Difference between revisions of "Firefox/C2/Introduction/Kannada"

From Script | Spoken-Tutorial
Jump to: navigation, search
Line 1: Line 1:
 
{| border=1
 
{| border=1
 
|-
 
|-
|Time
+
|'''Time'''
 
+
|'''Narration'''
|Narration
+
 
|-
 
|-
 
|0:00
 
|0:00

Revision as of 11:34, 11 July 2014

Time Narration
0:00 Mozilla Firefox ನ ಪರಿಚಯಾತ್ಮಕವಾದ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ
0:05 ಈ ಟ್ಯುಟೋರಿಯಲ್ ನಲ್ಲಿ ಕೆಳಕಂಡ ವಿಷಯಗಳು ಒಳಗೊಂಡಿರುತ್ತವೆ.
0:10 Mozilla Firefox ಎಂದರೇನು ?
0:12 Firefox ಏಕೆ?
0:14 ಆವೃತ್ತಿಗಳು, System ನ ಅವಶ್ಯಕತೆಗಳು, Firefox ಅನ್ನು ಡೌನ್‌ಲೋಡ್ ಮತ್ತು ಇನ್ಸ್ಟಾಲ್ ಮಾಡುವುದು, ವೆಬ್‌ಸೈಟ್‌ ನ ಭೇಟಿ, ಇತ್ಯಾದಿ.
0:21 Mozilla Firefox ಅಥವಾ Firefox ಎನ್ನುವುದು ಉಚಿತ ಮತ್ತು ಮುಕ್ತವಾಗಿ ದೊರಕುವ ವೆಬ್ ಬ್ರೌಸರ್ ಆಗಿದೆ.
0:27 ಇದು ಉಬುಂಟು ಲಿನಕ್ಸ್‌ಗೆ ಪೂರ್ವನಿಯೋಜಿತವಾದ ವೆಬ್‌ಬ್ರೌಸರ್ ಆಗಿದ್ದು ಇಂಟರ್ನೆಟ್ ಗೆ ದ್ವಾರದಂತೆ ಕಾರ್ಯನಿರ್ವಹಿಸುತ್ತದೆ.
0:33 ಇದು ಇಂಟರ್‌ನೆಟ್‌ನ ವೆಬ್ ಪೇಜ್ ಗಳನ್ನು ನೋಡಲು ಮತ್ತು ವೆಬ್‌ ಪೇಜ್ಗಳ ಮೂಲಕ ಸಂಚರಿಸಿಲು ಸಹಕರಿಸುತ್ತದೆ.
0:39 ಇಷ್ಟೇ ಅಲ್ಲದೆ ಗೂಗಲ್, ಯಾಹೂ ಸರ್ಚ್, ಬಿಂಗ್ ಮುಂತಾದ ಸರ್ಚ್ ಎಂಜಿನ್‌ಗಳ ಮೂಲಕ ಕೂಡಾ ವೆಬ್ ಪೇಜ್ಗಳನ್ನು ಹುಡುಕುತ್ತದೆ.
0:47 Firefox ಎನ್ನುವುದು, Mozilla Foundation ಎಂಬ ಲಾಭ ನಿರಪೇಕ್ಷ ಸಂಸ್ಥೆಯಲ್ಲಿ ಸ್ವಯಂಸೇವಕ ಪ್ರೊಗ್ರಾಮರ್ ಗಳಿಂದ ರಚಿಸಲ್ಪಟ್ಟಿದೆ.
0:54 Mozilla ದ ಸಂಪೂರ್ಣ ಮಾಹಿತಿಗಾಗಿ mozilla.org ಅನ್ನು ಸಂಪರ್ಕಿಸಿ
0:59 Firefox ಎನ್ನುವುದು ವಿಂಡೋಸ್, ಮ್ಯಾಕ್ ಓ.ಎಸ್‌.ಎಕ್ಸ್ ಮತ್ತು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಕೆಲಸ ಮಾಡುತ್ತದೆ.
1:05 ಉಬುಂಟುವಿಗಿರುವ ಬೇರೆ ಜನಪ್ರಿಯ ವೆಬ್‌ ಬ್ರೌಸರ್‌ ಗಳೆಂದರೆ, Konqueror, Google Chrome ಮತ್ತು Opera
1:12 ಈ ತರಗತಿಯಲ್ಲಿ ನಾವು Ubuntu 10.04 ರಲ್ಲಿ Firefox ನ ವರ್ಷನ್ 7.0 ನ್ನು ಬಳಸುತ್ತೇವೆ.
1:20 Firefox ಎನ್ನುವುದು ಬ್ರೌಸಿಂಗನ್ನು ಉತ್ತಮಗೊಳಿಸುವುದರ ಜೊತೆಗೆ ವೇಗ, ಗೌಪ್ಯತೆ ಮತ್ತು ಇತ್ತೀಚಿನ ತಂತ್ರಜ್ಞಾನವನ್ನೂ ಒದಗಿಸುತ್ತದೆ.
1:27 ಇದು ಟ್ಯಾಬ್ಡ್ ವಿಂಡೋಸ್, ಅಂತರ್ ನಿರ್ಮಿತ ಸ್ಪೆಲ್ ಚೆಕ್, ಪಾಪಪ್ ಬ್ಲಾಕರ್, ಎಕೀಕೃತ ವೆಬ್‌ಸರ್ಚ್, ಫಿಶಿಂಗ್ ಸುರಕ್ಷತೆ ಮುಂತಾದ ವಿವಿಧ ವೈಶಿಷ್ಟ್ಯಗಳನ್ನೊಳಗೊಂಡಿದೆ.
1:39 Firefox, ಶೀಘ್ರ ವೆಬ್‌ಬ್ರೌಸಿಂಗ್‌ನ ಜೊತೆಗೆ ಗ್ರಾಫಿಕ್ಸ್‌ನ ಕ್ಷಿಪ್ರ ರೆಂಡರಿಂಗ್, ಉತ್ತಮ ಗುಣಮಟ್ಟದ ಪೇಜ್ ಲೋಡಿಂಗನ್ನು ಒದಗಿಸುತ್ತದೆ.
1:45 ಅಲ್ಲದೆ ವಂಚಕ ವೆಬ್ ಸೈಟ್ಗಳು, ಸ್ಪೈವೇರ್ ಮತ್ತು ವೈರಸ್‌ಗಳು, ಟ್ರೋಜನ್ ಅಥವಾ ಇತರ ಮಾಲ್ವೇರ್ಗಳ ವಿರುದ್ಧ ವಿವಿಧ ಬಗೆಯ ಸುರಕ್ಷತೆಯನ್ನು ಮತ್ತು ಗೌಪ್ಯತೆಯನ್ನು ಸಹ ಒದಗಿಸುತ್ತದೆ.
1:56 ಬಳಕೆದಾರರಿಂದ ಸೃಷ್ಟಿಸಲ್ಪಟ್ಟ add-ons ಗಳು ಮತ್ತು ಸರಳವಾಗಿ ಇನ್ಸ್‌ಟಾಲ್ ಮಾಡಬಲ್ಲ ಸಾವಿರಾರು ಥೀಮ್ಸ್‌ಗಳನ್ನು ಗ್ರಾಹಕರ ಇಚ್ಚೆಗನುಗುಣವಾಗಿ ನೀಡುತ್ತದೆ.
2:06 Firefox ಅನ್ನು ಲಿನಕ್ಸ್ ನ ಓ.ಎಸ್ ಗಳಾದ ಫೆಡೋರ, ಉಬುಂಟು, ರೆಡ್ ಹ್ಯಾಟ್, ಡೆಬಿಯನ್ ಮತ್ತು ಸುಸಿ ನಲ್ಲಿ ಚಾಲನೆಗೊಳಿಸಲು ಬೇಕಾದ ಸಿಸ್ಟಂನ ಅಗತ್ಯಗಳು ಇಲ್ಲಿದೆ.
2:16 ನಿಮಗೆ Firefox ಅನ್ನು Ubuntu 10.04 ರಲ್ಲಿ ಚಾಲನೆಗೊಳಿಸಲು ಮುಂದೆಕಾಣುವ ಲೈಬ್ರರೀಸ್ ಅಥವಾ ಪ್ಯಾಕೇಜಸ್ ಗಳು ಬೇಕಾಗುತ್ತವೆ.
2:24 GTK+ 2.10 ಅಥವಾ ಹೆಚ್ಚಿನದ್ದು,
2:29 GLib 2.12 ಅಥವಾ ಹೆಚ್ಚಿನದ್ದು,
2:32 libstdc++ 4.3 ಅಥವಾ ಹೆಚ್ಚಿನದ್ದು,
2:37 Pango 1.14 ಅಥವಾ ಹೆಚ್ಚಿನದ್ದು,
2:40 X.Org 1.7 ಅಥವಾ ಹೆಚ್ಚಿನದ್ದು,
2:44 ಮತ್ತು ಬೇಕಾಗಿರುವ ಹಾರ್ಡ್‌ವೇರ್ ನ ಅಗತ್ಯತೆ, ಪೆಂಟಿಯಂ ೪ ಅಥವಾ ಮೇಲ್ಪಟ್ಟದ್ದು, ೫೧೨ ಎಮ್‌ಬಿ RAM, ೨೦೦ ಎಮ್‌ಬಿಯಷ್ಟು ಹಾರ್ಡ್‌ಡ್ರೈವ್ ನ ಜಾಗ.
2:55 ಸಿಸ್ಟಂನ ಅಗತ್ಯಗಳ ಸಂಪೂರ್ಣ ಮಾಹಿತಿಗೆ ಪರದೆಯಲ್ಲಿ ತೋರಿಸಿರುವ Firefox ನ ವೆಬ್‌ಸೈಟ್‌ಗೆ ಭೇಟಿಕೊಡಿ.
3:32 ಈಗ ಪರದೆಯಲ್ಲಿ ತೋರಿಸಿರುವ mozilla.com ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿಕೊಟ್ಟು Mozilla Firefox ಅನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡೋಣ.
3:11 ಇಲ್ಲಿ ನಾವು ಯಾವಾಗಲೂ Firefox ನ ಇತ್ತೀಚಿನ ಆವೃತ್ತಿಯನ್ನು ಕಾಣುತ್ತೇವೆ.
3:15 ಅಥವಾ ಇನ್ನೂ ಹೆಚ್ಚಿನ ಮಾಹಿತಿಗಾಗಿ ಹಸಿರು ಪ್ರದೇಶದ ಕೆಳಗಿನ “All Systems and Languages” ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಬಹುದು.
3:23 Mozilla ಸುಮಾರು ೭೦ ಭಾಷೆಗಳಲ್ಲಿ Firefox ಅನ್ನು ನೀಡುತ್ತಿದೆ ಎಂದು ಗಮನಿಸಿ.
3:28 ಇಲ್ಲಿ ನಾವು ಹಿಂದಿ ಅಥವಾ ಬಂಗಾಳಿಯಂತಹ ಸ್ಥಳೀಯ ಆವೃತ್ತಿಗಳನ್ನೂ ಡೌನ್‌ಲೋಡ್ ಮಾಡಬಹುದು.
3:33 ನಾವು Windows, Mac ಅಥವಾ Linux ಆಪರೇಟಿಂಗ್ ಸಿಸ್ಟಂಗಳನ್ನು ವಿವಿಧ ಐಕಾನ್‌ಗಳ ಮೇಲೆ ಕ್ಲಿಕ್ ಮಾಡುವುದರಿಂದ ಆರಿಸಿಕೊಳ್ಳಬಹುದಾಗಿದೆ.
3:42 Ubuntu Linux ನಲ್ಲಿ ಫೈಲ್ ಸೇವ್ ಮಾಡಲು ಮೊದಲು ಜಾಗವನ್ನು ಆರಿಸಿಕೊಳ್ಳಿ. (ಪೂರ್ವನಿಯೋಜಿತವಾಗಿ ನಿಮ್ಮ ಹೋಮ್‌ ಫೋಲ್ಡರ್‌ನಲ್ಲಿನ ಡೌನ್‌ಲೋಡ್ ಡೈರೆಕ್ಟರಿಯು ಆಯ್ಕೆಯಾಗಿರುತ್ತದೆ)
3:51 ಈಗ ನೀವು ಪಾಪ್-ಅಪ್ ವಿಂಡೋನಲ್ಲಿ ಕಾಣಿಸುತ್ತಿರುವ “Save File” ಆಯ್ಕೆಯನ್ನು ಆರಿಸಿಕೊಂಡು “Ok” ಬಟ್ಟನ್ ಮೇಲೆ ಕ್ಲಿಕ್ ಮಾಡಬಹುದು.
3:58 ಇದು Firefox ದಾಖಲೆಯನ್ನು ಹೋಮ್ ಡೈರೆಕ್ಟರಿಯ ಕೆಳಗಿನ ಡೌನ್‌ಲೋಡ್ಸ್ ಡೈರೆಕ್ಟರಿಯಲ್ಲಿ ರಕ್ಷಿಸುತ್ತದೆ.
4:06 ಟರ್ಮಿನಲ್ ವಿಂಡೋ ತೆರೆಯಿರಿ ಮತ್ತು ನಿಮ್ಮ ಡೌನ್‌ಲೋಡ್ಸ್ ಡೈರೆಕ್ಟರಿಗೆ ಹೋಗಲು ಮುಂದಿನ ಆದೇಶವನ್ನು ಟೈಪ್ ಮಾಡಿ :cd ~/Downloads
4:17 ಈಗ ಎಂಟರ್ ಕೀಯನ್ನು ಒತ್ತಿ.
4:19 ಡೌನ್‌ಲೋಡ್ ಮಾಡಿರುವ ಅಂಶವನ್ನು ಎಕ್ಸ್‌ಟ್ರ್ಯಾಕ್ಟ್ ಮಾಡಲು ಮುಂದಿನ ಆದೇಶವನ್ನು ಟೈಪ್ ಮಾಡಿ :tar xjf firefox-7.0.1.tar.bz2
4:35 ಈಗ ಎಂಟರ್ ಕೀಯನ್ನು ಒತ್ತಿ.
4:38 ಇದು Firefox 7.0 ಅನ್ನು ಚಾಲನೆಗೊಳಿಸಲು ಬೇಕಾದ ಫೈಲ್ಗಳನ್ನು ಎಕ್ಸ್‌ಟ್ರ್ಯಾಕ್ಟ್ ಮಾಡಲು ಪ್ರಾರಂಭಿಸುತ್ತದೆ.
4:44 ಟರ್ಮಿನಲ್ ವಿಂಡೋನಲ್ಲಿ cd firefox ಎಂಬ ಆದೇಶವನ್ನು ಟೈಪ್ ಮಾಡುವ ಮೂಲಕ Firefox directory ಗೆ ಹೋಗಿ.
4:52 ಈಗ ಎಂಟರ್ ಕೀಯನ್ನು ಒತ್ತಿ.
4:54 ಇದು ನಿಮ್ಮನ್ನು Firefox directory ಗೆ ಕೊಂಡೊಯ್ಯುತ್ತದೆ.
4:58 Firefox ಬ್ರೌಸರನ್ನು ಆರಂಭ ಮಾಡಲು ./firefox ಎಂದು ಆದೇಶವನ್ನು ಟೈಪ್ ಮಾಡಿ ಎಂಟರ್ ಕೀಯನ್ನು ಒತ್ತಿ.
5:06 ಪ್ರಸ್ತುತ ಡೈರೆಕ್ಟರಿ ನಿಮ್ಮ ಹೋಮ್ ಡೈರೆಕ್ಟರಿ ಆಗಿಲ್ಲದಿದ್ದ ಪಕ್ಷದಲ್ಲಿ ಬದಲಿಯಾಗಿ ನೀವು ಮುಂದೆಕಾಣಿಸುವ ಆದೇಶವನ್ನು ಬಳಸಿ Firefox ನ್ನು ಲಾಂಚ್ ಮಾಡಬಹದು.
5:15 ~/Downloads/firefox/firefox
5:21 ಪೂರ್ವನಿಯೋಜಿತವಾಗಿ ಹೋಮ್‌ಪೇಜನ್ನು ಹೇಗೆ ಸ್ಥಾಪಿಸುವುದು ಎಂದು ನಾವು ಆಮೇಲೆ ನೋಡುತ್ತೇವೆ.
5:25 ಈಗ ಸಧ್ಯಕ್ಕೆ ಉದಾಹರಣೆಗಾಗಿ ನಾವು ಇತ್ತೀಚಿನ ವಾರ್ತೆ ಮತ್ತು ಮಾಹಿತಿಗಳನ್ನು ಒಳಗೊಂಡಿರುವ Rediff.com ಎಂಬ ವೆಬ್ಸೈಟ್ ಗೆ ಹೋಗೊಣ.
5:33 ಮೆನ್ಯುಬಾರ್‌ನ ಕೆಳಗಿನ ಅಡ್ರೆಸ್‌ಬಾರ್‌ನಲ್ಲಿ www.rediff.com ಎಂದು ಟೈಪ್ ಮಾಡಿ
5:40 Rediff.com ವೆಬ್‌ಸೈಟ್ ನ ಹೋಂಪೇಜ್‌ನ ವಿಷಯಗಳು ಪ್ರದರ್ಶಿಸಲ್ಪಡುತ್ತವೆ.
5:47 ಈಗ, ಈ ಪುಟದಿಂದ ನಾವು ವಿವಿಧ ಲಿಂಕ್ಸ್‌ಗಳಿಗೆ ಸಂಚರಿಸಿ ಅಲ್ಲಿನ ಪುಟಗಳ ವಿಷಯವನ್ನು ನೋಡಬಹುದು.
5:53 ಈಗ ಮೊದಲು ಹೆಡ್‌ಲೈನ್ಸ್ ಟ್ಯಾಬ್‌ನ ಕೆಳಗಿರುವ ಮೊದಲ ಲಿಂಕ್ ಮೇಲೆ ಕ್ಲಿಕ್ ಮಾಡೋಣ.
5:58 ಹೀಗೆ ನಾವು Firefox ಅನ್ನು ಬಳಸಿಕೊಂಡು ವೆಬ್‌ಸೈಟ್‌ಗಳಿಗೆ ಭೇಟಿಕೊಟ್ಟು ನಂತರ ಅಲ್ಲಿಂದ ಇತರ ಪುಟಗಳಲ್ಲಿ ಸಂಚರಿಸಿಬಹುದು.
6:05 ಮುಂದಿನ ತರಗತಿಗಳಲ್ಲಿ ನಾವು Firefox interface ಮತ್ತು ಇತರ ಹಲವು ವೈಶಿಷ್ಟ್ಯಗಳ ಬಗ್ಗೆ ಹೆಚ್ಚು ಕಲಿಯುತ್ತೇವೆ.
6:12 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊ ನೋಡಿ. http://spoken-tutorial.org/What_is_a_Spoken_Tutorial
6:16 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
6:19 ನಿಮ್ಮ ಬಳಿ ಉತ್ತಮ ಬ್ಯಾಂಡ್‌ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್‌ಲೋಡ್ ಮಾಡಿಕೊಂಡು ನೋಡಬಹುದು.
6:24 ಸ್ಪೋಕನ್ ಟ್ಯುಟೋರಿಯಲ್ ಗಣವು ಈ ಪಾಠವನ್ನಾಧಾರಿಸಿ ಕಾರ್ಯಶಾಲೆಗಳನ್ನು ಆಯೋಜಿಸುತ್ತದೆ.
6:29 ಆನ್‌ಲೈನ್ ಪರೀಕ್ಷೆಯನ್ನು ಪಾಸ್ ಮಾಡಿದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ.
6:33 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
6:39 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
6:44 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
6:51 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
7:02 ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ.
7:08 ಧನ್ಯವಾದಗಳು.

Contributors and Content Editors

PoojaMoolya, Pratik kamble, Udaya, Vasudeva ahitanal