Difference between revisions of "LibreOffice-Suite-Draw/C2/Insert-text-in-drawings/Kannada"

From Script | Spoken-Tutorial
Jump to: navigation, search
Line 138: Line 138:
 
|-
 
|-
 
||02:58
 
||02:58
||ನೀವು ಪಠ್ಯದ '''Character'''ಅನ್ನು ಫಾರ್ಮ್ಯಾಟ್ ಮಾಡಬಹುದು.
+
||ನೀವು ಪಠ್ಯದ 'Character'ಅನ್ನು ಫಾರ್ಮ್ಯಾಟ್ ಮಾಡಬಹುದು.
 
|-
 
|-
 
||02:59  
 
||02:59  

Revision as of 12:29, 29 January 2016

Time Narration
00:01 LibreOffice Drawನಲ್ಲಿ Inserting Text in Drawings ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ, ನಾವು:
00:10 * ಚಿತ್ರದಲ್ಲಿ ಪಠ್ಯದೊಂದಿಗೆ ಕಾರ್ಯ ನಿರ್ವಹಿಸುವುದು
00:12 * ಚಿತ್ರದಲ್ಲಿನ ಪಠ್ಯವನ್ನು ಫಾರ್ಮ್ಯಾಟ್ ಮಾಡುವುದು ಮತ್ತು
00:15 * ಟೆಕ್ಸ್ಟ್-ಬಾಕ್ಸ್ ಗಳೊಂದಿಗೆ ಕಾರ್ಯ ನಿರ್ವಹಿಸುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ.
00:17 ನಾವು,
  • 'ಇಂಡೆಂಟ್ಸ್', 'ಸ್ಪೇಸ್' ಮತ್ತು 'ಅಲೈನ್ ಟೆಕ್ಸ್ಟ್' ಗಳನ್ನು ಸೆಟ್ ಮಾಡುವುದು
00:22 * 'ಲೈನ್' ಮತ್ತು 'ಆರೋ (Arrow)'ಗಳಿಗೆ ಪಠ್ಯವನ್ನು ಸೇರಿಸುವುದು ಮತ್ತು
00:26 * 'ಕಾಲ್ ಔಟ್' ಗಳಲ್ಲಿ ಪಠ್ಯಗಳನ್ನು ಇಡುವುದು ಇತ್ಯಾದಿಗಳನ್ನೂ ಕಲಿಯಲಿದ್ದೇವೆ.
00:29 ಪಠ್ಯವನ್ನು ಎರಡು ರೀತಿಯಲ್ಲಿ ಸೇರಿಸಬಹುದು:
00:31 * ಚಿತ್ರಿಸಿದ ಆಬ್ಜೆಕ್ಟ್ ನಲ್ಲಿ,
00:35 ಲೈನ್ ಗಳು ಮತ್ತು ಆರೋ (arrow) ಗಳ ಮೇಲೂ ಇದನ್ನು ನೇರವಾಗಿ ಸೇರಿಸಬಹುದು.
00:37 * ಒಂದು ಸ್ವತಂತ್ರವಾದ 'Draw' ಆಬ್ಜೆಕ್ಟ್ ಎಂದು ಇದನ್ನು ಟೆಕ್ಸ್ಟ್ ಬಾಕ್ಸ್ ನಲ್ಲಿಯೂ ಸೇರಿಸಬಹುದು.
00:42 ಇಲ್ಲಿ ನಾವು :
00:44 *ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು
  • 'LibreOffice Suite' ನ 3.3.4 ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ.
00:52 ನಾವು “Water Cycle” ಎಂಬ 'Draw' ಫೈಲನ್ನು ತೆರೆಯೋಣ ಮತ್ತು ಇದಕ್ಕೆ ಕೆಲವು ಪಠ್ಯವನ್ನು ಸೇರಿಸೋಣ.
00:57 ಸೂರ್ಯನ ಪಕ್ಕದಲ್ಲಿರುವ ಎರಡು ಬಿಳಿ ಮೋಡಗಳಿಗೆ ನಾವು “Cloud Formation” ಎಂದು ಪಠ್ಯವನ್ನು ಸೇರಿಸೋಣ.
01:04 ಬಿಳಿ ಮೋಡಗಳ ಗುಂಪನ್ನು ಆಯ್ಕೆ ಮಾಡಿ.
01:06 ಗುಂಪಿನೊಳಗೆ ಹೋಗಲು ಅದರ ಮೇಲೆ ಎರಡು ಬಾರಿ ಕ್ಲಿಕ್ (Double-click) ಮಾಡಿ.
01:10 ನಾವು ಮೇಲಿನ ಮೋಡವನ್ನು ಆಯ್ಕೆ ಮಾಡೋಣ.
01:13 ಈಗ, 'Drawing' ಎಂಬ ಟೂಲ್-ಬಾರ್ ನಿಂದ 'Text' ಎಂಬ ಟೂಲ್ ಅನ್ನು ಆಯ್ಕೆ ಮಾಡೋಣ.
01:17 ಕರ್ಸರ್, ಒಂದು ಸಣ್ಣ, ಉದ್ದನೆಯ, ಮಿನುಗುವ ಗೆರೆ ಆಗಿ ಪರಿವರ್ತಿತವಾಗಿದೆ ಎಂಬುದನ್ನು ನೀವು ಕಾಣಬಲ್ಲಿರಾ?
01:23 ಇದು 'ಟೆಕ್ಸ್ಟ್ ಕರ್ಸರ್' ಆಗಿದೆ.
01:25 “Cloud Formation” ಎಂದು ಪಠ್ಯವನ್ನು ಟೈಪ್ ಮಾಡೋಣ.
01:29 ಈಗ, ಪೇಜ್ ನ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ.
01:33 ನಾವು ಇನ್ನೊಂದು ಬಿಳಿಯ ಮೋಡಕ್ಕೂ ಇದೇ ಪಠ್ಯವನ್ನು ಬರೆಯೋಣ.
01:37 ಗ್ರೂಪ್ ನಿಂದ ಹೊರಬರಲು ಪೇಜ್ ನ ಮೇಲೆ ಎಲ್ಲಿಯಾದರೂ ಡಬಲ್-ಕ್ಲಿಕ್ ಮಾಡಿ.
01:42 ಈಗ ನಾವು ಸೂರ್ಯನನ್ನು ಇದೇ ರೀತಿಯಲ್ಲಿ ಹೆಸರಿಸೋಣ.
01:45 ಆಬ್ಜೆಕ್ಟ್ ಗಳಲ್ಲಿ ಪಠ್ಯವನ್ನು ಬರೆಯುವುದು ಇದಕ್ಕಿಂತ ಸುಲಭವಾಗಲಾರದು!
01:50 ಅನಂತರ, ನಾವು ಬೂದು ಬಣ್ಣದ ಮೋಡಗಳ ಗುಂಪನ್ನು ಆರಿಸೋಣ.
01:53 ಮೊದಲಿನಂತೆಯೇ, ಗ್ರೂಪ್ ನ ಒಳಹೋಗಲು ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.
01:57 “Rain Cloud” ಎಂದು ಪ್ರತಿಯೊಂದು ಮೋಡದಲ್ಲೂ ಟೈಪ್ ಮಾಡಿ.
02:02 ಬೂದು ಬಣ್ಣದ ಮೋಡಗಳಲ್ಲಿನ ಪಠ್ಯವು ಕಪ್ಪು ಬಣ್ಣದಲ್ಲಿರುವುದರಿಂದ ಅದು ಕಾಣಿಸುವುದಿಲ್ಲ.
02:07 ಹಾಗಾಗಿ, ನಾವು ಪಠ್ಯದ ಬಣ್ಣವನ್ನು ಬಿಳಿಯಾಗಿ ಪರಿವರ್ತಿಸೋಣ.
02:11 ಪಠ್ಯವನ್ನು ಆಯ್ಕೆ ಮಾಡಿ ಮತ್ತು 'ಕಾಂಟೆಕ್ಸ್ಟ್ ಮೆನು'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು “Character” ಅನ್ನು ಆಯ್ಕೆ ಮಾಡಿ.
02:17 “Character” ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
02:20 “Font Effects” ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
02:23 'Font color' ಫೀಲ್ಡ್ ನಲ್ಲಿ, ಸ್ಕ್ರೋಲ್-ಡೌನ್ ಮಾಡಿ ಮತ್ತು “White” ಅನ್ನು ಆರಿಸಿ.
02:28 'OK'ಯನ್ನು ಕ್ಲಿಕ್ ಮಾಡಿ.
02:30 ಫಾಂಟ್ ಕಲರ್ ಬಿಳಿಯಾಗಿ ಬದಲಾಗುತ್ತದೆ.
02:33 ಇದೇ ರೀತಿಯಾಗಿ, ನಾವು ಎರಡನೆಯ ಮೋಡದಲ್ಲಿರುವ ಪಠ್ಯದ ಬಣ್ಣವನ್ನೂ ಬದಲಾಯಿಸೋಣ.
02:38 ಪಠ್ಯವನ್ನು ಆಯ್ಕೆ ಮಾಡಿ ಮತ್ತು ರೈಟ್-ಕ್ಲಿಕ್ ಮಾಡಿ, ಅನಂತರ 'Character' ಅನ್ನು ಆಯ್ಕೆ ಮಾಡಿ.
02:43 'Font color' ನಲ್ಲಿ, “White” ಅನ್ನು ಆಯ್ಕೆ ಮಾಡಿ.
02:46 ಗುಂಪಿನಿಂದ ಹೊರಬರಲು ಪೇಜ್ ನಲ್ಲಿ ಎಲ್ಲಿಯಾದರೂ ಡಬಲ್-ಕ್ಲಿಕ್ ಮಾಡಿ.
02:50 ಹೀಗೆಯೇ, ಪರ್ವತವನ್ನು ಬಿಂಬಿಸುವ ತ್ರಿಭುಜದಲ್ಲಿ “Mountain” ಎಂಬ ಪದವನ್ನು ಟೈಪ್ ಮಾಡೋಣ.
02:58 ನೀವು ಪಠ್ಯದ 'Character'ಅನ್ನು ಫಾರ್ಮ್ಯಾಟ್ ಮಾಡಬಹುದು.
02:59 ಎಂದರೆ, ಫಾಂಟ್-ಸ್ಟೈಲ್ ಅನ್ನು ಬದಲಾಯಿಸುವುದು ಮತ್ತು ಫಾಂಟ್ ಗಳಿಗೆ ವಿಶೇಷ ಪರಿಣಾಮಗಳನ್ನು ಉಂಟುಮಾಡುವುದು.
03:05 ನೀವು 'Paragraph' ನಲ್ಲಿಯೂ ಪಠ್ಯವನ್ನು ಫಾರ್ಮ್ಯಾಟ್ ಮಾಡಬಹುದು, ಎಂದರೆ ಪಠ್ಯವನ್ನು ಅಲೈನ್ ಮಾಡುವುದು, 'ಇಂಡೆಂಟ್ಸ್' ಅಥವಾ 'ಸ್ಪೇಸಿಂಗ್' ಅನ್ನು ಸೆಟ್ ಮಾಡುವುದು ಮತ್ತು ಟ್ಯಾಬ್ ನ ಸ್ಥಾನಗಳನ್ನು ಸೆಟ್ ಮಾಡುವುದು ಇತ್ಯಾದಿ.
03:13 ನೀವು ಈ ಡೈಲಾಗ್-ಬಾಕ್ಸ್-ಗಳನ್ನು,
03:16 'ಕಾಂಟೆಕ್ಸ್ಟ್ ಮೆನ್ಯೂ'ವಿನಿಂದ ಅಥವಾ
03:18 'Main ಮೆನ್ಯೂ'ವಿನಿಂದ ಪಡೆಯಬಹುದು.
03:21 'Main ಮೆನ್ಯೂ'ವಿನಿಂದ 'Character' ಎಂಬ ಡೈಲಾಗ್-ಬಾಕ್ಸ್ ಅನ್ನು ಪ್ರವೇಶಿಸಲು, 'Format' ಆಯ್ಕೆ ಮಾಡಿ ಮತ್ತು 'Character'ಅನ್ನು ಆರಿಸಿ.
03:28 'Main ಮೆನ್ಯೂ'ವಿನಿಂದ 'Paragraph' ಎಂಬ ಡೈಲಾಗ್-ಬಾಕ್ಸ್ ಅನ್ನು ಪ್ರವೇಶಿಸಲು, 'Format' ಆಯ್ಕೆ ಮಾಡಿ ಮತ್ತು 'Paragraph' ಅನ್ನು ಆರಿಸಿ.
03:36 ಆಯತಾಕೃತಿಯಲ್ಲಿ, ಅಂತರ್ಜಲ ಎಲ್ಲಿ ತುಂಬಿಕೊಳ್ಳುತ್ತದೆ ಎಂದು ತೋರಿಸಲು, ನಾವು ದಪ್ಪನೆಯ ಕಪ್ಪು ಗೆರೆಯನ್ನು ಎಳೆಯೋಣ.
03:43 'Drawing' ಟೂಲ್-ಬಾರ್ ನಿಂದ, 'Line'ಅನ್ನು ಆರಿಸಿ.
03:46 ಕರ್ಸರ್ ಅನ್ನು 'page' ಗೆ ಸ್ಥಳಾಂತರಿಸಿ, ಎಡ ಮೌಸ್-ಬಟನ್ ಅನ್ನು ಒತ್ತಿ ಮತ್ತು ಎಡದಿಂದ ಬಲಕ್ಕೆ ಎಳೆಯಿರಿ.
03:54 ಆಯತಾಕೃತಿಯನ್ನು ಎರಡು ಸಮಭಾಗಗಳಾಗಿ ವಿಭಾಗಿಸುವಂತೆ ಒಂದು ಅಡ್ಡಗೆರೆಯನ್ನು ಎಳೆಯಿರಿ.
04:01 ನೆಲ ಎರಡಾಗಿ ವಿಭಾಗವಾಯಿತು!
04:04 ಈಗ, ನಾವು ಗೆರೆಯನ್ನು ಇನ್ನೂ ಅಗಲವಾಗಿಸೋಣ.
04:07 ಗೆರೆಯನ್ನು ಆಯ್ಕೆ ಮಾಡಿ ಮತ್ತು ಕಾಂಟೆಕ್ಸ್ಟ್-ಮೆನುವಿಗಾಗಿ ರೈಟ್-ಕ್ಲಿಕ್ ಮಾಡಿ.
04:11 'Line' ಮೇಲೆ ಕ್ಲಿಕ್ ಮಾಡಿ. 'Line' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
04:16 'Style' ಫೀಲ್ಡ್ ನಲ್ಲಿ, ಡ್ರಾಪ್-ಡೌನ್ ಬಾಕ್ಸ್ ಕ್ಲಿಕ್ ಮಾಡಿ.
04:20 'Ultrafine 2 dots 3 dashes' ಅನ್ನು ಆಯ್ಕೆ ಮಾಡಿ.
04:24 'Width ' ಫೀಲ್ಡ್ ನಲ್ಲಿ, ವ್ಯಾಲ್ಯೂ ಪಾಯಿಂಟ್ ಅನ್ನು '.70' ಎಂದು ಸೆಟ್ ಮಾಡಿ.
04:29 'OK'ಯನ್ನು ಕ್ಲಿಕ್ ಮಾಡಿ.
04:31 ನಾವು ಗೆರೆಯನ್ನು ಅಗಲಗೊಳಿಸಿದ್ದೇವೆ!
04:34 ಆಯತದ ಒಳಗೆ “Ground water table” ಎಂಬ ಪಠ್ಯವನ್ನು ಸೇರಿಸೋಣ.
04:39 ಮೊದಲು, 'Text' ಎಂಬ ಟೂಲನ್ನು ಆಯ್ಕೆ ಮಾಡೋಣ.
04:42 ಇದು 'Drawing' ಟೂಲ್ ಬಾರ್ ನ ಮೇಲಿನ ದೊಡ್ಡಕ್ಷರ “T” ಎಂಬ ಆಯ್ಕೆಯಾಗಿದೆ.
04:46 'Draw' ಪೇಜ್ ಗೆ ಹೋಗಿ.
04:49 ಈಗ, ಕರ್ಸರ್ ಒಂದು ಅಧಿಕ ಚಿಹ್ನೆಯಾಗಿ ಪರಿವರ್ತಿತವಾಗಿದೆ. ಇದರ ಕೆಳಗೆ ಒಂದು ಸಣ್ಣ ದೊಡ್ಡಕ್ಷರ 'I' ಇದೆ.
04:55 ಆಯತದ ಒಳಗೆ ಕ್ಲಿಕ್ ಮಾಡಿ.
04:57 ಟೆಕ್ಸ್ಟ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಗಮನಿಸಿ.
05:01 ಇಲ್ಲಿ, ನಾವು “Ground water table” ಎಂದು ಟೈಪ್ ಮಾಡೋಣ.
05:05 ಪಠ್ಯವನ್ನು ಟೆಕ್ಸ್ಟ್-ಬಾಕ್ಸ್ ನ ಮಧ್ಯಕ್ಕೆ ಅಲೈನ್ ಮಾಡಲು, ಕರ್ಸರ್ ಅನ್ನು ಟೆಕ್ಸ್ಟ್-ಬಾಕ್ಸ್ ನ ಒಳಗೆ ಇಡಿ.
05:12 ಮೇಲೆ ಇರುವ ಸ್ಟ್ಯಾಂಡರ್ಡ್ ಟೂಲ್-ಬಾರ್ ನಲ್ಲಿಯ 'Centered' ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
05:19 ಇದೇ ರೀತಿ, ನಾವು ತ್ರಿಭುಜದಲ್ಲಿ
05:22 “Rain water flows from land into rivers and sea” ಎಂಬ ಪಠ್ಯವನ್ನು ಸೇರಿಸೋಣ.
05:30 ಅಸೈನ್ಮೆಂಟ್ ಗಾಗಿ ಟ್ಯುಟೋರಿಯಲ್ ಅನ್ನು ಪಾಸ್ (pause) ಮಾಡಿ.
05:33 ಒಂದು ಚೌಕವನ್ನು ಬಿಡಿಸಿ.
05:35 ಈ ಪಠ್ಯವನ್ನು ಸೇರಿಸಿ: “This is a square.
05:38 A square has four equal sides and four equal angles. Each angle in a square is ninety degrees.
05:46 The square is a quadrilateral" (ಕ್ವಾಡ್ರಿಲ್ಯಾಟರಲ್).
05:50 'Text' ಎಂಬ ಡೈಲಾಗ್-ಬಾಕ್ಸ್ ನಲ್ಲಿಯ ಆಯ್ಕೆಗಳನ್ನು ಉಪಯೋಗಿಸಿ ಈ ಪಠ್ಯವನ್ನು ಫಾರ್ಮ್ಯಾಟ್ ಮಾಡಿ.
05:54 'font, size, style' ಮತ್ತು 'alignment' ಆಯ್ಕೆಗಳನ್ನು ಪಠ್ಯಕ್ಕೆ ಅನ್ವಯಿಸಿ(ಅಪ್ಲೈ ಮಾಡಿ).
06:00 ಈಗ, ನಾವು ಚಿತ್ರದಲ್ಲಿನ 'ಆರೋ' ಗಳನ್ನು ಕ್ರಮಪಡಿಸೋಣ.
06:03 ಈ 'ಆರೋ'ಗಳು ಭೂಮಿ, ಸಸ್ಯಗಳು ಮತ್ತು ಜಲಮೂಲಗಳಲ್ಲಿನ ನೀರು ಆವಿಯಾಗಿ ಮೋಡವಾಗುವುದನ್ನು ತೋರಿಸುತ್ತವೆ.
06:12 ಎಡ ಕೊನೆಯ 'ಆರೋ'ವನ್ನು ಆಯ್ಕೆ ಮಾಡೋಣ.
06:14 ಈಗ, ಕ್ಲಿಕ್ ಮಾಡಿ ಪರ್ವತದ ಕಡೆಗೆ ಎಳೆಯಿರಿ.
06:18 ನಾವು ಮಧ್ಯದ 'ಆರೋ'ವನ್ನು ಆಯ್ಕೆ ಮಾಡೋಣ.
06:21 ಈಗ, ಕ್ಲಿಕ್ ಮಾಡಿ ಮರಗಳ ಕಡೆಗೆ ಎಳೆಯಿರಿ.
06:25 ಮೂರನೆಯ 'ಆರೋ', ನೀರಿನಿಂದ ಮೋಡಗಳೆಡೆಗೆ ನೀರಿನ ಬಾಷ್ಪೀಕರಣವನ್ನು ತೋರಿಸುತ್ತದೆ.
06:31 ಪರ್ವತದ ಮೇಲಿನಿಂದ ಕೆಳಗೆ ನೀರಿನ ಓಟವನ್ನು ತೋರಿಸುವ ಒಂದು ರೇಖೆಯನ್ನು ಚಿತ್ರಿಸಲು ನಾವು Curve ಆಯ್ಕೆಯನ್ನು ಉಪಯೋಗಿಸೋಣ.
06:37 Drawing ಟೂಲ್ ಬಾರ್ ನಿಂದ, Curve ಮೇಲೆ ಕ್ಲಿಕ್ ಮಾಡಿ ಮತ್ತು Freeform Line ಅನ್ನು ಆಯ್ಕೆ ಮಾಡಿ.
06:43 draw ಪೇಜ್ ನ ಮೇಲೆ, ಪರ್ವತದ ಪಕ್ಕದಲ್ಲಿ ಕರ್ಸರ್ ಅನ್ನು ಇರಿಸಿ.
06:47 ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಕೆಳಗೆ ಎಳೆಯಿರಿ.
06:51 ನೀವು ಒಂದು ವಕ್ರ ರೇಖೆಯನ್ನು ಚಿತ್ರಿಸಿದ್ದೀರಿ!
06:53 ಈಗ, ನಾವು ಈ ಪ್ರತಿಯೊಂದು arrowಗೂ ವಿವರಣೆಯನ್ನು ಬರೆಯೋಣ.
06:58 ಬಲದಲ್ಲಿರುವ ಮೊದಲನೆಯ arrowವನ್ನು ಆಯ್ಕೆ ಮಾಡಿ ಮತ್ತು ಟೈಪ್ ಮಾಡಿ: “Evaporation (ಇವ್ಯಾಪೊರೇಷನ್) from rivers and seas”.
07:06 ಪೇಜ್ ನಲ್ಲಿ ಎಲ್ಲಿಯಾದರೂ ಕ್ಲಿಕ್ ಮಾಡಿ.
07:08 ಗೆರೆಯ ಮೇಲೆ ಪಠ್ಯ ಗೋಚರವಾಗುತ್ತದೆ.
07:12 ಪಠ್ಯವು ಸರಿಯಾಗಿ ಗೆರೆಯ ಮೇಲೆಯೇ ಇರುವುದರಿಂದ ಅದು ಸ್ಪಷ್ಟವಾಗಿಲ್ಲ ಎಂಬುದನ್ನು ಗಮನಿಸಿ.
07:18 ಪಠ್ಯವನ್ನು ಗೆರೆಗಿಂತ ಮೇಲೆ ಕೊಂಡೊಯ್ಯಲು, ಗೆರೆಯ ಮೇಲೆ ಕ್ಲಿಕ್ ಮಾಡಿ.
07:22 ಪಠ್ಯವು ಅಡ್ಡವಾಗಿ ಇರಿಸಲ್ಪಟ್ಟಿದೆ.
07:25 ಕರ್ಸರ್ ಅನ್ನು ಪಠ್ಯದ ಕೊನೆಗೆ ಇರಿಸಿ ಮತ್ತು Enter ಕೀಯನ್ನು ಒತ್ತಿ.
07:30 page ನ ಮೇಲೆ ಕ್ಲಿಕ್ ಮಾಡಿ.
07:32 ಪಠ್ಯವು align ಆಯಿತು.
07:35 ಗೆರೆಯ ಮತ್ತು arrowಗಳ ಮೇಲೆ ಟೈಪ್ ಮಾಡಿದ ಪಠ್ಯವನ್ನು ಕಂಟೆಕ್ಸ್ಟ್ ಮೆನುವಿನಲ್ಲಿಯ ಆಯ್ಕೆಗಳನ್ನು ಉಪಯೋಗಿಸಿಕೊಂಡು ಕೂಡ ಫಾರ್ಮ್ಯಾಟ್ ಮಾಡಬಹುದು.
07:41 context menuವನ್ನು ಉಪಯೋಗಿಸಿ font sizeಅನ್ನು ಫಾರ್ಮ್ಯಾಟ್ ಮಾಡೋಣ.
07:45 ಈ ಪಠ್ಯದ ಮೇಲೆ ಕ್ಲಿಕ್ ಮಾಡಿ:
07:47 “Evaporation from rivers and seas”.
07:50 ಎಂಬ ಪಠ್ಯವು ಈಗ ಸಮತಲವಾಗಿದೆ.
07:53 ನಾವು ಪಠ್ಯವನ್ನು ಆಯ್ಕೆ ಮಾಡೋಣ ಮತ್ತು context menu ವನ್ನು ನೋಡಲು ರೈಟ್-ಕ್ಲಿಕ್ ಮಾಡೋಣ.
07:58 Size ಅನ್ನು ಆಯ್ಕೆ ಮಾಡಿ ಮತ್ತು 22 ಅನ್ನು ಕ್ಲಿಕ್ ಮಾಡಿ.
08:02 ಫಾಂಟ್ ನ ಗಾತ್ರ ಬದಲಾಗಿದೆ.
08:05 ಈಗ, ನಾವು ಈ ಕೆಳಗಿನ ಪಠ್ಯವನ್ನು ಉಳಿದ ಎಲ್ಲಾ arrowಗಳಿಗೆ ಟೈಪ್ ಮಾಡೋಣ.
08:09 Evaporation from soil
08:12 Evaporation from vegetation
08:17 Run off water from the mountains.
08:22 ನಾವು ಬೂದು ಬಣ್ಣದ ಮೋಡಗಳಿಂದ ಮಳೆಯಾಗುತ್ತಿರುವುದನ್ನು ತೋರಿಸೋಣ.
08:26 ಮಳೆಯನ್ನು ತೋರಿಸಲು, ಮೋಡದಿಂದ ಕೆಳಗೆ ಮುಖಮಾಡಿರುವ dotted arrowಗಳನ್ನು ಚಿತ್ರಿಸೋಣ.
08:32 Drawing ಟೂಲ್ ಬಾರ್ ನಿಂದ, Line Ends with Arrow ಅನ್ನು ಆಯ್ಕೆ ಮಾಡಿ.
08:37 ಅನಂತರ, ಎಡಕ್ಕಿರುವ ಮೊದಲ ಕಪ್ಪುಮೋಡದ ಮೇಲೆ ಕರ್ಸರ್ ಅನ್ನು ಇಡಿ.
08:42 ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಇದನ್ನು ಕೆಳಗೆ ಎಳೆಯಿರಿ.
08:46 context menuವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Lineಅನ್ನು ಕ್ಲಿಕ್ ಮಾಡಿ.
08:50 Line ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
08:53 Style” ಡ್ರಾಪ್ ಡೌನ್ ಲಿಸ್ಟ್ ಮೇಲೆ ಕ್ಲಿಕ್ ಮಾಡಿ ಮತ್ತು
08:56 2 dots 1 dash ಅನ್ನು ಆಯ್ಕೆ ಮಾಡಿ.
08:58 OK ಕ್ಲಿಕ್ ಮಾಡಿ.
09:00 ನಾವು ಒಂದು dotted arrowವನ್ನು ರಚಿಸಿದ್ದೇವೆ.
09:02 ನಾವು ಈ ಮೋಡಕ್ಕೆ ಇನ್ನೂ ಎರಡು arrowಗಳನ್ನು copy ಮತ್ತು paste ಮಾಡೋಣ.
09:06 ಈಗ ನಾವು ಇನ್ನೊಂದು ಮೋಡಕ್ಕೆ ಎರಡು arrowಗಳನ್ನು copy ಮತ್ತು paste ಮಾಡೋಣ.
09:12 ಈಗ, ನಾವು “Rain” ಎನ್ನುವ ಪಠ್ಯವನ್ನು dotted arrowಗಳಿಗೆ ಜೋಡಿಸೋಣ.
09:21 ನಾವು “Evaporation to form the clouds” ಎಂಬ ಪಠ್ಯವನ್ನು ಒಂದು ಟೆಕ್ಸ್ಟ್ ಬಾಕ್ಸ್ ನಲ್ಲಿ Water objectನ ಮೇಲೆ ಟೈಪ್ ಮಾಡೋಣ.
09:28 Drawing ಟೂಲ್ ಬಾರ್ ನಿಂದ, Text ಟೂಲ್ ಅನ್ನು ಆಯ್ಕೆ ಮಾಡಿ ಮತ್ತು ಮೊದಲು ತೋರಿಸಿದಂತೆ ಟೆಕ್ಸ್ಟ್ ಬಾಕ್ಸ್ ಅನ್ನು ಚಿತ್ರಿಸಿ.
09:35 ಇದರೊಳಗೆ, “Evaporation to form the clouds” ಎಂದು ಟೈಪ್ ಮಾಡಿ.
09:41 Drawing ಟೂಲ್ ಬಾರ್ ನಿಂದ Text Tool ಅನ್ನು ಆಯ್ಕೆ ಮಾಡಿ
09:44 ಮತ್ತು ಬೂದು ಮೋಡಗಳ ಪಕ್ಕ ಒಂದು ಟೆಕ್ಸ್ಟ್ ಬಾಕ್ಸ್ ಅನ್ನು ರಚಿಸಿ.
09:48 ಇದರೊಳಗೆ “Condensation (ಕಾಂಡೆನ್ಸೇಷನ್) to form rain”ಅನ್ನು ಟೈಪ್ ಮಾಡಿ.
09:53 ಟೆಕ್ಸ್ಟ್-ಬಾಕ್ಸ್ ಅನ್ನು ಸ್ಥಾನಾಂತರಿಸಲು ಮೊದಲು ಅಂಚಿನ ಮೇಲೆ ಕ್ಲಿಕ್ ಮಾಡಿ ಹಾಗೂ
09:57 ಈಗ ಇದನ್ನು ಬೇಕಾದ ಸ್ಥಾನದಲ್ಲಿ drag and drop ಮಾಡಿ.
10:02 ಹಿಂದಿನ ಹಂತಗಳನ್ನೇ ಅನುಸರಿಸಿ, ನಾವು ಒಂದು ಟೆಕ್ಸ್ಟ್ ಬಾಕ್ಸ್ ಅನ್ನು ಉಪಯೋಗಿಸಿ, “WaterCycle Diagram” ಎಂಬ ಶೀರ್ಷಿಕೆಯನ್ನು ಕೊಡೋಣ.
10:07 ಮತ್ತು ಪಠ್ಯವನ್ನು Bold ಆಗಿ ಫಾರ್ಮ್ಯಾಟ್ ಮಾಡೋಣ.
10:16 'Water Cycle' ರೇಖಾಚಿತ್ರದ ರಚನೆಯನ್ನು ನಾವು ಮಾಡಿ ಮುಗಿಸಿದ್ದೇವೆ!
10:20 ಈಗ, ನಾವು Callouts (ಕಾಲ್-ಔಟ್ಸ್) ಗಳ ಬಗ್ಗೆ ಕಲಿಯೋಣ.
10:22 Callouts ಎಂದರೇನು?
10:24 ಅವು ವಿಶಿಷ್ಟ ಟೆಕ್ಸ್ಟ್ ಬಾಕ್ಸ್ ಗಳಾಗಿವೆ. ಅವು Draw ಪೇಜ್ ನಲ್ಲಿಯ
10:29 ಒಂದು object ಅಥವಾ ಒಂದು ಸ್ಥಳಕ್ಕೆ ನಿಮ್ಮ ಗಮನವನ್ನು ಸೆಳೆಯುತ್ತವೆ.
10:33 ಉದಾಹರಣೆಗೆ, ಹೆಚ್ಚಿನ ಕಾಮಿಕ್ ಪುಸ್ತಕಗಳಲ್ಲಿ
10:36 ಪಠ್ಯವನ್ನು Callouts ನಲ್ಲಿ ಇರಿಸಲಾಗಿರುತ್ತದೆ.
10:39 Draw ಫೈಲ್ ಗೆ ಹೊಸ pageಅನ್ನು ಸೇರಿಸೋಣ.
10:42 Main ಮೆನುವಿನಿಂದ, Insert ಅನ್ನು ಆರಿಸಿ ಮತ್ತು Slide ಮೇಲೆ ಕ್ಲಿಕ್ ಮಾಡಿ.
10:47 ಹೊಸದೊಂದು pageಅನ್ನು ಸೇರಿಸಲಾಯಿತು.
10:50 Calloutಅನ್ನು ರಚಿಸಲು, Drawing ಟೂಲ್ ಬಾರ್ ಗೆ ಹೋಗಿ.
10:54 Callout ಐಕಾನ್ ನ ಪಕ್ಕ ಇರುವ ಸಣ್ಣ ಕಪ್ಪು ತ್ರಿಭುಜದ ಮೇಲೆ ಕ್ಲಿಕ್ ಮಾಡಿ.
10:59 ಹಲವಾರು Calloutsಗಳು ಕಾಣಿಸಿಕೊಳ್ಳುತ್ತವೆ.
11:01 Rectangular Calloutನ ಮೇಲೆ ಕ್ಲಿಕ್ ಮಾಡೋಣ.
11:04 pageಗೆ ಕರ್ಸರ್ ಅನ್ನು ಮೂವ್ ಮಾಡಿ, ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ.
11:10 ನೀವು ಒಂದು Calloutಅನ್ನು ಬಿಡಿಸಿದ್ದೀರಿ.
11:12 ನೀವು ಬೇರೆ objectಗಳಿಗೆ ಮಾಡಿದಂತೆಯೇ Calloutನ ಒಳಗೆ ಪಠ್ಯವನ್ನು ಬರೆಯಬಹುದು.
11:18 ಡಬಲ್ ಕ್ಲಿಕ್ ಮಾಡಿ ಮತ್ತು Callout ನ ಒಳಗೆ “This is an example” ಎಂಬ ಪಠ್ಯವನ್ನು ಟೈಪ್ ಮಾಡಿ.
11:25 ಹೀಗೆ, ನಾವು LibreOffice Drawನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
11:30 ಈ ಟ್ಯುಟೋರಿಯಲ್ ನಲ್ಲಿ, ನೀವು:
11:33 * ಚಿತ್ರಗಳಲ್ಲಿ ಪಠ್ಯಗಳನ್ನು ಸಂಪಾದಿಸುವುದನ್ನು,
11:35 * ಚಿತ್ರಗಳಲ್ಲಿನ ಪಠ್ಯವನ್ನು ಫಾರ್ಮ್ಯಾಟ್ ಮಾಡುವುದನ್ನು,
11:38 * ಟೆಕ್ಸ್ಟ್ ಬಾಕ್ಸ್ ನೊಂದಿಗೆ ಕಾರ್ಯ ನಿರ್ವಹಿಸುವುದನ್ನು,
11:40 * Indenting, spacing ಮತ್ತು text aligning ಅನ್ನು,
11:44 * ಲೈನ್ ಮತ್ತು Arrowಗಳಿಗೆ ಪಠ್ಯವನ್ನು ಸೇರಿಸುವುದನ್ನು,
11:46 *ಮತ್ತು Callout ಗಳಲ್ಲಿ ಪಠ್ಯವನ್ನು ಇರಿಸುವುದನ್ನು ಕಲಿತಿದ್ದೀರಿ.
11:50 ಈ ಅಸೈನ್ ಮೆಂಟ್ ಅನ್ನು ನೀವು ಸ್ವಯಂ ಪ್ರಯತ್ನಿಸಿ.
11:53 ಒಂದು ನೋಟ್ ಬುಕ್ ಶೀರ್ಷಿಕೆಯನ್ನು ಮತ್ತು ಒಂದು ಆಮಂತ್ರಣವನ್ನು ಈ ಸ್ಲೈಡ್ ನಲ್ಲಿ ತೋರಿಸಿರುವಂತೆ ರಚಿಸಿ.
12:00 ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What_is_a_Spoken-Tutorial
12:03 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
12:06 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
12:11 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
12:13 * ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
12:17 *ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
12:20 ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
12:27 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ.
12:31 ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
12:39 ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ].
12:50 ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

NHegde, Pratik kamble, Sandhya.np14, Vasudeva ahitanal