Difference between revisions of "Java/C2/Switch-Case/Kannada"
From Script | Spoken-Tutorial
(Created page with "{| border=1 || '''Time''' || '''Narration''' |- | 00:02 | ಜಾವಾದಲ್ಲಿನ “ಸ್ವಿಚ್ ಕೇಸ್” ಬಗೆಗಿನ ಟ್ಯುಟೋರಿಯ...") |
PoojaMoolya (Talk | contribs) |
||
Line 49: | Line 49: | ||
|- | |- | ||
| 01:18 | | 01:18 | ||
− | | ಸ್ಟ್ರಿಂಗ್ ಡಿ ನೇಮ್ | + | | ಸ್ಟ್ರಿಂಗ್ ಡಿ ನೇಮ್ String dName we can initialize it to null. |
− | String dName we can initialize it to null. | + | |
|- | |- | ||
| 01:25 | | 01:25 | ||
Line 130: | Line 129: | ||
| ನಂತರ “ಬ್ರೇಕ್” | | ನಂತರ “ಬ್ರೇಕ್” | ||
|- | |- | ||
− | | 03: | + | | 03:34 |
| ಮುಂದಿನ ಸಾಲಿನಲ್ಲಿ “ಕೇಸ್ ೫(ಐದು)” ಕೊಲನ್ | | ಮುಂದಿನ ಸಾಲಿನಲ್ಲಿ “ಕೇಸ್ ೫(ಐದು)” ಕೊಲನ್ | ||
|- | |- |
Latest revision as of 12:14, 20 March 2017
Time | Narration |
00:02 | ಜಾವಾದಲ್ಲಿನ “ಸ್ವಿಚ್ ಕೇಸ್” ಬಗೆಗಿನ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು ಜಾವದಲ್ಲಿ “ಸ್ವಿಚ್ ಕೇಸ್ ಕನ್ಸ್ಟ್ರಕ್ಟ”ನ್ನು ಹೇಗೆ ಉಪಯೋಗಿಸುವುದೆಂದು ಕಲಿಯಲಿದ್ದೇವೆ. |
00:11 | ಈ ಟ್ಯುಟೋರಿಯಲ್ ನಲ್ಲಿ ನಾವು
ಉಬುಂಟು ವರ್ಷನ್ 11.10 (ಹನ್ನೊಂದು ಬಿಂದು ಹತ್ತು), ಜೆಡಿಕೆ 1.6 (ಒಂದು ಬಿಂದು ಆರು) ಮತ್ತು ಎಕ್ಲಿಪ್ಸ್ 3.7.೦ (ಮೂರು ಬಿಂದು ಏಳು ಬಿಂದು ಸೊನ್ನೆ) ಅನ್ನು ಉಪಯೋಗಿಸುತ್ತಿದ್ದೇವೆ. |
00:21 | ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನೀವು ಜಾವಾದಲ್ಲಿನ ಇಫ್ ಎಲ್ಸ್ ಸ್ಟೇಟ್ಮೆಂಟ್ ಬಗ್ಗೆ ತಿಳಿದಿರಬೇಕು. |
00:25 | ತಿಳಿಯದಿದ್ದಲ್ಲಿ, ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಈ ಕೆಳಗಿನ ವೆಬ್ಸೈಟ್ ಗೆ ಭೇಟಿ ಕೊಡಿ. |
00:32 | “ಸ್ವಿಚ್ ಕೇಸ”ನ್ನು ವೇರಿಯೇಬಲ್ ನ ಮೌಲ್ಯವನ್ನು ಆಧರಿಸಿದ ಕ್ರಿಯೆಗಳನ್ನು ಮಾಡಲು ಉಪಯೋಗಿಸುತ್ತೇವೆ. |
00:39 | ಇಲ್ಲಿ “ಸ್ವಿಚ್ ಕೇಸ್ ಸ್ಟೇಟ್ಮೆಂಟ್” ನ ನಿಯಮವಿದೆ. |
00:44 | ನಾವೀಗ ಅದನ್ನು ಉಪಯೋಗಿಸೋಣ. |
00:47 | ಈಗಾಗಲೇ ಎಕ್ಲಿಪ್ಸ್ ಆರಂಭವಾಗಿದೆ. |
00:49 | ನಾನು “ಸ್ವಿಚ್ ಕೇಸ್ ಡೆಮೋ” ಎಂಬ ಕ್ಲಾಸನ್ನು ತಯಾರಿಸಿದ್ದೇನೆ. |
00:53 | ನಾವೀಗ ಕೆಲವು ವೇರಿಯೇಬಲ್ ಗಳನ್ನು ತಯಾರಿಸೋಣ. |
00:57 | ಮೈನ್ ಮೆಥಡ್ ನ ಒಳಗೆ, “ಇಂಟ್” ಟೈಪ್ ನ “ವೇರಿಯೇಬಲ್ ಡೇ” ಅನ್ನು ತಯಾರಿಸೋಣ. |
01:02 | ಹಾಗಾಗಿ ಮೈನ್ ಮೆಥಡ್ ನ ಒಳಗೆ “ ಇಂಟ್ ಡೇ” ಮತ್ತು ಅದಕ್ಕೆ “ಸಮ” “೩” ಎಂಬ ಮೌಲ್ಯವನ್ನು ಕೊಟ್ಟು ಸೆಮಿಕೋಲನ್ ಎಂದು ಟೈಪ್ ಮಾಡೋಣ. |
01:12 | ನಾವೀಗ “ಸ್ಟ್ರಿಂಗ್” ಟೈಪ್ ನ ವೇರಿಯೇಬಲ್ “ಡಿ ನೇಮ್” ಅನ್ನು ಕ್ರಿಯೇಟ್ ಮಾಡೋಣ. |
01:18 | ಸ್ಟ್ರಿಂಗ್ ಡಿ ನೇಮ್ String dName we can initialize it to null. |
01:25 | ಇಲ್ಲಿ “ಡಿ ನೇಮ್” ಎಂಬುದು ವಾರದ ದಿನಗಳನ್ನು ಹಿಡಿದಿಟ್ಟುಕೊಳ್ಳುವ ವೇರಿಯೇಬಲ್ ಆಗಿದೆ. |
01:34 | “ಡೇ” ದಿನದ ಸಂಖ್ಯೆಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ |
01:36 | ಈಗ “ಸ್ವಿಚ್ ಕೇಸ್ ಸ್ಟೇಟ್ಮೆಂಟ”ನ್ನು ಟೈಪ್ ಮಾಡೋಣ. |
01:43 | ಮುಂದಿನ ಸಾಲಿನಲ್ಲಿ “ಸ್ವಿಚ್” ಆವರಣದ ಒಳಗೆ ಡೇ, ಎಂದು ಟೈಪ್ ಮಾಡಿ, ನಂತರ ಪುಷ್ಪಾವರಣವನ್ನು ತೆರೆದು ಎಂಟರನ್ನು ಒತ್ತಿ. |
01:52 | ಈ ಸ್ಟೇಟ್ಮೆಂಟ್ ಯಾವ ವೇರಿಯೇಬಲ್ ಕೇಸ್ ಗಾಗಿ ಒಪ್ಪಿಗೆಯ ಹಂತದಲ್ಲಿದೆ ಎಂದು ವಿವರಿಸುತ್ತದೆ. |
01:59 | ಮುಂದಿನ ಸಾಲಿನಲ್ಲಿ |
02:01 | “ಕೇಸ್ ೦”(ಸೊನ್ನೆ) ಕೋಲನ್ |
02:04 | ಮುಂದಿನ ಸಾಲಿನಲ್ಲಿ “ಡಿ ನೇಮ್” ಸಮ ಡಬಲ್ ಕೋಟ್ಸ್ ನ ಒಳಗೆ “ಸಂಡೇ” ಸೆಮಿಕೊಲನ್ ಎಂದು ಟೈಪ್ ಮಾಡಿ. |
02:14 | ಮುಂದಿನ ಸಾಲಿನಲ್ಲಿ “ಬ್ರೇಕ್” ಎಂದು ಟೈಪ್ ಮಾಡಿ |
02:17 | ಈ ಸ್ಟೇಟ್ಮೆಂಟ್ ಡೇ ೦ (ಸೊನ್ನೆ)ಯಾಗಿದ್ದರೆ, “ಡೇ ನೇಮ್” “ಸಂಡೇ”ಯೇ ಆಗಿರುತ್ತದೆ ಎಂದು ಹೇಳುತ್ತದೆ. |
02:26 | ಗಮನಿಸಿ, ಪ್ರತಿಯೊಂದು ಕೇಸ್ ನ ಕೊನೆಯಲ್ಲಿ “ಬ್ರೇಕ್” ಸ್ಟೇಟ್ಮೆಂಟನ್ನು ಉಪಯೋಗಿಸಲೇಬೇಕು. |
02:31 | ಬ್ರೇಕ್ ಸ್ಟೇಟ್ಮೆಂಟ್ ಇಲ್ಲದಿದ್ದರೆ, ಸ್ವಿಚ್ ಕೇಸ್ ಕ್ಲಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. |
02:35 | ಇದನ್ನು ಟ್ಯುಟೋರಿಯಲ್ ನ ಕೆಲವು ಭಾಗದ ನಂತರ ವಿವರಿಸಲಾಗುವುದು. |
02:40 | ಇದೇ ರೀತಿಯಲ್ಲಿಯೇ ಉಳಿದಿರುವ ಕೇಸ್ ಗಳನ್ನು ಟೈಪ್ ಮಾಡೋಣ |
02:45 | ಮುಂದಿನ ಸಾಲಿನಲ್ಲಿ “ಕೇಸ್ ೧ (ಒಂದು)” ಕೋಲನ್ |
02:50 | ಮುಂದಿನ ಸಾಲಿನಲ್ಲಿ “ಡಿ ನೇಮ್” ಸಮ ಡಬಲ್ ಕೋಟ್ಸ್ ನ ಒಳಗೆ “ಮಂಡೇ” ಸೆಮಿಕೊಲನ್ |
02:56 | ಮುಂದಿನ ಸಾಲಿನಲ್ಲಿ “ಬ್ರೇಕ್” ಎಂದು ಟೈಪ್ ಮಾಡಿ. |
02:58 | ನಂತರ “ಕೇಸ್ ೨(ಎರಡು)” ಕೊಲನ್ |
03:01 | ಮುಂದಿನ ಸಾಲಿನಲ್ಲಿ “ಡಿ ನೇಮ್” ಸಮ ಡಬಲ್ ಕೋಟ್ಸ್ ನ ಒಳಗೆ “ಟ್ಯೂಸ್ಡೇ” ನಂತರ ಸೆಮಿಕೊಲನ್ |
03:06 | ಮುಂದಿನ ಸಾಲಿನಲ್ಲಿ “ಬ್ರೇಕ್” ಎಂದು ಟೈಪ್ ಮಾಡಿ |
03:08 | ನಂತರ ಮುಂದಿನ ಸಾಲಿನಲ್ಲಿ “ಕೇಸ್ ೩ (ಮೂರು)” ಕೊಲನ್ |
03:12 | ಮುಂದಿನ ಸಾಲಿನಲ್ಲಿ “ಡಿ ನೇಮ್” ಸಮ ಡಬಲ್ ಕೋಟ್ಸ್ ನ ಒಳಗೆ “ವೆಡ್ನಸ್ಡೇ” ನಂತರ ಸೆಮಿಕೊಲನ್ |
03:18 | ಮುಂದಿನ ಸಾಲಿನಲ್ಲಿ “ಬ್ರೇಕ್” ಎಂದು ಟೈಪ್ ಮಾಡಿ |
03:20 | ನಂತರ “ಕೇಸ್ ೪ (ನಾಲ್ಕು)” ಕೋಲನ್ |
03:24 | ಮುಂದಿನ ಸಾಲಿನಲ್ಲಿ “ಡಿ ನೇಮ್” ಸಮ ಡಬಲ್ ಕೋಟ್ಸ್ ನ ಒಳಗೆ “ಥರ್ಸ್ಡೇ” ನಂತರ ಸೆಮಿಕೊಲನ್ |
03:32 | ನಂತರ “ಬ್ರೇಕ್” |
03:34 | ಮುಂದಿನ ಸಾಲಿನಲ್ಲಿ “ಕೇಸ್ ೫(ಐದು)” ಕೊಲನ್ |
03:37 | ಮುಂದಿನ ಸಾಲಿನಲ್ಲಿ “ಡೀ ನೇಮ್” ಸಮ ಡಬಲ್ ಕೋಟ್ಸ್ ನ ಒಳಗೆ “ಪ್ರೈಡೇ” ನಂತರ ಸೆಮಿಕೊಲನ್ |
03:41 | ನಂತರ “ಬ್ರೇಕ್” |
03:43 | ನಂತರ “ಕೇಸ್ ೬ (ಆರು)” ಕೊಲನ್ |
03:47 | ಮುಂದಿನ ಸಾಲಿನಲ್ಲಿ “ಡೀ ನೇಮ್” ಸಮ ಡಬಲ್ ಕೋಟ್ಸ್ ನ ಒಳಗೆ “ಸಾಟರ್ಡೇ” ನಂತರ ಸೆಮಿಕೊಲನ್ |
03:55 | ನಂತರ “ಬ್ರೇಕ್” ಸೆಮಿಕೊಲನ್ ಎಂದು ಟೈಪ್ ಮಾಡಿ |
03:59 | ನಂತರ ಆವರಣವನ್ನು ಮುಚ್ಚಿ. |
04:03 | ನಾವೀಗ ಪ್ರಿಂಟ್ ಸ್ಟೇಟ್ಮೆಂಟನ್ನು ಸೇರಿಸಿ ಕೋಡನ್ನು ಕಾರ್ಯರೂಪದಲ್ಲಿ ನೋಡೋಣ. |
04:07 | ಹಾಗಾಗಿ ಮುಂದಿನ ಸಾಲಿನಲ್ಲಿ “ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ ಎಲ್ ಎನ್” ಆವರಣದ ಒಳಗೆ “ಡಿ ನೇಮ್” ನಂತರ ಸೆಮಿಕೊಲನ್ ಎಂದು ಟೈಪ್ ಮಾಡಿ. |
04:16 | ಈಗ ಸಂಚಿಕೆಯನ್ನು ಸೇವ್ ಮಾಡಿ ರನ್ ಮಾಡಿ. |
04:20 | ಈಗ Ctrl S (ಕಂಟ್ರೋಲ್ ಎಸ್) ಮತ್ತು Ctrl F11 (ಕಂಟ್ರೋಲ್ ಎಫ್ಇಲವೆನ್) ಕೀಗಳನ್ನು ಒತ್ತಿ. |
04:25 | ನಾವು ಕೇಸ್ ಮೂರಕ್ಕೆ ಹೊಂದಿಕೊಂಡಿರುವ “ವೆಡ್ನಸ್ಡೇ” ಎಂಬ ಫಲಿತಾಂಶವನ್ನು ಪಡೆಯುತ್ತೇವೆ. |
04:31 | ನಾವೀಗ ಡೇ ನ ಮೌಲ್ಯವನ್ನು ಬದಲಿಸಿ ಫಲಿತಾಂಶವನ್ನು ನೋಡೋಣ. |
04:35 | ಹಾಗಾಗಿ ೩ ನ್ನು ೦ ಗೆ ಬದಲಿಸಿ. |
04:38 | ಈಗ ಸಂಚಿಕೆಯನ್ನು ಸೇವ್ ಮತ್ತು ರನ್ ಮಾಡಿ. |
04:40 | ನಾವು ನೋಡುವ ಹಾಗೆ, ಫಲಿತಾಂಶವು ಕೇಸ್ ೦ ಗೆ ಹೊಂದಿಕೊಂಡಂತೆ “ಸಂಡೇ” ಆಗಿದೆ. |
04:46 | ನಾವೀಗ ಕೇಸ್ ಕೆ ಹೊಂದಿಕೊಂಡಂತೆ ಮೌಲ್ಯವು ಇರದಿದ್ದರೆ ಏನಾಗುತ್ತದೆಂದು ನೋಡೋಣ. |
04:52 | ಈಗ ಡೇ ಸಮ ಮೈನಸ್ ೧ ಕ್ಕೆ ಬದಲಿಸಿ ಸಂಚಿಕೆಯನ್ನು ಸೇವ್ ಮತ್ತು ರನ್ ಮಾಡಿ. |
04:58 | ನಾವು ನೋಡುವ ಹಾಗೆ, ಫಲಿತಾಂಶ ಬರುತ್ತಿಲ್ಲ. |
05:01 | ಬೇರೆ ಎಲ್ಲಾ ಮೌಲ್ಯಗಳಿಗೂ ನಾವು ಕೇಸ್ ಹೊಂದಿದ್ದರೆ ಚೆನ್ನಾಗಿರುತ್ತದೆ. |
05:06 | ಅದನ್ನು “ಡೀಫಾಲ್ಟ್” ಕೀ ವರ್ಡ್ ಅನ್ನು ಉಪಯೋಗಿಸಿ ಮಾಡಲಾಗುತ್ತದೆ. |
05:09 | ಕೊನೆಯ ಕೇಸ್ ನ ನಂತರ, |
05:12 | “ಡೀಫಾಲ್ಟ್” “ಕೊಲನ್” ಎಂದು ಟೈಪ್ ಮಾಡಿ. |
05:14 | ಮುಂದಿನ ಸಾಲಿನಲ್ಲಿ “ಡಿ ನೇಮ್” ಸಮ ಡಬಲ್ ಕೋಟ್ಸ್ ನ ಒಳಗೆ “ರಾಂಗ್ ಚಾಯ್ಸ್” ನಂತರ ಸೆಮಿಕೊಲನ್ |
05:24 | ಮುಂದಿನ ಸಾಲಿನಲ್ಲಿ “ಬ್ರೇಕ್” ಸೆಮಿಕೊಲನ್ |
05:27 | ನಾವು “ಕೇಸ್ ಡೀಫಾಲ್ಟ್” ಎಂದು ಹೇಳುವುದಿಲ್ಲ. |
05:30 | ಗಮನಿಸಿ, ನಾವು ಕೇವಲ “ಡೀಫಾಲ್ಟ್” ಕೀವರ್ಡನ್ನು ಉಪಯೋಗಿಸುತ್ತೇವೆ. |
05:34 | ನಾವೀಗ ಕೋಡನ್ನು ರನ್ ಮಾಡೋಣ, ಸಂಚಿಕೆಯನ್ನು ಸೇವ್ ಮತ್ತು ರನ್ ಮಾಡಿ. |
05:38 | ನಾವು ನೋಡುವ ಹಾಗೆ, ಡೀಫಾಲ್ಟ್ ಕೇಸ್ ಕಾರ್ಯನಿರ್ವಹಿಸಿದೆ ಮತ್ತು ಅವಶ್ಯಕವಿರುವ ಸಂದೇಶ “ ರಾಂಗ್ ಚಾಯ್ಸ್” ಪ್ರಿಂಟ್ ಆಗಿದೆ. |
05:45 | ಬೇರೆ ಯಾವುದಾದರು ಮೌಲ್ಯದೊಂದಿಗೆ ಮತ್ತೆ ಪ್ರಯತ್ನಿಸೋಣ. |
05:48 | “- ೧” ನ್ನು “೧೫” ಕ್ಕೆ ಬದಲಿಸಿ |
05:51 | ನಾವು ನೋಡುವ ಹಾಗೆ, ಮತ್ತೆ ಡೀಫಾಲ್ಟ್ ಕೇಸ್ ಕಾರ್ಯನಿರ್ವಹಿಸಿದೆ. |
05:57 | ಈಗ ಬ್ರೇಕ್ ಸ್ಟೇಟ್ಮೆಂಟನ್ನು ತೆಗೆದರೆ ಏನಾಗುತ್ತದೆಂದು ನೋಡೋಣ. |
06:01 | ಹಾಗಾಗಿ ನಾವೀಗ “ಡೇ=೧೫” ನ್ನು “ಡೇ=೪” ಕ್ಕೆ ಬದಲಿಸಿ |
06:07 | “ಡೇ=೪” ಕ್ಕೆ ಹೊಂದಿಕೊಂಡಿರುವ ಬ್ರೇಕ್ ಸ್ಟೇಟ್ಮೆಂಟನ್ನು ತೆಗೆಯಿರಿ. |
06:12 | ಈಗ ಸೇವ್ ಮತ್ತು ರನ್ ಮಾಡಿ |
06:15 | ಕೇಸ್ ೪ ಆಗಿದ್ದರೂ, ಫಲಿತಾಂಶವನ್ನು ಪ್ರೈಡೇ ಎಂದೇ ಪಡೆದಿದ್ದೇವೆ ಥರ್ಸ್ಡೇ ಎಂದಲ್ಲ. |
06:20 | ಏಕೆಂದರೆ ಸ್ವಿಚ್ ಕೇಸ್ ನ ಕಾರ್ಯವಿಧಾನವೇ ಹಾಗೆ. |
06:24 | ಮೊದಲು ದಿನದ ಮೌಲ್ಯವನ್ನು ೦ (ಸೊನ್ನೆ) ಯೊಂದಿಗೆ ಹೋಲಿಸಿದೆ |
06:29 | ನಂತರ ೧ ರ ಜೊತೆಗೆ, ನಂತರ ೨ ರ ಜೊತೆಗೆ ಹೀಗೆಯೇ ಎಲ್ಲಾ ಸಾಧ್ಯ ಕೇಸ್ ಗಳೊಂದಿಗೆ ಹೋಲಿಸಲ್ಪಡುತ್ತದೆ. |
06:34 | ಯಾವಾಗ ಜೊತೆಯು ಸಿಗುತ್ತದೋ, ಆಗ ಜೊತೆಯೊಂದಿಗೆ ಮುಂದಿನ ಎಲ್ಲಾ ಕೇಸ್ ಗಳನ್ನು ಎಕ್ಸೆಕ್ಯೂಟ್ ಮಾಡುತ್ತದೆ. |
06:42 | ನಮ್ಮ ಕೇಸ್ ನಲ್ಲಿ, ಅದು ಎಕ್ಸೆಕ್ಯೂಟ್ ಮಾಡಿದ ಕೇಸ್ ೫ ನಂತರದ ಕೇಸ್ ೪. |
06:47 | ನಂತರ ಅದು ಕಾರ್ಯವನ್ನು ನಿಲ್ಲಿಸುತ್ತದೆ ಏಕೆಂದರೆ ಕೇಸ್ ೫ ರಲ್ಲಿ ಬ್ರೇಕ್ ಸ್ಟೇಟ್ಮೆಂಟ್ ಇದೆ. |
06:53 | ಅದನ್ನು ತಡೆಯಲು, ಪ್ರತಿಯೊಂದು ಸ್ಟೇಟ್ಮೆಂಟ್ ನ ನಂತರ ಬ್ರೇಕ್ ಸ್ಟೇಟ್ಮೆಂಟನ್ನು ಸೇರಿಸಬೇಕು. |
06:57 | ನಾವೀಗ ತೆಗೆದಿರುವ ಬ್ರೇಕ್ ಸ್ಟೇಟ್ಮೆಂಟನ್ನು ಸೇರಿಸೋಣ. |
07:00 | ಹಾಗಾಗಿ “ಬ್ರೇಕ್” ಸೆಮಿಕೊಲನ್ ಎಂದು ಟೈಪ್ ಮಾಡಿ. |
07:05 | ನಾವೀಗ ಕೋಡನ್ನು ರನ್ ಮಾಡೋಣ. |
07:08 | ನಾವು ನೋಡುವ ಹಾಗೆ ಕೇಸ್ ೪ ಮಾತ್ರ ಎಕ್ಸೆಕ್ಯೂಟ್ ಆಗಿದೆ. |
07:13 | ನಿಯಮದಂತೆ, ತಪ್ಪುಗಳನ್ನು ತಡೆಯಲು ಪ್ರತಿಯೊಂದು ಕೇಸ್ ನಲ್ಲೂ ಬ್ರೇಕ್ ಸ್ಟೇಟ್ಮೆಂಟ್ ಉಪಯೋಗಿಸುವುದನ್ನು ನೆನಪಿಡಿ. |
07:20 | ನಾವೀಗ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದೆವು. |
07:22 | ಈ ಟ್ಯುಟೋರಿಯಲ್ ನಲ್ಲಿ ನಾವು “ಸ್ವಿಚ್ ಕೇಸ್ ಕನ್ಸ್ಟ್ರಕ್ಟ್” ಮತ್ತು “ಬ್ರೇಕ್ ಸ್ಟೇಟ್ಮೆಂಟ್”ಅನ್ನು ಹೇಗೆ ಉಪಯೋಗಿಸುವುದೆಂದು ಕಲಿತೆವು. |
07:30 | ಅಸೈನ್ಮೆಂಟ್ ನ ರೂಪದಲ್ಲಿ ಹೆಸರು ಮತ್ತು ಲಿಂಗ ವೇರಿಯೇಬಲ್ ಆಗಿಟ್ಟುಕೊಂಡು ಸ್ವಿಚ್ ಕೇಸನ್ನು ಉಪಯೋಗಿಸಿ ಗಂಡಸರಿಗೆ “ Hello Mr….” (ಹಲೋ ಮಿಸ್ಟರ್) ಎಂದೂ ಹೆಂಗಸರಿಗೆ “Hello Ms….” (ಹಲೋ ಮಿಸಸ್) ಎಂದೂ ಬರುವಹಾಗೆ ಪ್ರೋಗ್ರಾಮನ್ನು ಬರೆಯಿರಿ. |
07:44 | ನೀವೀಗ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದಿರಿ. ಈ ಕೆಳಗಿನ ಲಿಂಕ್ ನಲ್ಲಿ ಸಿಗುವ ವೀಡಿಯೋವನ್ನು ನೋಡಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. |
07:53 | ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು. |
07:58 | ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಗಣವು ಈ ಪಾಠವನ್ನಾಧರಿಸಿ ಕಾರ್ಯಶಾಲೆಗಳನ್ನು ಆಯೋಜಿಸುತ್ತವೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
08:06 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
08:12 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
08:17 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
08:22 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
08:31 | ಈ ಟ್ಯುಟೋರಿಯಲ್ ನ ಅನುವಾದಕ ಬೆಂಗಳೂರಿನಿಂದ ರುಕ್ಮಾಂಗದ ಆರ್ಯ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ರಾಕೇಶ.
ಧನ್ಯವಾದಗಳು. |