Difference between revisions of "ExpEYES/C3/Steady-state-response-of-circuits/Kannada"
Sandhya.np14 (Talk | contribs) |
Sandhya.np14 (Talk | contribs) |
||
Line 20: | Line 20: | ||
|- | |- | ||
|00:34 | |00:34 | ||
− | | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು | + | | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು ಸಾಮಾನ್ಯ ಭೌತಶಾಸ್ತ್ರ ಮತ್ತು |
− | + | '''ExpEYES Junior''' ಇಂಟರ್ಫೇಸ್ ಗಳನ್ನು ಚೆನ್ನಾಗಿ ತಿಳಿದಿರಬೇಕು. | |
− | + | ||
ಇಲ್ಲದಿದ್ದರೆ, ಸಂಬಂಧಿತ '''ExpEYES'''ನ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. | ಇಲ್ಲದಿದ್ದರೆ, ಸಂಬಂಧಿತ '''ExpEYES'''ನ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. | ||
|- | |- |
Revision as of 11:33, 22 October 2016
Time | Narration |
00:01 | ನಮಸ್ಕಾರ. Steady State Response of Circuits (ಸ್ಟೆಡೀ ಸ್ಟೇಟ್ ರೆಸ್ಪಾನ್ಸ್ ಆಫ್ ಸರ್ಕೀಟ್ಸ್) ಎಂಬ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:07 | ಈ ‘ಟ್ಯುಟೋರಿಯಲ್’ನಲ್ಲಿ, ನಾವು:
ಇವುಗಳನ್ನು ಕಲಿಯುವೆವು. |
00:24 | ಇಲ್ಲಿ ನಾನು:
ಇವುಗಳನ್ನು ಬಳಸುತ್ತಿದ್ದೇನೆ. |
00:34 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು ಸಾಮಾನ್ಯ ಭೌತಶಾಸ್ತ್ರ ಮತ್ತು
ExpEYES Junior ಇಂಟರ್ಫೇಸ್ ಗಳನ್ನು ಚೆನ್ನಾಗಿ ತಿಳಿದಿರಬೇಕು. ಇಲ್ಲದಿದ್ದರೆ, ಸಂಬಂಧಿತ ExpEYESನ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. |
00:50 | ಮೊದಲು, ನಾವು ಒಂದು 'ಸರ್ಕೀಟ್' ನ 'ಸ್ಟೆಡಿ ಸ್ಟೇಟ್ ರಿಸ್ಪಾನ್ಸ್'ಅನ್ನು (Steady state response) ವ್ಯಾಖ್ಯಾನಿಸೋಣ. |
00:55 | 'ಸ್ಟೆಡೀ ಸ್ಟೇಟ್ ರೆಸ್ಪಾನ್ಸ್'- ಇದು, ಒಂದು ಸರ್ಕೀಟ್, ಸಮತೋಲನದ ಸ್ಥಿತಿಯಲ್ಲಿ ಇದ್ದಾಗಿನ ಅವಲೋಕನದ ಕಾಲಾವಧಿ ಆಗಿದೆ. |
01:02 | ಈಗ, ನಾವು ‘ಫೇಜ್ ಶಿಫ್ಟ್’ ಅನ್ನು ವ್ಯಾಖ್ಯಾನಿಸುವೆವು. ‘ಫೇಜ್ ಶಿಫ್ಟ್’, ತರಂಗದ 'ಫೇಜ್'ನಲ್ಲಿಯ (phase) ತುಲನಾತ್ಮಕ ಬದಲಾವಣೆ ಆಗಿದೆ. |
01:10 | ಈಗ ನಾವು, 'RC ಸರ್ಕೀಟ್' ನಲ್ಲಿಯ 'AC ಫೇಜ್ ಶಿಫ್ಟ್' ಅನ್ನು ತಿಳಿದುಕೊಳ್ಳೋಣ. |
01:14 | ಈ ಪ್ರಯೋಗದಲ್ಲಿ, ಸರ್ಕೀಟ್ ನಲ್ಲಿಯ ವೋಲ್ಟೇಜ್ ನ ಬದಲಾವಣೆ ಮತ್ತು ‘ಫೇಜ್ ಶಿಫ್ಟ್’ ಗಳನ್ನು ನಾವು ಅಳೆಯುವೆವು. |
01:20 | ಈ ಪ್ರಯೋಗವನ್ನು ಮಾಡಲು,
A1 ಅನ್ನು 'SINE' ಗೆ ಜೋಡಿಸಲಾಗಿದೆ. 'SINE' ಹಾಗೂ A2 ಗಳ ನಡುವೆ '1uF' (ಒಂದು ಮೈಕ್ರೋ ಫರಾಡ್) 'ಕೆಪ್ಯಾಸಿಟರ್' ಅನ್ನು (capacitor) ಜೋಡಿಸಲಾಗಿದೆ. A2 ಮತ್ತು ಗ್ರೌಂಡ್ ಗಳ (GND) ನಡುವೆ '1K' ರೆಜಿಸ್ಟರ್ ಅನ್ನು ಜೋಡಿಸಲಾಗಿದೆ. |
01:36 | ಇದು ಸರ್ಕೀಟ್ ಡೈಗ್ರಾಮ್ ಆಗಿದೆ. |
01:40 | ನಾವು ‘ಪ್ಲಾಟ್ ವಿಂಡೋ’ದ ಮೇಲೆ ಇದರ ಪರಿಣಾಮವನ್ನು ನೋಡೋಣ. |
01:44 | 'ಪ್ಲಾಟ್ ವಿಂಡೋ'ದಲ್ಲಿ, A1 ನ ಮೇಲೆ ಕ್ಲಿಕ್ ಮಾಡಿ ಮತ್ತು CH1 ಗೆ ಎಳೆದುತನ್ನಿ.
A1 ಅನ್ನು CH1 ಗೆ ನಿಗದಿಪಡಿಸಲಾಗಿದೆ. |
01:54 | A2 ದ ಮೇಲೆ ಕ್ಲಿಕ್ ಮಾಡಿ ಮತ್ತು CH2 ಗೆ ಎಳೆದುತನ್ನಿ.
A2 ಅನ್ನು CH2 ಗೆ ನಿಗದಿಪಡಿಸಲಾಗಿದೆ. |
02:02 | 'Sine' ತರಂಗಗಳನ್ನು ಪಡೆಯಲು, 'mSec/div' ಸ್ಲೈಡರನ್ನು ಕದಲಿಸಿ. |
02:08 | 'EXPERIMENTS' ಬಟನ್ ನ ಮೇಲೆ ಕ್ಲಿಕ್ ಮಾಡಿ. 'Study of AC circuits' ಅನ್ನು ಆಯ್ಕೆಮಾಡಿ. |
02:14 | 'Study of AC Circuits' ಹಾಗೂ 'Schematic' ಎಂಬ ವಿಂಡೋಗಳು ತೆರೆದುಕೊಳ್ಳುತ್ತವೆ. 'Schematic' ವಿಂಡೋ, ಸರ್ಕೀಟ್ ಡೈಗ್ರಾಮ್ ಅನ್ನು ತೋರಿಸುತ್ತದೆ. |
02:24 | 'Study of AC Circuits' ವಿಂಡೋ, ವಿಭಿನ್ನ ವೋಲ್ಟೇಜ್ ಗಳೊಂದಿಗೆ ಮೂರು ಟ್ರೇಸ್ ಗಳನ್ನು ಪ್ರದರ್ಶಿಸುತ್ತದೆ. |
02:30 | ಕಪ್ಪುಬಣ್ಣದ ಟ್ರೇಸ್, 'A1' ನಲ್ಲಿ ಅನ್ವಯಿಸಲಾದ ವೋಲ್ಟೇಜ್ ಆಗಿದೆ. |
02:35 | ಕೆಂಪು ಬಣ್ಣದ ಟ್ರೇಸ್, 'ರೆಜಿಸ್ಟರ್' ನ ವೋಲ್ಟೇಜ್ ಆಗಿದೆ. |
02:39 | ನೀಲಿ ಬಣ್ಣದ ಟ್ರೇಸ್, 'ಕೆಪ್ಯಾಸಿಟರ್' ನ ವೋಲ್ಟೇಜ್ ಆಗಿದೆ. |
02:44 | ವಿಂಡೋದ ಬಲಭಾಗದಲ್ಲಿ, ನಾವು 'Phasor plot' ಅನ್ನು (ಫೇಜರ್ ಪ್ಲಾಟ್) ನೋಡಬಹುದು. |
02:49 | ಪ್ಲಾಟ್ ನಲ್ಲಿ, ಧನಾತ್ಮಕ X- ಅಕ್ಷವು 'ರೆಜಿಸ್ಟರ್' ನ ವೋಲ್ಟೇಜ್ ಅನ್ನು ಸೂಚಿಸುತ್ತದೆ. |
02:56 | ಧನಾತ್ಮಕ Y- ಅಕ್ಷವು 'ಇಂಡಕ್ಟರ್' ನ ವೋಲ್ಟೇಜ್ ಅನ್ನು ಸೂಚಿಸುತ್ತದೆ. |
03:02 | ಋಣಾತ್ಮಕ Y- ಅಕ್ಷವು 'ಕೆಪ್ಯಾಸಿಟರ್' ನ ವೋಲ್ಟೇಜ್ ಅನ್ನು ಸೂಚಿಸುತ್ತದೆ. |
03:08 | ತರಂಗಗಳ ಆವರ್ತನವು (ಫ್ರಿಕ್ವೆನ್ಸಿ) 149.4 Hz ಆಗಿದೆ.
'A1' ನ ಒಟ್ಟು ವೋಲ್ಟೇಜ್ 3.54 V, 'A2' ನಲ್ಲಿ 'R' ನ ವೋಲ್ಟೇಜ್ 2.50 V, 'A1-A2' ನಲ್ಲಿ ವೋಲ್ಟೇಜ್ 2.43 V ಆಗಿದೆ. ‘ಫೇಜ್ ಶಿಫ್ಟ್’, 43.1 deg (ಡಿಗ್ರೀ) ಆಗಿದೆ. |
03:34 | 'Calculator', 'ಫ್ರಿಕ್ವೆನ್ಸಿ, ರೆಸಿಸ್ಟನ್ಸ್, 'ಕೆಪ್ಯಾಸಿಟನ್ಸ್ ಮತ್ತು 'ಇಂಡಕ್ಟನ್ಸ್' ಗಳ ಡೀಫಾಲ್ಟ್ ವ್ಯಾಲ್ಯೂಗಳನ್ನು ತೋರಿಸುತ್ತದೆ. |
03:44 | 'ಫ್ರಿಕ್ವೆನ್ಸಿ' ವ್ಯಾಲ್ಯೂಅನ್ನು 149.4 Hz ಗೆ ಹಾಗೂ 'ಇಂಡಕ್ಟರ್' ನ ವ್ಯಾಲ್ಯೂಅನ್ನು 0 mH (ಮಿಲೀ ಹೆನ್ರೀ) ಗಳಿಗೆ ಬದಲಾಯಿಸಿ. |
03:53 | 'Calculate XL, XC and Angle' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
03:59 | 'XC, XL' ಗಳ ವ್ಯಾಲ್ಯೂಗಳು ಮತ್ತು 'ಫೇಜ್ ಆಂಗಲ್' (phase angle) ಗಳನ್ನು ತೋರಿಸಲಾಗಿದೆ. 'XC' ಮತ್ತು 'XL' ಗಳು 'ಕೆಪ್ಯಾಸಿಟನ್ಸ್' ಹಾಗೂ 'ಇಂಡಕ್ಟನ್ಸ್' ಗಳ 'ಇಂಪೆಡೆನ್ಸ್' (impedence) ಗಳಾಗಿವೆ. |
04:11 | 'Dphi', ‘ಫೇಜ್ ಶಿಫ್ಟ್’ ಆಗಿದ್ದು ಕಂಡುಹಿಡಿಯಲಾದ ‘ಫೇಜ್ ಶಿಫ್ಟ್’, 46.8 ಅಂಶಗಳಾಗಿದೆ. |
04:20 | ಈ ಕೆಳಗಿನ ಸೂತ್ರವನ್ನು ಬಳಸಿ, ‘ಫೇಜ್ ಶಿಫ್ಟ್’ ವ್ಯಾಲ್ಯೂಅನ್ನು ನಾವು ಕಂಡುಹಿಡಿಯೋಣ:
Φ (Phase shift) = arctan(XC/XR) ಇಲ್ಲಿ, XC=1/2πfC ಆಗಿದ್ದು, f – hertz ಗಳಲ್ಲಿ ಫ್ರಿಕ್ವೆನ್ಸಿ ಮತ್ತು C – ಫರಾಡ್ ಗಳಲ್ಲಿ 'ಕೆಪ್ಯಾಸಿಟನ್ಸ್' ಆಗಿದೆ. ಕಂಡುಹಿಡಿಯಲಾದ ‘ಫೇಜ್ ಶಿಫ್ಟ್’ ನ ವ್ಯಾಲ್ಯೂ, 46.81 deg ಆಗಿದೆ. |
04:48 | ಈಗ, ನಾವು RL ಸರ್ಕೀಟ್ ನಲ್ಲಿಯ 'AC ಫೇಜ್ ಶಿಫ್ಟ್' ನ ಬಗ್ಗೆ ತಿಳಿದುಕೊಳ್ಳುವೆವು. |
04:52 | ಈ ಪ್ರಯೋಗದಲ್ಲಿ, 'ಕೆಪ್ಯಾಸಿಟರ್' ನ ಬದಲಿಗೆ ಒಂದು 'ಇಂಡಕ್ಟರ್' ಅನ್ನು ಸೇರಿಸಿದಾಗ ನಾವು‘ಫೇಜ್ ಶಿಫ್ಟ್’ ಅನ್ನು ಅಳೆಯುವೆವು. |
04:59 | ಈ ಪ್ರಯೋಗವನ್ನು ಮಾಡಲು:
A1 ಅನ್ನು 'SINE' ಗೆ ಜೋಡಿಸಲಾಗಿದೆ. 'SINE' ಮತ್ತು A2 ಗಳ ನಡುವೆ 3000 ಸುತ್ತುಗಳ ಒಂದು ಕಾಯ್ಲ್ ಅನ್ನು ಜೋಡಿಸಲಾಗಿದೆ. |
05:11 | A2 ಹಾಗೂ GND ಗಳ ನಡುವೆ 560 Ohm ರಜಿಸ್ಟರ್ ಅನ್ನು ಜೋಡಿಸಲಾಗಿದೆ. ಇದು ಸರ್ಕೀಟ್ ಡೈಗ್ರಾಮ್ ಆಗಿದೆ. |
05:20 | ನಾವು ಇದರ ಪರಿಣಾಮವನ್ನು ‘ಪ್ಲಾಟ್ ವಿಂಡೋ’ ದ ಮೇಲೆ ನೋಡೋಣ. |
05:24 | ಎರಡು 'sine' ತರಂಗಗಳನ್ನು ರಚಿಸಲಾಗಿದೆ. |
05:27 | 'EXPERIMENTS' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ, 'Study of AC Circuits' ಅನ್ನು ಆಯ್ಕೆಮಾಡಿ. 'Study of AC Circuits' ಎಂಬ ವಿಂಡೋ ತೆರೆದುಕೊಳ್ಳುತ್ತದೆ. |
05:38 | ವಿಂಡೋದ ಬಲಭಾಗದಲ್ಲಿ, ನಾವು 'Phasor plot' (ಫೇಜರ್ ಪ್ಲಾಟ್) ಅನ್ನು ನೋಡಬಹುದು. |
05:43 | ‘ಫೇಜ್ ಶಿಫ್ಟ್’, '-2.7 deg' (ಮೈನಸ್ 2.7 ಡಿಗ್ರೀ) ಇರುವುದನ್ನು ನೀವು ನೋಡಬಹುದು. ಫ್ರಿಕ್ವೆನ್ಸಿಯ ಹಾಗೂ ವೋಲ್ಟೇಜ್ ಗಳ ವ್ಯಾಲ್ಯೂಗಳನ್ನು ಗಮನಿಸಿ. |
05:53 | ಈ ಕೆಳಗಿನ ವ್ಯಾಲ್ಯೂಗಳನ್ನು, ಅರ್ಥಾತ್:
|
06:11 | ವ್ಯಾಲ್ಯೂಗಳನ್ನು ನೋಡಲು, 'Calculate XL, XC and Angle' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. ಕಂಡುಹಿಡಿಯಲಾದ ‘ಫೇಜ್ ಶಿಫ್ಟ್’, -3.1 deg (ಮೈನಸ್ 3.1 ಡಿಗ್ರೀ) ಆಗಿದೆ. |
06:23 | ನಾವು ಸೂತ್ರವನ್ನು ಬಳಸಿ ‘ಫೇಜ್ ಶಿಫ್ಟ್’ ವ್ಯಾಲ್ಯೂಅನ್ನು ಕಂಡುಹಿಡಿಯೋಣ. |
06:27 | Phase shift (Φ) = arctan (XL/XR).
ಇದರಲ್ಲಿ, XL = 2πfL ಮತ್ತು L - ಇಂಡಕ್ಟನ್ ಆಗಿದೆ. |
06:41 | ಎಕ್ಸ್ಟರ್ನಲ್ (ಬಾಹ್ಯ) ರೆಸಿಸ್ಟನ್ಸ್ ವ್ಯಾಲ್ಯೂ, 560 Ohm ಆಗಿದೆ ಮತ್ತು ಕಾಯ್ಲ್ ನ ರೆಸಿಸ್ಟನ್ಸ್ (coil) 800 Ohm ಆಗಿದೆ.
Total resistance = ( 560 Ohm + 800 Ohm) = 1360 Ohm. ಕಂಡುಹಿಡಿಯಲಾದ ‘ಫೇಜ್ ಶಿಫ್ಟ್’ ನ ವ್ಯಾಲ್ಯೂ, 3.08 ಡಿಗ್ರೀ (ಅಂಶಗಳು). |
07:05 | ಈಗ, ನಾವು 'LCR ಸರ್ಕೀಟ್' ನಲ್ಲಿಯ 'AC ಫೇಜ್ ಶಿಫ್ಟ್' ನ ಬಗ್ಗೆ ತಿಳಿದುಕೊಳ್ಳುವೆವು. |
07:10 | 'ಇಂಡಕ್ಟರ್' & ಕೆಪ್ಯಾಸಿಟರ್ ಗಳನ್ನು ಸರ್ಕೀಟ್ ನಲ್ಲಿ ಸೇರಿಸಿದಾಗ ನಾವು ‘ಫೇಜ್ ಶಿಫ್ಟ್’ ಅನ್ನು ಅಳೆಯುವೆವು. |
07:17 | ಈ ಪ್ರಯೋಗವನ್ನು ಮಾಡಲು, 'SINE' ಅನ್ನು A1 ಗೆ ಜೋಡಿಸಲಾಗಿದೆ. |
07:21 | A1 ಮತ್ತು A2 ಗಳ ನಡುವೆ ಕಾಯ್ಲ್ ಹಾಗೂ 1 uF (1 ಮೈಕ್ರೋ ಫರಾಡ್) ಕೆಪ್ಯಾಸಿಟರ್ ಗಳನ್ನು ಜೋಡಿಸಲಾಗಿದೆ. |
07:28 | A2 ಹಾಗೂ ಗ್ರೌಂಡ್ (GND) ಗಳ ನಡುವೆ 1 K ರೆಜಿಸ್ಟರ್ ಅನ್ನು ಜೋಡಿಸಲಾಗಿದೆ. ಇದು ಸರ್ಕೀಟ್ ಡೈಗ್ರಾಮ್ ಆಗಿದೆ. |
07:36 | ನಾವು 'ಪ್ಲಾಟ್ ವಿಂಡೋ'ದ ಮೇಲೆ ಪರಿಣಾಮವನ್ನು ನೋಡೋಣ. |
07:39 | ‘ಫೇಜ್ ಶಿಫ್ಟ್’ ನೊಂದಿಗೆ ಎರಡು 'sine' ತರಂಗಗಳನ್ನು ರಚಿಸಲಾಗಿದೆ. |
07:43 | 'EXPERIMENTS' ಬಟನ್ ನ ಮೇಲೆ ಕ್ಲಿಕ್ ಮಾಡಿ, 'Study of AC Circuits' ಅನ್ನು ಆಯ್ಕೆಮಾಡಿ. |
07:50 | 'Study of AC Circuits' ಹಾಗೂ 'Schematic' ಎಂಬ ವಿಂಡೋಗಳು ತೆರೆದುಕೊಳ್ಳುತ್ತವೆ. 'Schematic' ವಿಂಡೋ, ಸರ್ಕೀಟ್ ಡೈಗ್ರಾಮ್ ಅನ್ನು ತೋರಿಸುತ್ತದೆ. |
07:59 | 'Study of AC Circuits' ವಿಂಡೋ, ವಿಭಿನ್ನ ವೋಲ್ಟೇಜ್ ಗಳೊಂದಿಗೆ ಮೂರು 'sine' ತರಂಗಗಳನ್ನು ತೋರಿಸುತ್ತದೆ. |
08:06 | ವಿಂಡೋದ ಬಲಭಾಗದಲ್ಲಿ, 'Phasor plot' ಅನ್ನು (ಫೇಜರ್ ಪ್ಲಾಟ್) ನಾವು ನೋಡಬಹುದು. |
08:11 | ತರಂಗಗಳ 'ಫ್ರಿಕ್ವೆನ್ಸಿ', 149.4 Hz ಆಗಿದೆ.
ಒಟ್ಟು ವೋಲ್ಟೇಜ್ A1 ನಲ್ಲಿ 3.53 V ಇರುತ್ತದೆ. A2 ನಲ್ಲಿ, R ನ ವೋಲ್ಟೇಜ್ 2.50 V ಆಗಿದೆ. LC ಯ ವೋಲ್ಟೇಜ್, A1-A2 ನಲ್ಲಿ 2.42 V ಆಗಿದೆ. |
08:33 | Phase Shift, 43.1 deg (ಡಿಗ್ರೀ) ಇರುತ್ತದೆ. |
08:37 | ಫ್ರಿಕ್ವೆನ್ಸಿ ಯ ವ್ಯಾಲ್ಯೂಅನ್ನು 149.4 Hz ಗೆ ಹಾಗೂ ಇಂಡಕ್ಟನ್ಸ್ ಅನ್ನು 78 mH (ಮಿಲಿ ಹೆನ್ರಿ) ಗೆ ಬದಲಾಯಿಸಿ. |
08:48 | ವ್ಯಾಲ್ಯೂಗಳನ್ನು ನೋಡಲು, 'Calculate XL, XC and Angle' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. ಕಂಡುಹಿಡಿಯಲಾದ ‘ಫೇಜ್ ಶಿಫ್ಟ್’ ವ್ಯಾಲ್ಯೂ, 44.8 ಡಿಗ್ರೀ ಆಗಿರುತ್ತದೆ. |
09:00 | ಸೂತ್ರವನ್ನು ಬಳಸಿ ನಾವು ‘ಫೇಜ್ ಶಿಫ್ಟ್’ ವ್ಯಾಲ್ಯೂಅನ್ನು ಕಂಡುಹಿಡಿಯೋಣ. |
09:04 | Phase shift Φ = arctan(XC – XL/XR) |
09:10 | ಎಕ್ಸ್ಟರ್ನಲ್ ರೆಸಿಸ್ಟನ್ಸ್ ನ ವ್ಯಾಲ್ಯೂ, 1000 Ohms ಆಗಿದೆ. ‘ಫೇಜ್ ಶಿಫ್ಟ್’ ನ ಕಂಡುಹಿಡಿಯಲಾದ ವ್ಯಾಲ್ಯೂ, 44.77 ಡಿಗ್ರೀ ಗಳಾಗಿದೆ. |
09:20 | ಸಂಕ್ಷಿಪ್ತವಾಗಿ, |
09:22 | ಈ ಟ್ಯುಟೋರಿಯಲ್ ನಲ್ಲಿ, ನಾವು -
|
09:33 | ಒಂದು ಅಸೈನ್ಮೆಂಟ್ –
ವಿಭಿನ್ನ ರೆಸಿಸ್ಟನ್ಸ್ & ಕೆಪ್ಯಾಸಿಟನ್ಸ್ ವ್ಯಾಲ್ಯೂಗಳನ್ನು ಬಳಸಿ RL ಹಾಗೂ LCR ಸರ್ಕೀಟ್ ಗಳ ‘AC ಫೇಜ್ ಶಿಫ್ಟ್’ ನ ಬಗ್ಗೆ ತಿಳಿಯಿರಿ. |
09:44 | ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:52 | ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
09:59 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
10:06 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………….. .
ವಂದನೆಗಳು. |