Difference between revisions of "Inkscape/C2/Create-and-edit-shapes/Kannada"

From Script | Spoken-Tutorial
Jump to: navigation, search
Line 11: Line 11:
 
|-
 
|-
 
| 00:10
 
| 00:10
| ಇಂಕ್ ಸ್ಕೇಪ್ ಇಂಟರ್ಫೇಸ್ ನ ಬಗೆಗೆ ಮತ್ತು ಮೂಲಭೂತ ಆಕಾರಗಳನ್ನು ರಚಿಸುವ ಬಗೆ,
+
| ಇಂಕ್ ಸ್ಕೇಪ್ ನ ಇಂಟರ್ಫೇಸ್ ಬಗೆಗೆ ಮತ್ತು ಮೂಲಭೂತ ಆಕಾರಗಳನ್ನು ರಚಿಸುವ ಬಗೆ,
 
|-
 
|-
 
| 00:16
 
| 00:16
| ಬಣ್ಣವನ್ನು ತುಂಬುವುದು ಮತ್ತು ಹ್ಯಾಂಡಲ್ ಗಳನ್ನು ಬಳಸಿ ಆಕಾರಗಳನ್ನು ರೂಪಾಂತರಿಸುವ ಬಗೆ.
+
| ಬಣ್ಣವನ್ನು ತುಂಬುವುದು ಮತ್ತು ಹ್ಯಾಂಡಲ್ ಗಳನ್ನು ಬಳಸಿ ಆಕಾರಗಳನ್ನು ರೂಪಾಂತರಿಸುವ ಬಗೆ.
 
|-
 
|-
 
| 00:20
 
| 00:20
Line 57: Line 57:
 
|-
 
|-
 
| 01:34
 
| 01:34
|ಹೊಸ ಇಂಕ್ ಸ್ಕೇಪ್ ಫೈಲ್ ಅನ್ನು ತೆರೆಯಲು, ಫೈಲ್ ಅನ್ನು ಕ್ಲಿಕ್ ಮಾಡಿ, ನಂತರ ನಿವ್ (new) ಎಂಬುದನ್ನು ಆರಿಸಿ, ಡಿಫಾಲ್ಟ್ (default) ಅನ್ನು ಕ್ಲಿಕ್ ಮಾಡಿ.
+
|ಹೊಸ ಇಂಕ್ ಸ್ಕೇಪ್ ಫೈಲ್ ಅನ್ನು ತೆರೆಯಲು, ಫೈಲ್ ಅನ್ನು ಕ್ಲಿಕ್ ಮಾಡಿ, ನಂತರ ನ್ಯೂ (new) ಎಂಬುದನ್ನು ಆರಿಸಿ, ಡಿಫಾಲ್ಟ್ (default) ಅನ್ನು ಕ್ಲಿಕ್ ಮಾಡಿ.
 
|-
 
|-
 
| 01:41
 
| 01:41
Line 156: Line 156:
 
|-
 
|-
 
| 04:34
 
| 04:34
|ನಾನು ಬಲ ಭಾಗದ ಮೇಲಿನ ಮೂಲೆಯ ಹ್ಯಾಂಡಲ್ ಅನ್ನು ಕ್ಲಿಕ್ ಮಾದಿ, ಆಯತವನ್ನು ತಿರುಗಿಸುತ್ತೇನೆ.
+
|ನಾನು ಬಲ ಭಾಗದ ಮೇಲಿನ ಮೂಲೆಯ ಹ್ಯಾಂಡಲ್ ಅನ್ನು ಕ್ಲಿಕ್ ಮಾಡಿ, ಆಯತವನ್ನು ತಿರುಗಿಸುತ್ತೇನೆ.
 
|-
 
|-
 
|04:44
 
|04:44
Line 162: Line 162:
 
|-
 
|-
 
| 04:50
 
| 04:50
|ನಾನು ಎಡ ಪಕ್ಕದ ಮಧ್ಯದ ಹ್ಯಾಂದಲ್ ಅನ್ನು ಕ್ಲಿಕ್ ಮಾಡಿ, ಮೇಲೆ ಅಥವಾ ಕೆಳಗೆ ಎಳೆದು ಆಯತವನ್ನು ಓರೆಗೊಳಿಸುತ್ತೇನೆ.
+
|ನಾನು ಎಡ ಪಕ್ಕದ ಮಧ್ಯದ ಹ್ಯಾಂಡಲ್ ಅನ್ನು ಕ್ಲಿಕ್ ಮಾಡಿ, ಮೇಲೆ ಅಥವಾ ಕೆಳಗೆ ಎಳೆದು ಆಯತವನ್ನು ಓರೆಗೊಳಿಸುತ್ತೇನೆ.
 
|-
 
|-
 
| 04:56
 
| 04:56
Line 243: Line 243:
 
|-
 
|-
 
| 06:56
 
| 06:56
|ಎರಡು ಆರ್ಕ್ ಹ್ಯಾಂಡಲ್ ಗಳು ಒಂದರ ಮೇಲೊಂದು ವ್ಯಾಪಿಸುತ್ತವೆ. ಆರ್ಕ್ ಹ್ಯಾಂಡಲ್ ಅನ್ನು ಕ್ಲಿಕ್ ಮಾಡಿ, ಮತ್ತು ಅದನ್ನು ಅಪ್ರದಕ್ಶಿಣವಾಗಿ ತಿರುಗಿಸಿ.
+
|ಎರಡು ಆರ್ಕ್ ಹ್ಯಾಂಡಲ್ ಗಳು ಒಂದರ ಮೇಲೊಂದು ವ್ಯಾಪಿಸುತ್ತವೆ. ಆರ್ಕ್ ಹ್ಯಾಂಡಲ್ ಅನ್ನು ಕ್ಲಿಕ್ ಮಾಡಿ, ಮತ್ತು ಅದನ್ನು ಅಪ್ರದಕ್ಷಿಣವಾಗಿ ತಿರುಗಿಸಿ.
 
|-
 
|-
 
| 07:04
 
| 07:04
Line 270: Line 270:
 
|-
 
|-
 
| 07:51
 
| 07:51
|ನಾವು, ಈ ಹ್ಯಾಂಡಲ್ ಗಳನ್ನು ಬಳಸಿ, ಚೌಕಗಳಗೆ ದುಂಡಾದ ಅಂಚುಗಳನ್ನು ಕೊಡಬಹುದು.
+
|ನಾವು, ಈ ಹ್ಯಾಂಡಲ್ ಗಳನ್ನು ಬಳಸಿ, ಚೌಕಗಳಿಗೆ ದುಂಡಾದ ಅಂಚುಗಳನ್ನು ಕೊಡಬಹುದು.
 
|-
 
|-
 
| 07:56
 
| 07:56
Line 333: Line 333:
 
|-
 
|-
 
| 09:49
 
| 09:49
| ಒಂದು ನೀಲಿ ಬಣ್ಣದ ಆಯತ, ಒಂದು ಕೆಂಪು ಬಣ್ಣದ ವೃತ್ತ, ಒಂದು ಹಸಿರು ಬಣ್ಣದ, ಏಳು ಭುಜದ ನಕ್ಷತ್ರ ಗಳನ್ನು ರಚಿಸಿ.
+
| ಒಂದು ನೀಲಿ ಬಣ್ಣದ ಆಯತ, ಒಂದು ಕೆಂಪು ಬಣ್ಣದ ವೃತ್ತ, ಒಂದು ಹಸಿರು ಬಣ್ಣದ ಏಳು ಭುಜದ ನಕ್ಷತ್ರ ಗಳನ್ನು ರಚಿಸಿ.
 
|-
 
|-
 
| 09:58
 
| 09:58
Line 363: Line 363:
 
|-
 
|-
 
| 10:50
 
| 10:50
|ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.
+
|ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ರಾಕೇಶ. ಧನ್ಯವಾದಗಳು.
 
|}
 
|}

Revision as of 13:58, 3 May 2016

Time Narration
00:00 ನಮಸ್ಕಾರ, ಕ್ರಿಯೇಟ್ ಆಂಡ್ ಎಡಿಟ್ ಶೇಪ್ಸ್ ಎನ್ನುವ ಇಂಕ್-ಸ್ಕೇಪ್-ನ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು: ಇಂಕ್ ಸ್ಕೇಪ್ ನ ಬಗೆಗೆ
00:10 ಇಂಕ್ ಸ್ಕೇಪ್ ನ ಇಂಟರ್ಫೇಸ್ ಬಗೆಗೆ ಮತ್ತು ಮೂಲಭೂತ ಆಕಾರಗಳನ್ನು ರಚಿಸುವ ಬಗೆ,
00:16 ಬಣ್ಣವನ್ನು ತುಂಬುವುದು ಮತ್ತು ಹ್ಯಾಂಡಲ್ ಗಳನ್ನು ಬಳಸಿ ಆಕಾರಗಳನ್ನು ರೂಪಾಂತರಿಸುವ ಬಗೆ.
00:20 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಲಿನಕ್ಸ್ ನ 12.04 ನೇ ಆವೃತ್ತಿಯ ಆಪರೇಟಿಂಗ್ ಸಿಸ್ಟಮ್ ಮತ್ತು ಇಂಕ್ ಸ್ಕೇಪ್ ನ 0.48.4 ನೇ ಆವೃತ್ತಿಯನ್ನು ಉಪಯೋಗಿಸಿದ್ದೇನೆ.
00:29 ಡ್ಯಾಶ್ ಹೋಮ್ ಗೆ ಹೋಗಿ, ಇಂಕ್ ಸ್ಕೇಪ್ ಎಂದು ಟೈಪ್ ಮಾಡಿ.
00:34 ಲೋಗೋ ಅನ್ನು ಡಬಲ್ ಕ್ಲಿಕ್ ಮಾಡಿ ಇಂಕ್ ಸ್ಕೇಪ್ ಅನ್ನು ಓಪನ್ ಮಾಡಬಹುದು.
00:38 ಇಂಟರ್ಫೇಸ್ ನ ಮೇಲೆ, ಮೆನು ಬಾರ್ ಮತ್ತು ಟೂಲ್ ಕಂಟ್ರೋಲ್ ಬಾರ್ ಗಳನ್ನು ನೋಡಬಹುದು.
00:44 ಇದರ ನಂತರ, ಮೇಲ್ಭಾಗದಲ್ಲಿ ಮತ್ತು ಪಕ್ಕದಲ್ಲಿ ರೂಲರ್ ಗಳಿರುತ್ತವೆ.
00:48 ಇಂಟರ್ಫೇಸ್ ನ ಬಲ ಭಾಗದಲ್ಲಿ, ಕಮಾಂಡ್ ಬಾರ್ ಮತ್ತು ಸ್ನ್ಯಾಪ್ ಕಂಟ್ರೋಲ್ ಬಾರ್ ಗಳನ್ನು ನೋಡಬಹುದು.
00:54 ಟೂಲ್ ಬಾಕ್ಸ್, ಇಂಟರ್ಫೇಸ್ ನ ಎಡ ಭಾಗದಲ್ಲಿ ಇರುತ್ತದೆ.
00:58 ಮಧ್ಯದಲ್ಲಿರುವುದು ಕ್ಯಾನ್ವಾಸ್. ಇಲ್ಲಿಯೇ ನೀವು ಗ್ರಾಫಿಕ್ಸ್ ಅನ್ನು ರಚಿಸುವುದು.
01:03 ಇಂಟರ್ಫೇಸ್ ನ ಕೆಳಭಾಗದಲ್ಲಿ, ಕಲರ್ ಪ್ಯಾಲೆಟ್ ಮತ್ತು ಸ್ಟೇಟಸ್ ಬಾರ್ ಅನ್ನು ನೋಡಬಹುದು.
01:09 ಈಗ, ಇಂಕ್ ಸ್ಕೇಪ್ ನಲ್ಲಿ ಕೆಲವು ಮೂಲಭೂತ ಆಕಾರಗಳನ್ನು ರಚಿಸುವುದು ಮತ್ತು ಬದಲಾಯಿಸುವುದನ್ನು ಕಲಿಯೋಣ.
01:14 ಮೊದಲಿಗೆ ಸೆಲೆಕ್ಟ್ ಮತ್ತು ಟ್ರ್ಯಾನ್ಸ್ ಫಾರ್ಮ್ ಟೂಲ್ ಬಗೆಗೆ ಕಲಿಯೋಣ. ಇದನ್ನು ಸಾಮಾನ್ಯವಾಗಿ ಸೆಲೆಕ್ಟರ್ ಟೂಲ್ ಎನ್ನುತ್ತಾರೆ.
01:22 ಇದು ಬಹಳ ಮುಖ್ಯ ಸಾಧನವಾಗಿದೆ. ಇದು ಟೂಲ್ ಬಾಕ್ಸ್ ನ ಎಡಭಾಗದಲ್ಲಿರುತ್ತದೆ.
01:28 ಈ ಸಾಧನದಿಂದ, ಆಬ್ಜೆಕ್ಟ್ ಗಳನ್ನು ಆರಿಸಬಹುದು, ರೂಪಾಂತರಿಸಬಹುದು ಮತ್ತು ಕ್ಯಾನ್ವಾಸ್ ನಲ್ಲಿ ಅವುಗಳ ಸ್ಥಾನ ಬದಲಾಯಿಸಬಹುದು.
01:34 ಹೊಸ ಇಂಕ್ ಸ್ಕೇಪ್ ಫೈಲ್ ಅನ್ನು ತೆರೆಯಲು, ಫೈಲ್ ಅನ್ನು ಕ್ಲಿಕ್ ಮಾಡಿ, ನಂತರ ನ್ಯೂ (new) ಎಂಬುದನ್ನು ಆರಿಸಿ, ಡಿಫಾಲ್ಟ್ (default) ಅನ್ನು ಕ್ಲಿಕ್ ಮಾಡಿ.
01:41 ಈಗಾಗಲೇ ಇರುವ ಇಂಕ್ ಸ್ಕೇಪ್ ಫೈಲ್ ಅನ್ನು ತೆರೆಯಲು, ಫೈಲ್ ನ ಮೇಲೆ ಕ್ಲಿಕ್ ಮಾಡಿ, ಓಪನ್ ಎಂಬುದನ್ನು ಆರಿಸಿ.
01:47 ಈಗಾಗಲೇ ರಚಿಸಿರುವ, ಡ್ರಾಯಿಂಗ್ ಅಂಡರ್ಸ್ಕೋರ್ ಒನ್ ಡಾಟ್ ಎಸ್ ವಿ ಜಿ (drawing_1.svg) ಫೈಲ್ ಅನ್ನು ಓಪನ್ ಮಾಡೋಣ.
01:53 ನಾನು ಇದನ್ನು ಡಾಕ್ಯುಮೆಂಟ್ಸ್ ಫೋಲ್ಡರ್ ನಲ್ಲಿ ಸೇವ್ ಮಾಡಿದ್ದೆ. ಬಲಭಾಗದಲ್ಲಿರುವ ಒಪನ್ ಬಟನ್ ಅನ್ನು ಕ್ಲಿಕ್ ಮಾಡಿ.
02:01 ನಾವು ಆಯತವನ್ನು ಅನ್ನು ರಚಿಸಿದ್ದೆವು.
02:04 ಈಗ ಆಯತವನ್ನು ಕ್ಲಿಕ್ ಮಾಡಿ.
02:06 ಸಾಮಾನ್ಯವಾಗಿ, ಆಯತದ ಬಣ್ಣ ಹಸಿರು ಆಗಿರುತ್ತದೆ.
02:09 ಬಣ್ಣ ಬದಲಾಯಿಸಲು, ಕೆಳಗಿರುವ ಕಲರ್ ಪ್ಯಾಲೆಟ್ ಅನ್ನು ಬಳಸೋಣ.
02:14 ಹಾಗಾಗಿ, ನಾನು, ಕರ್ಸರ್ ಅನ್ನು ಕೆಳಗೆ ಸರಿಸುವೆ ಮತ್ತು ಕೆಂಪು ಬಣ್ಣವನ್ನು ಕ್ಲಿಕ್ ಮಾಡುತ್ತೇನೆ.
02:18 ಆಯತದ ಬಣ್ಣ ಬದಲಾಗಿದ್ದನ್ನು ಗಮನಿಸಿ.
02:22 ಆಯತದ ಸ್ಥಳ ಬದಲಾವಣೆ ಮಾಡೋಣ.
02:23 ಹೀಗೆ ಮಾಡಲು, ಆಯತದ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ.
02:27 ಈಗ, ಮೌಸ್ ಬಟನ್ ಅನ್ನು ಬಿಡದೆ, ಕ್ಯಾನ್ವಾಸ್ ನ ಮೇಲೆ ನಿಮಗೆ ಬೇಕಾದೆಡೆಗೆ ಎಳೆಯಿರಿ.
02:33 ನಂತರ, ಮೌಸ್ ಬಟನ್ ಅನ್ನು ಬಿಡಿ.
02:37 ಸರಿಯಾಗಿ ನೋಡಲು, ಝೂಮ್(zoom) ಮಾಡೋಣ. ಇದಕ್ಕಾಗಿ, ಕಂಟ್ರೊಲ್(ctrl) ಕೀಯನ್ನು ಒತ್ತಿ ಮತ್ತು ಮೌಸ್ ನ ಸ್ಕ್ರೋಲ್ ಬಟನ್ ಅನ್ನು ಉಪಯೋಗಿಸಿ.
02:46 ಆಯತದ ಸುತ್ತ ಬಾಣಗಳನ್ನು ನೋಡಬಹುದು. ಇವುಗಳನ್ನು ಹ್ಯಾಂಡಲ್ ಗಳು ಎನ್ನುತ್ತಾರೆ, ಇವನ್ನು ಅಳೆಯಲು ಮತ್ತು ತಿರುಗುಸಲು ಬಳಸುತ್ತಾರೆ.
02:57 ಕರ್ಸರ್ ಅನ್ನು ಯಾವುದೇ ಹ್ಯಾಂಡಲ್ ನ ಮೇಲೆ ಇಟ್ಟಾಗ, ಹ್ಯಾಂಡಲ್ ನ ಬಣ್ಣ ಬದಲಾಗುತ್ತದೆ.
03:02 ಇದು, ಆ ನಿರ್ದಿಷ್ಟ ಹ್ಯಾಂಡಲ್ ಆಯ್ಕೆ ಆಗಿದೆ ಮತ್ತು ಮರುಗಾತ್ರಗೊಳಿಸಲು ಸಿದ್ಧವಾಗಿದೆ ಎಂಬುದನ್ನು ಸೂಚಿಸುತ್ತದೆ.
03:08 ಆಯತವನ್ನು ಅಳೆಯಲು ಅಥವಾ ಮರುಗಾತ್ರಗೊಳಿಸಲು, ಯಾವುದೇ ಮೂಲೆಯ ಹ್ಯಾಂಡಲ್ ಅನ್ನು ಕ್ಲಿಕ್ ಮಾಡಿ ಮತ್ತು ಎಳೆಯಿರಿ.
03:17 ನೀವು ಅದೇ ಆಕಾರ ಅನುಪಾತವನ್ನು ಇರಿಸಿಕೊಳ್ಳಲು ಬಯಸಿದಲ್ಲಿ, ಮರುಗಾತ್ರಗೊಳಿಸುವಾಗ Ctrl ಕೀ ಯನ್ನು ಹಿಡಿದುಕೊಳ್ಳಿ.
03:24 ಆಯತದ ಉದ್ದ ಅಥವಾ ಅಗಲವನ್ನು ಬದಲಾಯಿಸಲು, ಆಯತದ ಪಕ್ಕದ ಹ್ಯಾಂಡಲ್ ಗಳನ್ನು ಬಳಸಿ.
03:32 ಹ್ಯಾಂಡಲ್ ಅನ್ನು ಕ್ಲಿಕ್ ಮಾಡಿ, ಎಡ ಅಥವಾ ಬಲಕ್ಕೆ ಎಳೆಯಿರಿ.
03:39 ಆಯತದ ಅಗಲದಲ್ಲಿ ಆಗುವ ವ್ಯತ್ಯಾಸವನ್ನು ಗಮನಿಸಿ.
03:43 ಈಗ, ಆಯತದ ಉದ್ದವನ್ನು ಬದಲಾಯಿಸೋಣ.
03:46 ಹಾಗಾಗಿ, ನಾವು ಆಯತದ ಮೇಲಿನ ಅಥವಾ ಕೆಳಗಿನ ಹ್ಯಾಂಡಲ್ ಅನ್ನು ಕ್ಲಿಕ್ ಮಾಡಿ, ಎಳೆಯೋಣ.
03:51 ಆಯತದ ಉದ್ದದಲ್ಲಿ ಆಗುವ ಬದಲಾವಣೆಯನ್ನು ಗಮನಿಸಿ.
03:54 ನಾವು ಟೂಲ್ ಕಂಟ್ರೋಲ್ ಬಾರ್ ನಲ್ಲಿರುವ ವಿಡ್ತ್(width) ಮತ್ತು ಹೈಟ್ (height) ಪ್ಯಾರಾಮೀಟರ್ ಗಳನ್ನು ಬದಲಾಯಿಸುವುದರಿಂದ ಕೂಡಾ ಆಯತದ ಎತ್ತರ ಮತ್ತು ಅಗಲವನ್ನು ಬದಲಾಯಿಸಬಹುದು.
04:03 ನಾನು ವಿಡ್ತ್ ಅನ್ನು ನಾಲ್ಕುನೂರು ಎಂದು, ಮತ್ತು ಹೈಟ್ ಅನ್ನು ಇನ್ನೂರು ಎಂದೂ ಬದಲಾಯಿಸುತ್ತೇನೆ.
04:07 ಈಗ ಆಯತದ ಗಾತ್ರದಲ್ಲಾದ ಬದಲಾವಣೆಯನ್ನು ಗಮನಿಸಿ.
04:10 ಇದೇ ರೀತಿ, ಎಕ್ಸ್ ಮತ್ತು ವೈ ಆಕ್ಸಿಸ್ ಅನ್ನು ಬದಲಾಯಿಸುವುದರಿಂದ ಆಬ್ಜೆಕ್ಟ್ ನ ಸ್ಥಳ ಬದಲಾವಣೆ ಮಾಡಬಹುದು.
04:19 ಈಗ, ಆಯತವನ್ನು ಹೇಗೆ ತಿರುಗಿಸುವುದು ಎಂಬುದನ್ನು ನೋಡೋಣ.
04:24 ಇದನ್ನು ಮಾಡಲು, ಆಯತದ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ.
04:27 ಈಗ ಮೂಲೆಯಲ್ಲಿರುವ ಹ್ಯಾಂಡಲ್ ನ ಆಕಾರವು ಬದಲಾಗಿ, ತಿರುಗಿಸುವುದಕ್ಕೆ ಸಿದ್ಧವಾಗಿರುವುದನ್ನು ನೋಡಬಹುದು.
04:34 ನಾನು ಬಲ ಭಾಗದ ಮೇಲಿನ ಮೂಲೆಯ ಹ್ಯಾಂಡಲ್ ಅನ್ನು ಕ್ಲಿಕ್ ಮಾಡಿ, ಆಯತವನ್ನು ತಿರುಗಿಸುತ್ತೇನೆ.
04:44 ನೀವು ಪಕ್ಕದ ಯಾವುದೇ ಹ್ಯಾಂಡಲ್ ಗಳನ್ನು ಕ್ಲಿಕ್ ಮಾಡಿ ಎಳೆದು, ಆಯತವನ್ನು ಓರೆಗೊಳಿಸಬಹುದು.
04:50 ನಾನು ಎಡ ಪಕ್ಕದ ಮಧ್ಯದ ಹ್ಯಾಂಡಲ್ ಅನ್ನು ಕ್ಲಿಕ್ ಮಾಡಿ, ಮೇಲೆ ಅಥವಾ ಕೆಳಗೆ ಎಳೆದು ಆಯತವನ್ನು ಓರೆಗೊಳಿಸುತ್ತೇನೆ.
04:56 ನಾನು ಮಾಡುತ್ತಿರುವಾಗ ಆಗುವ ಬದಲಾವಣೆಗಳನ್ನು ಗಮನಿಸಿ.
04:59 ಇನ್ನೊಂದು ಟ್ಯುಟೋರಿಯಲ್ ನಲ್ಲಿ ನಾವು ಹ್ಯಾಂಡಲ್ ಗಳ ಬಗೆಗೆ ಇನ್ನಷ್ಟು ತಿಳಿಯೋಣ.
05:04 ಈಗ ಆಕಾರದ ಆಯ್ಕೆಯನ್ನು ರದ್ದುಗೊಳಿಸೋಣ.
05:06 ಹೀಗೆ ಮಾಡಲು, ಕ್ಯಾನ್ವಾಸ್ ನ ಮೇಲೆ ಎಲ್ಲಿಯಾದರೂ ಅಥವಾ ಕ್ಯಾನ್ವಾಸ್ ನ ಗಡಿಯಾಚೆ ಕ್ಲಿಕ್ ಮಾಡಿ.
05:11 ಮೌಸ್ ಅನ್ನು ನಾನು ಮತ್ತೆ ಟೂಲ್ ಬಾಕ್ಸ್ ನಲ್ಲಿ ಅದೇ ರೆಕ್ಟ್ಯಾಂಗಲ್ ಗೆ ತರುತ್ತೇನೆ.
05:17 ಈ ಟೂಲ್ ಅನ್ನು ಉಪಯೋಗಿಸಿ, ನಾವು ಆಯತಗಳನ್ನು ಮತ್ತು ಚೌಕವನ್ನು ಚಿತ್ರಿಸಬಹುದೆಂದು ಟೂಲ್ ಟಿಪ್ ಹೇಳುತ್ತದೆ.
05:22 ಹಾಗಾಗಿ, ಮೊದಲು ಈ ಟೂಲ್ ನ ಮೇಲೆ ಕ್ಲಿಕ್ ಮಾಡುತ್ತೇನೆ.
05:25 ಚೌಕವನ್ನು ಚಿತ್ರಿಸಲು, ctrl(ಕಂಟ್ರೋಲ್) ಕೀಯನ್ನು ಒತ್ತಿ, ಕ್ಯಾನ್ವಾಸ್ ನ ಮೇಲೆ ಎಳೆಯಿರಿ.
05:30 ಇದರ ಬಣ್ಣವನ್ನು ಗುಲಾಬಿ ಬಣ್ಣಕ್ಕೆ ಬದಲಾಯಿಸೋಣ.
05:32 ನಿಮಗೆ ಒಂದು ಅಸೈನ್ಮೆಂಟ್.
05:34 ಕ್ರಿಯೇಟ್ ಸರ್ಕಲ್ ಎಂಡ್ ಎಲಿಪ್ಸಸ್ ಎಂಬ ಟೂಲ್ ಅನ್ನು ಟೂಲ್ ಬಾಕ್ಸ್ ನಲ್ಲಿ ಆಯ್ಕೆ ಮಾಡಿ,
05:38 ctrl ಕೀಯನ್ನು ಉಪಯೋಗಿಸಿ, ಕ್ಯಾನ್ವಾಸ್ ನ ಮೇಲೆ, ವೃತ್ತವನ್ನು ರಚಿಸಿ.
05:42 ಇದಕ್ಕೆ ನೀಲಿ ಬಣ್ಣ ತುಂಬಿ.
05:44 ಇದು ನನ್ನ ವೃತ್ತ.
05:46 ಈಗ, ಈ ವೃತ್ತವನ್ನು ಹೇಗೆ ರೂಪಾಂತರಿಸುವುದು ಎಂಬುದನ್ನು ಕಲಿಯೋಣ.
05:49 ಸ್ಟಾರ್ಟ್ ಮತ್ತು ಎಂಡ್ ಪ್ಯಾರಮೀಟರ್ ಗಳನ್ನು ಬದಲಾಯಿಸಿ, ನೀವು, ವೃತ್ತದ ಆಕಾರವನ್ನು ಕಮಾನು ರೂಪಕ್ಕೆ ತರಬಹುದು.
05:56 ಆಕಾರಗಳನ್ನು ಬದಲಾಯಿಸಲು, ಟೂಲ್ ಕಂಟ್ರೋಲ್ ಬಾರ್ ನಲ್ಲಿ ಮೂರು ಆಯ್ಕೆಗಳಿವೆ.
06:03 ನಾನೀಗ, ಸ್ಟಾರ್ಟ್ ಪ್ಯಾರಾಮೀಟರ್ ಅನ್ನು ನೂರು ಎಂದು ಮತ್ತು ಎಂಡ್ ಪ್ಯಾರಾಮೀಟರ್ ಅನ್ನು ಮೈನಸ್ ಐವತ್ತು ಎಂದೂ ಬದಲಾಯಿಸುತ್ತೇನೆ.
06:09 ವೃತ್ತದ ಆಕಾರವು ಈಗ ಕಮಾನಿನ ರೂಪ ತಳೆದಿರುವುದನ್ನು ನೀವು ಗಮನಿಸಬಹುದು.
06:14 ನಾನೀಗ, ಆರ್ಕ್ (arc) ಐಕಾನ್ ಅನ್ನು ಕ್ಲಿಕ್ ಮಾಡುತ್ತೇನೆ. ಆಕಾರದಲ್ಲಿ ಆದ ಬದಲಾವಣೆಯನ್ನು ನಾವು ನೋಡಬಹುದು.
06:19 ನಾವು ಸರ್ಕಲ್ ಐಕಾನ್ ಅನ್ನು ಕ್ಲಿಕ್ ಮಾಡಿ, ಆಕಾರವನ್ನು ಪುನಃ ವೃತ್ತವಾಗಿ ಬದಲಾಯಿಸಬಹುದು.
06:25 ಈಗ, ಕ್ಯಾನ್ವಾಸ್ ನ ಮೇಲಿರುವ ವೃತ್ತದ ಆಕಾರವನ್ನು ಪರಿಶೀಲಿಸೋಣ.
06:30 ಎರಡು ಸ್ಕ್ವೇರ್ ಹ್ಯಾಂಡಲ್ ಗಳು ಮತ್ತು ಎರಡು ಸರ್ಕ್ಯುಲರ್ ಹ್ಯಾಂಡಲ್ ಅಥವಾ ಆರ್ಕ್ ಹ್ಯಾಂಡಲ್ ಗಳನ್ನು ಆಕಾರದ ಮೇಲೆ ಗಮನಿಸಿ.
06:37 ಎರಡು ಸ್ಕ್ವೇರ್ ಹ್ಯಾಂಡಲ್ ಗಳನ್ನು ವೃತ್ತದ ಆಕಾರವನ್ನು ದೀರ್ಘವೃತ್ತದ ಆಕಾರಕ್ಕೆ ಬದಲಾಯಿಸಲು ಉಪಯೋಗಿಸಬಹುದು.
06:44 ಈ ಹ್ಯಾಂಡಲ್ ಗಳನ್ನು ಮೇಲೆ-ಕೆಳಗೆ ಅಥವಾ ಎಡ-ಬಲಕ್ಕೆ ಎಳೆಯಿರಿ.
06:53 ಆಕಾರದಲ್ಲಾಗುವ ಬದಲಾವಣೆಗಳನ್ನು ಗಮನಿಸಿ.
06:56 ಎರಡು ಆರ್ಕ್ ಹ್ಯಾಂಡಲ್ ಗಳು ಒಂದರ ಮೇಲೊಂದು ವ್ಯಾಪಿಸುತ್ತವೆ. ಆರ್ಕ್ ಹ್ಯಾಂಡಲ್ ಅನ್ನು ಕ್ಲಿಕ್ ಮಾಡಿ, ಮತ್ತು ಅದನ್ನು ಅಪ್ರದಕ್ಷಿಣವಾಗಿ ತಿರುಗಿಸಿ.
07:04 ಈಗ ನಾವು ಎರಡೂ ಆರ್ಕ್ ಹ್ಯಾಂಡಲ್ ಗಳನ್ನೂ ನೋಡಬಹುದು.
07:08 ಈ ಆರ್ಕ್ ಹ್ಯಾಂಡಲ್ ಗಳನ್ನು ಉಪಯೋಗಿಸಿ, ವೃತ್ತದ ಆಕಾರವನ್ನು ಕಮಾನಿನ ಆಕಾರವಾಗಿ ಬದಲಾಯಿಸಬಹುದು.
07:14 ಇವುಗಳನ್ನು ಪ್ರದಕ್ಷಿಣೆ ಅಥವಾ ಅಪ್ರದಕ್ಷಿಣವಾಗಿ ತಿರುಗಿಸಿ, ಆಕಾರದಲ್ಲಾಗುವ ಬದಲಾವಣೆಗಳನ್ನು ಗಮನಿಸಿ.
07:24 ಈಗ, ಟೂಲ್ ಬಾಕ್ಸ್ ನಲ್ಲಿರುವ, ರೆಕ್ಟ್ಯಾಂಗಲ್ ಟೂಲ್ ನ ಮೇಲೆ ಕ್ಲಿಕ್ ಮಾಡಿ, ಮತ್ತು ಚೌಕದ ಮೇಲೆ ಕ್ಲಿಕ್ ಮಾಡಿ.
07:30 ಎರಡು ರಿಸೈಸ್ ಹ್ಯಾಂಡಲ್ ಗಳು ಮತ್ತು ಎರಡು ಆರ್ಕ್ ಹ್ಯಾಂಡಲ್ ಗಳನ್ನು, ಆಕಾರದ ಮೇಲಿನ ಬಲ ಮೂಲೆಯಲ್ಲಿ ಗಮನಿಸಿ.
07:40 ಮೊದಲಿನಂತೆಯೇ, ಎರಡು ಆರ್ಕ್ ಹ್ಯಾಂಡಲ್ ಗಳು ಒಂದರ ಮೇಲೊಂದು ವ್ಯಾಪಿಸಿವೆ.
07:43 ಯಾವುದಾದರೂ ಒಂದು ಆರ್ಕ್ ಹ್ಯಾಂಡಲ್ ನ ಮೇಲೆ ಕ್ಲಿಕ್ ಮಾಡಿ, ಅದನ್ನು ಪ್ರದಕ್ಷಿಣಾಕಾರವಾಗಿ ತಿರುಗಿಸಿ.
07:48 ಈಗ, ನಾವು ಎರಡೂ ಆರ್ಕ್ ಹ್ಯಾಂಡಲ್ ಗಳನ್ನೂ ನೋಡಬಹುದು.
07:51 ನಾವು, ಈ ಹ್ಯಾಂಡಲ್ ಗಳನ್ನು ಬಳಸಿ, ಚೌಕಗಳಿಗೆ ದುಂಡಾದ ಅಂಚುಗಳನ್ನು ಕೊಡಬಹುದು.
07:56 ಅವುಗಳನ್ನು ಪ್ರದಕ್ಷಿಣೆ ಅಥವಾ ಅಪ್ರದಕ್ಷಿಣಾಕಾರವಾಗಿ ತಿರುಗಿಸಿ ಮತ್ತು ಆಕಾರದಲ್ಲಾಗುವ ಬದಲಾವಣೆಗಳನ್ನು ಗಮನಿಸಿ.
08:02 ಈಗ, ಟೂಲ್ ಬಾಕ್ಸ್ ನಲ್ಲಿರುವ, ಸ್ಟಾರ್ಸ್ ಎಂಡ್ ಪಾಲಿಗಾನ್ ಟೂಲ್ ಅನ್ನು ಕ್ಲಿಕ್ ಮಾಡಿ, ಒಂದು ಪಾಲಿಗಾನ್ ಅನ್ನು ರಚಿಸೋಣ.
08:08 ಇದು ಸರ್ಕಲ್ ಟೂಲ್ ನ ಕೆಳಗೆ ಇದೆ. ಅದನ್ನು ಕ್ಲಿಕ್ ಮಾಡಿ.
08:13 ನಾವು ಪಾಲಿಗಾನ್ ಅನ್ನು ಮೊದಲಿನಂತೆಯೇ ರಚಿಸಿ, ಹಸಿರು ಬಣ್ಣ್ವನ್ನು ತುಂಬೋಣ.
08:20 ಸಾಮಾನ್ಯವಾಗಿ, ಐದು ಮೂಲೆಯ ಪಾಲಿಗಾನ್ ಅಂದರೆ, ಪಂಚಕೋನಾಕೃತಿ ಆಗುತ್ತದೆ.
08:24 ಟೂಲ್ ಕಂಟ್ರೋಲ್ ಬಾರ್ ಅನ್ನು ನೋಡಿ, ಇಲ್ಲಿ, ನಂಬರ್ ಆಫ್ ಕಾರ್ನರ್ಸ್ ಆಫ್ ಪಾಲಿಗಾನ್ ಈಸ್ ಫೈವ್ ಎಂದು ಇರುತ್ತದೆ.
08:32 ನೀವು ಈ ಸಂಖ್ಯೆಯನ್ನು ನಾಲ್ಕು ಎಂದು ಬದಲಾಯಿಸಿ, ಚೌಕವನ್ನು ಮತ್ತು ಮೂರು ಎಂದು ಬದಲಾಯಿಸಿ ತ್ರಿಕೋನವನ್ನೂ ರಚಿಸಬಹುದು.
08:39 ಹೀಗೆಯೇ, ಇದನ್ನು ಹೆಚ್ಚಿಸಿ, ಪಂಚಕೋನಾಕೃತಿ, ಷಡ್ಭುಜಾಕೃತಿ ಗಳನ್ನು ರಚಿಸಬಹುದು.
08:44 ಪಾಲಿಗಾನ್ ನ ಮೇಲೆ ರಿಸೈಸ್ ಹ್ಯಾಂಡಲ್ ಅನ್ನು ಗಮನಿಸಿ.
08:47 ಇದನ್ನು, ಪಾಲಿಗಾನ್ ನ ಗಾತ್ರ ಬದಲಾವಣೆಗೆ ಅಥವಾ ತಿರುಗಿಸಲು ಬಳಸಬಹುದು.
08:52 ಇದನ್ನು ನಕ್ಷತ್ರ ಆಕಾರಕ್ಕೆ ತರಲು, ಟೂಲ್ ಕಂಟ್ರೋಲ್ ಬಾರ್ ನಲ್ಲಿ, ಪಾಲಿಗಾನ್ ಐಕಾನ್ ನ ಪಕ್ಕಕ್ಕಿರುವ ಸ್ಟಾರ್ ಇಕಾನ್ ಅನ್ನು ಕ್ಲಿಕ್ ಮಾಡಿ,
09:00 ನಕ್ಷತ್ರ ಆಕಾರಕ್ಕೆ ಎರಡು ಹ್ಯಾಂಡಲ್ ಗಳು ಇರುವುದನ್ನು ಗಮನಿಸಿ, ತುದಿಯಲ್ಲಿ ಒಂದು ಮತ್ತು ಸಂಧಿಯಲ್ಲಿ ಒಂದು.
09:06 ಗಾತ್ರ ಬದಲಾಯಿಸಲು ಅಥವಾ ತಿರುಗಿಸಲು, ಸ್ಟಾರ್ ನ ತುದಿಯಲ್ಲಿರುವ ಹ್ಯಾಂಡಲ್ ಅನ್ನು ಕ್ಲಿಕ್ ಮಾಡಿ ಎಳೆಯಿರಿ.
09:12 ಇನ್ನೊಂದು ಹ್ಯಾಂಡಲ್ ಅನ್ನು ಬಳಸಿ, ನಾವು, ನಕ್ಷತ್ರದ ಗಾತ್ರ ಬದಲಾಯಿಸಬಹುದು ಮತ್ತು ಓರೆಗೊಳಿಸಬಹುದು.
09:17 ಅದನ್ನು ಕ್ಲಿಕ್ ಮಾಡಿ ಪ್ರದಕ್ಷಿಣಾಕಾರ ಅಥವಾ ಅಪ್ರದಕ್ಷಿಣಾಕಾರವಾಗಿ ತಿರುಗಿಸಿ ಮತ್ತು ರೂಪ ಹಾಗೂ ಗಾತ್ರದಲ್ಲಾಗುವ ಬದಲಾವಣೆಯನ್ನು ಗಮನಿಸಿ.
09:25 ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಾರಾಂಶ ತಿಳಿಯೋಣ.
09:30 ಈ ಟ್ಯುಟೋರಿಯಲ್ ನಲ್ಲಿ, ನಾವು, ಇಂಕ್ ಸ್ಕೇಪ್ ಇಂಟರ್ಫೇಸ ನ ಬಗೆಗೆ ಕಲಿತೆವು.
09:34 ನಾವು ಕಲಿತ ಇತರ ಅಂಶಗಳು : ಮೂಲಭೂತ ಆಕಾರಗಳಾದ ಆಯತ, ಚೌಕ, ವೃತ್ತ, ದೀರ್ಘವೃತ್ತ, ಪಾಲಿಗಾನ್ ಮತ್ತು ನಕ್ಷತ್ರಗಳನ್ನು ರಚಿಸುವುದು.
09:42 ಆಕಾರಗಳಿಗೆ ಬಣ್ಣವನ್ನು ತುಂಬುವುದು ಮತ್ತು ಹ್ಯಾಂಡಲ್ ಗಳನ್ನು ಬಳಸಿ ಆಕಾರಗಳನ್ನು ಬದಲಾಯಿಸುವುದು.
09:46 ನಿಮಗಾಗಿ ಒಂದು ಅಸೈನ್ಮೆಂಟ್ ಇಲ್ಲಿದೆ.
09:49 ಒಂದು ನೀಲಿ ಬಣ್ಣದ ಆಯತ, ಒಂದು ಕೆಂಪು ಬಣ್ಣದ ವೃತ್ತ, ಒಂದು ಹಸಿರು ಬಣ್ಣದ ಏಳು ಭುಜದ ನಕ್ಷತ್ರ ಗಳನ್ನು ರಚಿಸಿ.
09:58 ನಿಮ್ಮ ಅಸೈನ್ಮೆಂಟ್ ಹೀಗೆ ಕಾಣಬೇಕು.
10:03 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
10:09 ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
10:13 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
10:22 ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ.
10:28 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ.
10:32 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
10:38 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ.
10:47 ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
10:50 ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ರಾಕೇಶ. ಧನ್ಯವಾದಗಳು.

Contributors and Content Editors

Chetana, PoojaMoolya, Rakeshkkrao, Sandhya.np14, Vasudeva ahitanal