Difference between revisions of "GChemPaint/C2/View-Print-and-Export-structures/Kannada"
From Script | Spoken-Tutorial
Sandhya.np14 (Talk | contribs) (Created page with "{|border =1 !'''Time''' !'''Narration''' |- | 00:00 | ಎಲ್ಲರಿಗೂ ನಮಸ್ಕಾರ. |- | 00:02 | '''GChemPaint''' (ಜಿ-ಕೆಮ್-ಪೇಂಟ್) ನ...") |
Sandhya.np14 (Talk | contribs) |
||
Line 340: | Line 340: | ||
|- | |- | ||
| 07:18 | | 07:18 | ||
− | | ಈ URL ನಲ್ಲಿ ಲಭ್ಯವಿರುವ ವೀಡಿಯೋವನ್ನು | + | | ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. '''http://spoken-tutorial.org/What_is_a_Spoken_Tutorial''' |
|- | |- | ||
| 07:22 | | 07:22 |
Revision as of 10:19, 12 January 2015
Time | Narration |
---|---|
00:00 | ಎಲ್ಲರಿಗೂ ನಮಸ್ಕಾರ. |
00:02 | GChemPaint (ಜಿ-ಕೆಮ್-ಪೇಂಟ್) ನಲ್ಲಿಯ View, Print and Export structures (ವ್ಯೂ, ಪ್ರಿಂಟ್ ಆಂಡ್ ಎಕ್ಸ್ಪೋರ್ಟ್ ಸ್ಟ್ರಕ್ಚರ್ಸ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:09 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
00:11 | ‘ವ್ಯೂ’ನ ಆಯ್ಕೆಗಳು, |
00:13 | ಝೂಮ್ ಫ್ಯಾಕ್ಟರ್, |
00:14 | ಪೇಜ್ ಸೆಟ್ಅಪ್, |
00:15 | ಪ್ರಿಂಟ್ ಪ್ರಿವ್ಯೂ, |
00:17 | ಡಾಕ್ಯುಮೆಂಟ್ ಅನ್ನು ಪ್ರಿಂಟ್ ಮಾಡುವುದು, |
00:19 | ಮತ್ತು ಇಮೇಜನ್ನು SVG ಹಾಗೂ PDF ಫಾರ್ಮ್ಯಾಟ್ ಗಳಂತೆ ಎಕ್ಸ್ಪೋರ್ಟ್ ಮಾಡುವುದನ್ನು ಕಲಿಯುವೆವು. |
00:24 | ಇಲ್ಲಿ ನಾನು, |
00:26 | Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ |
00:30 | GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಗಳನ್ನು ಬಳಸುತ್ತಿದ್ದೇನೆ. |
00:35 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು |
00:40 | 'GChemPaint' chemical structure editor (‘ಜೀ-ಕೆಮ್-ಪೇಂಟ್’ ಕೆಮಿಕಲ್ ಸ್ಟ್ರಕ್ಚರ್ ಎಡಿಟರ್) ಅನ್ನು ತಿಳಿದಿರಬೇಕು. |
00:43 | ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೇಟಿಕೊಡಿ. |
00:48 | ಒಂದು ಹೊಸ ‘ಜೀ-ಕೆಮ್-ಪೇಂಟ್ ಅಪ್ಪ್ಲಿಕೇಶನ್’ಅನ್ನು ಓಪನ್ ಮಾಡಲು, |
00:52 | Dash Home ನ ಮೇಲೆ ಕ್ಲಿಕ್ ಮಾಡಿ. |
00:53 | ಈಗ ಕಾಣಿಸುವ ‘ಸರ್ಚ್ ಬಾರ್’ನಲ್ಲಿ, gchempaint ಎಂದು ಟೈಪ್ ಮಾಡಿ. |
00:58 | ‘GChemPaint ಐಕಾನ್’ನ ಮೇಲೆ ಕ್ಲಿಕ್ ಮಾಡಿ. |
01:01 | ಮೊದಲು, ನಾವು ಈಗಾಗಲೇ ಇರುವ ಫೈಲ್ ಅನ್ನು ಓಪನ್ ಮಾಡೋಣ. |
01:05 | ಟೂಲ್ ಬಾರ್ ನಲ್ಲಿಯ Open a file ಎನ್ನುವ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
01:09 | ಫೈಲ್ ಮತ್ತು ಫೋಲ್ಡರ್ ಗಳನ್ನು ಹೊಂದಿದ ಒಂದು ವಿಂಡೋ ತೆರೆದುಕೊಳ್ಳುತ್ತದೆ. |
01:12 | ಲಿಸ್ಟ್ ನಿಂದ pentane-ethane ಎನ್ನುವ ‘ಫೈಲ್’ಅನ್ನು ಆಯ್ಕೆಮಾಡಿ. |
01:16 | Open ಬಟನ್ ನ ಮೇಲೆ ಕ್ಲಿಕ್ ಮಾಡಿ. |
01:19 | ಈಗ, ಮೊದಲು ನಾವು ‘ವ್ಯೂ’ನ ಆಯ್ಕೆಗಳ ಬಗ್ಗೆ ತಿಳಿಯೋಣ. |
01:23 | View ಮೆನ್ಯೂ ಗೆ ಹೋಗಿ. |
01:25 | ‘ವ್ಯೂ’ ಮೆನ್ಯೂವಿನಲ್ಲಿ, Full Screen ಮತ್ತು Zoom ಎನ್ನುವ ಎರಡು ಆಯ್ಕೆಗಳಿವೆ. |
01:31 | Zoom ಆಯ್ಕೆಯನ್ನು ಆರಿಸಿಕೊಳ್ಳೋಣ. |
01:33 | ‘ಝೂಮ್ ಫ್ಯಾಕ್ಟರ್’ಗಳ ಲಿಸ್ಟ್ ನೊಂದಿಗೆ ಒಂದು ‘ಸಬ್ ಮೆನ್ಯೂ’ ತೆರೆಯುತ್ತದೆ. |
01:38 | ಲಿಸ್ಟ್ ನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ ಮತ್ತು Zoom to % (ಝೂಮ್ ಟು ಪರ್ಸೆಂಟೇಜ್) ಅನ್ನು ಆಯ್ಕೆಮಾಡಿ. |
01:43 | zoom factor (%) ನೊಂದಿಗೆ ಒಂದು ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
01:47 | zoom factor(%)ನ ಡೀ-ಫಾಲ್ಟ್ ವ್ಯಾಲ್ಯೂವನ್ನು ಪ್ರದರ್ಶಿಸಲಾಗಿದೆ. |
01:51 | ಇಲ್ಲಿ ನಾವು ‘ಝೂಮ್ ಫ್ಯಾಕ್ಟರ್’ಅನ್ನು ಅಗತ್ಯವಿದ್ದಷ್ಟು ಹೆಚ್ಚು ಅಥವಾ ಕಡಿಮೆ ಮಾಡಬಹುದು . |
01:57 | ‘ಅಪ್’ ಅಥವಾ ‘ಡೌನ್ ಆರೋ’ (arrow) ತ್ರಿಕೋನದ ಮೇಲೆ ಕ್ಲಿಕ್ ಮಾಡಿ ಮತ್ತು ಝೂಮ್ ಆಗುತ್ತಿರುವುದನ್ನು ಗಮನಿಸಿ. |
02:03 | ಕ್ರಮವಾಗಿ Apply ಮತ್ತು OK ಗಳ ಮೇಲೆ ಕ್ಲಿಕ್ ಮಾಡಿ. |
02:07 | ಅನ್ವಯಿಸಿದ ‘ಝೂಮ್ ಫ್ಯಾಕ್ಟರ್’ನೊಂದಿಗೆ ರಚನೆಯು (structure) ಕಂಡುಬರುತ್ತದೆ. |
02:11 | ನಂತರ, ನಾವು ಪೇಜನ್ನು ಹೇಗೆ ಸೆಟ್ಅಪ್ ಮಾಡುವುದೆಂದು ನೋಡೋಣ. |
02:15 | File ಮೆನ್ಯೂ ಗೆ ಹೋಗಿ. ಅಲ್ಲಿ, Page Setup ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
02:20 | Page Setup ವಿಂಡೋ ತೆರೆದುಕೊಳ್ಳುತ್ತದೆ. |
02:23 | ಈ ವಿಂಡೋ Page ಮತ್ತು Scale ಎನ್ನುವ ಎರಡು ಟ್ಯಾಬ್ ಗಳನ್ನು ಒಳಗೊಂಡಿದೆ. |
02:29 | ಪೇಜ್ ಟ್ಯಾಬ್, Paper, Center on Page ಮತ್ತು Orientation ಗಳಂತಹ ಫೀಲ್ಡ್ ಗಳನ್ನು ಒಳಗೊಂಡಿದೆ. |
02:36 | Paper ಫೀಲ್ಡ್ ನಲ್ಲಿ, ನಾವು ಡೀ-ಫಾಲ್ಟ್ ಪೇಪರ್ ಸೈಜನ್ನು ಸೆಟ್ ಮಾಡಬಹುದು. |
02:41 | Change Paper Type ಬಟನ್ ನ ಮೇಲೆ ನಾವು ಕ್ಲಿಕ್ ಮಾಡೋಣ. |
02:44 | Page Setup ನ ‘ಡೈಲಾಗ್ ಬಾಕ್ಸ್’ ತೆರೆದುಕೊಳ್ಳುತ್ತದೆ. |
02:48 | ಇಲ್ಲಿ Format for, Paper size ಮತ್ತು Orientation ಎನ್ನುವ ಮೂರು ಆಯ್ಕೆಗಳಿವೆ. |
02:55 | ನಿಮ್ಮ ಡೀ-ಫಾಲ್ಟ್ ಪ್ರಿಂಟರ್ ಅನ್ನು Format for ಎನ್ನುವ ಫೀಲ್ಡ್ ನಲ್ಲಿ ಆಯ್ಕೆಮಾಡಿ. |
03:00 | ನಾನು ನನ್ನ ಡೀ-ಫಾಲ್ಟ್ ಪ್ರಿಂಟರ್ ಅನ್ನು ಆಯ್ಕೆಮಾಡುವೆನು. |
03:03 | Paper size ಫೀಲ್ಡ್, ವಿಭಿನ್ನ ಪೇಪರ್ ಸೈಜ್ ಗಳೊಂದಿಗೆ ಒಂದು ಡ್ರಾಪ್-ಡೌನ್ ಲಿಸ್ಟ್ ಅನ್ನು ಹೊಂದಿದೆ. |
03:09 | ನಾನು A4 ಅನ್ನು ಆಯ್ಕೆಮಾಡುವೆನು. |
03:11 | ಈ ಫೀಲ್ಡ್ ನ ಅಡಿಯಲ್ಲಿ A4 ಸೈಜ್ ನ ಅಳತೆಗಳನ್ನು ತೋರಿಸಲಾಗಿದೆ. |
03:17 | ಆಯ್ಕೆಮಾಡಿದ ಪ್ರತಿಯೊಂದು ಪೇಪರ್ ಸೈಜ್ ಗಾಗಿ, ಅದರ ಅಳತೆಗಳನ್ನು ತೋರಿಸಲಾಗುವುದು ಎಂದು ಗಮನಿಸಿ. |
03:24 | ಓರಿಯೆಂಟೇಶನ್ ಫೀಲ್ಡ್ ನಲ್ಲಿ ನಾಲ್ಕು ರೇಡಿಯೋ ಬಟನ್ ಗಳಿವೆ. |
03:29 | Portrait (ಪೋರ್ಟ್ರೇಟ್), |
03:30 | Landscape (ಲ್ಯಾಂಡ್ಸ್ಕೇಪ್), |
03:31 | Reverse portrait (ರಿವರ್ಸ್ ಪೋರ್ಟ್ರೇಟ್), |
03:32 | ಮತ್ತು Reverse landscape (ರಿವರ್ಸ್ ಲ್ಯಾಂಡ್ಸ್ಕೇಪ್). |
03:35 | ಡೀ-ಫಾಲ್ಟ್ ಆಗಿ Portrait ಆಯ್ಕೆಯಾಗಿದೆ. |
03:39 | ನಾವು ಇದನ್ನು ಹಾಗೆಯೇ ಇಟ್ಟು Apply ಮೇಲೆ ಕ್ಲಿಕ್ ಮಾಡೋಣ. |
03:43 | ನಂತರ, ನಮ್ಮ ಹತ್ತಿರ ಮಾರ್ಜಿನ್ ಸೈಜ್ ಗಳಿವೆ. |
03:46 | Top margin (ಟಾಪ್ ಮಾರ್ಜಿನ್), Left margin (ಲೆಫ್ಟ್ ಮಾರ್ಜಿನ್), Right margin (ರೈಟ್ ಮಾರ್ಜಿನ್) ಮತ್ತು Bottom margin (ಬಾಟಮ್ ಮಾರ್ಜಿನ್). |
03:52 | ಇಲ್ಲಿ, ನಾವು ಮಾರ್ಜಿನ್ ಗಳನ್ನು ಅಗತ್ಯವಿದ್ದಂತೆ ಹೊಂದಿಸಬಹುದು. |
03:56 | Unit (ಯುನಿಟ್) ಎನ್ನುವುದು ಮುಂದಿನ ಫೀಲ್ಡ್ ಆಗಿದೆ. |
03:59 | ‘ಯುನಿಟ್’ ಫೀಲ್ಡ್ ಅನ್ನು inches, millimetres ಮತ್ತು points ಗಳಲ್ಲಿ ಸೆಟ್ ಮಾಡಬಹುದು. |
04:05 | ನಾವು ‘ಯುನಿಟ್’ ಅನ್ನು ಬದಲಾಯಿಸಿದಾಗ ಅದಕ್ಕೆ ತಕ್ಕಂತೆ ಮಾರ್ಜಿನ್ ಸೈಜ್ ಗಳು ತಾವಾಗಿಯೇ ಬದಲಾಗುತ್ತವೆ ಎಂದು ಗಮನಿಸಿ. |
04:14 | Center on page ನ ಬಗ್ಗೆ ನಾವು ತಿಳಿಯೋಣ. |
04:17 | ಇಲ್ಲಿ Horizontally ಮತ್ತು Vertically ಎನ್ನುವ ಎರಡು ‘ಚೆಕ್ ಬಾಕ್ಸ್’ಗಳಿವೆ. |
04:22 | Horizontally ಎನ್ನುವ ‘ಚೆಕ್ ಬಾಕ್ಸ್’ನ ಮೇಲೆ ನಾವು ಕ್ಲಿಕ್ ಮಾಡೋಣ. |
04:26 | Preview ಬಟನ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಾವು ನಮ್ಮ ರಚನೆಯ ‘ಪ್ರಿವ್ಯೂ’ಅನ್ನು ನೋಡಬಹುದು. |
04:33 | ಇಲ್ಲಿ ನಾವು ‘ಪ್ರಿವ್ಯೂ’ಅನ್ನು ನೋಡಬಹುದು. |
04:35 | ನಾವು ‘ಪ್ರಿವ್ಯೂ’ ವಿಂಡೋ ಅನ್ನು ಮುಚ್ಚೋಣ. |
04:38 | Orientation (ಓರಿಯೆಂಟೇಶನ್) ಫೀಲ್ಡ್ ನಲ್ಲಿ, |
04:43 | Portrait (ಪೋರ್ಟ್ರೇಟ್), |
04:44 | Landscape (ಲ್ಯಾಂಡ್ಸ್ಕೇಪ್), |
04:45 | Reverse portrait (ರಿವರ್ಸ್ ಪೋರ್ಟ್ರೇಟ್) ಮತ್ತು Reverse landscape (ರಿವರ್ಸ್ ಲ್ಯಾಂಡ್ಸ್ಕೇಪ್) ಗಳಿಗಾಗಿ ರೇಡಿಯೋ ಬಟನ್ ಗಳಿವೆ. |
04:49 | ಡೀ-ಫಾಲ್ಟ್ ಆಗಿ Portrait ಆಯ್ಕೆಯಾಗಿದೆ. |
04:53 | ಈಗ, ನಾವು Landscape ರೇಡಿಯೋ ಬಟನ್ ನ ಮೇಲೆ ಕ್ಲಿಕ್ ಮಾಡೋಣ. |
04:57 | ಆಮೇಲೆ Preview ಬಟನ್ ನ ಮೇಲೆ ಕ್ಲಿಕ್ ಮಾಡೋಣ. |
05:01 | ಇಲ್ಲಿ ‘ಲ್ಯಾಂಡ್ಸ್ಕೇಪ್ ಓರಿಯೆಂಟೇಶನ್’ನ ‘ಪ್ರಿವ್ಯೂ’ಅನ್ನು ನಾವು ನೋಡಬಹುದು. |
05:06 | ನೀವು ಓರಿಯೆಂಟೇಶನ್ ನ ಇತರ ಆಯ್ಕೆಗಳನ್ನು ನೀವಾಗಿಯೇ ಪ್ರಯತ್ನಿಸಬಹುದು. |
05:11 | Print ಬಟನ್ ನ ಮೇಲೆ ನೀವು ಕ್ಲಿಕ್ ಮಾಡಿದರೆ, ಮಾಡಿದ ಬದಲಾವಣೆಗಳೊಂದಿಗೆ ಫೈಲ್ ಅನ್ನು,ಪ್ರಿಂಟ್ ಮಾಡಲಾಗುವುದು. |
05:17 | ಪ್ರಿಂಟ್ ಮಾಡುವ ಮೊದಲು, ನಿಮ್ಮ ರಚನೆಯನ್ನು ನೀವು ಅಗತ್ಯವಿದ್ದಂತೆ ‘ಸ್ಕೇಲ್’ ಸಹ ಮಾಡಬಹುದು. |
05:23 | ಇದಕ್ಕಾಗಿ, Scale ಟ್ಯಾಬ್ ನಲ್ಲಿಯ ವಿವಿಧ ಆಯ್ಕೆಗಳನ್ನು ನೀವು ಬಳಸಬಹುದು. |
05:28 | Scale ಟ್ಯಾಬ್ ಅನ್ನು ನೀವೇ ಪ್ರಯತ್ನಿಸಿ. |
05:32 | 'Page Setup ವಿಂಡೋ’ಅನ್ನು ಮುಚ್ಚಲು, Close ಬಟನ್ ನ ಮೇಲೆ ನಾವು ಕ್ಲಿಕ್ ಮಾಡೋಣ. |
05:37 | ನಂತರ, ಇಮೇಜನ್ನು ಹೇಗೆ ಎಕ್ಸ್ಪೋರ್ಟ್ ಮಾಡುವುದೆಂದು ನಾವು ಕಲಿಯೋಣ. |
05:41 | File ಮೆನ್ಯೂ ಗೆ ಹೋಗಿ, Save As image ಅನ್ನು ಆಯ್ಕೆಮಾಡಿ. |
05:44 | Save As image ನ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
05:48 | File type ಫೀಲ್ಡ್, ಇಮೇಜ್ ಆಯ್ಕೆಗಳ ಪಟ್ಟಿಯನ್ನು ಹೊಂದಿದೆ. |
05:52 | ನೀವು ‘ಇಮೇಜ್’ಅನ್ನು SVG (ಎಸ್ ವಿ ಜಿ), EPS (ಇ ಪಿ ಎಸ್), PDF(ಪಿ ಡಿ ಎಫ್), PNG (ಪಿ ಎನ್ ಜಿ), JPEG (ಜೇಪೆಗ್) ಇತ್ಯಾದಿಗಳಂತೆ ಎಕ್ಸ್ಪೋರ್ಟ್ ಮಾಡಬಹುದು. |
06:04 | SVG Image ಅನ್ನು ನಾವು ಆಯ್ಕೆಮಾಡೋಣ. |
06:07 | ಫೈಲ್ ನ ಹೆಸರನ್ನು pentane-ethane ಎಂದು ನಮೂದಿಸಿ. |
06:11 | Save ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:13 | ಫೈಲ್, ‘SVG ಇಮೇಜ್’ನ ಹಾಗೆ ಸೇವ್ ಮಾಡಲಾಗಿದೆ ಎಂದು ಇಲ್ಲಿ ನಾವು ನೋಡಬಹುದು. |
06:18 | ಆಮೇಲೆ, ನಾವು ಇಮೇಜನ್ನು PDF ‘ಡಾಕ್ಯೂಮೆಂಟ್’ನ ಹಾಗೆ ಎಕ್ಸ್ಪೋರ್ಟ್ ಮಾಡೋಣ. |
06:23 | File ಮೆನ್ಯೂ ಗೆ ಹೋಗಿ, Save As image ಅನ್ನು ಆಯ್ಕೆಮಾಡಿ. |
06:27 | Save As image ನ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
06:31 | File type ನಿಂದ PDF document ಅನ್ನು ಆಯ್ಕೆಮಾಡಿ. |
06:35 | ‘ಫೈಲ್’ನ ಹೆಸರನ್ನು (Name ಎನ್ನುವಲ್ಲಿ) pentane-ethane ಎಂದು ನಮೂದಿಸಿ. |
06:39 | Save ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:41 | ಇಲ್ಲಿ ಫೈಲ್, PDF document ನ ಹಾಗೆ ಸೇವ್ ಮಾಡಲ್ಪಟ್ಟಿದೆ ಎಂದು ನಾವು ನೋಡಬಹುದು |
06:46 | ಇದರೊಂದಿಗೆ ನಾವು ಈ ‘ಟ್ಯುಟೋರಿಯಲ್’ನ ಕೊನೆಗೆ ಬಂದಿದ್ದೇವೆ. |
06:50 | ನಾವು ಸಾರಾಂಶಗೊಳಿಸೋಣ. |
06:51 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
06:54 | ‘ವ್ಯೂ’ನ ಆಯ್ಕೆಗಳು, |
06:56 | ಝೂಮ್ ಫ್ಯಾಕ್ಟರ್, |
06:57 | ಪೇಜ್ ಸೆಟ್ಅಪ್, |
06:58 | ಪ್ರಿಂಟ್ ಪ್ರಿವ್ಯೂ, |
07:00 | ‘ಡಾಕ್ಯುಮೆಂಟ್’ಅನ್ನು ಪ್ರಿಂಟ್ ಮಾಡುವುದು, |
07:03 | ಮತ್ತು ಇಮೇಜನ್ನು ಎಕ್ಸ್ಪೋರ್ಟ್ ಮಾಡುವುದು ಇವುಗಳ ಬಗ್ಗೆ ಕಲಿತಿದ್ದೇವೆ. |
07:05 | ಒಂದು ಅಸೈನ್ಮೆಂಟ್ ಎಂದು, |
07:06 | ರಚನೆಗಳನ್ನು A5, B5 ಮತ್ತು JB5 ‘ಫಾರ್ಮ್ಯಾಟ್’ಗಳಲ್ಲಿ ಪ್ರಿಂಟ್ ಮಾಡಿ ಹಾಗೂ |
07:12 | ಇಮೇಜನ್ನು EPS ಮತ್ತು PNG ‘ಫಾರ್ಮ್ಯಾಟ್’ಗಳಂತೆ ಎಕ್ಸ್ಪೋರ್ಟ್ ಮಾಡಿ. |
07:18 | ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. http://spoken-tutorial.org/What_is_a_Spoken_Tutorial |
07:22 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
07:25 | ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
07:30 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: |
07:32 | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
07:35 | ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
07:39 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
07:46 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
07:51 | ಇದು ಭಾರತ ಸರ್ಕಾರದ ICT, MHRD ಮೂಲಕ, ರಾಷ್ಟ್ರೀಯ ಸಾಕ್ಷರತಾ ಮಿಶನ್ ನ ಆಧಾರವನ್ನು ಪಡೆದಿದೆ. |
07:59 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
08:04 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………….
ವಂದನೆಗಳು. |