ ಬಗ್ಗೆ ಕಲಿಯುವ ಮೊದಲು ನಾವು ಎರಡು ಪ್ರಮುಖ ಕಾನ್ಸೆಪ್ಟ್ ಗಳ ಬಗ್ಗೆ ತಿಳಿದಿರಬೇಕು. ಅದೇನೆಂದರೆ, ಸ್ಟ್ರೀಮ್ಸ್ ಮತ್ತು ಫೈಲ್ ಡಿಸ್ಕ್ರಿಪ್ಟರ್ ಗಳು. |
01:31 | ಲಿನಕ್ಸ್ ಶೆಲ್, ಬ್ಯಾಷ್ ನ ಹಾಗೆ, ಇನ್ ಪುಟ್ ಪಡೆಯುತ್ತದೆ ಮತ್ತು ಅಕ್ಷರಗಳನ್ನು ಧಾರಾರೂಪದಲ್ಲಿ ಔಟ್ ಪುಟ್ ಕಳುಹಿಸುತ್ತದೆ. |
01:37 | ಹಿಂದೆ ಮುಂದೆ ಇರುವ ಪ್ರತಿಯೊಂದು ಅಕ್ಷರವೂ ಪರಸ್ಪರ ಅವಲಂಬಿತವಾಗಿರದೇ ಸ್ವತಂತ್ರವಾಗಿರುತ್ತವೆ. |
01:41 | ಸ್ಟ್ರೀಮ್ ಗಳು ಫೈಲ್ IO ಟೆಕ್ನಿಕ್ ಅನ್ನು ಬಳಸಿಯೇ ಸಂಕಲಿತಗೊಳ್ಳುತ್ತವೆ. |
01:44 | ಇಲ್ಲಿ ನಿಜವಾದ ಅಕ್ಷರಗಳ ಸ್ಟ್ರೀಮ್ಸ್ ಫೈಲ್ ನಿಂದ, ಕೀಬೋರ್ಡ್ ಅಥವಾ ವಿಂಡೋ ಮುಂತಾದವುಗಳಿಂದ ಕೂಡಾ ಬರಬಹುದು ಹಾಗೂ ಹೋಗಬಹುದು. |
01:51 | ಲಿನಕ್ಸ್ ನಲ್ಲಿ, ಒಂದು ಪ್ರೋಸೆಸ್ ನ ಪ್ರತಿಯೊಂದು ತೆರೆದ ಫೈಲ್ ಒಂದು ಪೂರ್ಣಾಂಕ ಸಂಖ್ಯೆಯೊಂದಿಗೆ ಸಂಬಂಧ ಹೊಂದಿರುತ್ತದೆ. |
01:57 | ಈ ಸಂಖ್ಯಾ ಮೌಲ್ಯಗಳನ್ನು ಫೈಲ್ ಡಿಸ್ಕ್ರಿಪ್ಟರ್ ಗಳು ಎಂದು ಕರೆಯಲಾಗುತ್ತದೆ. |
02:05 | ಲಿನಕ್ಸ್ ಶೆಲ್ ಗಳು ಮೂರು ಮಾದರಿಯ I/O ಸ್ಟ್ರೀಮ್ ಗಳನ್ನು ಬಳಸುತ್ತವೆ. |
02:08 | ಇದರಲ್ಲಿ ಪ್ರತಿಯೊಂದೂ ಕೂಡಾ ಪ್ರಸಿದ್ಧ ಫೈಲ್ ಡಿಸ್ಕ್ರಿಪ್ಟರ್ರ್ ಜೊತೆ ಸೇರಿರುತ್ತದೆ. |
02:12 | stdin ಒಂದು ಗುಣಮಟ್ಟದ ಇನ್ ಪುಟ್ ಸ್ಟ್ರೀಮ್ ಆಗಿದೆ. |
02:15 | ಇದು ಕಮಾಂಡ್ ಗಳಿಗೆ ಇನ್ ಪುಟ್ ಒದಗಿಸುತ್ತವೆ. |
02:17 | ಇಲ್ಲಿ ಫೈಲ್ ಡಿಸ್ಕ್ರಿಪ್ಟರ್ 0(ಸೊನ್ನೆ) ಆಗಿರುತ್ತದೆ. |
02:19 | Stdout ಒಂದು ಒಳ್ಳೆಯ ಗುಣಮಟ್ಟದ ಔಟ್ ಪುಟ್ ಸ್ಟ್ರೀಮ್ ಆಗಿರುತ್ತದೆ. |
02:22 | ಇದು ಕಮಾಂಡ್ಸ್ ಗಳಿಂದ ಔಟ್ ಪುಟ್ ಅನ್ನು ಪ್ರದರ್ಶಿಸುತ್ತದೆ.ಇದರ ಫೈಲ್ ಡಿಸ್ಕ್ರಿಪ್ಟರ್ 1 ಆಗಿರುತ್ತದೆ. |
02:26 | stderr ಎರರ್ ಸ್ಟ್ರೀಮ್ ಆಗಿದೆ. ಇದು ಕಮಾಂಡ್ ಗಳಿಂದ ಎರರ್ ಔಟ್ ಪುಟ್ ಅನ್ನು ಪ್ರದರ್ಶಿಸುತ್ತದೆ. ಇದರ ಫೈಲ್ ಡಿಸ್ಕ್ರಿಪ್ಟರ್ 2 ಆಗಿರುತ್ತದೆ. |
02:36 | ಇನ್ ಪುಟ್ ಸ್ಟ್ರೀಮ್, ಪ್ರೋಗ್ರಾಂಗಳಿಗೆ ಇನ್ ಪುಟ್ ಒದಗಿಸುತ್ತದೆ |
02:40 | ಪೂರ್ವನಿಯೋಜಿತವಾಗಿ ಇದು ಟರ್ಮಿನಲ್ ಕೀಸ್ಟ್ರೋಕ್ ಗಳಿಂದ ತೆಗೆದುಕೊಳ್ಳುತ್ತದೆ. |
02:44 | ಔಟ್ ಪುಟ್ ಸ್ಟ್ರೀಮ್ಸ್, ಪೂರ್ವನಿಯೋಜಿತವಾಗಿ ಪಠ್ಯ ಅಕ್ಷರಗಳನ್ನು ಟರ್ಮಿನಲ್ ನಲ್ಲಿ ಮುದ್ರಿಸುತ್ತದೆ. |
02:47 | ಟರ್ಮಿನಲ್, ಮೂಲತಃ ಒಂದು ASCII ಟೈಪ್ ರೈಟರ್ ಅಥವಾ ಡಿಸ್ ಪ್ಲೇ ಟರ್ಮಿನಲ್ ಆಗಿತ್ತು |
02:52 | ಆದರೆ ಈಗ ಅದು ಗ್ರಾಫಿಕಲ್ ಡೆಸ್ಕ್ ಟಾಪ್ ಮೇಲೆ ಟೆಕ್ಸ್ಟ್ ವಿಂಡೋ ಆಗಿರುತ್ತದೆ. |
02:56 | ನಾವು 3 ಸ್ಟ್ರೀಮ್ಸ್ ಗಳು ಪೂರ್ವನಿಯೋಜಿತವಾಗಿ ಕೆಲವು ಫೈಲ್ಸ್ ಗಳಿಗೆ ಸಂಪರ್ಕವಿರುವುದನ್ನು ನೋಡಿದ್ದೇವೆ. |
03:01 | ಆದರೆ ಲಿನಕ್ಸ್ ನಲ್ಲಿ, ನಾವು ಈ ಪೂರ್ವನಿಯೋಜಿತ ವರ್ತನೆಯನ್ನು ಬದಲಾಯಿಸಬಹುದು. |
03:04 | ನಾವು ಈ ಮೂರು ಸ್ಟ್ರೀಮ್ ಗಳನ್ನು ಬೇರೆ ಫೈಲ್ ಗೆ ಸಂಪರ್ಕಿಸಬಹುದು. |
03:07 | ಈ ಪ್ರೋಸೆಸ್ ನ್ನು ರಿಡೈರೆಕ್ಷನ್ ಎಂದು ಕರೆಯಲಾಗುತ್ತದೆ. |
03:09 | ಈಗ ರಿಡೈರೆಕ್ಷನ್ ಅನ್ನು 3 ಸ್ಟ್ರೀಮ್ ಗಳಲ್ಲಿ ಹೇಗೆ ಮಾಡಲಾಗುತ್ತದೆ ಎಂದು ನೋಡೋಣ. |
03:14 | ಮೊದಲಿಗೆ ನಾವು ಹೇಗೆ ಸ್ಟ್ಯಾಂಡರ್ಡ್ ಇನ್ ಪುಟ್ ರಿಡೈರೆಕ್ಟ್ ಆಗುತ್ತದೆ ಎಂದು ನೋಡೋಣ. |
03:17 | ನಾವು < (left angled bracket) ನ ಸಹಾಯದಿಂದ standardin ಎಂಬುದನ್ನು ಫೈಲ್ ನಿಂದ ರೆಡೈರೆಕ್ಟ್ ಮಾಡೋಣ. |
03:22 | ನಮಗೆ ತಿಳಿದಿರುವ ಪ್ರಕಾರ wc ಕಮಾಂಡ್ ಅನ್ನು ಸಾಲುಗಳ, ಪದಗಳ ಮತ್ತು ಫೈಲ್ ನಲ್ಲಿರುವ ಅಕ್ಷರಗಳ ಸಂಖ್ಯೆಯನ್ನು ಪತ್ತೆ ಹಚ್ಚಲು ಬಳಸಲಾಗುತ್ತದೆ. |
03:28 | ಟರ್ಮಿನಲ್ ವಿಂಡೋನಲ್ಲಿ wc ಟೈಪ್ ಮಾಡಿ. |
03:31 | ಈಗ Enter ಒತ್ತಿ. ಏನಾಗಬಹುದು? ನಾವು ಮಿನುಗುತ್ತಿರುವ ಕರ್ಸರ್ ನೋಡುತ್ತಿದ್ದೇವೆ. ಇದರ ಅರ್ಥ ನಾವು ಕೀಬೋರ್ಡ್ ಮೂಲಕ ಬರೆಯಬೇಕು ಎಂದು. |
03:37 | ಈಗ ಒಂದು ಟೆಕ್ಸ್ಟ್ ನ್ನು ಬರೆಯಿರಿ. “This tutorial is very important” |
03:46 | ಈಗ Enter ಒತ್ತಿ. |
03:48 | ಈಗ Ctrl ಮತ್ತು d ಅನ್ನು ಒಟ್ಟಿಗೆ ಒತ್ತಿ. |
03:52 | ಈಗ ನಾವು ಬರೆದ ಸಾಲುಗಳ ಮೇಲೆ ಕಮಾಂಡ್ ಕಾರ್ಯಗತಗೊಳ್ಳುತ್ತದೆ |
03:55 | ಕಮಾಂಡ್, ಟರ್ಮಿನಲ್ ನ ಮೇಲೆ ಒಂದು ಔಟ್ ಪುಟ್ ಕೊಡುತ್ತದೆ. |
03:57 | ಈಗ ಇಲ್ಲಿ wc ಕಮಾಂಡ್ ನಂತರ ಯಾವುದೇ ಫೈಲ್ ನೀಡಲಾಗುವುದಿಲ್ಲ. |
04:01 | ಆದ್ದರಿಂದ ಇದು ಇನ್ ಪುಟ್ ಅನ್ನು ಸ್ಟ್ಯಾಂಡರ್ಡ್ ಇನ್ ಪುಟ್ ಸ್ಟ್ರೀಮ್ ನಿಂದ ತೆಗೆದುಕೊಳ್ಳುತ್ತದೆ |
04:04 | ಈಗ ಸ್ಟ್ಯಾಂಡರ್ಡ್ ಇನ್ ಪುಟ್ ಸ್ಟ್ರೀಮ್ ಪೂರ್ವನಿಯೋಜಿತವಾಗಿ ಕೀ ಬೋರ್ಡ್ ಗೆ ಸಂಪರ್ಕಿಸಲಾಗಿದೆ. ಆದ್ದರಿಂದ wc, ಕೀಬೋರ್ಡ್ ನಿಂದ ಇನ್ ಪುಟ್ ತೆಗೆದುಕೊಳ್ಳುತ್ತದೆ. |
04:12 | ಈಗ ನಾವು ಹೀಗೆ ಬರೆದಲ್ಲಿ " wc space 'left-angled bracket" space test1 dot txt” |
04:19 | ಏನಾಗಬಹುದು ಅಂದರೆ, wc ನಮಗೆ test1 dot txt ಫೈಲ್ ನ ಒಟ್ಟು ಸಾಲುಗಳು, ಪದಗಳು ಮತ್ತು ಅಕ್ಷರಗಳನ್ನು ಹೇಳುತ್ತದೆ. |
04:27 | ಈಗ ಟೈಪ್ ಮಾಡಿ “wc space test1 dot txt “ |
04:34 | ನಾವು ಅದೇ ಫಲಿತಾಂಶವನ್ನು ನೋಡಬಹುದು. |
04:37 | ಹಾಗಾದರೆ ವ್ಯತ್ಯಾಸ ಏನು? |
04:39 | ನಾವು “wc space test1dot txt” ಎಂದು ಬರೆದಾಗ ಕಮಾಂಡ್ test1dot txt ಫೈಲ್ ಅನ್ನು ತೆರೆಯುತ್ತದೆ ಮತ್ತು ಅದರಿಂದ ಓದುತ್ತದೆ. |
04:46 | ಆದರೆ ನಾವು “wc space 'left-angled bracket' test1 dot txt” ಎಂದು ಬರೆದಾಗ wc ಯಾವುದೇ ಫೈಲ್ ತೆರೆಯುದಿಲ್ಲ. |
04:53 | ಬದಲಾಗಿ, ಅದು ಸ್ಟ್ಯಾಂಡರ್ಡ್ ಇನ್ ನಿಂದ ಇನ್ ಪುಟ್ ತೆಗೆದುಕೊಳ್ಳಲು ನೋಡುತ್ತದೆ. |
04:57 | ಈಗ ನಾವು ಫೈಲ್ test1dot txt ಗೆ ಸ್ಟ್ಯಾಂಡರ್ಡ್ ಇನ್ ನಿರ್ದೇಶಿಸಬಹುದು. |
05:01 | ಆದ್ದರಿಂದ ಕಮಾಂಡ್ test1ನಿಂದ ಓದುತ್ತದೆ. |
05:04 | ಆದರೆ ವಾಸ್ತವವಾಗಿ ತಿಳಿದಿರುವುದಿಲ್ಲವೆನೆಂದರೆ ಸ್ಟ್ಯಾಂಡರ್ಡ್ ಇನ್ ಗೆ ಮಾಹಿತಿ ಎಲ್ಲಿಂದ ಬರುತ್ತಿದೆ ಎಂದು. |
05:10 | ಆದ್ದರಿಂದ, ಸ್ಟ್ಯಾಂಡರ್ಡ್ ಇನ್ ಪುಟ್ ಅನ್ನು ಹೇಗೆ ರಿಡೈರೆಕ್ಟ್ ಮಾಡಬಹುದು ಎಂದು ಈಗ ನಾವು ನೋಡಿದ್ದೇವೆ. |
05:12 | ಈಗ ಸ್ಟ್ಯಾಂಡರ್ಡ್ ಔಟ್ ಪುಟ್ ಮತ್ತು ಸ್ಟ್ಯಾಂಡರ್ಡ್ ಎರರ್ ಅನ್ನು ಹೇಗೆ ರಿಡೈರೆಕ್ಟ್ ಮಾಡಬಹುದು ಎಂದು ನೋಡೋಣ. |
05:17 | ಔಟ್ ಪುಟ್ ಅಥವಾ ಎರರ್ ರಿಡೈರೆಕ್ಟ್ ಮಾಡಲು 2 ಬಗೆಗಳಿವೆ. |
05:20 | n ಎಂಬುದು ಫೈಲ್ ಡಿಸ್ಕ್ರಿಪ್ಟರನ್ನು ಸೂಚಿಸುತ್ತದೆ ಎಂದು ಊಹಿಸಿಕೊಳ್ಳಿ.ಫೈಲ್ ಡಿಸ್ಕ್ರಿಪ್ಟರ್ n ನಿಂದ ಫೈಲ್ ಗೆ ಔಟ್ ಪುಟ್ ರಿಡೈರೆಕ್ಟ್ ಮಾಡುತ್ತದೆ. |
05:29 | ನೀವು ಫೈಲ್ ಬರೆಯಲು ಅಧಿಕಾರವನ್ನು ಹೊಂದಿರಬೇಕು. |
05:32 | ಫೈಲ್ ಅಸ್ತಿತ್ವದಲ್ಲಿರದಿದ್ದರೆ ಅದನ್ನು ರಚಿಸಲಾಗುತ್ತದೆ. |
05:35 | ಒಂದು ವೇಳೆ ಇದು ಅಸ್ತಿತ್ವದಲ್ಲಿದ್ದರೆ, ಯಾವುದೇ ಸೂಚನೆಗಳಿಲ್ಲದೆ ಅಸ್ತಿತ್ವದಲ್ಲಿ ಇರುವ ಪರಿವಿಡಿಗಳು ನಾಶವಾಗುತ್ತದೆ . |
05:40 | ' n 'double right-angled bracket' ಕೂಡ ಫೈಲ್ ಗಾಗಿ ಫೈಲ್ ಡಿಸ್ಕ್ರಿಪ್ಟರ್ n ಇಂದ ಔಟ್ ಪುಟ್ ಅನ್ನು ಪುನರ್ನಿರ್ದೇಶಿಸುತ್ತದೆ |
05:47 | ಪುನಃ, ನೀವು ಫೈಲ್ ಬರೆಯಲು ಅಧಿಕಾರವನ್ನು ಹೊಂದಿರಬೇಕು. |
05:50 | ಒಂದು ವೇಳೆ ಫೈಲ್ ಅಸ್ತಿತ್ವದಲ್ಲಿ ಇರದಿದ್ದರೆ ಅದನ್ನು ರಚಿಸಲಾಗುತ್ತದೆ |
05:52 | ಒಂದು ವೇಳೆ ಫೈಲ್ ಅಸ್ತಿತ್ವದಲ್ಲಿ ಇದ್ದರೆ ಅದನ್ನು ಅಸ್ತಿತ್ವದಲ್ಲಿ ಇರುವ ಫೈಲ್ ಗೆ ಸೇರಿಸಲಾಗುತ್ತದೆ |
05:59 | single right angle bracket ನ n ಅಥವಾ n double right angle bracket, ಫೈಲ್ ಡಿಸ್ಕ್ರಿಪ್ಟರನ್ನು ಸೂಚಿಸುತ್ತದೆ. |
06:05 | ಒಂದು ವೇಳೆ ಇದನ್ನು ಬಿಟ್ಟರೆ, ಸ್ಟ್ಯಾಂಡರ್ಡ್ ಔಟ್ ಪುಟ್ ಫೈಲ್ ಡಿಸ್ಕ್ರಿಪ್ಟರ್ 1 ಎಂದು ಭಾವಿಸಲಾಗುತ್ತದೆ |
06:10 | ಆದ್ದರಿಂದ right angle bracket ಕೇವಲ 1 right angle bracket ಆಗಿರುತ್ತದೆ |
06:15 | ಆದರೆ ಎರರ್ ಸ್ಟ್ರೀಮ್ ಅನ್ನು ಪುನರ್ನಿರ್ದೇಶಿಸಲು ನಿಮಗೆ 2 right angle bracket ಅಥವಾ 2 double right angle bracket ಉಪಯೋಗಿಸಬೇಕಾಗುತ್ತದೆ |
06:22 | ಈಗ ನಾವು ಇದನ್ನು ಪ್ರಾಯೋಗಿಕವಾಗಿ ನೋಡೋಣ. |
06:24 | ಹಿಂದಿನ ಉದಾಹರಣೆಯಲ್ಲಿ ನಾವು ನೋಡಿರುವುದೇನೆಂದರೆ ಫೈಲ್ ನ wc ಕಮಾಂಡ್ ಅಥವಾ ಸ್ಟ್ಯಾಂಡರ್ಡ್ ಇನ್ ನ ಫಲಿತಾಂಶವು ಟರ್ಮಿನಲ್ ವಿಂಡೋನ ಪರದೆಯ ಮೇಲೆ ಪ್ರದರ್ಶಿಸಲ್ಪಡುತ್ತದೆ |
06:31 | ಒಂದು ವೇಳೆ ನಮಗೆ ಟರ್ಮಿನಲ್ ಮೇಲೆ ಪ್ರದರ್ಶಿಸಲು ಬೇಡವೆಂದಾದರೆ ಏನಾಗುತ್ತದೆ? |
06:34 | ನಾವು ಇದನ್ನು ಫೈಲ್ ನಲ್ಲಿ ಸ್ಟೋರ್ ಮಾಡಲು ಇಚ್ಚಿಸುತ್ತೇವೆ ಯಾಕಂದರೆ ನಾವು ಈ ಮಾಹಿತಿ ಅನ್ನು ನಂತರ ಉಪಯೋಗಿಸಬಹುದಾಗಿದೆ. |
06:38 | ಪೂರ್ವನಿಯೋಜಿತವಾಗಿ wc ತನ್ನ ಔಟ್ ಪುಟ್ ಅನ್ನು ಸ್ಟ್ಯಾಂಡರ್ಡ್ ಔಟ್ ನಲ್ಲಿ ಬರೆಯುತ್ತದೆ. |
06:42 | ಸ್ಟ್ಯಾಂಡರ್ಡ್ ಔಟ್ ಪೂರ್ವನಿಯೋಜಿತವಾಗಿ ಟರ್ಮಿನಲ್ ವಿಂಡೋ ಜೊತೆ ಸಂಪರ್ಕ ಹೊಂದಿದೆ. |
06:45 | ಹಾಗಾಗಿ ನಾವು ಔಟ್ ಪುಟ್ ಅನ್ನು ಟರ್ಮಿನಲ್ ವಿಂಡೋ ನ ಮೇಲೆ ಕಾಣಬಹುದಾಗಿದೆ. |
06:48 | ಆದರೆ ಒಂದು ವೇಳೆ ನಮಗೆ ಸ್ಟ್ಯಾಂಡರ್ಡ್ ಔಟ್ ನ್ನು ಫೈಲ್ ಗೆ ರಿಡೈರೆಕ್ಟ್ ಮಾಡಲು ಸಾಧ್ಯವಾದರೆ, ಔಟ್ ಪುಟ್ ಅನ್ನು wc ಕಮಾಂಡ್ ನಿಂದ ಆ ಫೈಲ್ ಗೆ ಬರೆಯಲಾಗುತ್ತದೆ. |
06:57 | ನಾವು ಇದನ್ನು ಈ ರೀತಿ ಬರೆಯುತ್ತೇವೆ ಅಂದುಕೊಳ್ಳಿ, "wc space test1 dot txt 'right-angled bracket' wc_results dot txt" .
|
07:09 | ಈಗ ಎಂಟರ್ ಒತ್ತಿ |
07:11 | ಈಗ ಇದು ವಾಸ್ತವವಾಗಿ ಸಂಭವಿಸಿದೆಯೇ ಎಂದು ನೋಡಲು ನಾವು c-a-t ಕಮಾಂಡ್ ಮೂಲಕ wc_results dot txt ಗಳನ್ನು ತೋರಿಸಬಹುದು. |
07:23 | ಹೌದು ಇದು ಸಂಭವಿಸಿದೆ. |
07:24 | ಒಂದು ವೇಳೆ ನಮ್ಮ ಬಳಿ ಅದೇ ಡೈರೆಕ್ಟ್ ರಿಯಲ್ಲಿ ಇನ್ನೊಂದು ಫೈಲ್, test2 ಇದೆ ಅಂದುಕೊಳ್ಳಿ. |
07:30 | ನಾವೀಗ ಪುನಃ test2 ಫೈಲ್ ನ ಜೊತೆಗೆ ಕಮಾಂಡ್ ಅನ್ನು ಹೊರಡಿಸಬೇಕಾದರೆ ನಾವು ಹೀಗೆ ಟೈಪ್ ಮಾಡೋಣ, "wc space test2 dot txt 'right-angled bracket' wc_results dot txt" |
07:44 | ಇದರಿಂದ, wc_resultsನ ವಿಷಯಗಳು ವಿಸ್ತಾರವಾಗಿ ಬರೆಯಲ್ಪಡುತ್ತದೆ. |
07:48 | ಈಗ ಇದನ್ನು ನೋಡೋಣ. |
07:56 | ಬದಲಾಗಿ ನಾವು " wc space test1 dot txt 'right-angled bracket' twice wc underscore results dot txt " ಎಂದು ಬರೆದರೆ |
08:07 | ಇಲ್ಲಿ ಹೊಸ ವಿಷಯಗಳು, ಮೊದಲೇ ಉಪಸ್ಥಿತಿಯಲ್ಲಿರುವ wc underscore results dot txt ಫೈಲ್ ನ ವಿಷಯಗಳನ್ನು ಒವರ್ ರೈಟ್ ಮಾಡುವುದಿಲ್ಲ, ಬದಲಾಗಿ ಸೇರಿಸಲಾಗುತ್ತದೆ. |
08:15 | ಈಗ ಇದನ್ನು ಕೂಡ ನೋಡೋಣ. |
08:26 | ಸ್ಟ್ಯಾಂಡರ್ಡ್ ಎರರ್ ಅನ್ನು ಇದೆ ರೀತಿ ರಿಡೈರೆಕ್ಟ್ ಮಾಡಲಾಗುತ್ತದೆ. |
08:29 | ಕೇವಲ ವ್ಯತ್ಯಾಸವೇನೆಂದರೆ ಈ ಸಂಧರ್ಭದಲ್ಲಿ ನಮಗೆ right angle bracket ಅಥವಾ double right angle bracket ಚಿಹ್ನೆ ಯ ಮೊದಲು ಸ್ಟ್ಯಾಂಡರ್ಡ್ ಎರರ್ ನ ಫೈಲ್ ಡಿಸ್ಕ್ರಿಪ್ಟರ್ ಸಂಖ್ಯೆಯನ್ನು ಉಲ್ಲೇಖ ಮಾಡುವ ಅವಶ್ಯಕತೆ ಇದೆ. |
08:38 | ನಮಗೆ ತಿಳಿದಿರುವ ಹಾಗೆ aaa ಹೆಸರಿನ ಯಾವುದೇ ಫೈಲುಗಳು ಅಸ್ತಿತ್ವದಲ್ಲಿ ಇಲ್ಲ. ಈಗ ಈ ಕೆಳಗಿರುವಂತೆ ಬರೆಯಿರಿ."wc space aaa" |
08:46 | ಈಗ ಶೆಲ್ ಎರರ್ ಅನ್ನು ತೋರಿಸುತ್ತದೆ ಅದೇನೆಂದರೆ " No such file or directory "(ಇಂಥಹ ಯಾವುದೇ ಫೈಲ್ ಅಥವಾ ಡೈರೆಕ್ಟ್ ರಿ ಅಸ್ತಿತ್ವದಲ್ಲಿ ಇಲ್ಲ) |
08:50 | ಈಗ ನಮಗೆ ಎರರ್ ಮೆಸೇಜ್ ಗಳನ್ನು ಸ್ಕ್ರೀನ್ ನ ಮೇಲೆ ಕಾಣುವುದು ಬೇಡವೆಂದಾದರೆ ಅದನ್ನು ಬೇರೆ ಫೈಲ್ ಗೆ ರಿಡೈರೆಕ್ಟ್ ಮಾಡಬಹುದು. |
08:55 | ಇದಕ್ಕಾಗಿ ಕಮಾಂಡ್ ಅನ್ನು ಕೊಡೋಣ."wc space aaa space 2 'right-anged bracket' errorlog dot txt" |
09:06 | ಈಗ ಎರರ್ ಟರ್ಮಿನಲ್ ಮೇಲೆ ಕಾಣಿಸುವುದಿಲ್ಲ ಬದಲಾಗಿ ಇದು errorlog dot txt ಫೈಲ್ ನಲ್ಲಿ ಬರೆಯಲ್ಪಟ್ಟಿರುತ್ತದೆ. |
09:12 | ಇದನ್ನು ನಾವು ಈ ಕಮಾಂಡ್ ನ ಮೂಲಕ ನೋಡಬಹುದಾಗಿದೆ."cat space errorlog dot txt" |
09:22 | ಒಂದು ವೇಳೆ ನಾನು ಈಗ " cat space bbb space 2 'right-angled bracket' errorlog dot txt " ಈ ಕಮಾಂಡ್ ಕಾರ್ಯಗತಗೊಳಿಸಿ ಬೇರೆ ಎರರ್ ಮಾಡುತ್ತೇನೆ ಅಂದುಕೊಳ್ಳಿ. |
09:34 | ಆಗ ಹಿಂದಿನ ಎರರ್ ತಿದ್ದಲ್ಪಟ್ಟು ಅಲ್ಲಿ ಹೊಸ ಎರರ್ ಕಾಣಸಿಗುತ್ತದೆ. |
09:39 | ಇಲ್ಲಿ " cat space errorlog dot txt " ನೋಡಿ. |
09:46 | ಆದರೆ ಒಂದು ವೇಳೆ ನಮಗೆ ಎಲ್ಲ ಎರರ್ ಗಳ ಪಟ್ಟಿ ಮಾಡಬೇಕೆಂದರೆ ಏನು ಮಾಡುವುದು?
ಇದಕ್ಕಾಗಿ ನಾವು ಒಂದು ಕಮಾಂಡ್ ನ್ನು ಚಲಾಯಿಸೋಣ. "wc space aaa space 2 'right-angled bracket' twice errorlog dot txt" |
09:58 | ನಾವು ಕ್ಯಾಟ್ ಕಮಾಂಡ್ ಮೂಲಕ ಇದನ್ನು ಪರಿಶೀಲಿಸುತ್ತೇವೆ. |
10:06 | ನಾವು ಈಗಾಗಲೇ ಸ್ಟ್ಯಾಂಡರ್ಡ್ ಔಟ್ ,ಸ್ಟ್ಯಾಂಡರ್ಡ್ ಇನ್,ಸ್ಟ್ಯಾಂಡರ್ಡ್ ಎರರ್ ಎಂಬ ಈ ಮೂರು ಸ್ಟ್ರೀಮ್ಸ್ ಗಳನ್ನು ಹೇಗೆ ಪ್ರತ್ಯೇಕವಾಗಿ ರಿಡೈರೆಕ್ಟ್ ಮತ್ತು ಕುಶಲತೆಯಿಂದ ಪ್ರಯೋಗಿಸಲಾಗುತ್ತದೆ ಎಂದು ತಿಳಿದಿದ್ದೇವೆ. ಆದರೆ ಈ ಪರಿಕಲ್ಪನೆಯ ವಾಸ್ತವಿಕವಾದ ಶಕ್ತಿಯ ಅಂದಾಜನ್ನು, ನಾವು ಸ್ಟ್ರೀಮ್ ಗಳನ್ನು ಒಟ್ಟಿಗೆ ಮಾನ್ಯುಪ್ಯುಲೆಟ್ ಮಾಡಬಹುದಾದ ಸಮಯದಲ್ಲ್ಲಿಯೇ, ಅಂದರೆ, ವಿವಿಧ ಸ್ಟ್ರೀಮ್ಸ್ ಗಳ ಜೋಡಣೆ ಮಾಡುವ ಸಮಯದಲ್ಲೇ ಲೆಕ್ಕ ಹಾಕಬಹುದು. |
10:20 | ಈ ಪ್ರೋಸೆಸ್ ನ್ನು ಪೈಪ್ ಲೈನಿಂಗ್ ಎನ್ನಲಾಗುತ್ತದೆ. |
10:22 | ಪೈಪ್ಸ್ ಗಳನ್ನು, ಕಮಾಂಡ್ ಸರಣಿಗಳನ್ನು ರಚಿಸಲು ಬಳಸಲಾಗುತ್ತದೆ. |
10:25 | ಪೈಪ್ ಸರಣಿಯಲ್ಲಿ ಕಮಾಂಡ್ ನ ಔಟ್ ಪುಟ್ ಅನ್ನು ನಂತರದ ಕಮಾಂಡ್ ನ ಇನ್ ಪುಟ್ ಗೆ ಸಂಪರ್ಕಿಸುತ್ತದೆ. |
10:30 | command1 vertical bar command2 hyphen option vertical bar command3 hyphen option1 hyphen option2 vertical bar command4 |
10:46 | ಒಂದು ವೇಳೆ, ನಮಗೆ ಈಗಿರುವ ಡೈರೆಕ್ಟರಿ ಯಲ್ಲಿರುವ ಫೈಲ್ ಗಳ ಮತ್ತು ಡೈರೆಕ್ಟ್ ರಿ ಗಳ ಸಂಪೂರ್ಣ ಸಂಖ್ಯೆಯನ್ನೂ ತಿಳಿಯಬೇಕಾಗಿದೆ ಎಂದು ಅಂದುಕೊಳ್ಳಿ. |
10:51 | ಇದಕ್ಕಾಗಿ ನಾವೇನು ಮಾಡಬಹುದು?
ನಮಗೆ ತಿಳಿದಿರುವ ಪ್ರಕಾರ "ls space minus l" ಈಗಿರುವ ಡೈರೆಕ್ಟ್ ರಿಯಲ್ಲಿರುವ ಎಲ್ಲಾ ಫೈಲ್ಸ್ ಗಳ ಮತ್ತು ಡೈರೆಕ್ಟ್ ರಿಗಳ ಪಟ್ಟಿಯನ್ನು ಮಾಡುತ್ತದೆ. |
10:58 | ನಾವು ಫೈಲ್ ಗೆ ಔಟ್ ಪುಟ್ ಅನ್ನು ರಿಡೈರೆಕ್ಟ್ ಮಾಡಬಹುದು.
"ls space minus l 'right-angled bracket' files dot txt" |
11:08 | "cat space files dot txt" ಚಲಾಯಿಸಿ. |
11:14 | ಈಗ ಪ್ರತಿಯೊಂದು ಸಾಲು ಕೂಡ ಫೈಲ್ ಅಥವಾ ಡೈರೆಕ್ಟ್ ರಿ ಯ ಹೆಸರಾಗಿದೆ. |
11:17 | ಒಂದು ವೇಳೆ ನಾವು ಈ ಫೈಲ್ ನ ಸಂಪೂರ್ಣ ಸಾಲುಗಳನ್ನು ಅಳೆಯಲು ಹೋದರೆ, ನಮ್ಮ ಈ ಉದ್ದೇಶವನ್ನು ಪೂರ್ಣಗೊಳಿಸಲು files dot txt ಯ ಬಳಕೆಯನ್ನು ಮಾಡಬಹುದು |
11:24 | ಇದನ್ನು ಈ ಕಮಾಂಡ್ ಮೂಲಕ ಮಾಡಬಹುದು "wc space minus l files dot txt" |
11:32 | ಇದು ನಮ್ಮ ಉದ್ದೇಶವನ್ನು ಪೂರ್ಣಗೊಳಿಸುತ್ತದೆ, ಆದರೆ ಅಲ್ಲಿ ಕೆಲವು ತೊಂದರೆಗಳು ಉಂಟಾಗುತ್ತದೆ. |
11:35 | ಮೊದಲು ನಮಗೆ intermediate ಫೈಲ್ ಬೇಕಾಗಿದೆ. ಇಲ್ಲಿ ಅದು files dot txt ಆಗಿದೆ. |
11:46 | ಆದ್ದರಿಂದ ಒಂದು ವೇಳೆ ನಾವು ಹಲವು ಕಮಾಂಡ್ ಗಳ ಸರಣಿ ರಚಿಸಲು ಬಯಸಿದರೆ ಈ ವಿಧಾನ ನಿಧಾನಗೊಳ್ಳುತ್ತದೆ. |
11:50 | ನಾವು ಸುಲಭವಾಗಿ ಪೈಪ್ಸ್ ಬಳಸಿಕೊಂಡು ಈ ರೀತಿಯಲ್ಲಿ ಮಾಡಬಹುದು. ಇದಕ್ಕಾಗಿ ನಾವು ಬರೆಯುತ್ತೇವೆ.
"ls space minus l 'vertical bar' wc space minus l" |
12:01 | ಮತ್ತು ನಾವು ಅತ್ಯಂತ ಸುಲಭವಾಗಿ ಒಂದೇ ಆದ ಫಲಿತಾಂಶವನ್ನು ಪಡೆಯಬಹುದು. |
12:06 | ls ಕಮಾಂಡ್ ನಿಂದ ಔಟ್ ಪುಟ್ wc ಕಮಾಂಡ್ ಗೆ ಇನ್ ಪುಟ್ ಆಗಿ ಹೋಗುತ್ತದೆ |
12:10 | ನಾವು ಪೈಪ್ ಗಳ ಮೂಲಕ ಅತಿ ಉದ್ದದ ಕಮಾಂಡ್ ಗಳ ಸರಣಿಗಳನ್ನು ಕೂಡ ಸೇರಿಸಬಹುದಾಗಿದೆ. |
12:15 | ಪೈಪ್ ಗಳ ಒಂದು ಸಾಮಾನ್ಯ ಬಳಕೆ ಮಲ್ಟಿಪೇಜ್ ಪ್ರದರ್ಶನಗಳನ್ನು ಓದಲು ಆಗುತ್ತದೆ. |
12:19 | "cd space slash user slash bin" ಎಂದು ಟೈಪ್ ಮಾಡಿ. |
12:24 | ಹಾಗಾಗಿ, ನಾವು ಈಗ ಬಿನ್ ಡೈರೆಕ್ಟ್ ರಿ ಯಲ್ಲಿ ಇದ್ದೇವೆ. |
12:28 | ಈಗ "ls minus l" ಚಲಾಯಿಸಿ. |
12:31 | ನಮ್ಮಿಂದ ಔಟ್ ಪುಟ್ ಸರಿಯಾಗಿ ನೋಡಲಾಗುವುದಿಲ್ಲ. ಆದರೆ ಒಂದುವೇಳೆ ನಾವು ಹೆಚ್ಚುವರಿಗಾಗಿ ಪೈಪ್ಸ್ ಜೊತೆ ಸೇರಿಸುದನ್ನು ಮಾಡಬಹುದು. |
12:37 | ಪಟ್ಟಿಯಲ್ಲಿ ಸ್ಕ್ರೋಲ್ ಮಾಡಲು Enter ಒತ್ತಿ . |
12:41 | ಇದರಿಂದ ಹೊರಗೆ ಬರಲು "q" ಒತ್ತಿರಿ. |
12:45 | ಇವೇ ಮೊದಲಾದ ಕಮಾಂಡ್ಸ್ ಗಳು ನಮಗೆ ಫೈಲ್ಸ್ ಗಳ ಜೊತೆ ಕೆಲಸ ಮಾಡಲು ಸಹಾಯ ಮಾಡುತ್ತವೆ |
12:48 | ಇನ್ನು ಹಲವಾರು ಕಮಾಂಡ್ಸ್ ಗಳು ಲಬ್ಯವಿದೆ. |
12:50 | ಇದಲ್ಲದೆ ನಾವು ನೋಡಿದ ಪ್ರತಿಯೊಂದು ಕಮಾಂಡ್ ಅನೇಕ ಆಯ್ಕೆಗಳನ್ನು ಹೊಂದಿದೆ. |
12:54 | ನಾನು 'man' ಕಮಾಂಡ್ ಬಳಸಿ, ನಿಮಗೆ ಅವುಗಳ ಬಗ್ಗೆ ಹೆಚ್ಚಿನದನ್ನು ತಿಳಿಯಲು ಉತ್ತೇಜನ ನೀಡುತ್ತೇನೆ. |
12:58 | ಕಮಾಂಡ್ಸ್ ಗಳ ಕಲಿಕೆಯ ಒಂದು ಅತ್ಯುತ್ತಮ ವಿಧಾನವೇನೆಂದರೆ ಮತ್ತೆ ಮತ್ತೆ ಅವುಗಳನ್ನು ಬಳಸುವುದು. |
13:04 | ಈಗ ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
13:07 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
13:15 | ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
13:19 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ. ಧನ್ಯವಾದಗಳು, ಶುಭವಿದಾಯ. |