Difference between revisions of "Introduction-to-Computers/C2/Getting-to-know-computers/Kannada"
From Script | Spoken-Tutorial
Line 49: | Line 49: | ||
|- | |- | ||
| 01:08 | | 01:08 | ||
− | | 'Input unit', | + | | 'Input unit', 'Central Processing unit' ಹಾಗೂ |
− | + | ||
− | + | ||
− | + | ||
|- | |- | ||
| 01:11 | | 01:11 | ||
Line 103: | Line 100: | ||
|- | |- | ||
| 02:38 | | 02:38 | ||
− | |* 'Monitor' (ಮಾನಿಟರ್) | + | |* 'Monitor' (ಮಾನಿಟರ್) 'CPU' (ಸಿ-ಪಿ-ಯು) |
− | + | ||
− | + | ||
− | + | ||
|- | |- | ||
| 02:40 | | 02:40 | ||
− | |* 'Keyboard' (ಕೀ ಬೋರ್ಡ್) ಮತ್ತು | + | |* 'Keyboard' (ಕೀ ಬೋರ್ಡ್) ಮತ್ತು 'ಮೌಸ್ ' (ಮೌಸ್). |
− | + | ||
− | + | ||
− | + | ||
|- | |- | ||
| 02:43 | | 02:43 |
Latest revision as of 17:27, 17 March 2017
Time | Narration |
00:01 | Getting to know computers ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ (Spoken Tutorial) ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು |
00:09 | ಕಂಪ್ಯೂಟರ್ ನ ವಿವಿಧ ಘಟಕಗಳ ಬಗ್ಗೆ ಕಲಿಯುವೆವು. |
00:11 | ನಾವು ವಿವಿಧ ಘಟಕಗಳನ್ನು ಸೇರಿಸಲು ಸಹ ಕಲಿಯುವೆವು. |
00:15 | ಸಾಮಾನ್ಯವಾಗಿ, ಕಂಪ್ಯೂಟರ್ಗಳಲ್ಲಿ ಎರಡು ವಿಧಗಳಿವೆ - |
00:18 | ‘ಡೆಸ್ಕ್ಟಾಪ್’ ಅಥವಾ 'ಪರ್ಸನಲ್ ಕಂಪ್ಯೂಟರ್' ಮತ್ತು 'ಲ್ಯಾಪ್ಟಾಪ್'. |
00:23 | ಇತ್ತೀಚಿನ ದಿನಗಳಲ್ಲಿ, ‘ಚಿಕ್ಕದಾಗಿ 'ಟ್ಯಾಬ್ಸ್' ಎಂದು ಕರೆಯಲ್ಪಡುವ ಟ್ಯಾಬ್ಲೆಟ್ PC’ ಗಳು ಸಹ ಸಾಕಷ್ಟು ಜನಪ್ರಿಯವಾಗಿವೆ. |
00:31 | ಕಂಪ್ಯೂಟರ್ ನ ಕಾರ್ಯಗಳು - |
00:33 | 'ಕಂಪ್ಯೂಟರ್', ಅದರ ಗಾತ್ರವನ್ನು ಲೆಕ್ಕಿಸದೆ ಐದು ಮುಖ್ಯ ಕಾರ್ಯಗಳನ್ನು ಮಾಡುತ್ತದೆ - |
00:40 | * ಅದು 'ಡೇಟಾ' ಅಥವಾ 'ಇನ್ಸ್ಟ್ರಕ್ಶನ್'ಗಳನ್ನು 'ಇನ್ಪುಟ್' ಮುಖಾಂತರ ತೆಗೆದುಕೊಳ್ಳುತ್ತದೆ. |
00:45 | * 'ಡೇಟಾ'ವನ್ನು ಬಳಕೆದಾರನಿಗೆ (ಯೂಸರ್) ಬೇಕಾದಂತೆ ಪರಿಷ್ಕರಿಸುತ್ತದೆ. |
00:50 | * ಅದನ್ನು ಸಂಗ್ರಹಿಸುತ್ತದೆ. |
00:52 | * 'ಔಟ್ಪುಟ್'ನ ರೂಪದಲ್ಲಿ ಫಲಿತಾಂಶವನ್ನು ಕೊಡುತ್ತದೆ. |
00:56 | * 'ಕಂಪ್ಯೂಟರ್'ನ ಒಳಗಿನ ಎಲ್ಲ ಕಾರ್ಯಾಚರಣೆಯನ್ನು ನಿಯಂತ್ರಿಸುತ್ತದೆ. |
01:01 | 'ಕಂಪ್ಯೂಟರ್'ನ ಮೂಲಭೂತ ಸಂಘಟನೆಯು, ಈ ‘ಬ್ಲಾಕ್ ಡೈಗ್ರಾಂ’ನಲ್ಲಿ ತೋರಿಸಿದಂತೆ ಇರುತ್ತದೆ. |
01:08 | 'Input unit', 'Central Processing unit' ಹಾಗೂ |
01:11 | 'Output unit'. |
01:14 | 'ಇನ್ಪುಟ್ ಯುನಿಟ್', |
01:16 | 'ಡೇಟಾ' ಮತ್ತು ಪ್ರೊಗ್ರಾಂಗಳನ್ನು 'ಕಂಪ್ಯೂಟರ್' ಸಿಸ್ಟಂನಲ್ಲಿ ಒಂದು ವ್ಯವಸ್ಥಿತ ರೀತಿಯಲ್ಲಿ ನಮೂದಿಸಲು (enter) ಸಹಾಯ ಮಾಡುತ್ತದೆ. |
01:23 | 'ಕೀ ಬೋರ್ಡ್, ಮೌಸ್, ಕ್ಯಾಮೆರಾ' ಮತ್ತು 'ಸ್ಕ್ಯಾನರ್' ಇವುಗಳು ಕೆಲವು ಇನ್ಪುಟ್ ಸಾಧನಗಳಾಗಿವೆ. |
01:31 | 'ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್' (Central Processing unit), |
01:33 | ಅಂಕಗಣಿತ ಮತ್ತು ಲಾಜಿಕಲ್ ಕ್ರಿಯೆಗಳನ್ನು (operations) ಮಾಡುತ್ತದೆ ಮತ್ತು |
01:38 | 'ಡೇಟಾ' ಹಾಗೂ 'ಇನ್ಸ್ಟ್ರಕ್ಶನ್'ಗಳನ್ನು ಸಂಗ್ರಹಿಸುತ್ತದೆ (store). |
01:41 | ಸಾಮಾನ್ಯವಾಗಿ, 'ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್' ಅಥವಾ 'CPU' ಹೀಗೆ ಕಾಣುತ್ತದೆ. |
01:48 | ಯೂನಿಟ್ ನ ಮುಂದೆ ಹಾಗೂ ಹಿಂದೆ ಅನೇಕ 'ಪೋರ್ಟ್'ಗಳಿವೆ. |
01:53 | ಶೀಘ್ರದಲ್ಲಿಯೇ ನಾವು ಅವುಗಳ ಬಗ್ಗೆ ಕಲಿಯುವೆವು. |
01:57 | ಇದು 'ಡೇಟಾ' ಹಾಗೂ 'ಇನ್ಸ್ಟ್ರಕ್ಶನ್'ಗಳನ್ನು ತೆಗೆದುಕೊಳ್ಳುತ್ತದೆ, ಅವುಗಳನ್ನು ಪರಿಷ್ಕರಿಸುತ್ತದೆ ಮತ್ತು ಔಟ್ಪುಟ್ ಅಥವಾ ಫಲಿತಾಂಶವನ್ನು ಕೊಡುತ್ತದೆ. |
02:05 | ಈ ಕಾರ್ಯಾಚರಣೆಗಳನ್ನು (operations) ಮಾಡುವುದನ್ನು ‘ಪ್ರೊಸೆಸಿಂಗ್’ ಎಂದು ಕರೆಯಲಾಗುತ್ತದೆ. |
02:11 | ಆಮೇಲೆ ಔಟ್ಪುಟ್ ಅನ್ನು 'ಡೇಟಾ' ಹಾಗೂ 'ಇನ್ಸ್ಟ್ರಕ್ಶನ್'ಗಳ ಜೊತೆಗೆ ‘ಸ್ಟೋರೇಜ್ ಯೂನಿಟ್’ನಲ್ಲಿ ಸಂಗ್ರಹಿಸಲಾಗುತ್ತದೆ. |
02:18 | ‘ಔಟ್ಪುಟ್ ಯೂನಿಟ್’ ಎಂಬ ಘಟಕವು, ಡೇಟಾದಿಂದ ಫಲಿತಾಂಶಗಳನ್ನು ಉತ್ಪಾದಿಸುವ ಪ್ರಕ್ರಿಯೆಯನ್ನು ಮಾಡುತ್ತದೆ. |
02:26 | 'ಮಾನಿಟರ್' ಮತ್ತು 'ಪ್ರಿಂಟರ್'ಗಳು ಕೆಲವು ' ಔಟ್ಪುಟ್' ಸಾಧನಗಳಾಗಿವೆ. |
02:33 | ಸಾಮಾನ್ಯವಾಗಿ 'ಡೆಸ್ಕ್ಟಾಪ್ ಕಂಪ್ಯೂಟರ್', 4 ಮುಖ್ಯ ಘಟಕಗಳನ್ನು ಹೊಂದಿದೆ: |
02:38 | * 'Monitor' (ಮಾನಿಟರ್) 'CPU' (ಸಿ-ಪಿ-ಯು) |
02:40 | * 'Keyboard' (ಕೀ ಬೋರ್ಡ್) ಮತ್ತು 'ಮೌಸ್ ' (ಮೌಸ್). |
02:43 | 'ಕ್ಯಾಮೆರಾ, ಪ್ರಿಂಟರ್' ಅಥವಾ 'ಸ್ಕ್ಯಾನರ್' ಗಳನ್ನು ಸಹ ಕಂಪ್ಯೂಟರ್ ಗೆ ಜೋಡಿಸಬಹುದು (connect). |
02:50 | ಇದು ಮಾನಿಟರ್ ಅಥವಾ ನಾವು ಕರೆಯುವಂತೆ 'ಕಂಪ್ಯೂಟರ್ ಸ್ಕ್ರೀನ್' ಆಗಿದೆ. |
02:55 | ಇದು 'TV ಪರದೆ'ಯ ಹಾಗೆ ಕಾಣುತ್ತದೆ. |
02:57 | ಇದು 'ಕಂಪ್ಯೂಟರ್ ನ 'ವಿಜುವಲ್ ಡಿಸ್ಪ್ಲೇ ಯೂನಿಟ್' ಆಗಿದೆ. |
03:02 | ಇದು ಕಂಪ್ಯೂಟರ್ ನ 'ಯೂಸರ್ ಇಂಟರ್ಫೇಸ್'ಅನ್ನು ತೋರಿಸುತ್ತದೆ. |
03:05 | ನಾವು ಕೀಬೋರ್ಡ್ ಮತ್ತು ಮೌಸ್ ಗಳನ್ನು ಬಳಸಿ, ವಿವಿಧ ಪ್ರೊಗ್ರಾಂಗಳನ್ನು ಓಪನ್ ಮಾಡಬಹುದು ಮತ್ತು ಕಂಪ್ಯೂಟರ್ ನೊಂದಿಗೆ ಪರಸ್ಪರ ವ್ಯವಹಾರ (interact) ಮಾಡಬಹುದು. |
03:13 | ಟೆಕ್ಸ್ಟ್, ಅಕ್ಷರಗಳು ಮತ್ತು ಇನ್ನಿತರ ‘ಕಮಾಂಡ್’ಗಳನ್ನು ಕಂಪ್ಯೂಟರ್ ನಲ್ಲಿ ಸೇರಿಸಲು (enter), ಕೀಬೋರ್ಡ್ ಅನ್ನು ವಿನ್ಯಾಸ ಮಾಡಲಾಗಿದೆ. |
03:21 | ಇದು ಕಂಪ್ಯೂಟರ್ ನ ಮೌಸ್ ಆಗಿದೆ. |
03:24 | ಸಾಮಾನ್ಯವಾಗಿ ಇದು, 2 (ಎರಡು) ಕ್ಲಿಕ್ ಮಾಡಬಲ್ಲ ಬಟನ್ ಗಳನ್ನು ಮತ್ತು ಮಧ್ಯದಲ್ಲಿ ಒಂದು ' ಸ್ಕ್ರೋಲ್' ಬಟನ್ ಅನ್ನು ಹೊಂದಿದೆ. |
03:31 | 'ಲೆಫ್ಟ್ ಮೌಸ್ ಬಟನ್' (‘ಮೌಸ್’ನ ಎಡ ಗುಂಡಿ) ಅನ್ನು ಒತ್ತಿ, ಬಹುಮಟ್ಟಿಗೆ ಎಲ್ಲ ಕ್ರಿಯೆಗಳನ್ನು ಸಕ್ರಿಯಗೊಳಿಸಲಾಗುತ್ತದೆ. |
03:35 | 'ರೈಟ್ ಮೌಸ್ ಬಟನ್' ಅನ್ನು ಒತ್ತಿ, ‘ಶಾರ್ಟ್ಕಟ್’ (shortcut) ನಂತಹ ಹೆಚ್ಚು ಸ್ಟಾಂಡರ್ಡ್ ಅಲ್ಲದ ಕ್ರಿಯೆಗಳನ್ನು ಸಕ್ರಿಯಗೊಳಿಸಲಾಗುತ್ತದೆ. |
03:43 | ' ಸ್ಕ್ರೋಲ್ ಬಟನ್' ಅನ್ನು ಉರುಳಿಸಿ ಮೇಲೆ ಕೆಳಗೆ ಸ್ಕ್ರೋಲ್ ಮಾಡಲು 'ಮೌಸ್ ವ್ಹೀಲ್'ಅನ್ನು ಬಳಸಲಾಗುತ್ತದೆ. |
03:49 | ಕೀಬೋರ್ಡ್ ನ ಹೊರತಾಗಿ, 'ಕಂಪ್ಯೂಟರ್'ನೊಂದಿಗೆ ವ್ಯವಹರಿಸಲು 'ಕಂಪ್ಯೂಟರ್ ಮೌಸ್', ಒಂದು ಪರ್ಯಾಯವಾದ ವಿಧಾನವಾಗಿದೆ. |
03:57 | ಈಗ, 'CPU' ನ ವಿವಿಧ ಭಾಗಗಳನ್ನು ನಾವು ನೋಡೋಣ. |
04:02 | ಇಲ್ಲಿ, 'CPU' ನ ಮುಂಭಾಗದಲ್ಲಿ, ಒಂದು ಪ್ರಮುಖವಾದ ಬಟನ್ ಇದೆ. ಇದು 'POWER ON' (ಪಾವರ್ ಆನ್) ಸ್ವಿಚ್ ಆಗಿದೆ. |
04:08 | 'ಕಂಪ್ಯೂಟರ್'ಅನ್ನು ‘ಆನ್’ (ON) ಮಾಡಲು , ಈ ಸ್ವಿಚ್ ಅನ್ನು ಒತ್ತುವುದು ಅವಶ್ಯವಾಗಿದೆ. |
04:14 | ಇಲ್ಲಿ ಒಂದು 'reset' (ರಿ-ಸೆಟ್) ಬಟನ್ ಸಹ ಇದೆ. ಅಗತ್ಯವಿದ್ದಾಗ, 'ಕಂಪ್ಯೂಟರ್'ಅನ್ನು 'ರಿ-ಸ್ಟಾರ್ಟ್' (restart) ಮಾಡಲು ಇದು ನಮಗೆ ಸಹಾಯ ಮಾಡುತ್ತದೆ. |
04:21 | ಅಲ್ಲದೇ, ಮುಂಭಾಗದಲ್ಲಿ, ಎರಡು ಅಥವಾ ಅದಕ್ಕಿಂತ ಹೆಚ್ಚು 'USB ಪೋರ್ಟ್'ಗಳನ್ನು ಮತ್ತು ಒಂದು 'DVD/CD-ROM ರೀಡರ್-ರೈಟರ್'ಅನ್ನು ನೀವು ನೋಡುವಿರಿ. |
04:30 | 'ಪೆನ್-ಡ್ರೈವ್’ಗಳನ್ನು ಕಂಪ್ಯೂಟರ್ ಗೆ ಜೋಡಿಸಲು 'USB ಪೋರ್ಟ್'ಗಳನ್ನು ಬಳಸಲಾಗುತ್ತದೆ. |
04:35 | ಮತ್ತು 'CD' ಅಥವಾ 'DVD'ಯನ್ನು, ‘ರೀಡ್’ (ಓದಲು) ಅಥವಾ ‘ರೈಟ್’ ಮಾಡಲು (ಬರೆಯಲು) 'DVD/CD-ROM ರೀಡರ್-ರೈಟರ್'ಅನ್ನು ಬಳಸಲಾಗುತ್ತದೆ. |
04:43 | ಈಗ ನಾವು ಕಂಪ್ಯೂಟರ್ ನ ಹಿಂಭಾಗವನ್ನು ನೋಡೋಣ. |
04:48 | 'CPU' ಅನ್ನು ಕಂಪ್ಯೂಟರ್ ನ ಇತರ ಸಾಧನಗಳಿಗೆ ಜೋಡಿಸಲು, ಹಿಂಭಾಗದಲ್ಲಿಯ ಪೋರ್ಟ್ ಗಳು ಬಳಸಲ್ಪಡುತ್ತವೆ. |
04:55 | 'ಕೇಬಲ್’ಗಳನ್ನು ಬಳಸಿ ಇದನ್ನು ಮಾಡಲಾಗುತ್ತದೆ. |
04:58 | 'CPU'ನ ಒಳಗಡೆ ಅನೇಕ ಘಟಕಗಳಿವೆ (components). |
05:02 | ಕಂಪ್ಯೂಟರ್ ON ಇದ್ದಾಗ, ಈ ಎಲ್ಲ ಘಟಕಗಳು ಕೆಲಸ ಮಾಡುತ್ತವೆ ಮತ್ತು ಶಾಖವನ್ನು ಉತ್ಪತ್ತಿ ಮಾಡುತ್ತವೆ. |
05:08 | ಹಿಂಭಾಗದಲ್ಲಿನ 'ಫ್ಯಾನ್'ಗಳು, ಘಟಕಗಳನ್ನು ತಂಪಾಗಿಸಲು ಬೇಕಾದ ಗಾಳಿಯ ಸಂಚಾರವನ್ನು ಒದಗಿಸುತ್ತವೆ. |
05:14 | ಇಲ್ಲದಿದ್ದರೆ, ಅತಿಯಾದ ತಾಪವು 'CPU' ಗೆ ಹಾನಿಯನ್ನುಂಟುಮಾಡಬಹುದು. ಅನೇಕ ವೇಳೆ ಇದು ಡೇಟಾದ ನಷ್ಟಕ್ಕೆ ಕಾರಣವಾಗಬಹುದು. |
05:21 | ಇದು 'ಕೇಸ್ ಕೂಲಿಂಗ್ ಫ್ಯಾನ್' ಆಗಿದೆ. |
05:23 | ಇದು 'CPU' ನ ತಾಪಮಾನವನ್ನು ಸಹಜ ಸ್ಥಿತಿಯಲ್ಲಿ ಇಡುತ್ತದೆ ಮತ್ತು ಹೆಚ್ಚು ಬಿಸಿಯಾಗುವುದನ್ನು ತಡೆಗಟ್ಟುತ್ತದೆ. |
05:30 | 'PSU' ಎಂದು ಸಹ ಕರೆಯಲ್ಪಡುವ 'ಪವರ್ ಸಪ್ಲೈ ಯೂನಿಟ್', ಕಂಪ್ಯೂಟರ್ ಗೆ ವಿದ್ಯುಚ್ಛಕ್ತಿಯನ್ನು ಒದಗಿಸುತ್ತದೆ. |
05:37 | ಈಗ, 'CPU' ಗೆ ವಿವಿಧ ಘಟಕಗಳನ್ನು ಹೇಗೆ ಕನೆಕ್ಟ್ ಮಾಡುವುದೆಂದು ನಾವು ತಿಳಿಯೋಣ. |
05:42 | ಇಲ್ಲಿ ತೋರಿಸಿದಂತೆ, ಎಲ್ಲ ಕಾಂಪೋನೆಂಟ್ ಗಳನ್ನು ಟೇಬಲ್ ಮೇಲೆ ಇರಿಸಿ. |
05:46 | ಹಾಗೆಯೇ, ಎಲ್ಲ ಕೇಬಲ್ ಗಳನ್ನು ಟೇಬಲ್ ಮೇಲೆ ಇರಿಸಿ. |
05:51 | ಮೊದಲು, ನಾವು ಮಾನಿಟರ್ ಅನ್ನು 'CPU' ಗೆ ಜೋಡಿಸೋಣ (connect). |
05:55 | ಇಲ್ಲಿ ತೋರಿಸಿದಂತೆ, ‘ಪವರ್ ಕೇಬಲ್’ಅನ್ನು ಮಾನಿಟರ್ ಗೆ ಜೋಡಿಸಿ. |
06:00 | ಈಗ, ಇನ್ನೊಂದು ತುದಿಯನ್ನು 'ಪವರ್ ಸಪ್ಪ್ಲೈ ಸಾಕೆಟ್ ಗೆ' ಕನೆಕ್ಟ್ ಮಾಡಿ. |
06:04 | ಇದು CPU ನ ಪವರ್-ಕೇಬಲ್ ಆಗಿದೆ. |
06:08 | ಇಲ್ಲಿ ತೋರಿಸಿದಂತೆ, ಇದನ್ನು 'CPU' ಗೆ ಸೇರಿಸಿ. |
06:11 | ಆಮೇಲೆ, ಇದನ್ನು 'ಪವರ್ ಸಪ್ಪ್ಲೈ ಸಾಕೆಟ್ ಗೆ' ಕನೆಕ್ಟ್ ಮಾಡಿ. |
06:14 | ನಂತರ ಇಲ್ಲಿ ತೋರಿಸಿದಂತೆ, ಕೀಬೋರ್ಡ್ ಕೇಬಲ್ ಅನ್ನು 'CPU' ಗೆ ಕನೆಕ್ಟ್ ಮಾಡಿ. |
06:19 | ಕೀಬೋರ್ಡ್ ಗಾಗಿ ಇರುವ ಪೋರ್ಟ್, ಸಾಮಾನ್ಯವಾಗಿ ನೇರಳೆ (purple) ಬಣ್ಣದ್ದಾಗಿರುತ್ತದೆ. |
06:23 | 'ಮೌಸ್'ಅನ್ನು ನೀವು ಹಸಿರು (green) ಬಣ್ಣದ ಪೋರ್ಟ್ ಗೆ ಕನೆಕ್ಟ್ ಮಾಡಬಹುದು. |
06:28 | ಪರ್ಯಾಯವಾಗಿ, 'USB ಕೀಬೋರ್ಡ್' ಮತ್ತು 'ಮೌಸ್'ಅನ್ನು ನೀವು ಯಾವುದೇ 'USB ಪೋರ್ಟ್'ಗಳಿಗೆ ಕನೆಕ್ಟ್ ಮಾಡಬಹುದು. |
06:35 | ಇನ್ನುಳಿದ 'USB ಪೋರ್ಟ್'ಗಳನ್ನು ‘ಪೆನ್ ಡ್ರೈವ್, ಹಾರ್ಡ್ ಡಿಸ್ಕ್’ ಇತ್ಯಾದಿಗಳನ್ನು ಕನೆಕ್ಟ್ ಮಾಡಲು ಬಳಸಬಹುದು. |
06:42 | ಇದು ‘LAN ಕೇಬಲ್’ |
06:44 | ಮತ್ತು ಇದು LAN ಪೋರ್ಟ್ ಆಗಿದೆ. |
06:46 | ಇದು, ಕಂಪ್ಯೂಟರ್ ಅನ್ನು ಒಂದು ನೆಟ್ವರ್ಕ್ ಗೆ ಕನೆಕ್ಟ್ ಮಾಡಲು ಅನುಮತಿಸುವ ಒಂದು ‘ವೈಯರ್ಡ್ ಕನೆಕ್ಷನ್’ (ತಂತಿ ಸಂಪರ್ಕ) ಆಗಿದೆ. |
06:52 | ‘LAN ಕೇಬಲ್’ನ ಇನ್ನೊಂದು ಕೊನೆಯನ್ನು ‘ಮೊಡೆಮ್’ ಅಥವಾ ‘wi-fi ರೌಟರ್’ಗೆ ಕನೆಕ್ಟ್ ಮಾಡಲಾಗಿದೆ. |
06:58 | ನೀವು ‘wi-fi ಕನೆಕ್ಷನ್’ಗಳನ್ನು ಸಂರಚಿಸುವ (configuring) ಬಗ್ಗೆ ಬೇರೊಂದು ಟ್ಯುಟೋರಿಯಲ್ ನಲ್ಲಿ ಕಲಿಯುವಿರಿ. |
07:03 | ‘LAN ಪೋರ್ಟ್’ ಸಕ್ರಿಯವಾಗಿದ್ದಾಗ ಮತ್ತು ಚಟುವಟಿಕೆಯನ್ನು ಪಡೆಯುತ್ತಿರುವಾಗ ‘LED ಲೈಟ್’ ಮಿನುಗುವುದು. |
07:10 | ‘CPU’ನ ಮೇಲೆ ಬೇರೆ ‘ಸೀರಿಯಲ್ ಪೋರ್ಟ್’ಗಳಿರುವುದನ್ನು ನೀವು ಗಮನಿಸಬಹುದು. |
07:15 | ‘PDAಗಳು, ಇವುಗಳನ್ನು ಮೊಡೆಮ್’ ಅಥವಾ ಇತರ ‘ಸೀರಿಯಲ್ ಡಿವೈಸ್’ಗಳನ್ನು ಕನೆಕ್ಟ್ ಮಾಡಲು ಬಳಸಲಾಗುತ್ತದೆ. |
07:21 | ‘CPU’ನ ಮೇಲೆ, ಕೆಲವು ‘ಪ್ಯಾರಲಲ್ ಪೋರ್ಟ್’ಗಳಿರುವುದನ್ನು ಸಹ ನೀವು ಗಮನಿಸುವಿರಿ. |
07:25 | ‘ಪ್ರಿಂಟರ್, ಸ್ಕ್ಯಾನರ್’ ಗಳಂತಹ ಸಾಧನಗಳನ್ನು ಕನೆಕ್ಟ್ ಮಾಡಲು ಇವುಗಳನ್ನು ಬಳಸಲಾಗುತ್ತದೆ. |
07:31 | ಈಗ, ನಾವು ‘ಆಡಿಯೋ ಜಾಕ್’ಗಳತ್ತ ನೋಡೋಣ. |
07:34 | ‘ಮೈಕ್ರೋಫೋನ್’ಅನ್ನು ಕನೆಕ್ಟ್ ಮಾಡಲು, ಗುಲಾಬಿ ಬಣ್ಣದಲ್ಲಿರುವ (pink) ಪೋರ್ಟ್ ಅನ್ನು ಬಳಸಲಾಗುತ್ತದೆ. |
07:38 | ‘ಲೈನ್ ಇನ್’ಅನ್ನು, ಉದಾ - ರೇಡಿಯೋ ಅಥವಾ ಟೇಪ್ ಪ್ಲೇಯರ್ ಅನ್ನು ಕನೆಕ್ಟ್ ಮಾಡಲು, ನೀಲಿ ಬಣ್ಣದಲ್ಲಿರುವ ಪೋರ್ಟ್ ಇರುತ್ತದೆ. |
07:45 | ‘ಹೆಡ್-ಫೋನ್/ಸ್ಪೀಕರ್’ ಅಥವಾ ‘ಲೈನ್ ಔಟ್’ಅನ್ನು ಕನೆಕ್ಟ್ ಮಾಡಲು, ಹಸಿರು ಬಣ್ಣದಲ್ಲಿರುವ ಪೋರ್ಟ್ ಇರುತ್ತದೆ. |
07:51 | ಈಗ ನಾವು ನಮ್ಮ ಎಲ್ಲ ಡಿವೈಸ್ ಗಳನ್ನು ಕನೆಕ್ಟ್ ಮಾಡಿರುವುದರಿಂದ, ಕಂಪ್ಯೂಟರ್ ಅನ್ನು ON (ಆನ್) ಮಾಡೋಣ. |
07:57 | ಮೊಟ್ಟ ಮೊದಲು, ಮಾನಿಟರ್ ನ ಮತ್ತು ‘CPU’ನ ‘ಪವರ್ ಸಪ್ಲೈ’ ಬಟನ್ ಗಳನ್ನು ಸ್ವಿಚ್-ಆನ್ ಮಾಡಿ. |
08:03 | ಈಗ, ಮಾನಿಟರ್ ನ ಮೇಲಿರುವ ‘POWER ON’ ಬಟನ್ ಅನ್ನು ಒತ್ತಿ. |
08:07 | ಆಮೇಲೆ, ‘CPU’ನ ಮುಂಭಾಗದಲ್ಲಿರುವ ‘POWER ON’ ಸ್ವಿಚ್ ಅನ್ನು ಒತ್ತಿ. |
08:12 | ಸಾಮಾನ್ಯವಾಗಿ, ನಿಮ್ಮ ಕಂಪ್ಯೂಟರ್, ಮೊದಲನೆಯ ಸಲ ON ಆದಾಗ, ಕಪ್ಪು ಸ್ಕ್ರೀನ್ ನ ಮೇಲೆ ಶಬ್ದಗಳ ಒಂದು ಸ್ಟ್ರಿಂಗ್ ಅನ್ನು ನೀವು ನೋಡುವಿರಿ. |
08:18 | ಇದು, ಈ ಕೆಳಗಿನವುಗಳ ಬಗ್ಗೆ ಮಾಹಿತಿಯನ್ನು ತೋರಿಸುವ ‘BIOS ಸಿಸ್ಟಂ’ ಆಗಿದೆ: |
08:22 | ‘ಕಂಪ್ಯೂಟರ್'ನ ‘ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್’, |
08:25 | ಕಂಪ್ಯೂಟರ್, ಎಷ್ಟು ‘ಮೆಮರೀ’ಯನ್ನು ಹೊಂದಿದೆ ಎಂಬುದರ ಬಗ್ಗೆ ಮಾಹಿತಿ |
08:28 | ಮತ್ತು ‘ಹಾರ್ಡ್ ಡಿಸ್ಕ್ ಡ್ರೈವ್’ಗಳ ಹಾಗೂ ‘ಫ್ಲಾಪಿ ಡಿಸ್ಕ್ ಡ್ರೈವ್’ಗಳ ಬಗ್ಗೆ ಮಾಹಿತಿ. |
08:33 | 'BIOS', ಕಂಪ್ಯೂಟರ್ ಅನ್ನು ON ಮಾಡಿದಾಗ, ‘CPU’ಗೆ ಅದರ ಮೊದಲ ‘ಇನ್ಸ್ಟ್ರಕ್ಶನ್’ಗಳನ್ನು (instructions) ಕೊಡುವ ಸಾಫ್ಟ್ವೇರ್ ಆಗಿದೆ. |
08:41 | ‘ಆಪರೇಟಿಂಗ್ ಸಿಸ್ಟಂ’ ಅನ್ನು ಲೋಡ್ ಮಾಡುವ ಒಟ್ಟಾರೆ ಪ್ರಕ್ರಿಯೆಯನ್ನು ಕಂಪ್ಯೂಟರ್ ನ ‘ಬೂಟಿಂಗ್’ ಎಂದು ಕರೆಯಲಾಗುತ್ತದೆ. |
08:48 | ಅವಶ್ಯವಿರುವ ಎಲ್ಲ ತಪಾಸಣೆಗಳನ್ನು ಮಾಡಿದ ಮೇಲೆ, ‘ಆಪರೇಟಿಂಗ್ ಸಿಸ್ಟಂ’ನ ‘ಇಂಟರ್ಫೇಸ್’ಅನ್ನು ನೀವು ನೋಡುವಿರಿ. |
08:54 | ನೀವು ‘ಉಬಂಟು ಲಿನಕ್ಸ್’ಅನ್ನು ಬಳಸುತ್ತಿದ್ದರೆ, ಈ ಸ್ಕ್ರೀನ್ ಅನ್ನು ನೋಡುವಿರಿ. |
08:58 | ಮತ್ತು ನೀವು ‘ವಿಂಡೋಸ್’ಅನ್ನು ಬಳಸುತ್ತಿದ್ದರೆ, ಈ ಸ್ಕ್ರೀನ್ ಅನ್ನು ನೋಡುವಿರಿ. |
09:02 | ಈಗ, ನಾವು ಒಂದು ‘ಲ್ಯಾಪ್ಟಾಪ್’ನತ್ತ ಸ್ವಲ್ಪ ನೋಡೋಣ. |
09:06 | ‘ಲ್ಯಾಪ್ಟಾಪ್’ಗಳು, ಪೋರ್ಟೇಬಲ್ ಮತ್ತು ಕಾಂಪ್ಯಾಕ್ಟ್ ಕಂಪ್ಯೂಟರ್ ಗಳಾಗಿವೆ. |
09:09 | ‘ಲ್ಯಾಪ್ಟಾಪ್’, ಚಿಕ್ಕದಾಗಿದ್ದು ಉಪಯೋಗಿಸುವಾಗ ವ್ಯಕ್ತಿಯ ತೊಡೆಯ ಮೇಲೆ ಇಟ್ಟುಕೊಳ್ಳುವಷ್ಟು ಹಗುರವಾಗಿದೆ. |
09:16 | ಆದ್ದರಿಂದ ಇದು, ‘ಲ್ಯಾಪ್ಟಾಪ್’ ಎಂದು ಕರೆಯಲ್ಪಡುತ್ತದೆ. |
09:18 | ಇದು ಬಹುಮಟ್ಟಿಗೆ ‘ಡೆಸ್ಕ್ಟಾಪ್ ಕಂಪ್ಯೂಟರ್’ ಹೊಂದಿರುವ ಘಟಕಗಳನ್ನೇ ಹೊಂದಿದೆ. |
09:23 | ಒಂದು ಡಿಸ್ಪ್ಲೇ, |
09:24 | ಒಂದು ಕೀಬೋರ್ಡ್, |
09:25 | ಸೂಚಿಸುವ (pointing) ಮತ್ತು ನ್ಯಾವಿಗೇಟ್ ಮಾಡುವ ಸಾಧನವಾಗಿರುವ ಒಂದು ‘ಟಚ್ ಪ್ಯಾಡ್’, |
09:29 | ‘CD/DVD ರೀಡರ್-ರೈಟರ್’ ಮತ್ತು |
09:32 | ‘ಮೈಕ್’ ಹಾಗೂ ಸ್ಪೀಕರ್, ಇವುಗಳನ್ನು ಒಂದೇ ಯೂನಿಟ್ ನಲ್ಲಿ ನಿರ್ಮಿಸಲಾಗಿದೆ. |
09:36 | ಇದು ಸಹ ‘ಲಾನ್ ಪೋರ್ಟ್’ ಮತ್ತು ‘USB ಪೋರ್ಟ್’ಗಳನ್ನು ಹೊಂದಿದೆ. |
09:40 | ಇಲ್ಲಿ ಒಂದು ‘ವೀಡಿಯೊ ಪೋರ್ಟ್’ ಇದೆ. ಇದನ್ನು ಬಳಸಿ ಪ್ರೊಜೆಕ್ಟರ್ ಅನ್ನು ಲ್ಯಾಪ್ಟಾಪ್ ಗೆ ಕನೆಕ್ಟ್ ಮಾಡಬಹುದು. |
09:46 | ‘ಆಡಿಯೋ ಜಾಕ್’ಗಳನ್ನು ಮಿಕ್ ಹಾಗೂ ‘ಹೆಡ್ ಫೋನ್’ಗಳ ಆಯಾ ಐಕಾನ್ ಗಳಿಂದ ಸುಲಭವಾಗಿ ಗುರುತಿಸಬಹುದು. |
09:53 | ಇದು, ಲ್ಯಾಪ್ಟಾಪ್ ನಲ್ಲಿಯ ಇನ್-ಬಿಲ್ಟ್ ‘ಕೂಲಿಂಗ್ ಫ್ಯಾನ್’ ಆಗಿದೆ. |
09:57 | ಲ್ಯಾಪ್ಟಾಪ್, ಹೆಚ್ಚು ಬಿಸಿಯಾಗುವುದನ್ನು ತಡೆಯಲು ಇದು ಸಹಾಯ ಮಾಡುತ್ತದೆ. |
10:01 | ‘AC ಅಡಾಪ್ಟರ್’ನ ಮೂಲಕ ಲ್ಯಾಪ್ಟಾಪ್ ಗೆ ವಿದ್ಯುಚ್ಛಕ್ತಿಯನ್ನು ಪೂರೈಸಲಾಗುತ್ತದೆ ಮತ್ತು ಇದು ರೀ-ಚಾರ್ಜ್ ಮಾಡಬಹುದಾದ ಬ್ಯಾಟರಿಯನ್ನು ಹೊಂದಿದೆ. |
10:09 | ಆದ್ದರಿಂದ,ಇದು ಪೋರ್ಟೇಬಲ್ ಆಗಿದೆ ಮತ್ತು ಇದನ್ನು ವಿದ್ಯುತ್ ಮೂಲದಿಂದ ದೂರದಲ್ಲಿ ಉಪಯೋಗಿಸಬಹುದು. |
10:16 | ಸಂಕ್ಷಿಪ್ತವಾಗಿ- ಈ ಟ್ಯುಟೋರಿಯಲ್ ನಲ್ಲಿ, ನಾವು |
10:20 | ಡೆಸ್ಕ್ಟಾಪ್ ಮತ್ತು ಲ್ಯಾಪ್ಟಾಪ್ ಗಳ ವಿವಿಧ ಘಟಕಗಳ ಬಗ್ಗೆ |
10:23 | ಮತ್ತು ಡೆಸ್ಕ್ಟಾಪ್ ನ ವಿವಿಧ ಘಟಕಗಳನ್ನು ಜೋಡಿಸುವುದರ ಬಗ್ಗೆ ಕಲಿತಿದ್ದೇವೆ. |
10:28 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
10:31 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
10:34 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:37 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
10:42 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
10:46 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
10:52 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದ್ದು |
10:56 | ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
11:01 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. |
11:06 | ಈ ಟ್ಯುಟೋರಿಯಲ್ ಗಾಗಿ, ಅನಿಮೇಶನ್ ಮತ್ತು 3D ಮಾಡೆಲಿಂಗ್ ಅನ್ನು Ms. ಆರತಿ ಅವರು ಮಾಡಿದ್ದಾರೆ. |
11:11 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ . |
11:16 | ವಂದನೆಗಳು. |