Difference between revisions of "PERL/C3/File-Handling/Kannada"
From Script | Spoken-Tutorial
Sandhya.np14 (Talk | contribs) (Created page with " {| Border = 1 | '''Time''' | '''Narration''' |- | 00:01 | '''File Handling in PERL''' (ಇನ್ ಪರ್ಲ್) ಎಂಬ ಸ್ಪೋಕನ್ ಟ್ಯುಟೋರಿಯ...") |
Sandhya.np14 (Talk | contribs) |
||
Line 5: | Line 5: | ||
|- | |- | ||
| 00:01 | | 00:01 | ||
− | | '''File Handling in PERL''' (ಇನ್ ಪರ್ಲ್) ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | + | | '''File Handling in PERL''' (ಫೈಲ್ ಹ್ಯಾಂಡ್ಲಿಂಗ್ ಇನ್ ಪರ್ಲ್) ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
|- | |- | ||
| 00:06 | | 00:06 |
Revision as of 10:47, 16 February 2016
Time | Narration |
00:01 | File Handling in PERL (ಫೈಲ್ ಹ್ಯಾಂಡ್ಲಿಂಗ್ ಇನ್ ಪರ್ಲ್) ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು:
|
00:17 | ಈ ಟ್ಯುಟೋರಿಯಲ್ ಗಾಗಿ, ನಾನು:
|
00:28 | ನೀವು, ನಿಮಗೆ ಇಷ್ಟವಾದ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ಬಳಸಬಹುದು. |
00:32 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಪರ್ಲ್ (Perl) ಪ್ರೊಗ್ರಾಮಿಂಗ್ ಬಗ್ಗೆ ತಿಳಿದಿರುವುದು ಅವಶ್ಯಕ. |
00:37 | ಇಲ್ಲದಿದ್ದರೆ, ಸಂಬಂಧಿತ Perl ಸ್ಪೋಕನ್ ಟ್ಯುಟೋರಿಯಲ್ ಗಳನ್ನು spoken tutorial ವೆಬ್ಸೈಟ್ ಮೇಲೆ ನೋಡಿ. |
00:43 | ಪರ್ಲ್ ನಲ್ಲಿ, ಫೈಲ್ ಗಳೊಂದಿಗೆ ನಾವು ಮಾಡಬಹುದಾದ ಪ್ರಮುಖ ಕಾರ್ಯಗಳು (ಆಪರೇಶನ್ ಗಳು) ಇಂತಿವೆ:
|
00:54 | ಡೀ-ಫಾಲ್ಟ್ ಫೈಲ್-ಹ್ಯಾಂಡಲ್ ಗಳು ಹೀಗಿವೆ:
|
01:02 | ಇದು 'open' ಎಂಬ ಫಂಕ್ಷನ್ ನ ಸಿಂಟ್ಯಾಕ್ಸ್ ಆಗಿದೆ. |
01:05 | ಈ ಸಿಂಟ್ಯಾಕ್ಸ್ ನಲ್ಲಿ, 'FILEHANDLE', 'open' ಎಂಬ ಫಂಕ್ಷನ್ ನಿಂದ ರಿಟರ್ನ್ ಮಾಡಲ್ಪಟ್ಟ ಫೈಲ್ ಹ್ಯಾಂಡಲ್ ಆಗಿದೆ. |
01:11 | 'MODE', ಫೈಲನ್ನು ಓಪನ್ ಮಾಡುತ್ತಿರುವ ಮೋಡ್ ಅನ್ನು ಸೂಚಿಸುತ್ತದೆ. ಉದಾ: read, write ಇತ್ಯಾದಿ. |
01:18 | 'EXPR', read ಅಥವಾ write ಮಾಡಲು ಬಳಸುವ ಭೌತಿಕ ಫೈಲ್ ನೇಮ್ ಆಗಿದೆ. ಈ ಸಂದರ್ಭದಲ್ಲಿ, “First.txt” ಫೈಲ್ ನೇಮ್ ಆಗಿದೆ. |
01:27 | ಇಲ್ಲಿ ತೋರಿಸಿದಂತೆ, 'open' ಎಂಬ ಫಂಕ್ಷನ್ ಅನ್ನು ಬರೆಯಲು ಇನ್ನೊಂದು ವಿಧಾನವಿದೆ. |
01:32 | ಈಗ ಇರುವ ಫೈಲನ್ನು ಓಪನ್ ಮಾಡುವುದು ಮತ್ತು ಅದರಿಂದ ಡೇಟಾಅನ್ನು ಓದುವುದರ ಬಗ್ಗೆ ನಾವು ತಿಳಿದುಕೊಳ್ಳೋಣ. |
01:38 | ಮೊದಲು ನಾವು ಒಂದು ಟೆಕ್ಸ್ಟ್ ಫೈಲನ್ನು ಕ್ರಿಯೇಟ್ ಮಾಡಿ, ಅದರಲ್ಲಿ ಸ್ವಲ್ಪ ಡೇಟಾಅನ್ನು ಸ್ಟೋರ್ ಮಾಡುವೆವು. ಟರ್ಮಿನಲ್ ಗೆ ಹೋಗಿ ಮತ್ತು ಹೀಗೆ ಟೈಪ್ ಮಾಡಿ: 'gedit first.txt' ಮತ್ತು 'Enter' ಅನ್ನು ಒತ್ತಿ. |
01:51 | 'first dot txt' ಎಂಬ ಫೈಲ್ ನಲ್ಲಿ, ಈ ಕೆಳಗಿನ ಟೆಕ್ಸ್ಟ್ ಅನ್ನು ಟೈಪ್ ಮಾಡಿ. |
01:55 | ಫೈಲನ್ನು ಸೇವ್ ಮಾಡಿ ಮತ್ತು 'gedit' ಅನ್ನು ಕ್ಲೋಸ್ ಮಾಡಿ. |
01:59 | ಈಗ, 'first.txt' ಎಂಬ ಫೈಲನ್ನು ಓಪನ್ ಮಾಡಿ, ಅದರಲ್ಲಿರುವುದನ್ನು ಓದುವ ಒಂದು ಪರ್ಲ್ ಪ್ರೊಗ್ರಾಂಅನ್ನು ನಾವು ನೋಡುವೆವು. |
02:07 | ನಾನು ಈಗಾಗಲೇ ಸೇವ್ ಮಾಡಿರುವ 'openfile.pl' ಎಂಬ ಸ್ಯಾಂಪಲ್ ಪ್ರೊಗ್ರಾಂಅನ್ನು ಓಪನ್ ಮಾಡುತ್ತೇನೆ. |
02:13 | ಹೀಗೆ ಟೈಪ್ ಮಾಡಿ: 'gedit openfile dot pl ampersand' ಮತ್ತು 'Enter' ಅನ್ನು ಒತ್ತಿ. |
02:19 | 'openfile dot pl' ಎಂಬ ಫೈಲ್ ನಲ್ಲಿ, ಸ್ಕ್ರೀನ್ ನ ಮೇಲೆ ತೋರಿಸಿದಂತೆ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ. |
02:25 | ಈಗ ನಾವು ಕೋಡ್ ಅನ್ನು ಅರ್ಥಮಾಡಿಕೊಳ್ಳೋಣ. |
02:28 | 'open' ಎಂಬ ಫಂಕ್ಷನ್, ಫೈಲನ್ನು ಓದಲು ಓಪನ್ ಮಾಡುತ್ತದೆ. |
02:33 | 'DATA' ಎಂಬ ಮೊದಲನೆಯ ಪ್ಯಾರಾಮೀಟರ್, ಫೈಲ್ ಹ್ಯಾಂಡಲ್ ಆಗಿದೆ. ಮುಂದೆ ಫೈಲನ್ನು ರೆಫರ್ ಮಾಡಲು, ಇದು ಪರ್ಲ್ ಅನ್ನು ಅನುಮತಿಸುತ್ತದೆ. |
02:40 | ಎರಡನೆಯ ಪ್ಯಾರಾಮೀಟರ್, “<” ಲೆಸ್ ದ್ಯಾನ್ ಚಿಹ್ನೆಯು 'READ' ಮೋಡನ್ನು ಸೂಚಿಸುತ್ತದೆ. |
02:44 | ನೀವು ಮೋಡ್ ಅನ್ನು ಸೂಚಿಸದಿದ್ದರೆ, ಡೀ ಫಾಲ್ಟ್ ಆಗಿ ಫೈಲ್ ಅನ್ನು “READ” ಮೋಡ್ ನಲ್ಲಿ ಓಪನ್ ಮಾಡಲಾಗುವುದು. |
02:50 | 'first.txt' ಎಂಬ ಮೂರನೆಯ ಪ್ಯಾರಾಮೀಟರ್, ಫೈಲ್ ನೇಮ್ ಆಗಿದೆ. ಇಲ್ಲಿಂದ ಡೇಟಾಅನ್ನು ಓದಬೇಕಾಗಿದೆ. |
02:57 | ಒಂದುವೇಳೆ, 'first.txt' ಎಂಬ ಈ ಫೈಲ್ ಇಲ್ಲದಿದ್ದರೆ ಏನಾಗುವುದು? |
03:02 | ’ಡಾಲರ್ ಎಕ್ಸ್ಕ್ಲಾಮೇಶನ್’ ($!) ವೇರಿಯೇಬಲ್ ನಲ್ಲಿ ಸ್ಟೋರ್ ಆದ, ಸೂಕ್ತವಾದ ಎರರ್ ಮೆಸೇಜ್ ನೊಂದಿಗೆ ಈ ಸ್ಕ್ರಿಪ್ಟ್ ಕೊನೆಗೊಳ್ಳುವುದು. |
03:08 | 'while' ಲೂಪ್, ಒಂದೊಂದೇ ಸಾಲನ್ನು ಓದುವುದು ಮತ್ತು DATA ಫೈಲ್ ನಲ್ಲಿ ಎಲ್ಲ ಸಾಲುಗಳನ್ನು ಓದುವವರೆಗೆ ಲೂಪ್ ಮಾಡುವುದು. |
03:17 | 'print $_ ' (ಪ್ರಿಂಟ್ ಡಾಲರ್ ಅಂಡರ್ಸ್ಕೋರ್) ವೇರಿಯೇಬಲ್, ಈಗಿನ ಲೈನ್ ನಲ್ಲಿ ಇರುವುದನ್ನು ಪ್ರಿಂಟ್ ಮಾಡುವುದು. |
03:22 | ಕೊನೆಯದಾಗಿ, 'open' ಸ್ಟೇಟ್ಮೆಂಟ್ ನಲ್ಲಿ ನಾವು ಕೊಟ್ಟ ' ಫೈಲ್ ಹ್ಯಾಂಡಲ್' ನೇಮ್ ನೊಂದಿಗೆ ಫೈಲನ್ನು ಕ್ಲೋಸ್ ಮಾಡಿ. |
03:29 | ಫೈಲನ್ನು ಕ್ಲೋಸ್ ಮಾಡುವುದು, ಅದರಲ್ಲಿ ಆಕಸ್ಮಿಕ ಬದಲಾವಣೆಗಳು ಅಥವಾ ತಿದ್ದುಪಡಿ ಆಗುವುದನ್ನು ತಡೆಯುತ್ತದೆ. |
03:36 | ಈಗ, ಫೈಲನ್ನು ಸೇವ್ ಮಾಡಲು 'Ctrl+S' ಅನ್ನು ಒತ್ತಿ. |
03:40 | ನಾವು ಪ್ರೊಗ್ರಾಂಅನ್ನು ಎಕ್ಸೀಕ್ಯೂಟ್ ಮಾಡೋಣ. |
03:42 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl openfile dot pl' ಮತ್ತು 'Enter' ಅನ್ನು ಒತ್ತಿ. |
03:51 | ಔಟ್ಪುಟ್, ಇಲ್ಲಿ ತೋರಿಸಿದಂತೆ ಕಾಣುತ್ತದೆ. |
03:54 | ನಾವು ಇದೇ ವಿಷಯವನ್ನು, ಮೊದಲು 'first dot txt' ಎಂಬ ಫೈಲ್ ನಲ್ಲಿ ನೋಡಿದ್ದೆವು. |
03:59 | ನಂತರ, ಒಂದು ಫೈಲ್ ನಲ್ಲಿ ಡೇಟಾಅನ್ನು ಹೇಗೆ ಬರೆಯುವುದೆಂದು ನಾವು ನೋಡುವೆವು. |
04:03 | 'ಗ್ರೇಟರ್ ದ್ಯಾನ್' ಚಿಹ್ನೆಯೊಂದಿಗೆ (>) 'open' ಸ್ಟೇಟ್ಮೆಂಟ್, 'WRITE' ಮೋಡನ್ನು ಡಿಫೈನ್ ಮಾಡುತ್ತದೆ. |
04:08 | 'filename', ಫೈಲ್ ನ ಹೆಸರನ್ನು ಪ್ರತಿನಿಧಿಸುತ್ತದೆ. ಇದರಲ್ಲಿ ಡೇಟಾಅನ್ನು ಬರೆಯಬೇಕಾಗಿದೆ. |
04:13 | ನಾನು ಈಗಾಗಲೇ ಸೇವ್ ಮಾಡಿರುವ 'writefile.pl' ಎಂಬ ಸ್ಯಾಂಪಲ್ ಪ್ರೊಗ್ರಾಮನ್ನು ಓಪನ್ ಮಾಡುತ್ತೇನೆ. |
04:19 | ಟರ್ಮಿನಲ್ ಗೆ ಬದಲಾಯಿಸಿ. |
04:21 | ಈಗ ಹೀಗೆ ಟೈಪ್ ಮಾಡಿ: 'gedit writefile dot pl ampersand' ಮತ್ತು 'Enter' ಅನ್ನು ಒತ್ತಿ. |
04:29 | 'writefile dot pl' ಎಂಬ ಫೈಲ್ ನಲ್ಲಿ, ಸ್ಕ್ರೀನ್ ನ ಮೇಲೆ ತೋರಿಸಿದಂತೆ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ. |
04:34 | ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ. |
04:37 | 'open' ಫಂಕ್ಷನ್, 'second.txt' ಎಂಬ ಫೈಲನ್ನು 'write' ಮೋಡ್ ನಲ್ಲಿ ತೆರೆಯುತ್ತದೆ (ಓಪನ್ ಮಾಡುತ್ತದೆ). |
04:44 | ಫೈಲ್- ನೇಮ್ ನ ಹಿಂದೆ ಇರುವ “>” 'ಗ್ರೇಟರ್ ದ್ಯಾನ್' ಚಿಹ್ನೆಯು, 'write' ಮೋಡ್ ಅನ್ನು ಸೂಚಿಸುತ್ತದೆ. |
04:49 | 'FILE1' ಎಂಬ ಮೊದಲನೆಯ ಪ್ಯಾರಾಮೀಟರ್, ಫೈಲ್-ಹ್ಯಾಂಡಲ್ ಆಗಿದೆ. |
04:53 | 'print ' ಫಂಕ್ಷನ್, ಕೊಟ್ಟ ಟೆಕ್ಸ್ಟ್ ಅನ್ನು 'ಫೈಲ್-ಹ್ಯಾಂಡಲ್', ಅರ್ಥಾತ್, 'FILE1' ನಲ್ಲಿ ಪ್ರಿಂಟ್ ಮಾಡುತ್ತದೆ. |
04:59 | ಈಗ, ಫೈಲನ್ನು ಸೇವ್ ಮಾಡಲು 'Ctrl+S' ಅನ್ನು ಒತ್ತಿ. |
05:03 | ನಾವು ಪ್ರೊಗ್ರಾಂಅನ್ನು ಎಕ್ಸೀಕ್ಯೂಟ್ ಮಾಡೊಣ. |
05:05 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl writefile dot pl' ಮತ್ತು 'Enter' ಅನ್ನು ಒತ್ತಿ. |
05:12 | ಈಗ ನಾವು 'second.txt' ಎಂಬ ಫೈಲ್ ನಲ್ಲಿ, ಟೆಕ್ಸ್ಟ್ ಅನ್ನು ಬರೆಯಲಾಗಿದೆಯೇ ಎಂಬುದನ್ನು ನೋಡೋಣ. |
05:18 | ಹೀಗೆ ಟೈಪ್ ಮಾಡಿ: 'gedit second.txt' ಮತ್ತು 'Enter' ಅನ್ನು ಒತ್ತಿ. |
05:23 | ನಾವು “Working with files makes data storage and retrieval a simple task!” ಎಂಬ ಟೆಕ್ಸ್ಟ್ ಅನ್ನು, ನಮ್ಮ 'second.txt' ಫೈಲ್ ನಲ್ಲಿ ನೋಡಬಹುದು. |
05:32 | ನಾವು 'second.txt' ಫೈಲನ್ನು ಕ್ಲೋಸ್ ಮಾಡೋಣ. |
05:35 | ಇದೇ ಫೈಲನ್ನು ನಾವು ಮತ್ತೆ 'write' ಮೋಡ್ ನಲ್ಲಿ ಓಪನ್ ಮಾಡಿದರೆ ಏನಾಗುವುದು? ನಾವು ಇದನ್ನು ನೋಡೋಣ. |
05:41 | 'writefile.pl' ನಲ್ಲಿ, ಹಿಂದಿನ 'print' ಸ್ಟೇಟ್ಮೆಂಟ್ ಅನ್ನು ಕಾಮೆಂಟ್ ಮಾಡಿ. |
05:46 | ಈ ಕೆಳಗೆ ತೋರಿಸಿದ 'print' ಕಮಾಂಡ್ ಅನ್ನು ಸೇರಿಸಿ. |
05:48 | ಈಗ, ಫೈಲನ್ನು ಸೇವ್ ಮಾಡಲು 'Ctrl+S' ಅನ್ನು ಒತ್ತಿ. ನಾವು ಪ್ರೊಗ್ರಾಂಅನ್ನು ಎಕ್ಸೀಕ್ಯೂಟ್ ಮಾಡೋಣ. |
05:54 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl writefile dot pl' ಮತ್ತು 'Enter' ಅನ್ನು ಒತ್ತಿ. |
06:00 | ಈಗ ನಾವು ಮತ್ತೊಮ್ಮೆ 'second.txt' ಫೈಲನ್ನು ಪರಿಶೀಲಿಸೋಣ. |
06:04 | ಹೀಗೆ ಟೈಪ್ ಮಾಡಿ: 'gedit second.txt' ಮತ್ತು 'Enter' ಅನ್ನು ಒತ್ತಿ. |
06:09 | ನಾವು “Greater than symbol (>) overwrites the content of the file!" ಎಂಬ ಔಟ್ಪುಟ್ ಅನ್ನು ನೋಡಬಹುದು. |
06:14 | 'second.txt ಫೈಲ್ ನಲ್ಲಿ ಮೊದಲು ಇರುವುದನ್ನು ತಿದ್ದಿ ಬರೆಯಲಾಗಿದೆ. |
06:19 | ಏಕೆಂದರೆ, ನಾವು ಫೈಲನ್ನು ಮತ್ತೆ 'write' ಮೋಡ್ ನಲ್ಲಿ ಓಪನ್ ಮಾಡಿದ್ದೆವು. |
06:24 | ನಾವು 'second.txt' ಫೈಲನ್ನು ಕ್ಲೋಸ್ ಮಾಡೋಣ. |
06:27 | ನಂತರ, ನಾವು ಈಗಿರುವ ಫೈಲ್ ಗೆ ಡೇಟಾಅನ್ನು ಹೇಗೆ ಸೇರಿಸುವುದು (append) ಎಂಬುದನ್ನು ನೋಡುವೆವು. |
06:32 | ಎರಡು 'ಗ್ರೇಟರ್ ದ್ಯಾನ್ (>>)' ಚಿಹ್ನೆಗಳನ್ನು ಹೊಂದಿರುವ 'open' ಸ್ಟೇಟ್ಮೆಂಟ್, 'APPEND' ಮೋಡ್ ಅನ್ನು ಸೂಚಿಸುತ್ತದೆ. |
06:38 | ಈಗ ನಾನು, 'writefile dot pl' ಎಂಬ ಫೈಲನ್ನು ಮತ್ತೆ 'gedit' (ಜಿ-ಎಡಿಟ್) ನಲ್ಲಿ ಓಪನ್ ಮಾಡುವೆನು. |
06:44 | 'open' ಸ್ಟೇಟ್ಮೆಂಟ್ ನಲ್ಲಿ, ಎರಡು 'ಗ್ರೇಟರ್ ದ್ಯಾನ್ (>>)' ಚಿಹ್ನೆಗಳನ್ನು ಟೈಪ್ ಮಾಡಿ. ಈ ಫೈಲ್, 'append' (ಅಪ್ಪೆಂಡ್) ಮೋಡ್ ನಲ್ಲಿ ಇರುವುದನ್ನು ಇದು ಸೂಚಿಸುವುದು. |
06:52 | ಹಿಂದಿನ 'print' ಸ್ಟೇಟ್ಮೆಂಟ್ ಅನ್ನು ಆಗಲೇ ಎಕ್ಸಿಕ್ಯೂಟ್ ಮಾಡಿರುವುದರಿಂದ ಅದನ್ನು ಕಾಮೆಂಟ್ ಮಾಡಿ. |
06:57 | ಈಗಿರುವ ಡೇಟಾಗೆ ಅಪ್ಪೆಂಡ್ ಮಾಡಲು, ಈ ಸಾಲನ್ನು ಸೇರಿಸಿ: “print FILE1” ಡಬಲ್ ಕೋಟ್ಸ್ ನಲ್ಲಿ “Two greater than symbols ( >>) open the file in append mode”. |
07:07 | ಈಗ, ಫೈಲನ್ನು ಸೇವ್ ಮಾಡಲು ' Ctrl+S' ಅನ್ನು ಒತ್ತಿ. |
07:11 | ನಾವು ಪ್ರೊಗ್ರಾಂಅನ್ನು ಎಕ್ಸೀಕ್ಯೂಟ್ ಮಾಡೋಣ. |
07:14 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl writefile dot pl' ಮತ್ತು 'Enter' ಅನ್ನು ಒತ್ತಿ. |
07:20 | ಈಗ, 'second.txt' ಫೈಲ್ ಗೆ ಟೆಕ್ಸ್ಟ್ ಅನ್ನು ಸೇರಿಸಲಾಗಿದೆಯೇ ಎಂದು ನಾವು ನೋಡೋಣ. |
07:26 | ಹೀಗೆ ಟೈಪ್ ಮಾಡಿ: 'gedit second.txt' ಮತ್ತು 'Enter' ಅನ್ನು ಒತ್ತಿ. |
07:31 | ನಮ್ಮ 'second.txt' ಎಂಬ ಫೈಲ್ ನಲ್ಲಿ, ಟೆಕ್ಸ್ಟ್ ಅಪ್ಪೆಂಡ್ ಆಗಿರುವುದನ್ನು ನಾವು ನೋಡಬಹುದು. |
07:36 | ನಾವು 'second.txt' ಎಂಬ ಫೈಲನ್ನು ಕ್ಲೋಸ್ ಮಾಡೋಣ. |
07:39 | ಹೀಗೆಯೇ, ಇಲ್ಲಿ ಬೇರೆ ಮೋಡ್ ಗಳು ಸಹ ಇರುತ್ತವೆ. |
07:42 | ಈ ಆಯ್ಕೆಗಳನ್ನು ನೀವೇ ಪ್ರಯತ್ನಿಸಿ ಮತ್ತು ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. |
07:49 | ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ, |
07:53 | ಈ ಟ್ಯುಟೋರಿಯಲ್ ನಲ್ಲಿ,
|
08:03 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
'writefile.pl' ಎಂಬ ಪ್ರೊಗ್ರಾಂನಲ್ಲಿ, 'ಫೈಲ್ ಅಟ್ರೀಬ್ಯೂಟ್' ಅನ್ನು ' +>' ಗೆ ಬದಲಾಯಿಸಿ. |
08:11 | ಪ್ರೊಗ್ರಾಂಅನ್ನು ಸೇವ್ ಮಾಡಿ ಮತ್ತು ಎಕ್ಸೀಕ್ಯೂಟ್ ಮಾಡಿ. |
08:14 | ಔಟ್ಪುಟ್ ಅನ್ನು ನೋಡಲು, 'second.txt' ಎಂಬ ಫೈಲನ್ನು ಓಪನ್ ಮಾಡಿ. |
08:17 | ಫೈಲ್ ಅಟ್ರೀಬ್ಯೂಟ್ “ +>” ದ ಬಳಕೆಯನ್ನು ವಿಶ್ಲೇಷಿಸಿ. |
08:22 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
08:29 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
|
08:37 | ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಇಲ್ಲಿಗೆ ಬರೆಯಿರಿ. |
08:41 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು NMEICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
08:48 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. |
08:53 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .
ವಂದನೆಗಳು. |