Difference between revisions of "C-and-Cpp/C2/Scope-Of-Variables/Kannada"
From Script | Spoken-Tutorial
(Created page with "{| border=1 || '''Time''' || '''Narration''' |- | 00:01 |ಸಿ ಮತ್ತು ಸಿ ಪ್ಲಸ್ ಪ್ಲಸ್ ನಲ್ಲಿ ಸ್ಕೋಪ್ ಆಫ್ ವೇರ...") |
PoojaMoolya (Talk | contribs) |
||
Line 75: | Line 75: | ||
|ಇಲ್ಲಿ, ನಾವು add ಫಂಕ್ಷನ್ ಅನ್ನು ವಿತೌಟ್ ಆರ್ಗ್ಯುಮೆಂಟ್ಸ್ ಆಗಿ ಡಿಕ್ಲೇರ್ ಮಾಡಿದ್ದೇವೆ. | |ಇಲ್ಲಿ, ನಾವು add ಫಂಕ್ಷನ್ ಅನ್ನು ವಿತೌಟ್ ಆರ್ಗ್ಯುಮೆಂಟ್ಸ್ ಆಗಿ ಡಿಕ್ಲೇರ್ ಮಾಡಿದ್ದೇವೆ. | ||
|- | |- | ||
− | |01:59 | + | | 01:59 |
|ಇಲ್ಲಿ, ಸಮ್ ಎಂಬುದು ಲೋಕಲ್ ವೇರಿಯೇಬಲ್, ಇದನ್ನು add ಫಂಕ್ಷನ್ ನ ಒಳಗೆ ಡಿಕ್ಲೇರ್ ಮಾಡಲಾಗಿದೆ. | |ಇಲ್ಲಿ, ಸಮ್ ಎಂಬುದು ಲೋಕಲ್ ವೇರಿಯೇಬಲ್, ಇದನ್ನು add ಫಂಕ್ಷನ್ ನ ಒಳಗೆ ಡಿಕ್ಲೇರ್ ಮಾಡಲಾಗಿದೆ. | ||
|- | |- | ||
Line 226: | Line 226: | ||
|- | |- | ||
| 06:41 | | 06:41 | ||
− | |ಮತ್ತೆ ಎಕ್ಸಿಕ್ಯೂಟ್ ಮಾಡೋಣ. | + | |ಮತ್ತೆ ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹಿಂತಿರುಗಿ. |
− | + | ||
− | + | ||
− | + | ||
|- | |- | ||
| 06:45 | | 06:45 |
Latest revision as of 17:28, 17 March 2017
Time | Narration |
00:01 | ಸಿ ಮತ್ತು ಸಿ ಪ್ಲಸ್ ಪ್ಲಸ್ ನಲ್ಲಿ ಸ್ಕೋಪ್ ಆಫ್ ವೇರಿಯೇಬಲ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವ ಅಂಶಗಳು: |
00:11 | ಸ್ಕೋಪ್ ಆಫ್ ವೇರಿಯೇಬಲ್ ಎಂದರೇನು? |
00:13 | ಗ್ಲೋಬಲ್ ವೇರಿಯೇಬಲ್ ಎಂದರೇನು? |
00:16 | ಲೋಕಲ್ ವೇರಿಯೇಬಲ್ ಎಂದರೇನು? |
00:19 | ಕೆಲವು ಉದಾಹರಣೆಗಳು ಹಾಗೂ, |
00:22 | ಕೆಲವು ಸಾಮಾನ್ಯವಾಗಿ ಆಗುವ ಎರರ್ ಗಳನ್ನೂ ಮತ್ತು ಅವುಗಳ ಪರಿಹಾರವನ್ನೂ ನೋಡೋಣ. |
00:27 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.04 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಉಪಯೋಗಿಸಿದ್ದೇನೆ. |
00:41 | ಸ್ಕೋಪ್ ಆಫ್ ವೇರಿಯೇಬಲ್ ಅನ್ನು ಪೀಠಿಕೆಯೊಂದಿಗೆ ಪ್ರಾರಂಭಿಸೋಣ. |
00:47 | ಇದು, ಒಂದು ನಿರ್ದಿಷ್ಟ ವೇರಿಯೇಬಲ್ ಅನ್ನು ಯಾವ ಪ್ರದೇಶದಲ್ಲಿ ಉಪಯೋಗಿಸಬಹುದು ಎಂಬುದನ್ನು ನಿರ್ದೇಶಿಸುತ್ತದೆ. |
00:54 | ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿರುವ ಸ್ಥಳ ಮತ್ತು ಟೈಪ್ ಗಳ ಆಧಾರದಲ್ಲಿ, ಇದನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. |
00:59 | ಗ್ಲೋಬಲ್ ವೇರಿಯೇಬಲ್ ಮತ್ತು ಲೋಕಲ್ ವೇರಿಯೇಬಲ್ |
01:05 | ಈಗ ನಾವು ಉದಾಹರಣೆಯನ್ನು ನೋಡೋಣ. |
01:07 | ನಾನೀಗಾಗಲೇ ಪ್ರೊಗ್ರಾಮ್ ಅನ್ನು ಎಡಿಟರ್ ನಲ್ಲಿ ಟೈಪ್ ಮಾಡಿದ್ದೇನೆ. |
01:10 | ಅದನ್ನು ಒಪನ್ ಮಾಡುತ್ತೇನೆ. |
01:14 | ನಮ್ಮ ಫೈಲ್ ನ ಹೆಸರು ಸ್ಕೋಪ್ ಡಾಟ್ ಸಿ ಎಂದು ಗಮನದಲ್ಲಿಡಿ. |
01:19 | ಈಗ ಕೋಡ್ ಅನ್ನು ವಿವರಿಸುತ್ತೇನೆ. |
01:23 | ಇದು ನಮ್ಮ ಹೆಡರ್ ಫೈಲ್. |
01:26 | ಇಲ್ಲಿ ನಾವು ಎರಡು ಗ್ಲೋಬಲ್ ವೇರಿಯೇಬಲ್ a ಮತ್ತು b ಗಳನ್ನು ಡಿಕ್ಲೇರ್ ಮಾಡಿದ್ದೇವೆ. |
01:32 | ಮತ್ತು, ಅದನ್ನು ಐದು ಮತ್ತು ಎರಡು ಮೌಲ್ಯದೊಂದಿಗೆ ಇನಿಶಿಯಲೈಸ್ ಮಾಡಿದ್ದೇವೆ. |
01:39 | ಗ್ಲೋಬಲ್ ವೇರಿಯೇಬಲ್ ಅನ್ನು ಪ್ರೊಗ್ರಾಮ್ ನ ಎಲ್ಲ ಫಂಕ್ಷನ್ ಗಳೂ ಉಪಯೋಗಿಸಬಹುದು. |
01:44 | ಇವುಗಳನ್ನು ಎಲ್ಲ ಫಂಕ್ಷನ್ ನ ಹೊರಗೆ ಮತ್ತು ಮೈನ್ ಫಂಕ್ಷನ್ ನ ಮೇಲೆ ಡಿಕ್ಲೇರ್ ಮಾಡಬೇಕು. |
01:51 | ಇವು ಗ್ಲೋಬಲ್ ಸ್ಕೋಪ್ ಹೊಂದಿವೆ. |
01:53 | ಇಲ್ಲಿ, ನಾವು add ಫಂಕ್ಷನ್ ಅನ್ನು ವಿತೌಟ್ ಆರ್ಗ್ಯುಮೆಂಟ್ಸ್ ಆಗಿ ಡಿಕ್ಲೇರ್ ಮಾಡಿದ್ದೇವೆ. |
01:59 | ಇಲ್ಲಿ, ಸಮ್ ಎಂಬುದು ಲೋಕಲ್ ವೇರಿಯೇಬಲ್, ಇದನ್ನು add ಫಂಕ್ಷನ್ ನ ಒಳಗೆ ಡಿಕ್ಲೇರ್ ಮಾಡಲಾಗಿದೆ. |
02:07 | ಲೋಕಲ್ ವೇರಿಯೇಬಲ್ ಎಂಬುದು ಯಾವ ಫಂಕ್ಷನ್ ನ ಒಳಗೆ ಡಿಕ್ಲೇರ್ ಮಾಡಲ್ಪಟ್ಟಿದೆಯೋ, ಅಲ್ಲಿ ಮಾತ್ರ ಉಪಯೋಗಿಸಬಹುದು. |
02:13 | ಈ ವೇರಿಯೇಬಲ್ ಗಳು ಒಂದು ಬ್ಲಾಕ್ ನ ಒಳಗೆ ಡಿಕ್ಲೇರ್ ಆಗಿವೆ. |
02:16 | ಇವು ಲೋಕಲ್ ಸ್ಕೋಪ್ ಹೊಂದಿವೆ. |
02:19 | a ಮತ್ತು b ಯ ಮೊತ್ತವು ಸಮ್ ಎಂಬ ವೇರಿಯೇಬಲ್ ನಲ್ಲಿರುತ್ತವೆ. ಇಲ್ಲಿ ನಾವು ಸಮ್ ಅನ್ನು ಪ್ರಿಂಟ್ ಮಾಡುತ್ತೇವೆ. |
02:29 | ಇದು ನಮ್ಮ ಮೈನ್ ಫಂಕ್ಷನ್. |
02:33 | add ಫಂಕ್ಷನ್ ಅನ್ನು ಕಾಲ್ ಮಾಡಿ, ಎಕ್ಸಿಕ್ಯೂಟ್ ಮಾಡುತ್ತೇವೆ. |
02:38 | ಮತ್ತು ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. |
02:40 | ಈಗ save ಒತ್ತಿ. |
02:43 | ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
02:45 | ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಂದೇ ಬಾರಿಗೆ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. |
02:55 | ಕಂಪೈಲ್ ಮಾಡಲು, “gcc” ಸ್ಪೇಸ್ ಸ್ಕೋಪ್ ಡಾಟ್ c ಸ್ಪೇಸ್ ಹೈಫನ್(-) ಒ (O) ಸ್ಪೇಸ್ ಎಸ್ ಸಿ ಒ ಎಂದು ಟೈಪ್ ಮಾಡಿ, Enter ಒತ್ತಿ. |
03:05 | ಎಕ್ಸಿಕ್ಯೂಟ್ ಮಾಡಲು ಡಾಟ್ ಸ್ಲ್ಯಾಶ್ ಎಸ್ ಸಿ ಒಎಂದು ಟೈಪ್ ಮಾಡಿ, Enter ಒತ್ತಿ. |
03:10 | ಸಮ್ ಆಫ್ a ಎಂಡ್ b ಈಸ್ ಸವೆನ್ ಎಂದು ಔಟ್ ಪುಟ್ ತೋರಿಸುತ್ತದೆ. |
03:16 | ಈಗ ಇದೇ ಪ್ರೊಗ್ರಾಮ್ ಅನ್ನು ಸಿ ಪ್ಲಸ್ ಪ್ಲಸ್ ನಲ್ಲಿ ಹೇಗೆ ಎಕ್ಸಿಕ್ಯೂಟ್ ಮಾಡುವುದೆಂದು ನೋಡೋಣ. |
03:20 | ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. ಮೊದಲು Shift, Ctrl ಮತ್ತು S ಅನ್ನು ಒಂದೇ ಬಾರಿಗೆ ಒತ್ತಿ. |
03:31 | ಈಗ ಫೈಲ್ ಅನ್ನು ಡಾಟ್ ಸಿಪಿಪಿ ಎಂಬ ಎಕ್ಸ್ಟೆಂಶನ್ ನೊಂದಿಗೆ ಸೇವ್ ಮಾಡಿ. |
03:41 | ಮೊದಲು ಹೆಡರ್ ಫೈಲ್ ಅನ್ನು ಐಒಸ್ಟ್ರೀಮ್ ಎಂದು ಬದಲಾಯಿಸೋಣ. |
03:47 | ಯೂಸಿಂಗ್ ಸ್ಟೇಟ್ಮೆಂಟ್ ಅನ್ನು ಇಲ್ಲಿ ಸೇರಿಸೋಣ. Save ಒತ್ತಿ. |
03:58 | ಗ್ಲೋಬಲ್ ಮತ್ತು ಲೋಕಲ್ ವೇರಿಯೇಬಲ್ ನ ಡಿಕ್ಲೇರೇಶನ್, ಸಿ ಪ್ಲಸ್ ಪ್ಲಸ್ ನಲ್ಲಿ ಇದೇ ರೀತಿ ಇರುತ್ತದೆ. |
04:03 | ಹಾಗಾಗಿ ಬದಲಾಯಿಸುವ ಅಗತ್ಯವಿಲ್ಲ. |
04:07 | printf ಸ್ಟೇಟ್ಮೆಂಟ್ ಬದಲಾಗಿ ಸಿಔಟ್ ಸ್ಟೇಟ್ಮೆಂಟ್ ಬರೆಯಿರಿ. |
04:13 | ಫಾರ್ಮಾಟ್ ಸ್ಪೆಸಿಫೈರ್ ಮತ್ತು ಬ್ಯಾಕ್ ಸ್ಲ್ಯಾಶ್ ಎನ್ ಗಳನ್ನು ಡಿಲೀಟ್ ಮಾಡಿ. |
04:17 | ”,” (comma) ಅನ್ನು ಡಿಲೀಟ್ ಮಾಡಿ. |
04:19 | ಈಗ, ಎರಡು ಒಪನಿಂಗ್ ಆಂಗಲ್ ಬ್ರಾಕೆಟ್ ಅನ್ನು ಟೈಪ್ ಮಾಡಿ. |
04:22 | ಕ್ಲೋಸಿಂಗ್ ಬ್ರಾಕೆಟ್ ಅನ್ನು ಡಿಲೀಟ್ ಮಾಡಿ, ಮತ್ತೆ ಎರಡು ಒಪನಿಂಗ್ ಆಂಗಲ್ ಬ್ರಾಕೆಟ್ ಅನ್ನು ಟೈಪ್ ಮಾಡಿ. |
04:26 | ಮತ್ತು, ಡಬಲ್ ಕೋಟ್ಸ್ ನ ಒಳಗೆ ಬ್ಯಾಕ್ ಸ್ಲ್ಯಾಷ್ ಎನ್ ಎಂದು ಟೈಪ್ ಮಾಡಿ. Save ಒತ್ತಿ. |
04:35 | ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
04:39 | ನಮ್ಮ ಟರ್ಮಿನಲ್ ಗೆ ಹಿಂತಿರುಗಿ, |
04:42 | ಕಂಪೈಲ್ ಮಾಡಲು, ಜಿ ಪ್ಲಸ್ ಪ್ಲಸ್ ಸ್ಕೋಪ್ ಡಾಟ್ ಸಿಪಿಪಿ ಹೈಫನ್ ಒ ಎಸ್ ಸಿ ಒ ಒನ್ ಎಂದು ಟೈಪ್ ಮಾಡಿ. |
04:52 | ಎಸ್ ಸಿ ಒ ಎಂಬ ಔಟ್ ಪುಟ್ ಫೈಲ್, ಓವರ್ ರೈಟ್ ಆಗದಿರಲು, ಇಲ್ಲಿ ಎಸ್ ಸಿ ಒ ಒನ್ ಎಂದು ಟೈಪ್ ಮಾಡಿದ್ದೇವೆ. |
05:04 | ಈಗ, Enter ಒತ್ತಿ. |
05:07 | ಎಕ್ಸಿಕ್ಯೂಟ್ ಮಾಡಲು ಡಾಟ್ ಸ್ಲ್ಯಾಶ್ ಎಸ್ ಸಿ ಒ ಒನ್ ಎಂದು ಟೈಪ್ ಮಾಡಿ. |
05:14 | ಸಮ್ ಆಫ್ a ಎಂಡ್ b ಈಸ್ ಸವೆನ್ ಎಂದು ಔಟ್ ಪುಟ್ ತೋರಿಸುತ್ತದೆ. |
05:19 | ಇದು ನಮ್ಮ ಸಿ ಕೋಡ್ ನಂತಿರುವುದನ್ನು ನೋಡಬಹುದು. |
05:27 | ಈಗ ನಾವು ಸಾಮಾನ್ಯವಾಗಿ ಆಗುವ ಕೆಲವು ಎರರ್ ಗಳನ್ನು ನೋಡೋಣ. |
05:31 | ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ, ಇಲ್ಲಿ ನಾನು a ಎಂಬ ವೇರಿಯೇಬಲ್ ಅನ್ನು ಪುನಃ ಡಿಕ್ಲೇರ್ ಮಾಡುತ್ತೇನೆ ಎಂದೆಣಿಸಿ. |
05:41 | ಇಂಟ್ a ಸೆಮಿಕೊಲನ್ ಎಂದು ಟೈಪ್ ಮಾಡಿ. |
05:45 | Save ಒತ್ತಿ, ನಾವು ವೇರಿಯೇಬಲ್ a ಯನ್ನು ಮೈನ್ ಫಂಕ್ಷನ್ ನ ಮೇಲೆ ಹಾಗೂ add ಫಂಕ್ಷನ್ ನ ನಂತರ ಡಿಕ್ಲೇರ್ ಮಾಡಿದ್ದೇವೆ. |
05:55 | ಏನಾಗುತ್ತದೆ ಎಂದು ನೋಡೋಣ. |
05:57 | ನಮ್ಮ ಟರ್ಮಿನಲ್ ಗೆ ಹಿಂತಿರುಗಿ. |
06:01 | ಮೊದಲಿನಂತೆ ಕಂಪೈಲ್ ಮಾಡಿ. |
06:05 | ರಿಡೆಫಿನಿಶನ್ ಆಫ್ ಇಂಟ್ a, ಇಂಟ್ a ಪ್ರಿವಿಯಸ್ಲಿ ಡೆಫೈಂಡ್ ಹಿಯರ್ ಎಂದು ಎರರ್ ನೋಡಬಹುದು. ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. |
06:18 | a ಎಂಬುದು ಗ್ಲೋಬಲ್ ವೇರಿಯೇಬಲ್. |
06:20 | ಇದು ಗ್ಲೋಬಲ್ ಸ್ಕೋಪ್ ಹೊಂದಿದೆ. |
06:22 | ಈಗಾಗಲೇ ಈ ವೇರಿಯೇಬಲ್ ಗ್ಲೋಬಲ್ ಆಗಿ ಡಿಕ್ಲೇರ್ ಆಗಿರುವುದರಿಂದ, ನಾವು, ಈ ವೇರಿಯೇಬಲ್ ಅನ್ನು ಪುನಃ ಡಿಕ್ಲೇರ್ ಮಾಡಲು ಆಗುವುದಿಲ್ಲ. |
06:27 | ನಾವು, ವೇರಿಯೇಬಲ್ a ಯನ್ನು ಲೋಕಲ್ ಆಗಿ ಮಾತ್ರ ಡಿಕ್ಲೇರ್ ಮಾಡಬಹುದು. |
06:34 | ಈ ಎರರ್ ಅನ್ನು ಸರಿಪಡಿಸೋಣ. |
06:36 | ಇದನ್ನು ಡಿಲೀಟ್ ಮಾಡಿ. |
06:39 | Save ಒತ್ತಿ. |
06:41 | ಮತ್ತೆ ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹಿಂತಿರುಗಿ. |
06:45 | ಮೊದಲಿನಂತೆ ಕಂಪೈಲ್ ಮಾಡಿ, ಮೊದಲಿನಂತೆ ಎಕ್ಸಿಕ್ಯೂಟ್ ಮಾಡಿ. |
06:49 | ಹೌದು, ಇದು ಕೆಲಸ ಮಾಡುತ್ತಿದೆ. |
06:52 | ಇಲ್ಲಿಗೆ, ಈ ಟ್ಯುಟೋರಿಯಲ್ ಮುಗಿಯುತ್ತದೆ. |
06:56 | ಸಾರಾಂಶ ತಿಳಿಯೋಣ. |
06:58 | ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು: |
07:00 | ವೇರಿಯೇಬಲ್ ನ ಸ್ಕೋಪ್, |
07:02 | ಗ್ಲೋಬಲ್ ವೇರಿಯೇಬಲ್, ಉದಾಹರಣೆ ಗೆ ಇಂಟ್ a ಇಸ್ ಈಕ್ವಲ್ ಟು ಫೈವ್ ಮತ್ತು |
07:07 | ಲೋಕಲ್ ವೇರಿಯೇಬಲ್ ಉದಾಹರಣೆಗೆ ಇಂಟ್ ಸಮ್. |
07:12 | ಎರಡು ಸಂಖ್ಯೆಗಳ ವ್ಯತ್ಯಾಸವನ್ನು ಪ್ರಿಂಟ್ ಮಾಡಲು ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ. |
07:19 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. |
07:22 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
07:25 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
07:30 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, |
07:32 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. |
07:35 | ಆನ್ ಲೈನ್ ಟೆಸ್ಟ್ ನಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
07:40 | ಹೆಚ್ಚಿನ ಮಾಹಿತಿಗಾಗಿ, ಕಾಂಟಾಕ್ಟ್ ಆಟ್ (at)ಸ್ಪೋಕನ್ ಹೈಫನ್ (-) ಟ್ಯುಟೋರಿಯಲ್ ಡಾಟ್ ಆರ್ಗ್ ಗೆ ಬರೆಯಿರಿ. |
07:47 | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. |
07:52 | ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
08:00 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ. |
08:04 | ಈ ಟ್ಯುಟೋರಿಯಲ್ ನ ಅನುವಾದಕಿ ಚೇತನಾ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |