Difference between revisions of "Java/C2/Getting-started-Eclipse/Kannada"

From Script | Spoken-Tutorial
Jump to: navigation, search
Line 1: Line 1:
 
{|border=1
 
{|border=1
||''Time'''
+
||'''Time'''
 
||'''Narration'''
 
||'''Narration'''
 
|-
 
|-

Revision as of 12:30, 23 July 2014

Time Narration
00:01 ಎಕ್ಲಿಪ್ಸ್ ನ ಜೊತೆಗೆ ಕೆಲಸ ಆರಂಭಿಸುವುದರ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಎ ಟ್ಯುಟೋರಿಯಲ್ ನಲ್ಲಿ ನಾವು,
00:08 ಎಕ್ಲಿಪ್ಸ್ ನಲ್ಲಿ ಪ್ರೊಜೆಕ್ಟ್ ಅನ್ನು ಹೇಗೆ ರಚಿಸುವುದು ಮತ್ತು ಕ್ಲಾಸ್ ಅನ್ನು ಹೇಗೆ ಸೇರಿಸುವುದು,
00:12 ಜಾವಾ ಪ್ರೊಗ್ರಾಮ್ ಅನ್ನು ಹೇಗೆ ಬರೆಯುವುದು,
00:14 ಎಕ್ಲಿಪ್ಸ್ ನಲ್ಲಿ ಜಾವಾ ಪ್ರೊಗ್ರಾಮ್ ಅನ್ನು ಹೇಗೆ ರನ್ ಮಾಡುವುದು ಇತ್ಯಾದಿಗಳನ್ನು ಕಲಿಯಲಿದ್ದೇವೆ.
00:18 ಈ ಟ್ಯುಟೋರಿಯಲ್ ನಲ್ಲಿ ನಾವು
  • Ubuntu 11.10 ಮತ್ತು
  • Eclipse 3.7 ಅನ್ನು ಉಪಯೋಗಿಸುತ್ತಿದ್ದೇವೆ.
00:25 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು,
00:28 ನಿಮ್ಮ ಸಿಸ್ಟಮ್ ನಲ್ಲಿ ಎಕ್ಲಿಪ್ಸ್ ಇನ್ಸ್ಟಾಲ್ ಆಗಿರಬೇಕು.
00:30 ಇಲ್ಲವಾದಲ್ಲಿ, ಇದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್ ಅನ್ನು ನೋಡಲು ಈ ವೆಬ್ಸೈಟ್ ಗೆ ಭೇಟಿ ಕೊಡಿ.
00:39 ಎಕ್ಲಿಪ್ಸ್ ಎಂಬುದು Integrated Development Environment (ಇಂಟಿಗ್ರೇಟೆಡ್ ಡೆವಲಪ್ಮೆಂಟ್ ಎನ್ವಿರೋನ್ಮೆಂಟ್) ಆಗಿದೆ.
00:42 ಇದೊಂದು ಟೂಲ್ ಆಗಿದ್ದು ಇದರಲ್ಲಿ ಸುಲಭವಾಗಿ ನಾವು ಬರೆಯಬಹುದು, ದೋಷಗಳನು ತೆಗೆಯಬಹುದು ಹಾಗೂ ಜಾವಾ ಪ್ರೊಗ್ರಾಮ್ ಅನ್ನು ರನ್ ಮಾಡಬಹುದು.
00:50 ನಾವೀಗ ಎಕ್ಲಿಪ್ಸ್ ಅನ್ನು ತೆರೆಯೋಣ.
00:55 Alt F2 ಒತ್ತಿ ಹಾಗೂ ಡಯಲಾಗ್ ಬಾಕ್ಸ್ ನಲ್ಲಿ eclipse ಎಂದು ಟೈಪ್ ಮಾಡಿ Enter ಒತ್ತಿ.
01:08 ನಾವು Workspace Launcher ಎಂಬ ಡಯಲಾಗ್ ಬಾಕ್ಸ್ ಅನ್ನು ಪಡೆಯುತ್ತೇವೆ.
01:11 ಇಲ್ಲಿ Workspace ಎಂಬುದು ಪ್ರೊಜೆಕ್ಟ್ ಗೆ ಸಂಬಂಧಿಸಿದ ಡಾಟಾ ಮತ್ತು ನಿಮ್ಮ ಎಕ್ಲಿಪ್ಸ್ ಗೆ ಸಂಬಂಧಿಸಿದ ಫೈಲ್ ಗಳು ಇರುವ ಜಾಗವಾಗಿದೆ.
01:19 ಈಗ ಕಾಣುತ್ತಿರುವುದು ಡೀಫಾಲ್ಟ್ ಲೊಕೆಶನ್ ಆಗಿದೆ.
01:24 Browse ಎಂಬ ವಿಕಲ್ಪವನ್ನು ಉಪಯೋಗಿಸುವುದರಿಂದ ಬೇರೆ ಡರಕ್ಟರಿಯನ್ನು ಕೂಡಾ ಅಯ್ಕೆಮಾಡಬಹುದು.
01:27 ಈಗ ನಾವು ಡೀಫಾಲ್ಟ್ ಡೈರಕ್ಟರಿಯನ್ನೇ ಆಯ್ದುಕೊಳ್ಳೋಣ.
01:30 ಮುಂದುವರಿಯಲು OK ಕ್ಲಿಕ್ ಮಾಡಿ.
01:39 ನೀವು Welcome to Eclipse ಎಂಬ ಪೇಜ್ ಅನ್ನು ನೋಡುತ್ತೀರಿ.
01:46 ಮೇಲ್ಗಡೆ ಎಡ ಮೂಲೆಯಲ್ಲಿರುವ Workbench ಎಂಬುದನ್ನು ಕ್ಲಿಕ್ ಮಾಡಿ.
01:52 ಇಲ್ಲಿ ನಾವು Eclipse IDE ಯನ್ನು ನೋಡುತ್ತೇವೆ. ಈಗ ಪ್ರೊಜೆಕ್ಟ್ ಒಂದನ್ನು ಸೇರಿಸೋಣ.
01:57 File ಗೆ ಹೋಗಿ New ಎಂಬಲ್ಲಿ Project ಎಂಬುದನ್ನು ಆಯ್ಕೆ ಮಾಡಿ.
02:05 ಪ್ರೊಜೆಕ್ಟ್ ಗಳ ಸೂಚಿಯಿಂದ Java Project ಎಂಬುದನ್ನ್ಉ ಆಯ್ಕೆಮಾಡಿ.
02:10 ಮತ್ತು ಗಮನಿಸಿ, ನಾವು ನಮ್ಮ ಹೆಚ್ಚಿನ ಟ್ಯುಟೋರಿಯಲ್ ಗಳಿಗಾಗಿ java project ಅನ್ನೇ ಉಪಯೋಗಿಸಲಿದ್ದೇವೆ. Next ಎಂಬಲ್ಲಿ ಕ್ಲಿಕ್ ಮಾಡಿ.
02:19 Project name ಎಂಬಲ್ಲಿ EclipseDemo ಎಂದು ಟೈಪ್ ಮಾಡಿ.
02:30 ಇಲ್ಲಿ Use default location ಎಂಬ ವಿಕಲ್ಪ ಇರುವುದನ್ನು ಗಮನಿಸಿ.
02:34 ನೀವು ಈ ವಿಕಲ್ಪವನ್ನು ಆಯ್ಕೆ ಮಾಡಿದಲ್ಲಿ, ಎಲ್ಲಾ EclipseDemo ಪ್ರೊಜೆಕ್ಟ್ ನ ಡಾಟಾ ಗಳು ಡೀಫಾಲ್ಟ್ ವರ್ಕ್ ಸ್ಪೇಸ್ ನಲ್ಲಿ ಶೇಖರಗೊಳ್ಳುತ್ತವೆ.
02:41 ಇದನ್ನು ಆಯ್ಕೆ ಮಾಡದಿದ್ದಲ್ಲಿ, Browse ಎಂಬುದರ ಸಹಾಯದಿಂದ ವಿಭಿನ್ನ ಲೊಕೇಶನ್ ಗಳನ್ನೂ ಆಯ್ಕೆಮಾಡಬಹುದು.
02:47 ಪ್ರಸ್ತುತ ನಾವು ಡೀಫಾಲ್ಟ್ ಲೊಕೇಶನ್ ಅನ್ನೇ ಉಪಯೋಗಿಸುತ್ತಿದ್ದೇವೆ.
02:52 ಬಾಕ್ಸ್ ನ ಕೆಳಬದಿಯ ಎಡಭಾಗದಲ್ಲಿರುವ Finish ಎಂಬುದನ್ನು ಕ್ಲಿಕ್ ಮಾಡಿ.
03:00 ನಾವು Open Associated Perspective? ಎಂಬ ಡಯಲಾಗ್ ಬಾಕ್ಸ್ ಅನ್ನು ನೋಡುತ್ತೇವೆ.
03:04 ಪರ್ಸ್ಪೆಕ್ಟೀವ್ ಎಂಬುದು ಎಕ್ಲಿಪ್ಸ್ ನಲ್ಲಿ ನಿಶ್ಚಿತವಾದ ಐಟಮ್ ಗಳನ್ನು ರೆಫರ್ ಮಾಡುತ್ತದೆ.
03:09 ಈ ಡಯಲಾಗ್ ಬಾಕ್ಸ್ ಎಂಬುದು ಜಾವಾ ಡೆವಲಪ್ಮೆಂಟ್ ಗೆ ಸರಿಹೊಂದುವ ಪರ್ಸ್ಪೆಕ್ಟೀವ್ಸ್ ಅನ್ನು ಸೂಚಿಸುತ್ತದೆ.
03:20 Remember my decision ಎಂಬುದನ್ನು ಆಯ್ಕೆ ಮಾಡಿ Yes ಎಂಬುದನ್ನು ಕ್ಲಿಕ್ ಮಾಡಿ.
03:24 ನಾವಿಲ್ಲಿ ಪ್ರೊಜೆಕ್ಟ್ ನ ಜೊತೆಗೆ EclipseIDE ಯನ್ನು ಹೊಂದಿದ್ದೇವೆ. ನಾವಿಲ್ಲಿ ಈ ಪ್ರೊಜೆಕ್ಟ್ ಗೆ ಕ್ಲಾಸ್ ಅನ್ನು ಸೇರಿಸೋಣ.
03:37 ಪ್ರೊಜೆಕ್ಟ್ ನ ಮೇಲೆ ರೈಟ್ ಕ್ಲಿಕ್ ಮಾಡಿ New ಗೆ ಹೋಗಿ Class ಅನ್ನು ಆಯ್ಕೆ ಮಾಡಿ.
03:46 Name ಎಂಬಲ್ಲಿ DemoClass ಎಂದು ಹೆಸರಿಡಿ.
03:55 ಇಲ್ಲಿ ಗಮನಿಸಿ, Modifiers ಎಂಬಲ್ಲಿ ನಾವು ಎರಡು ವಿಕಲ್ಪಗಳನ್ನು ಹೊಂದಿದ್ದೇವೆ, public ಮತ್ತು default ಎಂದು.
03:59 ಈಗ ಅದನ್ನು public ಎಂದೇ ಇರಿಸಿ.
04:01 ಇನ್ನೊಂದು ವಿಕಲ್ಪದ ಬಗ್ಗೆ ಅನಂತರದ ಟ್ಯುಟೋರಿಯಲ್ ಗಳಲ್ಲಿ ಚರ್ಚಿಸೋಣ.
04:06 method stubs ಎಂಬ ಸೂಚಿಯಲ್ಲಿ public static void main ಎಂಬ ವಿಕಲ್ಪವನ್ನು ಆಯ್ಕೆಮಾಡೋಣ.
04:15 ಉಳಿದ ವಿಕಲ್ಪಗಳನ್ನು ಅನಂತರದ ಟ್ಯುಟೋರಿಯಲ್ ಗಳಲ್ಲಿ ಚರ್ಚಿಸೋಣ.
04:19 ಬಾಕ್ಸ್ ನ ಕೆಳಗಡೆ ಎಡಬದಿಯಲ್ಲಿ ಇರುವ Finish ಎಂಬ ಬಟನ್ ಅನ್ನು ಕ್ಲಿಕ್ ಮಾಡಿ
04:30 ಇಲ್ಲಿ ನಾವು ಕ್ಲಾಸ್ ಫೈಲ್ ಅನ್ನು ಹೊಂದಿದ್ದೇವೆ.
04:35 ಗಮನಿಸಿ, ಇಲ್ಲಿ ಬಹಳ ವಿಭಾಗಗಳಿವೆ. ಇವುಗಳನ್ನು ಪೊರ್ಟ್ಲೆಟ್ಸ್ ಎಂದು ಕರೆಯುತ್ತೇವೆ.
04:41 ನಾವಿಲ್ಲಿ Package Explorer ಎಂಬ ಪೊರ್ಟ್ಲೆಟ್ಸ್ ಅನ್ನು ಹೊಂದಿದ್ದೇವೆ. ಇದು File Browser ನಂತೆ ವರ್ತಿಸುತ್ತದೆ.
04:46 ನಾವು Editor ಎಂಬ ಪೋರ್ಟ್ಲೆಟ್ಸ್ ಅನ್ನು ಹೊಂದಿದ್ದೇವೆ, ಇಲ್ಲಿ ನಾವು ಕೋಡ್ ಗಳನ್ನು ಬರೆಯುತ್ತೇವೆ.
04:50 ಮತ್ತು Outline ಎಂಬ ಪೋರ್ಟ್ಲೆಟ್ ಪ್ರೊಜೆಕ್ಟ್ ನಹೈರಾರ್ಕಿ ಯನ್ನು ಕೊಡುತದೆ.
04:56 ಪ್ರತಿಯೊಂದು ಪೋರ್ಟ್ಲೆಟ್ ಅನ್ನೂ ಕೂಡಾ ರಿಸೈಜ್ ಮಾಡಬಹುದು.
05:10 ಇವುಗಳು ಮಿನಿಮೈಜ್ ಬಟನ್ ನ ಸಹಾಯದಿಂದ ಮಿನಿಮೈಜ್ ಕೂಡಾ ಮಾಡಬಹುದು.
05:26 ಇವುಗಳು ರಿಸ್ಟೋರ್ ಬಟನ್ ನ ಸಹಾಯದಿಂದ ರಿಸ್ಟೋರ್ ಕೂಡಾ ಆಗುತ್ತವೆ.
05:37 ಈಗ ನಾನು ಉಳಿದ ಪೋರ್ಟಲ್ ಗಳನ್ನು ಮಿನಿಮೈಸ್ ಮಾಡಿ ಎಡಿಟರ್ ನ ಮೇಲೆ ಫೋಕಸ್ ಮಾಡುತ್ತೇನೆ.
05:49 ನಮಗೆ ತೋರುತ್ತಿರುವಂತೆ, ಈಗಾಗಲೆ ಕೆಲವು ಕೋಡ್ ಗಳು ಇಲ್ಲಿ ಪ್ರಸ್ತುತವಿದೆ. ಎಕ್ಲಿಪ್ಸ್ ನಮಗಾಗಿ ಇದನ್ನು ರಚಿಸಿದೆ.
05:54 The code generated here depends on the options we select, while creating the class.
06:00 ನಾವೀಗ ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಸೇರಿಸೋಣ.
06:08 System.out.println ಬ್ರಾಕೆಟ್ ನಲ್ಲಿ ಕೋಟ್ ನ ಒಳಗೆ (“Hello Eclipse”). ಎಂದು ಟೈಪ್ ಮಾಡಿ.
06:26 ಸ್ಟೇಟ್ಮೆಂಟ್ ನ ಕೊನೆಯಲ್ಲಿ ಸೆಮಿ ಕೊಲನ್ ಅನ್ನು ಸೇರಿಸಿ.
06:31 File ಮತ್ತು Save ಎಂಬುದನ್ನು ಕ್ಲಿಕ್ ಮಾಡುವುದರ ಮೂಲಕ ಫೈಲ್ ಅನ್ನು ಸೇವ್ ಮಾಡಿ.
06:37 ಅಥವಾ, Control S ಒತ್ತುವುದರ ಮೂಲಕ ಕೂಡಾ ಸೇವ್ ಮಾಡಬಹುದು.
06:42 ಈ ಪ್ರೊಗ್ರಾಮ್ ಅನ್ನು ರನ್ ಮಾಡಲು editor ಮೇಲೆ ರೈಟ್ ಕ್ಲಿಕ್ ಮಾಡಿ ಅಲ್ಲಿ run as ಗೆ ಹೋಗಿ java application ಎಂಬುದನ್ನು ಆಯ್ಕೆ ಮಾಡಿ.
06:56 ಏನಾದರೂ ಪ್ರಿಂಟ್ ಆಗಿದ್ದಲ್ಲಿ ನಾವು ಅದನ್ನು ಔಟ್ಪುಟ್ ರೂಪದಲ್ಲಿ ಔಟ್ಪುಟ್ ಕನ್ಸೋಲ್ ನಲ್ಲಿ ಕಾಣುತ್ತೇವೆ.
07:04 ನಮ್ಮ ಕೋಡ್ ನಲ್ಲಿ ಸಮಸ್ಯೆ ಇದ್ದಲ್ಲಿ ಆ ಸಮಸ್ಯೆಯು Problems ಎಂಬ ಪೋರ್ಟ್ಲೆಟ್ ನಲ್ಲಿ ತೋರುತ್ತದೆ.
07:10 ಹೀಗೆ ಎಕ್ಲಿಪ್ಸ್ ನಲ್ಲಿ ಜಾವಾ ಪ್ರೊಗ್ರಾಮ್ ಅನ್ನು ಹೇಗೆ ಬರೆಯುವುದು ಮತ್ತು ರನ್ ಮಾಡುವುದೆಂದು ಕಲಿತೆವು.
07:18 ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ.
07:20 ಈ ಟ್ಯುಟೋರಿಯಲ್ ನಲ್ಲಿ ನಾವು, ಎಕ್ಲಿಪ್ಸ್ ನಲ್ಲಿ ಪ್ರೊಜೆಕ್ಟ್ ಅನ್ನು ಹಾಗೂ ಅದರಲ್ಲಿ ಕ್ಲಾಸ್ ಅನ್ನು ಹೇಗೆ ರಚಿಸುವುದು, ಎಕ್ಲಿಪ್ಸ್ ನಲ್ಲಿ ಜಾವಾ ಸೋರ್ಸ್ ಕೋಡ್ ಅನ್ನು ಹೇಗೆ ಬರೆಯುವುದು ಮತ್ತು ಅದನ್ನು ಹೇಗೆ ರನ್ ಮಾಡುವುದೆಂದು ಕಲಿತೆವು.
07:33 ಈ ಟ್ಯುಟೋರಿಯಲ್ ನ ಅಭ್ಯಾಸಕ್ಕಾಗಿ, Display ಎಂಬ ಹೆಸರಿನ ಹೊಸ ಪ್ರೊಜೆಕ್ಟ್ ಅನ್ನು ರಚಿಸಿ.
07:38 ಹಾಗೂ ಆ Display ಗೆ Welcome ಎಂಬ ಕ್ಲಾಸ್ ಅನ್ನು ಸೇರಿಸಿ.
07:44 ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ.
07:50 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
07:53 ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
07:58 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
08:02 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
08:05 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
08:12 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
08:17 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
08:23 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
08:27 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

Gaurav, Pratik kamble, Vasudeva ahitanal